Current Affairs 03-01-2022

🌺 ಆರ್‌ಬಿಎಲ್ ಬ್ಯಾಂಕ್ ಸಿಇಒ ಆಗಿ ರಾಜೀವ್ ಅಹುಜಾ ನೇಮಕ: ಆರ್‌ಬಿಐ ಒಪ್ಪಿಗೆ
ಆರ್‌ಬಿಎಲ್ ಬ್ಯಾಂಕ್‌ನ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ರಾಜೀವ್ ಅಹುಜಾ(Rajeev Ahuja)ಅವರ ನೇಮಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮೋದಿಸಿದೆ.
ರಾಜೀವ್ ಅವರು ಮೂರು ತಿಂಗಳವರೆಗೆ ಅಥವಾ ಪೂರ್ಣಾವಧಿಯ ನೇಮಕ ಆಗುವವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಆರ್‌ಬಿಎಲ್ ಬ್ಯಾಂಕ್ ಗುರುವಾರ ತಿಳಿಸಿದೆ.
ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಶ್ವವೀರ್ ಅಹುಜಾ ಅವರನ್ನು ಬ್ಯಾಂಕ್‌ನ ಆಡಳಿತ ಮಂಡಳಿಯು ಕಳೆದ ಶನಿವಾರ ರಜೆ ಮೇಲೆ ಕಳುಹಿಸಿದ್ದು, ಅವರ ಸ್ಥಾನಕ್ಕೆ ಹಂಗಾಮಿ ಆಗಿ ರಾಜೀವ್ ಅಹುಜಾ ಅವರನ್ನು ನೇಮಕ ಮಾಡಿತ್ತು. ಈ ನೇಮಕಕ್ಕೆ ಆರ್‌ಬಿಐ ತನ್ನ ಒಪ್ಪಿಗೆ ನೀಡಿರುವುದಾಗಿ ಆರ್‌ಬಿಎಲ್ ಬ್ಯಾಂಕ್ ಷೇರುಪೇಟೆಗೆ ಮಾಹಿತಿ ನೀಡಿದೆ.
ಚೀಫ್ ಜನರಲ್ ಮ್ಯಾನೇಜರ್ ಯೋಗೇಶ್ ಕೆ. ದಯಾಳ್ ಅವರನ್ನು ಬ್ಯಾಂಕ್‌ನ ಆಡಳಿತ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ ಆರ್‌ಬಿಐ ಡಿಸೆಂಬರ್ 24ರಂದು ತಿಳಿಸಿದ ಬಳಿಕ ವಿಶ್ವವೀರ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ