Job in Chitradurga

ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ; 68 ಹುದ್ದೆ
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಚಿತ್ರದುರ್ಗ ವಿವಿಧ ವೃಂದದ 68 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಅಕ್ಟೋಬರ್ 16ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಸಹಾಯಕ ವ್ಯವಸ್ಥಾಪಕರು 6 ಹುದ್ದೆ, ಪ್ರಥಮ ದರ್ಜೆ ಗುಮಾಸ್ತರು 9, ದ್ವಿತೀಯ ದರ್ಜೆ ಗುಮಾಸ್ತರು 35, ಕಂಪ್ಯೂಟರ್ ಇಂಜಿನಿಯರ್ 2, ವಾಹನ ಚಾಲಕರು 2, ಅಟೆಂಡರ್ಸ್/ ಸಹಾಯಕರು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ವೇತನ; ಸಹಾಯಕ ವ್ಯವಸ್ಥಾಪಕ ಹುದ್ದೆಗೆ 40,900-78,200 ರೂ., ಪ್ರಥಮ ದರ್ಜೆ ಗುಮಾಸ್ತ 37,900-70,850 ರೂ., ದ್ವಿತೀಯ ದರ್ಜೆ ಗುಮಾಸ್ತ 30,350-58,250 ರೂ., ಕಂಪ್ಯೂಟರ್ ಇಂಜಿನಿಯರ್ 30,350-58,250 ರೂ., ವಾಹನ ಚಾಲಕರು 27,650-52,650 ರೂ. ಮತ್ತು ಅಟೆಂಡರ್ಸ್/ ಸಹಾಯಕರು ಹುದ್ದೆಗೆ 23,500-47,650 ರೂ. ವೇತನ ನಿಗದಿ ಮಾಡಲಾಗಿದೆ.
ನೇಮಕಾತಿ ಆದೇಶ, ಅಧಿಸೂಚನೆ ವಿವರಕ್ಕಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿ
https://www.chitradurgadccbank.com/