ITI College Guest Lecturer in Koppal

ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ನಲ್ಲಿ ತರಬೇತಿ ನೀಡಲು ಅತಿಥಿ ಬೋಧಕರ ಅವಶ್ಯಕತೆ ಇದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನಕಗಿರಿ ಐಟಿಐನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ಟ್ರೇಡ್‌ಗಳಿಗೆ 2023-24ನೇ ಸಾಲಿನಲ್ಲಿ ತರಬೇತಿ ನೀಡಲು ಅತಿಥಿ ಬೋಧಕರ ಅವಶ್ಯಕತೆ ಇದೆ. ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಲೆಕ್ಟ್ರಿಷಿಯನ್ 1 ಹುದ್ದೆಗೆ ಐಟಿಐ ಅಥವಾ ಎಟಿಎಸ್ ಅಥವಾ ಡಿಇಇ ಅಥವಾ ಬಿಇ ಎಲೆಕ್ಟ್ರಿಕಲ್ ವಿದ್ಯಾರ್ಹತೆ ಹೊಂದಿರಬೇಕು. ಇರಬೇಕು. ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು.
ಫಿಟ್ಟರ್ 2 ಹುದ್ದೆಗಳಿಗೆ ಐಟಿಐ ಅಥವಾ ಎಟಿಎಸ್ ಅಥವಾ ಡಿಎಂಇ ಅಥವಾ ಬಿಇ (ಮೆಕ್ಯಾನಿಕ್) ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು. ಆಸಕ್ತರು ಅರ್ಜಿಗಳನ್ನು ಜುಲೈ 28ರ ಸಂಜೆ 5 ಗಂಟೆಯೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.
ಆಸಕ್ತರು, ಅರ್ಹರು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 9448259832.