Complete Information About Karnataka.

Jun 28, 2022 10:11 am By Admin

👉ಕರ್ನಾಟಕದ ಬಗ್ಗೆ ಮಾಹಿತಿ👈

 • ಕರ್ನಾಟಕ ಎಂಬ ಪದವು ‘ಕರುನಾಡು” ಎಂಬ ಪದದಿಂದ ಬಂದಿದ್ದು, ಅದರ ಅರ್ಥ ‘ಕಪ್ಪು ಮಣ್ಣಿನ ನಾಡು’ & ‘ಕರುನಾಟ್’ ಎಂಬ ಶಬ್ದದ ಅರ್ಥವು ‘ಎತ್ತರದ ನಾಡು’ ಎಂದರ್ಥವಾಗಿದೆ.

⭕️ಮೈಸೂರು ರಾಜ್ಯದ ಕರ್ನಾಟಕವಾಗಿ ಉದಯವಾಗಿತ್ತು:-

 • 1953 ರಲ್ಲಿ ಮೈಸೂರು ಒಡೆತನದಲ್ಲಿದ್ದ ದಕ್ಷಿಣದ ಒಂಭತ್ತು ಜಿಲ್ಲೆಗಳೊಳಗೊಂಡ ‘ಮೈಸೂರು’ ರಾಜ್ಯವು ಉಗಮವಾಯಿತು.
 • ರಾಜ್ಯ ಪುನರ್ ರಚನಾ ಕಾಯ್ದೆ-1956 ರಂತೆ ಹಳೇ ಮೈಸೂರು ಪ್ರಾಂತ್ಯಕ್ಕೆ ಕೊಡಗು, ಹೈ-ಕರ್ನಾಟಕ, ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ ರಾಜ್ಯಗಳು ಸೇರ್ಪಡೆಯಾಗಿ ವಿಶಾಲ ಮೈಸೂರು ರಾಜ್ಯ 1956 ನವೆಂಬರ್ 1 ರಂದು ಅಸ್ಥಿತ್ವಕ್ಕೆ ಬಂದಿತು.
 • ಅಂದಿನ ಭಾರತದ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್‌ ಅವರು ಅಧಿಕೃತವಾಗಿ ಮೈಸೂರು ರಾಜ್ಯವನ್ನು ಉದ್ಘಾಟಿಸಿದರು.
 • ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಎಸ್‌. ನಿಜಲಿಂಗಪ್ಪ ಅವರು ಅಧಿಕಾರ ವಹಿಸಿಕೊಂಡರು. ಮೊದಲ ರಾಜ್ಯಪಾಲರಾಗಿ ಜಯಚಾಮರಾಜೇಂದ್ರ ಒಡೆಯರು ಅಧಿಕಾರ ವಹಿಸಿಕೊಂಡರು.
 • ಡಿ. ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ 1973 ನವೆಂಬರ್ 1 ರಂದು ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಮರು ನಾಮಕರಣ ಗೊಂಡಿತು.

⭕️ಅಕ್ಷಾಂಶ ಮತ್ತು ರೇಖಾಂಶದಲ್ಲಿ ಕರ್ನಾಟಕದ ಸ್ಥಾನ:-

 • ಕರ್ನಾಟಕ ರಾಜ್ಯವು ಭಾರತದ ‘ದಕ್ಷಿಣದ ಪರ್ಯಾಯ ದ್ವೀಪದ ಪಶ್ಚಿಮದ ಮಧ್ಯ ಭಾಗ’ ದಲ್ಲಿದೆ.
 • ಕರ್ನಾಟಕವು 11°-31′ ದಿಂದ 18°-45′ ಉತ್ತರ ಅಕ್ಷಾಂಶ ಹಾಗೂ 74°-12′ ದಿಂದ 78°-40¹ ಪೂರ್ವ ರೇಖಾಂಶದಲ್ಲಿ ವ್ಯಾಪಿಸಿದೆ.
 • ಉತ್ತರ – ದಕ್ಷಿಣವಾಗಿ ಕರ್ನಾಟಕದ ಉದ್ದ-750ಕಿ.ಮೀ
 • ಪೂರ್ವ – ಪಶ್ಚಿಮವಾಗಿ ಕರ್ನಾಟಕದ ಅಗಲ-400ಕಿ.ಮೀ
ಕರ್ನಾಟಕದ ತುದಿಗಳು:
ಉತ್ತರದ ತುದಿಬೀದರ್ ಜಿಲ್ಲೆ ಔರಾದ್‌ ತಾಲ್ಲೂಕು,
ದಕ್ಷಿಣದ ತುದಿಚಾಮರಾಜನಗರ ಜಿಲ್ಲೆ.
ಪೂರ್ವದ ತುದಿಕೋಲಾರದ ಮುಳಬಾಗಿಲು ತಾಲ್ಲೂಕು,
ಪಶ್ಚಿಮ ತುದಿಉತ್ತರ ಕನ್ನಡ ಜಿಲ್ಲೆಯ ಕಾರವಾರ.
ಕರ್ನಾಟಕದ ಆಕಾರಗೋಡಂಬಿಯಾಕಾರದಲ್ಲಿದೆ.
ಕರ್ನಾಟಕದ ಮೇರೆಗಳು:
ಉತ್ತರಕ್ಕೆಮಹಾರಾಷ್ಟ್ರ
ಪೂರ್ವಕ್ಕೆಆಂಧ್ರಪ್ರದೇಶ
ಈಶಾನ್ಯಕ್ಕೆತೆಲಂಗಾಣ
ನೈರುತ್ಯಕ್ಕೆಕೇರಳ
ವಾಯುವ್ಯಕ್ಕೆಗೋವಾ
ಪಶ್ಚಿಮಕ್ಕೆಅರಬ್ಬಿ ಸಮುದ್ರ.
ದಕ್ಷಿಣ ಮತ್ತು ಆಗೇಯಕ್ಕೆತಮಿಳುನಾಡು

⭕️ಕರ್ನಾಟಕದ ಜಿಲ್ಲೆಗಳು:-

ಕಂದಾಯ ವಿಭಾಗಗಳು4 (ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ)
ಉಪ ವಿಭಾಗಗಳು52
ಒಟ್ಟು ಜಿಲ್ಲೆಗಳು30
ಹೈ-ಕರ್ನಾಟಕ(371-ಜೆ) ದ ಜಿಲ್ಲೆಗಳು – 6 (ಕಲಬುರಗಿ, ಬೀದರ್, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು)
ತಾಲೂಕುಗಳು177 (ಕಿತ್ತೂರು ಸೇರಿ)
ಹೋಬಳಿಗಳು747
ನಗರ ಮತ್ತು ಪಟ್ಟಣಗಳು347
ಹಳ್ಳಿಗಳು – 29,340 (ಜನವಸತಿ ಇರುವ ಹಳ್ಳಿಗಳು 27,397, ಜನವಸತಿ ಇಲ್ಲದ ಹಳ್ಳಿಗಳು 1,943)

⭕️ಭಾರತದ ಬಿಸ್ತೀರ್ಣದಲ್ಲಿ ಕರ್ನಾಟಕದ ಸ್ಥಾನ:-

 • ಕರ್ನಾಟಕವು 1,91,791ಚ.ಕಿ.ಮೀ ವಿಸ್ತೀರ್ಣವನ್ನು ಒಳಗೊಂಡಿದೆ.
 • ಇದು ಭಾರತದ ಒಟ್ಟು ಭೌಗೋಳಿಕ ಕ್ಷೇತ್ರದಲ್ಲಿ 5.83 ರಷ್ಟನ್ನು ಒಳಗೊಂಡಿದೆ. 2011ರ ಜನಗಣತಿಯಂತೆ ವಿಸ್ತೀರ್ಣದಲ್ಲಿ ಭಾರತದ 8ನೇ ದೊಡ್ಡ ರಾಜ್ಯವಾಗಿದೆ. 2014ರ ಜೂನ್ 2ರಂದು ಆಂಧ್ರ ಪ್ರದೇಶದಿಂದ ತೆಲಂಗಾಣವು ಪ್ರತ್ಯೇಕವಾದ್ದರಿಂದ ಭೌಗೋಳಿಕ ಸ್ಥಾನದಲ್ಲಿ ಭಾರತದ ರಾಜ್ಯಗಳಲ್ಲಿ ಕರ್ನಾಟಕವು 7ನೇ ಸ್ಥಾನವನ್ನು ಪಡೆದಿದೆ, ಪ್ರಸ್ತುತವಾಗಿ ಕರ್ನಾಟಕವು ದೇಶದ ವಿಸ್ತೀರ್ಣದಲ್ಲಿ 7ನೇ ದೊಡ್ಡ ರಾಜ್ಯವಾಗಿದೆ.
ವಿಸ್ತೀರ್ಣದಲ್ಲಿ ಮೊದಲ 5 ರಾಜ್ಯಗಳು (ಪ್ರಸ್ತುತವಾಗಿ 2014)
 ದೊಡ್ಡ ರಾಜ್ಯಗಳುಚಿಕ್ಕ ರಾಜ್ಯಗಳು
ಮೊದಲ ಸ್ಥಾನರಾಜಸ್ಥಾನಗೋವಾ
ಎರಡನೇ ಸ್ಥಾನಮಧ್ಯ ಪ್ರದೇಶಸಿಕ್ಕಿಂ
ಮೂರನೇ ಸ್ಥಾನಮಹಾರಾಷ್ಟ್ರತ್ರಿಪುರಾ
ನಾಲ್ಕನೇ ಸ್ಥಾನಉ.ಪ್ರದೇಶನಾಗಾಲ್ಯಾಂಡ್
ಐದನೇ ಸ್ಥಾನಜಮ್ಮು & ಕಾಶ್ಮೀರಮಿಜೋರಾಂ
ಆರನೇ ಸ್ಥಾನಗುಜರಾತ್ಮಣಿಪುರ
ಏಳನೇ ಸ್ಥಾನಕರ್ನಾಟಕಮೇಘಾಲಯ

ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕದ ಸ್ಥಾನ

 • ಕರ್ನಾಟಕದ ಜನಸಂಖ್ಯೆಯು 2011 ಜನಗಣತಿಯಂತೆ 6,11,30,704 ಇದ್ದು, ದೇಶದ ಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು 9ನೇ ಸ್ಥಾನವನ್ನು ಹೊಂದಿದೆ.
 • 2014ರ ಜೂನ್ 2ರಂದು ಆಂಧ್ರ ಪ್ರದೇಶದಿಂದ ತೆಲಂಗಾಣವು ಪ್ರತ್ಯೇಕವಾದ್ದರಿಂದ ಜನಸಂಖ್ಯೆಯ ಸ್ಥಾನದಲ್ಲಿ ಭಾರತದ ರಾಜ್ಯಗಳಲ್ಲಿ ಕರ್ನಾಟಕವು 8ನೇ ಸ್ಥಾನವನ್ನು ಪಡೆದಿದೆ. ಪ್ರಸ್ತುತವಾಗಿ.

  ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದೆ.
ಭಾರತದ ಜನಸಂಖ್ಯೆಯಲ್ಲಿ ಅತಿ ದೊಡ್ಡ & ಚಿಕ್ಕ 5 ರಾಜ್ಯಗಳು
 ದೊಡ್ಡ ರಾಜ್ಯಗಳುಚಿಕ್ಕ ರಾಜ್ಯಗಳು
ಮೊದಲ ಸ್ಥಾನಉ.ಪ್ರದೇಶಸಿಕ್ಕಿಂ
ಎರಡನೇ ಸ್ಥಾನಮಹಾರಾಷ್ಟ್ರಮಿಜೋರಾಂ
ಮೂರನೇ ಸ್ಥಾನಬಿಹಾರಅರುಣಾಚಲ ಪ್ರದೇಶ
ನಾಲ್ಕನೇ ಸ್ಥಾನಪ. ಬಂಗಾಳಗೋವಾ
ಐದನೇ ಸ್ಥಾನಮಧ್ಯ ಪ್ರದೇಶನಾಗಾಲ್ಯಾಂಡ್
ಆರನೇ ಸ್ಥಾನತಮಿಳುನಾಡಮಣಿಪುರ
ಏಳನೇ ಸ್ಥಾನರಾಜಸ್ಥಾನಮೇಘಾಲಯ
ಎರಡನೇ ಸ್ಥಾನಕರ್ನಾಟಕತ್ರಿಪುರಾ

ಕರ್ನಾಟಕದ ಅತಿದೊಡ್ಡ ಜಿಲ್ಲೆಗಳು (ವಿಸ್ತೀರ್ಣದ) (2011 ರಂತೆ)

ಜಿಲ್ಲೆಗಳುವಿಸ್ತೀರ್ಣ (.ಕಿ.ಮೀ)ರಾಜ್ಯದ ವಿಸ್ತೀರ್ಣದ ಶೇ.
ಬೆಳಗಾವಿ13,4337.00%
ಕಲಬುರಗಿ10,9545.71%
ತುಮಕೂರು10,5975.53%
ವಿಜಯಪುರ10,4985.47%
ಉತ್ತರ ಕನ್ನಡ10,2775.36%

ಕರ್ನಾಟಕದ ಅತಿ ಚಿಕ್ಕ ಜಿಲ್ಲೆಗಳು (ವಿಸ್ತೀರ್ಣದಲ್ಲಿ)

ಜಿಲ್ಲೆಗಳುವಿಸ್ತೀರ್ಣ (.ಕಿ.ಮೀ.):ಶೇ (ರಾಜ್ಯದ ವಿಸ್ತೀರ್ಣವ)
ಬೆಂಗಳೂರು ನಗರ2,1961.14%
ಬೆಂಗಳೂರು ಗ್ರಾ.2,2981.20%
ರಾಮನಗರ3,5161.83%
ಉಡುಪಿ3,5821.87%
ಕೋಲಾರ್3,9791.07%

ಕರ್ನಾಟಕ ರಾಜ್ಯದ ಅತಿ ದೊಡ್ಡ ಜಿಲ್ಲೆಗಳು (ಜನಸಂಖ್ಯೆ-2011 ರಂತ)

ಜಿಲ್ಲೆಜನಸಂಖ್ಯೆರಾಜ್ಯದಲ್ಲಿನ ಶೇ
ಬೆಂಗಳೂರು ನಗರ95,88,91015.69%
ಬೆಳಗಾವಿ47,78,4397.82%
ಮೈಸೂರು29,94,7444.90%
ತುಮಕೂರು26,81,4494.39%
ಕಲಬುರಗಿ25,64,8924.20%

ರಾಜ್ಯದ 10 ಜನಭರಿತ ನಗರಗಳು:-
1) ಬೆಂಗಳೂರು
2) ಮೈಸೂರು
3) ಹುಬ್ಬಳ್ಳಿ-ಧಾರವಾಡ
4) ಮಂಗಳೂರು
5) ಬೆಳಗಾವಿ
6) ಕಲಬುರಗಿ
7) ದಾವಣಗೆರೆ
8) ಬಳ್ಳಾರಿ
9) ವಿಜಯಪುರ
10)ಶಿವಮೊಗ್ಗ

ಕರ್ನಾಟಕ ರಾಜ್ಯದ ಅತಿ ಚಿಕ್ಕ ಜಿಲ್ಲೆಗಳು (ಜನಸಂಖ್ಯೆ-2011 ರಂತ)

ಜಿಲ್ಲೆಜನಸಂಖ್ಯೆರಾಜ್ಯದಲ್ಲಿನ ಶೇ
ಕೊಡಗು5,54,7620.91%
ಬೆಂಗಳೂರು ಗ್ರಾಮಾಂತರ9,87,2571.61%
ಚಾಮರಾಜನಗರ10,20,9621.67%
ಗದಗ10,65,2631.74%
ರಾಮನಗರ10,82,7391.77%

ಜನಸಾಂದ್ರತೆ ಹೆಚ್ಚು ಹೊಂದಿರುವ ಜಿಲ್ಲೆಗಳು (1 ಚ.ಕಿ.ಮೀಗೆ ಇರುವ ಜನಸಂಖ್ಯೆ)

ಬೆಂಗಳೂರು ನಗರ4,378
ದಕ್ಷಿಣ ಕನ್ನಡ441
ಬೆಂಗಳೂರು ಗ್ರಾಮಾಂತರ457
ಧಾರವಾಡ437
ಮೈಸೂರು434
ಕರ್ನಾಟಕದಲ್ಲಿ ಅತಿ ಹೆಚ್ಚು ಸ್ತ್ರೀಯರ ಪ್ರಮಾಣ (ಜಿಲ್ಲಾವಾರು) (ಲಿಂಗಾನುಪಾತ 1000 ಪುರುಷರಿಗೆ ಮಹಿಳೆಯರ ಸಂಖ್ಯೆ)
ಮೊದಲ ಸ್ಥಾನಉಡುಪಿ
ಎರಡನೇ ಸ್ಥಾನಕೊಡಗು
ಮೂರನೇ ಸ್ಥಾನದಕ್ಷಿಣ ಕನ್ನಡ
ನಾಲ್ಕನೇ ಸ್ಥಾನಹಾಸನ
ಅತಿ ಕಡಿಮೆ ಹೊಂದಿರುವ ಜಿಲ್ಲೆಬೆಂಗಳೂರು ನಗರ ಜಿಲ್ಲೆ
ರಾಜ್ಯದಲ್ಲಿ ಅಡಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆಗಳು
ಮೊದಲ ಸ್ಥಾನದಕ್ಷಿಣ ಕನ್ನಡಜಿಲ್ಲೆ
ಎರಡನೇ ಸ್ಥಾನಬೆಂಗಳೂರು ನಗರ ಜಿಲ್ಲೆ
ಮೂರನೇ ಸ್ಥಾನ ಉಡುಪಿ
ಅತಿ ಕಡಿಮೆ ಹೊಂದಿರುವ ಜಿಲ್ಲೆಯಾದಗಿರಿ

ರಾಜ್ಯದ ಪುರುಷರ ಒಟ್ಟು ಸಾಕ್ಷರತೆ – ಶೇ 82.9
ಮಹಿಳೆಯರ ಸಾಕ್ಷರತೆ – ಶೇ 68.2 ರಷ್ಟಿದೆ.

ಲಿಂಗಾನುಪಾತದಲ್ಲಿ ದಶಕ (2001-2011)ದಲ್ಲಿ ಇಳಿಕೆ ಕಂಡ ಜಿಲ್ಲೆಗಳು
ಮೊದಲ ಸ್ಥಾನಚಾಮರಾಜನಗರ (2001 ಕ್ಕೆ ಹೋಲಿಸಿದಾಗ ಶೇ 22 ರಷ್ಟು ಇಳಿಕೆಯಾಗಿದೆ.)
ಎರಡನೇ ಸ್ಥಾನದಾವಣಗೆರೆ (ಶೇ 15 ರಷ್ಟು ಇಳಿಕೆ)
ಮೂರನೇ ಸ್ಥಾನಚಿತ್ರದುರ್ಗ (ಶೇ 13 ರಷ್ಟು ಇಳಿಕೆ)
ನಾಲ್ಕನೇ ಸ್ಥಾನಹಾಸನ (ಶೇ 12 ರಷ್ಟು ಇಳಿಕೆ)

ಜನಸಾಂದ್ರತೆ (ಚ.ಕಿ.ಮೀಗೆ ವಾಸಿಸುವ ಜನರು)

 • 2011 ರ ಜನಗಣತಿಯಂತೆ. ರಾಜ್ಯದ ಜನಸಾಂದ್ರತೆಯು (ಚ.ಕಿ.ಮೀ ಗೆ) 319 ಇದೆ.
  2001 ರ ಜನಗಣತಿಯಲ್ಲಿ ‘ರಾಜ್ಯದ ಜನಸಾಂದ್ರತೆಯು ಪ್ರತಿ ಚ.ಕಿ.ಮೀ ಗೆ 275 ಇತ್ತು.
 • ಭಾರತದ ಜನಸಾಂದ್ರತೆ –382
 • ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ – ಬಿಹಾರ(1106)
 • ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ಅರುಣಾಚಲ ಪ್ರದೇಶ (17)
 ಅತಿ ಹೆಚ್ಚು ಜನಸಾಕ್ಷರತೆ ಹೊಂದಿರುವ ಜಿಲ್ಲೆಗಳು
 ಮೊದಲ ಸ್ಥಾನ ಬೆಂಗಳೂರು ನಗರ ಜಿಲ್ಲೆ
 ಎರಡನೇ ಸ್ಥಾನ ದಕ್ಷಿಣ ಕನ್ನಡಜಿಲ್ಲೆ
 ಮೂರನೇ ಸ್ಥಾನ ಮೈಸೂರು
 ನಾಲ್ಕನೇ ಸ್ಥಾನ ಬೆಂಗಳೂರು ಗ್ರಾಮಾಂತರ
 ಐದನೇ ಸ್ಥಾನ ಧಾರವಾಡ
 ಆರನೇ ಸ್ಥಾನ ಕೋಲಾರ
 • ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಜಿಲ್ಲೆ – ಕೊಡಗು (135)

ಗ್ರಾಮೀಣ ಮತ್ತು ನಗರ ಜನಸಂಖ್ಯೆ ಹೊಂದಿರುವ ಜಿಲ್ಲೆಗಳು

 • ಕರ್ನಾಟಕದಲ್ಲಿ 3.75 ಕೋಟಿ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.
  ಒಟ್ಟು ಜನಸಂಖ್ಯೆಯಲ್ಲಿ ಶೇ 61.4 ರಷ್ಟಿದೆ.
 • ನಗರ ಜನರು 2.35 ಕೋಟಿ ಇದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ 38.6 ರಷ್ಟಿದೆ.
ಕರ್ನಾಟಕದಲ್ಲಿ ಅಧಿಕ ಪ್ರಮಾಣದಲ್ಲಿ ನಗರ ಜನಸಂಖ್ಯೆ ಹೊಂದಿರುವ ಜಿಲ್ಲೆಗಳು
 ಮೊದಲ ಸ್ಥಾನ ಬೆಂಗಳೂರು ನಗರ ಜಿಲ್ಲೆ
ಕೊನೆಯ ಸ್ಥಾನ ಕೊಡಗು

ದೇಶದ ರಾಜ್ಯಾದಾಯದಲ್ಲಿ ಕರ್ನಾಟಕದ ಸ್ಥಾನ

 • ಕರ್ನಾಟಕದ ರಾಜ್ಯಾದಾಯವು 2014-15 ನೇ ಸಾಲಿನಲ್ಲಿ
  9,07,839 ಕೋಟಿ ರೂ.ಗಳಿವೆ. ಈ ಮೂಲಕ ಕರ್ನಾಟಕ ರಾಜ್ಯವು ರಾಜ್ಯಾದಾಯದಲ್ಲಿ ದೇಶಗಳ ರಾಜ್ಯಗಳನ್ನು ಹೋಲಿಸಿದಾಗ 4ನೇ ಸ್ಥಾನದಲ್ಲಿದೆ.
 • 2015-16 ರಲ್ಲಿ ರಾಜ್ಯದ ರಾಜ್ಯಾದಾಯವು 10,22,729 ಕೋ.ರೂ.

ರಾಜ್ಯಾದಾಯದಲ್ಲಿ ಮೊದಲ ಸ್ಥಾನದಲ್ಲಿರುವ ದೇಶದ ರಾಜ್ಯಗಳು (ಕೋಟಿಗಳಲ್ಲಿ)(2014-15)

ಮೊದಲ ಸ್ಥಾನಮಹಾರಾಷ್ಟ್ರ17,92,122
ಎರಡನೇ ಸ್ಥಾನತಮಿಳುನಾಡು11,20,620
ಮೂರನೇ ಸ್ಥಾನಉ.ಪ್ರದೇಶ10,41,997
ನಾಲ್ಕನೇ ಸ್ಥಾನಕರ್ನಾಟಕ9,07,839
ಐದನೇ ಸ್ಥಾನಗುಜರಾತ್8,95,202

ಕರ್ನಾಟಕ ರಾಜ್ಯಾದಾಯಕ್ಕೆ ವಲಯವಾರು ಕೊಡುಗೆ: (ಪ್ರಸಕ್ತ ಬೆಲೆಗಳಲ್ಲಿ) (ಪೋಟಗಳಲ್ಲಿ)

ವಲಯಗಳು.2014-152015-16
ಪ್ರಾಥಮಿಕ ವಲಯ1,17,4161,21,340
ದ್ವಿತೀಯ ವಲಯ1,99,8482,14,719
ತೃತೀಯ ವಲಯ5,13,6515,98,812
ಒಟ್ಟು9,07,83910,22,729

ದೇಶದ ತಲಾದಾಯದಲ್ಲಿ ಕರ್ನಾಟಕದ ಸ್ಥಾನ:-

 • ಕರ್ನಾಟಕ ರಾಜ್ಯದ ತಲಾದಾಯವು 2014-15 ನೇ ಸಾಲಿನಲ್ಲಿ 1,30,897 ರೂ.ಗಳಾಗಿದ್ದು, ಈ ಮೂಲಕ ಕರ್ನಾಟಕ ರಾಜ್ಯವು ತಲಾದಾಯದಲ್ಲಿ ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದಾಗ 6ನೇ ಸ್ಥಾನದಲ್ಲಿದೆ.
 • 2015-16 ನೇ ಸಾಲಿನಲ್ಲಿ ರಾಜ್ಯದ ತಲಾದಾಯವು 1,45,799 ರೂ. ಗಳಿವೆ

ತಲಾದಾಯದಲ್ಲಿ ಮೊದಲ ಸ್ಥಾನದಲ್ಲಿರುವ ದೇಶದ ರಾಜ್ಯಗಳು (ರೂಪಾಯಿಗಳಲ್ಲಿ) (2014-15)

ಮೊದಲ ಸ್ಥಾನದೆಹಲಿ2,52,011
ಎರಡನೇ ಸ್ಥಾನಹರಿಯಾಣ1,50,260
ಮೂರನೇ ಸ್ಥಾನಕೇರಳ1,38,390
ನಾಲ್ಕನೇ ಸ್ಥಾನತಮಿಳುನಾಡು1,35,806
ಐದನೇ ಸ್ಥಾನಮಹಾರಾಷ್ಟ್ರ1,34,081
ಆರನೇ ಸ್ಥಾನಕರ್ನಾಟಕ 1,30,897
ಏಳನೇ ಸ್ಥಾನತೆಲಂಗಾಣ1,29,182

ಜಿಲ್ಲಾವಾರು ಅದಾಯ (District Income)

 • ಕರ್ನಾಟಕ ರಾಜ್ಯದಲ್ಲಿ 2013-14ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯು ಜಿಲ್ಲಾದಾಯ ಮತ್ತು ತಲಾದಾಯದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ಬೆಲೆಗಳಲ್ಲಿ ಒಟ್ಟು ಆಂತರಿಕ ಉತ್ಪನ್ನದಲ್ಲಿ ಬೆಂಗಳೂರು ನಗರ ಜಿಲ್ಲೆಯ ಕೊಡುಗೆಯು ಶೇ 33.6 ರಷ್ಟಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇದ್ದು ಇದು ಒಟ್ಟು ಆಂತರಿಕ ಉತ್ಪನ್ನದಲ್ಲಿ ಶೇ 5.8 ರಷ್ಟನ್ನು ನೀಡುತ್ತದೆ.
 • ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಯಾದಗಿರಿ ಜಿಲ್ಲೆಯು ಶೇ 1.04 ರಷ್ಟು, ಕೊಡಗು ಜಿಲ್ಲೆ ಶೇ 0.89 ರಷ್ಟು ಕೊಡುಗೆ’ ಯೊಂದಿಗೆ ಕೊನೆಯ ಸ್ಥಾನದಲ್ಲಿವೆ.

ಜಿಲ್ಲಾವಾರು ತಲಾದಾಯ (District Per Capita)

 • ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ 2013-14ನೇ ಸಾಲಿನ ಜಿಲ್ಲಾವಾರು ತಲಾದಾಯದಂತೆ ಬೆಂಗಳೂರು ನಗರ ಜಿಲ್ಲೆಯು ಅತಿ ಹೆಚ್ಚಿನ ತಲಾದಾಯವನ್ನು ಹೊಂದಿದೆ.
 • 2013-14 ರಲ್ಲಿ ಕರ್ನಾಟಕದ ತಲಾದಾಯವು 1,26,976 ಇತ್ತು.

ಜಿಲ್ಲಾವಾರು ತಲಾದಾಯದಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆಗಳು(2013-14)(ರೂಗಳಲ್ಲಿ)

 ಮೊದಲ ಸ್ಥಾನಬೆಂಗಳೂರು ನಗರ ಜಿಲ್ಲೆ  2,71,387
 ಎರಡನೇ ಸ್ಥಾನ ದಕ್ಷಿಣ ಕನ್ನಡ 2,18,580
 ಮೂರನೇ ಸ್ಥಾನ ಉಡುಪಿ 1,76,479
 ನಾಲ್ಕನೇ ಸ್ಥಾನ ಚಿಕ್ಕಮಗಳೂರು 1,68,412
 ಐದನೇ ಸ್ಥಾನ ಶಿವಮೊಗ್ಗ 1,27,655
 ಆರನೇ ಸ್ಥಾನ ಬೆಂಗಳೂರು ಗ್ರಾಮಾಂತರ 1,27,264

ಜಿಲ್ಲಾವಾರು ತಲಾದಾಯದಲ್ಲಿ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಗಳು(2013-14)(ರೂಗಳಲ್ಲಿ)

ಕಲಬುರಗಿ67,886
ಯಾದಗಿರಿ69,014
ಬೀದರ್70,543
ವಿಜಯಪುರ71,482
ಬೆಳಗಾವಿ72.428
ರಾಯಚೂರು73,851

ಪ್ರಸಕ್ತ ಬೆಲೆಗಳ ಕೊಡುಗೆ:
ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವಲಯವಾರು ಕೊಡುಗೆ 2015-16ನೇ ಸಾಲಿನಲ್ಲಿ ಪ್ರಾಥಮಿಕ ವಲಯ ಶೇ 12.98, ದ್ವಿತೀಯ ವಲಯ 22.97, ತೃತೀಯ ವಲಯ 64.05 ಇದೆ.

ಕರ್ನಟಕದ ಭೌಗೋಳಿಕ ಮತ್ತು ಪ್ರಾಕೃತಿಕ ಅಂಶಗಳು

 1. ಕರಾವಣ ಮೈದಾನ
 2. ಮಲೆನಾಡು
 3. ಮೈದಾನ ಪ್ರದೇಶ
 • ಕರ್ನಾಟಕ ರಾಜ್ಯವು 320 ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿದೆ. (ಭಾರತದ ಕರಾವಳಿಯು 6,100 ಕಿ.ಮೀ ಇದ್ದು, ದ್ವೀಪಗಳನ್ನು ಸೇರಿಸಿದಾಗ 7,516.6 ಕಿ.ಮೀ ಇದ್ದು, 9 ರಾಜ್ಯಗಳಲ್ಲಿ ಹಂಚಿಕೊಂಡಿದೆ. ಅತಿ ಹೆಚ್ಚು ಕರಾವಳಿ ಪ್ರದೇಶವನ್ನು ಗುಜರಾತ್ ರಾಜ್ಯ, 2ನೇ ಸ್ಥಾನವನ್ನು ಆಂಧ್ರಪ್ರದೇಶ ಹೊಂದಿದೆ.
 • ರಾಜ್ಯದ ಕರಾವಳಿ ತೀರವು ಈ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಅವುಗಳೆಂದರೆ – ದಕ್ಷಿಣ ಕನ್ನಡ (62 ಕಿ.ಮೀ), ಉಡುಪಿ(98 ಕಿ.ಮೀ), ಉತ್ತರ ಕನ್ನಡ (160 ಕಿ.ಮೀ).
 • ಕರ್ನಾಟಕದ ಕರಾವಳಿಯನ್ನು ಕೆನರಾ ಅಥವಾ ಕರ್ನಾಟಕದ ಕರಾವಳಿ ಎಂದು ಕರೆಯುತ್ತಾರೆ. (ಗೋವಾ ಭಾಗದ ಕರಾವಳಿಯನ್ನು ಕೊಂಕಣ ಎಂದು, ಕೇರಳ ಭಾಗವನ್ನು ಮಲಬಾರ್ ಎನ್ನುವರು)
 • ನವಮಂಗಳೂರು ಬಂದರು ಕರ್ನಾಟಕದ ಅತಿ ದೊಡ್ಡ ಬಂದರಾಗಿದೆ.
 • ಕರ್ನಾಟಕವು ಕರಾವಳಿ ಮೀನು ಉತ್ಪಾದನೆಯಲ್ಲಿ ಮೀನು ಉತ್ಪಾದನೆಗೆ ಹೋಲಿಸಿದಾಗ 6 ನೇ ಸ್ಥಾನದಲ್ಲಿದೆ.
 • ಒಳನಾಡು ಮೀನು ಉತ್ಪಾದನೆಯಲ್ಲಿ 8 ನೇ ಸ್ಥಾನದಲ್ಲಿದೆ.

ಮಲೆನಾಡು ಪ್ರದೇಶ :

 • ಮಲೆನಾಡು ಜಿಲ್ಲೆಗಳು ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು.
 • ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳನ್ನು ಮಲೆನಾಡು ಎನ್ನುವರು, ಮತ್ತು ಸಹ್ಯಾದ್ರಿ ಬೆಟ್ಟ ಎನ್ನುವರು. 
 • ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ – ಮುಳ್ಳಯ್ಯನಗಿರಿ (ಚಿಕ್ಕಮಗಳೂರು ಜಿಲ್ಲೆ)
 • ಬಾಬಾ ಬುಡನ್‌ಗಿರಿ ಬೆಟ್ಟವು ಪಶ್ಚಿಮ ಘಟ್ಟಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ.
 • ಪಶ್ಚಿಮ ಘಟ್ಟಗಳಲ್ಲಿ ಅತಿ ಎತ್ತರವಾದ ಶಿಖರ – ಕೇರಳದಲ್ಲಿರುವ ಆನೈಮುಡಿ .
 • ಕೆಮ್ಮಣ್ಣುಗುಂಡಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಬೇಸಿಗೆ ಕಾಲದಲ್ಲಿ ತಂಗುತ್ತಿದ್ದ ನಿವಾಸವಿದೆ.

ಪ್ರಮುಖ ಘಟ್ಟ ಮಾರ್ಗಗಳು

ಚಾರ್ಮಾಡಿ ಘಾಟಿಮಂಗಳೂರು ಮತ್ತು ಚಿಕ್ಕಮಗಳೂರು
ಶಿರಾಡಿ ಘಾಟಿಹಾಸನ, ಸಕಲೇಶಪುರ, ಮಂಗಳೂರು
ಆಗುಂಬೆ ಘಾಟಶಿವಮೊಗ್ಗ, ಉಡುಪಿ ಸಂಪರ್ಕ
ಹುಲಿಕಲ್ ಘಾಟಿಶಿವಮೊಗ್ಗ ಮತ್ತು ಕುಂದಾಪುರ
 • ಕೊಡಗನ್ನು “ಕರ್ನಾಟಕದ ಕಾಶ್ಮೀರ”, “ಕಿತ್ತಲೆ ನಾಡು” ಎನ್ನುವರು.
 • ಚಿಕ್ಕಮಗಳೂರನ್ನು ಕಾಫಿಯ ನಾಡು ಎನ್ನುವರು,
 • ಮಲೆನಾಡು ಪ್ರದೇಶವನ್ನು ಜೀವ ವೈವಿಧ್ಯತೆಯ ವಲಯ ಎನ್ನುವರು.
 • ಜೋಗ ಜಲಪಾತವು ಶರಾವತಿ ನದಿಯಿಂದ ಉಂಟಾಗುವ ಭಾರತದ ಎತ್ತರದ ಜಲಪಾತಗಳಲ್ಲೊಂದಾಗಿದೆ.

3) ಮೈದಾನ ಪ್ರದೇಶ:

 • ಮೈದಾನ ಪ್ರದೇಶವನ್ನು ಉತ್ತರ ಮೈದಾನ ಮತ್ತು ದಕ್ಷಿಣ ಮೈದಾನ ಎಂದು ವಿಂಗಡಿಸಲಾಗುತ್ತದೆ.

ಮೈದಾನ ಪ್ರದೇಶ

 1. ಹುತ್ತರದ ಮೈದಾನ ಪ್ರದೇಶ
 2. ದಕ್ಷಿಣದ ಮೈದಾನ ಪ್ರದೇಶ

ಉ. ಮೈದಾನದ ಜಿಲ್ಲೆಗಳು :

 • ಬೀದರ್, ವಿಜಯಪುರ, ಕಲಬುರಗಿ, ಯಾದಗಿರಿ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾವೇರಿ, ಬಾಗಲಕೋಟೆ, ಧಾರವಾಡ ಮತ್ತು ಬೆಳಗಾವಿಯ ಕೆಲವು ಭಾಗಗಳು
 • ಉ. ಮೈದಾನವು ಕಪ್ಪು ಮಣ್ಣಿನಿಂದ ಕೂಡಿದೆ. ಇದನ್ನು ಬಿಸಿಲಿನ ನಾಡು ಎನ್ನುವರು.
 • ಘಟಪ್ರಭಾ ನದಿಯಿಂದಾದ ಗೋಕಾಕ್ ಜಲಪಾತವು 52 ಮೀಟ ಈ ಎತ್ತರದಿಂದ ಧುಮುಕುತ್ತದೆ. ಇದನ್ನು ಭಾರತದ ನಯಾಗಾರ ಎನ್ನುವರು.

ದಕ್ಷಿಣದ ಮೈದಾನದ ಜಿಲ್ಲೆಗಳು:-

 • ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳು. ಇದು ಕೆಂಪು ಮಣ್ಣಿನಿಂದ ಕೂಡಿದೆ.
 • ಕಾವೇರಿ, ಪಾಲಾರ್, ಪೆನ್ನಾ‌ರ್ ಹರಿಯುವ ಪ್ರಮುಖ ನದಿಗಳು .
 • ಕೃಷ್ಣಾ, ತುಂಗಭದ್ರಾ ಮತ್ತು ಕಾವೇರಿ ಜಲಾನಯನ ಪ್ರದೇಶವನ್ನು ಹೊಂದಿದೆ.
 • ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಏಕಶಿಲಾ ಬೆಟ್ಟ ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟದಲ್ಲಿದೆ.
 • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿ ಗಿರಿಧಾಮವಿದೆ.


ಕರ್ನಾಟಕದ ವಾಯುಗುಣ

1) ಬೇಸಿಗೆಕಾಲ:- ಉಷ್ಣಾಂಶವು ರಾಯಚೂರಿನಲ್ಲಿ 45.6 ಡಿಗ್ರಿ ಪ್ರತಿ ವರ್ಷ ದಾಖಲಾಗುತ್ತಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶವಾಗಿದೆ. ಕಾಫಿಗಿಡಗಳು ಹೂ ಬಿಡಲು ನೆರವಾಗುವ ‘ಕಾಫಿ ಹೂಮಳೆ’ ಮತ್ತು ಮಾವು ಫಸಲಿಗೆ ನೆರವಾಗುವ ‘ಮಾವಿನ ಹುಲ್ಲು ಮಳೆ’ ಬೀಳುತ್ತವೆ. ವಾರ್ಷಿಕವಾಗಿ ರಾಜ್ಯದ ಮಳೆಯಲ್ಲಿ ಶೇ 7 ರಷ್ಟು ಭಾಗ ಈ ಕಾಲದಲ್ಲಿ ಬೀಳುತ್ತದೆ.
2) ಮಳೆಗಾಲ:- ಇದನ್ನು ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ಎನ್ನುವರು. ಅತಿ ಹೆಚ್ಚು ಮಳೆಯು ಶಿವಮೊಗ್ಗ ಜಿಲ್ಲೆಯ ‘ಹುಲಿಕಲ್’ ಎಂಬಲ್ಲಿ ದಾಖಲಾಗಿದೆ. ಮೊದಲು ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಇದನ್ನು ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು. ಅತಿ ಕಡಿಮೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ದಾಖಲಾಗಿದೆ. ಋತುಮಾನದಲ್ಲಿ ಕರ್ನಾಟಕವು ಶೇ 80 ರಷ್ಟು ಮಳೆ ಪಡೆಯುತ್ತದೆ.
3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ:- ಇದನ್ನು ಈಶಾನ್ಯ ಮಾನ್ಸೂನ್ ಎನ್ನುವರು. ಈ ಋತುಮಾನದಲ್ಲಿ ಶೇ 12 ರಷ್ಟು ಮಳೆಯಾಗುತ್ತದೆ.
4) ಚಳಗಾಲ:- ಇದನ್ನು ಕರ್ನಾಟಕದ ಪ್ರವಾಸ ಮಾಸ ಎನ್ನುವರು. ಬೆಳಗಾವಿಯಲ್ಲಿ ಅತಿ ಕಡಿಮೆ ಉಷ್ಣಾಂಶ 6.7 ಡಿಗ್ರಿ ಸೆ. ದಾಖಲಾಗುತ್ತದೆ.

 • ರಾಜ್ಯದ ಒಟ್ಟು ಮಳೆಯಲ್ಲಿ ಶೇ 1 ರಷ್ಟು ಮಳೆಯಾಗುತ್ತದೆ.
 • ಭಾರತದಲ್ಲಿ ಅತಿ ತೇವಾಂಶ ಭರಿತ ಪ್ರದೇಶ – ಮೌಸಿನ್‌ರಾಂ.

ಕರ್ನಾಟಕದ ಮಣ್ಣುಗಳು

1) ಕೆಂಪು ಮಣ್ಣು:- ಗ್ರಾನೈಟ್, ನೀಶ್ ಶಿಲಾದ್ರವದಿಂದ ರೂಪಿತವಾಗಿದೆ. ಕಬ್ಬಿಣದ ಆಕ್ಸೆಡ್ ಹೊಂದಿರುತ್ತದೆ. ಭತ್ತ, ಕಬ್ಬು, ತೆಂಗು, ಅಡಿಕೆಗೆ ಉಪಯುಕ್ತವಾಗಿದೆ.

 • ತುಮಕೂರು, `ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ ಕೋಲಾರ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರುಗಳಲ್ಲಿ ಕಂಡು ಬರುತ್ತದೆ.

2) ಕಪ್ಪು ಮಣ್ಣು:- ಬಸಾಲ್ಟ್ ಶಿಲೆಯ ಶಿಥಲೀಕರಣದಿಂದ ಉಂಟಾದ ಮಣ್ಣು, ಮೆಗ್ನಿಶಿಯಂ, ಅಲ್ಯುಮಿನಿಯಂ ಮತ್ತು ಕಬ್ಬಿಣದ ಆಕ್ಸೆಡ್‌ಗಳಿರುತ್ತವೆ.

 • ಇದನ್ನು ಎರೆಮಣ್ಣು ಅಥವಾ ಕಪ್ಪುಹತ್ತಿ ಮಣ್ಣು ಎನ್ನುವರು.
  ಹೆಚ್ಚುದಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ.

ಪ್ರಮುಖ ಬೆಳೆಗಳು:-
ಹತ್ತಿ, ಜೋಳ, ಈರುಳ್ಳಿ, ಕಬ್ಬು, ಮೆಕ್ಕೆಜೋಳ

 • ಕಲಬುರಗಿ, ಧಾರವಾಡ, ಗದಗ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಚಾಮರಾಜನಗರ
  3) ಜಂಬಿಟ್ಟಿಗೆ ಮಣ್ಣು:- ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಭಾಗಗಳಲ್ಲಿ ಕಂಡು ಬರುತ್ತದೆ.
  ಪ್ರಮುಖ ಬೆಳೆಗಳು:- ಗೋಡಂಬಿ, ಕಾಫಿ, ಚಹಾ, ಏಲಕ್ಕಿ, ಮೆಣಸು, ರಬ್ಬರ್, ತೆಂಗು
 • ಉ, ಕನ್ನಡ, ಉಡುಪಿ, ದ.ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ

4) ಕರಾವಳ ಮೆಕ್ಕಲು ಮಣ್ಣು:- ನದಿ, ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಸಂಗ್ರಹವಾಗಿ ನಿರ್ಮಾಣವಾಗುತ್ತದೆ.

 • ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಕಂಡು ಬರುತ್ತದೆ.
 • ಮರಳು ಮತ್ತು ಜೇಡಿ ಮಿಶ್ರಿತವಾಗಿರುತ್ತದೆ.
  ಪ್ರಮುಖ ಬೆಳೆಗಳು: ಭತ್ತ, ಗೋಡಂಬಿ, ತೆಂಗು, ಅಡಿಕೆ, ಬಾಳೆ

ಕರ್ನಾಟಕದ ಸಸ್ಯವರ್ಗ

1) ನಿತ್ಯ ಹರಿದ್ವರ್ಣದ ಕಾಡುಗಳು :- 250 ಸೆಂ.ಮೀ ಗಿಂತ ಹೆಚ್ಚು ಮಳೆ ಬೀಳುತ್ತದೆ. ಉ. ಕನ್ನಡ, ದ. ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಡು ಬರುತ್ತದೆ. ಬೀಟೆ, ತೇಗ, ಮತ್ತಿ, ನಂದಿ ಮರಗಳು ಕಂಡು ಬರುತ್ತವೆ.
2) ಎಲೆ ಉದುರಿಸುವ ಸವರ್ಗ:- ಚಳಿಗಾಲದ ತರುವಾಯ ಈ ಮರಗಳು ಎಲೆ ಉದುರಿಸುತ್ತವೆ. ವಾರ್ಷಿಕ 60 ರಿಂದ 120 ಸೆಂ.ಮೀ ಮಳೆ ಬೀಳುತ್ತದೆ. ಹೊನ್ನೆ, ಬೇವು, ಮಾವು, ಹಲಸು
3) ಮಿಶ್ರ ಕಾಡುಗಳು:- ನಿತ್ಯ ಹರಿದ್ವರ್ಣ ಮತ್ತು ಅಗಲ ಎಲೆಯುಳ್ಳ, ಎಲೆ ಉದುರಿಸುವ ಪ್ರಕಾರದ ಮರಗಳು ಬೆಳೆಯುವ ಸಸ್ಯ ವರ್ಗವೇ ಮಿಶ್ರ ಕಾಡುಗಳು.

 • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಕಂಡು ಬರುತ್ತವೆ.

4) ಹುಲ್ಲುಗಾವಲು ಮತ್ತು ಕುರುಚಲು ಸಸ್ಯಗಳು:- ಕರ್ನಾಟಕದಲ್ಲಿ 60 ಸೆಂ.ಮೀ ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶದಲ್ಲಿಕಂಡು ಬರುತ್ತವೆ. ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ

 • ಕರಾವಳಿ ಪ್ರದೇಶದಲ್ಲಿ ಬೆಳೆಯುವ ಮರಗಳನ್ನು ಮ್ಯಾಂಗ್ರೂವ್ ಸಸ್ಯಗಳೆಂದು ಕರೆಯುವರು.
 • ಬೆಂಗಳೂರಿನ ಸಮೀಪದ ರಾಮೋಹಳ್ಳಿಯಲ್ಲಿ ಅತಿ ದೊಡ್ಡ ಆಲದಮರವಿದೆ.
 • ಶಿಡ್ಲಘಟ್ಟದ ಟಿ. ವೆಂಕಟಾಪುರದ ಬಳಿ ಅತಿ ದೊಡ್ಡ ಬೇವಿನ ಮರವಿದೆ.
 • ಸವಣೂರ ಎಂಬಲ್ಲಿ ಬೃಹತ್‌ ಹುಣಸೇ ಮರವಿದೆ.

2011 ರ ಜನಗಣತಿಯ ಪರಿಷ್ಕೃತ ಮಾಹಿತಿ (2015-16 ರ ಆರ್ಥಿಕ ಸಮೀಕ್ಷೆಯ ವರದಿ)

 • ಜನಸಂಖ್ಯೆ (2011 ರ ಜನಗಣತಿಯಂತೆ) 6,10,95,000 ಸಾವಿರ (ಪರಿಷ್ಕೃತ) 2011ರ ಜನಗಣತಿಯಲ್ಲಿನ ಕರಡು ಪ್ರತಿಯಲ್ಲಿನ ಜನಸಂಖ್ಯೆ – 6,11,30,704 ಇತ್ತು.
 • 2011 ರ ಜನಗಣತಿಯಂತೆ ಪುರುಷರ ಸಂಖ್ಯೆ – 3,09,67,000
 • 2011 ರ ಜನಗಣತಿಯಂತೆ ಮಹಿಳೆಯರ ಸಂಖ್ಯೆ – 3,01,28,000
 • ಗ್ರಾಮೀಣ ಜನಸಂಖ್ಯೆ- 3,74,69,000 (61.30%) 1
 • ನಗರ ಜನಸಂಖ್ಯೆ – 2,36,26,000 (38.70%)
 • ಕರ್ನಾಟಕದ ಲಿಂಗಾನುಪಾತ ಪ್ರಮಾಣ (1000 ಪುರುಷರಿಗೆ ಮಹಿಳೆಯರ ಸಂಖ್ಯೆ) – 973
 • ಕರ್ನಾಟಕದಲ್ಲಿ ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆ (2001 2011)-ಶೇ 15.6 (ದೇಶದ ದಶಕದ ಬೆಳವಣಿಗೆ ಶೇ 17.7 ರಷ್ಟಿದೆ)
 • ಕರ್ನಾಟಕದ ಸಾಕ್ಷರತೆ – 75.40% (ದೇಶದ ಸಾಕ್ಷರತೆಯಲ್ಲಿ ಶೇ 73 ಕ್ಕಿಂತ ಹೆಚ್ಚಾಗಿದೆ)
 • ಪ.ಜಾ, ಪ.ಪಂ. ಗಳ ಜನಸಂಖ್ಯೆ – 1,47,24,000
 • ಒಟ್ಟು ಕೆಲಸಗಾರರು – 2,78,73,000

ಮಾಹಿತಿ & ತಂತ್ರಜ್ಞಾನದಲ್ಲಿ ಕರ್ನಾಟಕದ ಪಾಲು

 • ಭಾರತದ ರಫಿನಲ್ಲಿ ಕರ್ನಾಟಕದ ಮಾಹಿತಿ & ತಂತ್ರಜಾನ ರಚಿನ ಪಾಲು ಸುಮಾರು ಶೇ. 38 ರಷ್ಟಿದೆ.
 • ಕಾಂಪಾಸ್‌ನ ಜಾಗತಿಕ ಸ್ಮಾರ್ಟ್ ಆಫ್ ಇಕೊ ಸಿಸ್ಟಂ ನ ಪ್ರಗತಿ ಸೂಚ್ಯಂಕದಂತೆ ಬೆಂಗಳೂರು 2ನೇ ಸ್ಥಾನ ಪಡೆದಿದೆ.
 • ಕರ್ನಾಟಕ ರಾಜ್ಯದ ಆಂತರಿಕ ಉತ್ಪನ್ನಕ್ಕೆ ಶೇ 26 ಕ್ಕಿಂತಲೂ ಹೆಚ್ಚು ಕೊಡುಗೆಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರವು ನೀಡುತ್ತಿದೆ.
 • ಕೈಗಾರಿಕೆ ಉದ್ದೇಶಿತ ಜೈವಿಕ ತಂತ್ರಜ್ಞಾನ ನೀತಿ-2001 ನ್ನು ವಿನ್ಯಾಸಗೊಳಿಸಿದ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ. ಈ ನೀತಿಯನ್ನು 2009 ರಲ್ಲಿ ಪರಿಷ್ಕರಿಸಲಾಯಿತು.
 • ಕರ್ನಾಟಕ ರಾಜ್ಯವು ದೇಶದ ಸಾಫ್ಟ್‌ವೇರ್ ಅಥವಾ ಸೇವಾ ರಫ್ತುಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಮಾರಾಟದ ಸರಕು ರಫ್ತುಗಳಲ್ಲಿ 4 ನೇ ಸ್ಥಾನದಲ್ಲಿರುತ್ತದೆ.
 • ಕರ್ನಾಟಕವು ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ರಫ್ತುಗಳ 1/3 ರಷ್ಟನ್ನು ಆಕ್ರಮಿಸಿಕೊಂಡಿದೆ.
 • ಮಾಹಿತಿ ಸಂಪರ್ಕ ತಂತ್ರಜ್ಞಾನ ಕಛೇರಿಗಳನ್ನು 2ನೇ ಅಥವಾ 3ನೇ ದರ್ಜೆಯ ನಗರಗಳಲ್ಲಿ ಅಂದರೆ ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಕಲಬುರಗಿ ಮತ್ತು ಬೆಳಗಾವಿ ನಗರಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಐ-4 ನೀತಿ (1-4 Policy)

 • ಕರ್ನಾಟಕ ರಾಜ್ಯವು ಐ-4 ನೀತಿಯನ್ನು ಜಾರಿಗೆ ತಂದೆ, ಐ-4 ಎಂದರೆ, ಐಟಿ(IT), ಐಟಿಇಎಸ್ (ITES), ನಾವೀನ್ಯತೆ (Innovation), ಪ್ರೋತ್ಸಾಹಕಗಳ ನೀತಿ (Incentives)

ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ವ್ಯವಸ್ಥೆ:

 • ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ 3 ಹಂತದಲ್ಲಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ.
 • ಪ್ರಸ್ತುತ ಆಯವ್ಯಯದ ಪಂಚಾಯಿತಿ ವಲಯದ ಯೋಜನೆಗಳನ್ನು 318190 ಯೋಜನೆ ಮತ್ತು 128 ಯೋಜನೇತರ) ಕ್ಕೆ ಇಳಿಸಲಾಗಿದೆ.
 • ಗ್ರಾಮ ಪಂಚಾಯಿತಿಯ ಹಂತದಲ್ಲಿ ಸೌರದೀಪಗಳನ್ನು ಅಳವಡಿಸುವ ಕಾರ್ಯಕ್ರಮವನ್ನು 2009-10 ರಲ್ಲಿ ಆರಂಭಿಸಲಾಯಿತು. ಈ ಯೋಜನೆಯನ್ನು “ಪ್ರೊಕ್ಯೂರ್‌ಮೆ್ರಂಟ್” ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.
 • ಗ್ರಾಮೀಣ ಮತ್ತು ನಗರ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪುರಸ್ಕೃತ ಎಲ್ಲ ವಸತಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ರಾಜೀವ್‌ಗಾಂಧಿ: ಗ್ರಾಮೀಣ ವಸತಿ ನಿಗಮವನ್ನು ನೋಡಲ್ ಸಂಸ್ಥೆಯಾಗಿ ಮಾಡಲಾಗಿದೆ.

ಮನರೆಗೆ ಯೋಜನ :-

 • 2006 ಫೆಬ್ರವರಿ 2ರಂದು ಆಂಧ್ರಪ್ರದೇಶದ ಅನಂತಮರ ಜಿಲ್ಲೆಯಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಯಿತು.
 • ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು 2008 ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.
 • ಕರ್ನಾಟಕ ರಾಜ್ಯದಲ್ಲಿ ‘ಮನರೆಗ’ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆಯ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯಿತಿಗೆ ವರ್ಗಾಯಿಸುತ್ತಿರುವ ಮೊದಲನೇ ರಾಜ್ಯ ಕರ್ನಾಟಕವಾಗಿದೆ.
 • ಪ್ರಸ್ತುತ ಈ ಯೋಜನೆ ಅಡಿಯಲ್ಲಿ ಪ್ರತಿ ದಿನಕ್ಕೆ ರೂ. 224/ ಕೂಲಿಯನ್ನು ನೀಡಲಾಗುತ್ತಿದೆ.
 • 2012 ಜೂನ್ 1 ರಿಂದ ಎಲ್ಲಾ ಜಿಲ್ಲೆಗಳಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನವನ್ನು ಎಲೆಕ್ಟ್ರಾನಿಕ್ಸ್ ಫಂಡ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮೂಲಕ ವರ್ಗಾಯಿಸುತ್ತಿರುವುದು ವಿಶೇಷವಾಗಿದೆ.

ಕುಡಿಯುವ ನೀರು ಯೋಜನೆಗಳು:

 • ಕರ್ನಾಟಕದಲ್ಲಿ ಕುಡಿಯುವ ನೀರನ್ನು ಒದಗಿಸುವ ಯೋಜನೆಗಳೆಂದರೆ
  1) ಭಾರತ ನಿರ್ಮಾಣ್/ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ
  2) ರಾಜೀವ್‌ ಗಾಂಧಿ ರಾಷ್ಟ್ರೀಯ ಕುಡಿಯುವ ನೀರಿನ ಅಭಿಯಾನ
  3) ವಿಶ್ವ ಬ್ಯಾಂಕ್ ನೆರವಿನಡಿಯ ಜಲ ನಿರ್ಮಲ್ ಯೋಜನೆ
  4) ಮರುಭೂಮಿ ಅಭಿವೃದ್ಧಿ ಯೋಜನೆ
  5) ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳು.

ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಪ್ರಮುಖ ವಸತಿ ಯೋಜನೆಗಳು:
1) ಗ್ರಾಮೀಣ ಆಶ್ರಯ/ಬಸವ ವಸತಿ ಯೋಜನೆ 1991-92.
ವಾರ್ಷಿಕ ಆದಾಯ:- ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ – 32,000 ವಾರ್ಷಿಕ ಆದಾಯಕ್ಕಿಂತ ಕಡಿಮೆ ಇರುವವರು
ಘಟಕ ವೆಚ್ಚ:- 1,50,000 ರೂಗಳು
2) ನಗರ ಆಶ್ರಯ ಯೋಜನೆ/ವಾಜಪೇಯಿ ನಗರ ವಸತಿ ಯೋಜನೆ 1991-92
ನಗರದ ವಸತಿ ರಹಿತರಿಗೆ – 32,000 ವಾರ್ಷಿಕ ಆದಾಯಕ್ಕಿಂತ ಕಡಿಮೆ ಇರುವವರು. ಘಟಕ ವೆಚ್ಚ- 2 ಲಕ್ಷ ರೂ.ಗಳೂ
3) ವಿಶೇಷ ವಸತಿ ಯೋಜನೆ – 2014-15
ವಿಶೇಷವರ್ಗದವರಿಗೆ,ವಿಕಲಚೇತನರು, ದೇವದಾಸಿಯರು, ಜೀತಮುಕ್ತರು,
ಎಚ್.ಐ.ವಿಸೋಂಕಿತರು, ಲೈಂಗಿಕ ದೌರ್ಜನ್ಯಕ್ಕೊಳಪಟ್ಟವರು
4) ನನ್ನ ಮನೆ ಯೋಜನೆ 2010-11
1 ಲಕ್ಷದವರೆಗೆ ವಾರ್ಷಿಕ ಆದಾಯ ವಿರುವ ಅಸಂಘಟಿತ ಕಾರ್ಮಿಕರಿಗೆ
ಘಟಕವೆಚ್ಚ:- 3,90,000 ರೂ. ದಿಂದ 5,20,000ರೂ.
5) ಡಾಕ್ಟರ್ ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ 2015-16:
ಎಸ್.ಸಿ., ಎಸ್.ಟಿ ವಸತಿ ರಹಿತರಿಗೆ
ಘಟಕವೆಚ್ಚ:- ಗ್ರಾಮೀಣ ಪ್ರದೇಶದಲ್ಲಿ 1,50,000ರೂ., ನಗರ ಪ್ರದೇಶದಲ್ಲಿ 1,80,000 ರೂ.ಗಳು

ಜೈವಿಕ ಇಂಧನ ನೀತಿ:-

 • ರಾಜ್ಯದಲ್ಲಿ ಜೈವಿಕ ಇಂಧನ ನೀತಿಯನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಲಿಯ ಮೂಲಕಅನುಷ್ಠಾನಗೊಳಿಸಲಾಗುತ್ತಿದೆ.
 • ಬೃಹತ್ ಬೆಂಗಳೂರು ಮಹಾನಗರಪಾಲಿಕೆಗಳು ಸುಮಾರು 800 ಚ. ಕಿ.ಮೀ ವಿಸ್ತೀರ್ಣ ಹೊಂದಿದ್ದು, ಪ್ರಸ್ತುತ 8 ವಲಯಗಳನ್ನು ಹೊಂದಿದ್ದು, ನಗರದಾದ್ಯಂತ 198 ವಾರ್ಡುಗಳನ್ನು ಹೊಂದಿದೆ.

ಬೆಂಗಳೂರು ಮೆಟ್ರೋ ರೈಲ್ವೆ ಯೋಜನ

 • 2011 ರ ಅಕ್ಟೋಬರ್ 20 ರಂದು ಮೆಟ್ರೋ ಮೆಟ್ರೋ ರೈಲ್ವೆ ಸೇವೆಯು ಬೈಯಪ್ಪನಹಳ್ಳಿ ಯಿಂದ ಮಹಾತ್ಮಗಾಂಧಿ ರಸ್ತೆ ವರೆಗೆ | ಆರಂಭವಾಯಿತು.
 • ಇತ್ತೀಚೆಗೆ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯ ಟರ್ಮಿನಲ್‌ಗಳ ನಡುವೆ 2015 ನವೆಂಬರ್ 16 ರಂದು ಮೆಟ್ರೋ ಆರಂಭವಾಯಿತು. ಇದು ದ. ಭಾರತದ ಮೊದಲ ಸುರಂಗ ಮಾರ್ಗದ ಮೆಟ್ರೋ
 • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಶಾಸಕಾಂಗದ ಪ್ರತ್ಯೇಕ ಅಧಿನಿಯಮದ ಅನ್ವಯ 1976 ಜನವರಿ 16 ರಂದು ಅಸ್ಥಿತ್ವಕ್ಕೆ ಬಂದಿತು.
 • ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ಮೆಟ್ರೋ 1972 ರಲ್ಲಿ ಉದ್ಘಾಟನೆಯಾಗಿ 1984 ರಲ್ಲಿ ಪ್ರಯಾಣಕ್ಕೆ ಮುಕ್ತವಾಯಿತು.

ಪೌರಾಡಳತ ನಿರ್ದೇಶನಾಲಯ:

 • ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾತ್ಮಕ, ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸುವ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ವ್ಯಾಪ್ತಿಗೆ 271 ಸ್ಥಳೀಯ ಸಂಸ್ಥೆಗಳ, 10 ಪಾಲಿಕೆಗಳ ದೈನಂದಿನ ಚಟುವಟಿಕೆಗಳ ಮೇಲುಸ್ತುವಾರಿ ಮಾಡುತ್ತದೆ.

ರಾಜ್ಯ ನಗರ ಜೀವನೋಪಾಯ ಅಭಿಯಾನ:

 • ನಗರ ಪ್ರದೇಶದಲ್ಲಿ ವಾಸಿಸುವ ಬಡ ಕುಟುಂಬಗಳ, ಬಡತನ ಮತ್ತು ಅಸಾಮರ್ಥ್ಯವನ್ನು ಕಡಿಮೆ ಮಾಡಲು ಲಾಭದಾಯಕಗೊಳ್ಳುವ ಸ್ವಯಂ ಉದ್ಯೋಗ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳನ್ನು ಪಡೆಯಲು ಸಮರ್ಥಗೊಳಿಸಿ, ಜೀವನೋಪಾಯದಲ್ಲಿ ಸುಧಾರಣೆ ತರುವುದಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ:-

 • ವಸತಿ ರಹಿತ, ಚಿಂದಿ ಆಯುವವರ, ಬೀದಿ ಮಕ್ಕಳು, ಕಟ್ಟಡ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುವ ಬಡ ಜನತೆಗೆ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸೆ ನೀಡುವುದು.

ವಿಶ್ವ ಬ್ಯಾಂಕ್ ನೆರವಿನೊಂದಿಗೆ ನಡೆಯುತ್ತಿರುವ ನಗರ ಪ್ರದೇಶದ ಕಾರ್ಯಕ್ರಮಗಳು

1) ಕರ್ನಾಟಕ ಪೌರ ಸುಧಾರಣಾ ಯೋಜನೆ
2) ಉತ್ತರ ಕರ್ನಾಟಕ ನಗರ ವಲಯ ಹೂಡಿಕೆ ಕಾರ್ಯಕ್ರಮ
3) ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ
4) ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ

ಕರ್ನಾಟಕದ ಕೃಷಿ

 • ಕರ್ನಾಟಕದಲ್ಲಿ ಕೃಷಿಯು ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಚಟುವಟಿಕೆಯಾಗಿದೆ.
 • ರಾಜ್ಯದಲ್ಲಿ + 157 -ಕೃಷಿ ಉತ್ಪನ್ನ – ಮಾರುಕಟ್ಟೆ ಸಮಿತಿಗಳ ಮೂಲಕ ಕೃಷಿ ಉತ್ಪನ್ನ ವ್ಯವಹಾರವನ್ನು ಸುಗಮಗೊಳಿಸಲಾಗಿದೆ.
 • ಆನ್‌ಲೈನ್ ವ್ಯಾಪಾರ ಪದ್ಧತಿಯನ್ನು 98 ಮಾರುಕಟ್ಟೆಗಳನ್ನು 2015 ಮತ್ತು 2016 ರಲ್ಲಿ ಪ್ರಾರಂಭಿಸಲಾಗಿದೆ.
 • ಕೇಂದ್ರ ಸರ್ಕಾರವು 2005-06 ನೇ ಸಾಲಿನಿಂದ ಕರ್ನಾಟಕದಲ್ಲಿ ತೋಟಗಾರಿಕೆ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ್ನು ಆರಂಭಿಸಿದೆ.
 • ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ನ್ನು ರಾಜ್ಯದಲ್ಲಿ 2014 ಜನವರಿಯಿಂದ ಜಾರಿಗೆ ತರಲಾಗಿದೆ.

ಗಂಗಾ ಕಲ್ಯಾಣ ಯೋಜನೆ:- ಹಿಂದುಳಿದ ವರ್ಗಗಳ ಸಣ್ಣ, ಅತೀ ಸಣ್ಣ ರೈತರು ವಾರ್ಷಿಕ ಆದಾಯ ರೂ 40,000 ಒಳಗಿನ ಜನರಿಗೆ ವೈಯಕ್ತಿಕ ನೀರಾವರಿ ಯೋಜನಾ ಸೌಲಭ್ಯ ನೀಡುವುದು.
ಜಲಮಿತ್ರ ಯೋಜನೆ:- ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಮಾಡುವುದು.
ಪರಂಪರಾಗತ್‌ ಕೃಷಿ ವಿಕಾಸ್‌ ಯೋಜನೆ (PKVY):- 2014-15 ಜಲಾನಯನ ಅಭಿವೃದ್ಧಿ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ:
ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಏಕರೂಪ ಮಾರ್ಗಸೂಚಿ- 2008 ರ ಅನ್ವಯ 2009 10 ನೇ ಸಾಲಿನಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಭೂಚೇತನ ಕಾರ್ಯಕ್ರಮ:- ಆಯ್ಕೆಯಾದ ಮುಖ್ಯ ಮಳೆ ಆಶ್ರಯಿತ ಬೆಳೆಗಳ ಇಳುವರಿಯನ್ನು ಶೇ 20 ರಷ್ಟು ಹೆಚ್ಚಿಸುವ ಸಲುವಾಗಿ ಕರ್ನಾಟಕ ರಾಜ್ಯ ಭೂ ಚೇತನ ಎಂಬ ಯೋಜನೆಯು 2009-10 ರಿಂದ ಪ್ರಾರಂಭಿಸಿ 2012-13ನೇ ಸಾಲಿನವರೆಗೆ ಹಮ್ಮಿಕೊಂಡಿತು. ಮೊದಲ ಹಂತದ ಯಶಸ್ವಿಯ ಹಿನ್ನಲೆಯಲ್ಲಿ 2ನೇ ಹಂತವನ್ನು 2013 ರಿಂದ 2016-17 ರವರೆಗೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಕೃಷಿಗೆ ಸಂಬಂಧಿಸಿದ ಕೆಲವು ಘಟಕಗಳು:

 • ರಾಜ್ಯದಲ್ಲಿ ಆಧುನಿಕ ಕೃಷಿ ಅಳವಡಿಸಿಕೊಳ್ಳಲು ಸಹಕಾರಿಯಾಗುವಂತೆ ಕಂದಾಯ ಹೋಬಳಿಗೊಂದರಂತೆ ಒಟ್ಟು 740 ರೈತ ಸಂಪರ್ಕ ಕೇಂದ್ರಗಳನ್ನು ರೈತ ಮಿತ್ರ ಯೋಜನೆಯಡಿ ಸ್ಥಾಪಿಸಲಾಗಿದೆ.
 • ಕೃಷಿ ಭಾಗ್ಯ ಯೋಜನೆ:
 • ಉತ್ಕೃಷ್ಟ ಸ್ವಾಭಾವಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಹಾಗೂ ರೈತರ ಮತ್ತು ಕೃಷಿ ಕಾರ್ಮಿಕರ ಆದಾಯಮಟ್ಟವನ್ನು ಹೆಚ್ಚಿಸಬೇಕಾಗಿದೆ.
 • ಮಳೆಯಾಶ್ರಿತ ರೈತ ಸಮುದಾಯದ ಸುಧಾರಿತ ಜೀವನೋಪಾಯವನ್ನು ಉತ್ತಮಗೊಳಿಸಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.
 • ಕೃಷಿ ಭಾಗ್ಯ ಅನುಷ್ಠಾನವನ್ನು ‘ಮಿಷನ್ ಮೋಡ್ ಮಾದರಿ’ಯಲ್ಲಿ 5 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
 • ಕೃಷಿ ಭಾಗ್ಯ ಯೋಜನೆಯನ್ನು ಮೊದಲ ಹಂತದಲ್ಲಿ 5 ಮುಖ್ಯ ಒಣಭೂಮಿ ವಲಯಗಳ ರಾಜ್ಯದ 23 ಜಿಲ್ಲೆಗಳ 107 ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗಿದೆ.
 • ಬದುಗಳ ಮೂಲಕ ಮಳೆ ನೀರಿನ ಸಂರಕ್ಷಣೆ, ಸಂಗ್ರಹಣೆ ಮತ್ತು ಉಪಯುಕ್ತ ಬಳಕೆ ಮತ್ತು ಲಾಭದಾಯಕ ಬೆಳೆ ಪದ್ಧತಿಗಳ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು, ಪಶುಸಂಗೋಪನಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ಸಾವಯವ ಭಾಗ್ಯ ಯೋಜನ:

 • ಇದನ್ನು ರಾಜ್ಯದ 546 ಹೋಬಳಿಗಳಲ್ಲಿ ಅನುಷ್ಠಾನ ಮಾಡಲಾಗಿದೆ.
 • ಯೋಜನೆಯ ಅನುಷ್ಠಾನದ 100 ಹೆಕ್ಟೇರ್ ಪ್ರದೇಶದಲ್ಲಿ ಫಲಾನುಭವಿ ರೈತರ ಗುಂಪನ್ನು ಸ್ಥಾಪಿಸಿ, ಗುಂಪುಗಳ ನೊಂದಣಿ ಮಾಡಲಾಗುತ್ತದೆ.
 • ಈ ಯೋಜನೆಯನ್ನು 2013-14 ನೇ ಸಾಲಿನಿಂದ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗಿದೆ.

ಕರ್ನಾಟಕ ಕೃಷಿ ಬೆಲೆ ಆಯೋಗ (ಅಧ್ಯಕ್ಷ ಪ್ರೊ|| ಪ್ರಕಾಶ್ ಕಮ್ಮರಡಿ)

 • ಈ ಆಯೋಗವು 2014 ಜೂನ್ ನಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗವನ್ನು ಸ್ಥಾಪಿಸಲಾಯಿತು.
 • ಈ ಆಯೋಗವು ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಲಾಭದಾಯಕ ಬೆಲೆಗಳನ್ನು ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತದೆ.
 • ಕೃಷಿ ಅರ್ಥಶಾಸ್ತ್ರಜ್ಞರು ಅಧ್ಯಕ್ಷರಾಗಿರುವ ಈ ಆಯೋಗದಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ರೈತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.
 • ಕೃಷಿ ಬೆಲೆ ಆಯೋಗವು ರಾಜ್ಯದ 11 ಬೆಳೆಗಳಿಗೆ ಧಾರಣೆ ಕುಸಿತ 2014-15 ನೇ ಸಾಲಿನಲ್ಲಿ ಬೆಲೆ ಶಿಫಾರಸ್ಸು ಮಾಡಿರುತ್ತದೆ.
 ಪ್ರಮುಖ ಸಂಸ್ಥೆಗಳು
 ರೈಸ್ ಟೆಕ್ನಾಲಜಿ ಪಾರ್ಕ್‌ ಕಾರಟಗಿ (ಗಂಗಾವತಿ)
 ತೆಂಗು ಸಂಸ್ಕರಣಾ ಘಟಕ ತಿಪಟೂರಿನ ಕೊನೆಹಳ್ಳಿ
 ತೆಂಗು ತಂತ್ರಜ್ಞಾನ ಪಾರ್ಕ್ ತಿಪಟೂರು
 ಮೆಕ್ಕೆ ಜೋಳ ತಂತ್ರಜ್ಞಾನ ಪಾರ್ಕ್ ರಾಣೆಬೆನ್ನೂರು
 ತೊಗರಿ ತಂತ್ರಜ್ಞಾನ ಪಾರ್ಕ್ ಕಲಬುರಗಿ
 ಫುಡ್ ಪಾರ್ಕ್ ವಸಂತನರಸಾಪುರ (ತುಮಕೂರು)

ಕರ್ನಾಟಕದ ನದಿಗಳು :-

ಪೂರ್ವಕ್ಕೆ ಹರಿಯುವ ನದಿಗಳು:-
ಕೃಷ್ಣಾ, ಕಾವೇರಿ, ಪೆನ್ನಾರ್, ಪಾಲಾರ್

 • ಕೃಷ್ಣಾ ನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ ಮತ್ತು ದಕ್ಷಿಣ ಭಾರತದ 2 ನೇ ನದಿಯಾಗಿದೆ. ಇದರ ಉಪ ನದಿಗಳು ಭೀಮಾ, ತುಂಗಭದ್ರಾ, ಘಟಪ್ರಭ ಮತ್ತು ಮಲಪ್ರಭ
 • ಕಾವೇರಿ ನದಿಯು ಕೊಡಗಿನ ಭಾಗಮಂಡಲದಲ್ಲಿ ಹುಟ್ಟಿ ಕರ್ನಾಟಕದಲ್ಲಿ 380 ಕಿ.ಮೀ ಹರಿಯುತ್ತದೆ. ಇದರ ಉಪನದಿಗಳೆಂದರೆ ಹೇಮಾವತಿ, ಹಾರಂಗಿ, ಲೋಕಪಾವನಿ, ಅರ್ಕಾವತಿ, ಶಿಂಷಾ, ಲಕ್ಷ್ಮಣ ತೀರ್ಥ, ಕಪಿಲೆ, ಸುವರ್ಣಾವತಿ
 • ಕೂಡಲಸಂಗಮದಲ್ಲಿ ಮಲಪ್ರಭ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ. ತುಂಗಾ ಮತ್ತು ಭದ್ರಾ ನದಿಗಳು ಕೂಡಲಿ’ ಎಂಬಲ್ಲಿ ಸಂಗಮವಾಗುತ್ತವೆ.
 • ಕೃಷ್ಣರಾಜಸಾಗರದ ಬಳಿ ಹೇಮಾವತಿ ನದಿಯು ಕಾವೇರಿ ನದಿಯನ್ನು ಸೇರುತ್ತದೆ.
 • ಕಾವೇರಿ ನದಿಯು ಹೊಂದಿರುವ ಜಲಪಾತಗಳು – ಚುಂಚನಕಟ್ಟೆ, ಶಿವನಸಮುದ್ರ, ಹೊಗೇನಕಲ್
 • ಕಾವೇರಿ ನದಿಯಿಂದಾದ ಮೂರು ದ್ವೀಪಗಳು – ಶ್ರೀರಂಗಪಟ್ಟಣ, ಶಿವನಸಮುದ್ರ ಮತ್ತು ಶ್ರೀರಂಗ.
 • ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು:- ಶರಾವತಿ, ಕಾಳಿ, ಗಂಗಾವಳಿ, ನೇತ್ರಾವತಿ, ವರಾಹಿ, ಅಘನಾಶಿನಿ
 • ರಾಮನಗರ ಜಿಲ್ಲೆಯ ಕನಕಪುರ ಬಳಿ ಮೇಕೆದಾಟು ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿದ್ದು, ಇದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ.

ಪ್ರಮುಖ ಜಲಬಿವಾದಗಳು:

 • ಕಾವೇರಿ: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ
 • ಕೃಷ್ಣಾ:- ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ
 • ಮಹದಾಯಿ: ಕರ್ನಾಟಕ ಮತ್ತು ಗೋವಾ

ಕರ್ನಾಟಕದ ನೀರಾವರಿ (2015-16ರ ಆರ್ಥಿಕ ಸಮೀಕ್ಷೆ) |

 • ಕರ್ನಾಟಕದಲ್ಲಿ ನಿವ್ವಳ ನೀರಾವರಿ ಕ್ಷೇತ್ರದಲ್ಲಿ ಕೊಳವೆ ಅಥವ ಕೊರೆದ ಬಾವಿಗಳಿಂದ ನೀರಾವರಿಯಾಗುವ ಕ್ಷೇತ್ರದ ಪಾಲು ಅಧಿಕವಾಗಿದ್ದು, ಶೇ 37 ರಷ್ಟಿದ್ದು, 2ನೇ ಪ್ರಮುಖ ನೀರಾವರಿ ಮೂಲವು ಕಾಲುವೆಗಳಾಗಿರುತ್ತವೆ. ಅವುಗಳ ಪಾಲು ಶೇ 35 ರಷ್ಟಿದೆ. ಮತ್ತು ತೋಡಿದ ಬಾವಿಗಳಿಂದ ನೀರಾವರಿಯಾಗುವ ಕ್ಷೇತ್ರದ ಪಾಲು ಶೇ 12 ರಷ್ಟಾಗಿರುತ್ತದೆ. ಕೆರೆ ನೀರಾವರಿ ಮೂಲವು ಶೇ 4 ರಷ್ಟಿದೆ.
 • ಭಾರತದ ನೀರಾವರಿಯಲ್ಲಿ ಕರ್ನಾಟಕವು 9ನೇ ಸ್ಥಾನದಲ್ಲಿದೆ. ಕರ್ನಾಟಕದ ಮೊಟ್ಟ ಮೊದಲ ಜಲಾಶಯ ವಾಣಿವಿಲಾಸ ಸಾಗರ 1907ರಲ್ಲಿ ಹಿರಿಯೂರು ಬಳಿ ತುಂಗಭದ್ರಾ ನದಿಯ ಉಪನದಿಯಾದ ‘ವೇದಾವತಿ ನದಿ ಗೆ . ಅಡ್ಡಲಾಗಿ ನಿರ್ಮಿಸಲಾಗಿದೆ. ಇದನ್ನು ಮಾರೀಕಣಿವೆ ಯೋಜನೆ ಎನ್ನುವರು.
 • ಕರ್ನಾಟಕದ ರಾಯಚೂರು ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿದೆ. ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಕೆರೆ ನೀರಾವರಿ ಹೊಂದಿದೆ. *
 • ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಬಾವಿ ನೀರಾವರಿ ಹೊಂದಿದೆ.
 • ಜಿಲ್ಲಾವಾರು ನೀರಾವರಿ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕೊಡಗು ಜಿಲ್ಲೆಯ ಕೊನೆಯ ಸ್ಥಾನದಲ್ಲಿದೆ.
 • ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳೆಂದರೆ
  ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ), ತುಂಗಭದ್ರ (ಪಂಪಸಾಗರ) (ಹೊಸಪೇಟೆ, ಬಳ್ಳಾರಿ ಜಿಲ್ಲೆ), ಆಲಮಟ್ಟಿ (ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು) (ವಿಜಯಪುರ), ನಾರಾಯಣಪುರ (ಬಸವಸಾಗರ) (ಯಾದಗಿರಿ), ಹೇಮಾವತಿ (ಗೊರೂರು, ಹಾಸನ)

ಕರ್ನಾಟಕದ ಬೆಳೆಗಳು

 • ಭತ್ತ: ಪ್ರಮುಖ ಬೆಳೆ, ಅತಿ ಹೆಚ್ಚು ಬೆಳೆಯನ್ನು ರಾಯಚೂರಿನಲ್ಲಿ ಬೆಳೆಯಲಾಗುತ್ತದೆ. ನಂತರದ ಸ್ಥಾನ ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ
 • ತೊಗಲಿ:- ಕಲಬುರಗಿಯನ್ನು ತೊಗರಿಯ ಕಣದ ಎನ್ನುವರು,
 • ಜೋಳ:- ಭಾರತದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ. ಕರ್ನಾಟಕ 2ನೇ ಸ್ಥಾನ. ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆ ಮೊದಲ ಸ್ಥಾನ. ನಂತರದ ಸ್ಥಾನ ಚಿತ್ರದುರ್ಗ.
 • ರಾಗಿ: ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನ, ತುಮಕೂರು ರಾಜ್ಯದಲ್ಲಿ ಮೊದಲ ಸ್ಥಾನ. ನಂತರ ರಾಮನಗರ, ಹಾಸನ, ಮಂಡ್ಯ .

ವಾಣಿಜ್ಯ ಬೆಳೆಗಳು:-

 • ಕಬ್ಬು: ದೇಶದಲ್ಲಿ ಕರ್ನಾಟಕ 4ನೇ ಸ್ಥಾನ, ರಾಜ್ಯದಲ್ಲಿ ಬೆಳಗಾವಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ, ನಂತರದ ಸ್ಥಾನದಲ್ಲಿ ಬಾಗಲಕೋಟಿ
 • ಹತ್ತಿ:- ಹಾವೇರಿಯು ಹತ್ತಿ ಉತ್ಪಾದನೆಯಲ್ಲಿ ಮೊದಲ ಸ್ಥಾನ, ನಂತರದ ಸ್ಥಾನ ಧಾರವಾಡ
 • ತಂಬಾಕು:- ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದ್ದರು. ಇದರಲ್ಲಿ ‘ನಿಕೊಟಿನ್’ ಎಂಬ ಮಾದಕ ವಸ್ತುವಿದೆ. ದೇಶದಲ್ಲಿ ತಂಬಾಕು ಬೆಳೆಯುವ 4ನೇ ರಾಜ್ಯ ಮೈಸೂರು ಜಿಲ್ಲೆ ಮೊದಲ ಸ್ಥಾನ. ನಂತರ ಹಾಸನ, ಬೆಳಗಾವಿಯ ನಿಪ್ಪಾಣಿಯಲ್ಲಿ ದೇಶದ ಬೀಡಿ ತಯಾರಿಕಾ ತಂಬಾಕು ಮಾರುಕಟ್ಟೆ ಅತಿ ಪ್ರಸಿದ್ಧವಾಗಿದೆ.
 • ಕಾಫಿ : ಕರ್ನಾಟಕ ಭಾರತದಲ್ಲೇ ಮೊದಲ ಸ್ಥಾನ. ಕೊಡಗು ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನ, ನಂತರ ಚಿಕ್ಕಮಗಳೂರು, ಹಾಸನ: ಇದೊಂದು ಪಾನೀಯ ಬೆಳೆ, ಬಾಬಾ ಬುಡನ್ ಎಂಬ ಮುಸ್ಲಿಂ. ಸಂತ 1670 ರಲ್ಲಿ ಚಿಕ್ಕಮಗಳೂರು, ಬೆಟ್ಟದಲ್ಲಿ ಕಾಫಿ ಸಸಿಯನ್ನು ಬೆಳೆಸಿದನು. ಈ ಬೆಟ್ಟಗಳನ್ನು ಬಾಬಾ ಬುಡನ್ ಗಿರಿ ಬೆಟ್ಟಗಳೆನ್ನುವರು. ಕರ್ನಾಟಕದಲ್ಲಿ ಆರೇಬಿಕಾ ಮತ್ತು ರೊಬೆಸ್ಟಾ ಎಂಬ ಕಾಫಿ ಪ್ರಬೇಧಗಳಿವೆ. ಆರೇಬಿಕಾ ಶ್ರೇಷ್ಠಮಟ್ಟದ ಕಾಫಿ ಬೆಳೆಯಾಗಿದೆ. ಕರ್ನಾಟಕವು “ಕಾಫಿನಾಡು’ ಎಂದೇ ಪ್ರಸಿದ್ಧವಾಗಿದೆ.
 ಕರ್ನಾಟಕದ ಪ್ರಸಿದ್ಧ ಬೆಳೆಗಳು
 ರಸಬಾಳೆನಂಜನಗೂಡು 
 ತೆಂಗಿನಕಾಯಿತಿಪಟೂರು
 ಚಕ್ಕೋತ ದೇವನಹಳ್ಳಿ
 ರೇಷ್ಮೆ ರಾಮನಗರ
 ಹೊಗೆಸೊಪ್ಪುನಿಪ್ಪಾಣಿ
ಯಾಲಕ್ಕಿ ಹಾವೇರಿ
 ಸೀರೆ ಇಳಕಲ್
 ಬದನೇಕಾಯಿ ಈರನಗೆರೆ

ಕರ್ನಾಟಕದ ಗಣಿ

 • ಕರ್ನಾಟಕದಲ್ಲಿ ಗಣಿ ಪ್ರದೇಶವು 1.92 ಲಕ್ಷ ಚ.ಕಿ.ಮೀ ನಲ್ಲಿ ವ್ಯಾಪಿಸಿದ್ದು, ಕರ್ನಾಟಕದಲ್ಲಿ ಹಸಿರು ಕಲ್ಲಿನ ಪಟ್ಟಿಯು 40,000 ಕಿ.ಮೀ.ಗಳಿಗಿಂತಲೂ ಹೆಚ್ಚಾಗಿದ್ದು, ಹಲವು ನಿಕ್ಷೇಪಗಳ ನಿಧಿಯಾಗಿರುತ್ತದೆ.

  ಕರ್ನಾಟಕದ ಖನಿಜ ಸಂಪತ್ತು :-
 • ಕಬ್ಬಣದ ಅದಿರು:- ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯ ಉತ್ಪಾದಿಸುವ ಕಬ್ಬಿಣದ ಉತ್ಪಾದನೆಯಲ್ಲಿ ಮ್ಯಾಗ್ನಟೈಟ್ ದರ್ಜೆಯ ಕಬ್ಬಿಣ ಶೇ 63 ರಷ್ಟಿದೆ. ನಂತರ ಹೆಮಟೈಟ್ ದರ್ಜೆಯ ಕಬ್ಬಿಣ ಉತ್ಪಾದನೆಯಾಗುತ್ತದೆ.
 • ಕಬ್ಬಿಣದ ಹಂಚಿಕೆಯಲ್ಲಿ ಬಳ್ಳಾರಿ ಮೊದಲ ಸ್ಥಾನ, 2ನೇ ಸ್ಥಾನ ಚಿಕ್ಕಮಗಳೂರು
 • ಮ್ಯಾಂಗನೀಸ್:- ಇದನ್ನು ‘ಬಹುಪಯೋಗಿ ಲೋಹ’ ಎನ್ನುವರು. ಮ್ಯಾಂಗನೀಸ್ ಉತ್ಪಾದನೆಯಲ್ಲಿ ಕರ್ನಾಟಕವು ಒಡಿಸಾ ನಂತರ 2ನೇ ಸ್ಥಾನದಲ್ಲಿದೆ. ಬಳ್ಳಾರಿಯ ಸೊಂಡೂರು ಮ್ಯಾಂಗನೀಸ್ ಉತ್ಪಾದಿಸುವ ಪ್ರದೇಶವಾಗಿದೆ.
 • ಬಾಕ್ರೆಟ್:- ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕೈಟ್ ಉತ್ಪಾದಿಸುವ ಜಿಲ್ಲೆಯಾಗಿದೆ. ಇದನ್ನು ಬೆಳಗಾವಿಯ ಇಂಡಿಯನ್ ಅಲ್ಯುಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ.
 • ಚಿನ್ನ:- ಚಿನ್ನದ ಗಣಿಗಾರಿಕೆಯಲ್ಲಿ ಕರ್ನಾಟಕವು ಮೊದಲ ಸ್ಥಾನ. ಇದನ್ನು ಚಿನ್ನದ ನಾಡು ಎನ್ನುವರು. 1880 ರಲ್ಲಿ ಜಾನ್ ಟೇಲರ್ ಎಂಬುವನು ಚಿನ್ನದ ಗಣಿಗಾರಿಕೆಯನ್ನು ರಾಜ್ಯದಲ್ಲಿ ಆರಂಭಿಸಿ, 1885 ರಲ್ಲಿ ಕೆ.ಜಿ.ಎಫ್’ ಅಸ್ಥಿತ್ವಕ್ಕೆ ಬರಲು ಕಾರಣವಾಯಿತು.
 • ಕೋಲಾರದ ಚಾಂಪಿಯನ್ ರೀಫ್ ಗಣಿಯು ಅತಿ ಆಳವಾದ ಚಿನ್ನದ ಗಣಿಯಾಗಿದೆ. ಇದು 3217 ಮೀಟರ್ ಆಳವಿದೆ.
 • ಪ್ರಸ್ತುತವಾಗಿ ಕೆ.ಜಿ.ಎಫ್ ನಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿದೆ.
 • ರಾಯಚೂರಿನ ಹಟ್ಟಿ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ.
 • ಪ್ರಸ್ತುತ ಹಟ್ಟಿಯು ಭಾರತದ ಅತಿ ದೊಡ್ಡ ಚಿನ್ನದ ಗಣಿಯಾಗಿದೆ.

ಕರ್ನಾಟಕದ ಕೈಗಾಲಕೆಗಳು

 • ಕೈಗಾರಿಕಾ ವಾರ್ಷಿಕ ಸಮೀಕ್ಷೆಯು ಸಂಘಟಿತ ಕೈಗಾರಿಕಾ ಉತ್ಪಾದನಾ ವಲಯದ ಅಂಕಿ ಅಂಶದ ವಿವರವನ್ನು ನೀಡುತ್ತದೆ.
 • 2012-13ನೇ ಸಾಲಿಗೆ ಭಾರತದಲ್ಲಿ ನೊಂದಾಯಿತವಾದ ಕೈಗಾರಿಕಾ ಘಟಕಗಳ ಪೈಕಿ ಶೇ 5.29 ರಷ್ಟು ಭಾಗ ಕರ್ನಾಟಕದ್ದಾಗಿರುತ್ತದೆ.
 • ಸಕ್ಕರೆ ಕಾರ್ಖಾನೆ: 1933 ರಲ್ಲಿ ರಾಜ್ಯದ ಮೊಟ್ಟ ಮೊದಲ ಆಧುನಿಕ ಸಕ್ಕರೆ ಕೈಗಾರಿಕೆಯಾದ ಮೈಸೂರು ಸಕ್ಕರೆ ಕಾರ್ಖಾನೆಯು ಮಂಡ್ಯದಲ್ಲಿ ಆರಂಭವಾಯಿತು.
 • ರಾಜ್ಯದಲ್ಲಿ ಪ್ರಸ್ತುತವಾಗಿ 47 ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ.
 • ಕರ್ನಾಟಕದ ಸಕ್ಕರೆ ಜಿಲ್ಲೆ ಎಂದು ಬೆಳಗಾವಿಯನ್ನು ಕರೆದ ರೆ, ಕರ್ನಾಟಕದ ಸಕ್ಕರೆ ನಗರ ಎಂದು ಮಂಡ್ಯ ಜಿಲ್ಲೆಯನ್ನು ಕರೆಯಲಾಗುತ್ತದೆ.
 • ಬೆಳಗಾವಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಕಬ್ಬು ಉತ್ಪಾದನೆ ಮಾಡಲಾಗುತ್ತದೆ. ಮತ್ತು ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ.
 • ಕಾಗದ ಕಾರ್ಖಾನೆ:- 1936 ರಲ್ಲಿ ಭದ್ರಾವತಿಯಲ್ಲಿ ಪೇಪರ್ ಮಿಲ್ಫ್ ಕಾರ್ಖಾನೆಯು ಆರಂಭ,
 • ದಾಂಡೇಲಿಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಖಾಸಗಿ ಕಂಪನಿಯಿಂದ ಸ್ಥಾಪನೆಯಾಗಿದೆ
 • ಕರ್ನಾಟಕವು ದೇಶದಲ್ಲಿ ಕಾಗದ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ.
 • ಕರ್ನಾಟಕದ ಮೊದಲ ಸಿಮೆಂಟ್ ಕಾರ್ಖಾನೆಯು 1939 ರಲ್ಲಿ ಭದ್ರಾವತಿಯಲ್ಲಿ ಆರಂಭವಾಯಿತು.
 • ಕರ್ನಾಟಕವನ್ನು 5 ಕೈಗಾರಿಕಾ ವಲಯಗಳಾಗಿ ವಿಂಗಡಿಸಲಾಗುತ್ತದೆ. 1) ಬೆಂಗಳೂರು-ಕೋಲಾರ-ತುಮಕೂರು 2) ಬೆಳಗಾವಿ-ಧಾರವಾಡ ವಲಯ 3) ದಕ್ಷಿಣ ಕನ್ನಡ – ಉಡುಪಿ 4) ಬಳ್ಳಾರಿ – ರಾಯಚೂರು, 5) ಮೈಸೂರು – ಮಂಡ್ಯ
 • ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ, ಉದ್ಯಾನನಗರಿ ಎನ್ನುವರು.
 • ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನಕೈಗಾರಿಕೆಯನ್ನು ಸ್ಥಾಪಿಸಲಾಯಿತು. ಇದನ್ನು ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂದು ಕರೆಯಲಾಯಿತು. ನಂತರ 1989 ರಲ್ಲಿ ಭಾರತ ಉಕ್ಕು ಪ್ರಾಧಿಕಾರಕ್ಕೆ ವಹಿಸಲಾಯಿತು.
 • ಪ್ರಸ್ತುತವಾಗಿ ಈ ಕಾರ್ಖಾನೆಯನ್ನು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂದು ಕರೆಯಲಾಗುತ್ತದೆ.
 • ಕೈಗಾರಿಕಾ ಘಟಕಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗುತ್ತದೆ.
 ಉದ್ಯಮ ಯಂತ್ರೋಪಕರಣಗಳ ಮೇಲಿನ ಬಂಡವಾಳ ಹೂಡಿಕೆ (ತಯಾರಿಕೆ)ಸಾಧನ ಸಾಮಗ್ರಿಗಳ ಮೇಲಿನ ಬಂಡವಾಳ ಹೂಡಿಕೆ (ಸೇವೆ)
 ಅತಿ ಸಣ್ಣ ರೂ.25 ಲಕ್ಷಗಳವರೆಗೆ ರೂ. 10 ಲಕ್ಷಗಳವರೆಗೆ
 ಸಣ್ಣ ರೂ. 25 ಲಕ್ಷಗಳಿಗಿಂತ ಮೇಲ್ಪಟ್ಟು ರೂ. ಕೋಟಿಗಳವರೆಗೆ ರೂ. 10 ಲಕ್ಷಗಳಿಗಿಂತ ಮೇಲ್ಪಟ್ಟು
ರೂ.2ಕೋಟಿಗಳವರೆಗೆ
 ಮಧ್ಯಮರೂ. 5 ಕೋಟಿಗಳಿಗಿಂತ ಮೇಲ್ಪಟ್ಟು ರೂ. 10
ಕೋಟಿಗಳವರೆಗೆ
 ರೂ. 2 ಕೋಟಿಗಳಿಗಿಂತ ಮೇಲ್ಪಟ್ಟು
ರೂ. 5 ಕೋಟಿಗಳವರೆಗೆ

 • ನೂತನ ಜವಳಿ ನೀತಿ :-
 • ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲಿಗೆ ಜವಳಿ ನೀತಿಯನ್ನು ಪ್ರಕಟಿಸಿ, ನೂತನ ಜವಳಿ, ನೀತಿ 2013-18 ನ್ನು ಜಾರಿಗೆ ತಂದ ಪ್ರಥಮ ರಾಜ್ಯವಾಗಿದೆ.
 • ಸುವರ್ಣ ವಸ್ತ್ರ ನೀತಿ – 2008-13 ಪೂರ್ಣಗೊಂಡ ನಂತರ ನೂತನ ಜವಳಿ ನೀಡಿ 2013-18 ಜಾರಿಗೆ ತರಲಾಗಿದೆ.
 • ಕರ್ನಾಟಕವು ಬಟ್ಟೆ ರಫ್ತನಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ.
 • ದೊಡ್ಡಬಳ್ಳಾಪುರ, ಆನೇಕಲ್, ಬೆಳಗಾವಿ, ಮೈಸೂರು ಮತ್ತು ರಾಮನಗರಗಳಲ್ಲಿ ಬಟ್ಟೆ ಪಾರ್ಕ್‌ಗಳಿವೆ.
 • ಭಾರತದಲ್ಲ ವಿದೇಶಿ ನೇರ ಬಂಡಾವಳ ಹೂಡಿಕೆ:- ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆಯ ಒಟ್ಟು ಮೊತ್ತದಲ್ಲಿ 5ನೇ ಸ್ಥಾನದಲ್ಲಿದೆ.
 • ನೂತನ ಕೈಗಾರಿಕಾ ನೀತಿ- ಕರ್ನಾಟಕ ಸರ್ಕಾರವು ಉತ್ತಮ ಮೂಲ ಸೌಕರ್ಯ ಒದಗಿಸುವ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ 2014-19 ನ್ನು ಜಾರಿಗೆ ತಂದಿದೆ. ಜಾಗತಿಕ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ವೈಯಕ್ತಿಕವೂ ಸೇರಿದಂತೆ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಲು ಕೈಗಾರಿಕಾ ವಸಾಹತು ಅಥವಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಉದ್ಯೋಗ ಮಿತ್ರ (KUM):
ಕರ್ನಾಟಕದಲ್ಲಿ ಈ ಸಂಸ್ಥೆಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯಮ ಸ್ಥಾಪಿಸಲು ಅಪೇಕ್ಷಿಸುವ ಎಲ್ಲ ಹೂಡಿಕೆದಾರರಿಗೆ ಏಕೈಕ ಸಂಪರ್ಕ ಬಿಂದುವಾಗಿದೆ. ಈ ಸಂಸ್ಥೆಯು ನೋಡಲ್ ಏಜೆನ್ಸಿಯಾಗಿ ಬಂಡವಾಳ ಹೂಡಿಕೆದಾರರಿಗೆ ಯೋಜನೆಯ ಪ್ರಾರಂಭದಿಂದ ಅನುಷ್ಠಾನದವರೆಗೆ ಉದ್ಯಮಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮತ್ತು ಅನುಮೋದನೆ ಪಡೆಯುವಲ್ಲಿ ಕೈಗಾರಿಕೋದ್ಯಮಗಳಿಗೆ ಸಹಕಾರ ನೀಡುತ್ತದೆ.

ಸಾರ್ವಜನಿಕ ಉದ್ಯಮ ಇಲಾಖೆ:-
ಕರ್ನಾಟಕ ಸರ್ಕಾರವು 1981 ರಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಕಾರ್ಯಾಲಯವನ್ನು ಸ್ಥಾಪಿಸಿತು. ಈ ಕಾರ್ಯಾಲಯವು 2002 ರಲ್ಲಿ ಬಂಡವಾಳ ಹಿಂತೆಗೆಯುವಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸುಧಾರಣೆ ಇಲಾಖೆ ಎಂದು ಪರಿವರ್ತನೆಗೊಂಡಿದೆ.

ಕರ್ನಾಟಕ ಮೊಬೈಲ್ ಒನ್ ಯೋಜನೆ:-
ಈ ಯೋಜನೆಯಿಂದ ಎಲ್ಲಿಂದಲಾದರೂ, ಯಾವ ಸಮಯದಲ್ಲಾದರೂ, ಮತ್ತು ಹೇಗಾದರೂ ಸರ್ಕಾರದ ಸೇವೆಗಳನ್ನು ಪಡೆಯಬಹುದಾಗಿದೆ.

 • ಈ ಯೋಜನೆಯು 4,000 ಹೆಚ್ಚು ಸೇವೆಗಳನ್ನು ಹೊಂದಿದ್ದು, ರಾಷ್ಟ್ರದ ಪ್ರಥಮ ಮತ್ತು ವಿಶ್ವದ ಬೃಹತ್ ವಿವಿದೋದ್ದೇಶ ಯೋಜನೆ ವ್ಯಾಪ್ತಿಯ ಮೊಬೈಲ್ ಆಡಳಿತ ವೇದಿಕೆಯಾಗಿದೆ.
 • ಮೊಬೈಲ್ ಉಪಕರಣದಿಂದ ಸರ್ಕಾರದ ಸೇವೆಗಳನ್ನು 24×7 ದಿನಗಳಲ್ಲೂ ಪಡೆಯಬಹುದಾಗಿದೆ.
 • ಕಿಯೋನಿಕ್ಸ್ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದ ಯೋಜನೆ ಕಾರ್ಯರೂಪಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
 • ಕರ್ನಾಟಕ ಮತ್ತು ಭಾರತ ಸರ್ಕಾರದ ವತಿಯಿಂದ ಬೆಂಗಳೂರಿನ ಸಮೀಪವಿರುವ ” ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಭಿವೃದ್ಧಿಯಾಗುತ್ತಿದೆ.

2015-16 ನೇ ಸಾಲಿನ ವಾರ್ಷಿಕ ಮುಖ್ಯಮಂತ್ರಿ ರತ್ನ ಪ್ರಶಸ್ತಿ

 • ಮೂರು ಸಾರ್ವಜನಿಕ ಉದ್ಯಮಗಳನ್ನು ಗುರ್ತಿಸಿ, ಅವುಗಳ ಕಾರ್ಯಕ್ಷಮತೆಯನ್ನು ಪ್ರೇರೇಪಿಸಲು ಮತ್ತು ಪ್ರಶಂಸಿಸಲು ವಾರ್ಷಿಕ ಮುಖ್ಯಮಂತ್ರಿ ರತ್ನ ಪ್ರಶಸ್ತಿಗಳನ್ನು ಪ್ರತಿವರ್ಷವೂ ಮೂರು ಅತ್ಯುತ್ತಮ ಸಾರ್ವಜನಿಕ ಸಂಸ್ಥೆಗಳಿಗೆ ನೀಡಲಾಗುತ್ತಿದೆ.

ಪ್ರಸ್ತುತ2015-16ನೇ ಸಾಅನ ವಾರ್ಷಿಕ ಮುಖ್ಯಮಂತ್ರಿ ರತ್ನ ಪ್ರಶಸ್ತಿಗಳನ್ನು ಪಡೆದ, ಕಂಪನಿಗಳಾಗಿವೆ.

 • ಅವುಗಳೆಂದರೆ 1) ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ, ಬೆಂಗಳೂರು 2) ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು 3) ಡಾ|| ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು,

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ-2016 (GIM)
ಯಶಸ್ವಿ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ – 2016) ಬೆಂಗಳೂರಿನಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 5 ರವರೆಗೆ ನಡೆಯಿತು. ಈ ಸಮಾವೇಶದಲ್ಲಿ ಸರ್ಕಾರ 3 ಲಕ್ಷ ಕೋಟಿಗಿಂತ ಹೆಚ್ಚು ಕೋಟಿಗಳಹೂಡಿಕೆಯನ್ನು ಆಕರ್ಷಿಸಿತು. ಇದರಲ್ಲಿ 1.77 ಲಕ್ಷ 1080 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಪ್ರವಾಸೋದ್ಯಮ:

 • 2015ನೇ ಸಾಲಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ತಾಣವಾದ ಕೊಡಗು, ಕಾಂಡೆ ನಾಸ್ಟ್ ಟ್ರಾವೆಲ‌ ಇಂಡಿಯಾ ಸಂಸ್ಥೆಯು 5ನೇ ಆವೃತ್ತಿಯ ರೀಡರ್ ಚಾಯ್ಸ್ ವಿಭಾಗದಲ್ಲಿ ನೆಚ್ಚಿನ ಉದಯೋನ್ಮುಖ ತಾಣವಾಗಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.
 • ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ನೀತಿ – 2015-20 ನ್ನು ಪ್ರಕಟಿಸಲಾಗಿದೆ.ವರ್ಲ್ಡ್ ಟ್ರಾವೆಲ್ಸ್ ಅಂಡ್ ಟೂರಿಸಂ ಕೌನ್ಸಿಲ್ ಪ್ರಕಾರ ಭಾರತದಲ್ಲಿ ಪ್ರವಾಸೋದ್ಯಮವು ಒಟ್ಟಾರೆ ಜಿ.ಡಿ.ಪಿ ಯ ಶೇ 6.6 ರಷ್ಟು 2012 ನೇ ವರ್ಷದಲ್ಲಿ ಕೊಡುಗೆ ನೀಡಿದೆ.

ಕಾರ್ಮಿಕ ಭಾಗವಹಿಸುವಿಕೆಯಲ್ಲಿ ಪುರುಷರು & ಮಹಿಳೆಯರ ಪ್ರಮಾಣ

 • ಕರ್ನಾಟಕದಲ್ಲಿ 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಕಾರ್ಮಿಕ ಬಲ ಭಾಗವಹಿಸುವಿಕೆಯ ದರವು ಶೇ 57.8 ರಷ್ಟಿದ್ದು, ರಾಷ್ಟ್ರದ ಮಟ್ಟದಲ್ಲಿ ಶೇ 55.6 ರಷ್ಟಿದೆ.
 • ನಿರುದ್ಯೋಗವು ಕರ್ನಾಟಕದ ಗ್ರಾಮೀಣ ಪುರುಷರ ದರವು ಶೇ 81.7 ರಷ್ಟಿದ್ದು, ನೆರೆ ರಾಜ್ಯಗಳಿಗೆ ಹೋಲಿಸಿದಾಗ 4ನೇ ಸ್ಥಾನದಲ್ಲಿದೆ.
 • ಕರ್ನಾಟಕ ನಗರ ಪ್ರದೇಶದ ಮಹಿಳೆಯರಲ್ಲಿ ಈ ದರವ ಕಡಿಮೆಯಿದ್ದು, ಅಂದರೆ ಶೇ 28 ರಷ್ಟಿದೆ. ಇದು ದೇಶದ ನಗರ ಪ್ರದೇಶದ ಮಹಿಳೆಯರ ದರ ಶೇ 19.7 ಕ್ಕಿಂತಲೂ ಹೆಚ್ಚಿದೆ.
 • ಕರ್ನಾಟಕದಲ್ಲಿ ಕಾರ್ಮಿಕ ಜನಸಂಖ್ಯಾ ಪ್ರಮಾಣವು ಶೇ 56.8 ರಷ್ಟಿದೆ, (ರಾಷ್ಟ್ರಮಟ್ಟದಲ್ಲಿ ಶೇ 53.7 ರಷ್ಟಿದೆ)
 • ಕರ್ನಾಟಕದಲ್ಲಿ ಹೆಚ್ಚು ಕಾರ್ಮಿಕರ ಪ್ರಮಾಣವು – ಗ್ರಾಮೀಣ ಪುರುಷರಲ್ಲಿ 80.6% ಮತ್ತು ಗ್ರಾಮೀಣ ಮಹಿಳೆಯರಲ್ಲಿ 38.8 ರಷ್ಟಿದೆ.

ಸಂಧ್ಯಾ ಸುರಕ್ಷಾ ಯೋಜನೆ:-
1-9-2013, 1) ವಾರ್ಷಿಕ ಆದಾಯ 20,000 ಮೀರದ ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ರೂ 500, 60 ರಿಂದ 65 ವರ್ಷದವರೆಗೆ 200ರೂ ಹಾಗೂ 80 ವರ್ಷ ದಾಟಿದವರಿಗೆ 750ರೂ ಪಿಂಚಣಿ.
2) ನಿರ್ಗತಿಕ ಅಂಗವಿಕಲರಿಗೆ 40-75% ಅಂಗವಿಕಲತೆ ರೂ 500, 75% ಕ್ಕಿಂತ ಹೆಚ್ಚು ಅಂಗವಿಕಲತೆ ರೂ. 1200 ರೂ ಮಾಸಿಕ ಪೋಷಣಾ ಭತ್ಯೆ.
3) ವಿಧವಾ ವೇತನ ಸೌಲಭ್ಯ.

ನಿರುದ್ಯೋಗ:

 • ಕರ್ನಾಟಕದಲ್ಲಿ ಸಾಮಾನ್ಯ ಪ್ರಮುಖ ಮತ್ತು ಅಂಗಚಟುವಟಿಕೆ ಸ್ಥಿತಿ ವಿಧಾನದಲ್ಲಿ ಗ್ರಾಮೀಣ ಮತ್ತು ನಗರದ ಎಲ್ಲ ವ್ಯಕ್ತಿಗಳನ್ನು ಒಟ್ಟುಗೂಡಿಸಿದ ನಿರುದ್ಯೋಗ ದರವು ಶೇ 1.7 ರಷ್ಟಿದ್ದು, ಭಾರತದ ನಿರುದ್ಯೋಗ ದರ ಶೇ 3.4 ಕ್ಕಿಂತ ಕಡಿಮೆ ಇದೆ.
 • ಕರ್ನಾಟಕ ಗ್ರಾಮೀಣ ಪ್ರದೇಶದ ಪುರುಷರಲ್ಲಿ ಶೇ 1.3 ರಷ್ಟಿರುತ್ತದೆ. ಹಾಗೂ ಮಹಿಳೆಯರಲ್ಲಿ ಶೇ 2 ರಷ್ಟಿದೆ.
 • 18 29 ರ ವಯೋಮಿತಿಯ ಗುಂಪಿನಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ದರವು ಪುರುಷರಲ್ಲಿ ಶೇ 3.9 ರಷ್ಟಿದೆ. ಮಹಿಳೆಯರಲ್ಲಿ ಶೇ 6.1 ರಷ್ಟಿದೆ. ರಾಜ್ಯದ ಶೇ 4.6 ರಷ್ಟಿದೆ.
 • ಕರ್ನಾಟಕದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಹೊಂದಿರುವ ಶೇ 74.1 ರಷ್ಟು ವ್ಯಕ್ತಿಗಳು ಉದ್ಯೋಗ ಹೊಂದಿರುತ್ತಾರೆ. ಕೇವಲ ಶೇ 3 ರಷ್ಟು ನಿರುದ್ಯೋಗಿಗಳಾಗಿರುತ್ತಾರೆ.
 • ಉಳಿದ ಶೇ 23 ರಷ್ಟು ಕಾರ್ಮಿಕರಲ್ಲದವರು ಎಂದರೆ ಉದ್ಯೋಗವನ್ನು ಅರಸುತ್ತಿರುವುದಿಲ್ಲ.
 • ಪ.ಜಾ.ಯಲ್ಲಿ ಇದೇ ದರಗಳು ಕ್ರಮವಾಗಿ ಶೇ 68.3, ಶೇ 9.7, ಶೇ 22 ರಷ್ಟಿದೆ.


ಮೂಲ ಸೌಕರ್ಯಗಳು
ವಿದ್ಯುತ್ :-

 • ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ: ಕರ್ನಾಟಕದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಒಟ್ಟು ವಿದ್ಯುತ್ ಉತ್ಪಾದನೆಯು ಡಿಸೆಂಬರ್ 2015 ರವೇಳೆಗೆ 15,720,43 ಮೆಗಾವ್ಯಾಟ್ಸ್‌ಗಳಾಗಿವೆ. ಕಳೆದ ಸಾಲಿಗಿಂತ ಇದು ಶೇ 5.7 ರಷ್ಟು ಹೆಚ್ಚಾಗಿದೆ.
 • ಕರ್ನಾಟಕ ವಿದ್ಯುತ್ ಉತ್ಪಾದನೆಯ ವಿವಿಧ ಮೂಲಗಳು: ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆಯ ಒಟ್ಟು ಸಾಮರ್ಥ್ಯದಲ್ಲಿ ಶೇ 29.4 ರಷ್ಟು ಜಲವಿದ್ಯುತ್ ನದ್ದಾಗಿದೆ. ಈ ಮೂಲಕ ಕರ್ನಾಟಕವು. ಜಲವಿದ್ಯುತ್‌ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
 • ವಿದ್ಯುತ್ ಯೋಜನೆಗಳು:- ವಿದ್ಯುತ್‌ ವಿತರಣೆಯನ್ನು ಸುಧಾರಿಸಲು ಹೊಸದಾಗಿ 2 ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅಂದರೆ, ಏಕೀಕೃತ ವಿದ್ಯುತ್‌ ಅಭಿವೃದ್ಧಿ ಯೋಜನೆ, ಮತ್ತು ದೀನ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಗಳನ್ನು ಆರಂಭಿಸಲಾಯಿತು.
 • ವಿದ್ಯುತ್ ಬಳಕೆ:- ರಾಜ್ಯದಲ್ಲಿ 2014-15 ರಲ್ಲಿ ಕೃಷಿ ಕ್ಷೇತ್ರವು ವಿದ್ಯುತ್‌ ಬಳಕೆಯಲ್ಲಿ ಅತಿ ಹೆಚ್ಚು ಪಾಲು ಅಂದರೆ ಶೇ 36 ರಷ್ಟನ್ನು ಬಳಕೆ ಮಾಡಿ ಮೊದಲ ಸ್ಥಾನದಲ್ಲಿದ್ದರೆ, 2ನೇಯದಾಗಿ ಗೃಹ ಬಳಕೆ ಯ ಪಾಲು ಅಂದರೆ ಶೇ 21 ರಷ್ಟಿದೆ.
 • ಸೌರಶಕ್ತಿಯನ್ನು ಬಳಕೆ ಮಾಡಲು ರಾಜ್ಯ ಸರ್ಕಾರವು “ಸೌರ ನೀತಿ 2014-21” ನ್ನು ಜಾರಿಗೆ ತಂದಿದೆ.
 • ಇದರ ಸಮೀಪದಲ್ಲಿ 2ನೇ ಜಲವಿದ್ಯುತ್ ಯೋಜನೆಯಾದ 1940 ರಲ್ಲಿ ಶಿಂಷಾ ನದಿಗೆ ನಿರ್ಮಿಸಲಾಯಿತು.
 • ಶರಾವತಿ ನದಿಗೆ ಜೋಗ ಜಲಪಾತದ ಬಳಿ ಮಹಾತ್ಮ ಗಾಂಧಿಜಿ ಜಲವಿದ್ಯುತ್ ಯೋಜನೆಯನ್ನು 1947 ರಲ್ಲಿ ಸ್ಥಾಪಿಸಲಾಯಿತು.
 • ಕೋಲಾರದ ಚಿನ್ನದ ಗಣಿಗೆ ವಿದ್ಯುತ್‌ ಸರಬರಾಜು ಮಾಡಲು ಮೊಟ್ಟ ಮೊದಲ 1902 ರಲ್ಲಿ ಶಿವನಸಮುದ್ರದ ಬಳಿ ವಿದ್ಯುತ್‌ಗಾರವನ್ನು ಕಾವೇರಿ ನದಿಗೆ ನಿರ್ಮಿಸಲಾಯಿತು.
 • ಕಾಳಿ ನದಿಯಿಂದ ಸೂಫಾ, ನಾಗಝರಿ, ಕದ್ರಾ ಮತ್ತು ಕೊಡಸಳ್ಳಿ ಯೋಜನೆಗಳನ್ನು ರೂಪಿಸಲಾಗಿದೆ.

ವಿಜಯಪುರ ಜಿಲ್ಲೆ ಕೂಡಗಿ ಸೂಪರ್ ಧರ್ಮಲ್ ವಿದ್ಯುತ್ ಕೇಂದ್ರ

 • ವಿಜಯಪುರ ಜಿಲ್ಲೆಯ ಕೂಡಗಿ ಬಳಿ ಎನ್.ಪಿ.ಟಿ.ಸಿ.ಎಲ್ ನವರು ಕಲ್ಲಿದ್ದಲು ಆಧಾರಿತ ಶಾಖ ವಿದ್ಯುತ್‌ ಕೇಂದ್ರವನ್ನು ಸ್ಥಾಪಿಸುತ್ತಿದ್ದಾರೆ. ಇದು ಸುಮಾರು 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಮೊದಲ ಹಂತದಲ್ಲಿ 2400 ಮೆಗಾವ್ಯಾಟ್, 2ನೇ ಹಂತದಲ್ಲಿ 1400 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಹೊಂದಿದೆ.
 • ರಾಜ್ಯ ರಸ್ತೆಯ ಸರಾಸರಿ ಉದ್ದ:- ರಾಜ್ಯದ ಲೋಕೋಪಯೋಗಿ ಇಲಾಖೆ ರಸ್ತೆಗಳ (ಅಂದರೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು) ಪ್ರತಿ 100 ಚ.ಕಿ.ಮೀ ಗೆ ಪರಿಗಣಿಸಿದಾಗ ರಾಜ್ಯದ ಸರಾಸರಿ ರಸ್ತೆಯ ಉದ್ದವು 40.07 ಕಿ.ಮೀ ಇದೆ.
 • ಜಿಲ್ಲೆವಾರು ಹಂಚಿಕೆ:- ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆ 100 ಚ.ಕಿ.ಮೀ. ಪ್ರದೇಶದಲ್ಲಿ 69.34 ಕಿ.ಮೀ ಉದ್ದದ ರಸ್ತೆಯನ್ನು ಹೊಂದಿದ್ದು, ಅತಿ ಹೆಚ್ಚು ಉದ್ದದ ರಸ್ತೆ ಹೊಂದಿರುವ ಜಿಲ್ಲೆಯಾಗಿದೆ. ಕಲಬುರಗಿ ಜಿಲ್ಲೆಯ ರಸ್ತೆ ಉದ್ದವು ಅತಿ ಕಡಿಮೆ ಇದ್ದು, 26.02 ಕಿ.ಮೀ ಇದೆ.
 • ಪ್ರತಿ 100 ಚ.ಕಿ.ಮೀ ವಿಸ್ತೀರ್ಣ ಪ್ರದೇಶದಲ್ಲಿ ಚಾಮರಾಜನಗರ, ರಾಯಚೂರು, ಬೀದರ್, ಚಿಕ್ಕಬಳ್ಳಾಪುರ, ವಿಜಯಪುರ, ದ.ಕನ್ನಡ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಚಿತ್ರದುರ್ಗ, ಉ.ಕನ್ನಡ, ಬಳ್ಳಾರಿ, ಶಿವಮೊಗ್ಗ, ಕೋಲಾರ, ಕೊಪ್ಪಳ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಸ್ತೆಗಳು ರಾಜ್ಯದ ಸರಾಸರಿ ಉದ್ದಕ್ಕಿಂತ ಕಡಿಮೆ ಇವೆ.
 • 2014 ಮೇ ನಲ್ಲಿ ರಾಜ್ಯ ಹೆದ್ದಾರಿಗಳನ್ನು ಹೊಸ ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಿದ್ದರಿಂದ 2014-15 ರಲ್ಲಿ 1,884 ಕಿ.ಮೀ ರಸ್ತೆ ಉದ್ದವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏರಿಕೆಯಾಗಿರುತ್ತದೆ.
 • ರಾಜ್ಯದಲ್ಲಿ ಸರ್ವಋತು ಮೇಲೆ ರಸ್ತೆ ನಿರ್ಮಿಸಲು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.
 • ಕರ್ನಾಟಕದಲ್ಲಿ 2015 ಮಾರ್ಚ್ 31 ರಂತೆ 1,55,545 ಕಿ.ಮೀ ಗ್ರಾಮೀಣ ರಸ್ತೆಯಿದೆ.(ಒಟ್ಟು ರಸ್ತೆ ಗ್ರಾಮೀಣ ರಸ್ತೆ, ಹೆದ್ದಾರಿಗಳೆಲ್ಲಾ ಸೇರಿ 2,31,062 ಕಿ.ಮೀ ಗಳಿದೆ)

ರಸ್ತೆಗಳಲ್ಲಿ 4 ಪ್ರಕಾರಗಳವೆ

1) ರಾಷ್ಟ್ರೀಯ ಹೆದ್ದಾರಿಗಳು:-

 • ಇವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿವೆ. ಕರ್ನಾಟಕದಲ್ಲಿ ಪ್ರಸ್ತುತ 14 ರಾಷ್ಟ್ರೀಯ ಹೆದ್ದಾರಿಗಳಿವೆ. ಇವುಗಳ ಒಟ್ಟು ಉದ್ದ 4,491 ಕಿ.ಮೀ.ಗಳು.
 • ಅತಿ ಹೆಚ್ಚು ಹೆದ್ದಾರಿ ಹೊಂದಿರುವ ಜಿಲ್ಲೆಗಳು ಉ.ಕನ್ನಡ, ವಿಜಯಪರ, ಬೆಳಗಾವಿ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ದ.ಕನ್ನಡ ಮತ್ತು ಬಳ್ಳಾರಿ
 • 1) ರಾಷ್ಟ್ರೀಯ ಹೆದ್ದಾರಿ ಇಲ್ಲದ ಜಿಲ್ಲೆಗಳು :- ರಾಯಚೂರು ಮತ್ತು ಕೊಡಗು
 • ಕರ್ನಾಟಕದಲ್ಲಿ ಹಾದು ಹೋಗುವ ಹೆದ್ದಾರಿಗಳು:- NH13, NH17, NH48, NH206, NH209, NH212
 • ರಾಷ್ಟ್ರೀಯ ಹೆದ್ದಾರಿ NH4 & NH7 ಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುವರ್ಣ ಚತುಷ್ಯನ ಹೆದ್ದಾರಿ ಯೋಜನೆ ಹಾಗೂ ಕಾರಿಡಾರ್ ಯೋಜನೆಗೆ ಸೇರಿವೆ.
 • ಕರ್ನಾಟಕದಲ್ಲಿ ಹಾದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ – NH13 ಇದು ಮಂಗಳೂರು-ಮೂಡಬಿದರೆ ಕೊಪ್ಪ-ಶಿವಮೊಗ್ಗ-ಚಿತ್ರದುರ್ಗ-ಹೊಸಪೇಟೆ-ಇಳಕಲ್ – ವಿಜಯಪುರ ಮಾರ್ಗವಾಗಿ ಸೊಲ್ಲಾಪುರಕ್ಕೆ ಸೇರುತ್ತದೆ.
 • ದೇಶದಲ್ಲಿ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ NH7 ಇದನ್ನು ಪ್ರಸ್ತುತವಾಗಿ NH44 ಎಂದು ಕರೆಯುತ್ತಾರೆ. ಇದು ಶ್ರೀನಗರದಿಂದ ಕನ್ಯಾಕುಮಾರಿವರೆಗೆ 3,745 ಕಿ.ಮೀ ಉದ್ದವಿದ್ದು, ರಾಜ್ಯಗಳ ಮೂಲಕ ಹಾದು ಹೋಗುತ್ತದೆ.
 • ಅತಿ ಚಿಕ್ಕ ರಾಷ್ಟ್ರೀಯ ಹೆದ್ದಾರಿ – NH47A ಇದು ಕೇರಳದ ಕೊಚ್ಚಿ L ಬಳಿ ಬರುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದು 8 ಕಿ.ಮೀ ಉದ್ದವಿದೆ. ಇದನ್ನು ಪ್ರಸ್ತುತವಾಗಿ NH 966B ಎಂದು ಕರೆ ಯುತ್ತಾರೆ.
  2) ರಾಜ್ಯ ಹೆದ್ದಾರಿಗಳು:- 20,905 ಕಿ.ಮೀ ಉದ್ದವಿದೆ. ಅತಿ ಉದ್ದದ ಹೆದ್ದಾರಿಯನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ಅತಿ ಕಡಿಮೆ ರಾಜ್ಯ ಹೆದ್ದಾರಿಯನ್ನು ಬೆಂಗಳೂರು ಹೊಂದಿದೆ.
  3) ಜಿಲ್ಲಾ ರಸ್ತೆಗಳು:- ಇದರ ನಿರ್ಮಾಣ ನಿರ್ವಹಣೆಯನ್ನು ಜಿಲ್ಲಾ ಪಂಚಾಯಿತಿ ಹೊಂದಿದೆ. ತುಮಕೂರು ಜಿಲ್ಲೆಯು ಅತಿ ಹೆಚ್ಚು ಮತ್ತು ರಾಯಚೂರು ಜಿಲ್ಲೆ ಅತಿ ಕಡಿಮೆ ಜಿಲ್ಲಾ ರಸ್ತೆಗಳನ್ನು ಹೊಂದಿದೆ.
  4) ಗ್ರಾಮೀಣ ರಸ್ತೆಗಳು:- ತಾಲ್ಲೂಕು ಕೇಂದ್ರದಿಂದ ಪ್ರತಿ ಗ್ರಾಮಕ್ಕೂ ಮತ್ತು ಎಲ್ಲ ಜಿಲ್ಲಾ ರಸ್ತೆಗಳಿಗೂ ಸಂಪರ್ಕಿಸುವ ರಸ್ತೆಗಳು, ನಿರ್ಮಾಣ ನಿರ್ವಹಣೆ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೇರುತ್ತದೆ. ರಾಜ್ಯದಲ್ಲಿ ಒಟ್ಟು 1,47,212 ಕಿಮೀ ಉದ್ದದ ಗ್ರಾಮೀಣ ರಸ್ತೆಗಳಿವೆ.

ರೈಲ್ವೆ ಸಾಲಗೆ:

 • ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಅತಿ ಕಡಿಮೆ ರೈಲ್ವೆ ಮಾರ್ಗಗಳನ್ನು ಮತ್ತು ಬ್ರಾಡ್‌ ಗೇಜ್ ಸಾಂದ್ರತೆ ಯನ್ನು ಹೊಂದಿದೆ.
 • ರಾಜ್ಯದಲ್ಲಿ ರೈಲು ಸಾಂದ್ರತೆಯು 1000 ಕಿ.ಮೀ ಗೆ 16.60 ಕಿ.ಮೀ ಇದೆ.
 • ರೈಲ್ವೆ ದೊಂದಿಗೆ ಮಂತ್ರಾಲಯ ರೈಲ್ವೆ ಯೋಜನೆಗಳನ್ನು 50:50 ವೆಚ್ಚ ಪಾಲು ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿದೆ.
 • ಕರ್ನಾಟಕ ಸರ್ಕಾರವು ಯಾದಗಿರಿ ಜಿಲ್ಲೆಯಲ್ಲಿ ರೈಲ್ವೆ ಫಿಯೆಟ್ ಬೋಗಿ ಕಾರ್ಖಾನೆಯನ್ನು ಸ್ಥಾಪಿಸಲು ಮಂಜೂರಾತಿಯನ್ನು ನೀಡಿದೆ. ಇದಕ್ಕಾಗಿ 150 ಎಕರೆಗಳಷ್ಟು ಭೂಮಿಯನ್ನು ರೈಲ್ವೆಗೆ ಹಸ್ತಾಂತರಿಸಿದೆ. ಇದರ ಸಂಪೂರ್ಣ ವೆಚ್ಚಕ್ಕೆ ನಿಧಿಯನ್ನು ರೈಲ್ವೆ ಮಂತ್ರಾಲಯವು ಒದಗಿಸುತ್ತದೆ.
 • ಕರ್ನಾಟಕದಲ್ಲಿ ಮೊದಲ ರೈಲ್ವೆ ಸಂಚಾರವು ಬೆಂಗಳೂರು ಮತ್ತು ಮದ್ರಾಸ್ ನಡುವೆ 1864 ರಲ್ಲಿ ಆರಂಭವಾಯಿತು.
 • ಕರ್ನಾಟಕವು ನೈರುತ್ಯ ರೈಲ್ವೆ ವಲಯಕ್ಕೆ ಸೇರಿದ್ದು, ಕೇಂದ್ರ ಕಛೇ ರಿಯು ಹುಬ್ಬಳ್ಳಿಯಲ್ಲಿದೆ.
 • ಕರ್ನಾಟಕದಲ್ಲಿ 3244 ಕಿ.ಮೀ ಉದ್ದದ ರೈಲ್ವೆ ಮಾರ್ಗವಿದೆ. * ಕರ್ನಾಟಕದಲ್ಲಿ ಅಚ್ಚು ಮತ್ತು ರೈಲ್ವೆ ಗಾಲಿ ತಯಾರಿಕಾ ಕಾರ್ಖಾನೆಯು ಬೆಂಗಳೂರಿನ ಯಲಹಂಕದಲ್ಲಿದೆ.
 • ನೂತನವಾಗಿ ಕೋಚ್ ನಿರ್ಮಾಣ ಕಾರ್ಖಾನೆಯು ಕೋಲಾರದಲ್ಲಿ ಆರಂಭವಾಗಿದೆ.
 • ಕೊಂಕಣ ರೈಲ್ವೆ:- ಈ ರೈಲ್ವೆಯು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
 • ಕೊಂಕಣ ರೈಲ್ವೆಯು ಪಶ್ಚಿಮ ಘಟ್ಟಗಳ ಮೂಲಕ ಹಾದು ಹೋಗಿ ಪ್ರಮುಖ ಬಂದರುಗಳಿಗೆ ಸಂಪರ್ಕ ಕಲ್ಪಿಸುತ್ತದೆ.
 • ಭಾರತದ 17 ರೈಲ್ವೆ ವಲಯಗಳಲ್ಲಿ ಕರ್ನಾಟಕದ ನೈರುತ್ಯ ವಲಯವೂ ಕೂಡ ಒಂದಾಗಿದೆ.
 • ಭಾರತದಲ್ಲಿ ರೈಲ್ವೆ ಕೋಚ್‌ಗಳನ್ನು ಪ್ರಸ್ತುತವಾಗಿ ಪಂಜಾಬ್‌ನ ಕಪೂರ್ ತಾಲ್‌ನಲ್ಲಿ ತಯಾರಿಸಲಾಗುತ್ತಿದೆ.

ವಾಯುಸಾರಿಗೆ

 • ಕರ್ನಾಟಕದಲ್ಲಿ ಮೊದಲ ವಿಮಾನಯಾನವು 1946 ರಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಡೆಕ್ಕನ್ ಏರ್‌ವೇಸ್ ಎಂಬ ಕಂಪನಿಯು ಪ್ರಾರಂಭಿಸಿತು.
 • 1996 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಲಾಯಿತು.
 • ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಮೊದಲ ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದೆ.
 • ಕರಾಚಿ ಮತ್ತು ಮದ್ರಾಸ್ ಮಧ್ಯೆ ವಿಮಾನ ಪ್ರಯಾಣ ಆರಂಭಿಸಿತು. ಈ ವಿಮಾನವು ಅಹಮದಾಬಾದ್, ಬಾಂಬೆ ಮತ್ತು ಬಳ್ಳಾರಿಯಲ್ಲಿ ನಿಲುಗಡೆ ಹೊಂದಿತ್ತು. ಈ ಮೂಲಕ, ಕರ್ನಾಟಕ ರಾಜ್ಯದಲ್ಲಿ ಬಳ್ಳಾರಿಯಲ್ಲಿ ಮೊದಲ ವಿಮಾನ ಸಂಚಾರ ಆರಂಭವಾಯಿತು.
 • 1974 ಮೇ 4ರಂದು ನವಮಂಗಳೂರು ಬಂದರನ್ನು ಭಾರತದ 9ನೇ ಪ್ರಮುಖ ಬಂದರು ಎಂದು ಘೋಷಿಸಲಾಯಿತು.
 • ಕರ್ನಾಟಕದಲ್ಲಿ 10 ಚಿಕ್ಕ ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ದೂರಸಂಪರ್ಕ

 • ರಾಜ್ಯದ ಒಟ್ಟು ದೂರವಾಣಿ ಸಾಂದ್ರತೆ ಯು (ಅಂದರೆ 100 ಜನರು ಹೊಂದಿರುವ ದೂರವಾಣಿ ಸಂಪರ್ಕಗಳ ಸಂಖ್ಯೆ) 97:50 ಆಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ (79,98)
 • ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ದೂರವಾಣಿ – ಸಾಂದ್ರತೆಯಲ್ಲಿ ವ್ಯಾಪಕ ಅಂತರವು ಇದೆ. 2015 ಜೂನ್ 30 ರಂದು ಗ್ರಾಮೀಣ ದೂರವಾಣಿ ಸಾಂದ್ರತೆಯು 50.55 ಆಗಿದ್ದು ನಗರ ದೂರವಾಣಿ ಸಾಂದ್ರತೆಯು 172.11 ಆಗಿರುತ್ತದೆ.
 • ರಾಜ್ಯದಲ್ಲಿ 2007-08ರಲ್ಲಿ 9826 ಅಂಚೆ ಕಛೇರಿಗಳಿದ್ದು, 2014-15 ರಲ್ಲಿ 9340 ಕ್ಕೆ ಇಳಿಕೆಯಾಗಿವೆ.

ಸಹಕಾರ ಸಂಸ್ಥೆ ಮತ್ತು ಬ್ಯಾಂಕಿಂಗ್‌ ವ್ಯವಸ್ಥೆ

 • ಕರ್ನಾಟಕದಲ್ಲಿ ಪ್ರಸ್ತುತವಾಗಿ 26 ಸಾರ್ವಜನಿಕ ವಲಯದ ಬ್ಯಾಂಕುಗಳು, 16 ಖಾಸಗಿ ವಲಯ ಬ್ಯಾಂಕುಗಳು ಮತ್ತು 3 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿವೆ.
 • ಕರ್ನಾಟಕದಲ್ಲಿ 2015 ಮಾರ್ಚ್‌ನಲ್ಲಿ 10074 ವಾಣಿಜ್ಯ ಬ್ಯಾಂಕ್ ಶಾಖೆಗಳನ್ನು ಹೊಂದಿರುತ್ತದೆ.
 • ಪ್ರತಿ ಶಾಖೆಯು 7748 ಸರಾಸರಿ ಜನಸಂಖ್ಯೆಗೆ ಬ್ಯಾಂಕಿಂಗ್ ಸೇವೆ ಒದಗಿಸಿದೆ.
 • ಗ್ರಾಮೀಣ ಮೂಲ ಸೌಲಭ್ಯದ ಅಭಿವೃದ್ಧಿ ನಿಧಿಯು(ನಬಾರ್ಡ್) ಸಾಲ ಮಂಜೂರು ಮಾಡುತ್ತದೆ. ನಬಾರ್ಡ್, ಸಾಲಗಳಿಗೆ ರಾಜ್ಯ ಸರ್ಕಾರಕ್ಕೆ 2015 ಸೆಪ್ಟೆಂಬರ್ 29 ರಿಂದ ಜಾರಿಗೆ ಬರುವಂತೆ ಶೇ 6.25ರ ಬಡ್ಡಿದರವನ್ನು ವಿಧಿಸಲಾಗುತ್ತದೆ.

ದೇಶದ ಪ್ರಥಮ ಸಹಕಾರಿ ಸಂಘ

 • ಕರ್ನಾಟಕದ ಗದಗ ಜಿಲ್ಲೆ ಗದಗ ತಾಲ್ಲೂಕಿನ ಕಣಗಿನ ಹಾಳ ಎಂಬ ಗ್ರಾಮದಲ್ಲಿ 1905ಕ್ಕಿಂತ ಮೊದಲೇ ಆರಂಭವಾಯಿತು. ಈ ಸಹಕಾರಿ ಸಂಘವನ್ನು ಶ್ರೀ ಸಿದ್ದನಗೌಡ-ಸಣ್ಣ ರಾಮಣ್ಣಗೌಡ ಎಂಬವರು ಸ್ಥಾಪಿಸಿದರು. ಇದು ರಾಷ್ಟ್ರದಲ್ಲೇ ಪ್ರಥಮ ಸಹಕಾರ ಪಾಟೀಲ ಸಂಘವೆನಿಸಿತು. ಈ ಸಂಘದ ಶತಮಾನೋತ್ಸವವು 2005ರಲ್ಲಿ ನಡೆಯಿತು.

ಸಿದ್ದನಗೌಡರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ:

 • ಶತಮಾನೋತ್ಸವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಿದ್ದನಗೌಡರ ಭಾವಚಿತ್ರದ ಅಂಚೆಚೀಟಿ ಬಿಡುಗಡೆ ಮಾಡಲಾಯಿತು.
 • ಕಣಗಿನಹಾಳ ಗ್ರಾಮವನ್ನು ಮಾದರಿ ಗ್ರಾಮ ಎಂದು ಘೋಷಿಸಲಾಗಿತ್ತು.

ಮಾನವ ಅಭಿವೃದ್ಧಿ

ಶಿಕ್ಷಣ

 • 2011ರ ಜನಗಣತಿಯಂತೆ ಕರ್ನಾಟಕದ ಸಾಕ್ಷರತಾ ದರವು 75.40% ಇದೆ. 2001ರ ಸಾಕ್ಷರತೆಯು 66.64% ಇತ್ತು. ಈ ಮೂಲಕ ದಶಕದಲ್ಲಿ ಸಾಧನೆ ಕಂಡಿದೆ.
 • ರಾಜ್ಯದ ನಗರ ಪುರುಷರ ಸಾಕ್ಷರತೆಯು ಶೇ 90 ರ ಗಡಿ ದಾಟಿ- ದೆ. ಆದರೆ ಗ್ರಾಮೀಣ ಮಹಿಳೆಯರ ಸಾಕ್ಷರತೆಯು ಶೇ. 60 ರ ಗಡಿಯನ್ನು ದಾಟಿಲ್ಲ
 • 2015-16 ರಂತೆ ರಾಜ್ಯದಲ್ಲಿ 60,913 ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ 34,795 ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು 34,795 ಹಿರಿಯ ಪ್ರಾಥಮಿಕ ಶಾಲೆಗಳು ಇವೆ.
 • 2015-16 ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣವು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕ್ರಮವಾಗಿ ಶೇ 2.02 ಮತ್ತು ಶೇ 5.49 ರಷ್ಟಿದೆ.
 • 2015-16ರಲ್ಲಿ ಮಂಜೂರಾಗಿರುವ ಒಟ್ಟು 2,03,658 ಶಿಕ್ಷಕರ ಪೈಕಿ 1,66,083 ಶಿಕ್ಷಕರು ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. + ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತವು 1:24.75 ಆಗಿರುತ್ತದೆ.
 • ರಾಜ್ಯದಲ್ಲಿ 15,150 ಪ್ರೌಢಶಾಲೆಗಳಿದ್ದು, ಇದರಲ್ಲಿ ಶಿಕ್ಷಣ ಇಲಾಖೆಯು 4,659, ಸಮಾಜ ಕಲ್ಯಾಣ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ 556. ಅನುದಾನಿತ ಆಡಳಿತ ಮಂಡಳಿಯ 3,818, ಖಾಸಗಿ ಅನುದಾನ ರಹಿತ ಆಡಳಿತ ಮಂಡಳಿಯ 6,013 ಮತ್ತು ಇತರೆ 84 ಶಾಲೆಗಳು ಇದರಲ್ಲಿ ಸೇರಿವೆ,

ಕಾಲೇಜು ಶಿಕ್ಷಣ:

 • ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಈ ಕೆಳಗಿನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 1) 6 ಪ್ರಾದೇಶಿಕ ಕಚೇರಿಗಳು (ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಕಲಬುರಗಿ 2) 441 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು 3) 14 ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಆಡಳಿತ ಉಸ್ತುವಾರಿಯನ್ನು ಕಾಲೇಜು ಶಿಕ್ಷಣ ಇಲಾಖೆ ನೋಡಿಕೊಳ್ಳುತ್ತಿದೆ.
 • ಭಾರತ ಸರ್ಕಾರವು ಇಂಡಿಯನ್ ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಿದೆ.
  ವೈದ್ಯಕೀಯ ಶಿಕ್ಷಣ:
 • ಕರ್ನಾಟಕ ರಾಜ್ಯದಲ್ಲಿ ಒಟ್ಟು 6,245 ವಿದ್ಯಾರ್ಥಿಗಳಿಗೆ ಪ್ರವೇಶ ಸಾಮರ್ಥ್ಯವುಳ್ಳ 50 ವೈದ್ಯಕೀಯ ಕಾಲೇಜುಗಳಿವೆ.
 • ವಿಶೇಷ ಮಹತ್ವದ 8 ಸಂಸ್ಥೆಗಳೊಂದಿಗೆ, 15 ಕಾಲೇಜುಗಳನ್ನು ನಡೆಸುತ್ತಿವೆ.
 • ಕರ್ನಾಟಕದಲ್ಲಿ ಭಾರತೀಯ ನರ್ಸಿಂಗ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದ 287 ನರ್ಸಿಂಗ್‌ ಕಾಲೇಜುಗಳಿವೆ.

ಸಾಮೂಹಿಕ ಶಿಕ್ಷಣ

 • ಸಾಕ್ಷರಭಾರತ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ಶೇ 55 ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಇರುವ ರಾಜ್ಯದ 20 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
 • ಗ್ರಾಮೀಣ ಪ್ರದೇಶದ 15 ಕ್ಕಿಂತ ಹೆಚ್ಚಿನ ವಯೋಮಾನದ ಗುಂಪಿನ ಅನಕ್ಷರಸ್ಥರನ್ನು ಅದರಲ್ಲೂ ಮಹಿಳೆಯರು ಪ.ಜಾ., ಪ.ಪಂ. ಮತ್ತು ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿ ಸಾಮಾನ್ಯ ವರ್ಗದವರನ್ನು ಸಾಕ್ಷರರನ್ನಾಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
 • ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿರುವ ಸಂಸ್ಥೆಗಳೆಂದರೆ ಕರ್ನಾಟಕ ರಾಜ್ಯ ಸಾಕ್ಷರತಾ ಅಭಿಯಾನ ಪ್ರಾಧಿಕಾರ 117 ತಾಲ್ಲೂಕು ಲೋಕಶಿಕ್ಷಣ ಸಮಿತಿಗಳು ಮತ್ತು 3,778 ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಸಮಿತಿಗಳು .
 • ರಾಷ್ಟ್ರೀಯ ಸಾಕ್ಷರತಾ ಅಭಿಯಾನ ಪ್ರಾಧಿಕಾರದಿಂದ ನಿಗದಿ ಪಡಿಸಿರುವ ಭೌತಿಕ ಗುರಿಯು 51.80 ಲಕವಾಗಿರುತ್ತದೆ.
 • ಎಜುಸ್ಯಾಟ್ :- DSERT ವತಿಯಿಂದ ಉಪಗ್ರಹ ಆಧಾರಿತ ಶಿಕ್ಷಣ ಸೌಲಭ್ಯ ಅಕ್ಟೋಬರ್ 2002
 • ಸಾಕ್ಷರ ಭಾರತ್:- 2010-11 ಲೋಕ ಶಿಕ್ಷಣ ನಿರ್ದೇಶನಾಲಯದಿಂದ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಯೋಜನೆಯಾಗಿದೆ.
 • ಸ್ವಾವಲಂಬನೆ:- ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಪ್ರೋತ್ಸಾಹಿಸಲು ಬ್ಯಾಂಕಿನಿಂದ 10 ಲಕ್ಷದವರೆಗೆ ಸಾಲ ಹಾಗೂ ಸಾಲದ ಮೇಲಿನ ಬಡ್ಡಿ ಮೊದಲ ಮೂರು ವರ್ಷ ಸರ್ಕಾರ ನೀಡಿಕೆ.
 • ಸಬಲ ಯೋಜನೆ:- 11-18 ವರ್ಷದ ಪ್ರಾಯಪೂರ್ವ ಬಾಲಕಿಯರಿಗೆ ಗೃಹ ಕೌಶಲ್ಯ ಜೀವನ ಸೌಲಭ್ಯ ತರಬೇತಿ,
 • ಜ್ಞಾನ ತುಂಗಾ ಯೋಜನೆ:- ಪ್ರೌಢಶಾಲೆ ಮತ್ತು ಗ್ರಂಥಾಲಯಗಳಲ್ಲಿ ICT ಅಳವಡಿಕೆ ಮೂಲಕ ಜ್ಞಾನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಅರೋಗ್ಯ ಮತ್ತು ಕುಟುಂಬ ಕಲ್ಯಾಣ

 • ರಾಜ್ಯದಲ್ಲಿ 20 ಜಿಲ್ಲಾ ಆಸ್ಪತ್ರೆಗಳು, 11 ಇತರೆ ಆಸ್ಪತ್ರೆಗಳು ಹಾಗೂ 32 ಸ್ವಾ ಯತ್ತ ಮತ್ತು ಬೋಧಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 8871 ಉಪ ಕೇಂದ್ರಗಳು, 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 206 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 146 ತಾಲ್ಲೂಕು ಆಸ್ಪತ್ರೆಗಳು ಗ್ರಾಮೀಣ ಜನರಿಗೆ ಆರೋಗ್ಯದ ಅವಶ್ಯಕತೆಗಳನ್ನು ಒದಗಿಸುತ್ತಿವೆ.
 • 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ತಲಾ ಮಹಿಳಾ ಫಲವತ್ತತೆ ದರದ ಗುರಿಯು ಶೇ 19 ರ ಗುರಿಯನ್ನು ರಾಜ್ಯವು 2013 ರಲ್ಲೇ ಸಾಧಿಸಿದೆ. 2009 ರಲ್ಲಿ 1000 ಸಜೀವ ಜನನಕ್ಕೆ 41 ಶಿಶು ಮರಣದಿಂದ 2013 31 ಕೈ ಇಳಿಕೆಯಾಗಿದೆ.
 • ತಾಯಿಂದಿರ ಮರಣವು 2007-09 ರಿಂದ 2010-15 ರ ಅವಧಿಯಲ್ಲಿ 1 ಲಕ್ಷಕ್ಕೆ 178 ಇರುವುದನ್ನು 133 ಕ್ಕೆ ಇಳಿಸಲಾಗಿದೆ.
 • ಸಾಂಸ್ಥಿಕ ಹೆರಿಗೆ ಪ್ರಮಾಣವು ಶ 65 ರಿಂದ ಶೇ. 199,08 ಕ್ಕೆ ಏರಿಸಲಾಗಿದೆ.
 • 2012 ರಿಂದ ಯಾವುದೇ ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ.
 • ರಾಷ್ಟ್ರೀಯ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯವನ್ನು ಸುಧಾರಿಸಲು ಭಾರತ ಸರ್ಕಾರವು ಏಪ್ರಿಲ್ 12, 2005 ರಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯನ್ನು ಆರಂಭಿಸಿರುತ್ತದೆ. ಇದರ ಪ್ರಮುಖ ಉದ್ದೇಶ – ಗ್ರಾಮೀಣ ಜನರಿಗೆ ವಿಶೇಷವಾಗಿ ದುರ್ಬಲ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬಯಸುತ್ತದೆ.
 • ಪ್ರಸ್ತುತವಾಗಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಮತ್ತು ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮಗಳೂ ಕೂಡ ರಾಷ್ಟ್ರೀಯ ಗ್ರಾಮೀ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ತರಲಾಗಿದೆ.
 • ರಾಷ್ಟ್ರೀಯ: ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯನ್ನು ೬ ರಾಷ್ಟ್ರೀಯ ಆರೋಗ್ಯ ಅಭಿಯಾನ ಎಂದು ಮರುನಾಮಕರಣ ಮಾಡಿದ್ದು, ಈ ಯೋಜನೆ ವ್ಯಾಪ್ತಿಗೆ ಗ್ರಾಮೀಣ ಪ್ರದೇಶದೊಂದಿಗೆ ನಗರ ಪ್ರದೇಶಗಳು ಬರುತ್ತವೆ.
  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಆಯಾನ (NRHM):- (ಏಪ್ರಿಲ್ 12, 2005) ‘ಆರೋಗ್ಯ ಮೂಲ ಸೌಕರ್ಯವನ್ನು ಕಲ್ಪಿಸುವುದು.
  ಜನನಿ ಸುರಕ್ಷಾ ಯೋಜನೆ:– IMR, MMR ಕಡಿಮೆ ಮಾಡಲು ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಪ್ರೋತ್ಸಾಹ.
  ಆರೋಗ್ಯ ಕವಚ:- (2008-09) .ತುರ್ತು ನಿರ್ವಹಣಾ ಪ್ರಕ್ರಿಯೆ ಸೇವ.
  ಜನನಿ ಸುರಕ್ಷಾ ವಾಹಿನಿ: ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಗರ್ಭಿಣಿ ಬಾಣಂತಿಯರು ಅಥವಾ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರವಾನೆ.
  ನಗು-ಮಗು ಯೋಜನೆ:- (5-02-2015) . ಸರ್ಕಾರಿ ಆಸ್ಪತ್ರೆಗಳಿಂದ ಬಾಣಂತಿಯರು ಹಾಗೂ ನವಜಾತ ಶಿಶುಗಳನ್ನು ಮನೆಗಳಿಗೆ ತಲುಪಿಸುವುದು.
 • ಬೈಕ್ ಅಂಬ್ಯುಲೆನ್~ (15-4-2015) .ನಗರ ಪ್ರದೇಶಗಳಲ್ಲಿ ನಿಗದಿತ ವೇಳೆಯಲ್ಲಿ ಆರೋಗ್ಯ ಕವಚ ಯೋಜನೆ ಅಡಿಯಲ್ಲಿ ಪ್ರಥಮ ಚಿಕಿತ್ಸೆ
 • ವಾಜಪೇಯಿ ಆರೋಗ್ಯ ಶ್ರೀ :- (2010) .ಬಿಪಿಎಲ್‌ ಕುಟುಂಬದವರಿಗೆ ಉತ್ತಮ ಆರೋಗ್ಯ ರಕ್ಷಣೆ ನೀಡಲು 7 ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ
 • ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ:- ವಸತಿ ರಹಿತ, ಚಂದಿ ಆಯುವವರ, ಬೀದಿ ಮಕ್ಕಳು, ಕಟ್ಟಡ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುವ ಬಡ ಜನತೆಗೆ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸೆ ನೀಡುವುದು.
 • ಕ್ಷೀರಭಾಗ್ಯ ಯೋಜನೆ:- ಶಾಲೆಗಳಲ್ಲಿ ಪ್ರತಿ ಮಗುವಿಗೆ ವಾರಕ್ಕೆ 3 ದಿನ 250 ಮಿ.ಲೀ, ಹಾಲನ್ನು ನೀಡಲಾಗುತ್ತಿದೆ. ಇದರ ಉದ್ದೇಶ ಮಗುವಿನಲ್ಲಿ ಆಪೌಷ್ಠಿಕತೆಯನ್ನು ಹೋಗಲಾಡಿಸುವುದಾಗಿದೆ.

ಮಾನವ ಮತ್ತು ಅಂಗ ಸಂಬಂಧಿ ಅಭಿವೃದ್ಧಿ

 • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2011ರ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕವು 0,504 ಇದ್ದು, ಉತ್ತಮ ಮಾನವ ಅಭಿವೃದ್ಧಿ ಸೂಚ್ಯಂಕ (0.625) ಕೇರಳದಲ್ಲಿರುತ್ತದೆ.
 • ಮಾನವ ಅಭಿವೃದ್ಧಿ ವರದಿಗಳ ನಿಯತಕಾಲಿಕವಾಗಿ ವಿವಿಧ ಹಂತಗಳಲ್ಲಿ ಪ್ರಕಟಿಸುವುದರಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. * ಕರ್ನಾಟಕವು ಮಾನವ ಅಭಿವೃದ್ಧಿ ವರದಿಯನ್ನು ಮೊದಲ ಬಾರಿಗೆ 1999ರಲ್ಲಿ 2ನೇ ಬಾರಿಗೆ 2005 ರಲ್ಲಿ ಹೊರತಂದಿದ್ದು, 3ನೇ ಮಾನವ ಅಭಿವೃದ್ಧಿ ವರದಿಯನ್ನು 2016 ರ ಅಂತ್ಯದ ವೇಳೆಗೆ ತರುವ ನಿರೀಕ್ಷೆ ಇದೆ.
 • ಪ್ರಾಯೋಗಿಕವಾಗಿ 4 ಜಿಲ್ಲೆಗಳು (ಕಲಬುರಗಿ, ಮೈಸೂರು, ಉಡುಪಿ, ವಿಜಯಪುರ) ಮಾನವ ಅಭಿವೃದ್ಧಿ ವರದಿಯನ್ನು 2008 ರಲ್ಲಿ ಹೊರತರಲಾಗಿದೆ.
 • ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಏಕ ಕಾಲದಲ್ಲಿ ಎಲ್ಲ 30 ಜಿಲ್ಲೆಗಳ ಮಾನವ ಅಭಿವೃದ್ಧಿ ವರದಿಯನ್ನು 2014 ರಲ್ಲಿ ಹೊರತರಲಾಗಿದೆ. ಮತ್ತು ರಾಷ್ಟ್ರದಲ್ಲೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರಾಜ್ಯದ ಎಲ್ಲ ಅಂದಿನ 5898 ಗ್ರಾಮ ಪಂಚಾಯಿತಿಗಳಿಗೆ ಸಹ ಲೆಕ್ಕ ಹಾಕಲಾಗಿದ್ದು, ಮಾನವ ಅಭಿವೃದ್ಧಿ: ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ – 2015 ಎಂಬ ಹೆಸರಿನಲ್ಲಿ ವರದಿಯನ್ನು ಹೊರ ತರಲಾಗಿದೆ.
 • 2014 ರ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳು 7 ವಿಶಿಷ್ಟ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೂಲಕ ಸಂಬಂಧಿಸಿದ ಜಿಲ್ಲೆಗಳ, ತಾಲ್ಲೂಕುಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಾನವ ಅಭಿವೃದ್ಧಿಯ ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸಲಾಗುತ್ತಿದೆ. * ಮಾನವ ಅಭಿವೃದ್ಧಿ: ಕರ್ನಾಟಕದಲ್ಲಿನ ಜಿಲ್ಲೆಗಳ, ತಾಲ್ಲೂಕುಗಳ ಮತ್ತು 2014 ಒಂದು ಕ್ಷಿಪ್ರ ನೋಟವನ್ನು ತಯಾರಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ

ಮಹಿಳಾ ಮತ್ತು ಮಕ್ಕಳಾಭಿವೃದ್ಧಿ:

 • ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪ.ಜಾ, ಮಹಿಳೆಯರ ಸಂಖ್ಯೆಯು ಭಾರತದ (ಶೇ 8.08) ಕ್ಕೆ ಹೋಲಿಸಿದಾಗ ಕರ್ನಾಟಕವು (ಶೇ 8.53), ತಮಿಳುನಾಡಿನಲ್ಲಿ (ಶೇ 10.03), ಹೆಚ್ಚು ಇರುವುದು ಕಂಡು ಬರುತ್ತದೆ.
 • ಒಟ್ಟು ಜನಸಂಖ್ಯೆಗೆ ಪ.ಪಂ.ಗಳ ಮಹಿಳೆಯರ ಜನಸಂಖ್ಯೆಯು ಕರ್ನಾಟಕ (ಶೇ 3.46), ಮತ್ತು ಇತರೆ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಆಂಧ್ರಪ್ರದೇಶದಲ್ಲಿ(ಶೇ 3.49) ಹೆಚ್ಚು ಕಂಡು ಬರುತ್ತದೆ.
  ಸ್ತ್ರೀಶಕ್ತಿ ಯೋಜನೆ:- ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸಬಲೀಕರಣ (2000-01) ಸಾಂತ್ವನ:- ಅತ್ಯಾಚಾರ, ಕೌಟುಂಬಿಕ ಹಿಂಸೆ, ವರದಕ್ಷಿಣೆ, ಲೈಂಗಿಕ ಹಿಂಸೆ ಮುಂತಾದ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರ ಪುನರ್ವಸತಿ
 • ಮನಸ್ವಿನಿ ಯೋಜನೆ:- 1-8-2013 ಜಾರಿ, 40 ವರ್ಷ ದಾಟಿದ ಅವಿವಾಹಿತ ವಿಚ್ಚೇದಿತ ಪರಿತ್ಯಕ್ತ ಮಹಿಳೆಯರಿಗೆ ರೂ 500 ಮಾಸಾಶನ ನೀಡಿಕೆ.
 • ಮೈತ್ರಿ ಯೋಜನೆ :- ಜಾರಿ:- 1-8-2013, 25 ವರ್ಷ ದಾಟಿದ ಲೈಂಗಿಕ ಅಲ್ಪ ಸಂಖ್ಯಾತರಿಗೆ ರೂ 500 ಮಾಸಾಶನ,

ಸ್ವ ಸಹಾಯ ಗುಂಪುಗಳು:-

 • ಸ್ವ ಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಧೈಯದೊಂದಿಗೆ 2000-01 ರಲ್ಲಿ ಸ್ತ್ರೀ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
 • ಅತ್ಯಾಚಾರ, ಕೌಟುಂಬಿಕ ಹಿಂಸೆ, ವರದಕ್ಷಿಣೆ, ಲೈಂಗಿಕ ಹಿಂಸೆ ಮುಂತಾದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪುನರ್ವಸತಿ ಒದಗಿಸುವ ಉದ್ದೇಶವನ್ನು ಸಾಂತ್ವನ ಯೋಜನೆಯು ಹೊಂದಿರುತ್ತದೆ.
 • ಈ ಯೋಜನೆಯಡಿ ವಿವಿಧ ಸರ್ಕಾರೇತರ ಸ್ವಯಂ ಸಂಸ್ಥೆಗಳ ನೆರವಿನೊಂದಿಗೆ ನಡೆಯುತ್ತಿರುವ 187 ಸಾಂತ್ವನ ಕೇಂದ್ರಗಳಲ್ಲಿ ಕಾನೂನು ನೆರವು ನೀಡುವುದರೊಂದಿಗೆ ಆರ್ಥಿಕ ನೆರವು, ತಾತ್ಕಾಲಿಕ ಆಶ್ರಯ ಮತ್ತು ರಕ್ಷಣೆ ಅವರಿಗೆ ಸಾಮಾನ್ಯ ಜೀವನಕ್ಕೆ ಹಿಂದಿರುಗಲು ಅವಶ್ಯವಿರುವ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಶಿಕ್ಷಣವನ್ನು ಒದಗಿಸಲಾಗುತ್ತಿದೆ.

ಭಾಗ್ಯಲಕ್ಷ್ಮಿ ಯೋಜನೆ

 • ಲಿಂಗಾನುಪಾತ ಸುಧಾರಿಸುವ ಗುರಿಯೊಂದಿಗೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾಗ್ಯಲಕ್ಷ್ಮಿ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗುವಿನ ಹೆಸರಿನಲ್ಲಿ ನಿಗದಿತ ಮೊತ್ತವನ್ನು ಆವರ್ತಕ ಠೇವಣಿಯಲ್ಲಿಟ್ಟು ಆ ಮಗುವಿಗೆ 18 ವರ್ಷ ತುಂಬಿದ ನಂತರ ಬಡ್ಡಿ ಸಹಿತ ನೀಡಲಾಗುವುದು.
 • ಬಡತನ ರೇಖೆಗಿಂತ ಕೆಳಗಿನ ಕುಟುಂಬದಲ್ಲಿ ಜನಿಸಿದ 2 ಹೆಣ್ಣು ಮಕ್ಕಳು ಈ ಯೋಜನೆಯಡಿ ದಾಖಲಿಸಲು ಅರ್ಹರಾಗಿರುತ್ತಾರೆ.
 • ಒಂದು ನಿರ್ಧಿಷ್ಟ ಮೊತ್ತವನ್ನು ಆರ್ಥಿಕ ಪಾಲುದಾರ ಸಂಸ್ಥೆಯಲ್ಲಿ ಠೇವಣಿ ಇಡಲಾಗುತ್ತದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

 • ಕರ್ನಾಟಕದಲ್ಲಿ 1975 ಅಕ್ಟೋಬರ್ 2 ರಂದು ಯೋಜನೆಯನ್ನು ಪ್ರಾರಂಭಿಸಲಾಯಿತು. ನಂತರ ರಾಜ್ಯದ ಎಲ್ಲ ತಾಲ್ಲೂಕುಗಳಿಗೂ ವಿಸ್ತರಿಸಲಾಗಿರುತ್ತದೆ.
 • ಗರ್ಭಿಣಿ ಮಹಿಳೆಯರು, ಬಾಣಂತಿಯರು, ಹದಿ ಹರೆಯದ ಹುಡುಗಿಯರು ಮತ್ತು ವರ್ಷದೊಳಗಿನ ಮಕ್ಕಳ ಕಲ್ಯಾಣ ಇವುಗಳು ಈ ಕಾರ್ಯಕ್ರಮದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ
 • ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಪ್ರಾರಂಭಿಸಿರುವ ಕರ್ನಾಟಕ ಮಹಿಳಾ ಅಭವೃದ್ಧಿ ಯೋಜನೆಯು ದೇಶದಲ್ಲಿಯೇ ಪ್ರಥಮ ಕಾರ್ಯಕ್ರಮವಾಗಿರುತ್ತದೆ.
 • 2015-16ನೇ ಸಾಲಿನಲ್ಲಿ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ವಲಯಗಳಿಂದ ಒಟ್ಟು 239 ಯೋಜನೆಗಳಿರುತ್ತವೆ. ಮಡಿಲು ಯೋಜನೆ:- ಹೆರಿಗೆ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಮತ್ತು ತಾಯಿ ಆರೈಕೆಗಾಗಿ ಅಗತ್ಯ 19 ಸಾಮಗ್ರಿಗಳನ್ನು ಪೂರೈಸುವುದು.
 • ಪ್ರಸೂತಿ ಆರೈಕೆ:- ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬಿಪಿಎಲ್‌ ಗರ್ಭಿಣಿ ಮಹಿಳೆಯರಿಗೆ ಅಗತ್ಯ ಪೌಷ್ಠಿಕಾಂಶ ಪಡೆಯಲು ರೂ 2,000 ನೆರವು.
 • ವಾತ್ಸಲ್ಯ ವಾಣಿ:- (21-09-2015) ಕಾನ್ಸರೆನ್ಸ್ ಮಾದರಿ ಕರೆಗಳ ಮೂಲಕ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಅನುಸರಣೆ.

ಕಿಶೋರಿ ಶಕ್ತಿ ಯೋಜನೆ

 • ಈ ಕಾರ್ಯಕ್ರಮದಡಿಯಲ್ಲಿ ಪ್ರಾಯಪೂರ್ವ ಬಾಲಕಿಯರಿಗೆ ಉಪಯುಕ್ತವಾದ ತರಬೇತಿ ನೀಡಲಾಗುತ್ತದೆ. ಹಾಗೂ ಪೂರಕ ಆರೋಗ್ಯ ಪದ್ಧತಿಗಳಿಂದ ಉತ್ತಮ ಆರೋಗ್ಯ : ಅಭಿವೃದ್ಧಿ ಪಡಿಸಲಾಗುತ್ತದೆ.

ಕರ್ನಾಟಕ ರಾಜ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ

 • ಕರ್ನಾಟಕ ರಾಜ್ಯದಲ್ಲಿ 1981 ರಲ್ಲಿ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯನ್ನು ಸ್ಥಾಪಿಸಿರುತ್ತದೆ.
 • ಪರಿಸರ ಮತ್ತು ಜೀವಶಾಸ ಇಲಾಖೆಯು ಸರ್ಕಾರದ ಸಚಿವಾಲಯ ಮಟ್ಟದಲ್ಲಿದ್ದು, ತನ್ನ ಕಾರ್ಯ ನಿರ್ವಹಣೆಗಾಗಿ 6 ಸಂಸ್ಥೆಗಳ ಬೆಂಬಲ ಪಡೆಯುತ್ತಿದೆ.
 • 1) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ:- ಇದನ್ನು ಕೇಂದ್ರ ಸರ್ಕಾರದ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ – 1974 ರ ಅಡಿಯಲ್ಲಿ 1974 ಆಗಸ್ಟ್ 24 ರಂದು ಸ್ಥಾಪಿಸಲಾಯಿತು. ಇದೊಂದು ಶಾಸನಬದ್ದ ಸಂಸ್ಥೆಯಾಗಿದೆ. ಮಂಡಳಿಯು ಕೇಂದ್ರ ಸರ್ಕಾರದ ಪರಿಸರ ಸಂರಕ್ಷಣಾ ಕಾಯ್ದೆ, 1986 ರಲ್ಲಿ ಹೊರಡಿಸಿರುವ ನಿಯಮದ ಅನುಷ್ಠಾನದ ಹೊಣೆಯನ್ನು ಹೊಂದಿದೆ. ಅವುಗಳೆಂದರೆ ತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿಭಾವಣೆ) ನಿಯಮಗಳು ಅಪಾಯಕಾರಿ – 2008, ಪ್ಲಾಸ್ಟಿಕ್‌ ತ್ಯಾಜ್ಯಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು- 2011, ನಗರ ಘನ ತ್ಯಾಜ್ಯ ನಿಯಮಗಳು – 2000, ಶಬ್ದ ಮಾಲಿನ್ಯ ನಿಯಮಗಳು – 2000 ಇವುಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿದೆ.
 • ಕರ್ನಾಟಕದಲ್ಲಿ 236 ಕಾರ್ಖಾನೆಗಳು ಅತಿ ಹೆಚ್ಚು ಮಾಲಿನ್ಯಕಾರವಾದ 17 ಪ್ರವರ್ಗದ ಕಾರ್ಖಾನೆಗಳಾಗಿದ್ದು, ಇವುಗಳಲ್ಲಿ 210 ಕಾರ್ಯಾಚರಣೆಯಲ್ಲಿವೆ. 40 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್ ಕೈ ಚೀಲಗಳ ಬಳಕೆಯನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ.
 • 2) ಕರ್ನಾಟಕ ಜೀವ ವೈವಿಧ್ಯತೆ ಮಂಡಳಿ:- ಕರ್ನಾಟಕ ಜೀವ ವೈವಿಧ್ಯತೆ ಅಧಿನಿಯಮ – 2002 ರ ಕಲಂ 22 ರ ಪ್ರಕಾರ ಕರ್ನಾಟಕ ಜೀವ ವೈವಿಧ್ಯತೆ ಮಂಡಳಿಯನ್ನು 2003 ಆಗಸ್ಟ್ 1 ರಂದು ಸ್ಥಾಪಿಸಲಾಯಿತು. ಕರ್ನಾಟಕದಲ್ಲಿ ದೇವನಹಳ್ಳಿಯ ನೆಲ್ಲೂರು, ಕಡೂರಿನ ಬಳಿಯ ವಗರೇಕಾನ್, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಸಾಗರ ಜಿಲ್ಲೆಯ ಅಂಬಾರಗುಡ್ಡಗಳನ್ನು ಜೀವ ವೈವಿಧ್ಯತೆ ಅಡಿಯಲ್ಲಿ ಪರಂಪರಾಗತ ತಾಣಗಳೆಂದು ಘೋಷಣೆ ಮಾಡಲಾಗಿದೆ. ಜೀವ ವೈವಿಧ್ಯತೆ ಮಂಡಳಿಯು 11 ಜೀವ ವೈವಿಧ್ಯ ಪ್ರಶಸ್ತಿಗಳನ್ನು ನೀಡುತ್ತಿದೆ.
 • 3) ಕೆರೆ ಅಭಿವೃದ್ಧಿ ಮಂಡಳಿ:
 • 4) ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ:- ಈ ಸಂಸ್ಥೆಯನ್ನು ಕರ್ನಾಟಕ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆಯಡಿಯಲ್ಲಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾಗಿದೆ. ಇದನ್ನು 2002 ರ ಸೆಪ್ಟೆಂಬರ್ 17 ರಂದು ನೊಂದಾಯಿಸಲಾಗಿದೆ. ಇದು ಪರಿಸರ . ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.
 • 5) ಕರ್ನಾಟಕ ರಾಜ್ಯ ಕಡಲ ತೀರ ವಲಯ :
 • 6) ರಾಜ್ಯ ಮಟ್ಟದ ಪರಿಸರ ಆಘಾತಕಾಲ ಅಂದಾಜೀಕರಣ ಪ್ರಾಧಿಕಾರ

ಭುವನ್ ಪೋರ್ಟಲ್

 • ಈ ಪೋರ್ಟಲ್‌ನಲ್ಲಿನ ಭೌಗೋಳಿಕ ವೇದಿಕಯಲ್ಲಿ Environmental Information System ಕೇಂದ್ರಕ್ಕೆ ನಿಗದಿ ಪಡಿಸುವ ಥೀಮ್‌ಗಳಿಗೆ ಸಂಬಂಧಿಸಿದಂತೆ ಕೇಂದ್ರವು ರಚಿಸುತ್ತದೆ ಮತ್ತು ತಯಾರಿಸುತ್ತದೆ ಮತ್ತು ಪ್ರಸಾರ ಮಾಡುತ್ತದೆ.

ಕರ್ನಾಟಕದ ಪ್ರವಾಸೋದ್ಯಮ

 • ಧ್ಯೇಯವಾಕ್ಯ One State Many World’ ಎಂಬುದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಧೈಯವಾಕ್ಯವಾಗಿದೆ.
 • Hriday- Heritage City Development Augmentation yojana
 • ದೇಶದ 12 ಸ್ಥಳಗಳಲ್ಲಿ ಕರ್ನಾಟಕದ ಬಾದಾಮಿ ಸೇರಿದೆ.
 • ಹಂಪೆ, ಪಟ್ಟದಕಲ್ಲು, ಪಶ್ಚಿಮ ಘಟ್ಟಗಳು-ಇವು ಯುನೆಸ್ಕೋ ಪಟ್ಟಿಗೆ ಸೇರಿದ ರಾಜ್ಯದ ತಾಣಗಳಾಗಿವೆ.
 • 1996-97 ರಲ್ಲಿ ಕರ್ನಾಟಕವನ್ನು ಉತ್ತಮ ಪ್ರವಾಸೋದ್ಯಮ ನಿರ್ವಹಣಾ ರಾಜ್ಯವೆಂದು ಘೋಷಿಸಲಾಗಿದೆ.

ಪ್ರಮುಖ ಪ್ರವಾಸಿ ತಾಣಗಳು ಅವುಗಳು ಇರುವ ಸ್ಥಳಗಳು

ಆಕಾಶವಾಣಿ ಆಲ್ ಇಂಡಿಯಾ ರೇಡಿಯೋ

 • ಆಕಾಶವಾಣಿ’ ಎಂಬ ಆಲ್ ಇಂಡಿಯಾ ರೇಡಿಯೋವನ್ನು ಡಾ| ಎಂ.ವಿ. ಗೋಪಾಲಸ್ವಾಮಿ ಎಂಬುವರು ಮೈಸೂರಿನಲ್ಲಿ 1935ರಲ್ಲಿ ಆರಂಭಸಿದರು, ನಂತರ ಜನವರಿ 1941 ರಲ್ಲಿ ರಾಜ್ಯ ಸರ್ಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ನಂತರದ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು,
 • 1950 ನವೆಂಬರ್ 8ರಂದು ಕರ್ನಾಟಕದಲ್ಲಿ ಮೊದಲ ರೇಡಿಯೋ ಕೇಂದ್ರವು ಧಾರವಾಡದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು.

ದೂರದರ್ಶನ

 • 1959 ಸೆಪ್ಟೆಂಬರ್ 15ರಂದು ಭಾರತ ದೇಶದಲ್ಲಿ ದೂರದರ್ಶನ ಆರಂಭವಾಯಿತು.
 • ಕಲ್ಬುರ್ಗಿಯು ಕರ್ನಾಟಕದಲ್ಲಿ ಮೊದಲ ಪ್ರಸಾರ ಕೇಂದ್ರ (Relay Centre) ಆಗಿ 1977 ಸೆಪ್ಟೆಂಬರ್ 3ರಂದು ಉದ್ಘಾಟನೆಯಾಯಿತು. 40ಕಿಮೀ ವ್ಯಾಪ್ತಿ ಪ್ರಸಾರ ಹೊಂದಿತ್ತು. ಕಲಬುರ್ಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಯ 240 ಗ್ರಾಮಗಳಿಗೆ ವ್ಯಾಪಿಸಿದೆ.

ಸರ್ಕಾರಿ ಸ್ಯಾಂಡಲ್ ಆಯಿಲ್ ಫ್ಯಾಕ್ಟರಿಗಳು (The Government Sandalwood Oil Factories)

 • 1915ರಲ್ಲಿ ಮೈಸೂರು ನಗರದಲ್ಲಿ ಸ್ಥಾಪನೆ.
  ಸರ್ಕಾರಿ ಸೋಪು ಕಾರ್ಖಾನೆ 1918ರಲ್ಲಿ ಬೆಂಗಳೂರು
  ಮಿನರ್ವ ಮಿಲ್ಫ್:- 1919ರಲ್ಲಿ ಬೆಂಗಳೂರು,
  ಜಿಇಎಂಎಲ್ (ಭಾರತ ಅರ್ಥ್ ಮೂವರ್ ಅಮಿಟೆಡ್)
 • 1963 ಜನವರಿ 1 ರಂದು ಬಿಇಎಂಎಲ್ ಸ್ಥಾಪಿಸಲಾಯಿತು. ಬಿಇಎಂಎಲ್‌ನಿಂದ ಉನ್ನತ ತಂತ್ರಜ್ಞಾನದ ಸಾಗಾಣಿಕೆ ಸಾಧನಗಳನ್ನು ತಯಾರಿಸಲಾಯಿತು.

ಬಿ ಎಚ್ ಇ ಎಲ್ (BHEL):

 • 1976ರಲ್ಲಿ ಭಾರತ್ ಹೆವಿ ಎಲೆಕ್ಟಿಕಲ್ ಲಿಮಿಟೆಡ್‌ನ್ನು ಸ್ಥಾಪಿಸಲಾಯಿತು. ಹೆಚ್‌ಎಂಟಿ (ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಅಮಿಟೆಡ್)
 • 1953ರಲ್ಲಿ ಹೆಚ್ ಎಂಟಿಯನ್ನು ಸ್ಥಾಪಿಸಲಾಯಿತು. ಕೇಂದ್ರ ಸರ್ಕಾರವು ಹೆಚ್ ಎಂಟಿ ವಾಚ್ ಲಿಮಿಟೆಡ್‌ನ್ನು ಮುಚ್ಚುವುದಾಗಿ ಜನವರಿ 6, 2016 ರಂದು ಘೋಷಿಸಿತು. ಈ ಕಂಪನಿಯು ಕಾರ್ಯ ಸ್ಥಗಿತಗೊಳಿಸಿದೆ.

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ITI):

 • 1948ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.

ಹೆಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಅಮಿಟೆಡ್):

 • ಬೆಂಗಳೂರಿನಲ್ಲಿ 1940ರಲ್ಲಿ ಹಿಂದೂಸ್ಥಾನ್ ಏರ್ ಕ್ರಾಫ್ಟ್ ಎಂದು ಸ್ಥಾಪಿಸಲಾಯಿತು. ಖ್ಯಾತ ಉದ್ಯಮಿ: ವಾಲ್‌ ಚಂದ್ ಹಿರಾಚಂದ್ ಅವರು ಸ್ಥಾಪಿಸಿದರು.

  ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (Member of Parliament Local Area Development Scheme):
 • ಇದೊಂದು ಸಹಾಯಾನುದಾನ ಯೋಜನೆಯಾಗಿದೆ.
 • 1993 ಡಿಸೆಂಬರ್ 23 ರಂದು ಭಾರತ ಸರ್ಕಾರವು ಈ ಯೋಜನೆಯನ್ನು ಆರಂಭಿಸಿತು..
 • ಇದು ರಾಜ್ಯಗಳಿಗೆ ಕೇಂದ್ರಗಳ ವಿಶೇಷ ನೆರವಾಗಿದೆ.
 • ಇದನ್ನು ಮಾನ್ಯ ಸಂಸತ್ತಿನ ಸದಸ್ಯರ ಶಿಫಾರಸ್ಸಿನ ಮೇರೆಗೆ ಸಾಮುದಾಯಿಕ ಸ್ವತ್ತುಗಳ ನಿರ್ಮಾಣಕ್ಕಾಗಿ ವೆಚ್ಚ ಮಾಡಬಹುದಾಗಿದೆ
 • ಈ ಯೋಜನೆಯು ಮಾರ್ಗದರ್ಶಕ ಸೂತ್ರಗಳನ್ವಯ ನಿರ್ವಹಿಸಲ್ಪಡುತ್ತದೆ.
 • ಈ ಯೋಜನೆಯಡಿ, ಪ್ರತಿ ಸಂಸತ್ ಸದಸ್ಯರಿಗೆ ಪ್ರತಿ ವರ್ಷ 5 ಕೋಟಿ ರೂ.ಗಳನ್ನು ಆಯಾಯ ಜಿಲ್ಲೆಯ ಆಯುಕ್ತರಿಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ.
 • ಇದನ್ನು ಸಂಸತ್ ಸದಸ್ಯರ ಶಿಫಾರಸ್ಸಿನ ಮೇರೆಗೆ ಸ್ಥಳೀಯ ಅವಶ್ಯಕತೆಗಳಿಗನುಗುಣವಾಗಿ ಖರ್ಚು ಮಾಡಲು ಬಿಡುಗಡೆ ಮಾಡಲಾಗುತ್ತದೆ.
 • ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಸದಸ್ಯರುಗಳು ಮತ್ತು 12 ಜನ ರಾಜ್ಯಸಭಾ ಸದಸ್ಯರುಗಳಿದ್ದಾರೆ.
 • ಲೋಕಸಭೆಯ ಇಬ್ಬರು ನಾಮನಿರ್ದೇಶಿತ ಸದಸ್ಯರುಗಳು ಮತ್ತು ರಾಜ್ಯಸಭೆಯ 12 ಮಂದಿ ನಾಮ ನಿರ್ದೇಶಿತ ಸದಸ್ಯರುಗಳು ತಮ್ಮ ಪ್ರದೇಶಾಭಿವೃದ್ಧಿ ಯೋಜನೆಯ ಹಣವನ್ನು ದೇಶದ ಯಾವುದೇ ಒಂದು ಅಥವಾ ಅದಕ್ಕಿಂತ ಹೆಚ್ಚು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಖರ್ಚು ಮಾಡಬಹುದು.

ಕರ್ನಾಟಕದ ರಾಜಕೀಯ ಸ್ಥಿತಿಗತಿಗಳು:

ವಿಧಾನಸಭಾ ಕ್ಷೇತ್ರಗಳು 224
 ವಿಧಾನಸಭಾ ಸ್ಥಾನಗಳು225(ಆಂಗ್ಲೋ ಇಂಡಿಯನ್‌ ಸೇರಿ)
 ಲೋಕಸಭಾ ಕ್ಷೇತ್ರಗಳು28 
 ರಾಜ್ಯಸಭಾ ಸ್ಥಾನಗಳು 12
 ವಿಧಾನ ಪರಿಷತ್ತಿನ ಸ್ಥಾನಗಳು75

ಪ್ರಸ್ತುತ 14ನೇ ವಿಧಾನಸಭೆಯ ಆಂಗ್ಲೋ ಇಂಡಿಯನ್-ವಿನಿಷಾ ನಿರೋ

ಕರ್ನಾಟಕದ ಅರಣ್ಯ

 • ಕರ್ನಾಟಕದಲ್ಲಿ 2014-15 ರ ಅರಣ್ಯ ಇಲಾಖೆಯ ವಾರ್ಷಿಕ ವರದಿಯಂತೆ ರಾಜ್ಯದ ಒಟ್ಟು ಅರಣ್ಯ ಪ್ರದೇಶವು 43,356,47 ಚ.ಕಿ.ಮೀ ಒಳಗೊಂಡಿದ್ದು, ಮತ್ತು ರಾಜ್ಯದ ಭೌಗೋಳಿಕ ಪ್ರದೇಶದ 22.61% ಭಾಗದಷ್ಟಿದೆ.
 • ಇದರಲ್ಲಿ ಶೇ 15.48 ರಷ್ಟು ಮೀಸಲು ಅರಣ್ಯವಿದೆ. ಶೇ 1.85 ರಷ್ಟು ಸುರಕ್ಷಿತ ಅರಣ್ಯವಿದ್ದು, ಗ್ರಾಮೀಣ ಅರಣ್ಯವು 0.03% ರಷ್ಟಿದೆ.
 • ಅವರ್ಗೀಕೃತ ಅರಣ್ಯವು 5.3% ಇದೆ.
 • ಖಾಸಗಿ ಅರಣ್ಯವು 0.03% ರಷ್ಟಿದೆ.
 • ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳು ಮತ್ತು 29 ವನ್ಯಜೀವಿ ಅಭಯಾರಣ್ಯಗಳಿದ್ದು, ಇವುಗಳು ಶೇ 21.97 ರಷ್ಟು ರಾಜ್ಯದ ಅರಣ್ಯ ಪ್ರದೇಶವನ್ನು ವ್ಯಾಪಿಸಿವೆ.
 • ಕರ್ನಾಟಕದಲ್ಲಿ ಸುಮಾರು 6,072 ಕಾಡಾನೆಗಳು ಮತ್ತು ಸುಮಾರು 406 ಮಲಿಗಳಿವೆ.
 • ಹುಲಿಸಂತತಿ/ಕಾಡಾನೆಗಳ ಸಂತತಿಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ.
 • ಭಾರತದ ಆನೆಗಳಲ್ಲಿ ಶೇ 25 ಮತ್ತು ಹುಲಿಗಳಲ್ಲಿ ಶೇ 10 ಭಾಗ ನಮ್ಮ ಕರ್ನಾಟಕದಲ್ಲಿವೆ.
 • ಭಾರತದಲ್ಲಿ ಸಮೃದ್ಧ ಅರಣ್ಯಗಳನ್ನುಳ್ಳ ರಾಜ್ಯಗಳಲ್ಲಿ ಕರ್ನಾಟಕವು 7ನೇ ಸ್ಥಾನದಲ್ಲಿದೆ.
 • ಉತ್ತರ ಕನ್ನಡ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡ ಜಿಲ್ಲೆ, ತರುವಾಯ ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಗಳು ಕ್ರಮಗಳು ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿವೆ.
 • ವಿಜಯಪುರ ಅತಿ ಕಡಿಮೆ ಅರಣ್ಯವುಳ್ಳ ಜಿಲ್ಲೆಯಾಗಿದೆ.
 • ಕರ್ನಾಟಕದಲ್ಲಿ 3 ಹುಲಿ ಸಂರಕ್ಷಣಾ ವಲಯಗಳಿವೆ. 1) ಬಂಡೀಪುರ 2) ನಾಗರಹೊಳೆ 3) ಭದ್ರಾ ಅಭಯಾರಣ್ಯ
 • ಕರ್ನಾಟಕದ ಪ್ರಸಿದ್ದ ಪಕ್ಷಿಧಾಮ – ರಂಗನತಿಟ್ಟು


ರಾಜ್ಯದಲ್ಲಿರುವ ರಾಷ್ಟ್ರೀಯ 5 ಉದ್ಯಾನವನಗಳೆಂದರೆ

 • 1) ಬಂಡೀಪುರ (ಚಾಮರಾಜನಗರ) 2) ನಾಗರಹೊಳೆ (ಕೊಡಗು) 3) ಅಣಶಿ (ಉ.ಕನ್ನಡ) 4) ಬನ್ನೇರುಘಟ್ಟ (ಬೆಂಗಳೂರು) 5) ಕುದುರೆಮುಖ (ಚಿಕ್ಕಮಗಳೂರು)

ಭಾರತ ದೇಶದಲ್ಲಿನ ಅರಣ್ಯ:

 • ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಮಧ್ಯಪ್ರದೇಶ ಹೊಂದಿದೆ.
 • ಅತಿ ಕಡಿಮೆ ಅರಣ್ಯವನ್ನು ಹರಿಯಾಣ ರಾಜ್ಯವು ಹೊಂದಿದೆ.
 • 1988ರ ಅರಣ್ಯ ನೀತಿಯ ಅನ್ವಯ ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ 33 ರಷ್ಟು ಅರಣ್ಯವಿರಬೇಕೆಂದು ನಿಗದಿಪಡಿಸಿದೆ.
 • ಜಗತ್ತಿನಲ್ಲೇ ಮೊದಲ ಬಾರಿಗೆ ಅರಣ್ಯ ನೀತಿಯನ್ನು ಜಾರಿಗೆ ತಂದ ದೇಶ ಭಾರತ.
 • 2003 ರಲ್ಲಿ ರಾಷ್ಟ್ರೀಯ ಅರಣ್ಯ ಆಯೋಗವನ್ನು ನೇಮಿಸಲಾಯಿತು.
 • 1972 ರಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
 • ಅರಣ್ಯವು ಸಂವಿಧಾನದ ಸಮವರ್ತಿ ಪಟ್ಟಿಗೆ ಸೇರ್ಪಡೆಯಾಗಿದೆ.
 • ಕರ್ನಾಟಕ ರಾಜ್ಯವು 1,91,791 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ 43,356.45 ಚ.ಕಿ.ಮೀ (22)ರಷ್ಟು ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದೆ.

ಕರ್ನಾಟಕದ ಅರಣ್ಯದ ವಿಭಾಗಗಳು

 1) ರಾಜ್ಯ ಮೀಸಲು ಅರಣ್ಯ 29.550.1923.800ಚ.ಕಿ.ಮೀ
 2) ಸುರಕ್ಷಿತ ಅರಣ 3.585.22ಚ.ಕಿ.ಮೀ
 3) ಅವರ್ಗೀಕೃತ ಅರಣ್ಯ 10.117.92ಚ.ಕಿ.ಮೀ
 4) ಗ್ರಾಮ ಅರಣ್ಯ 49,05ಚ.ಕಿ.ಮೀ
 5) ಖಾಸಗಿ ಅರಣ್ಯ 54.07ಚ.ಕಿ.ಮೀ
 ಒಟ್ಟು 43,356.45ಚ.ಕಿ.ಮೀ

ಕರ್ನಾಟಕದ ಜಿಲ್ಲೆಗಳಲ್ಲಿರುವ ಅರಣ್ಯ ಪ್ರದೇಶ (ಚ.ಕಿ.ಮೀ) (ಮೊದಲ ಸ್ಥಾನದಲ್ಲಿರುವ ಐದು ಜಿಲ್ಲೆಗಳು)

 ಜಿಲ್ಲೆಗಳುಹೊಂದಿರುವ ಅರಣ್ಯ ಪ್ರದೇಶ 
 1) ಉತ್ತರ ಕನ್ನಡ ಜಿಲ್ಲೆ 8,296.46 (ಚ.ಕಿ.ಮೀ)
 2) ಶಿವಮೊಗ್ಗ 6,631.44 (ಚ.ಕಿ.ಮೀ)
 3) ಕೊಡಗು 2,870.99 (ಚ.ಕಿ.ಮೀ)
 4) ಚಾಮರಾಜನಗರ 2,791.46 (ಚ.ಕಿ.ಮೀ)
 5) ಚಿಕ್ಕಮಗಳೂರು 2.756.51 (ಚ.ಕಿ.ಮೀ)

ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿದ ಜಿಲ್ಲೆಗಳು

 1) ವಿಜಯಪುರ 81.11 ಚ.ಕಿ.ಮೀ
 2) ಬೆಂಗಳೂರು ನಗರ 122.25ಚ.ಕಿ.ಮೀ
 3) ರಾಯಚೂರು 325.57ಚ.ಕಿ.ಮೀ

ಪ್ರಮುಖ ಉದ್ಯಾನವನಗಳು & ಅವುಗಳ ಪ್ರಾಮುಖ್ಯತೆಗಳು:

 • ದೇಶದ ಮೊದಲ ರಾಷ್ಟ್ರೀಯ ಉದ್ಯಾನವನ (1936) – ಜಿಮ್ ಕಾರ್ಬೆಟ್ (ಉತ್ತರಾಖಂಡ) ಇದನ್ನು ಆರಂಭದಲ್ಲಿ ಹೈಲೆ ರಾಷ್ಟ್ರೀಯ ಉದ್ಯಾನವನ ಎನ್ನುತ್ತಿದ್ದರು.
 • ಕಾಜಿರಂಗ ರಾಷ್ಟ್ರೀಯ ಉದ್ಯಾನವನ – ಅಸ್ಲಾಂ:- ಏಕಕೊಂಬಿನ ಫೇಂಡಾಮೃಗಗಳು, 1985 ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ,
 • ಮಾನಸ ರಾಷ್ಟ್ರೀಯ ಉದ್ಯಾನವನ – ಅಸ್ಲಾಂ:- 1985 ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದೆ.
 • ಗಿರ್ ರಾಷ್ಟ್ರೀಯ ಉದ್ಯಾನವನ – ಗುಜರಾತ್:- ಇದು ಏಷ್ಯಾದ ಸಿಂಹಗಳಿಗೆ ಪ್ರಸಿದ್ದಿಯಾಗಿದೆ.
 • ಭರತಪುರ ರಾಷ್ಟ್ರೀಯ ಉದ್ಯಾನವನ/ಕಿಯೋಲಾಡಿಯೋ: ರಾಜಸ್ಥಾನದಲ್ಲಿದೆ. 1985 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿದೆ.
 • ಚಿಟ್ಟೆಗಳ ಪಾರ್ಕ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪ್ರಸಿದ್ದಿ.
 • ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನವನ – ಪ. ಬಂಗಾಳ: ಇದು ಹುಲಿಗಳಿಗೆ ಪ್ರಸಿದ್ಧ.
 • ಬಂದಾವ್‌ಫ‌ ರಾಷ್ಟ್ರೀಯ ಉದ್ಯಾನವನ: ಇದು ಮಧ್ಯಪ್ರದೇಶದಲ್ಲಿದೆ. ಅತಿ ಹೆಚ್ಚು ಹುಲಿಗಳು & ಬಿಳಿ ಹುಲಿಗಳು ಕಂಡು ಬರುತ್ತವೆ
 • ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ ಪ್ರದೇಶ:- ವಿಶ್ವಪರಂಪರೆ ಪಟ್ಟಿಗೆ 2014 ರಲ್ಲಿ ಸೇರ್ಪಡೆ

  ಟೈಗರ್ ಪ್ರಾಜೆಕ್ಟ್ (1973) ಹಿಮಾಚಲ
 • ಹುಲಿಗಳ ಸಂರಕ್ಷಣೆಗಾಗಿ ಈ ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಳ್ಳಲಾಗಿದೆ.
 • ಪ್ರಸ್ತುತವಾಗಿ 49 ಹುಲಿ ಸಂರಕ್ಷಣಾ ತಾಣಗಳಿವೆ.
 • 1864 ರಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಇಂಪೀರಿಯಲ್ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನ್ನು ಸ್ಥಾಪಿಸಲಾಯಿತು.