Complete Net Neutrality Information in Kannada

Jun 13, 2022 10:51 am By Admin

ನೆಟ್‌ ನ್ಯೂಟ್ರಾಲಿಟಿ

ಇಂಟರ್‌ನೆಟ್ ಎಂಬುದು ಇಂದು ಒಂದು ರೀತಿಯ ಹೊಸ ವಿಶ್ವವನ್ನೇ ಸೃಷ್ಟಿಸಿದೆ. ಇಂದಿನ ಮನುಷ್ಯ ಜೀವನದ ಎಲ್ಲ ಭಾಗಗಳಲ್ಲಿಯೂ ಇಂಟರ್‌ನೆಟ್ ಹಾಸುಹೊಕ್ಕಾಗಿದೆ. ಇಂತಹ ಜಗತ್ತು ಕೇವಲ ಒಬ್ಬರಿಗೆ ಸಂಬಂಧಿಸಿದಲ್ಲ, ಅದು ಯಾರ ಸ್ವತ್ತು ಅಲ್ಲ ಅದು ಎಲ್ಲರ ಸ್ವತ್ತಾಗಬೇಕೆಂಬುದೇ ನೆಟ್ ನಿರಪೇಕ್ಷತೆಯ ಪ್ರಮುಖ ಪರಿಕಲ್ಪನೆಯಾಗಿದೆ. ಇಂಟರ್‌ನೆಟ್ ಎನ್ನುವ ಈ ಜಗತ್ತು ಯಾರ ಪರವಾಗಿಯೂ ಯಾವುದರ ಪರವಾಗಿಯೂ ಇರಬಾರದು ಅದು ಎಲ್ಲರಿಗೆ ಸಂಬಂಧಿಸಿದ ಎಲ್ಲರ ಅವಕಾಶಗಳಿಗೆ ಬಳಕೆಯಾಗುವ ಸಮಾನ ವೇದಿಕೆಯಾಗಬೇಕು ಎನ್ನುವುದೇ ಈ ನಟ್ ನ್ಯೂಟ್ರಾಲಿಟಿಯ ಪರಿಕಲ್ಪನೆಯಾಗಿದೆ. ಈ ನೆಟ್ ನ್ಯೂಟ್ರಾಲಿಟಿಯನ್ನು ಅಂತರ್ಜಾಲ ಸಮಾನತೆ, ಇಂಟರ್‌ನೆಟ್ ಸ್ಥಿರತೆ, ಸಮಾನ ಇಂಟರ್‌ನೆಟ್ ಬಳಕೆ ಎಂಬ ಹಲವು ಹೆಸರಿನಿಂದ ಕರೆಯಲಾಗುತ್ತದೆ.

ಹಿನ್ನಲೆ :-

1972, ಅಕ್ಟೋಬರ್‌ನಲ್ಲಿ ಅಮೆರಿಕಾದಲ್ಲಿ ಮೊದಲ ಬಾರಿಗೆ ಇಂಟರ್‌ನೆಟ್‌ ಬಳಕೆಗೆ ಬಂದಿತ್ತು. ವಿದ್ಯುತ್, ಪೆಟ್ರೋಲ್‌ನಂತೆ ಈ ಇಂಟರ್‌ನೆಟ್ ಕೂಡ ಒಂದು ಮಹಾನ್ ಆವಿಷ್ಕಾರವೇ ಸರಿ. 1998ರಲ್ಲಿ ಗೂಗಲ್ ಅಸ್ತಿತ್ವಕ್ಕೆ ಬಂದು ಜಗತ್ತಿನೆಲ್ಲೆಡೆ ಪಸರಿಸುವುದ ರೊಂದಿಗೆ ಜಗತ್ತಿನ ಏಕೀಕರಣಕ್ಕೆ ಬುನಾದಿ ಹಾಕಿ ದಂತಾಯಿತು. ಇಂದು ಈ ಇಡೀ ಜಗತ್ತು ಒಂದು ಇಂಟರ್‌ನೆಟ್‌ ಜಗತ್ತು ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. 2015ರಲ್ಲಿ ಫೇಸ್‌ಬುಕ್ ಸಂಸ್ಥೆಯು ಶ್ರೀ ಬೇಸಿಕ್ಸ್‌ (Free Basics) ಅಥವಾ ಇಂಟರ್‌ನೆಟ್. ಓಆರ್‌ಜಿ (Internet.org) ಎನ್ನು ವುದನ್ನು ಪ್ರಾರಂಭಿಸಿತು. ಇದು ಜನರಿಗೆ ತಮ್ಮ ಮೊಬೈಲ್ ಗಳಲ್ಲಿ ಯಾವುದೇ ಇಂಟರ್‌ನೆಟ್‌ ಬಳಕೆಯ ಶುಲ್ಕವಿಲ್ಲದೆ ಕೆಲವು ನಿಗದಿತ ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಸೌಲಭ್ಯವಾಗಿದೆ. ಇದರಲ್ಲಿ ಯೂಟೂಬ್, ಅಮೇಜಾನ್, ಫೇಸಬುಕ್ ಸೇರಿ ದಂತೆ ಕೆಲವೇ ಕೆಲವು ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ಅನಿಯಮಿತವಾಗಿ ಉಚಿತವಾಗಿ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಇದು ಪ್ರಥಮ ಬಾರಿಗೆ ನೆಟ್ ನಿರಪೇಕ್ಷತೆಯ ಪರವಾಗಿ ಧ್ವನಿಯೆತ್ತುವಂತೆ ಮಾಡಿತ್ತು. ಏಕೆಂದರೆ ಜನರು ಇತರ ಎಲ್ಲ ವೆಬ್‌ಸೈಟ್‌ನ್ನು ಬಿಟ್ಟು ಇವೇ ಕೆಲವು ವೆಬ್‌ಸೈಟ್‌ಗಳನ್ನು ಬಳಸುವುದಕ್ಕೆ ಪ್ರಾರಂಭಿಸಿ ದರು. ಇದು ಜಗತ್ತಿನಾದ್ಯಂತ ನೆಟ್ ನಿರಪೇಕ್ಷತೆಯ ಪರವಾಗಿ ಕೂಗು ಕೇಳುವಂತೆ ಮಾಡಿತ್ತು. ನಂತರ ಇದೇ ದಾರಿಯಲ್ಲಿ ಬಂದಂತಹ ಏರಟೆಲ್ ಕೂಡ ಝಿರೋ ಪ್ಲಾಟ್ ಫಾರ್ಮ್ (Airtel Zero) ಎನ್ನುವ
ಅಪ್ಲಿಕೇಶನ್‌ನ್ನು ಜಾರಿಗೆ ತಂದಿತ್ತು. ಇದು ಕೂಡ ಏರಟೆಲ್‌ನ ಗ್ರಾಹಕರಿಗೆ ಕೆಲವು ನಿಗದಿತ ವೆಬ್‌ಸೈಟ್‌ಗಳಿಗೆ ಉಚಿತವಾಗಿ ಪ್ರವೇಶಿಸುವ ಅವಕಾಶವನ್ನು ಒದಗಿಸುವ ಯೋಜನೆಯಾಗಿತ್ತು. ಆದರೆ ನಂತರದ ವಿರೋಧ ದಿಂದಾಗಿ ಈ ಯೋಜನೆಯನ್ನು ಕೈಬಿಡಲಾಯಿತು.

ನೆಟ್ ನಿರಪೇಕ್ಷತೆಯ ಅರ್ಥ :-

ನೆಟ್ ನಿರಪೇಕ್ಷತೆಯ ಬಗ್ಗೆ ಅತ್ಯಂತ ಸುಲಭವಾದ ವಾಕ್ಯವೆಂದರೆ ‘ಯಾರಿಗೂ ತಾರತಮ್ಯವಿಲ್ಲದ ಅಂತರ್ಜಾಲ ಒದಗಿಸುವುದು’. ಅಂದರೆ ಸಕಲರಿಗೂ ಸಮಾನವಾಗಿ ಇಂಟರ್‌ನೆಟ್‌ ಸೌಲಭ್ಯ ಲಭ್ಯವಾಗ ಬೇಕೆಂಬುದಾಗಿದೆ.

ಜ್ಞಾನದ ಕೋಶವಾಗಿರುವ ಅಂತರ್ಜಾಲವು ದೇಶದ ಪ್ರತಿಯೊಬ್ಬ ಪ್ರಜೆಗೆ ಯಾವುದೇ ನಿರ್ಬಂಧ ಗಳಲ್ಲಿದೆ ದೊರೆಯಬೇಕು ಎನ್ನುವುದೇ ನೆಟ್ ನಿರಪೇಕ್ಷತೆಯ ಪರಿಕಲ್ಪನೆಯಾಗಿದೆ. ಉದಾ: ನಾವೆಲ್ಲರೂ ಬೆಂಗಳೂರಿನ ರೇಸಕೋರ್ಸ್ ರಸ್ತೆಯಲ್ಲಿ ಸಾಗುತ್ತಿದ್ದೇವೆ ಎಂದುಕೊಳ್ಳಿ ಆಗ ಆ ರಸ್ತೆಯಲ್ಲಿ ಎಲ್ಲ ಜನರೂ ಸಮಾನವಾಗಿ ಸಾಗುವ ಅಧಿಕಾರ ಹೊಂದಿರುತ್ತಾರೆ. ಒಂದು ವೇಳೆ ಕೆಲವು ಜನರು ತಾವು ವೇಗವಾಗಿ ಸಾಗಬೇಕು ಅದಕ್ಕಾಗಿ ಹೆಚ್ಚು ಹಣ ಕೊಡುತ್ತೇವೆ ಎಂದು ತಿಳಿಸಿದಾಗ ಅವರಿಗೆ ಅದೇ ರಸ್ತೆಯಲ್ಲಿ ಪ್ರತ್ಯೇಕವಾದ ಮಾರ್ಗವನ್ನು ನಿರ್ಮಿಸಿ ಕೊಟ್ಟರೆ ಆಗ ಅದು ಸಮಾನತೆಗೆ ವಿರುದ್ಧವಾದಂತಾಗುತ್ತದೆ. ಈ ತತ್ವ ನೆಟ್ ನಿರಪೇಕ್ಷತೆಗೂ ಅನ್ವಯಿಸುತ್ತದೆ. ಅಂದರೆ ಅಂತರ್ಜಾಲ ವನ್ನು ಯಾವುದೇ ತಡೆಯಿಲ್ಲದೆ ಎಲ್ಲರಿಗೂ ಸಮಾನವಾಗಿ ಒದಗಿಸಿಕೊಡುವುದಾಗಿದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಯುಟೂಬ್‌ನ್ನೇ ಬಳಸಲಿ ಅಥವಾ ವಾಟ್ಸ್‌ ಆಪ್‌ನ್ನೇ ಬಳಸಲಿ ಅಥವಾ ಫೀಪ್‌ ಕಾರ್ಟ್‌ನ್ನೇ ಬಳಸಲಿ ಇವೆಲ್ಲ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗಳು ಸಮಾನ ವಾಗಿ, ಸಮಾನ ವೇಗದಲ್ಲಿ ಕಾರ್ಯ ನಿರ್ವಹಿಸಬೇಕು. ಆಗ ಅದು ನೆಟ್ ನಿರಪೇಕ್ಷತೆ ಆಗುತ್ತದೆ. ಒಂದು ವೇಳೆ ಯುಟೂಬ್‌ಗೆ ಮಾತ್ರವೇ ಹೆಚ್ಚು ವೇಗದ ಇಂಟರ್‌ನೆಟ್ ನೀಡಿ ಇತರ ವೆಬ್‌ಸೈಟ್‌ಗಳನ್ನು ಉದ್ದೇಶ ಪೂರ್ವಕವಾಗಿ ನಿಧಾನವಾಗುವಂತೆ ಮಾಡಿದರೆ ಆಗ ಅದು ನೆಟ್ ನಿರಪೇಕ್ಷತೆಗೆ ವಿರುದ್ಧವಾದಂತಾಗುತ್ತದೆ.
ಒಂದು ನಿರ್ದಿಷ್ಟ ಸೇವಾ ಪೂರೈಕೆದಾರರು (ಆ‍.ಎಸ್.ಪಿ- ಇಂಟರ್‌ನೆಟ್ ಸರ್ವಿಸ್ ಪ್ರೋವೈಡರ್) ಕೆಲವೇ ಕೆಲವು ಆಯ್ದ ತಾಣಗಳನ್ನು ಮಾತ್ರ ಉಚಿತವಾಗಿ ನೀಡಬಾರದು. ಎಲ್ಲ ಇಂಟರ್‌ನೆಟ್ ಸೇವಾ ಪೂರೈಕೆ ದಾರರು ಮುಕ್ತವಾಗಿ ಅಥವಾ ಏಕರೂಪದ ಶುಲ್ಕ ವಿಧಿಸುವ ಮೂಲಕ ಒಂದೇ ರೀತಿಯ ಸೇವೆ ನೀಡಬೇಕು ಎನ್ನುವುದೇ ಅಂತರ್ಜಾಲ ಸಮಾನತೆ ಅಥವಾ ನೆಟ್ ನಿರಪೇಕ್ಷತೆಯಾಗಿದೆ.

ನೆಟ್‌ ನಿರಪೇಕ್ಷತೆ ಪರವಾದವಾದಗಳು –
👉ಏಕಸ್ವಾಮ್ಯತ್ವ ಉಂಟಾಗುತ್ತದೆ ಇಂಟರ್‌ನೆಟ್‌ ಎನ್ನುವುದು ಎಲ್ಲ ಜನರ ಸ್ವತ್ತು. ಇದು ಕೆಲವೇ ಕೆಲವು ಜನರ ಅಥವಾ ಕಂಪನಿಗಳ ಸ್ವತ್ತಲ್ಲ. ಒಂದು ವೇಳೆ ನೆಟ್ ನಿರಪೇಕ್ಷತೆಗೆ ಅವಕಾಶ ನೀಡದಿದ್ದರೆ ಇಂಟರ್‌ನೆಟ್ ಜಗತ್ತಿನಲ್ಲಿ ಕೆಲವೇ ಕಂಪನಿಗಳ ಹಿಡಿತ ಉಂಟಾಗುತ್ತದೆ. ಮಹಾನಗರಗಳಲ್ಲಿ ಈಗಿರುವಂತಹ ಎಮ್.ಟಿ.ಎನ್. ಎಲ್, ಏಷಿಯಾನೆಟ್ ಇಂತಹ ಕೆಲವೇ ಕೆಲವು ಕಂಪನಿಗಳು ನೆಟ್ ನಿರಪೇಕ್ಷತೆ ಇರದಿದ್ದರೆ ಇಂಟರ್‌ನೆಟ್‌ನ ಏಕಸ್ವಾಮ್ಯತ್ವವನ್ನು ಹೊಂದುತ್ತವೆ. ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರ ಇಲ್ಲಿನ ಲಕ್ಷಾಂತರ ಕಂಪನಿಗಳು ಇಂದು ನೆಟ್ ಸಂಪರ್ಕವಿಲ್ಲದ ಕಾರ್ಯನಿರ್ವಹಿಸುವುದು ಸಾಧ್ಯವೇ ಇಲ್ಲ. ಇಂಟರ್ ನೆಟ್‌ನ್ನು ಒದಗಿಸುವಂತಹ ಆಯ್.ಎಸ್.ಪಿಗಳು ಕೆಲವೇ ಕೆಲವು ಕಂಪನಿಗಳಿಗೆ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ನೆಟ್ ಬ್ಯಾಂಡ್‌ವಿಡ್‌ಗಳನ್ನು ಒದಗಿಸುತ್ತವೆ. ಅದರಂತೆ ಇತರ ಕಂಪನಿಗಳ ನೆಟ್ ಅಥವಾ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದಕ್ಕೆ ಅವಶ್ಯಕ ವಾದ ಬ್ಯಾಂಡ್‌ ವಿಡ್‌ಗಳನ್ನು ಕಡಿಮೆ ಅಥವಾ ನಿಧಾನ ವನ್ನಾಗಿ ಮಾಡುತ್ತವೆ. ಇದರಿಂದ ಶ್ರೀಮಂತ ಅಥವಾ ಹೆಚ್ಚು ಕಂಪನಿಗಳ ಏಕಸ್ವಾಮ್ಯತ್ವ ಮಾತ್ರವೇ ಉಂಟಾಗುತ್ತದೆ.
👉ನೈತಿಕತೆಯ ಸಮಸ್ಯೆ – ಇಂಟರ್‌ನೆಟ್ ಎನ್ನುವುದು ಎಲ್ಲರಿಗೂ ಮೂಲಭೂತ ಅವಶ್ಯಕವಾದ ಸಾಧನ ವಾಗಿದೆ. ಇಂದು ಗ್ರಾಮದ ರೈತನಿಂದ ಹಿಡಿದೂ ಕಾರ್ಪೋರೆಟ್‌ ಕಂಪನಿಗಳು ಕೂಡ ಇಂಟರ್‌ನೆಟ್‌ನ್ನು ಬಳಸುತ್ತವೆ. ಮಾರುಕಟ್ಟೆ, ಆಡಳಿತ, ಸೇವೆಗಳು, ಮಾಹಿತಿ ಮುಂತಾದ ಕಡೆಗಳೆಲ್ಲ ಇಂದು ಅಂತರ್ಜಾಲ ಹಾಸುಹೊಕ್ಕಾಗಿದೆ. ಬಹುಶಃ ಮುಂದೊಂದು ದಿನ ಅಂತರ್ಜಾಲ ಇಲ್ಲದ ಬದುಕು ಸಾಧ್ಯವೇ ಇಲ್ಲ. ಎನ್ನುವಂತಹ ಸ್ಥಿತಿ ಬರಬಹುದು. ಇಂತಹ ಸಂದರ್ಭ ದಲ್ಲಿ ನಾವು ಕೆಲವೇ ಕೆಲವು ತಾಣಗಳಿಗೆ ಪ್ರಾಶಸ್ತ್ರ ನೀಡುವಂತಹ, ಕೆಲವೇ ಕೆಲವು ಕಂಪನಿಗಳಿಗೆ ಪ್ರಾಶಸ್ತ್ರ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತಂದರೆ ಅದು ನೈತಿಕ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ. ಪ್ರತಿಯೊಂದು ಸೇವೆಯನ್ನು ಒಂದೇ ಒಂದು ಕಂಪನಿ ಅಥವಾ ವೆಬ್‌ಸೈಟ್ ಒದಗಿಸಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿ ಲಾಭ ಮಾಡಿ ಕೊಡಲು ಒದಗಿಸುವಂತಹ ಹೆಚ್ಚು ಪ್ರಾಶಸ್ತ್ರವು ನೈತಿಕ ವ್ಯಾಪಾರದ ಉದ್ದೇಶವನ್ನು ನಾಶಮಾಡುತ್ತದೆ.
👉ಸಣ್ಣ ಕಂಪನಿಗಳ ನಾಶ ಭಾರತದಂತಹ ರಾಷ್ಟ್ರದಲ್ಲಿ ಅಮೇಜಾನ್, ಫೀಪ್‌ಕಾರ್ಟ್‌ನಂತಹ ಬೃಹತ್ ಉದ್ಯಮಗಳ ಎದುರು ಈಗಾಗಲೇ ಹಲವು ಕಂಪನಿ ಗಳು ನಾಶವಾಗಿವೆ. ಒಂದು ವೇಳೆ ಇಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರವೇ ಆದ್ಯತೆಯನ್ನು ನೀಡುತ್ತಾ ಹೋದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಭವಿಷ್ಯವು ಸರ್ವನಾಶವಾಗುತ್ತದೆ. ಸಣ್ಣ ಕಂಪನಿಗಳ ವೆಬ್‌ಸೈಟ್ನ್ನು ಆಯ್.ಎಸ್.ಪಿಗಳು ನಿಧಾನವಾಗುವಂತೆ ಮಾಡಿ ಕೇವಲ ಹಣ ನೀಡುವ ವೆಬ್‌ಸೈಟ್‌ಗಳಿಗೆ ಆದ್ಯತೆ ನೀಡಿದರೆ ಆಗ ಇದೊಂದು ರೀತಿಯಲ್ಲಿ ಚಿಕ್ಕ ಕಂಪನಿಗಳ ಬೆಳವಣಿಗೆಗೆ ಕೊಡಲಿ ಪೆಟ್ಟು ಹಾಕಿದಂತಾಗುತ್ತದೆ. ನೆಟ್ ನಿರಪೇಕ್ಷತೆ ಇರದಿದ್ದರೆ ನೂತನ ಹಾಗೂ ವಿಶಿಷ್ಟ ಸೇವೆ ಒದಗಿಸು ವಂತಹ ಬೆಳೆಯುತ್ತಿರುವ ಕಂಪನಿಗಳ ಪಾಲಿಗೆ ಇದೊಂದು ರೀತಿಯಲ್ಲಿ ಸರ್ವನಾಶಕ್ಕೆ ದೂಡು ವಂತಹ ದಾರಿಯಾಗುತ್ತದೆ.

ಜನರ ಆಯ್ಕೆಯ ಮೇಲೆ ಪ್ರಭಾವ – ಪ್ರತಿ ನಿತ್ಯ ನಾವು ನೋಡುವಂತಹ ಸಮೂಹ ಮಾಧ್ಯಮಗಳ ಹಿಂದೆ ಒಂದೊಂದು ರೀತಿಯ ಸಿದ್ಧಾಂತಗಳಿವೆ. ನಮ್ಮ ಮನಸ್ಸಿನ ಮೇಲೆ ಈ ಮಾಧ್ಯಮಗಳ ಪ್ರಭಾವ ಅಪಾರ ವಾಗಿದೆ. ಯಾರು ಬಲಿಷ್ಠರೋ ಅಂತಹವರಿಗೆ ಮಾತ್ರ ಹೆಚ್ಚು ಮನ್ನಣೆ ನೀಡುವಂತಹ ವೆಬ್‌ಸೈಟ್ ಅಥವಾ ಅಂತರ್ಜಾಲ ತಾಣಗಳಿಗೆ ಪ್ರಾಶಸ್ತ್ರ ದೊರೆತರೆ ಆಗ ಸ್ವತಂತ್ರ ವಿಚಾರಶೀಲತೆಗೆ ಹಾಗೂ ಜನರ ಸ್ವತಂತ್ರ ಆಯ್ಕೆಗೆ ಬೆಲೆ ಇಲ್ಲದಂತಾಗುತ್ತದೆ. ವ್ಯಾಪಾರ ದೃಷ್ಟಿ ಯಿಂದಲೂ ಕೂಡ ಇದು ಹಾನಿಕರವೇ. ಜನರಿಗೆ ಯಾವ ವಸ್ತುಗಳು ಬೇಕೊ ಅದನ್ನು ಪಡೆಯಬೇಕೇ ಹೊರತು ಕೆಲವು ನಿರ್ದಿಷ್ಟ ಕಂಪನಿಗಳ ಸರಕುಗಳನ್ನಲ್ಲ. ಏಕೆಂದರೆ ಯಾವ ಕಂಪನಿಗಳ ಸೇವೆಗಳು ಬೇಗ ದೊರೆಯುವವೋ ಅಂತಹ ಕಂಪನಿಗಳ ಸ್ವತ್ತುಗಳನ್ನೇ ನಾವು ಹೆಚ್ಚಾಗಿ ಬಳಸುತ್ತೇವೆ. ಸುಮ್ಮನೆ ಹೀಗೊಂದು ವಿಚಾರ ಮಾಡಿ ನಾವು ಕೇವಲ ನಿರಂತರವಾಗಿ ಒಂದೇ ಒಂದು ನ್ಯೂಸ್ ಚಾನೆಲ್‌ನ್ನು ನೋಡುವಂತೆ ಮಾಡಿ ಕೊಂಡರೆ ಆಗ ನಮ್ಮ ವಿಚಾರ ಸಾಮರ್ಥ್ಯ ಹಾಗೂ ದೃಷ್ಟಿಕೋನ ಅದೇ ನ್ಯೂಸ್ ಚಾನೆಲ್ ಪರವಾಗಿ ಇರುತ್ತದೆ. ಅದು ಏನನ್ನು ತೋರಿಸುತ್ತದೆಯೋ ಅದನ್ನು ಮಾತ್ರವೇ ನಾವು ಸತ್ಯವೆಂದು ತಿಳಿಯ ಬೇಕಾಗುತ್ತದೆ. ಇದು ದೇಶದ ವಿಚಾರಶೀಲತೆಯ ಅಂತ್ಯಕ್ಕೆ ಭಾರತದ ಜನರ ತಿಳುವಳಿಕೆಯನ್ನು ಮಿತಿ ಗೊಳಿಸುವಂತಹ ದುರಂತಕ್ಕೆ ದಾರಿ ಮಾಡಿಕೊಡುತ್ತದೆ.

👉ದೇಶದ ಹಿತಾಶಕ್ತಿಗೆ ಪೂರಕವಲ್ಲ – ಯಾವುದೇ ಒಂದು ದೇಶವು ಸಮರ್ಥವಾಗಿ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಜನರಿಗೆ ವಿಫುಲ ಅವಕಾಶಗಳನ್ನು ನೀಡಬೇಕು. ಶಿಕ್ಷಣವೇ ಇರಲಿ, ಇಲ್ಲ ವ್ಯಾಪಾರವೇ ಇರಲಿ, ಸಮೂಹ ಮಾಧ್ಯಮಗಳೇ ಇರಲಿ ಅಥವಾ ಸಾರ್ವಜನಿಕ ಉದ್ಯಮಗಳೇ ಇರಲಿ ಇವೆಲ್ಲವೂ ಒಂದು ರೀತಿಯಲ್ಲಿ ಇಂಟರ್‌ನೆಟ್ ಮೇಲೆ ಅವಲಂಬಿತವಾಗಿವೆ. ಈ ಯಾವ ಕ್ಷೇತ್ರಗಳೂ ಸಹ ಇಂಟರ್‌ನೆಟ್ ಹೊರತು ಪಡಿಸಿಲ್ಲ. ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಮುಕ್ತ ನೆಟ್‌ಗೆ ಅವಕಾಶ ಕೊಡಬೇಕು ಒಂದು ವೇಳೆ ಕೊಡದಿದ್ದರೆ ಅದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗು ವುದಿಲ್ಲ. ಎಲ್ಲ ಹಕ್ಕುಗಳು, ಎಲ್ಲ ಅವಕಾಶಗಳು ಎಲ್ಲರಿಗೂ ಮುಕ್ತವಾಗಿ ದೊರೆಯಬೇಕು ಎನ್ನುವುದು ಇದರ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ನೆಟ್ ನಿರಪೇಕ್ಷತೆ ಅತಿ ಅವಶ್ಯಕವಾಗಿದೆ.

👉 ಅಸಮಾನತೆಯ ಸೃಷ್ಟಿ – ನೆಟ್ ನಿರಪೇಕ್ಷತೆ ಇರದಿದ್ದರೆ ವಿವಿದೋದ್ದೇಶ ಕ್ಷೇತ್ರಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ವ್ಯಾಪಾರ ಕ್ಷೇತ್ರಗಳಲ್ಲಿ ಅಸಮಾನತೆ
ಸೃಷ್ಟಿಯಾಗುತ್ತದೆ. ಉದಾ : ಇಂಟರ್‌ನೆಟ್ ಬಳಸು ವಾಗ ಕೇವಲ ಅಮೇಜಾನ್ ವೆಬ್‌ಸೈಟ್‌ಗೆ ಮಾತ್ರವೇ ವೇಗವನ್ನು ನೀಡಿ ಪ್ಲಿಪ್‌ಕಾರ್ಟ್‌ ವೇಗವನ್ನು ನಿಧಾನ ಗೊಳಿಸಿದರೆ ಆಗ ಬಹುತೇಕ ಜನರು ಅಮೇಜಾನ್‌ನ್ನೇ ಬಳಸುವರು. ಹಾಗೆಯೇ ಈ ಫ್ಲಿಪ್ ಕಾರ್ಟ್ ಅಮೇಜಾನ್‌ನಂತೆ ದೇಶದಲ್ಲಿಂದು ನೂರಾರು ವೆಬ್‌ಸೈಟ್‌ಗಳು ಇರುವವು ಇವೆಲ್ಲವೂ ಕೂಡಾ ವ್ಯಾಪಾರದ ಅಸಮಾನತೆಗೆ ಒಳಪಡಬೇಕಾಗುತ್ತವೆ. ಏಕೆಂದರೆ ವ್ಯಾಪಾರದಲ್ಲಿ ಪೈಪೋಟಿ ಇರಬೇಕು ಆದರೆ ಅಸಮಾನತೆ ಇರಬಾರದು.

👉 ಅಧಿಕ ವ್ಯಾಪಾರಶಾಹಿಗೆ ದಾರಿ- ನೆಟ್‌ನ್ನು ಹೆಚ್ಚಿಗೆ ಬಳಸಿದಂತೆ ಅಧಿಕ ಹಣಕ್ಕಾಗಿ ಆಯ್.ಎಸ್.ಪಿಗಳು ಬೇಡಿಕೆ ಒಡ್ಡಬಹುದು. ಒಂದು ವೇಳೆ ಹಣ ನೀಡದಿದ್ದರೆ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗಳ ಕಾರ್ಯಗಳ ಮೇಲೆ ಋಣಾತ್ಮಕ ಪ್ರಭಾವ ಉಂಟಾಗುವಂತೆ ಮಾಡಬಹುದು. ಇದರಿಂದ ಕೇವಲ ವ್ಯಾಪಾರಶಾಹಿ ಸಂಸ್ಕೃತಿ ಬೆಳೆಯುತ್ತದೆ ಹೊರತು ನಿಜವಾದ ನೈಜ ಸಮಾನ ವ್ಯಾಪಾರದ ಅವಕಾಶ ಇಲ್ಲ ವಾಗುತ್ತದೆ. ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಇಂದು ವ್ಯಾಪಾರಶಾಹಿ ಸಂಸ್ಕೃತಿಯನ್ನು ಬೆಳೆಸಿ ಕೊಂಡಿರುವುದರಿಂದ ಈಗಾಗಲೇ ಜಗತ್ತಿನಲ್ಲಿ ಶ್ರೀಮಂತರು ಮಾತ್ರವೇ ಮತ್ತಷ್ಟು ಶ್ರೀಮಂತ ರಾಗುತ್ತಿರುವುದು ಹಾಗೂ ಬಡವರು ಮತ್ತಷ್ಟು ಬಡವ ರಾಗುತ್ತಿರುವುದು ಕಂಡುಬರುತ್ತಿದೆ. ಜನರ ಮೂಲ ಅವಶ್ಯಕತೆಗಳಲ್ಲಿ ಸ್ಥಾನ ಪಡೆಯುತ್ತಿರುವ ಇಂಟರ್ ನೆಟ್‌ಗೂ ಕೂಡ ವ್ಯಾಪಾರಶಾಹಿಗಳ ಕಣ್ಣು ಬಿದ್ದರೆ ಅದರ ಪರಿಣಾಮ ಹೇಳಲಿಕ್ಕಾಗದು. ಆದ್ದರಿಂದ ನೆಟ್ ನಿರಪೇಕ್ಷತೆ ಬೇಕು.

👉 ತಂತ್ರಜ್ಞಾನದ ಬೆಳವಣಿಗೆಗೆ ಅಡ್ಡಿ – ನೆಟ್ ನಿರಪೇಕ್ಷತೆ ಇರದಿದ್ದರೆ ತಂತ್ರಜ್ಞಾನ ಎಂಬ ಮಹಾ ಜ್ಞಾನಸಾಗರವು ಕೆಲವೆ ದಿಕ್ಕುಗಳಲ್ಲಿ ಪಸರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ಪ್ರದೇಶಕ್ಕೂ ಅವಶ್ಯಕವಾದ ಈ ಜ್ಞಾನ ಸಾಗರವು ನಿರ್ದಿಷ್ಟ ವೆಬ್‌ಸೈಟ್‌ಗಳಿಗೆ ಅಥವಾ ಅಧಿಕ ಲಾಭವಾದ ಕ್ಷೇತ್ರಕ್ಕೆ ಮಾತ್ರವೇ ಹೆಚ್ಚು ಸೀಮಿತ ವಾಗುತ್ತದೆ. ಏಕೆಂದರೆ ಇಂಟರ್‌ನೆಟ್‌ನ್ನು ಒದಗಿಸುವ ಆಯ್.ಎಸ್.ಪಿಗಳು ತಮಗೆ ಲಾಭದಾಯಕವಾದ ಕ್ಷೇತ್ರಗಳಿಗೆ ಮಾತ್ರವೇ ಆದ್ಯತೆ ನೀಡುತ್ತವೆ. ಇದರಿಂದ ಸಮಪರ್ಕವಾದ ತಂತ್ರಜ್ಞಾನದ ಬೆಳವಣಿಗೆ ಸಾಧ್ಯ ವಾಗುವುದಿಲ್ಲ.


ನೆಟ್ ನಿರಪೇಕ್ಷತೆ ಬೇಡ ಎನ್ನುವವರ ವಾದಗಳು :

ಭಾರತ ಒಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಇಲ್ಲಿನ ಜನಸಂಖ್ಯೆ ಈಗಾಗಲೇ ಅತಿಯಾಗಿ ಬೆಳೆದು ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇಂದಿಗೂ ಕೂಡ ದೇಶದ 25% ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಇಂಟರ್‌ನೆಟ್‌ ಪೂರೈಕೆ ಮಾಡುವ ಕಂಪನಿಗಳು ವಿಕಿಪಿಡಿಯಾ, ಎನ್‌ಸೈಕ್ಲೋಪಿಡಿಯಾ, ಸರ್ಕಾರದ ವೆಬ್‌ಸೈಟ್‌ ಸೇರಿದಂತೆ ಇನ್ನಿತರ ಕೆಲವು ವೆಬ್‌ಸೈಟ್‌ಗಳನ್ನು ಯಾವುದೇ ಶುಲ್ಕ ವಿಧಿಸದೆ ಉಚಿತವಾಗಿ ಎಲ್ಲರಿಗೂ ದೊರೆಯುವಂತೆ ಮಾಡಿದರೆ ಅದು ತಪ್ಪಲ್ಲ ಬದಲಾಗಿ ಭಾರತದ ಜನರಿಗೆ ಅವಕಾಶ ಒದಗಿಸಿದಂತಾಗುತ್ತದೆ ಎಂಬುದು ನೆಟ್ ನಿರಪೇಕ್ಷತೆ ಇರಬಾರದು ಎನ್ನುವವರ ವಾದವಾಗಿದೆ. ಯಾವುದೇ ಶುಲ್ಕವಿಲ್ಲದೆ ಜನರಿಗೆ ಅವಶ್ಯಕ ವಾದ ಕೆಲವು ವೆಬ್‌ಸೈಟ್ ಅಥವಾ ಜಾಲತಾಣಗಳನ್ನು ಉಚಿತವಾಗಿ ನೀಡುವುದರಲ್ಲಿ ತಪ್ಪೇನಿದೆ ಎನ್ನುವುದು ಇವರ ಪ್ರಮುಖ ವಾದವಾಗಿದೆ.
ಸರ್ಕಾರ ಜನರಿಗೆ ವಿದ್ಯುತ್ ಸೌಲಭ್ಯ, ಗ್ಯಾಸ್ ಸೌಲಭ್ಯ ಒದಗಿಸುತ್ತದೆ. ಇವು ಕೂಡ ಮೂಲ ಸೌಕರ್ಯಗಳೇ ಆದರೆ ಯಾರಿಗೆ ಹೆಚ್ಚು ಬೇಕು ಅವರಿಗೆ ಹೆಚ್ಚು ಶುಲ್ಕ ವಿಧಿಸುತ್ತದೆ ಹಾಗೂ ಅದೇ ರೀತಿ ಪೂರೈಕೆ ಯನ್ನು ಮಾಡುತ್ತದೆ. ಬಡವರ ಮನೆಗಳಿಗಿಂತ ಶ್ರೀಮಂತ ಕಂಪನಿ ಗಳ ಬಾಗಿಲಿಗೆ ಇಂತಹ ಸೌಲಭ್ಯಗಳು ಹೆಚ್ಚು ಹೋಗುತ್ತವೆ. ಅಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಸಮಾನತೆಯ ದೃಷ್ಟಿಕೋನ ಕಂಡು ಬರುವುದಿಲ್ಲ. ಇದೇ ತತ್ವವನ್ನು ಇಂಟರ್‌ನೆಟ್ವಕ್ಕೂ ಅನ್ವಯಿಸಬಹುದು. ಯಾರಿಗೆ ಹೆಚ್ಚು ವೇಗ ಬೇಕೊ ಅವರು ಹೆಚ್ಚು ಹಣ ಕೊಟ್ಟು ಖರೀದಿಸುವುದರಲ್ಲಿ ತಪ್ಪೇನಿದೆ ಎಂಬುದು? ಅವಶ್ಯಕತೆಗೆ ತಕ್ಕಂತೆ ಜನರು ತಮಗೆ ಬೇಕಾದ ಸೌಲಭ್ಯ ಪಡೆಯು ವಂತಾಗಬೇಕು ಎನ್ನುವುದು ಎಲ್ಲೆಡೆಯೂ ಎಲ್ಲ ಕ್ಷೇತ್ರ ಗಳಲ್ಲಿಯೂ ಅನ್ವಯಿಸುವಂತಹದು. ಆದ್ದರಿಂದ ನೆಟ್ ನಿರಪೇಕ್ಷತೆ ಬೇಡವೆಂದು ಹೇಳಲಾಗುತ್ತಿದೆ.
ಇಂದು ಜಗತ್ತು ಮುಕ್ತ ಆರ್ಥಿಕ ವ್ಯವಸ್ಥೆಯೆಡೆಗೆ ತೆರೆದುಕೊಳ್ಳುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ
ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಿ ಮುಕ್ತ ಪೈಪೋಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ

ಹೊಂದುತ್ತಿರುವಂತಹ ಇಂಟರ್‌ನೆಟ್‌ ಜಗತ್ತಿಗೂ ಕೂಡ ಈ ತತ್ವ ಅನ್ವಯವಾಗಬೇಕು. ಸರ್ಕಾರದ ಹಸ್ತಕ್ಷೇಪದಿಂದ ಇದನ್ನು ತಪ್ಪಿಸಿ ಮುಕ್ತ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಏಕೆಂದರೆ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ಕಂಪನಿಗಳು ತಮ್ಮ ಪೈಪೋಟಿಯನ್ನು ಉಳಿಸಿಕೊಂಡು ಲಾಭ ಪಡೆಯುವುದರಲ್ಲಿ ತಪ್ಪೇನಿದೆ? ಎನ್ನುವುದು ಈ ನೆಟ್ ನಿರಪೇಕ್ಷತೆ ಬೇಡ ಎನ್ನುವವರ ಒಂದು ಪ್ರಮುಖವಾದ ವಾದವಾಗಿದೆ.
ಇಂಟರ್‌ನೆಟ್‌ನ್ನು ಪೂರೈಸುತ್ತಿರುವ ಉದ್ಯಮಗಳು ಅಂದರೆ ಸರ್ವಿಸ್ ಪ್ರೋವೈಡರ್‌ಗಳು ಹೇಳುವ ಪ್ರಕಾರ ಇದು ಈ ಕ್ಷೇತ್ರದಲ್ಲಿನ ಉದ್ಯಮಕ್ಕೆ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ. ಈಗಾಗಲೇ ಜಿಯೋ ಬಂದ ನಂತರದಲ್ಲಿ ಹಲವಾರು ಟೆಲಿಕಾಮ್ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತವೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಮಿತಿಯನ್ನು ಇವುಗಳ ಮೇಲೆ ವಿಧಿಸಿದ್ದೇ ಆದರೆ ಅದು ಮತ್ತಷ್ಟು ಹಾನಿಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ನೆಟ್ ನಿರಪೇಕ್ಷತೆ ಅಥವಾ ಅಂತರ್ಜಾಲ ತಾಟಸ್ಥತೆ ಇರಬಾರದು ಎಂದು ಇವರು ವಾದಮಾಡುತ್ತಿದ್ದಾರೆ.

👉: ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿ :👈

2015ರ ನಂತರ ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿಯ ಬಗ್ಗೆ ಬೇಡಿಕೆ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಏರಟೆಲ್, ವಾಟ್ಸ್‌ ಆಪ್, ಸೈಪ್ ಸೇರಿ ದಂತೆ ಹಲವು ಕಂಪನಿಗಳು ತಾವು ಒದಗಿಸುವ ವಾಯ್ ಮೇಲ್ ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದಾಗಿ ಹೇಳಿದವು. ಇದು ದೇಶದಾದ್ಯಂತ ತೀವ್ರ ಆನ್‌ಲೈನ್ ಚಳುವಳಿಗೆ ದಾರಿಮಾಡಿಕೊಟ್ಟಿತು. ಇದೇ ಸಂದರ್ಭದಲ್ಲಿ ಫೇಸ್‌ಬುಕ್ ಸಹ ತಾನು ಪ್ರೀಬೇಸಿಕ್ಸ್ ಪರವಾಗಿ ಇರುವು ದಾಗಿ ತಿಳಿಸಿದಾಗ ಈ ಚಳುವಳಿಯು ಮತ್ತಷ್ಟು ತೀವ್ರತೆ ಯನ್ನು ಪಡೆದುಕೊಂಡಿತು. 2016ರಲ್ಲಿ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯು (ಟ್ರಾಯ್)ನೆಟ್ ನಿರಪೇಕ್ಷತೆಯ ಪರವಾದ ತನ್ನದೇ ಆದ ನಿಯಮಗಳನ್ನು ಜಾರಿಗೆ ತಂದಿತು.