Goods and Services Tax

Jul 06, 2022 04:42 pm By Admin

-:ಸರಕು ಮತ್ತು ಸೇವಾ ತೆರಿಗೆ:-

ಸ್ವತಂತ್ರೋತ್ತರ ಭಾರತದ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಎಂದೇ ಕರೆಯಲ್ಪಡುವ ಸರುಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ-ಗೂಡ್ಸ್ & ಸರ್ವಿಸ್ ಟ್ಯಾಕ್ಸ್) ಮಸೂದೆ ಆಗಸ್ಟ್-3, 2016 ರಂದು ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಗೊಂಡಿದೆ. ಈ ಮೂಲಕ ಇಂಥದ್ದೊಂದು ಸರಳೀಕೃತ ತೆರಿಗೆ ವ್ಯವಸ್ಥೆ ಜಾರಿಯ ಕನಸು 16 ವರ್ಷಗಳ ಬಳಿಕ ಪೂರ್ಣಗೊಳ್ಳುವ ಸನ್ನಿಹದಲ್ಲಿದೆ. ಲೋಕಸಭೆಯಲ್ಲಿ ಈ ಜಿಎಸ್‌ಟಿ ಮಸೂದೆಗೆ ಮೇ-6, 2014ರಂದು ಅನುಮೋದನೆ ದೊರಕಿತು. ಸಂವಿಧಾನಕ್ಕೆ 122 ನೇ ತಿದ್ದುಪಡಿ ತಂದು, ಜಿಎಸ್‌ಟಿ
ಮಸೂದೆ ಜಾರಿಗೆ ನಿರ್ಧರಿಸಲಾಗಿದೆ. ರಾಜ್ಯಸಭೆಯಲ್ಲಿ ಸುಮಾರು 7 ಗಂಟೆಗಳವರೆಗೆ ಸುಧೀರ್ಘ ಚರ್ಚೆ ಬಳಿಕ ವಿಧೇಯಕವನ್ನು ಮತ ಹಾಕಲಾಯಿತು. ಜಿಎಸ್‌ಟಿ ಪರ 203 ಮತಗಳು ಬಂದವು. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಈ ಮಸೂದೆ, ದೇಶದ ಎಲ್ಲ ರಾಜ್ಯಗಳು ಒಪ್ಪಿಗೆ ಸೂಚಿಸಿದಷ್ಟೇ ಬಾಕಿ ಇದ್ದು, ಮಸೂದೆ ಜಾರಿಗೆ ಬರಲಿದೆ.. ಮುಂದಿನ ಹಣಕಾಸು ವರ್ಷ (ಎಪ್ರಿಲ್-1, 2017)ದಿಂದ ಈ ಹೊಸ ತೆರಿಗೆ ಪದ್ಧತಿ ಜಾರಿಗೆ ಪೂರ್ವ ವೇದಿಕೆ ಸಜ್ಜಾಗಿದೆ. ಭಾರೀ ಚರ್ಚೆಗೆ ಗ್ರಾಸವಾದ, ರಾಜಕೀಯ ಸಮರಕ್ಕೂ ವೇದಿಕೆಯಾದ ಈ ಮಸೂದೆಯಲ್ಲಿನಿದೆ ? ಎಂಬುವದರ ಕುರಿತು ತಿಳಿದುಕೊಳ್ಳೋಣ…

ತೆರಿಗೆ ಎಂದರೇನು ?

ಸರಕಾರವೊಂದು ತನ್ನ ದೈನಂದಿನ ವೆಚ್ಚ ನಿರ್ವಹಣೆಗೆ, ಜನೋಪಯೋಗಿ ಕಾರ್ಯಕ್ರಮಗಳ ಜಾರಿಗೆ ಭಾರೀ ಹಣ ಬೇಕಾಗುತ್ತದೆ. ಇಂಥ ಹಣವನ್ನು ಸರಕಾರಗಳು ವಿವಿಧ ವಸ್ತಗಳ ಮೇಲೆ ವಿವಿಧ ಸೇವೆಗಳ ಮೇಲೆ ತೆರಿಗೆ ಹಾಕುವ ಮೂಲಕ ಸಂಗ್ರಹಿಸುತ್ತದೆ. ಯಾವುದೇ ದೇಶವೊಂದರ ಬಹುದೊಡ್ಡ ಆದಾಯದ ಮೂಲ ವೆಂದರೆ ತೆರಿಗಗಳು. ಇದರಲ್ಲಿ ನೇರ ತೆರಿಗೆ, ಪರೋಕ್ಷ ತೆರಿಗೆ ಪ್ರಮುಖವಾದವುಗಳಾಗಿವೆ. ಜನರಿಂದ ಸಂಗ್ರಹ ವಾದ ಹಣವನ್ನು ಸರಕಾರಗಳು ಮರಳಿ ಜನರಿಗೆ ಅಗತ್ಯ ಪೂರೈಸಲು ಬಳಸುತ್ತವೆ.

ಭಾರತದಲ್ಲಿರುವ ತೆರಿಗೆಗಳಾವವು ?
ಕೇಂದ್ರ ಸರ್ಕಾರ ವಿಧಿಸುವ ತೆರಿಗೆಗಳು :

  • ಸೇವಾ ತೆರಿಗೆ
  • ಕೇಂದ್ರೀಯ ಅಬಕಾರಿ ಸುಂಕ
  • ಹೆಚ್ಚುವರಿ ಅಬಕಾರಿ ಸುಂಕ
  • ಹೆಚ್ಚುವರಿ ಸೀಮಾ ಸುಂಕ
  • ವಿಶೇಷ ಹೆಚ್ಚುವರಿ ಸೀಮಾ ಸುಂಕ
  • ಸರ್‌ಚಾರ್ಜ್, ಸೆಸ್‌ಗಳು

ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು

  • ವ್ಯಾಟ್/ಸೇವಾ ತೆರಿಗೆ
  • ಮನರಂಜನಾ ತೆರಿಗೆ
  • ಖರೀದಿ ತೆರಿಗೆ
  • ಪ್ರವೇಶ ತೆರಿಗೆ
  • ರಾಜ್ಯ ಸಸ್, ಸರ್‌ಚಾರ್ಜ್‌ಗಳು,
  • ಲಾಟರಿ, ಬೆಟ್ಟಿಂಗ್, ಜೂಜು ತೆರಿಗೆ

ಏನಿದು ಸರಕು ಮತ್ತು ಸೇವಾ ತೆರಿಗೆ ?

ಭಾರತದಲ್ಲಿ ಒಕ್ಕೂಟ ಪದ್ಧತಿಯ ರಾಜಕೀಯ ಆಡಳಿತ ವ್ಯವಸ್ಥೆಯಿದೆ. ಅಂದರೆ ಕೇಂದ್ರ ಮತ್ತು ರಾಜ್ಯಗಳಿಗೆ ಹಲವು ವಿಷಯಗಳಲ್ಲಿ ಪ್ರತ್ಯೇಕ ಹಕ್ಕುಗಳನ್ನು ನೀಡಲಾಗಿದೆ. ಇದರಲ್ಲಿ ತೆರಿಗೆಯೂ ಒಂದು. ಸರಕುಗಳಿಗೆ ತೆರಿಗೆಯನ್ನು ರಾಜ್ಯಗಳು ಹಾಕಿದರೆ, ಸೇವೆಯ ತೆರಿಗೆಯನ್ನು ಕೇಂದ್ರ ವಿಧಿಸುತ್ತದೆ. ತೆರಿಗೆಗಳಲ್ಲಿ ಎರಡು ವಿಧ.
1) ಪ್ರತ್ಯೇಕ್ಷ ತೆರಿಗೆ (ಉದಾ- ಆದಾಯ ತೆರಿಗೆ, ವೃತ್ತಿ ತೆರಿಗೆ, ಭೂಕಂದಾಯ ತೆರಿಗೆ ಇತ್ಯಾದಿ)
2)ಅಪ್ರತ್ಯೇಕ್ಷ ತೆರಿಗೆ (ಉದಾ- ಅಬಕಾರಿ ಸುಂಕ, ಸೀಮಾ ಸುಂಕ, ಮಾರಾಟ ತೆರಿಗೆ, ಸೇವಾ ತೆರಿಗೆ ಇತ್ಯಾದಿ) ಈ ಎಲ್ಲ ಅಪ್ರತ್ಯಕ್ಷ ತೆರಿಗೆಗಳನ್ನು ಒಂದುಗೂಡಿಸಿ, ಉದ್ದೇಶಿತ ತೆರಿಗೆಯೇ ‘ಸರಕು ಮತ್ತು ಸೇವಾ ತೆರಿಗೆ’, ಇದರಲ್ಲಿ ತೆರಿಗೆಯನ್ನು ಪೂರ್ವನಿಗದಿತ ದರದಲ್ಲಿ ಬಳಕೆದಾರನ ಹಂತದಲ್ಲಿ ವಸೂಲಿ ಮಾಡಲಾಗುತ್ತದೆ. ಇದಕ್ಕಾಗಿ ಸರಕುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ..
1) ಕನಿಷ್ಟ ತೆರಿಗೆ ವಸ್ತುಗಳು (ಜೀವನಾಂಶ್ಯಕ ವಸ್ತುಗಳು)
2) ಮಧ್ಯಂತರ ತೆರಿಗೆಯ ಇತರ ಬಳಕೆ ವಸ್ತುಗಳು.
3) ಅಮೂಲ್ಯ ವಸ್ತಗಳು (ಚಿನ್ನ, ಬೆಳ್ಳಿ ಇತ್ಯಾದಿ) ಈ ಮೂರು ವರ್ಗೀಕರಣದ ಉದ್ದೇಶ ಬಡವರ್ಗಕ್ಕೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳುವುದು.

ಇದರಲ್ಲಿ ಮೂರು ಬಗೆ ತೆರಿಗೆಗಳಿವೆ.
1) ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)
2)ರಾಜ್ಯ ತೆರಿಗೆ (ಎಸ್‌ಜಿಎಸ್‌ಟಿ)
3)ಅಂತರಾಜ್ಯ ತೆರಿಗೆ (ಐಜಿಎಸ್‌ಟಿ) ಮಾರಾಟ ರಾಜ್ಯದ ಒಳಗಾದರೆ ಮೊದಲಿನ ಎರಡು ತೆರಿಗೆಗಳು ಹೊರಗಾದರೆ ಕಡೆಯ ಎರಡು ತೆರಿಗೆಗಳನ್ನು ತೆರುವುದು ಕಡ್ಡಾಯ. ಲಾಭಾಂಶದ ಮೇಲಿನ ತೆರಿಗೆಯನ್ನು ಹೊರತುಪಡಿಸಿ, ಉಳಿದೆಲ್ಲ ತೆರಿಗೆಗಳು ಹಿಂದಿನ ಹಂತದ ವ್ಯಾಪಾರಿಗಳಿಗೆ ಮರುಪಾವತಿಯಾಗುತ್ತದೆ. ಇದನ್ನು ಒಂದು ಕೋಷ್ಟಕದ ಮೂಲಕ ತಿಳಿದುಕೊಳ್ಳೋಣ. ಉದಾ :
1) ಉತ್ಪಾದಕ 100 ರೂ. ಮೌಲ್ಯದ ಸರಕನ್ನು ಶೇಕಡಾ 10 ತೆರಿಗೆ ಸೇರಿಸಿ, 110 ರೂ.ಗೆ ಸಗಟು ವ್ಯಾಪಾರಿಗಳಿಗೆ ಮಾರುತ್ತಾನೆ.
2) ಸಗಟು ವ್ಯಾಪಾರಿ ಇದೇ ಸರಕನ್ನು 150 ರೂ.ಗೆ ಶೇಕಡಾ 10 ತೆರಿಗೆ ಸೇರಿಸಿ, ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಾನೆ. ಇದರಲ್ಲಿ 10 ರೂ. ಉತ್ಪಾದಕನಿಗೆ ಹೋಗುತ್ತದೆ.
3) ಚಿಲ್ಲರೆ ವ್ಯಾಪಾರಿ ಇದೇ ಸರಕನ್ನು 200 ರೂ.ಗೆ ಗ್ರಾಹಕನಿಗೆ ಮಾರುತ್ತಾನೆ. ಇದರಲ್ಲಿ ಆತ 15 ರೂ.ಗಳನ್ನು ಸಗಟು ವ್ಯಾಪಾರಿಗೆ ಹಿಂದುರುಗಿಸಬೇಕಾಗುತ್ತದೆ. ಅಂದರೆ, ತೆರಿಗೆ ವಸೂಲಿ ಈ ಕೆಳಗಿನಂತಿರುತ್ತದೆ.

ಮೂಲ ಬೆಲೆಮಾರಿದ ಬೆಲೆಜಿ ಎಸ್ ಟಿ ದರಜಿ ಎಸ್ ಟಿ ಮೊತ್ತಮರು
ಪಾವತಿ
ನಿಜ
ಬೆಲೆ
ಜಿ ಎಸ್ ಟಿ
100
110
155
100
150
200
10%
10%
10%
10
15
20

10
15
110
155
205
100
11
0
155

ಜಿಎಸ್‌ಟಿ ಮೂಲ ಉದ್ದೇಶಗಳು :

  • ಇಡೀ ಭಾರತವನ್ನು ಒಂದು ಸಮಾನ ಮಾರುಕಟ್ಟೆಯನ್ನಾಗಿ ಮಾಡಿ, ಈಗಿರುವ ತೆರಿಗೆ ಪದ್ಧತಿಯ ಅಸಮಾನತೆಯನ್ನು ತೊಡೆದು ಹಾಕುವುದು.
  • ತೆರಿಗೆಯ ಭಾರವನ್ನು ಸರಕು ಮತ್ತು ಸೇವೆಗಳ ನಡುವೆ ಸಮಾನವಾಗಿ ಹಂಚುವುದು.
  • ತೆರಿಗೆಯ ದರ ಕಡಿಮೆ ಮಾಡಿ, ಅದರ ತಳವನ್ನು ಹೆಚ್ಚಿಸುವುದು. ಈಗ ಇರುವ ಹಲವು ತೆರಿಗೆಗಳ ಪದ್ಧತಿಯಿಂದ ಇರುವ ತೊಂದರೆಗಳನ್ನು ನಿವಾರಿಸುವುದು.
  • ಅಂತರರಾಜ್ಯ ಸರಕು/ ಸೇವಾ ವರ್ಗಾವಣೆಗಳಲ್ಲಿರುವ ತೊಂದರೆಗಳ ನಿವಾರಣೆ, ತೆರಿಗೆ ಪಾಲನೆಯಲ್ಲಿ ವೃದ್ಧಿಯನ್ನು ತರುವುದು
  • ತೆರಿಗೆಯ ಆಡಳಿತದಲ್ಲಿ ಇರುವ ಭ್ರಷ್ಟಾಚಾರ ನಿವಾರಣೆ, ಬಳಕೆದಾರನಿಗೆ ಇರುವ ತನ್ನ ಬಳಕೆಯನ್ನು ಹೆಚ್ಚಿಸುವಂತೆ ಉತ್ತೇಜಿಸುವುದು.

ಜಿಎಸ್‌ಟಿಯ ಪ್ರಯೋಜನಗಳು :

  • ಎಲ್ಲ ಪರೋಕ್ಷ ತೆರಿಗೆಗಳು ಜಿಎಸ್‌ಟಿಯಲ್ಲಿ ಅಂತರ್ಗತಗೊಳ್ಳುತ್ತವೆ.
  • ಉದ್ಯಮಗಳ ತೆರಿಗೆ ಪಾವತಿಸುವ ವ್ಯವಸ್ಥೆ ಸರಳವಾಗುತ್ತದೆ. ತೆರಿಗೆ ಬದ್ಧತೆ ಹೆಚ್ಚಿಸುತ್ತದೆ.
  • ಜಿಎಸ್‌ಟಿ ಯಲ್ಲಿ ಬಹು ಹಂತ ತೆರಿಗೆ ಪಾವತಿಗೆ ಅವಕಾಶವಿದೆ.
  • ಇದು ಸ್ವಯಂಪ್ರೇರಿತ ತೆರಿಗೆ ಪಾವತಿಗೆ ಉತ್ತೇಜನ ನೀಡುತ್ತದೆ.

ಜಿಎಸ್‌ಟೆಯಿಂದ ಸರಕಾರಕ್ಕೇನು ಲಾಭ ?

ತೆರಿಗೆಗಳು ಜಿಎಸ್‌ಟಿಯಲ್ಲಿಬಹುತೇಕ ಎಲ್ಲ ವಸ್ತುಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಇದರಿಂದ ತೆರಿಗೆ ಜಾಲ ವಿಸ್ತರಣೆಗೊಂಡು, ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ.

ಜಿಎಸ್‌ಟಿಯಿಂದ ಗ್ರಾಹಕರಿಗೇನು ಲಾಭ ?

ಉದಾ: ಸದ್ಯ 300 ರೂ. ಬೆಲೆಬಾಳುವ I ಚೀಲ ಸಿಮೆಂಟ್ ಬೆಲೆಯ ಕೇಂದ್ರ ಮತ್ತು ರಾಜ್ಯಗಳು ವಿಧಿಸುವ ತೆರಿಗೆ ಪ್ರಮಾಣ 66 ರೂ. ಇದೆ. ಜಿಎಸ್‌ಟಿ ಜಾರಿ ಬಳಿಕ ಇದು 4 ರೂ.ಗೆ ಇಳಿಯಲಿದೆ.

ಜಿಎಸ್‌ಟೆಯಿಂದ ಉದ್ಯಮಕ್ಕೇನು ಲಾಭ ?

ಇದುವರೆಗೆ ಎಲ್ಲಿ ಕಡಿಮೆ ತೆರಿಗೆ ವಿಧಿಸಲಾಗುತ್ತದೆಯೋ, ಅಲ್ಲಿ ಕಂಪನಿಗಳು ತಮ್ಮ ಘಟಕ ಸ್ಥಾಪಿಸುತ್ತಿದ್ದವು. ಆದರೆ, ಆ ನೀತಿ ತಪ್ಪುತ್ತದೆ. ಎಲ್ಲಿ ಉದ್ಯಮಕ್ಕೆ ಪೂರಕ ವಾತಾವರಣವಿದೆಯೋ, ಅಲ್ಲಿ ಘಟಕ ಸ್ಥಾಪಿಸಬಹುದು.

ಜಿಎಸ್‌ಟಿಯ ನ್ಯೂನತೆಗಳು:

  • ಇಂಧನ ಮತ್ತು ಮಾದಕ ವಸ್ತು ಇತ್ಯಾದಿಗಳನ್ನು ಜಿಎಸ್‌ಟಿ ಯಿಂದ ಹೊರಗಿಡಲು ತೀರ್ಮಾನಿಸಿರುವುದರಿಂದ ರಾಜ್ಯಗಳು ಈ ಸರಕುಗಳ ತೆರಿಗೆಯನ್ನು ಹೆಚ್ಚಿಸಿ, ತಮ್ಮ ಕೊರೆತೆಯನ್ನು ತುಂಬಿಸಿಕೊಳ್ಳಲು ಪ್ರಯತ್ನಿಸಬಹುದು.
  • ಕೋಟಿಗಟ್ಟಲೇ ವ್ಯಾಪಾರಿ ಹಾಗೂ ಸೇವಾ ಸಂಸ್ಥೆಗಳನ್ನು ನೋಂದಾಯಿಸಿ, ಅವರಿಗೆ ತ್ವರಿತವಾಗಿ ಪಾನ್‌ಕಾರ್ಡ್‌ ನೀಡುವುದು.