HISTORY OF SIDDAGANGA MATHA

Apr 01, 2022 12:27 pm By Admin

ಹೀಗಿದೆ ನೋಡಿ ತ್ರಿವಿಧ ದಾಸೋಹಿಯ ಕಾರ್ಯಕ್ಷೇತ್ರ ಸಿದ್ದಗಂಗಾ ಮಠದ ಸುವರ್ಣ ಪರಂಪರೆ

ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಕಾರ್ಯಕ್ಷೇತ್ರವಾಗಿದ್ದ ತುಮಕೂಯ್ರಿನ ಸಿದ್ದಗಂಗಾ ಮಠಕ್ಕೆ ಅದರದೇ ಆದ ಸುವರ್ಣ ಇತಿಹಾಸ ಇದೆ.

ತುಮಕೂರು: ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಕಾರ್ಯಕ್ಷೇತ್ರವಾಗಿದ್ದ ತುಮಕೂಯ್ರಿನ ಸಿದ್ದಗಂಗಾ ಮಠಕ್ಕೆ ಅದರದೇ ಆದ ಸುವರ್ಣ ಇತಿಹಾಸ ಇದೆ. 
14ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಸಿದ್ಧಗಂಗಾ ಮಠ  “ಶೂನ್ಯ ಸಿಂಹಾಸನ”ದ ಶ್ರೀ ಗೋಶಾಲ ಸಿದ್ಧೇಶ್ವರ ಸ್ವಾಮಿಜಿಯವರಿಂದ ಸ್ಥಾಪಿತವಾಗಿದೆ.
ಗೋಸಲ ಸಿದ್ಧೇಶ್ವರ ಸ್ವಾಮಿಗಳು ಮಹಾನ್ ತಪಸ್ವಿಗಳಾಗಿದ್ದು ಅವರು ಕಲ್ಲು ಬಂಡೆಯೊಂದರಿಂದ ಗಂಗೋದ್ಭವ ಮಾಡಿದ್ದ ಕಾರಣ ಈ ಸ್ಥಳಕ್ಕೆ ಸಿದ್ದಗಂಗೆ ಎಂದು ಹೆಸರು ಬಂದಿದೆ.
ಈ ಮಠ ವೀರಶೈವ ಪರಂಪರೆಗೆ ಸೇರಿದ ವಿರಕ್ಲ್ತ ಮಠವಾಗಿದ್ದು ಈ ಮಠದ ಪೀಠಾಧಿಪತಿಗಳಾಗಿದ್ದ ಗುರುಗಳ ಪರಂಪರೆ ಹೀಗಿದೆ-
ಶ್ರೀ ಹರದನಹಳ್ಳಿ ಗೋಸಲ ಸಿದ್ಧೇಶ್ವರ ಸ್ವಾಮಿಗಳು (1300 – 1350))ಶ್ರೀ ಹರದನಹಳ್ಳಿ ಶಂಕರಾಚಾರ್ಯ ಸ್ವಾಮಿಗಳು(1393)ಶ್ರೀ ಹರದನಹಳ್ಳಿ ಗೋಸಲ ಚನ್ನಬಸವರಾಜೇಂದ್ರ ಸ್ವಾಮಿಗಳುಶ್ರೀ ತೋಂಟದ ಸಿದ್ದಲಿಂಗೇಶ್ವರ ಸ್ವಾಮೀಜಿ (1400 – 1480)ಶ್ರೀ ಹರದನಹಳ್ಳಿ ಗೋಸಲ ಸಿದ್ದೇಶ್ವರ ಸ್ವಾಮೀಜಿ 
ಶ್ರೀ ಹರದನಹಳ್ಳಿ ಗೋಸಲ ಸಿದ್ದೇಶ್ವರ ಸ್ವಾಮೀಜಿ ಹದಿನೈದನೇ ಶತಮಾನದಲ್ಲಿ ಬದುಕಿದ್ದು ತಮ್ಮ ಹದಿನೈದನೇ ವಯಸ್ಸಿನಲ್ಲಿ ನಿರಂಜನ ಜಗದ್ಗುರುನ ಪೀಟಾಚಾರ್ಯ (ಮಠದ ಮುಖ್ಯಸ್ಥ) ಆಗಿದ್ದರು.ಬಳಿಕ ಅವರು ತಮ್ಮ ಕಿರಿಯ ಶ್ರೀಗಳಿಗೆ ಮಠದ ಆಡಳಿತ, ಫೀಠವನ್ನು ವಹಿಸಿ ತಾವು ಧಾರ್ಮಿಕ ಕಾರ್ಯಗಳಿಗೆ ತಮ್ಮ ಸ್ವಂತ ಮಠ ಸ್ಥಾಪನೆಗಾಗಿ 101 ಅನುಯಾಯಿಗಳೊಂದಿಗೆ ಶಿವಗಂಗೆಗೆ ತೆರಳಿದ್ದರು.ಅಲ್ಲಿಂದ ಅವರು ಈಗಿನ ಕ್ಯಾತಸಂದ್ರ (ಕೇತ ಸಮುದ್ರ) ಸಮೀಪದ ಬೆಟ್ಟಕ್ಕೆ ಆಗಮಿಸಿದರು.ಅಲ್ಲಿ ಅವರು ತಮ್ಮ ಶಿಷ್ಯರ ಅದ್ಯಯನ, ದ್ಯಾನದ ಅನುಕೂಲಕ್ಕೆ 101 ಗುಹೆಗಳನ್ನು ರಚಿಸಿದರು ಮತ್ತು ಸಿದ್ದಗಂಗೆಯಲ್ಲಿ ಮಠ ಸ್ಥಾಪನೆ ಮಾಡಿದ್ದರು.
ಶ್ರೀಗಳು ತಮ್ಮ ವೃದ್ದ ಶಿಷ್ಯರೊಬ್ಬರ ಬಾಯಾರಿಕೆ ನೀಗಿಸಲು ಬಂಡೆಗಲ್ಲಿನಿಂದ ಗಂಗೆಯನ್ನು ಹರಿಸಿದ್ದರು.ಇದಕ್ಕಾಗಿಯೇ ಈ ಕ್ಷೇತ್ರಕ್ಕೆ “ಸಿದ್ದಗಂಗೆ” ಎಂದೂ ಹೆಸರಾಗಿದೆ.ಈ ಪವಿತ್ರ ಗಂಗೆಯು ಎಲ್ಲಾ ಬಗೆಯ ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇಂದು ಇಲ್ಲಿಗೆ ಬರುವ ಎಲ್ಲಾ ಜಾತಿ, ಧರ್ಮ, ಸಮುದಾಯದ ಹಂಗಿಲ್ಲದ ಸಾವಿರಾರು ಭಕ್ತರು ಈ ನೀರನ್ನು ಬಳಸುತ್ತಾರೆ.
ಇವರ ಬಳಿಕ ತೋಂಟದ ಸಿದ್ದಲಿಂಗೇಶ್ವರ ಸ್ವಾಮೀಜಿ ವರೆಗಿನ ಇತಿಹಾಸ ನಮಗೆ ಲಭ್ಯವಾಗುತ್ತದೆ ಆದರೆ ಆ ಬಳೀಕ 15ನೇ ಶತಮಾನದಿಂದ 18ನೇ  ಶತಮಾನದವರೆಗಿನ ಇತಿಹಾಸದ ಬಗ್ಗೆ ನಮಗೆ ಸರಿಗ್ಯಾಗಿ ದಾಖಲೆಗಳು ದೊರೆಯುವುದಿಲ್ಲ. ಆಬಳಿಕ ಆಧುನಿಕ ಕಾಲದಲ್ಲಿ ಸಿದ್ದಗಂಗಾ ಮಠದ ಅಭಿವೃದ್ದಿ ಇತಿಹಾಸದ ಬಗ್ಗೆ ಶ್ರೀ ಅಥವೀಶ್ವರ ಸ್ವಾಮಿಗಳ ಕಾಲದೊಡನೆ ಪ್ರಾರಂಭವಾಗಿದೆ. ಇಂದು ನಿಧನವಾದ ಶಿವಕುಮಾರ ಸ್ವಾಮಿಗಳು ಉದ್ಧಾನ ಸ್ವಾಮಿಗಳವರಿಂದ 1930ರ ಮಾರ್ಚ್‌ 3ರಂದು ನಿರಂಜನ ಜಂಗಮ ಚಿಹ್ಮಾಂಕಿತ ವಿರಕ್ತಾಶ್ರಮ ದೀಕ್ಷೆ ಪಡಿದ್ದರು.
ಶ್ರೀಮಠದ ಶಾಖಾ ಮಠಗಳು
ಕಂಬಾಳು ಮರುಳಸಿದ್ದರ ಮಠ, ಕಂಚುಗಲ್‌ ಬಂಡೆ ಮಠ, ಚಿಲುಮೆ ಮಠ, ಬಸವಾಪಟ್ಟಣದಲ್ಲಿನ ಬೋಳಬಸವೇಶ್ವರ ಸ್ವಾಮಿ ಕ್ಷೇತ್ರ, ಮಸ್ಕಲ್‌ ಮಟ, ಸೋಲೂರಿನ ಮೂರು-ನಾಲ್ಕು ಮಠಗಳು, ಮಹಂತೇಶ್ವರ ಸ್ವಾಮಿಗದ್ದಿಗೆ ಮಠ, ತೋಪಿನಮಠ, ಕಣ್ಣೂರು ಮಠ, ತಿಪ್ಪಸಂದ್ರದ ಮಠ, ಹರ್ತಿದುರ್ಗ ಸಾವನದುರ್ಗದ ಮಠ, ಬೆಳ್ಳಾವೆಯ ರುದ್ರಮಠ, ದೇಶಮಠ, ಮೂಲೆಮಠ, ದೇವರಾಯಣಪಟ್ಟಣದ ಮಠ, ಸಿದ್ದರಬೆಟ್ಟದ ಗದ್ದುಗೆ, ಬೆಟ್ಟದ ಹಳ್ಳಿ, ಚಕ್ರಭಾವಿ, ಹಿತ್ತಲಹಳ್ಳಿ, ಅಂಕನಹಳ್ಳಿ ಮಠ, ಹುಲಿಯೂರು ದುರ್ಗದ ಮಠ, ಕಗ್ಗೆರೆ ವಿರುಪಸಂದ್ರ ತಾವರೆಕೆರೆಮಠ, ನೊಣವಿನಕೆರೆ, ಗೋಡೆಗೆರೆ, ಎಳನಡು, ಕಟ್ಟಿಗೆನಹಳ್ಳಿ, ಗವಿಮಠ ಸೇರಿ ಹಲವು ಮಠಗಳು ಸಿದ್ದಗಂಗಾ ಮಠದ ಶಾಖಾ ಮಠಗಳಾಗಿದೆ.
ವಿದ್ಯಾರ್ಥಿ ನಿಲಯ
1917ರಲ್ಲಿ  ಶ್ರೀದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯ ಪ್ರಾರಂಭವಾಗಿತ್ತು.ಸುಮಾರು ಅರವತ್ತು ವಿದ್ಯಾರ್ಥಿಗಳೊಡನೆ ಪ್ರಾರಂಭವಾಗಿದ್ದ ಈ ವಿದ್ಯಾರ್ಥಿ ನಿಲಯ ಇಂದು ವಿಬ್ವಿಧ ಜಾರಿ, ಮತಗಳ ಸುಮಾರು 10 ಸಾವಿರ ಮಕ್ಕಳು ಆಶ್ರಯ ಪಡೆದಿದ್ದಾರೆ.