Current Affairs 04-01-2022

🏆 ICC Awards 2021: ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶಿತ ಪ್ಲೇಯರ್ಸ್ ಸಂಪೂರ್ಣ ಪಟ್ಟಿ ಹೀಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2021ರ ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶಿತ ಹೆಸರುಗಳ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದೆ. ಈ ವರ್ಷದ ICC ಪ್ರಶಸ್ತಿಗಳಿಗೆ ಒಟ್ಟು 28 ನಾಮನಿರ್ದೇಶಿತರನ್ನು ಆಯ್ಕೆ ಮಾಡಲಾಗಿದ್ದು, ಈ ಎಲ್ಲಾ ಆಟಗಾರರನ್ನು ಹೆಸರಾಂತ ಕ್ರಿಕೆಟ್ ಪತ್ರಕರ್ತರು ಮತ್ತು ಐಸಿಸಿ ಸದಸ್ಯರನ್ನು ಒಳಗೊಂಡಿರುವ ಗಣ್ಯರ ಸಮಿತಿಯು ಆಯ್ಕೆ ಮಾಡಿದೆ . ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶಿತರ ಆಟಗಾರರ ಪಟ್ಟಿ ಈ ಕೆಳಗಿನಂತಿವೆ.
🏆 ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ
(ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ):
- ಶಾಹೀನ್ ಅಫ್ರಿದಿ (ಪಾಕಿಸ್ತಾನ್)
- ಜೋ ರೂಟ್ (ಇಂಗ್ಲೆಂಡ್)
- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್)
- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
🏆 ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ:
- ಜೋ ರೂಟ್ (ಇಂಗ್ಲೆಂಡ್)
- ಕೈಲ್ ಜೇಮಿಸನ್ (ನ್ಯೂಜಿಲೆಂಡ್)
- ದಿಮುತ್ ಕರುಣಾರತ್ನೆ (ಶ್ರೀಲಂಕಾ)
- ರವಿಚಂದ್ರನ್ ಅಶ್ವಿನ್ (ಭಾರತ)
🏆 ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ:
- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)
- ಬಾಬರ್ ಆಜಂ (ಪಾಕಿಸ್ತಾನ್)
- ಜನೆಮನ್ ಮಲನ್ (ದಕ್ಷಿಣ ಆಫ್ರಿಕಾ)
- ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್)
🏆 ಐಸಿಸಿ ವರ್ಷದ ಟಿ20 ಕ್ರಿಕೆಟಿಗ:
- ಜೋಸ್ ಬಟ್ಲರ್ (ಇಂಗ್ಲೆಂಡ್)
- ವನಿಂದು ಹಸರಂಗ (ಶ್ರೀಲಂಕಾ)
- ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ)
- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್)
🏆 ಐಸಿಸಿ ವರ್ಷದ ಮಹಿಳಾ ಏಕದಿನ ಆಟಗಾರ್ತಿ:
- ಟಮ್ಮಿ ಬ್ಯೂಮಾಂಟ್
- ಲಿಜೆಲ್ಲೆ ಲೀ
- ಹೇಲಿ ಮ್ಯಾಥ್ಯೂಸ್
- ಫಾತಿಮಾ ಸನಾ
🏆 ಐಸಿಸಿ ವರ್ಷದ ಮಹಿಳಾ ಟಿ20 ಆಟಗಾರ್ತಿ:
- ಟಮ್ಮಿ ಬ್ಯೂಮಾಂಟ್
- ಗೇಬಿ ಲೆವಿಸ್
- ಸ್ಮೃತಿ ಮಂಧಾನ
- ನ್ಯಾಟ್ ಸಿವರ್
🏆 ಐಸಿಸಿ ವರ್ಷದ ಮಹಿಳಾ ಆಟಗಾರ್ತಿ (ರಾಚೆಲ್ ಹೇಹೋ ಫ್ಲಿಂಟ್ ಪ್ರಶಸ್ತಿ):
- ಟಮ್ಮಿ ಬ್ಯೂಮಾಂಟ್
- ಲಿಜೆಲ್ಲೆ ಲೀ
- ಸ್ಮೃತಿ ಮಂಧಾನ (ಭಾರತ)
- ಗೇಬಿ ಲೆವಿಸ್