Important view of kings of India.

ಭಾರತದ ಪ್ರಮುಖ ಅರಸರ ಸಂಕ್ಷಿಪ್ತ ನೋಟ
- ಬಿಂಬಸಾರ (ಕ್ರಿ.ಪೂ.-544-492)
- ಅಶ್ವಘೋಷನು ಬಿಂಬಸಾರ ಹರಾಂಕ ಸಂತತಿಗೆ ಸೇರಿದವನು ಎಂದು ಹೇಳಿದ್ದಾನೆ.
- ಬಿಂಬಸಾರನ ರಾಜಧಾನಿ-ರಾಜಗರ್ (ಗಿರಿವಜ್ರ)
- ಗಜಸೈನ್ಯ ಹೊಂದಿದ ಈತನು ಚಂಪಾ, ಅಂಗ ರಾಜ್ಯಗಳನ್ನು ವಶಪಡಿಸಿಕೊಂಡನು.
- ಬಿಂಬಸಾರನ ಆಸ್ಥಾನವೈದ್ಯ- ಜೀವಕ.
- ಈತನು 500 ಪತ್ನಿಯರನ್ನು ಹೊಂದಿದ್ದನು.
- ಬಿಂಬಸಾರನು ಬುದ್ಧನ ಸಮಕಾಲೀನ ದೊರೆ
- ಬಿಂಬಸಾರನು ಮಗನಾದ ಅಜಾತಶತ್ರುವಿನಿಂದ ಕೊಲೆಯಾದನು.
2) ಅಜಾತಶತ್ರು (ಕ್ರಿ.ಪೂ.-495-460)
- ತಂದೆಯನ್ನು ಕೊಂದು ಅಜಾತಶತ್ರು ‘ಪಿತೃಘಾತಕ’ ಎಂಬ ಬಿರುದು ಹೊಂದಿದನು.
- ಮಹಾಶೀಲಕಂಠ, ರಥಮುಸಲ ಎಂಬ ಯುದ್ಧ ತಂತ್ರ ಹೊಂದಿದನು.
- ಬೌದ್ಧಧರ್ಮದ ಪ್ರಥಮ ಸಮ್ಮೇಳನವನ್ನು ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ನಡೆಸಿದನು.
- ಕಾಶಿಯ ಅರಸ ಪ್ರಸನಜೀತನನ್ನು ಸೋಲಿಸಿದನು.
3) ಅಲೆಗ್ಸಾಂಡರ್ (ಕ್ರಿ.ಪೂ.-356-323)
- ಕ್ರಿ.ಪೂ. 327 ರಲ್ಲಿ ಭಾರತಕ್ಕೆ ಅಲೆಕ್ಸಾಂಡರನು ಬಂದನು.
- ಈತನು ಕ್ರಿ.ಪೂ. 356 ರಲ್ಲಿ ಮೆಸಿಡೋನಿಯಾದಲ್ಲಿ ಜನಿಸಿದನು.
- ಈತನ ತಂದೆ-2ನೇ ಪಿಲಿಪ್, ತಾಯಿ-ಒಂಪಿಯಾ, ಗುರು ಅರಿಸ್ಟಾಟಲ್
- ಈತನಿಗೆ ಪ್ರಿಯವಾದ ವಸ್ತುಗಳು – ಖಡ್ಗ’ ಮತ್ತು ಹೋಮರನ ‘ಇಲಿಯಡ್’ ಮಹಾ ಕಾವ್ಯ
- ಕ್ರಿ.ಪೂ. 336 ರಲ್ಲಿ ಈಜಿಪ್ಟ್, ಕ್ರಿ.ಪೂ. 330ರಲ್ಲಿ ಪರ್ಷಿಯನ್ನರ ಮೇಲೆ ವಿಜಯಸಾಧಿಸಿದನು.
- ಕ್ರಿ.ಪೂ. 327ರಲ್ಲಿ ಭಾರತದ ವಾಯವ್ಯ ಭಾಗಕ್ಕೆ ದಾಳಿ ಕೈಗೊಂ ಡನು..
- ಪುಷ್ಪಲಾವತಿ, ಮಸ್ಸಾಗಳು ಅಲೆಗ್ಲಾಂಡರನ ಆಕ್ರಮಣಕ್ಕೆ ತುತ್ತಾದ ಪ್ರದೇಶಗಳು.
- ಕಾಬುಲಿನಲ್ಲಿ ಪ್ರಭುತ್ವ ಸ್ಥಾಪಿಸಿ, ಭಾರತಕ್ಕೆ ಬರುವಾಗ ತನ್ನ ಸೈನ್ಯವನ್ನು ಎರಡು ವಿಭಾಗಗಳನ್ನಾಗಿ ಮಾಡಿದನು. ಒಂದರ ನೇತೃತ್ವವನ್ನು ತಾನು, ಇನ್ನೊಂದರ ನೇತೃತ್ವವನ್ನು ಹೆಪಾಸ್ಟಿಯನ್ ಪರ್ಡಿಕಾನಿಗೆ ವಹಿಸಿದನು.
- ಅಲೆಕ್ಸಾಂಡರ್ ಕುನ ಮತ್ತು ಸ್ವಾತ ಕಣಿವೆಯ ಬುಡಕಟ್ಟು ಜನಾಂಗವನ್ನು ಸೋಲಿಸಿದನು.
- ಕ್ರಿ.ಪೂ. 326 ರಲ್ಲಿ ಪುರೂರಾನ್ ಮತ್ತು ಅಲೆಕ್ಸಾಂಡರ್ ನಡುವೆ ‘ಹೈಡಾಸ್ಪಸ್‌ಕಾಳಗ’ ನಡೆಯಿತು. ఝలం ನದಿಯನ್ನು “ಜಲಲಪುರ’ ಎಂಬಲ್ಲಿ ಅಲೆಕ್ಸಾಂಡರ ದಾಟಿದನು.
- ಭಾರತದ ಪೌರವ ಅರಸನೊಂದಿಗೆ ಸಿರ್ವಾಳ ಹಾಗೂ ಪಕ್ರಾಳ್ ಎಂಬ ಹಳ್ಳಿಯಲ್ಲಿ ಅಲೆಕ್ಸಾಂಡರ್ ಯುದ್ಧ ಸಾರಿದನು. ಯುದ್ಧದಲ್ಲಿ ಪೌರವನು ಸೋತನು.
- ನಂತರ ಕತಾಂಬ್ ಜನರ ರಾಜಧಾನಿ ಸ್ಥಂಭವನ್ನು ವಶಪಡಿ ಸಿಕೊಂಡನು.
- ಭಾರತದ ಒಳಗಡೆ ಬರಲು ನಿರಾಕರಿಸಿ ಮಾತನಾಡಿದ ಸೈನಿಕ
- ಅಲೆಕ್ಸಾಂಡರನಿಗೆ ಸಿಬಾಯ್, ಅಗಲಾಸ್ಥೆ ಎಂಬ ಯುದ್ಧಾಸಕ್ತಿ ಜನರು, ಭೀಕರ ಕಾಳಗ ಮಾಡಿದರು.
- ಕ್ರಿ.ಪೂ. 323ರಲ್ಲಿ ಬ್ಯಾಬಿಲೋನ್‌ನಿಯಾದಲ್ಲಿ ಮರಣ ಹೊಂದಿದನು.
4) ಚಂದ್ರಗುಪ್ತ ಮೌರ್ಯ (ಕ್ರಿ.ಪೂ.-322-298)
- ಚಂದ್ರಗುಪ್ತ ಮೌರ್ಯ ಮೌರ್ಯ ಸಾಮ್ರಾಜ್ಯ ಸ್ಥಾಪಕ, ಈತನು ಕ್ರಿ.ಪೂ. 340 ರಲ್ಲಿ ಜನಿಸಿದನು.
- ಚಂದ್ರಗುಪ್ತ ಮೌರ್ಯನ ತಾಯಿ ಮುದ್ರಾದೇವಿ.
- ಕೌಟಿಲ್ಯನ ಸಹಾಯದಿ೦ದ ಚಂದ್ರಗುಪ್ತನು ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದನು.
- ಮುದ್ರಾರಾಕ್ಷಸ ಗ್ರಂಥದಲ್ಲಿ ಚಂದ್ರಗುಪ್ತ ಮೌರ್ಯನನ್ನು ‘ವೃಷಲ’ಎಂದು ಗುರುತಿಸಲಾಗಿದೆ.
- ರಾಯ್‌ಚೌಧರಿಯವರು ಚಂದ್ರಗುಪ್ತ ಮೌರ್ಯನು ಕಾತ ವರ್ಗ’ಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ.
- ಚಂದ್ರಗುಪ್ತ ಮೌರ್ಯನ ರಾಜಧಾನಿ -ಪಾಟಲಿಪುತ್ರ
- ಚಂದ್ರಗುಪ್ತನ ಪ್ರಧಾನ ಮಂತ್ರಿ – ಕೌಟಿಲ್ಯ (ಚಾಣಕ್ಯ).
- ಈತನು ಕ್ರಿ.ಪೂ. 324ರಲ್ಲಿ ನಂದರ ಕೊನೆಯ ಧನನಂದನನ್ನು ಸೋಲಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದನು.
- ಸೆಲ್ಯುಕಸ್ ನಿಕೇಟರ್‌ನೊಂದಿಗೆ ಕ್ರಿ.ಪೂ. 305ರಲ್ಲಿ ಯುದ್ಧಮಾಡಿ ಆತನನ್ನು ಸೋಲಿಸಿದನು. ಸೋತ ಸೆಲ್ಯುಕಸ್” ಕಾಬೂಲ್, ಕಂದಹಾರ, ಗಾಂಧರ ಮುಂತಾದ ಪ್ರದೇಶಗಳನ್ನು ಬಿಟ್ಟುಕೊಟ್ಟನು.
- ಚಂದ್ರಗುಪ್ತ ಮೌರ್ಯ ಪಟ್ಟದ ರಾಣಿ-ಹೆಲೆನಾ
- ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಮೆಗಾಸ್ಥಾನಿಸ್ ಎಂಬ ರಾಯಭಾರಿ ಭೇಟಿ ನೀಡಿದನು. ಈತನ ಕೃತಿ- ಇಂಡಿಕಾ’ ಇದು ಗ್ರೀಕ್ ಭಾಷೆಯಲ್ಲಿದೆ.
- ಕ್ರಿ. ಪೂ. 313 ರಲ್ಲಿ ಕಾಥೆವಾಡ್, ಮಾಳ್ವಗಳನ್ನು ಚಂದ್ರಗುಪ್ತನು ಗೆದ್ದುಕೊಂಡನು.
- ಚಂದ್ರಗುಪ್ತ ಮೌರ್ಯನ ಗುಜರಾತದ ರಾಜ್ಯಪಾಲ – ಪುಷ್ಯಗುಪ್ತ
- ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತಕ್ಕೆ ಬಂದ ಚಂದ್ರಗುಪ್ತ ಮೌರ್ಯ ಕಿ.ಪೂ. 299 ಸಲ್ಲೇಖನ ವೃತ ಕೈಗೊಂಡು, ಪ್ರಾಣ ತ್ಯಜಿಸಿದನು.
5) ಬಿಂದುಸಾರ (ಕ್ರಿ.ಪೂ.-298-273)
- ಬಿಂದುಸಾರ ಚಂದ್ರಗುಪ್ತ ಹಾಗೂ ಹೆಲೆನಾಳ ಮಗ
- ಈತನು “ಅಮಿತ್ರಘಾತ್ ಎಂಬ ಬಿರುದು ಹೊಂದಿದ್ದನು.
- ಈತ 16 ಜನ ಹೆಂಡತಿಯರು 101 ಮಕ್ಕಳನ್ನು ಹೊಂದಿದ್ದನು.
- ಈತನ ಮೊದಲ ಮಗ- ಸುಶಿಮ ತಕ್ಷಶಿಲೆಯ ರಾಜಪಾಲ, ಎರಡನೇ ಮಗ-ಅಶೋಕ ಅವಂತಿ (ಉಜ್ಜಯನಿ)ಯ ರಾಜ್ಯಪಾಲ, ಮೂರನೇ ಮಗ ತಿಸ್ಸಾ ಸುವರ್ಣಗಿರಿಯ ರಾಜಪಾಲನಾಗಿದ್ದನು.
- ಗ್ರೀಕ್ ರಾಯಭಾರಿ ಡೆಮಾಕಸ್ ಬಿಂದುಸಾರನ ಆಸ್ಥಾನಕ್ಕೆ ರಾಯಭಾರಿಯಾಗಿ ಭೇಟಿ ನೀಡಿದ್ದನು.
6) ಅಶೋಕ (ಕ್ರಿ.ಪೂ.-298-273)
- ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ಅರಸ ಅಶೋಕ
- ಬಿಂದುಸಾರ ಮತ್ತು ಸುಭದ್ರೆಯರ ಮಗನಾಗಿ ಅಶೋಕ ಕ್ರಿ.ಪೂ. 304 ತಕ್ಷಶಿಲೆಯಲ್ಲಿ ಜನಿಸಿದನು.
- ಆವಂತಿ (ಉಜ್ಜಯನಿ) ಮತ್ತು ತಕ್ಷಶಿಲೆಯ ರಾಜಪಾಲನಾಗಿ ತಂದೆ ಬಿಂದುಸಾರನ ಅವಧಿಯಲ್ಲಿ ಸೇವೆ ಸಲ್ಲಿಸಿದನು.
- ಕ್ರಿ. ಪೂ. 269 ರಲ್ಲಿ ಸಹೋದ ರನನ್ನು ಸಂವಹರಿಸಿ, ಅಧಿಕಾರಕ್ಕೆ ಬಂದನು.
- ಕ್ರಿ.ಪೂ. 261 ರಲ್ಲಿ ಕಳಿಂಗದ ಮೇಲೆ ಯುದ್ಧ ಸಾರಿದನು. ಯುದ್ಧ ದಲ್ಲಿ ಸಾವಿರಾರು ಸೈನಿಕರ ಮಾರಣಹೋಮ ನಡೆಯಿತು. ಇದರಿಂದ ಅಶೋಕ ಯುದ್ಧವನ್ನು ತ್ಯಜಿಸಿ, ತನ್ನ ದೃಷ್ಟಿಕೋನವನ್ನು ಬದಲಾಯಿಸಿದನು.
- ಅಶೋಕನ ಮಂತ್ರಿ – ರಾಧಾಗುಪ್ತ
- ಅಶೋಕನು ಉಪಗುಪ್ತನ ಸಹಾಯದಿಂದ ಬೌದ್ಧಧರ್ಮ ಸ್ವೀಕರಿಸಿದನು.
- ಅಶೋಕನ ಪಟ್ಟದ ರಾಣಿಯರು- ಕರುಬಾಕಿ, ತಿಷ್ಯರಕ್ಷಿತ, ಅಸಿಂಧಮಿತ್ರ, ಮಹಾದೇವಿ.
- ಕುಶಿನಗರ, ಲುಂಬಿನಿ, ರಾಜಗ್ರಹ, ವೈಶಾಲಿ, ಸಾರಾನಾಥಗಳಿಗೆ ಭೇಟಿ ನೀಡಿದ ಅಶೋಕನು ಅಲ್ಲಿ ಬೌದ್ಧ ಸ್ಮಾರಕಗಳನ್ನು ಕಟ್ಟಿಸಿದನು.
- ಭಾರತದಲ್ಲಿ 84000 ಸ್ಥಪಗಳನ್ನು ಅಶೋಕ ಕಟ್ಟಿಸಿದನು. ಇವುಗಳಲ್ಲಿ ಅತೀ ದೊಡ್ಡದಾದ ಸ್ಥಪ-ಸಾಂಚಿಸ್ಕೊಪ
- ಧರ್ಮ ಪ್ರಚಾರಕ್ಕೆ ಧರ್ಮ ಮಹಾಮಾತೃರನ್ನು ನೇಮಿಸಿದನು.
- ಕ್ರಿಶೂ, 252 ರಲ್ಲಿ ಬೌದ್ಧ ಧರ್ಮದ 3ನೇ ಸಮ್ಮೇಳನವನ್ನು ಪಾಟಲೀಪುತ್ರದಲ್ಲಿ ಹಮ್ಮಿಕೊಂಡನು.
⏩ಅಶೋಕನು ಬೌದ್ಧಧರ್ಮ ಪ್ರಚಾರಕ್ಕೆ ಕಳುಹಿಸಿ ಕೊಟ್ಟ ವ್ಯಕ್ತಿಗಳು
• ಮಹೇಂದ್ರ, ಸಂಘಮಿತ್ರೆ – ಶ್ರೀಲಂಕಾ
• ಮಜ್ಜಿಮ – ಹಿಮಾಲಯ ಪರ್ವತ
• ರಕ್ಷಿತ- ಉತ್ತರ ಭಾಗ
• ಧರ್ಮರಕ್ಷಿತ – ಪಶ್ಚಿಮ ಭಾಗ
• ಮಹಾರಕ್ಷಿತ – ಗ್ರೀಕ್ ರಾಜ್ಯಗಳು
• ಮಹಾಧರ್ಮ ರಕ್ಷಿತ – ಮಹಾರಾಷ್ಟ್ರ
• ಅಶೋಕನು ಸ್ಥಾಪಿಸಿದ ಧರ್ಮ- ಅಶೋಕ ಧಮ್ಮ,
⏩ಅಶೋಕನ ಲೋಕೋಪಯೋಗಿ ಕಾರ್ಯಗಳು :
• ರಸ್ತೆಗಳನ್ನು ನಿರ್ಮಿಸಿದನು.
• ರಸ್ತೆಯ ಎಡಬಲಭಾಗದಲ್ಲಿ ಗಿಡಗಳನ್ನು ನೆಡಿಸಿದನು.
• ನೀರಿನ ಅರವಟ್ಟಿಗೆಗಳನ್ನು ಸ್ಥಾಪಿಸಿದನು.
• ಅನ್ನಛತ್ರಗಳನ್ನು ನಿರ್ಮಿಸಿದನು.
• ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು.
⏩ಅಶೋಕನ ಶಾಸನಗಳು :
• ಅಶೋಕನನ್ನು ‘ಶಾಸನಗಳ ಪಿತಾಮಹ ಎಂದು ಕರೆಯುತ್ತಾರೆ.
• ಅಶೋಕನ 53 ಶಾಸನಗಳು ಬ್ರಾಡ್ಮಿ ಖರೋಷ್ಠಿ ಲಿಪಿಯಲ್ಲಿ ಇವೆ.
• ಬಹುತೇಕ ಶಾಸನಗಳು ಪರ್ಷಿಯನ್ ಗ್ರೀಕ್, ಅರೇಬಿಕ್ ಹಾಗೂ ಪಾಲಿ ಭಾಷೆಯಲ್ಲಿ ರಚನೆಯಾಗಿವೆ.
• ಅಶೋಕನ ಶಾಸನಗಳ ಲಿಪಿ – ಬ್ರಾಹ್ಮ, ಖರೋಷ್ಠಿ,
⏩ಕರ್ನಾಟದಲ್ಲಿ ಅಶೋಕನ ಶಾಸನಗಳು :
• ರಾಯಚೂರು – ಮಸ್ಕಿ, ಗವಿಮಠ, ಪಾಲ್ಕಿಗುಂಡ.
• ಬಳ್ಳಾರಿ – ಸಿಟ್ಟೂರು, ಉದೊಗೊಳು
• ಚಿತ್ರದುರ್ಗ – ಬ್ರಹ್ಮಗಿರಿ, ಜಟಿಂಗರಾಮೇಶ್ವರ
• ಕಲಬುರ್ಗಿ – ಸನ್ನತಿ.
⏩ಅಶೋಕನ 14 ಬಂಡೆಗಲ್ಲು ಶಾಸನಗಳು :
I ನೇ ಶಾಸನ-ಪ್ರಜೆಗಳೆಲ್ಲಾ ನನ್ನ ಮಕ್ಕಳು, ಮನರಂಜನೆ ನಿಷೇಧ
II ನೇ ಶಾಸನ-ಲೋಕೋಪಯೋಗಿ ಕಾರ್ಯಗಳು
III ನೇ ಶಾಸನ-ದಾನ-ಧರ್ಮ
IV ನೇ ಶಾಸನ-ಧರ್ಮ ವಿಜಯ
V ನೇ ಶಾಸನ-ರಾಜನ ಮತ್ತು ಸಹೋದರರ ಪ್ರಜೆಗಳ ಕಾರ್ಯಗಳು
VIನೇ ಶಾಸನ- ಆಡಳಿತದ ಕುರಿತು
VII ನೇ ಶಾಸನ-ಧರ್ಮಸಹನೆ
VIIIನೇ ಶಾಸನ-ಯಾತ್ರೆಗಳ ಪ್ರಸ್ಥಾವನೆ
IX ನೇ ಶಾಸನ-ಜೀವನದ ನೀತಿ ನಿರೂಪಣೆ ಕುರಿತು
Xನೇ ಶಾಸನ-ಜೀವನ ಕ್ರಮ
XIನೇ ಶಾಸನ-ನಿರಾಡಂಭರ ಜೀವನಕ್ಕೆ ಪ್ರಾಧಾನ್ಯತೆ XII ನೇ ಶಾಸನ-ಕೃಷಿ, ಸ್ತ್ರೀ, ಧರ್ಮ ಪ್ರಚಾರಕರು
XIII ನೇ ಶಾಸನ-ಕಳಿಂಗ ಯುದ್ಧ
XIV ನೇ ಶಾಸನ-ಪ್ರಚಾರದ ಕುರಿತು
- ಅಶೋಕನು ಅಲಹಾಬಾದ ಶಾಸನವನ್ನು ಕೌಸಂಬಿಯಲ್ಲಿ ಹೊರಡಿಸಿದನು.
- ಬುದ್ಧನ ಜನ್ಮಸ್ಥಳದ ಬಗ್ಗೆ ತಿಳಿಸುವ ಶಾಸನ -ರುಮೈಂಡೈ ಶಾಸನ,
- ನಾಲ್ಕು ಮುಖದ ಸಿಂಹ ಕಂಡು ಬರುವ ಲಾಂಛನ ಸಾರಾನಾಥ ಶಾಸನದಿಂದ ತಿಳಿಯುವುದು.
- ಅಶೋಕನ ಬೌದ್ಧಧರ್ಮದ ಬಗ್ಗೆ ತಿಳಿಸುವ ಶಾಸನ -ಬಾಬ್ರೂ ಶಾಸನ.
- ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡು ಬಂದ ಶಾಸನ – ಬ್ರಹ್ಮಗಿರಿ ಶಾಸನ. ಇದರ ಶಿಲ್ಪಿ -ಚಪಡ
- ತೆರಾಯ ಸ್ಥಂಭ ಶಾಸನ – ಅಶೋನು ಬೌದ್ಧರ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರೆ ಕುರಿತು ತಿಳಿಸುತ್ತದೆ.
7) ಒಂದನೇ ಕಡ್‌ಪಿಸಸ್ (ಕ್ರಿ.ಶ 40-65) :
- ಕುಶಾನರು ಮಧ್ಯ ಏಷ್ಯಾದಿಂದ ಬಂದವರು.
- ಕುಶಾನರ ಸ್ಥಾಪಕ – ಒಂದನೇ ಕಡ್‌ಪಿಸಸ್
- ಒಂದನೇ ಕಡ್‌ಪಿಸಸ್ ಬೌದ್ಧ ಮತಾವಲಂಬಿಯಾಗಿದ್ದನು.
- ಕುಶಾನರು ಯುಚಿ ಪಂಗಕ್ಕೆ ಸೇರಿದವರು.
- ಒಂದನೇ ಕಡ್‌ಪಿಸಸ್ ಗ್ರೀಕರನ್ನು ಸೋಲಿಸಿದನು.
- ಈತನ ಇನ್ನೊಂದು ಹೆಸರು ಕುಜಲ ಕಡ್‌ಪಿಸಸ್
8) ಎರಡನೇ ತಪ್‌ಪಿಸಸ್ (ಕ್ರಿ.ಶ. 40-55)
- ಈತನನ್ನು ವಿಮಾ ಕಡಪಿಸಸ್ ಎಂದು ಕರೆಯುತ್ತಾರೆ.
- ಪಂಜಾಬ್, ಉತ್ತರ ಪ್ರದೇಶದ ಕೆಲವು ಪ್ರದೇಶಗಳನ್ನು ಗೆದ್ದು ಕೊಂಡುತ್ತಿದ್ದನು.
- ಈತನು ತಾಮ್ರ, ಕಂಚಿನ ನಾಣ್ಯಗಳನ್ನು ಜಾರಿಗೊಳಿಸಿದನು.
- ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಟಂಕಿಸಿದ ಅರಸ ಈತನಾಗಿದ್ದಾನೆ.
- ಕಂದಹಾರ್, ಗಾಂಧಾರ, ಕಾಬೂಲ್ ಕಣಿವೆಗಳಲ್ಲಿ ಈತನ ನಾಣ್ಯ ಗಳು ದೊರೆತಿವೆ. ಆ ನಾಣ್ಯಗಳ ಮೇಲೆ ‘ಮಹೇಶ್ವರ’, ಸರ್ವ ಲೋಕೇಶ್ವರ, ಸಮಗ್ರ ಪ್ರಪಂಚದ ಒಡೆಯನೆಂದು ಕೆತ್ತಿಸಿದನು.
- ಶೈವಪಂಥದವನಾದ ಈತನು ತನ್ನ ನಾಣ್ಯಗಳ ಮೇಲೆ ತ್ರಿಶೂಲದಾರಿ ಶಿವನ ಚಿತ್ರವನ್ನು ಕೆತ್ತಿಸಿದನು.
- ಚೀನಾದ ಪಾನ್-ಛಾಯೋನ್ ಕೈಯಲ್ಲಿ 2ನೇ ಕಡಪಿಸ್‌ಸ್ ಸೋಲನನ್ನು ಅನುಭವಿಸಿದನು.
9) ಕನಿಷ್ಠ (ಕ್ರಿ.ಶ. 78-120)
- ಕನಿಷ್ಠರನು ಕುಶಾನರ ಅತ್ಯಂತ ಪ್ರಸಿದ್ಧ ದೊರೆ.
- ಕನಿಷ್ಕನ ರಾಜಧಾನಿ ಪುರುಷಪುರ (ಪೇಶಾವರ)
- ಕನಿಷ್ಠನ 2ನೇ ರಾಜಧಾನಿ ಮಥುರಾ
- ಕನಿಷ್ಠನ ರಾಜ್ಯ ಗಡಿ ಬಿಹಾರ, ಉತ್ತರಪ್ರದೇಶ, ಮಾಳ್ವ,ರಾಜಸ್ಥಾನ, ಸೌರಾಷ್ಟ್ರ, ಸಿಂದ್, ಪಂಜಾಬ್, ಕಾಶ್ಮೀರ, ಬೋರ ಸಾನ್ ಹಾಗೂ ಚೀನಾದ ಗಡಿದವರೆಗೆ ಹಬ್ಬಿತ್ತು.
- ಈತನು ಮಹಾಯಾನದ ಪಂಥವನ್ನು ಅನುಸರಿಸಿದನು.
- ಭಾರತದಲ್ಲಿ ‘ಬೂಟ’ನ್ನು ಮೊದಲಿಗೆ ಪರಿಚಯಿಸಿದ ವ್ಯಕ್ತಿ ಕನಿಷ್ಠ.
- ನಾಲ್ಕನೇ ಬೌದ್ಧ ಧರ್ಮದ ಸಮ್ಮೇಳನ ಕನೌಜದಲ್ಲಿ ನಡೆಸಿದನು.
- 4ನೇ ಬೌದ್ಧ ಸಮ್ಮೇಳನದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಹುಟ್ಟಿದವು.
- ಕನಿಷ್ಠನ ನಾಣ್ಯಗಳಲ್ಲಿ ಹಿಂದೂ, ಪರ್ಷಿಯಾ, ಸುಮೆರಿಯಾ, ಗ್ರೀಕ್ ದೇವತೆಗಳ ಲಾಂಛನಗಳನ್ನು ಕಾಣಬಹುದು.
- ಮಹಾಸಮ್ಮೇಳನದ ವಿವರಗಳನ್ನು ಶಿಲಾಕೋಶ ಹಾಗೂ ಸ್ಫೂಪಗಳಲ್ಲಿ ಸಂಗ್ರಹಿಸಲಾಗಿದೆ.
- ಕನಿಷ್ಠನನ್ನು “2ನೇ ಅಶೋಕ, ದೇವಪುತ್ರ, ಭಾರತದ ಸಿಜರ ಎಂದು ಕರೆಯುತ್ತಾರೆ.
- ಕನಿಷ್ಠ ಪಾಟಲಿಪುತ್ರದ ಮೇಲೆ ದಾಳಿ ಮಾಡಿದಾಗ ಅಶ್ವಘೋ ಷನನ್ನು ಕರೆತಂದನು.
- ಚೀನಾದ ಮೇಲೆ ದಾಳಿ ಮಾಡಿ ಪಾನ್-ಚಾವೋನ ಮಗ ಪಾನ್-ಯಾಂಗನನ್ನು ಸೋಲಿಸಿದನು.
- ಕನಿಷ್ಠನ ಕೈಯಲ್ಲಿ ಶಕರ ಬಸ್ತಾವನು ಸೋತನು.
- ಈತನು ಕಾಶ್ಮೀರದಲ್ಲಿ ‘ಕನಿಷ್ಠಪುರ’ ಎಂಬ ನಗರ ಕಟ್ಟಿಸಿದನು.
- ಚೀನಾದ ಕಾಶಘರ, ಯಾರ್ಕಂದ ಪ್ರದೇಶಗಳನ್ನು ಗೆದ್ದನು.
- ಕನಿಷ್ಕನು ತನ್ನ ನಾಣ್ಯಗಳ ಮೇಲೆ ಶಿವ, ಸೂರ್ಯ, ಅಗ್ನಿಗಳನ್ನು ಮುದ್ರಿಸಿದನು.
- ಕನಿಷ್ಠನುಸ ಬೌದ್ಧಧರ್ಮದ ಮಹಾಯಾನ ಪಂಥಕ್ಕೆ ಬೆಂಬಲ ನೀಡಿದನು.
- -ಕನಿಷ್ಕನ ಆಸ್ಥಾನದಲ್ಲಿ ಅಶ್ವಘೋಷ, ನಾಗಾರ್ಜುನ, ವಸುಮಿತ್ರ ಆಶ್ರಯ ಪಡೆದಿದ್ದರು.
10) ಪುಷ್ಯಮಿತ್ರ ಶುಂಗ :
- ಮೌರ್ಯರ ಕೊನೆಯ ದೊರೆಯಾದ ಬೃಹದತ್ತ ಕೊಲೆ ಮಾಡಿ ಅಧಿಕಾರಕ್ಕೆ ಬಂದನು.
- ಈತನು ಶುಂಗ ಸಾಮ್ರಾಜ್ಯವನ್ನು ಸ್ಥಾಪಿಸಿದನು ಹಾಗೂ ಗ್ರೀಕ್ ದಾಳಿಗಳನ್ನು ಎದುರಿಸಿದನು.
- ವಿದರ್ಭ ರಾಜ್ಯವನ್ನು ವಶಪಡಿಸಿಕೊಂಡನು.
- ಪುಷ್ಯಮಿತ್ರ ಶುಂಗನ ರಾಜಧಾನಿ -ಪಾಟಲಿಪುತ್ರ
- ಪುಷ್ಯಮಿತ್ರನ ಮಗ ಅಗ್ನಿಮಿತ್ರ, ಮೊಮ್ಮಗ ವಸುಮಿತ್ರ.
- ಈತನು ಎರಡು ಬಾರಿ ಅಶ್ವಮೇಧಯಾಗ ಮಾಡಿದನು.
11) ಖಾರವೇಲ :
- ವಕ್ರದೇವನ ಮಗನಾದ ಖಾರವೇಲ ಚೇದಿಗಳ ಪ್ರಸಿದ್ಧ ಅರಸ.
- ಖಾರುವೇಲನ ಬಗ್ಗೆ ತಿಳಿಸುವ ಶಾಸನ -ಹಾಥಿಗುಂಪಾ ಶಾಸನ.
- ಹಾಥಿಗುಂಪು ಶಾಸನವು ಅಸದೃಗಿ ಮಹತ್ವವುಳ್ಳ ಒಂದು ಐತಿ ಹಾಸಿಕ ದಾಖಲೆಯಾಗಿದೆ. ಈ ಶಾಸನ ಕಾಲಗಣನೆಯ ಘಟನೆ ಗಳನ್ನು ತಿಳಿಸುತ್ತದೆ.
- 15 ವರ್ಷಗಳವರೆಗೆ ಅಧ್ಯಯನ ಮಾಡಿದ ಖಾರವೇಲನು 23 ನೇ ವರ್ಷದಲ್ಲಿ ರಾಜನಾದ.
- ಶಾತವಾಹನ ಶಾತಕರ್ಣಿಯ ದಾಳಿಯನ್ನು ತಡೆಗಟ್ಟಿದನು.
- ರಾಷ್ಟ್ರೀಕರು, ಮೂಷಿಕರು, ಮೋಜಕರನ್ನು ಸೋಲಿಸಿದನು.
- ಖಾರವೇಲನು ರಾಜಸೂಯ ಯಾಗ ಮಾಡಿದನು.
- ಬ್ರಹಸ್ಪತಿ ಮಿತ್ರನನ್ನು ಸೋಲಿಸಿ ಜೀನ ಪ್ರತಿಮೆಯನ್ನು ಪಡೆದನು. ಜೈನ ಧರ್ಮ ಶಾಸ್ತ್ರಗಳನ್ನು ರಚಿಸಲು ಪ್ರೇರಣೆ ನೀಡಿದನು.
12) ಒಂದನೇ ಚಂದ್ರಗುಪ್ತ (ಕ್ರಿ.ಶ..0.320-335):
- ಗುಪ್ತರ ಪಥಮ ಸಾರ್ವಭೌಮ ದೊರೆ ಒಂದನೇ ಚಂದ್ರಗುಪ್ತ.
- Iನೇ ಚಂದ್ರಗುಪ್ತ ಗುಪ್ತ ವಂಶದ ಸ್ಥಾಪಕ ಶ್ರೀಗುಪ್ತನ ಮಗ.
- ಈತನು ಮಾಹಾರಾಜಾದಿರಾಜ ಎಂಬ ಬಿರುದು ಹೊಂದಿದ್ದನು.
- ಒಂದನೇ ಚಂದ್ರಗುಪ್ತ ಲಿಚ್ಚವಿ ರಾಜಕುಮಾರಿ, ಕುಮಾರದೇವಿ ಯನ್ನು ವಿವಾಹವಾಗಿದ್ದರಿಂದ ನೇಪಾಳ ಈತನ ವಶಕ್ಕೆ ಬಂದಿತು. “ದೇವಿ ಚಂದ್ರಗುಪ್ತ’ ನಾಟಕವು ಈ ವಿವಾಹವನ್ನು ಪ್ರಸ್ತಾಪಿಸಿದೆ.
- ಪಾಟಿಲೀಪುತ್ರ ಈತನ ರಾಜಧಾನಿಯಾಗಿತ್ತು.
- ಬಂಗಾಳ, ಬಿಹಾರ, ಔದ್ ಹಾಗೂ ಉತ್ತರ ಪ್ರದೇಶಗಳು ಈತನ ಆಳ್ವಿಕೆಗೆ ಒಳಪಟ್ಟಿದ್ದವು.
- ಚಂದ್ರಗುಪ್ತನು ಅಧಿಕಾರಕ್ಕೆ ಬಂದ ಸವಿನೆನಪಿಗೆ ಕ್ರಿ.ಶ. 320 ‘ಗುಪ್ತ ಶಕೆ’ಯನ್ನು ಜಾರಿಗೆ ತಂದನು.
13) ಸಮುದ್ರ ಗುಪ್ತ (ಕ್ರಿ.ಶ.335-375):
- ಸಮುದ್ರಗುಪ್ತ ಗುಪ್ತರ ಅತ್ಯಂತ ಪ್ರಸಿದ್ಧ ಅರಸ.
- ಈತನು ಒಂದನೇ ಚಂದ್ರಗುಪ್ತ ಹಾಗೂ ಕುಮಾರದೇವಿ ಮಗ
- ಈತನ ಬಗ್ಗೆ ತಿಳಿಸುವ ಶಾಸನ “ಅಲಹಾಬಾದ್‌ನ ಸ್ಥಂಭ ಶಾಸನ. ಇದು ನಾಗರಿ ಲಿಪಿಯಲಿದ್ದು, ಸಂಸ್ಕೃತ ಭಾಷೆಯಲ್ಲಿದೆ. 33 ಸಾಲುಗಳಿಂದ ಒಂದೇ ವಾಕ್ಯದಿಂದ ಕೂಡಿದೆ.
- ಸಮುದ್ರಗುಪ್ತನ ಪಟ್ಟದರಾಣಿ ದತ್ತಾದೇವಿ,
- ಸಮುದ್ರಗುಪ್ತನು ಬರೆದ ಕೃತಿ ಕೃಷ್ಣ ಚರಿತೆ
- ಸಮುದ್ರಗುಪ್ತನ ಬಿರುದು ‘ಭಾರತದ ನೆಪೋಲಿಯನ್’ ಎ೦ದು ಇತಿಹಾಸಕಾರ ವಿ.ಎಸ್.ಸ್ಮಿತ್ ಉಲ್ಲೇಖಿಸಿದ್ದಾರೆ.
- ಸಮುದ್ರಗುಪ್ತನು ಕಚ್ ಮಾದರಿಯ ನಾಣ್ಯಗಳನ್ನು ಜಾರಿಗೆ ತಂದಿದ್ದನು.
- ಸಮುದ್ರಗುಪ್ತನ ನಾಣ್ಯಗಳ ಮೇಲೆ, ವೀಣೆ, ಅಶ್ವ, ಶಂಖ, ಪದ್ಯ, ಗಧ, ಚಕ್ರಗಳನ್ನು ಮುದ್ರಿಸಲಾಗಿತ್ತು.
- ಸಮುದ್ರಗುಪ್ತನ ಮಕ್ಕಳು-2ನೇ ಚಂದ್ರಗುಪ್ತ ಮತ್ತು ರಾಮಗುಪ್ತ.
⏩ಉತ್ತರ ಭಾರತದ ದಂಡಯಾತ್ರೆಗಳು :
- ಸಮುದ್ರಗುಪ್ತನು ಆರ್ಯಾವರ್ತ (ಉತ್ತರ ಭಾರತ) ದ ದಂಡ ಯಾತ್ರೆ ಕೈಗೊಂಡು, 9 ಅರಸರನ್ನು ಸೋಲಿಸಿದನು.
- ಆಸ್ಸಾಂ – ಬಲವರ್ಮ (ಅಸ್ಸಾಂ)
- ಅಹಿಚ್ಛೇತ್ರದ – ಅಚ್ಯತ್ (ಉತ್ತರ ಪ್ರದೇಶ)
- ಶಿವನಂದಿ – ನಂದಿ (ಉತ್ತರ ಪ್ರದೇಶ)
- ಪದ್ಮಾವತಿ – ನಾಗಸೇನ (ಮಧ್ಯಪ್ರದೇಶ)
- ಮುಷ್ಕರ – ಚಂದ್ರವರ್ಮನ್ (ಪಶ್ಚಿಮ ಬಂಗಾಳ)
- ಮಥುರಾ- ಗಣಪತಿ ನಾಗ (ಉತ್ತರ ಪ್ರದೇಶ)
- ನಾಗಪ್ರದೇಶ – ನಾಗದೊರೆ (ಮಧ್ಯಪ್ರದೇಶ)
- ಉತ್ತರ ಪ್ರದೇಶ – ಮತ್ತಿಲ (ಉತ್ತರ ಪ್ರದೇಶ)
- ವಾಕಾಟಕ – ರುದ್ರದೇವ (ಮಧ್ಯಪ್ರದೇಶ)
⏩ದಕ್ಷಿಣ ಭಾರತದ ದಂಡಯಾತ್ರೆಗಳು :
- ಕೋಸಲ – ಮಹೇಂದ್ರ (ಮಧ್ಯಪ್ರದೇಶ)
- ಮಹಾಕಾಂತಾರ – ವ್ಯಾಘ್ರರಾಜ (ಓದಿಸಾ)
- ಕೌರಾಲ -ಮಾಂತರಾಜ (ಓಡಿಸಾ)
- ಯರಂಡಪಲ- ದಮನ (ಆಂಧ್ರಪ್ರದೇಶ)
- ಕೊಟ್ಟೂರು ಸ್ವಾಮಿದತ್ತ (ಆಂಧ್ರಪ್ರದೇಶ)
- ಷಷ್ಠಿಪುರ – ಮಹೇಂದ್ರ (ಆಂಧ್ರಪ್ರದೇಶ)
- ಕಂಚಿ- ವಿಷ್ಣುಗೋಪ (ತಮಿಳುನಾಡು)
- ವೆಂಗಿ- ಹಸ್ತಿವರ್ಮನ್ (ಆಂಧ್ರಪ್ರದೇಶ)
- ದೇವರಾಷ್ಟ್ರ-ಕುಬೇರ (ಆಂಧ್ರಪ್ರದೇಶ)
- ಪಲ್ಲಕ್ಕಾ-ಉಗ್ರಸೇನ (ಆಂಧ್ರಪ್ರದೇಶ)
- ಕುಸ್ಥಾಲಾಪುರ- ಧನಂಜನ (ತಮಿಳುನಾಡು)
- ಅವಮುಕ್ತ – ನೀಲರಾಜ (ಆಂಧ್ರಪ್ರದೇಶ)
⏩ಗಡಿ ರಾಜ್ಯಗಳ ಮೇಲೆ ಯುದ್ಧ :
- ನೇಪಾಳ – ನೇಪಾಳ
- ದವಕ – – ಆಸ್ಸಾಂ
- ಕಾಮರೂಪ – ಆಸ್ಸಾಂ –
- ಕಾರ್ತಿಪುರ- ಪಂಜಾಬ್
⏩ಅಡವಿ ರಾಜ್ಯಗಳ ಮೇಲೆ ಯುದ್ಧ :
- ಮಾಳ್ವ – ಮಧ್ಯಪ್ರದೇಶ
- ಯೌಧೇಯರು – ಪಂಜಾಬ್
- ಕಾಕರು – ಮಧ್ಯಪ್ರದೇಶ
- ಖಾರಪರಿಕರು – ಮಧ್ಯಪ್ರದೇಶ
- ಅಬಿದರು – – ಮಧ್ಯಪ್ರದೇಶ
- ಅಜುನಾಯ್ಕರು – ಉತ್ತರಪ್ರದೇಶ
- ಕಾಬೂಲಿನ ದೊರೆ ದೇವಪುತ್ರಗಾಹಿ ಸಮುದ್ರಗುಪ್ತನ ರಾಯ ಭಾರಿಯನ್ನು ಒಪ್ಪಿಕೊಂಡನು.
- ಸಿಲೋನಿನ ಮೇಘವರ್ಮ ಸಮುದ್ರಗುಪ್ತನಿಗೆ ಗೌರವ ಸಲ್ಲಿಸಿ ದನು.
14) 2ನೇ ಚಂದ್ರಗುಪ್ತ (ಕ್ರಿ.ಶ 380-419) :
- ದತ್ತಾದೇವಿ ಮತ್ತು ಸಮುದ್ರಗುಪ್ತನ ಮಗ,
- ದೇವಶ್ರೀ ಮತ್ತು ದೇವಗುಪ್ತ ಎಂಬ ಹೆಸರುಗಳನ್ನು ಹೊಂದಿದನು.
- ಈತನ ಸಾಧನೆಯನ್ನು ತಿಳಿಸುವ ಶಾಸನ ಮಹೌಲಿಸ್ತಂಭ ಶಾಸನ ಲೋಹ ಶಾಸನವಾಗಿದೆ, ಇದು 23.8 ಅಡಿ, ಎತ್ತರವಾಗಿದೆ.
- 2ನೇ ಚಂದ್ರಗುಪ್ತನ ಪ್ರಸಿದ್ಧ ಬಿರುದು-ವಿಕ್ರಮಾದಿತ್ಯ.
- ಶಕರ ಅರಸ ರುದ್ರಸಿಂಹನನ್ನು ಸಂಹರಿಸಿ ‘ಶಿಕಾರಿ’ ಎಂಬ ಬಿರುದು ಪಡೆದನು.
- 2ನೇ ಚಂದ್ರಗುಪ್ತ ನಾಗ ರಾಜಕುಮಾರಿ ಕುಬೇರಿನಾಗಳನ್ನು ವಿವಾಹವಾದನು. ಮುಂದೆ ಕುಬೇರನಾಗಳಿಗೆ ಜನಿಸಿದ ಮಗಳಾದ ಪ್ರಭಾವತಿ ಗುಪ್ತಳನ್ನು ವಾಕಾಟಕರ ಅರಸ 2ನೇ ರುದ್ರಸೇನನಿಗೆ ವಿವಾಹ ಮಾಡಿಕೊಟ್ಟನು.
- 2ನೇ ಚಂದ್ರಗುಪ್ತನು ಪ್ರಶಾಂತ ಸ್ವಭಾವ ಶೌರ್ಯಗಳಿಂದ ಅವನಿಗೆ “ಸಹಸಾಂಕ’ ಎಂಬ ಬಿರುದು ಪಡೆದನು.
- ಈತನ ಆಡಳಿತ ಕಾಲವನ್ನು ‘ಸುವರ್ಣಯುಗ’ವೆಂದು ಕರೆಯುತ್ತಾರೆ.
- ಬಂಗಾಳ ವಂಗ ಅರಸನ ಒಕ್ಕೂಟದ ಮೇಲೆ ದಾಳಿ ಮಾಡಿ, ಬಂಗಾಳವನ್ನು ವಶಪಡಿಸಿಕೊಂಡನು.
ಈತನ ಆಸ್ಥಾನದ ನವರತ್ನರು ರಚಿಸಿದ ಕೃತಿಗಳು
1) ಕಾಳಿದಾಸ – ಮಾಳವಿಕಾಗ್ನಿಮಿತ್ರ, ಕುಮಾರ ಸಂಭವ, ಅಭಿಜ್ಞಾನ ಶಾಕುಂತಲ, ಮೇಘಧೂತ.
2) ವರರುಚಿ – ವ್ಯಾಕರಣ
3) ಥನ್ವಂತರಿ – ಆರ್ಯುವೇದ ನಿಘಂಟು
4) ವರಾಹಮಿಹರ – ಬೃಹತ್ಸಂಹಿತೆ, ಬೃಹತ್ಜಾತಕ,
5) ಶಂಕು – ಶಿಲ್ಪಶಾಸ್ತ್ರ
6) ಅಮರಸಿಂಹ – ಅಮರಕೋಶ
7) ಕ್ಷಪಣಕ – ಜ್ಯೋತಿಷಶಾಸ್ತ್ರ
8) ವೇತಾಲಭಟ್ಟ — ಕಥೆ ಮತ್ತು ಕಾವ್ಯಗಳು
9) ಘಟಕರ್ಪರ – ಘಟಕರ್ಪರ ಕಾವ್ಯ
- 2ನೇ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ ಚೀನಾದ ಯಾತ್ರಿಕ ಫಾಹಿಯಾನ್, ಈತನ ರಚಿಸಿದ ಕೃತಿ ‘ಫೋ-ಕೊಕಿ’, ಭೂ ಮಾರ್ಗದ ಮೂಲಕ ಭಾರತಕ್ಕೆ ಕ್ರಿ.ಶ.400ರಲ್ಲಿ ಬಂದು, ಫಾಹಿಯಾನನು ಕ್ರಿ.ಶ. 411 ರಲ್ಲಿ ತನ್ನ ದೇಶಕ್ಕೆ ಮರಳಿದನು.
- 2ನೇ ಚಂದ್ರಗುಪ್ತನ ಆಡಳಿತ ಮಂಡಳಿ :
1) ವಿನಯಸ್ಥಿತಿ ಸ್ಥಾಪಕ – ಜನಗಣತಿ ಇಲಾಖೆ
2) ಮಹಾಪ್ರತಿಹಾರ – ಅರಮನೆ ಮೇಲಿನ ಭಾಗ
3) ದಂಡಪನಾಧೀಕರಣ – ಪೊಲೀಸ್ ಮುಖ್ಯಸ್ಥ
- ಈತನ ನಾಣ್ಯಗಳ ಮೇಲೆ ಲಕ್ಷ್ಮೀ, ಗರುಡ, ಕುದುರೆ ಚಿತ್ರಗಳನ್ನು ಕಾಣಬಹುದು.
15) ಕುಮಾರಗುಪ್ತ (ಕ್ರಿ.ಶ. 414-455) :
- ಈತನು 2ನೇ ಚಂದ್ರಗುಪ್ತನ ನಂತರ ಅಧಿಕಾರಕ್ಕೆ ಬಂದನು.
- ಕುಮಾರಗುಪ್ತನು ಜುನಾಗಢ, ಜೈಯಿಸಿದನು,
- ವ್ಯಾಘ್ರಬಲ, ಪರಾಕ್ರಮ, ಮಹೇಂ ದ್ರಾದಿತ್ಯ ಎಂಬ ಬಿರುದುಗಳನ್ನು ಹೊಂ ದಿದನು.
- ಈತನ ಆಸ್ಥಾನದ ಮಂತ್ರಿ ನರಸಿಂಹ ಗುಪ್ತ.
- ಈತನು ಕ್ರಿ.ಶ. 420ರಿಂದ 427ರ ಅವಧಿಯಲ್ಲಿ ನಳಂದಾ ವಿಶ್ವ ವಿದ್ಯಾಲಯವನ್ನು ಕಟ್ಟಿಸಿದನು.
16)1ನೇ ಪ್ರವರಸೇನ (ಕ್ರಿ.ಶ. 275-335):
- ಈತನು ವಾಕಾಟಕರ ಪ್ರಸಿದ್ಧ ದೊರೆ.
- 1 ನೇ ಪ್ರವರಸೇನನು ನಾಲ್ಕು ಬಾರಿ ಅಶ್ವಮೇಧಯಾಗ ಮಾಡಿದನು.
- ಈತನ ಬಿರುದು ‘ಸಾಮ್ರಾಟ್ ವಾಕಾಟಕ
- ಈತನು ಆಚರಿಸಿದ ಯಜ್ಞಗಳು
1) ಅಶ್ವಮೇಧ 2) ವಾಜಪೇಯಿ
3) ಅಗ್ನಿಸೋಮ 4) ಅತಿರಾತ್ರ
17) CADER JOEN (ಕ್ರಿ.ಶ... 588-605):
- ಪ್ರಭಾಕರ ವರ್ಧನು `ವರ್ಧನ ಸಾಮ್ರಾಜ್ಯ’ದ ಸ್ಥಾಪಕ.
- ಈತನ ಬಿರುದುಗಳು-‘ಪರಮ ಭಟ್ಟಾರಕ’, ‘ಮಹಾ ರಾಜಾಧಿರಾಜ’.
- ಈತನು ಹೂಣರ ಹಾಗೂ ಲಾಟರನ್ನು ಸೋಲಿಸಿದನು.
- ರಾಜ್ಯವನ್ನು ವಿಸ್ತರಿಸಿ ‘ಪ್ರತಾಪಶೀಲ’ ಎಂಬ ಬಿರುದು ಪಡೆದನು.
- ಪ್ರಭಾಕರ ವರ್ಧನನ ರಾಣಿ-ಯಶೋಮತಿ, ಮಕ್ಕಳು- ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀ,
- ಪ್ರಭಾಕರ ವರ್ಧನ ತನ್ನ ಮಗಳನ್ನು ಮೌಖರಿ ವಂಶದ ಗೃಹವರ್ಮನಿಗೆ ಕೊಟ್ಟು ವಿವಾಹ ಮಾಡಿದನು.
18) ಹರ್ಷವರ್ಧನ ( ಕ್ರಿ.ಶ. 606-647):
- ವರ್ಧನ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸ.
- ಹರ್ಷವರ್ಧನ ಶಿಲಾದಿತ್ಯ, ಪ್ರಿಯದರ್ಶಿನಿ, ಉತ್ತರಾಪಥೇಶ್ವರ, ಪರಮಭಟ್ಟಾರಕ ಎಂಬ ಬಿರುದುಗಳನ್ನು ಹೊಂದಿದ್ದನು.
- ಕ್ರಿ.ಶ.606ರಲ್ಲಿ ‘ಹರ್ಷಶಕೆ’ಯನ್ನು ಹರ್ಷವರ್ಧನನು ಆರಂಭಿಸಿ ದರು.
- ಬಾಣನ ಹರ್ಷಚರಿತೆ, ಹೂಯೆನ್ ಸ್ಟ್ಯಾಂಗ್‌ನ ‘ಸಿ-ಯು-ಕಿ’ ಕೃತಿಗಳು ಹರ್ಷವರ್ಧನನ ಕುರಿತು ಮಾಹಿತಿ ನೀಡುತ್ತವೆ.
- ಹರ್ಷವರ್ಧನನಿಗೆ ಸಹಾಯ ಮಾಡಿದ ಕಾಮರೂಪದ ಅರಸ ಭಾಸ್ಕರವರ್ಮ
- ಹರ್ಷವರ್ಧನನ ಮಂತ್ರಿ ಬಂಡಿ
- ಹರ್ಷವರ್ಧನನ ಆಸ್ಥಾನಕ್ಕೆ ಭೇಡಿ ನೀಡಿದ ಚೀನಾದ ಯಾತ್ರಿಕ
- ಹೂಯೆನ್‌ಸ್ಟ್ಯಾಂಗ್ (ಕ್ರಿ.ಶ. 600-664) – ಹರ್ಷವರ್ಧನನು ತನ್ನ ಮಗಳನ್ನು ಗುಜರಾತಿನ ಧ್ರುವಸೇನನಿಗೆ ಕೊಟ್ಟು ವಿವಾಹ ಮಾಡಿದನು.
- ನರ್ಮದಾ ನದಿ ತೀರದ ಯುದ್ಧ ಕ್ರಿ.ಶ. 634-35ರಲ್ಲಿ 2ನೇ ಪುಲಕೇಶಿ ಹಾಗೂ ಹರ್ಷವರ್ಧನನ ನಡುವೆ ಜರುಗಿತು. ಈ ಯುದ್ಧದಲ್ಲಿ ಹರ್ಷವರ್ಧನ ಸೋತು ‘ಪರಮೇಶ್ವರ’ ಎಂಬ ಬಿರುದನ್ನು ಪುಲಕೇಶಿಗೆ ಬಿಟ್ಟುಕೊಟ್ಟನು.
- ಪುಲಕೇಶಿ ಮರಣದ ನಂತರ ಹರ್ಷವರ್ಧನನು ಕ್ರಿ.ಶ. 644 ರಲ್ಲಿ ದಕ್ಷಿಣ ಭಾರತದ ‘ಗಂಜಾಂ ಎಂಬ ಪ್ರದೇಶವನ್ನು ವಶಪಡಿಸಿಕೊಂಡನು.
- ಹರ್ಷನ ಆಸ್ಥಾನಕ್ಕೆ ಚೀನಾ ಯಾತ್ರಿಕ ಹೂಯೆನ್‌ಸ್ಟ್ಯಾಂಗ್ ಭೇಟಿ ನೀಡಿದನು.
- ಹರ್ಷವರ್ಧನನ ಕುರಿತು ತಿಳಿಸುವ ಶಾಸನಗಳು, ‘ಬನ್ನಖೇರ, ಮಧುಬನ್ ಶಾಸನಗಳು.
- ಕನೋಜಿನ ಧಾರ್ಮಿಕ ಮಹಾಸಭೆ ಕ್ರಿ.ಶ. 643 ರಲ್ಲಿ ನಡೆಯಿತು. ಇದರಲ್ಲಿ 20 ಅರಸರು, 3000 ಬ್ರಾಹ್ಮಣರು ಭಾಗವಹಿಸಿದರು.
- ಈತನ ಆಳ್ವಿಕೆಯ ಕಾಲದಲ್ಲಿ ಪ್ರಯಾಗ ಮಹಾಸಭೆ ಕ್ರಿ.ಶ. 643 ರಲ್ಲಿ ಜರುಗಿತು.
- ಹರ್ಷವರ್ಧನನು ಬರೆದ ಕೃತಿಗಳು -ರತ್ನಾವಳಿ, ಪ್ರಿಯದರ್ಶಿಕಾ, ನಾಗಾನಂದ.
- ಹರ್ಷವರ್ಧನನು ನಳಂದ ವಿಶ್ವವಿದ್ಯಾಲಯಕ್ಕೆ ಸಹಾಯ ಧನ ನೀಡಿದನು.
- ಕ್ರಿ.ಶ. 647 ರಲ್ಲಿ ಹರ್ಷವರ್ಧನನು ಮರಣ ಹೊಂದಿದನು.
19) ಒಂದನೇ ಮಹೇಂದ್ರವರ್ಮ(ಕ್ರಿ.ಶ. 600-640):
- ಈತನು ಕಂಚಿ ಪಲ್ಲವರ ಪ್ರಸಿದ್ಧ ದೊರೆ.
- ಒಂದನೇ ಮಹೇಂದ್ರವರ್ಮನು ಪರಾಕ್ರಮಿಯೂ, ಕಲೆ, ಸಾಹಿತ್ಯ, ಧರ್ಮಗಳ ಉದಾರ ಪೋಷಕನಾಗಿದ್ದನು.
- ಈತನು ಮೂಲತಃ ಜೈನ ಧರ್ಮೀಯನಾಗಿದ್ದನು. ಅಪ್ಪಾರ ಎನ್ನುವ ಗುರುವಿನ ಸಹಾಯದಿಂದ ಶೈವ ಧರ್ಮವನ್ನು ಸ್ವೀಕರಿಸಿದನು.
- ಮಹಾಬಲಿಪುರಂ, ಕಂಚಿ, ತಿರುಚ್ಛಿ, ವಲ್ಲಂ, ದಳವಾನುರು ಮಹೇಂದ್ರವಾಡಿಗಳಲ್ಲಿ ಶಿವ, ಬ್ರಹ್ಮ ಮತ್ತು ವಿಷ್ಣು ದೇವಾಲ ಯಗಳನ್ನು ನಿರ್ಮಿಸಿದ್ದನು.
- ಗುಪ್ತರ ಪ್ರಭಾವತಿ ಗುಪ್ತಾಳನನ್ನು ಈತನು ವಿವಾಹಯಾಗಿದ್ದನು.
- ಈತನು ಬರೆದ ಕೃತಿ ‘ಮತ್ತವಿಲಾಸ ಪ್ರಹಸನ’ ಮತ್ತು ‘ಭಗವದುಜ್ಜರೇಯಂ’ ಎಂಬ ಕೃತಿಗಳನ್ನು ಬರೆದನು.
- ಮಹೇಂದ್ರ ವರ್ಮನು ಸಂಗೀತ ಗುರು – ರುದ್ರಾಚಾರ್ಯ
- ಈತನು ಪರಿವೀಣಾ ವಾದ್ಯವನ್ನು ನುಡಿಸಲು ಪ್ರವೀಣನಾಗಿದ್ದನು.
- ಮಹೇಂದ್ರ ಮಂಗಲ ಮತ್ತು ಮಹೇಂದ್ರವಾಡಿ ಎಂಬ ನಗರಗಳನ್ನು ಕಟ್ಟಿಸಿದನು.
- ಈತನು ಕ್ರಿ.ಶ. 640 ರಲ್ಲಿ ಮರಣ ಹೊಂದಿದನು.
20) ಬಾಬರ(ಕ್ರಿ.ಶ..-1526-1530) :
- ಮೊಘಲ್ ಸಾಮ್ರಾಜ್ಯದ ಸ್ಥಾಪಕ – ಬಾಬರ
- ಬಾಬರನ ಮೂಲ ಹೆಸರು ಜಾಹಿರುದ್ದೀನ ಮಹಮ್ಮದ ಬಾಬರ
- ತಂದೆ-ಉಮರಶೇಖ್ ಮಿರ್ಜಾ (ತೈಮೂರನ ವಂಶಸ್ಥ)
- ತಾಯಿ-ಕುತ್ತುಗ್‌ನಿಗಾ ಖಾನಂ (ಚೆಂಗೀಸ್‌ಖಾನನ ವಂಶಸ್ಥಳು)
- ಬಾಬರ್ ಕ್ರಿ.ಶ. 1483 ಫೆಬ್ರವರಿ – 14ರಂದು ಫರ್ಫಾನ್ ಎಂಬಲ್ಲಿ ಜನಿಸಿದನು.
- ಕ್ರಿ.ಶ 1494 ರಲ್ಲಿ ತಂದೆಯ ಮರಣದ ನಂತರ ಬಾಬರ್ ಫರ್ಘಾನ್‌ದ ಮುಖ್ಯಸ್ಥನಾದನು.
- ಕ್ರಿ.ಶ. 1497 ರಲ್ಲಿ ಸಮರಖಂಡವನ್ನು ವಶಪಡಿಸಿಕೊಂಡು ಕೇವಲ 100 ದಿನಗಳ ಆಡಳಿತ ಮಾಡಿದನು.
- ಬಾಬರನ ಚಿಕ್ಕಪ್ಪ ಉಲುಘಬೇಗ್‌ನ ಮರಣದ ನಂತರ ಕಾಬೂಲ್ ದೊರೆಯಾದನು.
- ಬಾಬರ್ ಕ್ರಿ.ಶ.1519 ರಲ್ಲಿ ಭಾರತದ ಕಡೆಗೆ ದಾಳಿಯನ್ನು ಪ್ರಾರಂಭಿಸಿದನು.
- ಕ್ರಿಶ. 1526 ಏಪ್ರಿಲ್-21ರಂದು ಮೊದಲನೇ ಪಾಣಿಪತ್ ಕದನ ಬಾಬರ್ ಮತ್ತು ಇಬ್ರಾಹಿಂ ಲೋಧಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ಲೋಧಿ ಸೋತು ಕೊಲೆಯಾದನು.
- ಒಂದನೇ ಪಾಣಿಪತ್ ಕದನವು ಭಾರತದಲ್ಲಿ ಮೊಘಲರ ಅಧಿಪತ್ಯಕ್ಕೆ ತಳಹದಿ ಹಾಕಿತು.
- ಈ ಯುದ್ಧದ ಬಳಿಕ ಬಾಬರನು ‘ಸುಲ್ತಾನ್’ ಎಂಬ ಪದವಿ ಕಿತ್ತ ಹಾಕಿ ‘ಬಾದಶಹ’ ಎಂಬು ಬಿರುದು ಧರಿಸಿದನು.
- ಕ್ರಿಶ. 1527-ರಲ್ಲಿ ಕಣ್ವ ಕಾಳಗದಲ್ಲಿ ಮೇವಾರದ ಅರಸ ರಾ ಸಂಗ್ರಾಮನನ್ನು ಸೋಲಿಸಿದನು.
- ಕ್ರಿ.ಶ.1528-ರಲ್ಲಿ ಚಂದೇರಿಕಾಳಗದಲ್ಲಿ ಅರಸ ಮೇದಿನಿ ರಾಯನನ್ನು ಸೋಲಿಸಿದನು. ಈತ ರಾಣಾಸಂಗ್ರಾಮನಿಗೆ ಸಹಯ ಮಾಡಿದ್ದನು.
- ಕ್ರಿ.ಶ.-1529 ರಲ್ಲಿ ಘೋಗ್ರಾ ಎಂಬ ಕಾಳಗದಲ್ಲಿ ಇಬ್ರಾಹಿಂ ಲೋಧಿಯ ಸಹೋದರ ಮಹ್ಮದ ಲೋದಿಯನ್ನು ಸೋಲಿಸಿದನು.
- ಕ್ರಿ.ಶ. 1530 ರಲ್ಲಿ ಬಾಬರ್ ಮರಣ ಹೊಂದಿದನು. ಈತನ ಶವವನ್ನು ಮೊದಲು ಆಗ್ರಾದ ಅರಮ್ ಪ್ರದೇಶದಲ್ಲಿ ಹೂಳಲಾಗಿತ್ತು. ಬಳಿಕ ಕಾಬೂಲ್‌ನಲ್ಲಿ ಸಮಾಧಿ ನಿರ್ಮಿಸ ಲಾಯಿತು.
- ಬಾಬರನು ಭಾರತಕ್ಕೆ ತೋಪನ್ನು ಹಾಗೂ ಗುಲಾಬಿ ಹೂವನ್ನು ಪರಿಚಯಿಸಿದ ಮೊದಲ ವ್ಯಕ್ತಿ.
21) ಹುಮಾಯುನ್ (ಕ್ರಿ.ಶ.. 1530- 1540):
- ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ಅದೃಷ್ಟವಂತ ಎಂಬ ಹೆಸರಿನೊಂದಿಗೆ ದುರದೃಷ್ಟಕರವಾಗಿ ಆಡಳಿತ ಮಾಡಿದ ಅರಸ ಹುಮಾಯುನ್ ಆಗಿದ್ದಾನೆ.
- ಹುಮಾಯುನ್ ಕ್ರಿ.ಶ. 1508 ಮಾರ್ಚ್ 6ರಂದು ಕಾಬೂಲ್‌ನಲ್ಲಿ ಜನಿಸಿದನು.
- ಈತನ ಪೂರ್ಣ ಹೆಸರು ನಾಸಿರುದ್ದೀನ್ ಮಹದ ಹುಮಾಯುನ್.
- ಬಾಬರ ಮರಣದ ನಂತರ ಕ್ರಿ.ಶ. 1530 ಡಿಸೆಂಬರ್- 30 ರಂದು ಪಟ್ಟವೇರಿದನು.
- ಆರಂಭದಲ್ಲಿ ಹುಮಾಯುನ್ ಅಪಘನ್ನರನ್ನು ಮತ್ತು ರಜಪೂತನ್ನು ಹತ್ತಿಕ್ಕಿದನು.
- ಕ್ರಿ.ಶ.-1532 ರಲ್ಲಿ ಹುಮಾಯುನ್ ಮತ್ತು ಮಹದ ಲೋಧಿಯ ಮಧ್ಯ ‘ದೌರಾ’ ಕಾಳಗ ನಡೆಯಿತು. > ಈ ಕಾಳದಲ್ಲಿ ಮಹ್ಮದ ಲೋದಿ ಸೋಲನ್ನು ಅನುಭವಿಸಿದನು.
- ಕ್ರಿ.ಶ.-1535-36 ರಲ್ಲಿ ಹುಮಾಯುನ್ ಮಾಳ್ವದ ಬಹದ್ದೂರ್ ಷಾನನ್ನು ಸೋಲಿಸಿದನು.
- ಕ್ರಿ.ಶ. 1539 ರಲ್ಲಿ ಹುಮಾಯುನ್ ಹಾಗೂ ಶೇರಷಾ ಮಧ್ಯ ಚೌಸಾ ಎಂಬಲ್ಲಿ ಕಾಳಗ ನಡೆಯಿತು. ಈ ಕದನದಲ್ಲಿ ಹುಮಾ ಯುನ್ ಸೋತು ಗಂಗಾನದಿಗೆ ಹಾರಿದನು. ಜಲಗಾರ ನಿಜಾಮನ ಸಹಾಯದಿಂದ ಬದುಕುಳಿದನು.
- ಕ್ರಿ.ಶ.-1540ರಲ್ಲಿ ಹುಮಾಯುನ್ ಹಾಗೂ ಈ ಶೇರ್‌ಷಾನ್ ಮಧ್ಯ ಕನೌಜ್ ಅಥವಾ ಬಿಲ್‌ಗ್ರಾಮ್ ಕದನ ನಡೆಯಿತು. ಈ ಯುದ್ಧದಲ್ಲಿ ಹುಮಾಯುನ್ ಸಂಪೂರ್ಣವಾಗಿ ಸೋತು ಅಲೆ ಮಾರಿಯಾದನು.
- ಹುಮಾಯುನ್ ಕ್ರಿ.ಶ.-1541ರಲ್ಲಿ ಹಮೀದಾಬಾನು ಬೇಗಂಳನ್ನು ವಿವಾಹವಾದನು.
- ಕ್ರಿ.ಶ. 1542ರಲ್ಲಿ ಅಮರಕೋಟೆಯ ರಜಪೂತ ನಾಯಕ ವೀರಸಾಲಿನ ಮನೆಯಲ್ಲಿ ಅಕ್ಷರ ಜನಿಸಿದನು.
- ಕ್ರಿಶ. 1543ರಲ್ಲಿ ಹುಮಾಯುನ್ ಪರ್ಷಿಯಾದ ದೊರೆ ಕತಹಮಹಸ್ತನ ಸಹಾಯದಿಂದ ಸಹೋದರ ಕಾಮರಾನನ್ನು ಸೋಲಿಸಿ, ಕಾಬೂಲ್‌ನ್ನು ವಶಪಡಿಸಿಕೊಂಡನು.
- ಕ್ರಿ.ಶ. 1555ರಲ್ಲಿ ಹುಮಾಯುನ್ ಲಾಹೋರನ್ನು ವಶಪಡಿಸಿಕೊಂಡನು.
- ಕ್ರಿ.ಶ1555 ಜೂನ್ 22ರಂದು ಸರಹಿಂದ್’ ಕಾಳಗದಲ್ಲಿ ಸಿಕಂದರ್‌ಷಾನ್‌ನನ್ನು ಸೋಲಿಸಿ, ಪಂಜಾಬ್‌ವನ್ನು ವಶಪಡಿಸಿಕೊಂಡನು.
- ಕ್ರಿ.ಶ-1556 ರಲ್ಲಿ ತಾನೇ ನಿರ್ಮಿಸಿದ ‘ದೀನಪನ್ನಾ’ ಎಂಬ ಗ್ರಂಥಾಲಯದ ಮೆಟ್ಟಿಲು ಮೇಲಿಂದ ಬಿದ್ದು ಮರಣ ಹೊಂದಿದನು.
- ಹುಮಾಯುನ್ ಸಮಾಧಿ ದೆಹಲಿಯಲ್ಲಿದೆ.
- ಹುಮಾಯುನ್‌ನ ಆತ್ಮಚರಿತ್ರೆ-“ಹುಮಾಯುನ್ ನಾಮಾ’ ಇದನ್ನು ಹುಮಾಯುನ್ ಸಹೋದರಿ ಗುಲ್ಬದ್ದೀನ್ ಬೇಗಂ ರಚಿಸಿದ್ದಾಳೆ. ಹುಮಾಯುನ್‌ನಾಮಾ ಪರ್ಶಿಯನ್ ಭಾಷೆಯಲ್ಲಿದೆ.
- ಕ್ರಿ.ಶ 1540 -1555 ರ ವರೆಗಿನ ಅವಧಿಯನ್ನು ಸೂರ ಸಂತತಿ ಯವರು ಆಡಳಿತ ಮಾಡಿದರು.
22) ಅಕ್ಬರ್ (ಕ್ರಿ.ಶ..1556-1605):
- ಮೊಘಲ್ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ದೊರೆ.
- ಅಕ್ಷರನ ಮೂಲ ಹೆಸರು – ಜಲಾಲುದ್ದೀನ್ ಮಹ
- ತಂದೆ ಹುಮಾಯುನ್ತಾ
- ತಾಯಿ-ಹಮೀದಾ ಬಾನು ಬೇಗಂ
- ಅಕ್ಷರನಿಗೆ ಕ್ರಿ.ಶ 1556 ಫೆಬ್ರವರಿ 14 ರಂದು ಪಂಜಾಬದ ಕಲನೌರ ಎಂಬಲ್ಲಿ ಪಟ್ಟಾಭಿಷೇಕವಾಯಿತು.
- ಅಕ್ಷರನ ಸಾಕು ತಾಯಿ ಮಹಲ್ ಅನಗಾ ಇವಳು ಅಕ್ಕರನ ಮೇಲೆ ಸಂಪೂರ್ಣ ನಿಯಂತ್ರವನ್ನು ಹೊಂದಿದ್ದಳು. ಇವಳು ತನ್ನ ಮಗನಾದ ಆದು ಖಾನನ್ನು ಅಧಿಕಾರಕ್ಕೆ ತರುವ ಸನ್ನಾಹ ದಲ್ಲಿದ್ದಳು.
- ಅಕ್ಷರನ ಗುರು – ಅಬ್ದುಲ್ ಲತೀಪ್
- ಅಕ್ಷರನ ಪ್ರಸಿದ್ಧ ರಾಣಿಯರು -1) ರುಕೈಯಾಬೇಗಂ 2)ಸಲೀಮಾ ಬೇಗಂ 3) ಜೋಧಾ ಬೇಗಂ
⏩ಅಕ್ಷರನ ದಿಗ್ವಿಜಯಗಳು
- ಕ್ರಿಶ- 1556 ರಲ್ಲಿ ಹೇಮು ಮತ್ತು ಮೊಘಲರ ನಡುವೆ 2ನೇ ಪಾಣಿಪತ್ ಕದನ ಜರುಗಿತು. ನವೆಂಬರ್-05 ರಂದು ಈ ಕದನದಲ್ಲಿ ದೆಹಲಿಯನ್ನು ಆಳುತ್ತಿದ್ದ ಹೇಮುವನ್ನು ಅಕ್ಬರ್ ತನ್ನ ಮಾವನಾದ ಭೈರಾಂಖಾನನ ಸಹಾಯದಿಂದ ಕೋಲೆ ಮಾಡಿದನು.
- ಕ್ರಿ.ಶ.-1561 ರಲ್ಲಿ ಮಾಳ್ವದ ಮುಖ್ಯಸ್ಥ ಬಹದ್ದೂರನ್ನು ಸೋಲಿಸಿದನು.
- ಕ್ರಿ.ಶ.- 1561 ರಲ್ಲಿ ಚುನಾರ್ ಕೋಟೆಯ ಮೇಲೆ ದಾಳಿ ಮಾಡಿ ಖಾನ್ ಇಮಾನನ್ನು ಸೋಲಿಸಿದನು.
- ಕ್ರಿ.ಶ. 1562 ರಲ್ಲಿ ಅಂಬರ ಕೋಟೆಯ ಮೇಲೆ ದಾಳಿ ಮಾಡಿದನು. ಆ ಸಂದರ್ಭದಲ್ಲಿ ಅಲ್ಲಿಯ ಅರಸ ಬಿಹಾರಿ ಮಹಲ್ ತನ್ನ ಮಗಳು ಜೋಧಾಬಾಯಿಯನ್ನು ಅಕ್ಷರನಿಗೆ ಕೊಟ್ಟು ವಿವಾಹ ಮಾಡಿದನು.
- ಕ್ರಿ.ಶ.-1562 ರಲ್ಲಿ ಮರ್ತಾದ ಮೇಲೆ ದಾಳಿ ಮಾಡಿ ಅಲ್ಲಿನ ಅರಸ ಜಯಮಲ್ ನಿಂದ ವರ್ಷಾವನ್ನು ವಶಪಡಿಸಿಕೊಂಡನು.
- ಕ್ರಿ.ಶ.-1564 ರಲ್ಲಿ ಗೊಂಡವನದ ಮೇಲೆ ದಾಳಿ ಮಾಡಿ ರಾಣಿ ದುರ್ಗಾವತಿಯನ್ನು ಸೋಲಿಸಿದನು. ಅಲ್ಲಿ ವೀರ ನಾರಾಯಣ ಅಪ್ರಾಪ್ತ ಬಾಲಕನಾಗಿದ್ದ ಕಾರಣ ರಾಣಿ ದುರ್ಗಾದೇವಿ ಆಡಳಿತ ನಡೆಸುತ್ತಿದ್ದಳು.
- ಕ್ರಿ.ಶ.-1567 ರಲ್ಲಿ ಮೇವಾರದ ಮೇಲೆ ದಾಳಿ ಮಾಡಿ ರಾಣಾ ಉದಯಸಿಂಗ್‌ನನ್ನು ಸೋಲಿಸಿ, ಕಾಡಿಗೆ ಅಟ್ಟಿಸಿದನು.
- ಕ್ರಿ.ಶ.1569 ರಲ್ಲಿ ರಣಥಂಬೋರ ಕೋಟೆಯ ಮೇಲೆ ಅಕ್ಟರ್ ದಾಳಿಮಾಡಿದನು, ಅಲ್ಲಿಯ ರಜಪೂತ ಅರಸ ರಾಯ ಸುರ್ಜನಹರ ಯುದ್ಧ ಮಾಡದೇ ಶರಣಾದನು.
- ಕ್ರಿ.ಶ.-1569 ರಲ್ಲಿ ಕಾಲಿಂಜರ ಕೋಟೆಯ ಮೇಲೆ ದಾಳಿ ಮಾಡಿ, `ರಾಜಾರಾಮಚಂದ್ರ ವಶದಲ್ಲಿದ್ದ ಕೋಟೆಯನ್ನು ವಶಪಡಿಸಿಕೊಂಡನು.
⏩ಅಶ್ವರನ ಆಡಳಿತ :
* ಅಕ್ಷರನ ಆಡಳಿತ ಮಂತ್ರಿಮಂಡಳ
* ವಕೀಲ್ ಪ್ರಧಾನಮಂತ್ರಿ
* ಮೀರಭಕ್ಷಿ – ಸೇನಾ ಮುಖ್ಯಸ್ಥ
* ಸದರ್ – ಉಸ್- ಸದರ್- ದಾನದತ್ತಿಗಳ ಮಂತ್ರಿ
* ಖಾಜಿ- ಉಲ್ -ಖಜತ್ – ಮುಖ್ಯ ನ್ಯಾಯಾಧೀಶ
* ಖಾನ್ – ಇ – ಸಮನ್ – ಗೃಹ ಸಚಿವ
* ಮುಖಿತಾಬ್- ಧರ್ಮಾಧಿಕಾರಿ
* ದರೋಗ – ಇ – ಡಾಕಚೌಕಿ- ಬೇಹುಗಾರಿಕೆ ಮುಖ್ಯಸ್ಥ
* ಮುಶಿಫ್ – ಬಂದರು ಮುಖ್ಯಸ್ಥ
* ದರೋಗ-ಇ-ತಕ್ಷಲ್ -ಟಂಕಸಾಲೆ ಮೇಲ್ವಿಚಾರಕ
- ಅಕ್ಟರನ ಕಂದಾಯ ಇಲಾಖೆಯಲ್ಲಿ ಜಪ್ತಿ ಅಥವಾ ಬಂದೋಬಸ್ತ ಎಂಬ ಪದ್ಧತಿ ಜಾರಿಗೆ ತಂದನು.
- ಅಕ್ಷರನ ಪ್ರಸಿದ್ಧ ಕಂದಾಯ ಮಂತ್ರಿ – ರಾಜಾಥೋಡರಮಲ್ಲ
- ಅಕ್ಷರ ಫಲವತ್ತತೆಗೆ ಅನುಗುಣವಾಗಿ ಕಂದಾಯವನ್ನು ನಿಗದಿಪಡಿಸಿದನು.
* ಪೋಲಾಜ್ – ನಿರಂತರ ಬೇಸಾಯಕ್ಕೆ ಒಳಪಡುವ ಭೂಮಿ, * ಪತಿ-ಒಂದು ವರ್ಷ ಅಂತರ ಬಿಟ್ಟು ಬೆಳೆಯುವ ಭೂಮಿ
* ಚಚಾರ್ – 3/4 ವರ್ಷ ಅಂತರಬಿಟ್ಟು ಬೆಳೆಯುವ ಭೂಮಿ
* ಬಂಜರ್ – 5 ವರ್ಷಗಳಿಗೊಮ್ಮೆ ಬೆಳೆಯುವ ಭೂಮಿ - ಅಕ್ಷರ ಮನ್ಸಬದಾರಿ ಪದ್ಧತಿಯನ್ನು ಜಾರಿಗೆ ತಂದನು.
- ಅಕ್ಟರ್ ಆರೋಖದರ್ಶನ ಪದ್ಧತಿಯನ್ನು ಅನುಸರಿಸಿದನು.
ಸಾಂಸ್ಕೃತಿಕ ಕೊಡುಗೆಗಳು :
- ಅಕ್ಷರನ ಕನಸಿನ ನಗರ- ಪತ್ತೆಪರ ಸಿಕ್ಕಿ ನಿರ್ಮಿಸಿದನು, ಇದನ್ನು ಶಿಲೆಯಲ್ಲಿನ ಶೃಂಗಾರ ವೆಂದು ವಿ.ಎಸ್.ಸ್ಟೀತ್ ವರ್ಣಿಸಿ
- ಪತ್ತೇಪುರ ಸಿಕ್ರಿಯಲ್ಲಿ ಇಬಾದತ್ ಖಾನಾ, ಬುಲಂದಾ ದುರ್ವಾಜಾ, ಜಹಾಂಗೀರ ಮಹಲ್, ಬೀರಬಲ್ ಹೌಸ್, ಜೋಧಾಬಾಯಿ ಅರಮನೆ, ಪಂಚ ಮಹಲ್, ಜಾಮೀ ಮಸೀದಿಗಳನ್ನು ನಿರ್ಮಿಸಿದನು
- ಅಕ್ಟರ್‌ನು ಆಗ್ರಾದಲ್ಲಿ ಕೋಟೆ ಯನ್ನು ನಿರ್ಮಿಸಿದನು.
⏩ಮೊಘಲರ ಸಾಹಿತ್ಯ :
- ಅಕ್ಷರನ ಆಸ್ಥಾನದಲ್ಲಿ ಅಬುಲ್‌ಫಜಲ್ ಮತ್ತು ಅಬುಲ್‌ಪೈಜಿ ಎಂಬ ಸಾಹಿತಿಗಳಿದ್ದರು
* ಅಬುಲ್ ಫಜಲ್- ಐನಿ ಅಕ್ಷರಿ, ಅಕ್ಷರ ನಾಮಾ
* ಅಬುಲ್ ಫೈಜಿ – ಲೀಲಾವತಿ
* ನಿಜಾಮುದ್ದೀನ ಅಹ್ಮದ್ ತಬಕತ್-ಇ-ಅಕ್ಟರಿ
* ಫೀರ್ದೋಷಿ- ಷಾ ನಾಮ
* ತುಳಸಿದಾಸ- ರಾಮಚರಿತ ಮಾನಸ - ಕ್ರಿ.ಶ. 1572ರಲ್ಲಿ ಗುಜರಾತದ ಮೇಲೆ ದಾಳಿ ಮಾಡಿ ಮುಜಾಫರ ಖಾನ್ ನೊಬೆಲ್‌ರನ್ನು ಸೋಲಿಸಿ, ಫತ್ತೇಪುರ ಸಿಕ್ರಿಯಲ್ಲಿ ಬುಲಂದಾ ದರ್ವಾಜ ನಿರ್ಮಿಸಿದನು.
- ಕ್ರಿ.ಶ. 1581 ರಲ್ಲಿ ಕಾಬೂಲದ ಮೇಲೆ ದಾಳಿ ಮಾಡಿ ಮಿರ್ಜಾ ಮತ್ತು ಮಹದನನ್ನು ಸೋಲಿಸಿದನು.
- ಕ್ರಿ.ಶ-1586 ರಲ್ಲಿ ಕಾಶ್ಮೀರದ ಮೇಲೆ ಯೂಸೂಫ್‌ಖಾನನ್ನು ಸೋಲಿಸಿದನು. ದಾಳಿ ಮಾಡಿ
- ಕ್ರಿ.ಶ- 1595 ರಲ್ಲಿ ಅಹ್ಮದ ನಗರದ ರಾಜಕುಮಾರಿ ಚಾಂದಬೀಬಿ ಅಕ್ಟರನೊಂದಿಗೆ ಹೋರಾಟ ಮಾಡಿದಳು. •
- 1576ರಲ್ಲಿ ಅಕ್ಟರನ ದಂಡನಾಯಕ ಮಾನಸಿಂಗ ಮತ್ತು ಮೇವಾರದ ಅರಸ ರಾಣಾ ಪ್ರತಾಪಸಿಂಹನ ಮಧ್ಯೆ ಹಲ್ಲಿಘಾಟ ಕದನ ನಡೆಯಿತು, ರಾಣಾ ಪ್ರತಾಪಸಿಂಹನ ಸೋತನು.
⏩ಅಕ್ಷರನ ಧಾರ್ಮಿಕ ನೀತಿ
- ಕ್ರಿ.ಶ. 1562 ರಲ್ಲಿ ಅಕ್ಷರ ಗುಲಾಮಗಿರಿಯನ್ನು ನಿಲ್ಲಿಸಿದನು.
- ಕ್ರಿ.ಶ.-1563 ರಲ್ಲಿ ತೀರ್ಥಯಾತ್ರೆ ಕಂದಾಯ ರದ್ದು ಮಾಡಿದನು.
- ಕ್ರಿ.ಶ.-1564 ರಲ್ಲಿ ಜಿಜಿಯಾ ಕಂದಾಯ ಪದ್ಧತಿಯನ್ನು ರದ್ದು ಮಾಡಿದನು
- ಕ್ರಿ.ಶ. 1575 ರಲ್ಲಿ ಫತ್ತೇಪುರ ಸಿಕ್ಕಿಯಲ್ಲಿ ‘ಇಬಾದತ್ ಖಾನ್’ ಎಂಬ ಪ್ರಾರ್ಥನಾ ಮಂದಿರ ನಿರ್ಮಿಸಿದನು.
- ಕ್ರಿ.ಶ.-1579 ರಲ್ಲಿ ಅನುಲಂಘನೀಯ ಶಾಸನವನ್ನು ಜಾರಿಗೆ ತಂದ.
- ಕ್ರಿ.ಶ. 1582 ರಲ್ಲಿ ಹೊಸಪಂಥ ದೀನ್ – ಇಲಾಹಿ ಆರಂಭಿ ಸಿದನು. ಈ ಪಂಥಕ್ಕೆ ಸೇರಿದ ಏಕೈಕ ಹಿಂದೂ- ಬಿರಬಲ್ಲ.
- ಅಕ್ಟರನ ಆಹ್ವಾನದ ಪ್ರಸಿದ್ಧ ಸಂಗೀತಗಾರ-ತಾನಸೇನ. ತಾನಸೇನನ ಮೂಲ ಹೆಸರು – ರಾಮಲು ಪಾಂಡೆ.
- ಕ್ರಿ.ಶ. 1605 ರಲ್ಲಿ ಅಕ್ವರ ಮರಣ ಹೊಂದಿದನು. ಈತನ ಸಮಾಧಿ – ದೆಹಲಿಯಲ್ಲಿದೆ.
23) ಜಹಾಂಗೀರ (ಕ್ರಿ.ಶ.-1605-1627):
- ಜಹಾಂಗೀರ ಆಗಸ್ಟ್ 30, 1569 ರಲ್ಲಿ ಜನಿಸಿದನು.
- ಸೂಫಿ ಧರ್ಮ ಗುರು ಶೇಖ್ ಸಲೀಂ ಚಿಸ್ತಿಯ ಅನುಗ್ರಹ ದಿಂದ ಹುಟ್ಟಿದ ಮಗುವಿಗೆ ಹೆಸರಿಡಲಾಯಿತು. ಮೊಹ್ಮದ ಸಲೀಂ ಎಂದ
- ಈತನು ಕ್ರಿ.ಶ. 1605 ರಲ್ಲಿ ತಂದೆಯ ಮರಣಾನಂತರ ಅಧಿಕಾರಕ್ಕೆ ಬಂದನು.
- ಈತ ತಂದೆಯಂತೆ ಉದಾರ ವಾದಿ ಎನಿಸಿಕೊಳ್ಳಲು ಯುಮುನಾ ನದಿಯ ದಂಡೆಯ ಮೇಲೆ ನ್ಯಾಯದ ಗಂಟೆಯನ್ನು ನಿರ್ಮಿಸಿದನು.
- ಕ್ರಿ.ಶ.-1606 ರಲ್ಲಿ ಮಗ ಖುಸ್ರು ದಂಗೆ ಎದ್ದ ಕಾರಣ ಆತನನ್ನು ಬಂಧಿಸಿ ಕಣ್ಣುಗಳನ್ನು ಕೀಳಿಸಿ, ಕೊಲೆ ಮಾಡಿಸಿದನು.
- ಕ್ರಿ.ಶ. 1608-09 ರಲ್ಲಿ ಬ್ರಿಟಿಷ್ ರಾಯಭಾರಿಯಾಗಿ ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದನು.
- ಕ್ರಿ.ಶ.- 1615 ರಲ್ಲಿ ಸರ್.ಥಾಮಸ್ ರೋ ಬ್ರಿಟಿಷ್ ರಾಯಭಾರಿ ಯಾಗಿ ಜಹಾಂಗೀರನಿಂದ ವಸಹಾತು ಸ್ಥಾಪಿಸಲು ಅನುಮತಿ ಪಡೆದನು.
- ಕ್ರಿ.ಶ. 1615ರಲ್ಲಿ ಜಹಾಂಗೀರ ಮೇವಾರದ ಅರಸ ಅಮರ ಸಿಂಹನನ್ನು ಸೋಲಿಸಿದನು.
- ಈತನು ಕ್ರಿ.ಶ.1611ರಲ್ಲಿ ನವರೋಜ ಉತ್ಸವದಲ್ಲಿ ನೂರ್‌ಜಹಾನ್ ಗಳನ್ನು ಕಂಡು ಆಕೆಯ ರೂಪಲಾವಣ್ಯಕ್ಕೆ ಬೆರಗಾಗಿ ಅವಳನ್ನು ವಿವಾಹವಾದನು. ಇವಳ ಮೊದಲ ಹೆಸರು – ಮೆಹರುನ್ನಿಸಾ.
- ನೂರಜಹಾನ್ ಜಹಾಂಗೀರ್ ಪ್ರೀತಿಯಿಂದ ‘ನೂರಮಹಲ್’ (ಅರಮನೆಯ ಜ್ಯೋತಿ) ನಂತರ ನೂರಜಹಾನ್ (ವಿಶ್ವಜ್ಯೋತಿ) ಎಂದು ಕರೆದರು.
- ಕ್ರಿ.ಶ. 1613ರಲ್ಲಿ ನೂರಜಹಾನ್‌ಗಳಿಗೆ ‘ಬಾದಶಹ ಬೇಗಂ’ ಎಂಬ ಬಿರುದನ್ನು ನೀಡಿದನು.
- ಕ್ರಿ.ಶ.1611-22ರ ವರೆಗೆ ಆಡಳಿತದಲ್ಲಿ ನೂರಜಜಹಾನಳ ಪ್ರಭಾವ ಭಾರಿ ಪ್ರಮಾಣದಲ್ಲಿತ್ತು.
- ಜಹಾಂಗೀರ ಕ್ರಿ.ಶ. 1606 ಸಿಖ್ ಧರ್ಮಗುರು ಗುರು ಅರ್ಜುನ ದೇವನನ್ನು ಹತ್ಯೆಗೈದನು.
- ಜಹಾಂಗೀರ ವರ್ಣ ಚಿತ್ರಕಲೆಗೆ ಅಪಾರವಾದ ಪ್ರೋತ್ಸಾವನ್ನು ನೀಡಿದ್ದನು. ಹೀಗಾಗಿ ಈತನನ್ನು ವರ್ಣಚಿತ್ರಕಲೆಯ ಸುವರ್ಣ ಯುಗದ ನಿರ್ಮಾಪಕ ಎಂದು ಕರೆಯಲಾಗುತ್ತದೆ.
- ಜಹಾಂಗೀರನ ಗುರು – ಖಾನ್ ಅಬ್ದುಲ್ ರಹೀಮ್ ಖಾನಾ
- ಜಹಾಂಗೀರ ಪರ್ಷಿಯನ್ ಭಾಷೆಯನ್ನು ಪರಿಣಿತಿಯನ್ನು ಹೊಂದಿದ್ದನು. ಈತ ಪರ್ಷಿಯನ್ ಭಾಷೆಯನಲ್ಲಿ ತನ್ನ ಆತ್ಮ ಚರಿತ್ರೆ- ತುಜಕ್-ಇ-ಜಹಾಂಗೀರ್(ಜಹಾಂಗೀರ್ ನಾಮಾ) ಎಂಬ ಕೃತಿಯನ್ನು ರಚಿಸಿದನು.
- ಜಹಾಂಗೀರ್ ಕಾಶ್ಮೀರದಲ್ಲಿ ‘ಶಾಲೀಮರ್’ ಉದ್ಯಾನವನ್ನು ನಿರ್ಮಿಸಿದನು
- ಜಹಾಂಗೀರ ಕ್ರಿ.ಶ. 1627 ರಲ್ಲಿ ಅನಾರೋಗ್ಯದ ಕಾರಣದಿಂದ ಮರಣ ಹೊಂದಿದನು.
- ಈತನ ಸಮಾಧಿ ಲಾಹೋರದ ಸಮೀಪ ಶಾದರ್‌ನಲ್ಲಿದೆ.
24) ಷಾಹಜಹಾನ್ (ಕ್ರಿ.ಶ..-1628-58)
- ಷಾಹಜಹಾನ್ ಜಹಾಂಗೀರನ ಮೂರನೇ ಮಗನಾಗಿ ಜನವರಿ 5,1592 ರಲ್ಲಿ ಲಾಹೋರನಲ್ಲಿ ಜನಿಸಿದನು.
- ಈತನ ಮೂಲ ಹೆಸರು –
- ಈತನು ಕ್ರಿ.ಶ. 1628 ರಲ್ಲಿ ಆಗ್ರಾ ದಲ್ಲಿ ತನ್ನನ್ನು ಮೊಘಲ್ ಬಾದಾಶಹಾ ಎಂದು ಘೋಷಿಸಿ ಕೊಂಡನು.
- ಷಾಹಜಹಾನ್ ತನ್ನ ಮಾವನಾದ ಅಸಫಖಾನನ್ನು ವಜೀರ ಹುದ್ದೆಗೆ ನೇಮಕ ಮಾಡಿದನು.
- ನೂರಜಹಾನ್‌ಳಿಗೆ ವಾರ್ಷಿಕ ವೇತನವನ್ನಾಗಿ 2ಲಕ್ಷ ರೂ.ಗಳನ್ನು ಘೋಷಿಸಿದನು.
- ಕ್ರಿ.ಶ-1628-29ಬುಂದೇಲಖಂಡದ ಜುಜ್‌ಹರ್‌ಸಿಂಗ್‌ನ ದಂಗೆಯನ್ನು ಅಡಗಿಸಿದನು.
- ಕ್ರಿ.ಶ 1631 ರಲ್ಲಿ ಖಾನ್ ಜಹಾನ್‌ಲೋದಿಯ ದಂಗೆಯನ್ನು ಅಡಗಿಸಿದನು.
- ಕ್ರಿ.ಶ. 1632 ರಲ್ಲಿ ಗುಜರಾತದ ಡೆಕ್ಕನ್ ಭಾಗದಲ್ಲಿ ಭೀಕರ ಬರಗಾಲವಿದ್ದ ಕಾರಣ ಪರಿಹಾರವನ್ನು ಒದಗಿಸಿದನು.
- ಕ್ರಿ.ಶ.1638-39 ರಲ್ಲಿ ಪರ್ಷಿಯಾದ ಅಲಿವರ್ಧಭಾನ್‌ನಿಂದ ಕಂದಹಾರವನ್ನು ವಶಪಡಿಸಿಕೊಂಡನು ಹಾಗೂ ಆತನನ್ನು ಕೆಲ ಕಾಲ ಕಾಶ್ಮೀರದ ಗವರ್ನರನ್ನಾಗಿ ನೇಮಕ ಮಾಡಿದನು.
- ಕ್ರಿ.ಶ. 1646 ರಲ್ಲಿ ಷಾಹಜಹಾನ್ ಮಗನಾದ ಮುದ್ರಾ ಭಕ್ಷನ ನಾಯಕತ್ವದಲ್ಲಿ ಮಧ್ಯ ಏಷ್ಯಾದ ಬಲ್ಲ ಎಂಬ ಪ್ರದೇಶವನ್ನು ವಶಪಡಿಸಿಕೊಂಡನು.
- ಕ್ರಿ.ಶ. 1649 ಈತ ಕಂದಹಾರವನ್ನು ಕಳೆದುಕೊಂಡನು. ಇದನ್ನು ಪಡೆಯುವುದಕ್ಕಾಗಿ 1649-52-53 ರಲ್ಲಿ 3 ಬಾರಿ ಪ್ರಯತ್ನ ಮಾಡಿ 12 ಕೋಟಿ ರೂ. ನಷ್ಟವನ್ನು ಅನುಭವಿಸಿದನು.
- ಈತನ ಕಾಲದಲ್ಲಿ ದೆಹಲಿಯಲ್ಲಿ ಒಂದು ಭಾಗಕ್ಕೆ ಷಾಹಜಹಾನ್ ಬಾದ್ ಎಂದು ಕರೆಯುತ್ತಿದ್ದರು.
- ಷಾಹಜಹಾನ್ ದೆಹಲಿಯಲ್ಲಿ ಕೆಂಪುಕೋಟೆ, ದಿವಾನ್-ಇ ಆಮ್, ದಿವಾನ್-ಇ-ಖಾಸ್, ರಂಗಿನ ಮಹಲ್, ಮೊತಿ ಮಹಲ್, ಹೀರಾ ಮಹಲ್’ ಎಂಬ ಕಟ್ಟಡಗಳನ್ನು ನಿರ್ಮಿಸಿದನು.
- ಷಾಹಜಹಾನ್ ದೆಹಲಿಯಲ್ಲಿ ಭಾರತ ದೇಶದ ಅತೀ ದೊಡ್ಡ ಮಸೀದಿಯನ್ನು ‘ಜಾಮೀ ಮಸೀದಿ’ ಯನ್ನು ಕಟ್ಟಿಸಿದನು.
- ಅಂದಿನ ಕಾಲದಲ್ಲಿ 7 ವರ್ಷಗಳ ಕಾಲ ಸುಂದರ ಕೆತ್ತನೆಯನ್ನು ಒಳಗೊಂಡ ವಜ್ರರತ್ನ ಖಚಿತ ಮಯೂರ ಸಿಂಹಾಸನವನ್ನು ಈತನ ಕೊಡೆಯಾಗಿತ್ತು.
- ಷಾಹಜಹಾನ್‌ನ ಕಾಲವನ್ನು ‘ಮೊಘಲರ ಸುವರ್ಣ ಯುಗ’ ಎಂದು ಕರೆಯಲಾಗಿದೆ.
- ಷಾಹಜಹಾನ್‌ನ್ನು ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ‘ಸೌಧಗಳ ನಿರ್ಮಾಪಕ ರಾಜ’ ಎಂದು ಕರೆಯುತ್ತಾರೆ.
- ಷಹಜಾನ್ ತನ್ನ ಪ್ರೀತಿಯ ಮಡದಿ ಮುಮತಾಜ್ ಮಹಲ್ ನೆನಪಿಗಾಗಿ ಯುಮುನಾ ನದಿಯ ದಂಡೆಯ ಮೇಲೆ ಅಮೃತ ಅಲೆಗಳಿಂದ ನಿರ್ಮ ಮಾಡಿದನು, ಇದರ ಶಿಲ್ಪಿ. ಉಸ್ತಾದ ಅಹಮದ್ ಲಹರಿ,
- ಮುಮತಾಜಳ ಹೆಸರು-ಅಜೂಮನ್ ಬಾನು. ಇವಳನ್ನು ಪ್ರೀತಿಯಿಂದ ‘ಮುಮತಾಜ್ ಮಹಲ್’ ಎಂದು ಕರೆದರು.
- ಈತನು ಲಾಹೋರದಲ್ಲಿ ‘ಶಾಲೀಮರ್‌ತೋಟ’ ವನ್ನು ನಿರ್ಮಿಸಿದನು.
- ಶಹಜಹಾನ್ ಕ್ರಿ.ಶ. 1666 ರಲ್ಲಿ ಜನವರಿ 31 ಎಂದು ಮರಣ ಹೊಂದಿದನು. ಈತನ ಸಮಾಧಿ ಆಗ್ರಾದಲ್ಲಿದೆ.
25) ಔರಂಗಜೇಬ (ಕ್ರಿ.ಶ.-1658-1707)
- ಔರಂಗಜೇಬ ತಂದೆಯ ಆಡಳಿಸುವಧಿಯಲ್ಲಿ ದಖ್ಖನಿನ ಮುಖ್ಯಸ್ಥನಾಗಿದ್ದನು. ಕ್ರಿ.ಶ. 1658 ರಲ್ಲಿ ತಂದೆಯನ್ನು ಕಾರಾಗೃಹಕ್ಕೆ ತಳ್ಳಿ ಅಧಿಕಾರಕ್ಕೆ ಬಂದನು.
- 1658-59 ರಲ್ಲಿ ಸಮೂಹರ ಘರ ಕದನದಲ್ಲಿ ಸಹೋದರ ದಾರಾಶೇಕೊನನ್ನು ಹತ್ಯೆಗೈದನು.
- ಔರಂಗಜೇಬನ ಬಿರುದು – ಅಲಂಗೀರ್
- ಕ್ರಿ.ಶ 1662 ರಲ್ಲಿ ಆಸ್ಸಾಂದ ಆಹೋಮರನನ್ನು ಸೋಲಿಸಿದನು.
- ಕ್ರಿ.ಶ. 1669 ರಿಂದ ಕ್ರಿ.ಶ. 1672 ರ ವರೆಗಿನ ಅವಧಿಯಲ್ಲಿ ಮಥುರಾದ ರೈತ ಸಮುದಾಯ ಪಂಜಾಬದ
ಸಿಖ್ಖರು ಹಾಗೂ ಜಾಟರ ದಂಗೆಗಳನ್ನು ಅಡಗಿಸಿದನು. - ಕ್ರಿ.ಶ. 1676ರಲ್ಲಿ ಬಿಜಾಪುರದ ಆದಿಲಶಾಹಿ ಆಡಳಿತ ಕೊನೆಗಾಣಿಸಿದನು.
- ಕ್ರಿ.ಶ.1687 ರಲ್ಲಿ ಗೋಲ್ಕಂಡ ವಶಪಡಿಸಿಕೊಂಡನು.
- ಔರಂಗಜೇಬ್‌ನು ಹಿಂದೂ ವಿರೋಧ ನೀತಿಯನ್ನು ಅನುಸರಿಸಿದ್ದನು. ಹಿಂದೂ ದೇವಾಲಯಗಳನ್ನು ನಾಶ ಮಾಡಿದನು.
- ಹಿಂದೂ ಪದ್ಧತಿಯಂತೆ ನಮಸ್ಕಾರ ಮಾಡುವುದು, ತುಲಾಭಾರ ವ್ಯವಸ್ಥೆಯನ್ನು ರದ್ದು ಮಾಡಿದನು.
- ಕ್ರಿ.ಶ.1668ರಲ್ಲಿ ಹೊಳಿ, ದೀಪಾವಳಿ ಹಬ್ಬಗಳನ್ನು ನಿಷೇಧಿಸಿದನು.
- ಕ್ರಿ.ಶ.1675 ರಲ್ಲಿ ಸಿಖ್‌ರ 9ನೇ ಗುರು ತೇಜ್‌ಬಹದ್ದೂರನನ್ನು ಹತ್ಯೆಗೈದನು.
- ಈತನು ನವರೋಜಿ ಉತ್ಸವ ಆಚರಿಸುವುದನ್ನು ರದುಪಡಿಸಿದನು.
- ಕ್ರಿಶ. 1679ರಲ್ಲಿ ಹಿಂದೂಗಳ ಮೇಲೆ ವಿಧಿಸುವ ಜೆಜಿಯಾ ಕಂದಾಯ ಪದ್ಧರಿಯನ್ನು ಪುನಃ ಜಾರಿಗೆ ತಂದನು.
- ಈತನು ಜರೋಖ್ ದರ್ಶನ ರದ್ದು ಪಡಿಸಿದನು.
- ಔರಂಗಜೇಬನಿಗೆ ‘ಜಿಂದಾಪೀರ’ (ಸಜೀವ ಸಂತ) ಎಂಬ ಬಿರುದು ಹೊಂದಿದ್ದನು.
- ಕ್ರಿ.ಶ. 1707 ರಲ್ಲಿ ಔರಂಗಜೇಬ ಮರಣ ಹೊಂದಿದನು.
- ಈತನ ಸಮಾಧಿ ದೌಲತಾಬಾದ್‌ನಲ್ಲಿದೆ.