(Geography) General Knowledge

Feb 10, 2022 01:08 pm By Admin

  1. ಉಷ್ಣೋದಕ ಮತ್ತು ಶಿತೋದಕ ಪ್ರವಾಹಗಳು ಸಂಧಿಸುವ ಸ್ಥಾನಗಳು ಯಾವ ಏಕಕೋಶ ಜೀವಿಗಳ ಅಭಿವೃದ್ಧಿಗೆ ಸಹಾಯಕವಾಗಿವೆ ?
  • ಅಮೀಬಾ
  • ಪ್ಲಾಂಕ್ಟನ್
  • ಅಲ್ಗೀ
  • ಪ್ರೊಟೊಜೊವಾ

2. ಜಗತ್ತಿನ ಬಹುತೇಕ ಮರುಭೂಮಿಗಳು ಯಾವ ಪ್ರವಾಹಗಳ ಪಶ್ಚಿಮಕ್ಕೆ ನಿರ್ಮಾಣಗೊಂಡಿವೆ ?

  • ಉಷ್ಣೋದಕ
  • ಶೀತೋದಕ

3. ಕೆಳಗಿನ ಯಾವ ಪ್ರವಾಹ ಉಷ್ಣೋದಕ ಪ್ರವಾಹ ?

  • ಗಲ್ಫ್ ಸ್ಟ್ರೀಮ್
  • ಕುರೋಶಿಯೊ
  • ಅಕುಲಾಸ್
  • ಮೇಲಿನ ಎಲ್ಲಾ

4. ಕೆಳಗಿನ ಯಾವ ಪ್ರವಾಹಗಳು ಶೀತೋದಕ ಪ್ರವಾಹಗಳಾಗಿವೆ ?

  • ಕ್ಯಾಲಿಫೋರ್ನಿಯಾ
  • ಪೆರು
  • ಕೆನರಿ
  • ಮೇಲಿನ ಎಲ್ಲಾ

5. ಸಾಮಾನ್ಯವಾಗಿ ಉಷ್ಣೋದಕ ಪ್ರವಾಹಗಳ ದಿಕ್ಕು ?

  • ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ
  • ಸಮಭಾಜಕ ವೃತ್ತದಿಂದ ಧ್ರುವಗಳ ಕಡೆಗೆ

6. ಸಾಮಾನ್ಯವಾಗಿ ಶೀತೋದಕ ಪ್ರವಾಹಗಳ ದಿಕ್ಕು ?

  • ಸಮಭಾಜಕ ವೃತ್ತದಿಂದ ಧ್ರುವಗಳ ಕಡೆಗೆ
  • ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ

7. ಮೊಜಾಂಬಿಕ್ ಪ್ರವಾಹ ಯಾವ ಸ್ಥಳಗಳ ನಡುವೆ ಹರಿಯುತ್ತದೆ ?

  • ಮೊಜಾಂಬಿಕ್ ಮತ್ತು ಜಾವಾ
  • ಮೊಜಾಂಬಿಕ್ ಮತ್ತು ಸೌದಿ ಅರೇಬಿಯಾ
  • ಮೊಜಾಂಬಿಕ್ ಮತ್ತು ಮಡಗಾಸ್ಕರ್‌
  • ಮೊಜಾಂಬಿಕ್ ಮತ್ತು ಆಸ್ಟ್ರೇಲಿಯಾ

8. ಹಿಂದೂ ಮಹಾಸಾಗರದಲ್ಲಿ ಕಂಡುಬರುವ ಪ್ರವಾಹ ಯಾವುದು ?

  • ಮೊಜಾಂಬಿಕ್
  • ಅಗುಲ್ಹಾಸ್
  • ಮಡಗಾಸ್ಕರ್
  • ಮೇಲಿನ ಎಲ್ಲಾ

9. ಸಾಗರಗಳಲ್ಲಿ ಕಂಡುಬರುವ ಉಬ್ಬರ ಇಳಿತಕ್ಕೆ ಕಾರಣವೇನು ?

  • ಭೂಮಿ ಮತ್ತು ಸೂರ್ಯನ ಗುರುತ್ವಾಕರ್ಷಣೆ ಶಕ್ತಿ
  • ಸೂರ್ಯ ಮತ್ತು ಚಂದ್ರರ ಗುರುತ್ವಾಕರ್ಷಣೆ ಶಕ್ತಿ
  • ಭೂಮಿ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿ
  • ಮೇಲಿನ ಎಲ್ಲಾ

10. ಸಾಮಾನ್ಯವಾಗಿ ಚಂದ್ರನಿಗೆ ಎದುರಾಗುವ ಸಾಗರದ ಭಾಗದಲ್ಲಿ ಅಧಿಕ ಗುರುತ್ವಾಕರ್ಷಣೆ ಬಲದಿಂದ ಉಬ್ಬರ ಕಾಣಿಸಿಕೊಳ್ಳುವುದು.

ಆದರೆ ಕೆಲವೊಮ್ಮೆ ಚಂದ್ರನಿಗೆ ಎದುರಾಗಿರುವ ಭಾಗಕ್ಕೆ ವಿರುದ್ಧವಾದ ಭೂಮಿಯ ಮತ್ತೊಂದು ಭಾಗದಲ್ಲಿಯೂ ಉಬ್ಬರ ಕಾಣಿಸಿಕೊಳ್ಳುವುದು ಇದಕ್ಕೆ ಭೂಮಿಯ ಯಾವ ಬಲ ಕಾರಣವಾಗುತ್ತದೆ ?

  • ಕೇಂದ್ರಾಪಗಾಮಿ centrifugal force
  • ಗುರುತ್ವಾಕರ್ಷಣೆ ಬಲ gravitational force
  • ಕೇಂದ್ರಾಭಿಮುಖ centripetal force
  • ಮೇಲಿನ ಎಲ್ಲಾ

11. ಅಂಡಮಾನ್ ನಿಕೋಬಾರ್ ದ್ವೀಪಗಳು __ ?

  • ಹವಳದ ದ್ವೀಪಗಳು
  • ಜ್ವಾಲಾಮುಖಿ ದ್ವೀಪಗಳು
  • ಖಂಡಾಂತರ ದ್ವೀಪಗಳು
  • ತೋರಣ ದ್ವೀಪಗಳು

12. ಭೂಮಿ ಸೂರ್ಯ ಚಂದ್ರ ಮೂವರು ಒಂದೇ ಸರಳ ರೇಖೆಯಲ್ಲಿ ಬರುವುದನ್ನು ಏನೆಂದು ಕರೆಯುತ್ತಾರೆ ?

  • ಅಪೋಜಿ
  • ಪೆರೀಜಿ
  • ಸೈಝಿಝಿ
  • ಎಕ್ಲಿಫ್ಸ್

13. ಹೇಳಿಕೆ – ಅಧಿಕ ಉಬ್ಬರಗಳು ಅಮವಾಸ್ಯೆ ಮತ್ತು ಹುಣ್ಣುಮೆ ದಿನದಂದು ಮಾತ್ರ ಸಂಭವಿಸುತ್ತವೆ.

ಕಾರಣ – ಚಂದ್ರ, ಸೂರ್ಯ, ಭೂಮಿ ಮೂರು ಒಂದೇ ರೇಖೆಯಲ್ಲಿ ಬರುವುದು ಹುಣ್ಣುಮೆ ಹಾಗೂ ಅಮವಾಸ್ಯೆ ದಿನಗಳಂದು ಮಾತ್ರ. ?

  • ಹೇಳಿಕೆ ಸರಿ ಕಾರಣ ಸೂಕ್ತವಾಗಿಲ್ಲ
  • ಹೇಳಿಕೆ ತಪ್ಪು ಕಾರಣ ಸೂಕ್ತವಾಗಿದೆ
  • ಹೇಳಿಕೆ ಸರಿ ಹಾಗೂ ಕಾರಣವು ಸೂಕ್ತವಾಗಿದೆ
  • ಹೇಳಿಕೆ ತಪ್ಪು ಕಾರಣ ಸೂಕ್ತವಾಗಿಲ್ಲ

14. ಕೆಳಗಿನ ಯಾವ ಭೌಗೋಳಿಕ ಪರಿಸ್ಥಿತಿಗಳು ಹವಳದ ಜೀವಿಗಳ ನಿರ್ಮಾಣಕ್ಕೆ ಹೆಚ್ಚು ಸೂಕ್ತವಾಗಿವೆ ?

  • 20 ° ಸೆಂ. ಗಿಂತ ಅಧಿಕ ಸಾಗರದ ನೀರಿನ ಉಷ್ಣಾಂಶ
  • ಕನಿಷ್ಠ 27°|.. ರಿಂದ 40 °/.. ಲವಣತೆಯನ್ನು ಹೊಂದಿದ ನೀರು
  • ಕಲುಷಿತವಲ್ಲದ ತಿಳಿನೀರು
  • ಮೇಲಿನ ಎಲ್ಲಾ

15. ಪ್ರಪಂಚದ ಅತಿ ಆಳವಾದ ಸಾಗರ ಯಾವುದು ?

  • ಅಟ್ಲಾಂಟಿಕ್
  • ಪೆಸಿಫಿಕ್
  • ಹಿಂದೂ ಮಹಾಸಾಗರ
  • ಆರ್ಕಟಿಕ್ ಸಾಗರ

16. S ಆಕಾರದಲ್ಲಿರುವ ಸಮುದ್ರ ಯಾವುದು ?

  • ಪೆಸಿಫಿಕ್
  • ಅಟ್ಲಾಂಟಿಕ್
  • ಹಿಂದೂ ಮಹಾಸಾಗರ
  • ಆರ್ಕಟಿಕ್ ಸಾಗರ

17. ಎ. ಸಾಗರದ ನೀರು ಭೂಭಾಗಗಳ ಒಳಗೆ ದೂರದವರೆಗೆ ಚಾಚಿಕೊಂಡಿರುವುದು – ಕೊಲ್ಲಿ.

ಬಿ.ವಿಸ್ತಾರವಾದ ಎರಡು ಜಲರಾಶಿಗಳನ್ನು ಸಂಧಿಸುವುದು – ಜಲಸಂಧಿ. ?

  • ಎ ಮಾತ್ರ ಸರಿ
  • ಬಿ ಮಾತ್ರ ಸರಿ
  • ಎ ಮತ್ತು ಬಿ ಎರಡೂ ಸರಿ
  • ಎ ಮತ್ತು ಬಿ ಎರಡೂ ತಪ್ಪು

18. ಪಾಕ್ ಜಲಸಂಧಿ ಯಾವುದರ ನಡುವೆ ಕಂಡುಬರುತ್ತದೆ ?

  • ಪಾಕಿಸ್ತಾನ ಮತ್ತು ಭಾರತದ ನಡುವೆ
  • ಭಾರತ ಮತ್ತು ಮ್ಯಾನ್ಮಾರ್
  • ಭಾರತ ಮತ್ತು ಶ್ರೀಲಂಕಾ
  • ಭಾರತ ಮತ್ತು ಬಾಂಗ್ಲಾದೇಶ

19. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳನ್ನು ಜೋಡಿಸುವ ಜಲಸಂಧಿ ಯಾವುದು ?

  • ಕುಕ್ ಜಲಸಂಧಿ
  • ಕೊರಿಯಾ ಜಲಸಂಧಿ
  • ಮಲಕ್ಕಾ ಜಲಸಂಧಿ
  • ಮ್ಯಾಗಲಾನ್ ಜಲಸಂಧಿ

20. ಸುಂಡಾ ಜಲಸಂಧಿ ಎಲ್ಲಿ ಕಂಡುಬರುತ್ತದೆ ?

  • ಲಕ್ಷದ್ವೀಪಗಳ ನಡುವೆ
  • ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ನಡುವೆ
  • ಸುಮಾತ್ರ ಮತ್ತು ಜಾವಾ ದ್ವೀಪಗಳ ನಡುವೆ
  • ಹಿಂದೂ ಮಹಾಸಾಗರದ ನಡುವೆ

21. ಎ. ಸೂಯೆಜ್ ಕಾಲುವೆಯು ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಸಂಪರ್ಕಿಸುತ್ತದೆ.

ಬಿ. ಪನಾಮ ಕಾಲುವೆಯು ಮೆಕ್ಸಿಕೊ ಖಾರಿ ಮತ್ತು ಫೆಸಿಫಿಕ್ ಸಾಗರಗಳನ್ನು ಸಂಪರ್ಕಿಸುತ್ತದೆ.

  • ಎ ಮಾತ್ರ ಸರಿ
  • ಬಿ ಮಾತ್ರ ಸರಿ
  • ಎ ಮತ್ತು ಬಿ ಎರಡೂ ಸರಿ
  • ಎ ಮತ್ತು ಬಿ ಎರಡೂ ತಪ್ಪು

22. ಸಮುದ್ರದ ನೀರಿನ ಆಳವನ್ನು ಅಳೆಯುವ ಮಾನ ಯಾವುದು ?

  • ನಾಟಿಕಲ್ ಮೈಲ್
  • ಫರ್ಲಾಂಗು
  • ಫ್ಯಾದಮ್
  • ಐಸೋಬಾತ್

23. ಒಂದು ಫ್ಯಾದಮ್ ಎಂದರೆ ?

  • 4 ಅಡಿ
  • 5 ಅಡಿ
  • 6 ಅಡಿ
  • 8 ಅಡಿ

24. ಸಾಗರದ ಉದ್ದ, ಅಗಲ, ಹಾಗೂ ವಿಸ್ತಾರವನ್ನು ಯಾವ ಮಾನದಲ್ಲಿ ಅಳೆಯುವರು ?

  • ಫ್ಯಾದಮ್
  • ನಾಟಿಕಲ್ ಮೈಲ್
  • ಐಸೋಬಾತ್
  • ಫರ್ಲಾಂಗು

25. ಜಗತ್ತಿನಲ್ಲಿ ಅತ್ಯಂತ ಆಳವಾದ ಚಾಲೆಂಜರ್ ಸಾಗರ ತಗ್ಗು ಯಾವ ಸಮುದ್ರದಲ್ಲಿ ಕಂಡುಬರುತ್ತದೆ ?

  • ಹಿಂದೂ ಮಹಾಸಾಗರ
  • ಅಟ್ಲಾಂಟಿಕ್
  • ಪೆಸಿಫಿಕ್
  • ಸೌತ್ ಚೀನಾ ಸೀ