Computer Literacy for KPSC Exams

May 30, 2022 09:51 am By Admin

👉ಕಂಪ್ಯೂಟರ್‌ನ ಸಂಪೂರ್ಣ ಮಾಹಿತಿ👈

  • ಕಂಪ್ಯೂಟರ್ ಎಂಬುದು ಒಂದು ವಿದ್ಯುನ್ಮಾನ ಸಾಧನವಾಗಿದ್ದು, ನಾವು ಒದಗಿಸುವ ದತ್ತಾಂಶ ಅಥವಾ ಇನ್ಪುಟ್ ಅನ್ನು ಸ್ವೀಕರಿಸಿ ನಾವು ನೀಡಿದ ನಿರ್ದೇಶನ ಅಥವಾ ಸೂಚನೆ ಆಧರಿಸಿ ಅಪೇಕ್ಷಿತ ಫಲಿತಾಂಶ ನೀಡುವ ಸಾಧನ ಅಥವಾ ಯಂತ್ರವಾಗಿದೆ.
  • ಸೂಚನೆಗಳನ್ನು ಆಧರಿಸಿ ಕಂಪ್ಯೂಟರ್ ಕಾರ್ಯ ನಿರ್ವಹಿಸುವುದನ್ನು ಕಾರ್ಯಕ್ರಮ (Programme) ಎನ್ನುವರು.
  • ಕಂಪ್ಯೂಟರ್ ಇನ್‌ಪುಟ್ ಮೂಲಕ ದತ್ತಾಂಶ ಸಂಗ್ರಹಿಸಿ, ಅದನ್ನು ಪ್ರಕ್ರಿಯೆಗೊಳಿಸಿ ಮತ್ತು ನಿರ್ಧಿಷ್ಟ ಜಾಗದಲ್ಲಿ ಸಂಗ್ರಹಿಸಿಡುವ ಸಾಧನವಾಗಿದೆ.
  • ಪ್ರಸ್ತುತವಾಗಿ ಕಂಪ್ಯೂಟರ್ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಆಗಿದೆ.

👉ಕಂಪ್ಯೂಟರ್ ಪರಿಚಯ (General Introduction) 👈

  • ಇನ್‌ಪುಟ್ ಅನ್ನು ಔಟ್‌ಪುಟ್ ಆಗಿ ಪರಿವರ್ತಿಸುವುದು ಸಿಪಿಯು.
  • ಕಂಪ್ಯೂಟರ್ ಒಂದು – ಎಲೆಕ್ಟ್ರಾನಿಕ್ ಯಂತ್ರವಾಗಿದೆ. (Electronic Machine)
  • ಕಂಪ್ಯೂಟರ್‌ನ ಒಳಗೆ ಹೋಗುವ ಮಾಹಿತಿಯನ್ನು ಹೀಗೆಂದು ಕರೆಯುತ್ತಾರೆ – ಇನ್‌ಪುಟ್ (Input)
  • ಸಿಪಿಯು (CPU)ನ ವಿಸ್ತ್ರತ ರೂಪ-ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್
  • ಕಂಪ್ಯೂಟರ್‌ನ ಮೆದುಳು ಎಂದು ಕರೆಯಲ್ಪಡುವುದು – ಸಿ.ಪಿ.ಯು
  • ಸಂಸ್ಕರಿಸಿದ ದತ್ತಾಂಶವನ್ನು ಹೀಗೆಂದು ಕರೆಯುತ್ತಾರೆ – ಔಟ್‌ಪುಟ್
  • ಇನ್ ಮಟ್ ಸಾಧನಗಳ ಮೂಲಕ ಗಣಕಯಂತ್ರಕ್ಕೆ ನೀಡಿದ ಮಾಹಿತಿಯು ಕೇಂದ್ರೀಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆಯಾಗುತ್ತದೆ.
  • ಸಂಸ್ಕರಣೆ (Process)ಯು ಕಂಪ್ಯೂಟರ್‌ನ ಯಾವ ಭಾಗದಲ್ಲಿ ನಡೆಯುತ್ತದೆ – ಸಿಪಿಯು
  • ಸಂಸ್ಕರಣೆಯು ಒಂದು ಆಂತರಿಕ ಕಾರ್ಯವಾಗಿದೆ.
  • ಇನ್‌ಮಟ್’ ಮೂಲಕ ಗಣಕಯಂತ್ರಕ್ಕೆ ಒದಗಿಸಿದ ಮಾಹಿತಿಗಳನ್ನು ಸಂಸ್ಕರಿಸಿದ ನಂತರ ಗಣಕಯಂತ್ರವು ನೀಡುವ ಫಲಿತಾಂಶ ನಿರ್ಗಮಿತ (Output)
  • ಔಟ್‌ಪುಟ್ ಯಾವ ರೂಪದಲ್ಲಿರುತ್ತದೆ – ಪಠ್ಯ, ಚಿತ್ರ ಹಾಗೂ ಶಬ್ಧ ರೂಪದಲ್ಲಿರಬಹುದು.
  • ನಾವು ರಚಿಸಿದ ಚಿತ್ರ ಅಥವಾ ಸಂಗ್ರಹಿಸಿದ ಧ್ವನಿ ಮುದ್ರಕಗಳನ್ನು ಬಹಳ ದಿನಗಳ ನಂತರ ಬಳಕೆ ಮಾಡಬಹುದು. ಇದನ್ನು ಸಂಗ್ರಹಣೆ (Storage) ಎನ್ನುವರು.
  • ಸಂಗ್ರಹಣೆಯನ್ನು ಸಂಗ್ರಹ ಸಾಧನಗಳಲ್ಲಿ ಸಂಗ್ರಹಿಸಿಟ್ಟಿರುತ್ತದೆ.
  • ಚಿಕ್ಕದಾದ ಹಾಗೂ ಒಬ್ಬನೇ ಬಳಸಬಹುದಾದಂತಹ ಕಂಪ್ಯೂಟರ್‌ನ್ನು ಹೀಗೆಂದು ಕರೆಯುತ್ತಾರೆ – ವೈಯಕ್ತಿಕ ಕಂಪ್ಯೂಟರ್ (Personal Computer)
  • ವೈಯಕ್ತಿಕ ಕಂಪ್ಯೂಟರ್ ಯಾವ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ – ಮೈಕ್ರೋಪ್ರೊಸೆಸರ್ (Microprocessor)
  • ಗಣಕಯಂತ್ರದ ಭೌತಿಕ ಭಾಗಗಳನ್ನು ಹೀಗೆಂದು ಕರೆಯುತ್ತಾರೆ – ಯಂತ್ರಾಂಶ (Hardware)
  • ಒಂದು ಕೆಲಸವನ್ನು ಮಾಡಲು ಕಂಪ್ಯೂಟರ್‌ಗೆ ನೀಡುವ ಆಜ್ಞೆಗಳು ನಿರ್ದೇಶನಗಳ ಸಂಕಲನಕ್ಕೆ ಹೀಗೆಂದು ಕರೆಯುತ್ತಾರೆ-ಪ್ರೋಗ್ರಾಂ (Program)
  • ಪ್ರೋಗ್ರಾಂಗಳನ್ನು ನಿರ್ವಹಿಸಬಲ್ಲ ಕಂಪ್ಯೂಟರ್‌ಗೆ ಹೀಗೆಂದು ಕರೆಯುತ್ತಾರೆ – ಪ್ರೋಗ್ರಾಮಬಲ್ ಕಂಪ್ಯೂಟರ್ (Programmable computer)
  • ಕಂಪ್ಯೂಟರ್‌ನ ಮೂಲ – ಅಬಾಕಸ್
  • ಕಂಪ್ಯೂಟರ್ ಜನಕ – ಚಾರ್ಲ್ಸ್ ಬ್ಯಾಬೇಜ್
  • ಗಣಕಯಂತ್ರದ ಜನಕ ಚಾರ್ಲ್ಸ್ ಬ್ಯಾಬೇಜ್ ಅವರು ಬ್ರಿಟಿಷ್ – ಸಂಶೋಧಕ, ಮೆಕ್ಯಾನಿಕಲ್ ಇಂಜಿನಿಯರ್.
  • ಗಣಕಯಂತ್ರಕ್ಕೆ ಮೊದಲ ಬಾರಿಗೆ ಪ್ರೋಗ್ರಾಂನ್ನು ಒದಗಿಸಿದವರು – ಆಡಾ ಅಗುಸ್ಟಾ.
  • ಪ್ರಪಂಚದ ಮೊದಲ ಪ್ರೋಗ್ರಾಮರ್ ಆಡಾ ಅಗುಸ್ಟಾ (ಲಂಡನ್)
  • ಚಾರ್ಲ್ಸ್ ಬ್ಯಾಬೇಜ್ ಅವರು ಅಭಿವೃದ್ಧಿ ಪಡಿಸಿದ ಮೆಕಾನಿಕಲ್ ಕಂಪ್ಯೂಟರ್‌ಗೆ ಕಾರ್ಯ ನಿರ್ದೇಶನಗಳನ್ನು ಬರೆದವರು – ಆಡಾ ಅಗುಸ್ಟಾ ಎಂಬ ಮಹಿಳೆ
  • ಗಣಕಯಂತ್ರಕ್ಕೆ ಮಾಹಿತಿಯನ್ನು ನೀಡುವ ವ್ಯಕ್ತಿಯನ್ನು ಹೀಗೆಂದು ಕರೆಯುತ್ತಾರೆ – ಮಾನವಾಂಶ ಅಥವಾ ಬಳಕೆದಾರ (ಅಂದರೆ ಗಣಕಯಂತ್ರವನ್ನು ನಿರ್ವಹಿಸುವವನು)
  • ಗಣಕಯಂತ್ರ ಕಾರ್ಯ ನಿರ್ವಹಿಸಲು ಬಳಸುವ ಪ್ರೋಗ್ರಾಂಗಳನ್ನು ಹೀಗೆಂದು ಕರೆಯುತ್ತಾರೆ – ತಂತ್ರಾಂಶ (Software)ಎನ್ನುವರು.
  • ಲ್ಯಾಪ್ ಟಾಪ್ ಗಣಕಯಂತ್ರವು ಯಾವ ವಿಧದ ಕಂಪ್ಯೂಟರ್ – ವೈಯಕ್ತಿಕ ಗಣಕಯಂತ್ರ (Personal Computer)
  • ಗಣಕಯಂತ್ರವು ಹೊಂದಿರುವ ಭಾಗಗಳಾದ ಡೆಸ್ಕ್‌ಟಾಪ್, ಕೀಬೋರ್ಡ್, ಸೂಚಕ ಸಾಧನವಾಗಿ ಟಚ್‌ಪ್ಯಾಡ್ ಹಾಗೂ ಸ್ಪೀಕರ್‌ಗಳು ಒಂದೇ ಘಟಕದಲ್ಲಿ ಸಂಯೋಗವಾಗಿ ರೂಪಗೊಂಡಿರುವ ಕಂಪ್ಯೂಟರ್ – ಲ್ಯಾಪ್‌ಟಾಪ್.

👉ಕೇಂದ್ರೀಯ ಸಂಸ್ಕರಣಾ ಘಟಕ (CPU)ದಲ್ಲಿ ಇರುವ ಮೂರು ಭಾಗಗಳು: 👈

1) ಸ್ಮರಣಾ ಘಟಕ (Memory Unit)
2) ನಿಯಂತ್ರಕ ಘಟಕ (Control Unit)
3) ಅಂಕಗಣಿತ ಮತ್ತು ತಾರ್ಕಿಕ ಘಟಕ (Arithmetic and Logic Unit)

  • ಎಟಿಎಂ (ಆಟೋಮೇಟೆಡ್ ಟೆಲ್ಲರ್ ಮಿಷನ್)ಗಳಲ್ಲಿ ಬಳಸುವ ತಂತ್ರಾಂಶ ಗಣಕಯಂತ್ರದ ತಂತ್ರಾಂಶ.
  • ಹವಾಮಾನ ಮುನ್ಸೂಚನೆ ಹಾಗೂ ವಿಶ್ಲೇಷಣೆಗಳಲ್ಲಿ ಬಳಸುವ ಕಂಪ್ಯೂಟರ್ – ಸೂಪರ್ ಕಂಪ್ಯೂಟರ್
  • ಮಾನವನ ಲಕ್ಷಣಗಳು ಅಥವಾ ಅವರ ವಿಶಿಷ್ಟ ಗುಣಗಳಿಂದ ಗುರುತಿಸುವುದೇ – ಬಯೋಮೀಟರ್
  • ಪ್ರತಿಯೊಬ್ಬರ ಧ್ವನಿ, ಡಿಎನ್‌ಎ, ಹಸ್ತಮುದ್ರೆ ಅಥವಾ ಲಕ್ಷಣಗಳನ್ನು ಗುರುತಿಸುವ ಸಾಧನ -ಜೈವಿಕ ಮಾಪನ ಸಾಧನ (Biometric)
  • ಜೈವಿಕ ಮಾಪನ ಸಾಧನವು ವ್ಯಕ್ತಿಯ ಜೈವಿಕ ಮಾಪನದ ಮಾಹಿತಿಯನ್ನು ಪಡೆದು ಗಣಕಯಂತ್ರಗಳಲ್ಲಿ ಸಂಗ್ರಹಿಸುತ್ತದೆ.

👉ಇನ್‌ಪುಟ್ ಅಥವಾ ಭುಕ್ತ (Input) ಸಾಧನಗಳೆಂದರೆ: 👈

1) ಕೀಬೋರ್ಡ್ (ಕೀಲಿಮಣೆ),
2) ಮೌಸ್ (Mouse),
3) ಸ್ಕ್ಯಾನರ್ (Scanner)

  • ಇಂಟಿಗ್ರೇಟೆಡ್ ಸರ್ಕ್ಯೂಟ್ (IC) ಅನ್ನು ಅಭಿವೃದ್ಧಿ ಪಡಿಸಿದವರು-ಅಮೆರಿಕದ ಸಂಶೋಧಕ ಜಾಕ್‌ಕಿಲ್‌ಬೈ (Jack Kilby)
  • ಜಾಕ್ ಕಿಲ್‌ಬೈ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ-2000(ಭೌತಶಾಸ್ತ್ರ)
  • ಗಣಕಯಂತ್ರದಲ್ಲಿ ದತ್ತಾಂಶ ಎಂದು ಕರೆಯಲ್ಪಡುವುದು-ಸಂಕೇತಗಳು ಮತ್ತು ಸಂಖ್ಯಾ ಮಾಹಿತಿ (Symbols and Numerical Information)
  • ಗಣಕಯಂತ್ರದಲ್ಲಿರುವ ಮಾಹಿತಿಯನ್ನು ಹೀಗೆಂದು ಕರೆಯುತ್ತಾರೆ-ಸಂಗ್ರಹಿಸಿದ ದತ್ತಾಂಶ
  • ಸಿಪಿಯು ಏನು-ಇದೊಂದು ಚಿಪ್
  • ಕಂಪ್ಯೂಟರ್‌ನ ಬುದ್ಧಿಶಕ್ತಿಯು-ಕೃತಕ ಬುದ್ಧಿಶಕ್ತಿ
  • ಕಂಪ್ಯೂಟರ್‌ನ ನಿಯಂತ್ರಣ ಭಾಗ ಇರುವುದು-ಸಿಪಿಯುನಲ್ಲಿ
  • ಕಂಪ್ಯೂಟರ್‌ನಲ್ಲಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಹೋಲಿಕೆ ಕಾರ್ಯವನ್ನು ನಡೆಸುವ ಘಟಕ ಅರ್ಥಮೆಟಿಕ್ ಅಂಡ್ ಲಾಜಿಕ್ ಯೂನಿಟ್ (Arithmetic and Logic Unit)
  • ಪ್ರೋಗ್ರಾಮರ್ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ ತಿಂಗಳ 12ರಂದು (ಸಾಮಾನ್ಯವರ್ಷ), ಸೆಪ್ಟೆಂಬರ್ 13ರಂದು (ಅಧಿಕ ವರ್ಷ) ರಷ್ಯಾದಲ್ಲಿ ಆಚರಿಸಲಾಗುತ್ತದೆ. ರಷ್ಯಾ ಸರ್ಕಾರವು ಅಧಿಕೃತವಾಗಿ ಘೋಷಿಸಿದೆ.
  • ಕಂಪ್ಯೂಟರ್‌ನ ವಿವಿಧ ಭಾಗಗಳೊಂದಿಗೆ ಸಮನ್ವಯ ಸಾಧಿಸುವ ಕಂಪ್ಯೂಟರ್‌ನ ಭಾಗ – ಕಂಟ್ರೋಲ್ ಯೂನಿಟ್
  • ಸಂಸ್ಕರಿಸಿದ ದತ್ತಾಂಶವನ್ನು ‘Processed Data’ ಎಂದು ಕರೆಯುತ್ತಾರೆ.
  • ಅಂತರಾಷ್ಟ್ರೀಯ ಪ್ರೋಗ್ರಾಮರ್ ದಿನವನ್ನು ಪ್ರತಿ ವರ್ಷ ಜನವರಿ 7ರಂದು ಆಚರಿಸುತ್ತಾರೆ.
  • ಮೊದಲ ಯಾಂತ್ರಿಕ ಕ್ಯಾಲ್ಕುಲೇಟರ್ (first mechanical calculator)ನ್ನು 1623ರಲ್ಲಿ ಕಂಡುಹಿಡಿದವರು ಜರ್ಮನಿ ಗಣಿತಜ್ಞ ವಿಲ್‌ಹೆಲ್ಕಂ ಸ್ಕಿಕಾರ್ಡ್ (Wilhelm Schickard) ಇದು ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಮಾಡಲು ಸಹಕಾರಿಯಾಗಿದೆ.
  • ಕ್ಯಾಲ್ಕುಲೇಟರ್ ಅಬಾಕಸ್‌ನ್ನು ಕಂಡು ಹಿಡಿದವರು – ಚೀನಾ ದೇಶದವರು.
  • ಮ್ಯಾಗ್ನೆಟಿಕ್ ಡಿಸ್ಕ್‌ನ ಪದರ (Layer) ದಲ್ಲಿರುವುದು ಕಬ್ಬಿಣದ ಆಕ್ಸೈಡ್ (Iron Oxide)
  • ಟೆಕ್ಸ್ (Text) ಸಾಲನ್ನು ಆರಂಭಿಸಲು ಒತ್ತಬೇಕಾದ ಕೀ-ಹೋಮ್ ಕೀ
  • ಎಲ್‌ಸಿಡಿಯ ವಿಸ್ತ್ರತ ರೂಪ – ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ (liquid crystal display)
  • ಟ್ಯಾಲಿ ಸಾಫ್ಟ್‌ವೇರ್ (Tally Software) ನ್ನು ಬಳಸುವುದು ಅಕೌಂಟಿಂಗ್‌ನಲ್ಲಿ.
  • ಬ್ಯಾಂಕ್‌ನ ಎಟಿಎಂ ಸೌಲಭ್ಯವು ಯಾವುದಕ್ಕೆ ಉದಾಹರಣೆ ವ್ಯಾನ್ (WAN).
  • ಜಗತ್ತಿನ ಮೊದಲ ಕಂಪ್ಯೂಟರ್ ನೆಟ್ವರ್ಕ್ – ಅರ್ಪಾನೆಟ್ (ARPANET)
  • ಇ-ಮೇಲ್‌ನ ಸಂಪೂರ್ಣ ಹೆಸರು ಎಲೆಕ್ಟ್ರಾನಿಕ್ ಮೇಲ್
  • ಇ-ಮೇಲ್‌ನ ಸ್ಟೋರೇಜ್ ಏರಿಯಾ ಅಕೌಂಟನ್ನು ಹೀಗೆಂದು ಕರೆಯುತ್ತಾರೆ – ಮೇಲ್ ಬಾಕ್ಸ್
  • ಭಾರತದಲ್ಲಿ ಕಾಣಿಸಿಕೊಂಡ ಮೊದಲ ವೈರಸ್ – ಮ್ಯಾಕ್ ಬುಗ್ (Mac Bug)
  • ಯಾಹು, ಗೂಗಲ್ ಮತ್ತು ಎಂಎಸ್‌ಎನ್‌ಗಳು – ಇಂಟರ್ನೆಟ್ ತಾಣಗಳು
  • ಯುಆರ್‌ಎಲ್‌ನ ವಿಸ್ತ್ರತ ರೂಪ Uniform Resource Locator
  • ಎಟಿಎಂಗಳಲ್ಲಿ ಬಳಸುವ ಕಾರ್ಡುನಲ್ಲಿರುವ ಪಟ್ಟಿ – ಕಾಂತೀಕರಿಸಿದ (Magnetic Table)
  • ಪ್ರಾಥಮಿಕ ಸ್ಮರಣೆಯಲ್ಲಿ ಎರಡು ವಿಧಗಳಿವೆ
    1) RAM 2) ROM
  • RAM ವಿಸ್ತ್ರತ ರೂಪ – Read Access Memory
  • ತಾತ್ಕಾಲಿಕ ಸ್ಮರಣೆ – ಬ್ಯಾಂಡಮ್ ಆಕ್ಸೆಸ್ ಮೆಮೊರಿ (RAM)
  • ಸಿಡಿ (CD)ಯ ವಿಸ್ತ್ರತ ರೂಪ-ಕಾಂಪಾಕ್ಟ್ ಡಿಸ್ಕ್ (Compact Disc)
  • ಸಿಡಿ-ರಾಂ (CD ROM) ವಿಸ್ತ್ರತ ರೂಪ- ಕಾಂಪಾಕ್ಟ್ ಡಿಸ್ಕ್ ರೀಡ್ ಓನ್ನಿ ಮೆಮೊರಿ (Compact Disc Read Only Memory)
  • 3.5 ಇಂಚು ಪ್ಲಾಪಿ ಡಿಸ್ಕ್ ಸಾಮರ್ಥ್ಯ 1.44ಎಂಬಿ (1.44MB)
  • ಬೈನರಿ ಪದ್ಧತಿಯಲ್ಲಿ ಡಿಜಿಟಲ್‌ಗಳ ಸಂಖ್ಯೆ ಎಷ್ಟು-ಎರಡು
  • ಬೈನರಿ ಪದ್ಧತಿಯ ಎರಡು ಅಂಕೆಗಳು-0 ಮತ್ತು 1
  • ಕಂಪ್ಯೂಟರ್‌ನ ಸಣ್ಣ ಘಟಕ – ಬಿಟ್ (BIT)
  • ಸಂಗ್ರಹಣೆಯ ಅತಿ ಉದ್ದವಾದ ಘಟಕ – ಟಿಬಿ
  • ಬಿಟ್ (BIT)ನ ವಿಸ್ಕೃತ ರೂಪ – ಬೈನರಿ ಡಿಜಿಟ್ (Binary Digit)
  • ಇನ್‌ಪುಟ್‌ನ ಮಾದ್ಯಮ –ಕೀಬೋರ್ಡ್
  • ಕೀಬೋರ್ಡ್ ಯಾವ ವಿಧದ ಸಾಧನ-ಇನ್‌ಪುಟ್ ಸಾಧನ
  • ಕಂಪ್ಯೂಟರ್‌ನಲ್ಲಿ ಕೀಬೋರ್ಡ್‌ನ ಕಾರ್ಯ – ಇನ್‌ಪುಟ್
  • ಔಟ್‌ಪುಟ್‌ನ ಸಾಧನಗಳು – ಮಾನಿಟರ್, ಪ್ರಿಂಟರ್
  • ಕಂಪ್ಯೂಟರ್‌ನ ಮೂಲಭೂತ ಪ್ರಕ್ರಿಯೆಯ ಚಕ್ರ – ಇನ್ ಪುಟ್ ಪ್ರೊಸೆಸಿಂಗ್, ಔಟ್ಪುಟ್
  • ಕಂಪ್ಯೂಟರ್‌ನ ಎಲ್ಲ ಮಾಹಿತಿಯನ್ನು ನೋಡಲು ಬಳಸುವ ಸಾಧನ – ಮಾನಿಟರ್
  • ಪ್ಯಾಕ್ ಮ್ಯಾನ್ ಕಂಪ್ಯೂಟರ್ ತಯಾರಿಸಿದ ಉದ್ದೇಶ – ಗೇಮ್ಸ್
  • ಮೊದಲ ಪೀಳಿಗೆ ಕಂಪ್ಯೂಟರ್‌ಗಳಲ್ಲಿ ಬಳಸುತ್ತಿದ್ದುದು – ವ್ಯಾಕ್ಯುಮ್ ಟ್ಯೂಬ್
  • ಮೊದಲ ಪೀಳಿಗೆ ಕಂಪ್ಯೂಟರ್‌ನ ದೋಷವೆಂದರೆ – ಅತಿದೊಡ್ಡ ಗಾತ್ರ
  • RAM ನಲ್ಲಿ ಸಂಗ್ರಹವಾದ ಮಾಹಿತಿಯನ್ನು ಬದಲಾಯಿಸಬಹುದು. ಅಳಿಸಬಹುದು ಅಥವಾ ಮರಳಿ ಬರೆಯಬಹುದು. ಸ್ಮರಣೆಯಲ್ಲಿರುವ ಮಾಹಿತಿಯು ಗಣಕಯಂತ್ರವು ಸ್ಥಗಿತಗೊಳಿಸಿದ ನಂತರ ಎಲ್ಲ ಮಾಹಿತಿಯು ಅಳಿಸಿ ಹೋಗುತ್ತದೆ. ಇದೊಂದು ತಾತ್ಕಾಲಿಕ ಸ್ಮರಣೆಯಾಗಿದೆ.
  • ROM ನ ವಿಸ್ತ್ರತ ರೂಪ – Read Only Memory | ROM ಎಂಬುದು ಶಾಶ್ವತ ಸ್ಮರಣೆಯಾಗಿದೆ.
  • ROMನಲ್ಲಿ ಗಣಕಯಂತ್ರ ಆರಂಭಗೊಳ್ಳಲು ಬೇಕಾಗುವ ಮಾಹಿತಿಯನ್ನು ಇದರಲ್ಲಿ ಬರೆದಿರುತ್ತಾರೆ. ಈ ಸೂಚನೆಯನ್ನು ಗಣಕಯಂತ್ರ ಉತ್ಪಾದನೆಯಾಗುವಾಗ ಪ್ರೋಗ್ರಾಂಗಳ ರೂಪದಲ್ಲಿ ಸಂಗ್ರಹಿಸಿರುತ್ತಾರೆ.
  • ROMನ ಸಂಗ್ರಹಣೆಯಲ್ಲಿರುವ ಸಂಗತಿಗಳನ್ನು ಸುಲಭವಾಗಿ ಬದಲಾಯಿಸಲಾಗುವುದಿಲ್ಲ. ಆದರೆ ಅವುಗಳನ್ನು ಕೇವಲ ಓದಬಹುದು. ಗಣಕಯಂತ್ರವನ್ನು ಸ್ಥಗಿತಗೊಳಿಸಿದರೂ ಕೂಡ ಇದರಲ್ಲಿರುವ ಮಾಹಿತಿಯು ಹಾಳಾಗುವುದಿಲ್ಲ.
  • ಮಾಧ್ಯಮಿಕ ಸ್ಮರಣೆ (Secondary Memory)ಗಳಿಗೆ ಉದಾಹರಣೆ CD ROM, ಪೆನ್‌ಡ್ರೈವ್‌ಗಳು
  • ಮಾಧ್ಯಮಿಕ ಸ್ಮರಣೆಯಲ್ಲಿರುವ ಮಾಹಿತಿಗಳು ಶಾಶ್ವತವಾಗಿದ್ದು, ಇದರಲ್ಲಿರುವ ದತ್ತಾಂಶಗಳು ಸಂಗ್ರಹವಾಗಿಯೇ ಇರುತ್ತವೆ.
  • ಬಳಕೆದಾರನು ತನ್ನ ಕೆಲಸ ಮಾಡಲು ಗಣಕಯಂತ್ರಕ್ಕೆ ಸಹಾಯವಾಗುವಂತೆ ಬರೆದಿರುವ ಪ್ರೋಗ್ರಾಂಗಳನ್ನು ಹೀಗೆಂದು ಕರೆಯುತ್ತಾರೆ – ಅಪ್ಲಿಕೇಷನ್ ಸಾಫ್ಟ್‌ವೇರ್
  • ಗಣಕಯಂತ್ರ ಕಾರ್ಯ ಮಾಡಲು ಬೇಕಾಗುವ ಪ್ರಮುಖ ತಂತ್ರಾಂಶವನ್ನು ಸಿಸ್ಟಮ್ ಸಾಫ್ಟ್ವೇರ್ ಅಥವಾ ಆಪರೇಟಿಂಗ್ ಸಿಸ್ಟಮ್ ಎನ್ನುವರು.
  • ಸಿಸ್ಟಮ್ ಸಾಫ್ಟ್‌ವೇರ್‌ನ ಉಪಯೋಗ – ಗಣಕಯಂತ್ರವು ತನ್ನ ಭಾಗಗಳನ್ನು ತಿಳಿದುಕೊಳ್ಳಲು ಮತ್ತು ಇನ್‌ಪುಟ್ ಹಾಗೂ ಔಟ್ ಪುಟ್ ಸಾಧನಗಳನ್ನು ಗುರುತಿಸಲು ಸಿಸ್ಟಮ್ ಸಾಫ್ಟ್‌ವೇರ್ ಸಹಾಯ ಮಾಡುತ್ತದೆ.
  • ಅಸೆಂಬ್ಲಿ ಭಾಷೆಯನ್ನು ಯಂತ್ರಭಾಷೆಗೆ ಪರಿವರ್ತಿಸಲು ಅವಶ್ಯಕವಾದದ್ದು – ಅಸೆಂಬರ್
  • ಉಚ್ಛಮಟ್ಟದ ಭಾಷೆಯನ್ನು ಯಂತ್ರ ಭಾಷೆಗೆ ಪರಿವರ್ತಿಸಲು ಅವಶ್ಯಕವಾದದ್ದು – ಕಂಪೈಲರ್
  • ಗಣಕಯಂತ್ರವು ಅರ್ಥಮಾಡಿಕೊಳ್ಳಬಲ್ಲ ಭಾಷೆ ಅಥವಾ ದ್ವಿಮಾನ ಭಾಷೆ – ಯಂತ್ರಭಾಷೆ ಅಥವಾ ದ್ವಿಮಾನ ಭಾಷೆ
  • ಕಂಪ್ಯೂಟರ್‌ನ ಉನ್ನತ ಭಾಷೆಗಳು – COBOL, FORTRAN BASIC
  • COBAL ನ ವಿಸ್ತೃತ ರೂಪ Common Business Oriented Language
  • FORTRAND ನ ವಿಸ್ತೃತ ರೂಪ Formula Translation
  • BASIC ನ ವಿಸ್ತೃತ ರೂಪ Beginners all purpose symbolic instruction code
  • ಮೈಕ್ರೋ ಸಾಫ್ಟ್ ಕಂಪನಿಯ ಸಂಸ್ಥಾಪಕರು – ಬಿಲ್‌ಗೇಟ್ಸ್
  • ಮೊದಲ ಕಂಪ್ಯೂಟರ್ ವೈರಸ್ ಕ್ರೀಪರ್ (Creeper)
  • ಸ್ಟೀನ್‌ನ ಬ್ಯಾಕ್‌ಗೌಂಡ್‌ನ್ನು ಹೀಗೆಂದು ಕರೆಯುತ್ತಾರೆ – ಪ್ರೇಮ್ (Frame)
  • ಎಕ್ಸ್-ಎಲ್ ಎಂಬುದು ವರ್ಕಬುಕ್ ವರ್ಕ್‌ಶೀಟ್‌ಗಳ ಸಂಗ್ರಹವಾಗಿದೆ.

👉ಕಂಪ್ಯೂಟರ್‌ ಸಂಗ್ರಹಣಾ ಸಾಮರ್ಥ್ಯ👈

  • 0.1 = 1ಬಿಟ್ಸ್
  • 4 ಬಿಟ್ಸ್ = ನಿಭೆ (Nibble)
  • 8 ಬಿಟ್ಸ್ (2ನಿಲ್ಲೆ) = ಬೈಟ್
  • 1ಬೈಟ್ – 1 ಕ್ಯಾರೆಕ್ಟರ್ (Character)
  • 1024 ಬೈಟ್ಸ್ (Bytes) = 1ಕಿಲೋ ಬೈಟ್ (1KB)
  • 1024 ಕಿಲೋ ಬೈಟ್ = 1 ಮೆಗಾ ಬೈಟ್ (1MB)
  • 1024 ಮೆಗಾ ಬೈಟ್ – 1 ಗಿಗಾ ಬೈಟ್ (1GB)
  • 1024 ಗಿಗಾ ಬೈಟ್ – 1 ಟೆರಾ ಬೈಟ್ (1TB)

👉ಟ್ಯಾಬ್ಲೆಟ್ ಗಣಕಯಂತ್ರ (Tablet Computer)👈

ಇದು ಮೊಬೈಲ್ಟ್ ಕಂಪ್ಯೂಟರ್, ಟ್ಯಾಬ್ಲೆಟ್ ಗಣಕಯಂತ್ರವು ಮೊಬೈಲ್ ಗಿಂತ ದೊಡ್ಡದು, ಎಲ್ಲಿಗೆ ಬೇಕಾದರೂ ಕೊ೦ಡೊಂಯ್ಯಬಹುದು, ಇದರಲ್ಲಿ ಸಮತಟ್ಟಾದ ಸ್ಪರ್ಶ ಪರದೆ ಇದೆ. ಹಾಗೂ ಬಾಹ್ಯ ಕೀಬೋರ್ಡ್ ಬದಲಾಗಿ ಇದರಲ್ಲಿಯೇ ಇರುವ ಸ್ಪರ್ಶ ಪರದೆಯ ಸಹಾಯದಿಂದ ಇದನ್ನು ಬಳಸಬಹುದು.
ಟ್ಯಾಬ್ಲೆಟ್ ಅನ್ನು ಪರದೆ ಮೇಲೆ ಅಸ್ಥಿತ್ವದಲ್ಲಿರುವ ಕೀಬೋರ್ಡ್, ನಿಷ್ಕ್ರಿಯವಾದ ಲೇಖನಿ ಅಥವಾ ಡಿಜಿಟಲ್ ಲೇಖನಿಯನ್ನು ಬಳಸಿ ಕಾರ್ಯ ನಿರ್ವಹಿಸಬಹುದಾಗಿದೆ. ಇದು ಮೈಕ್ರೋಫೋನ್, ಕ್ಯಾಮೆರಾ, ಅಸಿರೆಲೋಮೀಟರ್‌ಗಳನ್ನು ಒಳಗೊಂಡಿದೆ.

👉 ಭಾರತ ಸರ್ಕಾರದ ಟ್ಯಾಬ್ಲೆಟ್ – ಆಕಾಶ್ 👈

ಭಾರತ ಸರ್ಕಾರದ ಪ್ರಾಯೋಜ – ಕತ್ವದ ಯೋಜನೆಯಾಗಿದ್ದು, ಆಕಾಶ್ ಒಂದು ಕಡಿಮೆ ವೆಚ್ಚದ ಟ್ಯಾಬ್ಲೆಟ್ ಗಣ- ಕಯಂತ್ರ ಭಾರತದಲ್ಲಿನ ಶಾಲೆಗಳಿಗೆ ಹಾಗೂ ಎ.ಎ.ಗಳಿಗೆ ಅತಿ ಕಡಿಮೆ ದರದ ಆಂಡ್ರೈಡ್ ತಳಹದಿ ಇರುವ ಟ್ಯಾಬ್ಲೆಟ್ ಗಣಕಯಂತ್ರವನ್ನು ರೂಪಿಸಿ ನಿರ್ಮಾಣ ಮಾಡುವುದು ಹಾಗೂ ವಿತರಿಸುವುದಾಗಿದೆ.

ಭಾರತದ 25ಸಾವಿರ ಕಾಲೇಜುಗಳು ಮತ್ತು 400 ಯೂನಿವರ್ಸಿಟಿಗಳನ್ನು ಇ-ಲರ್ನಿಂಗ್ ಕಾರ್ಯಕ್ರಮಕ್ಕಾಗಿ ಸಂಪರ್ಕ ಕಲ್ಪಿಸುವ ಉತ್ತೇಜಕ ಕಾರ್ಯಕ್ರಮವಾಗಿದೆ. ಇದನ್ನು ವಿಎಂಸಿ ಸಿಸ್ಟಮ್ಸ್ ಹೈದರಾಬಾದ್‌ನವರು ತಯಾರಿಸಿದ್ದಾರೆ.

ಆಕಾಶ್‌ನ ವಾಣಿಜ್ಯ ಆವೃತ್ತಿಯನ್ನು ಪ್ರಸ್ತುತವಾಗಿ “ubislate 7c” ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಆಕಾಶ್-2ನ ಸಂಕೇತದ ಹೆಸರು “UbiSlate 7C” ಇದನ್ನು 2012ರನವೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ. ಆಕಾಶ್ ಟ್ಯಾಬ್ಲೆಟ್ ಅನ್ನು ಮಾನವ ಅಭಿವೃದ್ಧಿ ಸಚಿವಾಲಯ (MHRD) ವು ರೂ.2263ಗೆ ಮಾರಾಟ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ 1130ರೂ.ಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

👉 ಕನ್ನಡದ ಸಾಫ್ಟ್‌ವೇರ್‌ಗಳು 👈

ಕನ್ನಡ ಕಛೇರಿ

  • ಇದು ಕರ್ನಾಟಕ ಸರ್ಕಾರದ ಆಡಳಿತ ಕಛೇರಿಗಳ ಉಪಯೋಗಕ್ಕಾಗಿ ವಿಶೇಷವಾಗಿ ಹೊರತಂದ ಸಾಫ್ಟ್‌ವೇರ್ ಆಗಿದೆ. ‘ಇಂಡಿಯನ್ ಸಾಫ್ಟ್‌ವೇಟ್ ಲ್ಯಾಬೊರೇಟರಿ’ ಎಂಬ ಸಂಸ್ಥೆ ಹೊರತಂದ ಸಾಫ್ಟ್‌ವೇರ್ ಆಗಿದೆ.
  • ವಾಣಿಜ್ಯ, ಬ್ಯಾಂಕಿಂಗ್, ಸರಕಾರಿ ಆಡಳಿತದ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಬಳಸುವ ಅನುಕೂಲವನ್ನು ತಂದಿತು.
  • ಇದು ಮೈಕ್ರೋಸಾಫ್ಟ್ ವಿಂಡೋಸ್ ಮೇಲೆ ಕಾರ್ಯನಿರ್ವಹಿಸಬಲ್ಲ ಸಾಫ್ಟ್‌ವೇರ್ ಆಗಿದೆ.

👉ನುಡಿ, (Nudi)👈

‘ಕನ್ನಡ ಗಣಕ ಪರಿಷತ್’ ಕನ್ನಡ ಸಾಫ್ಟ್‌ವೇರ್‌ ನುಡಿಯನ್ನು ಹೊರತಂದಿದೆ.

  • ನುಡಿ, ಸರ್ಕಾರದ ಮಾನಕ ಕನ್ನಡ ಲಿಪಿಯಾಗಿದೆ.
  • ನುಡಿಯು ಕರ್ನಾಟಕ ನಿಗಧಿ ಪಡಿಸಿರುವ ಸ್ಟ್ಯಾಂಡರ್ಡ್ ಬಳಸಿ ತಯಾರಿಸಿದ ಸಾಫ್ಟ್‌ವೇರ್ ಆಗಿದೆ.
  • ಉಚಿತವಾಗಿ ದೊರೆಯುವ ನುಡಿ ಸಾಫ್ಟ್‌ವೇರ್‌ನ್ನು ಯಾರು ಬೇಕಾದರೂ ಬಳಸಬಹುದು.
  • ನುಡಿಯನ್ನು ಪದ ಸಂಸ್ಕರಣೆ, ದತ್ತ ಸಂಸ್ಕರಣೆ, ಇಂಟರ್‌ನೆಟ್ ಮೊದಲಾದ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳಬಹುದು.
  • ನುಡಿಯನ್ನು ಪದ ಸಂಸ್ಕರಣೆ (World Processing), ದತ್ತ ಸಂಸ್ಕರಣೆ (Data Processing), ಇಂಟರ್ ನೆಟ್ ಮೊದಲಾದ ಎಲ್ಲಾ ಕೆಲಸಗಳಿಗೂ ಬಳಸಬಹುದು.
  • 1997ರಲ್ಲಿ ಸ್ಥಾಪಿತವಾದ ಕನ್ನಡ ಗಣಕ ಪರಿಷತ್ ಕಂಪ್ಯೂಟರ್ ಕುರಿತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವ ಮತ್ತು ಕಂಪ್ಯೂಟರ್ ಕನ್ನಡ-ಪದಕೋಶ ನಿರ್ಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾಗಿದೆ.

👉ಬರಹ(Baraha)👈

  • ಬರಹ ಎಂಬುದು ಕನ್ನಡದ ಮೊದಲ ಉಚಿತ ಗಣಕ ಮುದ್ರಣ ಸಾಫ್ಟ್‌ವೇರ್ ಆಗಿದೆ.
  • ಬರಹವನ್ನು ಮೊಟ್ಟಮೊದಲ ಬಾರಿಗೆ ಜನವರಿ 1988ರಲ್ಲಿ ಬಿಡುಗಡೆ ಮಾಡಲಾಯಿತು.
  • ಬರಹ ಸಾಫ್ಟ್‌ವೇರ್ ಕನ್ನಡ ಕಂಪ್ಯೂಟರೀಕರಣಕ್ಕೆ ವರದಾನವಾಗಿದೆ.
  • ಬರಹದ ಕರ್ತೃ “ಶೇಷಾದ್ರಿ ವಾಸುಚಂದ್ರ ಶೇಖರ್ ಅವರು.
  • ಬರಹ ಸಾಫ್ಟ್‌ವೇರ್‌ನ್ನು ಮೊಟ್ಟ ಮೊದಲ ಬಾರಿಗೆ ಜನವರಿ 1988ರಲ್ಲಿ ಬಿಡುಗಡೆಗೊಳಿಸಲಾಯಿತು.
  • ಕನ್ನಡದಲ್ಲಿ ಸರಳ ಸುಲಭ ಮುದ್ರಣೋಪಯೋಗಿ (Desk top Publishing) ಸಾಫ್ಟ್‌ವೇರ್ ಕೊರತೆ ಇದ್ದು, ಅದನ್ನು ನಿವಾರಿಸಲು ಬರಹ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿ ಪಡಿಸಿದರು.
  • ಬರಹ 10.0 ಬರಹದ ವಿನೂತನ ಆವೃತ್ತಿಯಾಗಿದೆ. ಬರಹದ ಕೆಲವು ಆವೃತ್ತಿಗಳು ಉಚಿತ, ಕೆಲವು ವೈಶಿಷ್ಟ್ಯಗಳನ್ನು ಹಣ ನೀಡಿ ಪಡೆಯಬೇಕಾಗಿದೆ.
  • ಬರಹ 10.0ವು ಕನ್ನಡ, ದೇವನಾಗರಿ ಲಿಪಿ, ತಮಿಳು, ತೆಲಗು, ಮಲೆಯಾಳಂ, ಗುಜರಾತಿ, ಅಸ್ಸಾಮಿ, ಒರಿಯಾ ಲಿಪಿಗಳಿಗೆ ಸಹಕರಿಸುತ್ತದೆ.

👉ಕಣಜ (Kanaja)👈

  • ಇದು ಕನ್ನಡ ವಿದ್ಯುನ್ಮಾನ ಜ್ಞಾನಕೋಶವಾಗಿದೆ.
  • 2009 ಡಿಸೆಂಬರ್ 5 ರಲ್ಲಿ ಚಾಲನೆ ನೀಡಲಾಯಿತು.
  • ಕರ್ನಾಟಕ ಸರ್ಕಾರದ ಜ್ಞಾನ ಆಯೋಗದ ಯೋಜನೆಯನ್ನು ರೂಪಿಸಿ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯು (ಐಐಐಟಿ-ಬಿ) ಜಾರಿಗೊಳಿಸುತ್ತಿರುವ ಅಂತರ್ಜಾಲ ಕನ್ನಡ ಜ್ಞಾನ ಕೋಶವಾಗಿದೆ.
  • ಕನ್ನಡದಲ್ಲಿ ಇರುವ ಎಲ್ಲ ಬಗೆಯ ಸಾಹಿತ್ಯವನ್ನು ಕಲಿಕೆಗಾಗಿ ಸರ್ಕಜೆನಿಕರಿಗೆ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
  • ಸಾಹಿತಿ ಗೊರೂರು ಚೆನ್ನಬಸಪ್ಪ ಅವರು ‘ಕಣಜ’ ಎಂದು ಹೆಸರು ನೀಡಿದವರು.

👉ಆಪರೇಟಿಂಗ್ ಸಿಸ್ಟಂ (Operating System)👈

ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣೆ ವ್ಯವಸ್ಥೆ) ಕೂಡ ಒಂದು ತಂತ್ರಾಂಶವಾಗಿದೆ.

  • ಆಪರೇಟಿಂಗ್ ಸಿಸ್ಟಂ ಎಂಬ ತಂತ್ರಾಂಶ ಕಂಪ್ಯೂಟರ್‌ನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಮತ್ತು ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
  • ಆಪರೇಟಿಂಗ್ ಸಿಸ್ಟಂ ಕಂಪ್ಯೂಟರಿನ ಒಳಭಾಗಗಳನ್ನು ನಿಯಂತ್ರಿಸುತ್ತದೆ.’
  • ಕಂಪ್ಯೂಟರ್‌ನಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಮೊದಲಿಗೆ ಕಾರ್ಯಾಚರಣೆ ವ್ಯವಸ್ಥೆ ಪ್ರಾರಂಭವಾಗಿರಬೇಕು.
  • ಆಪರೇಟಿಂಗ್ ಸಿಸ್ಟಮ್ ಎಂಬುದು ಸಿಪಿಯು ಮತ್ತು ಹಾರ್ಡ್‌ವೇರ್ ಭಾಗಗಳನ್ನು ನಿಯಂತ್ರಿಸುವ ಸಾಫ್ಟ್‌ವೇರ್‌ ಆಗಿದೆ.
  • ಆಪರೇಟಿಂಗ್ ಸಿಸ್ಟಮ್ ಇಲ್ಲದೆ ಹಾರ್ಡ್‌ವೇರ್ ನಿರುಪಯೋಗವಾದದ್ದು.
  • ಕಂಪ್ಯೂಟರ್ ತನ್ನಲ್ಲಿ , ಈ ಕಾರ್ಯಾಚರಣೆ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. ಇದನ್ನು ‘ಬೂಟ್’ಎನ್ನುವರು.
  • ಬೂಟ್ ಮಾಡುವುದು. ‘ಬಯಾಸ್’ ಎಂಬ ತಂತ್ರಾಂಶದ ಕೆಲಸವಾಗಿದೆ.
  • ಬಯಾಸ್ (BIOS) ಎಂಬುದು Basic Input/Out put System
  • ಡಾಸ್, ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಗೆ ಉದಾಹರಣೆಗಳು.

👉DOS (Disc Operating System)👈

  • ಇದು ಕಂಪ್ಯೂಟರ್‌ನಲ್ಲಿರುವ ಪ್ರಮುಖವಾದ ಸಾಫ್ಟ್‌ವೇರ್ ಆಗಿದೆ.
  • ಡಾಸ್ ಕಂಪ್ಯೂಟರ್‌ನ್ನು ಕಾರ್ಯಗತಗೊಳಿಸುವ ಸಾಫ್ಟ್‌ವೇರ್.
  • ಇದು ಕಂಪ್ಯೂಟರಿನ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತದೆ.
  • ಎಂ.ಎಸ್ ಡಾಸ್ ಅನ್ನು ಮೈಕ್ರೋಸಾಫ್ಟ್‌ನವರು ಅಭಿವೃದ್ಧಿ ಪಡಿಸಿದರು.
  • 1981 ಮತ್ತು 1995ರ ನಡುವೆ ಐಬಿಎಂ ಪಿಸಿ ಕಾಂಪಟೆಬಿಲ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಧಾನವಾಗಿತ್ತು.

👉ವಿಂಡೋಸ್ (Windows)👈

  • ವಿಂಡೋಸ್‌ನಿಂದ ಡಾಸ್ ಅದೃಶ್ಯವಾಯಿತು.
  • ಎಂಡೋಸ್ ಎಂಬುದು ಕಂಪ್ಯೂಟರ್‌ನ್ನು ಬಳಸುವ ಆಧುನಿಕ ವಿಧಾನವಾಗಿದೆ.
  • ಡಾಸ್‌ಗೆ ಹೋಲಿಸಿದರೆ ಎಂಡೋಸ್‌ನಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ.
  • ವಿಂಡೋಸ್ ಮತ್ತು ಡಾಸ್ ಎರಡನ್ನು ಮೈಕ್ರೋಸಾಫ್ಟ್ ಕಂಪನಿ ಅಭಿವೃದ್ಧಿ ಪಡಿಸಿದೆ.
  • ವಿಂಡೋಸ್-98,
  • ವಿಂಡೋಸ್ 95, ವಿಂಡೋಸ್ 98, ವಿಂಡೋಸ್ 2000 ಬಳಕೆಯಲ್ಲಿವೆ.
  • ಕಂಪ್ಯೂಟರ್ ಪ್ರೋಗ್ರಾಂ ಬದಲಾಗುತ್ತಿರುತ್ತವೆ, ಯಾವುದೇ ಕಂಪ್ಯೂಟರ್ ಪ್ರೋಗ್ರಾಂ ಪರಿಪೂರ್ಣವಲ್ಲ.
  • ವಿಂಡೋಸ್ 95ರಲ್ಲಿ ನಾವು ಟೈಪ್ ಮಾಡಿದಾಗ ಸ್ಪೆಲಿಂಗ್ ತಪ್ಪಿದ್ದರೆ ಗೊತ್ತಾಗುತ್ತಿರಲಿಲ್ಲ. ಸ್ಪೆಲ್ ಚೆಕ್ ಹಾಕಿದರೆ ಮಾತ್ರ ತಿಳಿಯುತ್ತಿತ್ತು ಆದರೆ ಎಂಡೋಸ್-2000ರಲ್ಲಿ ಟೈಪ್ ಮಾಡುವಾಗ ಸ್ಪೆಲ್ಲಿಂಗ್ ಸರಿ ಇಲ್ಲ ಎಂತಾದರೆ ತಟ್ಟನೆ ಅಡ್ಡಗೆರೆ ಬರುತ್ತದೆ.