3 Month Free Training For (SC ST) Candidates.

Apr 08, 2022 04:32 pm By Admin

3 ತಿಂಗಳು ಉಚಿತ ವೃತ್ತಿ ತರಬೇತಿ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ-ಯುವತಿಯರಿಗೆ ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಉಚಿತ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಉಚಿತ ಊಟ ಮತ್ತು ವಸತಿಯೊಂದಿಗೆ ಇಂಜೆಕ್ಷನ್ ಮೌಲ್ಡಿಂಗ್ ಮತ್ತು ಪ್ಲಾಸ್ಟಿಕ್ ತಂತ್ರಜ್ಞಾನದ ಕುರಿತು 3 ತಿಂಗಳು ತರಬೇತಿ ಜತೆ ತಿಂಗಳಿಗೆ 2000 ರೂ. ಶಿಷ್ಯ ವೇತನ ನೀಡಲಿದೆ. 8ನೇ ತರಗತಿ/ಎಸ್‌ಎಸ್‌ಎಲ್‌ಸಿ/ಪಿಯುಸಿ/ಪದವಿ ಅಥವಾ ಐಟಿಐ ಅದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅಗತ್ಯ ದಾಖಲೆ ಯೊಂದಿಗೆ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಭಾರತ ಸರ್ಕಾರ, ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾ, ಮೈಸೂರು ಇಲ್ಲಿ ನಡೆಯುವ ಸಂದರ್ಶನ ದಲ್ಲಿ ಭಾಗವಹಿಸಬಹುದು.

ಹೆಚ್ಚಿನ ವಿವರಗಳಿಗೆ 9380756024, 9066648466/ -(brer: sstcmys1@gmail.com) ಸಂಪರ್ಕಿಸಿ.