Campus Interview for Apprenticeship Training at Kirloskar Ferrous PVT LTD Koppal

ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ: ಸಂದರ್ಶನಕ್ಕೆ ಆಹ್ವಾನ
ಕೊಪ್ಪಳ, ಫೆ.03 (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕಿನ ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçÃಜ್ ಪ್ರೆöÊ ಲಿ. ವತಿಯಿಂದ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫೆ.07 ರಂದು ಒಂದು ವರ್ಷದ ಅವಧಿಯ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ ಆರಂಭವಾಗಲಿದ್ದು, 18 ರಿಂದ 24 ವರ್ಷ ವಯೋಮಿತಿಯ ಐಟಿಐ ಎಲೆಕ್ಟಿçಷಿಯನ್, ಫಿಟ್ಟರ್, ಟರ್ನರ್ ಮತ್ತು ವೆಲ್ಡರ್ ವೃತ್ತಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಡಿಸೆಂಬರ್-2021ರಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಸಮಯದಲ್ಲಿ ಪ್ರತಿ ತಿಂಗಳು ರೂ.10,000/- ಶಿಷ್ಯವೇತನ, ಕ್ಯಾಂಟೀನ್, ಸಾರಿಗೆ, ಮತ್ತು ಯುನಿಫಾರ್ಮ್ ಸೌಲಭ್ಯಗಳನ್ನು ಕಂಪನಿಯಿAದ ನೀಡಲಾಗುತ್ತದೆ.