Geography Part-02 GK Questions

Feb 14, 2022 11:31 am By Admin

1. ಉಷ್ಣವಲಯದ ಬಹುತೇಕ ಮರುಭೂಮಿಗಳು ಯಾವ ಪ್ರವಾಹಗಳ ಅಂಚಿನಲ್ಲಿ ನಿರ್ಮಿತವಾಗಿವೆ ?

  • ಉಷ್ಣೋದಕ
  • ಶೀತೋದಕ
  • ನೈಸರ್ಗಿಕ
  • ಮಾನವ ನಿರ್ಮಿತ

2. ಕೆಳಗಿನ ಯಾವ ಕಿರಣಗಳು ಭೂ ಮೇಲ್ಮೈಯನ್ನು ತಲುಪುವ ಕಿರಣಗಳಾಗಿವೆ ?

  • ಗಾಮಾ
  • ಕ್ಷ ಕಿರಣ
  • ಅಲ್ಟ್ರಾವೈಲೆಟ್
  • ದೃಷ್ಟಿ ಗೋಚರ ಬೆಳಕು

3. ಸೌರಶಾಖದ ತೀವ್ರತೆ ಅಳತೆಯಲು ಬಳಸುವ ಉಪಕರಣ ಯಾವುದು ?

  • ಅಲ್ಟಿಮೀಟರ್
  • ಅಕ್ಟಿನೋಮೀಟರ್
  • ಅಮ್ಮೀಟರ್
  • ಇನ್ಸೋಮೀಟರ್

4. ಉಷ್ಣತಾಮಾಪಕಗಳಲ್ಲಿ ಯಾವ ವಸ್ತುಗಳನ್ನು ತುಂಬಲಾಗಿರುತ್ತದೆ ?

  • ಆಲ್ಕೋಹಾಲ್ ಅಥವಾ ಪಾದರಸ
  • ಪಾದರಸ ಅಥವಾ ಮರ್ಕ್ಯುರಿ
  • ಸಾರಜನಕ ಅಥವಾ ರಂಜಕ
  • ಪಾದರಸ ಅಥವಾ ಸಿಲಿಕೇಟ್

5. ಉಷ್ಣಾಂಶ ಹೆಚ್ಚಾಗಿದ್ದಲ್ಲಿ ವಿಕಿರಣದ ಅಲೆಗಳು __ ಇರುತ್ತವೆ. ?

  • ದೀರ್ಘವಾಗಿ
  • ಕಿರಿದಾಗಿ
  • ಸಾಮಾನ್ಯವಾಗಿ
  • ಅಡ್ಡವಾಗಿ

6. ಒಂದು ವಸ್ತು ತನ್ನ ಉಷ್ಣತೆಗೆ ಅನುಗುಣವಾಗಿ ಅಲೆಗಳ ರೂಪದಲ್ಲಿ ಉಷ್ಣಾಂಶವನ್ನು ಹೊರಹೊಮ್ಮಿಸುವ ಕ್ರಿಯೆಗೆ ಏನೆಂದು ಕರೆಯುತ್ತಾರೆ ?

  • Albedo
  • Radiation
  • Green House effect
  • Conduction

7. ರಾತ್ರಿ ವೇಳೆಯಲ್ಲಿ ಭೂ ವಿಕಿರಣತೆಯು ?

  • ಕಡಿಮೆಯಾಗಿರುತ್ತದೆ
  • ಅಧಿಕವಾಗಿರುತ್ತದೆ
  • ಸಾಮಾನ್ಯವಾಗಿರುತ್ತದೆ
  • ನಿರ್ಧರಿಸಲು ಕಷ್ಟ

8. ಎರಡೂ ಗೋಳಾರ್ಧಗಳ ವಾಣಿಜ್ಯ ಮಾರುತಗಳು ಸಂಧಿಸುವ ಕ್ಷೇತ್ರ‌ ಯಾವುದು ?

  • Inter tropical convert zone
  • Inner tropical convergence zone
  • Inter tropical convergence zone
  • Inter tropical core zone

9. ಅಶ್ವ ಅಕ್ಷಾಂಶಗಳೆಂದು ಎಂದು ಯಾವುದನ್ನು ಕರೆಯಲಾಗುತ್ತದೆ ?

  • ಎರಡೂ ಗೋಳಾರ್ಧಗಳ 40 ° ಯಿಂದ 60 ° ಅಕ್ಷಾಂಶಗಳು
  • ಎರಡೂ ಗೋಳಾರ್ಧಗಳ 30° ಯಿಂದ 40° ಅಕ್ಷಾಂಶಗಳು
  • ಉತ್ತರ ಗೋಳಾರ್ಧದ 30° ಯಿಂದ 40° ಅಕ್ಷಾಂಶಗಳು
  • ದಕ್ಷಿಣ ಗೋಳಾರ್ಧದ 30° ಯಿಂದ 40° ಅಕ್ಷಾಂಶಗಳು

10. ಉತ್ತರ ಗೋಳಾರ್ಧದಲ್ಲಿ ಅವರ್ತ ಮಾರುತಗಳು ಗಡಿಯಾರದ ಚಲನೆಗೆ __ ಚಲಿಸುತ್ತವೆ ?

  • ಅನುಗುಣವಾಗಿ
  • ವಿರುದ್ಧವಾಗಿ

11. ವಾಣಿಜ್ಯ ಮಾರುತಗಳು

ಎ. ಉತ್ತರ ಗೋಲಾರ್ಧದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ ಬೀಸುತ್ತವೆ. ಬಿ. ದಕ್ಷಿಣ ಗೋಲಾರ್ಧದಲ್ಲಿ ಆಗ್ನೇಯದಿಂದ ವಾಯುವ್ಯಕ್ಕೆ ಬೀಸುತ್ತವೆ.

  • ಎ ಮಾತ್ರ ಸರಿ
  • ಬಿ ಮಾತ್ರ ಸರಿ
  • ಎ ಮತ್ತು ಬಿ ಎರಡೂ ಸರಿ
  • ಎ ಮತ್ತು ಬಿ ಎರಡೂ ತಪ್ಪು

12. ನಾಲ್ವತ್ತರ ಅಬ್ಬರ ಗಾಳಿ, ಐವತ್ತರ ಉಗ್ರಗಾಳಿ, ಅರವತ್ತರ ಅರಚುವ ಗಾಳಿ ಎಂದು ಯಾವ ಮಾರ್ಗಗಳನ್ನು ಕರೆಯುತ್ತಾರೆ ?

  • ವಾಣಿಜ್ಯ ಮಾರುತಗಳು
  • ಪ್ರತಿ ವಾಣಿಜ್ಯ ಮಾರುತಗಳು
  • ಧ್ರುವೀಯ ಮಾರುತಗಳು
  • ನಿಯತಕಾಲಿಕ ಮಾರುತಗಳು

13. ಭಾರತದಲ್ಲಿ ಮಾನ್ಸೂನ್ ಮಾರುತಗಳ ದಿಕ್ಕು ಯಾವುದು ?

  • ಈಶಾನ್ಯದಿಂದ ನೈಋತ್ಯಕ್ಕೆ
  • ವಾಯುವ್ಯದಿಂದ ಆಗ್ನೇಯಕ್ಕೆ
  • ಪೂರ್ವದಿಂದ ಪಶ್ಚಿಮಕ್ಕೆ
  • ನೈರುತ್ಯದಿಂದ ಈಶಾನ್ಯಕ್ಕೆ

14. ಹಿಮಭಕ್ಷಕ ಎಂದು ಕರೆಯಲ್ಪಡುವ ಸ್ಥಳೀಯ ಮಾರುತ ಯಾವುದು ?

  • ಹರ್ಮಟ್ಟನ್
  • ಚಿನೂಕ್
  • ಲೂ
  • ಹರಿಕೇನ್

15. ಡಾಕ್ಟರ್ ಎಂದು ಕರೆಯಲ್ಪಡುವ ಸ್ಥಳೀಯ ಮಾರುತ ಯಾವುದು ?

  • ಹರ್ಮಟ್ಟನ್
  • ಚಿನೂಕ್
  • ಲೂ
  • ಹರಿಕೇನ್

16. ಉಷ್ಣ ವಲಯದ ಆವರ್ತಮಾರುತಗಳು ಮತ್ತು ಪ್ರಾದೇಶಿಕ ಹೆಸರುಗಳು

ಎ. ಸೈಕ್ಲೋನ್ – ಹಿಂದೂ ಮಹಾಸಾಗರ ಬಿ. ಆಸ್ಟ್ರೇಲಿಯಾ – ವಿಲ್ಲಿ ವಿಲ್ಲಿ ಸಿ. ಚೀನಾ – ಟೈಫೂನ್ ?

  • ಎ ಮಾತ್ರ ಬಿ ಸರಿ
  • ಬಿ‌ ಮಾತ್ರ ಸಿ ಸರಿ
  • ಎ ಮತ್ತು ಸಿ ಸರಿ
  • ಎ ಬಿ ಸಿ ಮಾತ್ರ ಸರಿ

17. ಆವರ್ತ ಮಾರುತಗಳ ಕಣ್ಣಿನ ಭಾಗದಲ್ಲಿ ಗಾಳಿಯು ?

  • ಮೇಲೆರುತ್ತದೆ
  • ಕೆಳಗಿಳಿಯುತ್ತದೆ
  • ಅಲ್ಲೇ ಹರಿದಾಡುತ್ತದೆ
  • ನಿಖರವಾಗಿ ಹೇಳಲು ಕಷ್ಟ

18. ಆವರ್ತ ಮಾರುತಗಳಲ್ಲಿ ಯಾವ ಭಾಗವು ಅತ್ಯಧಿಕ ಮೋಡ, ವೇಗದ ಗಾಳಿ ಹಾಗೂ ಅತ್ಯಧಿಕ ಮಳೆಯಿಂದ ಕೂಡಿರುತ್ತದೆ ?

  • ಕಣ್ಣು
  • ಗೋಡೆ ಅಥವಾ ಒಳ ವೃತ್ತ
  • ಹೊರ ವೃತ್ತ
  • ಮೇಲಿನ ಎಲ್ಲಾ

19. ಉತ್ತರ ಗೋಳಾರ್ಧದಲ್ಲಿ ಪ್ರತ್ಯಾವರ್ತ ಮಾರುತಗಳ ದಿಕ್ಕು ಗಡಿಯಾರದ ಚಲನೆಗೆ ?

  • ಅನುಗುಣವಾಗಿ
  • ವಿರುದ್ಧವಾಗಿ
  • ಲಂಬವಾಗಿ
  • ನಿಖರವಾಗಿ ಹೇಳಲು ಕಷ್ಟ

20. ಎ. ಜೆಟ್ ಸ್ಟ್ರೀಂ ಗಳು ವಾಯುಮಂಡಲದಲ್ಲಿ ಸು. 12 ಕಿ ಮೀ. ಎತ್ತರದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬೀಸುತ್ತವೆ.

ಬಿ. ಹೆಟ್ ಸ್ಟ್ರೀಂ ಗಳು ಋತುಗಳಿಗೆ ಅನುಗುಣವಾಗಿ ಉತ್ತರ ಹಾಗೂ ದಕ್ಷಿಣದ ಕಡೆಗೆ ಸ್ಥಳಾಂತರ ಹೊಂದುತ್ತವೆ. ?

  • ಎ ಮಾತ್ರ ಸರಿ
  • ಬಿ ಮಾತ್ರ ಸರಿ
  • ಎ ಮತ್ತು ಬಿ ಎರಡೂ ಸರಿ
  • ಎ ಮತ್ತು ಬಿ ಎರಡು ತಪ್ಪು

21. ವಾಯುಮಂಡಲದ ತೇವಾಂಶವನ್ನು ಅಳೆಯುವ ಮಾಪಕ ಯಾವುದು ?

  • Hydrometer
  • Hygrometer
  • Hytrometer
  • Hymeter

22. ಮೋಡಗಳು ಯಾವ ವಲಯಕ್ಕೆ ಮಾತ್ರ ಸೀಮಿತವಾಗಿವೆ ?

  • MESOSPHERE
  • IONOSPHERE
  • TROPOSPHERE
  • EXOSPHERE

23. ಯಾವ ಮೋಡಗಳು ಆಲಿಕಲ್ಲು, ಗುಡುಗು, ಸಿಡಿಲುಗಳೊಂದಿಗೆ ಮಳೆಯನ್ಬು ಸುರಿಸುತ್ತವೆ ?

  • ಪದರು ಮೋಡ
  • ರಾಶಿ ವೃಷ್ಟಿ ಮೋಡ
  • ಹಿಮಕಣ ಮೋಡ
  • ಬ್ಯಾನರ್ ಮೋಡ

24. ಹೂ ಕೋಸು, ಹತ್ತಿಯ ಗುಪ್ಪೆ ಆಕಾರದಲ್ಲಿ ಕಂಡುಬರುವ ಮೋಡಗಳು ಯಾವವು ?

  • ಪದರು ಮೋಡಗಳು
  • ಹಿಮಕಣ ಮೋಡಗಳು
  • ಸಿರ್ರಸ್ ಮೋಡಗಳು
  • ಕ್ಯುಮುಲೋ ನಿಂಬಸ್ ಮೋಡಗಳು

25. ಗಾಳಿಯ ಮೇಲ್ಮುಖ ಚಲನೆಯಿಂದ ನಿರ್ಮಾಣವಾಗು ಮೋಡಗಳು ಯಾವವು ?

  • ಪದರು ಮೋಡಗಳು
  • ಹಿಮಕಣ ಮೋಡಗಳು
  • ರಾಶಿ ವೃಷ್ಟಿ ಮೋಡಗಳು
  • ಸಿರ್ರಸ್ ಮೋಡಗಳು