General Knowledge

1. H1N1 ವೈರಾಣುವಿನಲ್ಲಿ H ಮತ್ತು N ಅಕ್ಷರಗಳು ಏನನ್ನೂ ಸೂಚಿಸುತ್ತವೆ?
i) ಎಂದರೆ ಹಿಮೋಗ್ಲುಟಿನಿನ್. ii) ಎಂದರೆ ನ್ಯೂರಮಿನಿಡೆಸ್
- ಕೇವಲ 1 ಮಾತ್ರ ಸರಿ
- ಕೇವಲ 2 ಮಾತ್ರ ಸರಿ
- ಎರಡೂ ಸರಿ
- ಎರಡೂ ತಪ್ಪು
2. ಬೂಟ್ ಲೆಗ್ಗರ್ ಎಂದರೆ ?
- ಸದಾ ಬೂಟುಗಳನ್ನು ಧರಿಸುವವನು
- ಯಾವುದೇ ಆದಾಯವಿಲ್ಲದವನು
- ಕಳ್ಳಭಟ್ಟೆ ಮತ್ತು ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದವನು
- ಸಮವಸ್ತ್ರದಲ್ಲಿನ ಪೋಲೀಸು ಅಧಿಕಾರಿ
3. ಎಕುಮೆನೆ’ ಎಂಬ ಪದದ ಇಂಗಿತ ಈ ಮುಂದಿನಂತಿವೆ ?
- ಜನರು ವಾಸವಿರುವ ಪ್ರದೇಶಗಳು
- ಜನರು ವಾಸವಿಲ್ಲದ ಪ್ರದೇಶಗಳು
- ವಿರಳ ಜನಸಂಖ್ಯೆಯ ಪ್ರದೇಶಗಳು
- ತಾತ್ಕಾಲಿಕವಾಗಿ ಜನರು ವಾಸಿಸುತ್ತಿರುವ ಪ್ರದೇಶಗಳು
4. ಕಬ್ಬು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಎರಡು ರಾಜ್ಯಗಳೆಂದರೆ ?
- ಗುಜರಾತ್ ಮತ್ತು ಹರಿಯಾಣ
- ಬಿಹಾರ್ ಮತ್ತು ಪಶ್ಚಿಮ ಬಂಗಾಳ
- ಒರಿಸ್ಸಾ ಮತ್ತು ಆಂಧ್ರಪ್ರದೇಶ
- ಮಹಾರಾಷ್ಟ್ರ ಮತ್ತು ಉತ್ತರ ಪ್ರದೆಶ
5. ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ ?
- 4 ಡಿಗ್ರಿ ಸಿ
- 3 ಡಿಗ್ರಿ ಸಿ
- -4 ಡಿಗ್ರಿ ಸಿ
- 0 ಡಿಗ್ರಿ ಸಿ
6. ಪ್ರಪಂಚ ಪರ್ಯಟನ ಮಾಡಿದ ಮೊದಲಿಗೆ ?
- ಕೊಲಂಬಸ್
- ವಾಸ್ಕೋಡಗಾಮ
- ಅಮುಂಡಸನ್
- ಫರ್ಡಿನೆಂಡ್ ಮೆಗಲಿನ್
7. ಇವುಗಳಲ್ಲಿ ಯಾವುದನ್ನು ಧಾನ್ಯದಕಾಳು ಎಂದು ಪರಿಗಣಿಸುವುದಿಲ್ಲ?
- ಅಕ್ಕಿ
- ಜೋಳ
- ಸಬ್ಬಕ್ಕಿ
- ರಾಗಿ
8. ಅರಾವಳಿಯ ಅತ್ಯಂತ ಉನ್ನತ ಶಿಖರ ?
- ಗುರುಶಿಖರ
- ದೊಡ್ಡ ಬೆಟ್ಟ
- ಅನೈಮುಡಿ
- ಮಹೇಂದ್ರಗಿರಿ
9. ವೇದಗಳಲ್ಲಿ ಪ್ರಥಮವಾಗಿ ರಚನೆಯಾಗಿದ್ದು ?
- ಸಾಮವೇದ
- ಅಥರ್ವಣವೇದ
- ಋಗ್ವೇದ
- ಯಜುರ್ ವೇಧ
10. ಸಿಂಧೂ ದಡದಲ್ಲಿ ಮೊದಲ ಬಾರಿಗೆ ಮಂಗೋಲರು ಕಾಣಿಸಿಕೊಂಡಾಗ, ಯಾರ ಆಳ್ವಿಕೆ ನಡೆಯುತ್ತಿತ್ತು?
- ಕುತಬ್ ಉದ್ದಿನ್ ಐಬಕ್
- ಇಲ್ತಮಿಶ್
- ಬಲ್ಬನ್
- ರಜಿಯಾ ಬೇಗಂ
11. ಸಾಕ್ಷರತಾ ಸಂಖ್ಯೆ ಅತ್ಯಮತ ಕಡಿಮೆ ಇರುವ ರಾಜ್ಯ ?
- ಒರಿಸ್ಸಾ
- ಬಿಹಾರ್
- ಉತ್ತರಪ್ರದೇಶ
- ಜಾರ್ಖಂಡ್
12. ಮ್ಯಾಕ್ ಮೋಹನ್ ರೇಖೆಯ ಬೇರ್ಪಡಿಸುವ ದೇಶಗಳ ಗಡಿಗಳು ?
- ಇಂಡಿಯಾ ಮತ್ತು ಪಾಕಿಸ್ತಾನ
- ಇಂಡಿಯಾ ಮತ್ತು ಚೀನಾ
- ಇಂಡಿಯಾ ಮತ್ತು ನೇಪಾಳ
- ಇಂಡಿಯಾ ಮತ್ತು ಬಾಂಗ್ಲಾದೇಶ
13. ಅಗ್ನಿ ಶಾಮಕ ಉಪಕರಣದಲ್ಲಿರುವ ಪದಾರ್ಥ ?
- ಸೋಡಿಯಂ ಸಲ್ಪೈಟ್
- ಸೋಡಿಯಂ ಬೈಕಾರ್ಬೋನೆಟ್
- ಕ್ಯಾಲ್ಸಿಯಂ ಬೈಕಾರ್ಬೋನೆಟ್
- ಕ್ಯಾಲ್ಸಿಯಂ ಸಲ್ಪೈಟ್
14. ಒಂದು ಸಲಕ್ಕೆ ಲೋಕಸಭೆಯ ಗರಿಷ್ಟ ಅವದಿ ಎಷ್ಟು?
- 6 ವರ್ಷಗಳು
- 5 ವರ್ಷಗಳು
- 3 ವರ್ಷಗಳು
- ನಿಶ್ಚಿತ ಅವದಿ ಇರುವುದಿಲ್ಲ
15. ಹಸಿರು ಕ್ರಾಂತಿ ಎಂಬ ಹೆಸರನ್ನು ನೀಡಿದವರು ?
- ಎಂ. ಎಸ್. ಸ್ವಾಮಿನಾಥನ್
- ಡಾ. ನಾರ್ಮನ್ ಬೋರ್ಲಾಗ್
- ವಿಲಿಯಂ ಗ್ಯಾಂಡೆ
- ಸದಾಶೀವ ರಾವ್
18. ಭಾರತದ ಪ್ರಥಮ ಹತ್ತಿ ಜವಳಿ ಉದ್ದಿಮೆಯು 1818 ರಲ್ಲಿ ಪೋರ್ಟ್ ಗ್ಲಾಸ್ಟರ್ ಎಂಬಲ್ಲಿ ಸ್ಥಾಪನೆಯಾಯಿತು. ಇದು ಯಾವ ರಾಜ್ಯದಲ್ಲಿದೆ?
- ಮಹರಾಷ್ಟ್ರ
- ಪಶ್ಚಿಮ ಬಂಗಾಳ
- ಗುಜರಾತ್
- ತಮಿಳುನಾಡು
17. ಒಂದು ಮಗವಿಗೆ ಟ್ರಿಪಲ್ ಆಂಟಿಜನ್ ಚುಚ್ಚು ಮದ್ದು ನೀಡಿದಾಗ, ಅದು ಯಾವ ಮೂರು ರೋಗಗಳ ವಿರುದ್ದ ಮಗುವಿಗೆ ರಕ್ಷಣೆ ನೀಡುತ್ತದೆ ?
- ಭೇದಿ, ನಾಯಿಕೆಮ್ಮು ಮತ್ತು ಧನುರ್ವಾಯು
- ಡಿಫ್ತಿರಿಯಾ, ನಾಯಿಕೆಮ್ಮು, ಮತ್ತು ಧನುರ್ವಾಯು
- ಡಿಫ್ತಿರಿಯಾಮ ನ್ಯುಮೊನಿಯಾ, ಮತ್ತು ಧನುರ್ವಾಯು
- ಡಿಫ್ತಿರಿಯಾ, ನಾಯಿಕೆಮ್ಮು ಮತ್ತು ಟೈಫಾಯ್ಡ್
18. ಯಾವೆರಡು ರಾಜ್ಯಗಳ ಜೋಡಿಯು ಕಡಿಮೆ ಅರಣ್ಯ ಪ್ರದೇಶಗಳನ್ನು ಹೊಂದಿದೆಯೆಂದರೆ ?
- ಕರ್ನಾಟಕ ಮತ್ತು ಕೇರಳ
- ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ
- ಪಂಜಾಬ್ ಮತ್ತು ಹರಿಯಾಣ
- ಅರುಣಾಚಲ ಪ್ರದೇಸ ಮತ್ತು ಅಸ್ಸಾಂ
19. ಗೋಲ್ಡನ ಬೋ’ ಎಂಬುದು ?
- ಸಂತಾಲರು ಪೂಜಿಸುವ ಪುರಾತನ ಮಹತ್ವ ಆಯುಧ
- ಮಹಾಭಾರತದ ಅರ್ಜುನನಿಗೆ ಸಂಬಂಧಿಸಿದ ಒಂದು ಕಥೆ
- ಟಿ.ಎಸ್.ಎಲಿಯೇಟ್ ರವರ ಸುನಿತಗಳ ಗುಚ್ಚ
- ಮಂತ್ರವಿದ್ಯೆಯ ಕುರಿತಾದ ಸರ್. ಜೇಮ್ಸ ಅವರ ಕೃತಿ
20. ಕಾಫಿ ಮತ್ತು ಕೋಕೋ ಕೋಲಾಗಳಲ್ಲಿರುವ ಸಮಾನಾಂಶವೇನು?
- ಎರಡೂ ಸಹ ಮೆದು ಪಾನೀಯಗಳು
- ಎರಡೂ ಸಹ ಮತ್ತು ಬರಿಸುವ ಪಾನೀಯಗಳು
- ಎರಡರಲ್ಲೂ ಸಕ್ಕರೆ ಇರುತ್ತದೆ
- ಎರಡರಲ್ಲೂ ಅಲ್ಕಲಾಯಿಡ್ ಕೆಫೀನ್ ಇರುತ್ತದೆ
21. ಮಧ್ಯ ಭಾರತಕ್ಕೆ ಸೇರಿದ ಒಂದು ಬೆಟ್ಟ ಸಾಲು ಯಾವುದೆಂದರೆ ?
- ಖಾಸಿಸ್
- ಗಾರೋಸ್
- ಪಟ್ಕಾಯಸ್
- ಕೈರ್ ಮುರ್ಸ್
22. ಕರ್ನಾಟಕದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಕ್ರಮವಾಗಿ ಕಂಡು ಬರುವ ಸರಿಯಾದ ಪ್ರಮುಖ ಮೂರು ಬಗೆಯ ಮಣ್ಣುಗಳಾವುವೆಂದರೆ ?
- ಉಪ ಪರ್ವತ ಮಣ್ಣುಗಳು – ತೆರಾಯಿ ಮಣ್ಣುಗಳು ಹಿಮ ನದಿಯಿಂದಾಗುದ ಮಣ್ಣುಗಳು
- ಜಂಬಿಟ್ಟಿಗೆ ಮಣ್ಣು ಕೆಂಪು ಮಣ್ಣು ಮತ್ತು ಕಪ್ಪು ಮಣ್ಣುಗಳು
- ಮರಳು ಮಿಶ್ರಿತ ಕೆಂಪು ಮಣ್ಣು, ರೇವೆ ಮಣ್ಣು, ಮತ್ತು ಜಂಬಿಟ್ಟಿಗೆ ಮಣ್ಣುಗಳು
- ಕಪ್ಪು ಮಣ್ಣುಗಳು ಸ್ಕೆಲಿಟಲ್ ರೀತಿಯ ಮರಳು ಮಿಶ್ರಿತ ಕೆಂಪು ಮಣ್ಣುಗಳು
23. ನರೋರ ಮತ್ತು ರಾವತ್ ಭಾಟ್ ಅಣು ಶಕ್ತಿಯಾಧಾರಿತವಾದ ಔಷ್ಣಿಯ ವಿದ್ಯುತ್ ಕೇಂದ್ರಗಳು ಕ್ರಮವಾಗಿಕಂಡು ಬರುವ ರಾಜ್ಯಗಳು ?
- ಉತ್ತರ ಪ್ರದೇಶ ಮತ್ತು ರಾಜಸ್ಥಾನ
- ಗುಜರಾತ್ ಮತ್ತು ಮದ್ಯಪ್ರಧೇಶ
- ಪಶ್ಚಿಮ ಬಂಗಾಲ ಮತ್ತು ಮಹಾರಾಷ್ಟ್ರ
- ಮಹಾರಾಷ್ಟ್ರ ಮತ್ತು ಗುಜರಾತ್
24. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ?
- ಸರೋಜಿನಿ ನಾಯ್ಡು
- ವಿಜಯಲಕ್ಷ್ಮಿ ಪಂಡಿತ್
- ಪ್ರತಿಭಾ ಪಾಟಿಲ್
- ಮೀರಾ ಕುಮಾರ್
25. ಅರ್ಥಶಾಸ್ತ್ರದ ಕರ್ತೃ ?
- ಕೌಟಿಲ್ಯ
- ಬಾಣಭಟ್ಟ
- ಹರಿಷೇಣ
- ಕಾಳಿದಾಸ
26. ವಾಸ್ಕೋಡಗಾಮಾ ಭಾರತದಲ್ಲಿ ಪ್ರಥಮ ಬಾರಿಗೆ ಬಂದಿಳಿದ ಸ್ಥಳ ?
- ಕಲ್ಲಿಕೋಟೆ
- ಗೋವಾ
- ಕೊಚ್ಚಿನ್
- ಕಾಸರಗೋಡು
27. ಒಂದು ಪ್ರದೇಶದಲ್ಲಿ ಅಮೃತ ಶಿಲೆ ಕಂಡು ಬಂದರೆ ಆ ಪ್ರದೇಶದಲ್ಲಿ ಈ ಮುಂದಿನ ಯಾವ ಪ್ರಕ್ರಿಯೆ ನಡೆದಿರಬಹುದು ?
- ಸಂಚಯನ
- ವಾಯುಕೊರೆತ
- ಜ್ವಾಲಾಮುಖಿ ಸ್ಪೋಟ
- ಸಂಪರ್ಕ ರೂಪಾಂತರ
28. ಬೆಂಗ್ಯುಲಾ ಪ್ರವಾಹವು ?
- ದಕ್ಷಿಣ ಶಾಂತ ಸಾಗರದ ಶೀತ ಪ್ರವಾಹ
- ಉತ್ತರ ಶಾಂತ ಸಾಗರದ ಉಷ್ಣ ಪ್ರವಾಹ
- ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತ ಪ್ರವಾಹ
- ಉತ್ತರ ಅಟ್ಲಾಂಟಿಕ ಸಾಗರದ ಉಷ್ಣಪ್ರವಾಹ
29. ರಾಜ್ಯನೀತಿಯ ನಿರ್ದೇಶಕ ತತ್ವಗಳನ್ನು ?
- ಯಾವುದೇ ನ್ಯಾಯಾಲಯಗಳಲ್ಲಿ ಜಾರಿಗೆ ತರಬಹುದು
- ಯಾವುದೇ ನ್ಯಾಯಾಲಯದಲ್ಲಿ ಜಾರಿಗೆ ತರಲಾಗುವುದಿಲ್ಲ .
- ಇವುಗಳನ್ನು ಜಾರಿಗೊಳಿಸಿದರೆ ಸರ್ಕಾವನ್ನು ವಜಾಗೊಳಿಸಬೇಕಾಗುತ್ತದೆ
- ಈ ನಿರ್ಧೇಶಕ ತತ್ವಗಳನ್ನು ಅನುಷ್ಟಾನಗೊಳಿಸದಿರುವುದಕ್ಕಾಗಿ ವಿರೋಧ ಪಕ್ಷವು ಸರ್ಕಾರವನ್ನು ಕೆಳಗಿಳಿಯುವಂತೆ ಮಾಡಬಹುದು
30. ಭಾರತದಲ್ಲಿ ಈ ಮುಂದಿನ ಯಾವ ರೀತಿಯ ವಲಸೆ ಅತ್ಯಂತ ಸಾಮಾನ್ಯವಾದುದಾಗಿದೆ?
- ಗ್ರಾಮಾಂತರದಿಂದ, ಗ್ರಾಮಾಂತರ
- ಗ್ರಾಮಾಂತರದಿಂದ, ನಗರ
- ನಗರದಿಂದ, ನಗರ
- ನಗರದಿಂದ, ಗ್ರಾಮಾಂತರ
31. ಸೂರ್ಯಾಸ್ತ ಮತ್ತು ಸೂರ್ಯೋದಯಗಳು ಕೆಂಪಾಗಿರುತ್ತವೆ ಹಾಗೂ ಆಕಾಶವು ನೀಲಿ ಯಾಗಿರುತ್ತದೆ ಇದನ್ನು ಯಾವ ಆಧಾರದ ಮೇಲೆ ವಿವರಿಸಬಹುದು?
- ಬೆಳಕಿನ ವಿವರ್ತನ
- ಬೆಳಕಿನ ಪ್ರತಿಫಲನ
- ಬೆಳಕಿನ ಚದುರುವಿಕೆ
- ಬೆಳಕಿನ ಬಾಗುವಿಕೆ
32. ವ್ಯಕ್ತಿಯಲ್ಲಿ ಜ್ವರವನ್ನು ಇಳಿಸುವುದಕ್ಕೆ ಶಿಫಾರಸ್ಸು ಮಾಡಲಾಗುವ ಔಷಧ ಗುಳಿಗೆಗಳಲ್ಲಿ ಬಳಕೆಯಾಗುವ ಮುಖ್ಯ ರಾಸಾಯನಿಕ ಘಟಕ ಯಾವುದು?
- ಇಬುಫ್ರೋಫೆನ್
- ಥಿಯೋಫಿಲಿನ್
- ಅಮಾಕ್ಸಿಲಿನ್
- ಪ್ಯಾರಾಸಿಟಿಮಾಲ್
33. ಅರುಣಾಚಲ ಪ್ರದೇಶದಾದ್ಯಂತ ಭಾರತ ಮತ್ತು ಚೀನಾ ಗಡಿರೇಖೆಯು ಯಾವುದರಿಂದ ಪ್ರತ್ಯೇಕಸಲ್ಪಟ್ಟಿದೆ?
- ಮೇಕ್ ಮೋಹನ್ ರೇಖೆ
- ರಾಡ್ ಕ್ಲಿಪ್
- ಡ್ಯುರಾಂಡ್ ಗಡಿ ರೇಖೆ
- ವಾಘಾ ಗಡಿ
34. ಉಪ್ಪಿನ ರಾಸಾಯನಿಕ ಹೆಸರು ?
- ಪೋಟ್ಯಾಶಿಯಂ ಕ್ಲೋರೈಡ್
- ಸೋಡಿಯಂ ಕ್ಲೋರೈಡ್
- ಕ್ಯಾಲ್ಸಿಯಂ ಕ್ಲೋರೈಡ್
- ಸೋಡಿಯಂ ಬ್ರೋಮೈಡ್
35. ಈ ಮುಂದಿನ ಮೂಲಗಳಲ್ಲಿ ಯಾವುದು ಭಾರತದಲ್ಲಿ ಗರಿಷ್ಠ ನಿವ್ವಳ ನೀರಾವರಿ ಪ್ರದೇಶಕ್ಕೆ ಕಾರಣವಾಗಿದೆ?
- ನದಿಗಳು
- ಕರೆಗಳು
- ಬಾವಿಗಳು
- ಇತರ ಮೂಲಗಳು
36. ಭಾರತದಲ್ಲಿ ಯಾವ ಎರಡು ಸ್ಥಳಗಳು ವರ್ಷಕ್ಕೆ 1080 ಸೆಂ,ಮೀ ಗಿಂತ ಹೆಚ್ಚಿಗೆ ಮಳೆಯನ್ನು ಪಡೆಯುತ್ತವೆ?
- ಚಿರಾಂಪುಂಜಿ ಮತ್ತು ಗೋಲ್ ಘಾಟ್
- ಚಿರಾಪುಂಚಿ ಮತ್ತು ಮಾಸಿಂ ರಾಂ
- ಆಗುಂಭೆ ಮತ್ತು ಸೂಪಾ
- ಆಗುಂಬೆ ಮತ್ತು ಕೆಮ್ಮಣಗುಂಡಿ
37. ಮೂರನೇ ಆಂಗ್ಲೋ ಮೈಸೂರಿನ ಯುದ್ಧವನ್ನು ಕೊನೆಗಾಣಿಸಿದ ಒಪ್ಪಂದ ?
- ಮದ್ರಾಸ್ ಒಪ್ಪಂದ
- ಮಂಗಳೂರು ಒಪ್ಪಂದ
- ಮೈಸೂರು ಒಪ್ಪಂದ
- ಶ್ರೀರಂಗಪಟ್ಟಣ ಒಪ್ಪಂದ
38. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಉತ್ತರದಿಂದ ದಕ್ಷಿಣಕ್ಕೆ ಸಂಬಂಧಿಸಿದ ಸರಿಯಾದ ದೂರವಾಗಿದೆ?
- 3412 ಕಿ.ಮೀ
- 3214 ಕಿ.ಮೀ
- 3142 ಕಿ.ಮೀ
- 3849 ಕಿ.ಮೀ
39. ತಿರುವಳ್ ವರ್ ರಚಿಸಿದ ಕೃತಿ ?
- ತಿರುಳ್ ಕುರುಳ್
- ಮಣಮೇಖಲೈ
- ಪದಿಟ್ರಪಟ್ಟು
- ಅಹನಾನೂರು
40. ಆರ್ಯಭಟ ಒಬ್ಬ ಪ್ರಸಿದ್ದ ?
- ಗಣಿತಶಾಸ್ತ್ರಜ್ಞ ಖಗೋಳಶಾಸ್ತ್ರಜ್ಞ
- ವೈದ್ಯ ಮತ್ತು ಗಣಿತಶಾಸ್ತ್ರ
- ಖಗೋಳ ಶಾಸ್ತ್ರಜ್ಞ ಮತ್ತು ವೈದ್ಯ
- ವೈದ್ಯ ಹಾಗೂ ಜ್ಯೋತಿಷಿ
41. ಭಾರತದ ಸಂವಿಧಾನವು ಜಾರಿಗೆ ಬಂದ ದಿನಾಂಕ ?
- 28ನೇ ನವೆಂಬರ್, 1949
- 15ನೇ ಅಗಷ್ಟ 1947
- 26 ನೇ ಜನೆವರಿ, 1950
- 29ನೇ ಆಗಷ್ಟ 1947
42. ಒಂದು ದೊಡ್ಡ ಕಲ್ಲಿದ್ದಲು ತುಂಢನ್ನು ಅತ್ಯಧಿಕ ಉಷ್ಣಾಂಶದಲ್ಲಿಬಹಳ ದೀರ್ಘಕಾಲದವರೆಗೆ ಸತತವಾಗಿ ಒತ್ತಿ ಸಂಕೋಚಿಸಿದಾಗ ಏನಾಗುತ್ತದೆ?
- ಅದು ಪುಡಿ ಪುಡಿಯಾಗುತ್ತದೆ
- ಅದಿ ಗ್ರಾಫೈಟ್ ಆಗಿ ಪರಿವರ್ತನೆಯಾಗುತ್ತದೆ
- ಅದು ವಜ್ರವಾಗಿ ಪರಿವರ್ತನೆಯಾಗುತ್ತದೆ
- ಅದು ಇನ್ನೂ ಚಿಕ್ಕ ಕಲ್ಲಿದ್ದಲಿನ ತುಂಡು ಆಗುತ್ತದೆ
43. ಹರ್ಷವರ್ಧನನ ಆಳ್ವಿಕೆಯಲ್ಲಿ ನಳಂದ ಪ್ರಸಿದ್ದಿಯಾಗಿದ್ದುದ್ದು ?
- ವಾಣಿಜ್ಯ ಕೇಂದ್ರವಾಗಿ
- ಉತ್ಪಾದನಾ ಕೇಂದ್ರವಾಗಿ
- ಕೈ ಕಸುಬಿನ ಕೇಂದ್ರವಾಗಿ
- ಶಿಕ್ಷಣ ಕೇಂದ್ರವಾಗಿ
44. ದಕ್ಷಿಣದಲ್ಲಿ ಆರಂಭದ ವೈಷ್ಣವ ಭಕ್ತಿ ಸಂತರು ಯಾರು?
- ಭಾಗವಂತರು
- ನಯನಾರರು
- ಆಳ್ವಾರರು
- ವೀರಶೈವರು
45. ಭಾರತ ಸಂವಿಧಾನದ ಪೀಠಿಕೆಯಲ್ಲಿ ಎಲ್ಲ ಪ್ರಜೆಗಳಿಗೂ ಕೆಳಕಂಡುದನ್ನು ಒದಗಿಸಿ ಕೊಡಲಾಗಿದೆ ?
- ಸ್ವಾತಂತ್ರ್ಯ ಮತ್ತು ಸಮಾನತೆ
- ಸಮಾನತೆ, ನ್ಯಾಯ ಮತ್ತು ಭ್ರಾತೃತ್ವ
- ನ್ಯಾಯ, ಸ್ವಾತಂತ್ರ್ಯ, ಮತ್ತು ಸಮಾನತೆ
- ನ್ಯಾಯಾ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ
46. ಸಂಸತ್ತಿನ ಎರಡರಲ್ಲಿ ಯಾವುದಾದರೊಂದು ಸದನಕ್ಕೆ ಆಯ್ಕೆಯಾಗಲು ಸದಸ್ಯರೊಬ್ಬರನ್ನು ಕೆಳಕಂಡ ಸಂದರ್ಭದಲ್ಲಿ ಅನರ್ಹಗೊಳಿಸಬಹುದು?
- ಆತ ದಿವಾಳಿ ಎಂದು ವಿಮೋಚಿತನಾಗಿದ್ದರೆ
- ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ
- ಭಾರತ ಸರ್ಕಾರದಲ್ಲಿ ಆತ ಯಾವುದಾದರೂ ಲಾಭದಾಯಕ ಹುದ್ದೆ ಹೊಂದಿದ್ದರೆ
- ಮೇಲಿನ ಎಲ್ಲ ಸಂದರ್ಭಗಳಲ್ಲೂ
47. ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ ಸಮೂಹ ?
- ಗ್ರೀನ್ ಲ್ಯಾಂಡ್
- ಕ್ಯಾರಿಬಿಯನ್
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
- ಶ್ರೀಲಂಕಾ
48. ಇಲ್ಲಿನ ಯಾವುದನ್ನು ಪ್ರಾಚೀನ ಭಾರತದ ಹೆಟೆರೋಡಾಕ್ಸ ಚಿಂತನೆ ಎಂದು ಉದಾಹರಿಸಬಹುದು?
- ವೇದಗಳು
- ಉಪನಿಷತ್ತುಗಳು
- ಬ್ರಹ್ಮಸೂತ್ರಗಳು
- ಲೋಕಾಯತ
49. ಈ ಕೆಳಗಿನ ಯಾವುದಕ್ಕೆ ಟ್ರಾನ್ಸ ಹೂಮಾನ್ಸ ಸಂಬಂಧಿಸಿದೆ?
- ಬೇಟೆಮಾಡುವ ಸಮುದಾಯಗಳು
- ಅಲೆಮಾರಿ ಗೋವಳರು
- ಸ್ಥಳಾಂತರಿ ಬೇಸಾಯಗಾರರು
- ಮೀನುಗಾರಿಕೆ ಸಮುದಾಯಗಳು
50. ನಿಯೋಗ’ ಎಂದರೆ ?
- ಹಿಂದೂ ಪಂಚಾಂಗದ ಪ್ರಕಾರ ಒಂದು ಅಪಸಮಯ
- ಮೇಲು ಜಾತಿಯ ಗಂಡಸುಕೆಳ ಜಾತಿಯ ಹೆಂಗಸನ್ನು ವಿವಾಹವಾಗುವುದು
- ಮಕ್ಕಳಿಲ್ಲದ ವಿಧವೆಯು ಮಕ್ಕಳನ್ನು ಪಡೆಯುವ ಬಗೆ
- ಪ್ರೀತಿಪಾತ್ರರ ವಿಯೋಗದಿಂದ ಉಂಟಾಗುವ ದುಃಖ