Arts and Tourism of India

Jul 25, 2022 04:07 pm By Admin

ಭಾರತದ ಕಲೆ ಮತ್ತು ಪ್ರವಾಸೋದ್ಯಮ

 • ಇದು ಭಾರತದ ಕಲೆಯನ್ನು ದೇಶದೊಳಗೆ ಮತ್ತು ದೇಶದ ಹೊರಗೆ ಪ್ರೋತ್ಸಾಹಿಸಲು ಮತ್ತು ಪ್ರಚಾರಗೊಳಿಸಲು ದೇಶದಿಂದ ಭಾರತ ಸರ್ಕಾರವು 1954 ಆಗಸ್ಟ್ 5 ರಂದು ನವದೆಹಲಿಯಲ್ಲಿ “ನ್ಯಾಷನಲ್ ಆಕಾಡೆಮಿ ಆಫ್ ಆರ್ಟ್ಸ್” ಎಂಬ ಹೆಸರಿನಲ್ಲಿ ಸ್ಥಾಪಿಸಿತು.
 • 2014 ರಲ್ಲಿ 60ನೇ ವರ್ಷದ ವಜ್ರ ಮಹೋತ್ಸವವನ್ನು ಆಚರಿಸಿಕೊಂಡಿತು.
 • ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕಛೇರಿಗಳು ಲಕ್ಕೊ, ಕೋಲ್ಕತ್ತ, ಚೆನ್ನೈ, ಭುವನೇಶ್ವರ್, ಸಿಮ್ಲಾ, ನವದೆಹಲಿಯಲ್ಲಿವೆ. ಇವುಗಳನ್ನು ರಾಷ್ಟ್ರೀಯ ಲಲಿತಾ ಕಲಾ ಅಕಾಡೆಮಿ ಕೇಂದ್ರಗಳೆಂದು ಕರೆಯಲಾಗುತ್ತದೆ.
 • ಲಲಿತಾ ಕಲಾ ಅಕಾಡೆಮಿಯು ಭಾರತೀಯ ಕಲೆಗೆ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ಪ್ರದರ್ಶನವನ್ನು ಏರ್ಪಡಿಸಿ, 15 ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ನೀಡುತ್ತಾ ಬಂದಿದೆ.
 • ಪ್ರತಿ ಪ್ರಶಸ್ತಿಗಳ ಮೊತ್ತವು 50,000 ರೂ.ಗಳಾಗಿರುತ್ತವೆ.
 • ಸಮಕಾಲೀನ ಕಲೆಗೆ ಅಂತರಾಷ್ಟ್ರೀಯ ಮಟ್ಟದ ಪ್ರದರ್ಶನವನ್ನು 1955 ರಿಂದ ನವದೆಹಲಿಯಲ್ಲಿ ಸಂಘಟಿಸುತ್ತಾ ಬಂದಿದೆ.
 • ಈ ಅಕಾಡೆಮಿಯು ಇದುವರೆಗೂ ಕಲೆಗೆ ಸಂಬಂಧಿಸಿದ 52 ರಾಷ್ಟ್ರೀಯ ಪ್ರದರ್ಶನಗಳನ್ನು ಮತ್ತು 540 ಮಂದಿ ಕಲಾವಿದರುಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿದೆ.
 • ವಾರ್ಷಿಕ ಜರ್ನಲ್ ಗಳನ್ನು ಬಿಡುಗಡೆ ಮಾಡುತ್ತಿದ್ದು, ಇಂಗ್ಲೀಷ್‌ನಲ್ಲಿ ‘ಲಲಿತಾ ಕಲಾ ಕಾನ್ ಟೆಂಪರರಿ’, ‘ಲಲಿತ ಕಲಾ ಏನ್ಸಿಯೆಂಟ್’ ಮತ್ತು ಹಿಂದಿ ಭಾಷೆಯಲ್ಲಿ ‘ಸಮಕಾಲೀನ ಕಲಾ’ ಎಂಬ ವಾರ್ಷಿಕ ಜರ್ನಲ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಸಂಗೀತ ನಾಟಕ ಅಕಾಡೆಮಿ

 • ಸಂಗೀತ ನಾಟಕ ಅಕಾಡೆಮಿಯು ಭಾರತೀಯ ಸಂಗೀತ, ನೃತ್ಯ ಮತ್ತು ನಾಟಕ ‘ರಾಷ್ಟ್ರೀಯ ಅಕಾಡೆಮಿಯಾಗಿದೆ,
 • 1945 ರಲ್ಲಿ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ರಾಷ್ಟ್ರೀಯ ಸಾಂಸ್ಕೃತಿಕ ಟ್ರಸ್ಟ್‌ನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಿತು.
 • 1952 ಮೇ 31 ರಂದು ಸಂಗೀತ ನಾಟಕ ಅಕಾಡೆಮಿಯನ್ನು ಭಾರತದ ಅಂದಿನ ಶಿಕ್ಷಣ ಸಚಿವರಾದ ಮೌಲಾನ ಅಬುಲ್ ಕಲಾಂ ಆಜಾದ್ ಅವರು ಈ ಅಕಾಡೆಮಿಗೆ ಮೊದಲ ಅಧ್ಯಕ್ಷರನ್ನಾಗಿ ಪಿ.ವಿ. ರಾಜಮನ್ನಾರ್ ಅವರನ್ನು ನೇಮಕ ಮಾಡುವ ಮೂಲಕ ಸ್ಥಾಪಿಸಿದರು.
 • 1953 ಜನವರಿ 28 ರಂದು ಭಾರತದ ಅಂದಿನ ರಾಷ್ಟ್ರಾಧ್ಯಕ್ಷರಾದ ಡಾ|| ಬಾಬು ರಾಜೇಂದ್ರ ಪ್ರಸಾದ್‌ ಅವರು ಸಂಸತ್ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ‘ಸಂಗೀತ ನಾಟಕ ಅಕಾಡೆಮಿ’ಯನ್ನು ಉದ್ಘಾಟಿಸಿದರು.
 • ಈ ಅಕಾಡೆಮಿಯು ನೀಡುವ ಫೆಲೋಶಿಪ್ ಮತ್ತು ಪ್ರಶಸ್ತಿಯು ಪ್ರತಿಷ್ಟಿತವಾದದ್ದಾಗಿದೆ.
 • ಈ ಅಕಾಡೆಮಿಯ ಕೇಂದ್ರ ಕಛೇರಿಯು ನವದೆಹಲಿಯಲ್ಲಿದ್ದು, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
 • ಅಕಾಡೆಮಿಯ ಗ್ಯಾಲರಿಯಲ್ಲಿ 600 ಕ್ಕೂ ಹೆಚ್ಚು ಸಂಗೀತದ ಸಾಧನಗಳನ್ನು ಒಳಗೊಂಡಿದೆ.
 • ಈ ಅಕಾಡೆಮಿಯು ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಪ್ರಮುಖ ಸಂಸ್ಥೆಗಳೆಂದರೆ- ಇಂಪಾಲದಲ್ಲಿ ಮಣಿಪುರ ನೃತ್ಯ ಅಕಾಡೆಮಿ, ನವದೆಹಲಿಯಲ್ಲಿ ಕಥಕ್ ಕೇಂದ್ರ, ಕೇರಳದ ತಿರುವನಂತಪುರದಲ್ಲಿ ಕುಟ್ಟಿಯಾಟc(Kutiyattam) ಕೇಂದ್ರಗಳನ್ನು ಸ್ಥಾಪಿಸಿದೆ.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ

 • 1959 ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅನ್ನು ಸಂಗೀತ ನಾಟಕ ಅಕಾಡೆಮಿಯವರು ಸ್ಥಾಪಿಸಿದರು.
 • 1975 ರಲ್ಲಿ ಈ ಸಂಸ್ಥೆಯು ಸ್ವಾಯತ್ತತ ಸಂಸ್ಥೆಯಾಯಿತು.
 • ಈ ಸಂಸ್ಥೆಯು ಎಲ್ಲಾ ಪ್ರಕಾರದ ರಂಗಕಲೆಗಳಲ್ಲಿ ತರಬೇತಿ ನೀಡುವ ಸಂಸ್ಥೆಯಾಗಿದೆ.

ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರಗಳು (Zonal Cultural Centre)

 • ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರಗಳ ಪ್ರಮುಖ ಉದ್ದೇಶವು ಸ್ಥಳೀಯ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
 • 1985-86 ರಲ್ಲಿ 7 ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲಾಯಿತು.
 • 1) ಪಾಟಿಯಾಲಾ
  2) ಕೋಲ್ಕತ್ತ
  3) ತಂಜಾವೂರು
  4) ಉದಯಪರ
  5) ಅಲಹಾಬಾದ್
  6) ದಿಮಾಪುರ
  7) ನಾಗರ
 • ಭಾರತ ಸರ್ಕಾರವು ಪ್ರತಿ ವಲಯಕ್ಕೂ 5 ಕೋಟಿ ರೂ. ಗಳನ್ನು ಅನುದಾನವನ್ನು ಒದಗಿಸುತ್ತಿದೆ
 • 1993 ರಿಂದ ಪ್ರತಿ ವಲಯದಿಂದ ಜಾನಪದ ನೃತ್ಯ ಕಲಾವಿದರನ್ನು ಗಣರಾಜ್ಯೋತ್ಸವ ದಿನದಂದು ಜಾನಪದ ನೃತ್ಯ ಉತ್ಸವಕ್ಕೆ ಕಳುಹಿಸಿಕೊಡಲಾಗುತ್ತದೆ. ಇದನ್ನು ಭಾರತದ ರಾಷ್ಟ್ರಪತಿಗಳು ಜನವರಿ 24 ಅಥವಾ ಜನವರಿ 25 ರಂದು ನವದೆಹಲಿಯ ತಲ್ನೋಟರ( Takatora ) ಒಳಾಂಗಣ ಜಾನಪದ ನೃತ್ಯ ಉತ್ಸವವನ್ನು ಕ್ರೀಡಾಂಗಣದಲ್ಲಿ ಉದ್ಘಾಟಿಸುತ್ತಾರೆ.

ಭಾರತೀಯ ಪುರಾತತ್ವ ಇಲಾಖೆ (ASI-Archaeological Survey of India)

 • ಆರ್ಕಿಂತಾ ಲಾಜಿಕಲ್‌ ಸರ್ವೇ ಆಫ್ ಇಂಡಿಯಾ ಅನ್ನು ಮೊದಲ ಮಹಾನಿರ್ದೇಶಕರಾದ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಅವರು 1861 ರಲ್ಲಿ ಸ್ಥಾಪಿಸಿದರು.
 • ಇದರ ಮುಖ್ಯಸ್ಥರು ಮಹಾನಿರ್ದೇಶಕರಾಗಿರುತ್ತಾರೆ.
 • ಇದರ ಕೇಂದ್ರ ಕಛೇರಿಯು ನವದೆಹಲಿಯಲ್ಲಿದೆ.
 • ಇದರ ಪ್ರಮುಖ ಚಟುವಟಿಕೆಗಳೆಂದರೆ ಭಾರತದ ಪಳೆಯುಳಿಕೆಗಳನ್ನು ಮತ್ತು ಐತಿಹಾಸಿಕ ಕುರುಹುಗಳನ್ನು ಪತ್ತೆ ಹಚ್ಚುವುದು, ಸ್ಮಾರಕಗಳನ್ನು ಸಂರಕ್ಷಿಸುವುದು, ಇದು 24 ವೃತ್ತಗಳನ್ನು ಒಳಗೊಂಡಿದ್ದು ಪ್ರಾದೇಶಿಕ ನಿರ್ದೇಶನಾಲಯಗಳನ್ನು 5 ಒಳಗೊಂಡಿದೆ.

ನ್ಯಾಷನಲ್ ಮ್ಯೂಸಿಯಂ (National Museum)

 • ನ್ಯಾಷನಲ್ ಮ್ಯೂಸಿಯಂ 1960 ರಿಂದ ಸಂಸ್ಕೃತಿ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
 • ಇದರ ಪ್ರಮುಖ ಚಟುವಟಿಕೆಗಳು ಪ್ರದರ್ಶನಗಳು, ಶೈಕ್ಷಣಿಕ ಚಟುವಟಿಕೆಗಳು, ಕಾರ್ಯಾಗಾರಗಳನ್ನು ನಡೆಸುತ್ತದೆ.
 • ಇದರ ಕೇಂದ್ರ ಕಛೇರಿಯು ನವದೆಹಲಿಯಲ್ಲಿದೆ.
 • ಇದನ್ನು 1949 ಆಗಸ್ಟ್ 15 ರಂದು ಸ್ಥಾಪಿಸಲಾಯಿತು. ಇದು ದೇಶದ ದೊಡ್ಡ ಸಂಗ್ರಹಾಲಯಗಳಲ್ಲಿ ಒಂದಾಗಿದೆ.
 • ಪೂರ್ವ ಐತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ನ್ಯಾಷನಲ್ ಗ್ಯಾಲಲಿ ಆಫ್ ಮಾಡನ್ ಆರ್ಟ್

 • 1954 ರಲ್ಲಿ ಇದನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು.
 • ಸಮಕಾಲೀನ ಭಾರತೀಯ ಕಲೆಯನ್ನು ಅಭಿವೃದ್ಧಿ ಪಡಿಸುವುದು ಮತ್ತು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
 • ಇದರ ಪ್ರಮುಖ ಮ್ಯೂಸಿಯಂ ಗಳೆಂದರೆ ಭಾರತೀಯ ಮ್ಯೂಸಿಯಂ, ವಿಕ್ಟೋರಿಯಾ ಮೆಮೋರಿಯಲ್ ಹಾಲ್, ಸಾಲಾರ್ ಜಂಗ್ ಮ್ಯೂಸಿಯಂ, ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ

ನ್ಯಾಷನಲ್ ಮ್ಯೂಸಿಯಂ ಇನ್‌ಸ್ಟಿಟ್ಯೂಟ್‌ ಆಫ್ ಹಿಸ್ಟರಿ ಆಫ್ ಆರ್ಟ್ ಕನ್ಸರ್ವೆಷನ್ ಮ್ಯೂಸಿಯೋಲಜಿ (National Museum institute of History of Art, Conservation and Museology)

 • ಇದೊಂದು ಸ್ವಾಯತ್ತತ ಸಂಘಟನೆಯಾಗಿದ್ದು, ಸಂಸ್ಕೃತಿ ಸಚಿವಾಲಯವು 1989 ರಲ್ಲಿ ಸ್ಥಾಪಿಸಿ, ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ಘೋಷಿಸಿತು.
 • ಇದರ ಕೇಂದ್ರ ಕಛೇರಿಯು ನವದೆಹಲಿಯಲ್ಲಿದೆ.
 • ಈ ಸಂಸ್ಥೆಯು ಕಲಾ ಇತಿಹಾಸ, ಸಂರಕ್ಷಣೆ ಮತ್ತು ಮ್ಯೂಸಿಯೋಲಜಿನಲ್ಲಿ ವಿಶೇಷವಾದ ತರಬೇತಿ ಮತ್ತು ಶಿಕ್ಷಣವನ್ನು – ನೀಡುವುದಾಗಿದೆ.

ನ್ಯಾಷನಲ್ ಲೀಸರ್ಚ್ ಲ್ಯಾಬೋರೇಟರಿ ಫಾರ್ ಕನ್ಸರ್ವೇಷನ್ ಆಫ್ ಕಲ್ಬರಲ್ ಪ್ರಾಪರ್ಟಿ
(National research laboratory for conservation of cultural property)

 • ಇದನ್ನು 1976 ರಲ್ಲಿ ಸ್ಥಾಪಿಸಲಾಯಿತು.
 • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇದನ್ನು ಭಾರತ ಸರ್ಕಾರದ ವೈಜ್ಞಾನಿಕ ಸಂಸ್ಥೆಯೆಂದು ಘೋಷಿಸಿದೆ.
 • ಇದರ ಪ್ರಮುಖ ಉದ್ದೇಶವು ದೇಶದ ಸಾಂಸ್ಕೃತಿಕ ಸಂಪತ್ತನ್ನು ರಕ್ಷಣೆ ಮಾಡುವುದಾಗಿದೆ.
 • ಇದರ ಕೇಂದ್ರ ಕಛೇರಿಯು ಲಕ್ಕೊದಲ್ಲಿದೆ.
 • ಪ್ರಾದೇಶಿಕ ಕಛೇರಿಯು ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ರಾಮಕೃಷ್ಣ ಖುಷನ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಟರ್ – ಕೋಲ್ಕತ್ತಾ

 • ರಾಮಕೃಷ್ಣ ಅವರ ಜ್ಞಾಪಕಾರ್ಥವಾಗಿ ಮೊದಲ ಜನ್ಮ ಶತಮಾನೋತ್ಸವದ ಅಂಗವಾಗಿ 1936 ರಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಯಿತು.
 • ಅಧಿಕೃತವಾಗಿ 1938 ಜನವರಿ 29 ರಂದು ಸ್ಥಾಪನೆಗೊಂಡಿತು.
 • ರಾಮಕೃಷ್ಣ ಅವರ ವೇದಾಂತದ ಸಂದೇಶವನ್ನು ಸಾರಲು ಈ ಸಂಸ್ಥೆಯನ್ನು ಸ್ವಾಮಿ ವಿವೇಕಾನಂದರು ಸ್ಥಾಪಿಸಿದರು.

ಆಂತ್ರೋಪಾಲಾಜಿಕಲ್ ಸರ್ವೆ ಆಫ್ ಇಂಡಿಯಾ (Anthropological Survey of india)

 • ಈ ಸಂಸ್ಥೆಯು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಅತ್ಯುನ್ನತ ಸಂಶೋಧನಾ ಸಂಘಟನೆಯಾಗಿದೆ.
 • ಇದು 60 ವರ್ಷಗಳಿಂದ ಮಾನವ ಶಾಸ್ತ್ರೀಯ ಸಂಶೋಧನೆಗಳನ್ನು ಕೈಗೊಳ್ಳುತ್ತಾ ಬಂದಿದೆ.
 • ಮಾನವನ ಪ್ರಾಚೀನ ಅಸ್ಥಿಪಂಜರಗಳ ಪಳೆಯುಳಿಕೆಗಳು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಡುತ್ತದೆ.

ಗ್ರಂಥಾಲಯಗಳು
ಭಾರತದ ರಾಷ್ಟ್ರೀಯ ಗ್ರಂಥಾಲಯ

(National Library of India)

 • ಇದು 1948 ರಲ್ಲಿ ‘ಕೋಲ್ಕತ್ತಾ’ದಲ್ಲಿ ಇಂಪೀರಿಯಲ್ ಲೈಬ್ರರಿ ಆ್ಯಕ್ಟ್ – 1948 ನ್ನು ಜಾರಿಗೊಳಿಸುವ ಮೂಲಕ ಸ್ಥಾಪಿಸಲಾಯಿತು.
 • ಈ ಗ್ರಂಥಾಲಯವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿದ್ದು.
 • ಇದರ ಕೇಂದ್ರ ಕಛೇರಿಯು ಕೋಲ್ಕತ್ತದಲ್ಲಿದೆ. ಮತ್ತು ಇದು 7 ಪ್ರಾದೇಶಿಕ ಕಛೇರಿಗಳನ್ನು ಹೊಂದಿದೆ.

ನ್ಯಾಷನಲ್ ಆರ್ಟೀಸ್ ಆಫ್ ಇಂಡಿಯಾ (National Archives of India):

 • ಇದನ್ನು ಸ್ವಾತಂತ್ರ್ಯಕ್ಕಿಂತ ಮುಂಚಿತ ವಾಗಿ ಇಂಪೀರಿಯಲ್ ರೆಕಾರ್ಡ್ ಡಿಪಾರ್ಟ್ವ್೦ಟ್ ಎಂದು ಕರೆಯುತ್ತಿದ್ದರು.
 • ಇದನ್ನು ಮೂಲತಃವಾಗಿ ಕೋಲ್ಕತ್ತದಲ್ಲಿ 1891 ಮಾರ್ಚ್ 11 ರಂದು ಸ್ಥಾಪಿಸಲಾಯಿತು.
 • ಭಾರತ ಸರ್ಕಾರದ ಶಾಶ್ವತ ವಾದ, ಪ್ರಚಲಿತವಲ್ಲದ ದಾಖಲೆಗಳನ್ನು ಸಂಗ್ರಹಿಸುವಂತಹ ಅಧಿಕೃತವಾದ ಕಸ್ಟಡಿಯನ್ ಸಂಸ್ಥೆಯಾಗಿದೆ.
 • ಪ್ರಸ್ತುತವಾಗಿ ಈ ಸಂಸ್ಥೆಯು ನವದೆಹಲಿಯಲ್ಲಿದೆ.
 • ಇದರ ಪ್ರಾದೇಶಿಕ ಕಛೇರಿಯು ಮಧ್ಯಪ್ರದೇಶದ ಭೂಪಾಲ್‌ನಲ್ಲಿದೆ.
 • ಇದರ 3 ದಾಖಲಾತಿ ಕೇಂದ್ರಗಳು ಭುವನೇಶ್ವರ, ಜೈಪುರ ಮತ್ತು ಪಾಂಡಿಚೆರಿಯಲ್ಲಿವೆ.
 • ಇದರ ಪ್ರಮುಖ ಚಟುವಟಿಕೆಗಳೆಂದರೆ – ಸಾರ್ವಜನಿಕ ದಾಖಲೆಗಳು ಸರ್ಕಾರದ ಸಂಸ್ಥೆಗಳಿಗೆ ಮತ್ತು ಸಂಶೋಧಕರಿಗೆ ಒದಗುವಂತೆ ಮಾಡುವುದು, ದಾಖಲೆಗಳನ್ನು ವೈಜ್ಞಾನಿಕ ತನಿಖೆಗೆ ಸಂಬಂಧಿಸಿದಂತೆ ಮತ್ತು ಸಂಸ್ಥೆಗಳಿಗೆ ಒದಗಿಸಲು ನೀಡುವ ಉದ್ದೇಶದಿಂದ ಅವುಗಳನ್ನು ಸಂರಕ್ಷಿಸುವುದು ಮತ್ತು ನಿರ್ವಹಣೆ ಮಾಡುವುದು.
 • ದೇಶದ ಮಹತ್ವವಾದಂತಹ ಮುದ್ರಿತ ದಾಖಲೆಗಳನ್ನು ಒಳಗೊಂಡಿದೆ.
 • ದೇಶಕ್ಕೆ ಸಂಬಂಧಿಸಿದ ಪ್ರಕಟವಾಗದೇ ಇರುವ ಅನೇಕ ಮಾಹಿತಿಗಳು ಈ ಗ್ರಂಥಾಲಯದಲ್ಲಿವೆ.
 • ಇದು ಭಾರತ ದೇಶದಲ್ಲೇ ಗಾತ್ರದಲ್ಲಿ ಅತಿ ದೊಡ್ಡ ಗ್ರಂಥಾಲಯವಾಗಿದೆ. ಮತ್ತು ಭಾರತದ ಸಾರ್ವಜನಿಕ ದಾಖಲೆಗಳನ್ನು ಹೊಂದಿರುವ ಭಾರತೀಯ ಗ್ರಂಥಾಲಯವಾಗಿದೆ.
 • ಇದು ಭಾರತ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
 • 30 ಎಕರೆಗಳಲ್ಲಿ 2.2 ಮಿಲಿಯನ್ ಪುಸ್ತಕಗಳನ್ನು ಒಳಗೊಂಡಿರುವ ಅತಿದೊಡ್ಡ ಗ್ರಂಥಾಲಯವಾಗಿದೆ.
 • ಈ ಗ್ರಂಥಾಲಯವು ಮೊದಲು ಕೋಲ್ಕತ್ತ ಪಬ್ಲಿಕ್ ಲೈಬ್ರರಿ ಎಂಬ ಹೆಸರಿನಲ್ಲಿ 1836 ರಲ್ಲಿ ಆರಂಭವಾಯಿತು.
 • ಈ ಗ್ರಂಥಾಲಯವು 1891. ರಲ್ಲಿ ಇಂಪೀರಿಯಲ್ ಲೈಬ್ರರಿಯಾಗಿ ಕೋಲ್ಕತ್ತದಲ್ಲಿ ಆರಂಭಗೊಂಡಿತು. ನಂತರ ಕಾಯ್ದೆ ಮೂಲಕ 1953 ಫೆಬ್ರವರಿ 1 ರಂದು “ನ್ಯಾಷನಲ್ ಲೈಬ್ರರಿ” ಎಂಬ ಹೆಸರಿನಲ್ಲಿ ಮರುನಾಮಕರಣ ಮಾಡಿ ಸಾರ್ವಜನಿಕ ಮುಕ್ತಗೊಳಿಸಲಾಯಿತು.


ಸೆಂಟ್ರಲ್ ಸೆಕ್ರೆಟೆಡ್ ಲೈಬ್ರಲಿ – ದೆಹಲ
(CSL-Central Secretariat Library).

 • 1891 ರಲ್ಲಿ ಇದನ್ನು ಕೋಲ್ಕತ್ತದಲ್ಲಿ “ಇಂಪೀರಿಯಲ್ ಸೆಕ್ರೆಟೆಡ್ ಲೈಬ್ರರಿ” ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು.
 • ರಾಜಧಾನಿಯನ್ನು ಕೋಲ್ಕತ್ತದಿಂದ ದೆಹಲಿಗೆ ವರ್ಗಾಯಿಸಿದಾಗ ಕೇಂದ್ರೀಯ ಸಚಿವಾಲಯ ಗ್ರಂಥಾಲಯ(ಸಿಎಸ್‌ಎಲ್)ವನ್ನು ಕೂಡ ದೆಹಲಿಗೆ ವರ್ಗಾಯಿಸಲಾಯಿತು.
 • ಇದು ಭಾರತದ 2ನೇ ಅತಿ ದೊಡ್ಡ ಗ್ರಂಥಾಲಯವಾಗಿದೆ. (ಮೊದಲ ಗ್ರಂಥಾಲಯ ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾ)
 • ಇದರ ಕೇಂದ್ರ ಕಛೇರಿಯು ನವದೆಹಲಿಯ ಶಾಸ್ತ್ರಿ ಭವನದಲ್ಲಿದೆ.
 • ಈ ಗ್ರಂಥಾಲಯವು 5,50,000 ಗ್ರಂಥಗಳನ್ನು ಮತ್ತು ಮುದ್ರಿತವಲ್ಲದ ದಾಖಲೆಗಳನ್ನು ಒಳಗೊಂಡಿದೆ.
 • ಈ ಗ್ರಂಥಾಲಯಕ್ಕೆ ಹಣಕಾಸಿನ ನೆರವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಒದಗಿಸುತ್ತದೆ.
 • ಸಮಾಜಶಾಸ್ತ್ರ ಮತ್ತು ಮಾನವಿಕ ಶಾಸ್ತ್ರಗಳಿಗೆ ಸಂಬಂಧಿಸಿದ 7 ಲಕ್ಷ ದಾಖಲೆ ಸಂಗ್ರಹಗಳನ್ನು ಹೊಂದಿದೆ.
 • ಈ ಗ್ರಂಥಾಲಯದಲ್ಲಿ ಭಾರತೀಯ ಸರ್ಕಾರದ ದಾಖಲೆಗಳು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ದಾಖಲೆಗಳನ್ನು ಸಂಗ್ರಹಿಸಿಡಲಾಗಿದೆ.
 • ಪುಸ್ತಕಗಳನ್ನು ಭೌಗೋಳಿಕ ಸ್ಥಳದ ಅನ್ವಯ ಜೋಡಿಸಿಡಲಾಗಿದೆ.
 • ಈ ಗ್ರಂಥಾಲಯದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮತ್ತು ಮಾಹಿತಿ ಸೇವೆಯನ್ನು ಒದಗಿಸಲಾಗುತ್ತಿದೆ.
 • ಈ ಗ್ರಂಥಾಲಯವು 2 ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ – 1.ಹಿಂದಿ, 2. ಪ್ರಾದೇಶಿಕ ಭಾಷೆಗಳ ವಿಭಾಗ
 • ಈ ಗ್ರಂಥಾಲಯವನ್ನು ತುಳಸೀ ಸದನ್ ಗ್ರಂಥಾಲಯ ಎಂದು ಕರೆಯುತ್ತಾರೆ.
 • ಈ ಗ್ರಂಥಾಲಯವು 1.9 ಲಕ್ಷ ಹಿಂದಿ ಭಾಷೆಯಲ್ಲಿನ ಪುಸ್ತಕಗಳು ಮತ್ತು 13 ಸಂವಿಧಾನಾತ್ಮಕವಾಗಿ ಅಂಗೀಕೃತವಾದ ಭಾರತೀಯ ಪ್ರಾದೇಶಿಕ ಭಾಷೆಯ ಪುಸ್ತಕಗಳನ್ನು ಒಳಗೊಂಡಿದೆ.

ಸ್ಟಾಲರ್ ಶಿಪ್ ಮತ್ತು ಫೆಲೋಶಿಪ್ ವಿಭಾಗ
(Scholarship and Fellowship Division)

 • ಸಂಸ್ಕೃತಿ ಸಚಿವಾಲಯದ ಸ್ಕಾಲರ್ ಶಿಪ್ ಮತ್ತು ಫೆಲೋಶಿಪ್ ವಿಭಾಗದವರು ಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿದ ಸಾಧಕರಿಗೆ ಸ್ಕಾಲರ್‌ಶಿಪ್ ಮತ್ತು ಫೆಲೋಶಿಪ್‌ಗಳನ್ನು ನೀಡುತ್ತಾ ಬಂದಿದ್ದಾರೆ.

ವಿವಿಧ ಸಾಂಕ್ರಮಿಕ ವಿಭಾಗದಲ್ಲಿ ಯುವ ಕಲಾವಿದರಿಗೆ ಸ್ಕಾಲ‌ಶಿಪ್‌ಗಳು

 • 1. ಯುವ ಕಲಾವಿದರಿಗೆ ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತ, ನಾಟಕ, ಜಾನಪದ ಮತ್ತು ಪ್ರಾದೇಶಿಕ ಕಲಾ ಪ್ರಕಾರಗಳಲ್ಲಿ ಅಪ್ರತಿಮ ಸಾಧನೆ ತೋರಿಸಿದವರಿಗೆ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 5,000 ರೂ.ಗಳಂತೆ ಒಟ್ಟು 400 ಸ್ಕಾಲರ್‌ ಶಿಪ್‌ಗಳನ್ನು 2 ವರ್ಷದ ಅವಧಿಗೆ ನೀಡಲಾಗುತ್ತದೆ, ಕಲಾವಿದರುಗಳು 18 ರಿಂದ 25 ವರ್ಷ ವಯೋಮಿತಿಯವರು ಅರ್ಹರಾಗಿರುತ್ತಾರೆ.
 • 2. ಸಾಂಸ್ಕೃತಿಕ ವಿಭಾಗದಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ಫೆಲೋಶಿಪ್: 2 ವರ್ಷ ಅವಧಿಗೆ 125 ಸೀನಿಯರ್ ಫೆಲೋಶಿಪ್‌ಗಳಿಗೆ ಪ್ರತಿ ತಿಂಗಳು 15,000 ರೂ.ಗಳಂತೆ ಮತ್ತು 125 ಜೂನಿಯರ್ ಫೆಲೋಶಿಪ್‌ಗಳಿಗೆ ಪ್ರತಿ ತಿಂಗಳು 7,500 ರೂ.ಗಳಂತೆ ಫೆಲೋಶಿಪ್ ನೀಡಲಾಗುತ್ತದೆ. 25 ರಿಂದ 40 ವರ್ಷ ಒಳಗಿನವರು ಜೂನಿಯರ್ ಫೆಲೋಶಿಪ್‌ಗೆ, 40 ವರ್ಷದಿಂದ ಮೇಲ್ಪಟ್ಟವರು ಸೀನಿಯರ್ ಫೆಲೋಶಿಪ್‌ಗೆ ಅರ್ಹರಾಗಿರುತ್ತಾರೆ.
 • ಸಾಂಸ್ಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಸಹಾಯ: ಸಾಂಸ್ಕೃತಿಕ ವಿಭಾಗದಲ್ಲಿ ಸೆಮಿನಾರ್‌ಗಳನ್ನು, ಉತ್ಸವಗಳನ್ನು ಮತ್ತು ಪ್ರದರ್ಶನಗಳನ್ನು ಏರ್ಪಡಿಸಲು ಸಂಸ್ಕೃತಿ ಸಚಿವಾಲಯವು ಸೆಮಿನಾರ್ ಗ್ರಾಂಡ್, ಸ್ತ್ರೀಂ ನ್ನು ಜಾರಿಗೆ ತಂದಿದ್ದು, ಪ್ರಸ್ತುತವಾಗಿ ಕಲ್ಬರಲ್ ಫಂಕ್ಷನ್ ಗ್ರಾಂಡ್ ಸ್ಟೀಂ ಎಂದು ಕರೆಯಲಾಗುತ್ತದೆ.
 • ಈ ಸ್ಕೀ ಅಡಿಯಲ್ಲಿ ಸರ್ಕಾರವು 5 ಲಕ್ಷದವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುದಾನ ಒದಗಿಸುತ್ತದೆ.
 • ಲಾಭರಹಿತ ಸರ್ಕಾರೇತರ ಸಂಸ್ಥೆಗಳು ಈ ಅನುದಾನವನ್ನು ಪಡೆದು ಕಾರ್ಯಕ್ರಮಗಳನ್ನು ನಿಯೋಜಿಸಬಹುದು.
 • ರಾಮಕೃಷ್ಣ ಮಿಷನ್ ಇನ್‌ಸ್ಟಿಟ್ಯೂಟ್ ಅಫ್ ಕಲ್ಟರ್ – ಕಲ್ಲತ್ತ ಇವರಿಗೆ ಆರ್ಥಿಕ ನೆರವು:- ರಾಮಕೃಷ್ಣ ಮಿಷನ್‌ ಇನ್‌ ಸ್ಟಿಟ್ಯೂಟ್ ಆಫ್, ಕಲ್ಟರ್ ಎಂಬುದು ರಾಮಕೃಷ್ಣ ಮಿಷನ್‌ನ ಶಾಖಾ ಕೇಂದ್ರವಾಗಿದ್ದು, ಇದನ್ನು ಪ್ರಸಿದ್ಧ ವಿದ್ವಾಂಸರು ಮತ್ತು ಪ್ರತಿಷ್ಠಿತರನ್ನು ಒಳಗೊಂಡ ಸಮಿತಿಯಾಗಿದೆ. ಇದು ನಡೆಸುವ ಎಲ್ಲ ಚಟುವಟಿಕೆಗಳಿಗೂ ಸರ್ಕಾರವು ಆರ್ಥಿಕ ನೆರವನ್ನು ಒದಗಿಸುತ್ತದೆ.

ವೈಜ್ಞಾನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳು
(Autonomous Institutions)
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯಾನೊಲಜಿ (National Institute of Immunology) (NII)

 • ಕೇಂದ್ರ ಕಚೇರಿಯು ನವದೆಹಲಿಯಲ್ಲಿದೆ.
 • ಚಿಕಿತ್ಸೆ & ಪರಿಹಾರವನ್ನು ರೋಗದ ಮೂಲವನ್ನು ಆಧರಿಸಿ ಸಂಶೋದಿಸುದು & ಬೌದ್ಧಿಕ ಸಂಪತ್ತನ್ನು & ವಿವಿಧ ತಂತ್ರಜ್ಞಾನವನ್ನು ವರ್ಗಾಯಿಸುವುದು.

ನ್ಯಾಷನಲ್ ಸೆಂಟರ್ ಫಾರ್ ಸೆಲ್‌ಸೈನ್ (National Centre for Cell Science (NCCS)

 • ಜೀವಕೋಶದ ಕಾರ್ಯಗಳು, ಜಿನೋಮ್ ರಚನೆ & ನಿಯಂತ್ರಣದ ಬಗ್ಗೆ ಸಂಶೋಧನೆ ನಡೆಸುವುದು,
 • ಕೇಂದ್ರ ಕಚೇರಿಯು ಮಹಾರಾಷ್ಟ್ರದ ಪೂನಾದಲ್ಲಿದೆ. ಇದು ಜೈವಿಕ ತಂತ್ರಜ್ಞಾನ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾ ಯತ್ತತಾ ಸಂಸ್ಥೆಯಾಗಿದೆ. ಇದು ಅಂಗಾಂಶ ತಂತ್ರಜ್ಞಾನ ನಡೆಸುವ ಸಂಸ್ಥೆಯಾಗಿದೆ. ಇದನ್ನು ನ್ಯಾಷನಲ್ ಫೆಸಿಲಿಟಿ ಫಾರ್ ಅನಿಮಲ್ ಟಿಶೂ ಅಂಡ್ ಸೆಲ್‌ ಕಲ್ಟರ್ ಎಂದು ಕರೆಯಲಾಗುತ್ತಿತ್ತು.

ಸೆಂಟರ್ ಫಾರ್ ಡಿಎನ್ಎ ಪಿಂಗರ್ ಪ್ರಿಂಟಿಂಗ್ ಅಂಡ್
ಡಯಾಗೋಸ್ಟಿಕ್ (CDFD) ಹೈದರಾಬಾದ್

 • ಡಿಎನ್ಎ ಆಧಾರಿತ ಸೇವೆ ಹೊಂದಿದಂತೆ ವಿಭಿನ್ನ ಚಟುವಟಿಕೆಗೆ ಪ್ರಸಿದ್ಧವಾಗಿದೆ. ಗುಣಾಣು ವೈಪರಿತ್ಯ ಸಂಬಂಧ ಚಿಕಿತ್ಸೆ & ಸಮಾಲೋಚನೆ ನಡೆಸುವ ಸಂಸ್ಥೆಯಾಗಿದೆ.
 • ಬಾಸುಮತಿ ಅಕ್ಕಿಯ ರಫಿಗೆ ಸಂಬಂಧಿಸಿದ ಪ್ರಮಾಣೀಕರಿಸುವುದು, ಡಿಎನ್‌ಎ ಗೆ ಸಂಬಂಧಿ ಕಾನೂನು ಜಾರಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಸಂಸ್ಥೆಯಾಗಿದೆ.

ನ್ಯಾಷನಲ್ ಬ್ರೆನ್ ಲಸರ್ಚ್‌ ಸೆಂಟರ್‌ (NERC) ಮನೇಸರ್

 • ಆರೋಗ್ಯ & ರೋಗಕ್ಕೆ ಸಂಬಂಧಿಸಿದಂತೆ ಮೆದುಳಿನ ಕಾರ್ಯವನ್ನು ಅಧ್ಯಯನ ಮಾಡಲು ಸಂಶೋಧನೆ ನಡೆಸುವ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ.
 • ನ್ಯೂರೊಸೈನ್ಸ್ & ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರುವ ಭಾರತದ ಏಕೈಕ ಸಂಸ್ಥೆಯಾಗಿದೆ. ಇದನ್ನು 1997ರಲ್ಲಿ ಸ್ಥಾಪಿಸಲಾಗಿದೆ. ಹರಾಣ ರಾಜ್ಯದ ಗುರಂಗಾದ್ ಜಿಲ್ಲೆಯ ಮನೇಸರ್‌ನಲ್ಲಿ ಸ್ಥಾಪಿಸಲಿದೆ. ಇದು ವಿಜ್ಞಾನ & ತಂತ್ರಜ್ಞಾನ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ.


ಇನ್‌ಸ್ಟಿಟ್ಯೂಟ್ ಆಫ್ ಲೈಪ್ ಸೈನ್ಸ್ (ILS)ಭುವನೇಶ್ವರ (ಒರಿಸ್ಸಾ)

 • ಸೋಂಕು ರೋಗಗಳ ಜೀವಶಾಸ್ತ್ರದ ಬಗ್ಗೆ, ಗುಣಾಣುಗಳ ವಿವಿಧ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿದೆ. 1989ರಲ್ಲಿ ಸ್ಥಾಪನೆಯಾಯಿತು. ಜೀವ ವಿಜ್ಞಾನದ ಉನ್ನತ ಶಿಕ್ಷಣ & ಸಂಶೋಧನೆ ನಡೆಸುವ ಸ್ವಾಯತ್ತತ ಸಂಸ್ಥೆಯಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೆನೋಮಿಕ್ಸ್
(NIBMG-National Institute of Biomedical Genomics)

 • ಕ್ಯಾನ್ಸರ್ & ಅಪಾಯಕಾರಿ ರೋಗಗಳಿಗೆ ಸಂಸ್ಥೆಯಾಗಿದೆ. ಬಯೋಮೆಡಿಕಲ್ ಜಿನೊಮಿಕ್ಸ್‌ನಲ್ಲಿ ಸಂಶೋಧನೆ ತರಬೇತಿ & ಸೇವೆ ಒದಗಿಸುವ ಸಂಸ್ಥೆಯಾಗಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಬಳಿಯ ಕಲ್ಯಾಣಿಯಲ್ಲಿ ಸ್ಥಾಪಿಸಲಾಗಿದೆ.

ಜನರಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ (RCB):- ಫಲದಾಬಾದ್ (ಪರಾಣ)

 • ರಿಜನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ, ಯುನೆಸ್ಕೋ & ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಪಡೆದ ಭಾರತ ಸರ್ಕಾದ ಸ್ವಾಯತ್ತತಾ ಸಂಸ್ಥೆಯಾಗಿದೆ. ಸಂಸತ್‌ನಲ್ಲಿ ಜೈವಿಕ ತಂತ್ರಜ್ಞಾನ ಪ್ರಾದೇಶಿಕ ಕಚೇರಿ ಮಸೂದೆ 2016ರನ್ನು ಅಂಗೀಕರಿಸಿ ಸ್ವಾಯತ್ತತಾ ಸ್ಥಾನಮಾನ ನೀಡಿತು.
 • ಭಾರತ ಸರ್ಕಾರ & ಯುನೆಸ್ಕೋದವರು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ 2006ರ ಜುಲೈ 14ರಂದು ಸ್ಥಾಪನೆಗೊಂಡಿತು.
 • ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಶಿಕ್ಷಣ, ತರಬೇತಿ & ಸಂಶೋಧನೆ ನಡೆಸುವ ಸಂಸ್ಥೆಯಾಗಿದೆ.

ಇನ್‌ಸ್ಟಿಟ್ಯೂಟ್ ಆಫ್ ಸ್ಟೆಮ್‌ಸೆಲ್ (ಕಾಂಡ ಕೋಶ) ಅಂಡ್ ಲಜೆನೆರೇಟಿವ್‌ ಮೆಡಿಸಿನ್
(INSTEM):- ಬೆಂಗಳೂರು

 • ಇದೊಂದು ಸ್ವಾಯತ್ತತ ಸಂಶೋಧನಾ ಸಂಸ್ಥೆಯಾಗಿದೆ. ಕಾಂಡಕೋಶ ಜೀವಶಾಸ್ತ್ರ ಮತ್ತು ರೀಜನರೇಟಿವ್ ಮೆಡಿಷನ್ಸ್ ಸಂಶೋಧನೆಗಾಗಿ ಇರುವಂತಹ ಸಂಸ್ಥೆಯಾಗಿದೆ. ಇದಕ್ಕೆ ಆರ್ಥಿಕ ನೆರವನ್ನು ಬಯೋಟೆಕ್ನಾಲಜಿ ಇಲಾಖೆಯವರು ಒದಗಿಸುತ್ತಾರೆ.
 • ಇದರ ಕೇಂದ್ರ ಕಛೇರಿಯು ಬೆಂಗಳೂರಿನಲ್ಲಿದೆ. ಸ್ಥಾಪನೆ 2009 ರಲ್ಲಿ ಈ ಸಂಸ್ಥೆಯು ಸ್ಥಾಪನೆಯಾಯಿತು.
 • ಈ ಸಂಸ್ಥೆಯಡಿಯಲ್ಲಿ 6 ಸಂಶೋಧನೆ ಮತ್ತು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳೆಂದರೆ –
 • 1) ಸೆಂಟರ್ ಫಾರ್ ಟ್ರೈನ್ ಡೆವಲಪ್‌ಮೆಂಟ್ ಅಂಡ್ ರಿಪೇರಿ. 2) ಸೆಂಟರ್ ಫಾರ್ ಕಾರ್ಡಿಯೋ ವಾಸ್ಕೂಲಾರ್ ಬಯೋಲಜಿ ಅಂಡ್ ಡಿಸೀಸಸ್, 3) ಸೆಂಟರ್ ಫಾರ್ ಕೆಮಿಕಲ್‌ ಬಯಾಲಜಿ ಅಂಡ್ ಫೆರೊಪೆಟಿಕ್ಸ್ 4) ಸೆಂಟರ್ ಫಾರ್ ಇಫೆಷನ್ ಅಂಡ್ ಟಿನ್ಯೂಸ್ ಹೋಮಿಯೊ ಸ್ಟಾಟಿಸ್, 5) ಟೆಕ್ನಾಲಜಿಸ್ ಫಾರ್ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ 6) ಪ್ರೋಗ್ರಾಂ ಆನ್ ಅಡಾಲ್ಫ್ ಸ್ಪೆಮ್‌ಸೆಲ್ ಪೊಟೆನ್ಸಿ

ನ್ಯಾಷನಲ್ ಅಗ್ರಿ–ಫುಡ್ ಬಯೋಟೆಕ್ನಾಲಜ (NABI) ಇನ್‌ಸ್ಟಿಟ್ಯೂಟ್‌, ಮಹಾಲ

 • ಇದೊಂದು ವಿಜ್ಞಾನ ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನದ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತತ ಸಂಸ್ಥೆಯಾಗಿದೆ.
 • ಈ ಸಂಸ್ಥೆಯು ಪಂಜಾಬ್ ನ ಮೊಹಾಲಿಯಲ್ಲಿದೆ.
 • ಭಾರತದ ಕೃಷಿ ಆಹಾರ ವಲಯವನ್ನು ವರ್ಧನೆಗೊಳಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
 • ಕೃಷಿ ಆಹಾರ ಜೈವಿಕ ತಂತ್ರಜ್ಞಾನ ಅನ್ವೇಷಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೆಂಟರ್ ಫಾರ್ ಇನ್ನೋವೇಟಿವ್‌ ಅಂಡ್ ಅಫ್ರೆಡ್ ಬಯೋ ಪ್ರೋಸೆಸಿಂಗ್ (CIAB) ಮೊಹಾಲ

 • ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನದ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯು ಪಂಜಾಬ್‌ನಮೊಹಾಲಿಯಲ್ಲಿದೆ.
 • ಈ ಸಂಸ್ಥೆಯು ವಿನೂತನ ಆಲೋಚನೆಗಳ ಮೂಲಕ ಹೊಸ ಉತ್ಪನ್ನಗಳನ್ನು ಸಂಶೋಧಿಸುತ್ತದೆ ಮತ್ತು ದೇಶಕ್ಕೆ ಪರಿಚಯಿಸುತ್ತದೆ.

ಟ್ರಾನ್ಸ್ಲಷನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್
Translational Health Science and Technology Institute (THSTI)

 • ಈ ಸಂಸ್ಥೆಯು ಜೈವಿಕ ತಂತ್ರಜ್ಞಾನ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಸ್ವಾಯತ್ತತ ಸಂಸ್ಥೆಯಾಗಿದೆ.
 • ಈ ಸಂಸ್ಥೆಯನ್ನು 2009 ರಲ್ಲಿ ‘ಹರಾಣದ ಗುರಗಾಂವ್ ನಲ್ಲಿ ಸ್ಥಾಪಿಸಲಾಯಿತು.
 • ಈ ಸಂಸ್ಥೆಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ, ದೆಹಲಿ ಅವರು ನಿರ್ವಹಿಸುತ್ತಾರೆ.
 • ಈ ಸಂಸ್ಥೆಯು ಆರೋಗ್ಯ ವಿಜ್ಞಾನದ ತಂತ್ರಜ್ಞಾನವನ್ನು ಪ್ರಯೋಗಾಲಯ ಸಂಶೋಧನೆಯಿಂದ ಮಾರುಕಟ್ಟೆಗೆ ವರ್ಗಾಯಿಸುವ ಕಾರ್ಯ ಮಾಡುತ್ತದೆ.
 • ಲ್ಯಾಬ್ ರಿಸರ್ಚ್ ಟು ಮಾರ್ಕೆಟ್ ಎಂಬ ಧೈಯದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಬಯೋಟೆಕ್ನಾಲಜಿ (NIAB) ಹೈದರಾಬಾದ್

 • ಇದೊಂದು ಜೈವಿಕ ತಂತ್ರಜ್ಞಾನದ ಅಡಿಯಲ್ಲಿ ಸ್ಥಾಪಿತವಾದ ಸ್ವಾಯತ್ತತ ಸಂಶೋಧನಾ ಸಂಸ್ಥೆಯಾಗಿದೆ.
 • ಅನಿಮಲ್ ಹೆಲ್ತ್‌ ಫಾರ್ ಹೂಮನ್ ವೆಲ್‌ ಫೇರ್ ಎಂಬ ಧೈಯದೊಂದಿಗೆ ಈ ಸಂಸ್ಥೆಯನ್ನು 2010 ರಲ್ಲಿ ಹೈದರಾಬಾದ್‌ನಲ್ಲಿ ಸ್ಥಾಪಿಸಲಾಯಿತು.
 • ಈ ಸಂಸ್ಥೆಯು ಜಾನುವಾರುಗಳಿಗೆ ಸಂಬಂಧಿಸಿದಂತೆ ಜೈವಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡುವ ಸಂಸ್ಥೆಯಾಗಿದೆ.
 • ಮನುಕುಲಕ್ಕೆ ಅನುಕೂಲವಾಗುವಂತೆ . ಜಾನುವಾರುಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಪರಿಚಯಿಸುವುದಾಗಿದೆ.

ನ್ಯಾಷ್‌ನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟ್ ಜನೋಮ್ ಲಿಸರ್ಚ್ (NIPGR) ದೆಹಲಿ

 • ಈ ಸಂಸ್ಥೆಯು ನವದೆಹಲಿಯಲ್ಲಿದೆ. 1998 ರಲ್ಲಿ ಸ್ಥಾಪನೆಯಾಯಿತು.
 • ಈ ಸಂಸ್ಥೆಯು ಸಸ್ಯಗಳ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವಂತಹ ಸಂಸ್ಥೆಯಾಗಿದೆ.

ರಾಜೀವ್‌ ಗಾಂಧಿ ಸೆಂಟರ್ ಫಾರ್ ಟೆಕ್ನಾಲಜಿ (RGCE) ತಿರುವನಂತಪುರಂ, ಕೇರಳ

 • ಮಾಲಿಕ್ಯುಲಾರ್ ಬಯಾಲಜಿ, ಮತ್ತು ಜೈವಿಕ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುವ ಪ್ರಧಾನ ಸಂಶೋಧನಾ ಸಂಸ್ಥೆಯಾಗಿದೆ.
 • ಈ ಸಂಸ್ಥೆಯ ಕೇರಳದ ತಿರುವನಂತಪುರದಲ್ಲಿದೆ. 2002 ನವೆಂಬರ್ 18 ರಂದು ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅವರು ಸಂಸ್ಥೆಯನ್ನು ಉದ್ಘಾಟಿಸಿದರು.