Padmashri Award Current Affairs 29-01-2022

Jan 28, 2022 10:12 am By Admin

ಪದ್ಮ ಪ್ರಶಸ್ತಿ ಮತ್ತು ಸ್ವೀಕರಿಸುವವರ ಒಪ್ಪಿಗೆ:


(Padma award and the recipient’s consent)

ಸಂದರ್ಭ:

ಪದ್ಮ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ.

  1. ಹಿರಿಯ ರಾಜಕಾರಣಿಗಳು, ಉದ್ಯಮಿಗಳು, ವಿಜ್ಞಾನಿಗಳು ಮತ್ತು ವೈದ್ಯರಿಂದ ಹಿಡಿದು ಕಲಾವಿದರು ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಾಮಾನ್ಯ ನಾಗರಿಕರವರೆಗಿನ 128 ವ್ಯಕ್ತಿಗಳನ್ನು ಈ ವರ್ಷದ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
  2. ಆಯ್ಕೆಯಾದ ಹೆಚ್ಚಿನ ವ್ಯಕ್ತಿಗಳು ಈ ಪ್ರಶಸ್ತಿಗಳನ್ನು ಸೌಜನ್ಯದಿಂದ ಸ್ವೀಕರಿಸಿದರು, ಆದರೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸಿದರು.

ಪದ್ಮ ಪ್ರಶಸ್ತಿಗಳು ಎಂದರೇನು?

ಇವು ಭಾರತ ರತ್ನದ ನಂತರದ ಭಾರತದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ.

1954 ರಲ್ಲಿ ಭಾರತ ರತ್ನದೊಂದಿಗೆ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ:

  1. ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ)
  2. ಪದ್ಮಭೂಷಣ್ (ಉನ್ನತ ದರ್ಜೆಯ ವಿಶೇಷ ಸೇವೆ)
  3. ಪದ್ಮಶ್ರೀ (ವಿಶೇಷ ಸೇವೆ).
  1. ಈ ಪ್ರಶಸ್ತಿಯು ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಅಥವಾ ವಿಷಯಗಳಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸುತ್ತದೆ.
  2. ಈ ಪದ್ಮ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಭಾರತದ ಪ್ರಧಾನ ಮಂತ್ರಿಗಳು ರಚಿಸುವ ಪದ್ಮಪ್ರಶಸ್ತಿ ಸಮಿತಿಯು ನೀಡಿದ ಶಿಫಾರಸುಗಳ ಆಧಾರದ ಮೇಲೆ ನೀಡಲಾಗುತ್ತದೆ.

ಮಿತಿಗಳು ಮತ್ತು ವಿನಾಯಿತಿಗಳು:

  1. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಯಾವುದೇ ನಗದು ಬಹುಮಾನವನ್ನು ನೀಡಲಾಗುವುದಿಲ್ಲ. ವಿಜೇತರಿಗೆ ಪದಕ ಮತ್ತು ರಾಷ್ಟ್ರಪತಿಗಳ ಸಹಿ ಇರುವ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪದಕ ವಿಜೇತರು ಅವುಗಳನ್ನು ಸಾರ್ವಜನಿಕ ಮತ್ತು ಅಧಿಕೃತ ಸರ್ಕಾರಿ ಸಮಾರಂಭಗಳಲ್ಲಿ ಧರಿಸಬಹುದು.
  2. ‘ಪದ್ಮ ಪ್ರಶಸ್ತಿಗಳು’ ಶೀರ್ಷಿಕೆಯಲ್ಲ ಅಥವಾ ಬಿರುದುಗಳಲ್ಲ ಮತ್ತು ಪ್ರಶಸ್ತಿ ಪುರಸ್ಕೃತರು ಅವುಗಳನ್ನು ತಮ್ಮ ಹೆಸರಿನ ಮುಂದೆ ಅಥವಾ ಹೆಸರಿನ ಹಿಂದೆ ಪ್ರತ್ಯಯವಾಗಿ ಬಳಸಬಾರದು ಎಂದು ನಿರೀಕ್ಷಿಸಲಾಗಿದೆ.
  3. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದ ದಿನಾಂಕದಿಂದ ಐದು ವರ್ಷಗಳ ನಂತರ ಮಾತ್ರ ಉನ್ನತ ಶ್ರೇಣಿಯ ಪ್ರಶಸ್ತಿಯನ್ನು ನೀಡಬಹುದು.
  4. ಒಂದು ವರ್ಷದಲ್ಲಿ 120 ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗುವುದಿಲ್ಲ, ಆದರೆ ಈ ಸಂಖ್ಯೆಯು NRI ಗಳು ಮತ್ತು ವಿದೇಶಿಯರಿಗೆ ನೀಡಲಾಗುವ ಪ್ರಶಸ್ತಿಗಳು ಅಥವಾ ಮರಣೋತ್ತರ ಪ್ರಶಸ್ತಿಗಳನ್ನು ಒಳಗೊಂಡಿರುವುದಿಲ್ಲ.

ಅರ್ಹತೆ:

ಜಾತಿ, ಉದ್ಯೋಗ, ಸ್ಥಾನ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳನ್ನು ಸ್ವೀಕರಿಸಲು ಅರ್ಹರಾಗಿದ್ದಾರೆ. ಆದಾಗ್ಯೂ, ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಈ ಪ್ರಶಸ್ತಿಗಳಿಗೆ ಅರ್ಹರಲ್ಲ.

  1. ಪದ್ಮ ಪ್ರಶಸ್ತಿಗಳನ್ನು “ವಿಶಿಷ್ಟ ಸೇವೆಗಳಿಗೆ” ನೀಡಲಾಗುತ್ತದೆ ಕೇವಲ “ದೀರ್ಘ ಸೇವೆ” ಗಾಗಿ ಮಾತ್ರವಲ್ಲ. ಇದಕ್ಕಾಗಿ, ನಿರ್ದಿಷ್ಟ ಕ್ಷೇತ್ರದಲ್ಲಿ ಕೇವಲ ‘ಶ್ರೇಷ್ಠತೆ’ ಸಾಕಾಗುವುದಿಲ್ಲ, ಆದರೆ ಇದಕ್ಕಾಗಿ ಉತ್ಕೃಷ್ಟ ಶ್ರೇಷ್ಠತೆ’ / ಎಕ್ಸಲೆನ್ಸ್ ಪ್ಲಸ್ ಮಾನದಂಡವನ್ನು ಪೂರೈಸಬೇಕು.

ಪ್ರಶಸ್ತಿ ವಿಜೇತರ ನಾಮನಿರ್ದೇಶನ:

  1. ಭಾರತದ ಯಾವುದೇ ನಾಗರಿಕರು ಪದ್ಮ ಪ್ರಶಸ್ತಿಗೆ ಸಂಭಾವ್ಯ ಪುರಸ್ಕೃತರನ್ನು ನಾಮನಿರ್ದೇಶನ ಮಾಡಬಹುದು.
  2. ಒಬ್ಬ ವ್ಯಕ್ತಿಯು ಪದ್ಮ ಪ್ರಶಸ್ತಿಗೆ ತನ್ನನ್ನು ತಾನೇ ನಾಮನಿರ್ದೇಶನ ಮಾಡಬಹುದು.
  3. ಎಲ್ಲಾ ನಾಮನಿರ್ದೇಶನಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ, ಅಲ್ಲಿ ನಾಮನಿರ್ದೇಶನ ಮಾಡಲಾದ ವ್ಯಕ್ತಿ ಮತ್ತು ಸಂಸ್ಥೆಗೆ ಸಂಬಂಧಿಸಿದ ವಿವರಗಳನ್ನು ಫಾರ್ಮ್ ನಲ್ಲಿ ಭರ್ತಿ ಮಾಡಬೇಕು.
  4. ನಾಮನಿರ್ದೇಶನಗಳ ಪರಿಗಣನೆಗಾಗಿ ಸಂಭಾವ್ಯ ಪ್ರಶಸ್ತಿ ಸ್ವೀಕರಿಸುವವರು ಮಾಡಿದ ಕೆಲಸದ ವಿವರಣೆಯನ್ನು ಒಳಗೊಂಡಂತೆ 800-ಪದಗಳ ಪ್ರಬಂಧವನ್ನು ಸಹ ಸಲ್ಲಿಸಬೇಕು.

ಪ್ರಶಸ್ತಿ ಪುರಸ್ಕೃತರನ್ನು ಯಾರು ಆಯ್ಕೆ ಮಾಡುತ್ತಾರೆ?

ಈ ಪದ್ಮ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಭಾರತದ ಪ್ರಧಾನ ಮಂತ್ರಿಗಳು ರಚಿಸುವ ಪದ್ಮಪ್ರಶಸ್ತಿ ಸಮಿತಿಯ ಮುಂದೆ ಎಲ್ಲಾ ನಾಮನಿರ್ದೇಶನಗಳನ್ನು ಇಡಲಾಗುತ್ತದೆ ಈ ಸಮಿತಿಯು ನೀಡಿದ ಶಿಫಾರಸುಗಳ ಆಧಾರದ ಮೇಲೆ ಈ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

  1. ಪದ್ಮ ಪ್ರಶಸ್ತಿಗಳ ಸಮಿತಿ’ಯು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ ಮತ್ತು ಗೃಹ ಕಾರ್ಯದರ್ಶಿ, ರಾಷ್ಟ್ರಪತಿಗಳ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದೆ.
  2. ಈ ಸಮಿತಿಯು ಮಾಡಿದ ಶಿಫಾರಸುಗಳನ್ನು ಅನುಮೋದನೆಗಾಗಿ ಭಾರತದ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳ ಮುಂದೆ ಇಡಲಾಗುತ್ತದೆ.

ಪ್ರಶಸ್ತಿ ಸ್ವೀಕರಿಸುವವರ ಒಪ್ಪಿಗೆಯನ್ನು ಕೇಳಲಾಗುತ್ತದೆಯೇ?

ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸುವ ಮೊದಲು ಸ್ವೀಕರಿಸುವವರ ಲಿಖಿತ ಅಥವಾ ಔಪಚಾರಿಕ ಒಪ್ಪಿಗೆ ಪಡೆಯಲು ಯಾವುದೇ ಅವಕಾಶವಿಲ್ಲ. ಆದಾಗ್ಯೂ, ಪ್ರಶಸ್ತಿಗಳ ಪ್ರಕಟಣೆಯ ಮೊದಲು, ಪದ್ಮ ಪುರಸ್ಕಾರಕ್ಕೆ ಆಯ್ಕೆಯಾದ ಪ್ರತಿಯೊಬ್ಬರಿಗೂ ದೂರವಾಣಿಯ ಮೂಲಕ ಗೃಹ ವ್ಯವಹಾರಗಳ ಸಚಿವಾಲಯದಿಂದ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವ  ಬಗ್ಗೆ ತಿಳಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು ಪ್ರಶಸ್ತಿಯನ್ನು ಸ್ವೀಕರಿಸಲು ಬಯಸದಿದ್ದರೆ, ಅವನ/ಅವಳ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.