Job in Kalaburagi Gram Panchayat

ಲೈಬ್ರರಿ ಸೂಪರ್‌ವೈಸರ್ ಹುದ್ದೆ ಖಾಲಿ ಇವೆ, ವೇತನ, ವಿವರ ತಿಳಿಯಿರಿ
ಕಲಬುರಗಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ಹುದ್ದೆಗಳ ಖಾಲಿ ಇದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರಿ ಹುದ್ದೆ ಬಯಸುವವರು ಶೀಘ್ರವೇ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಕಲಬುರಗಿ ಗ್ರಾಮ ಪಂಚಾಯತಿ ಒಟ್ಟು 45 ಲೈಬ್ರರಿ ಸೂಪರ್‌ವೈಸರ್ (ಗ್ರಂಥಾಲಯ ಮೇಲ್ವಿಚಾರಕರು) ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಪಂಚಾಯಿತಿಯು ಸೆಪ್ಟೆಂಬರ್ 2023ರಲ್ಲಿ ಹೊರಡಿಸಿರುವ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 13ರೊಳಗೆ ಆಪ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ.
ಅಜಿ ಸಲ್ಲಿಕೆ ವಿಧಾನ ಅಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಜೊತೆಗೆ ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಅಕ್ಟೋಬರ್ 13ರೊಳಗೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಲಬುರಗಿ, ಕರ್ನಾಟಕ ಇಲ್ಲಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://kalaburagi.nic.in/ ಜಾಲತಾಣಕ್ಕೆ ಭೇಟಿ ನೀಡುವಂತೆ ತಿಳಿಸಿದೆ.
ಅರ್ಜಿ ಶುಲ್ಕದ ಮಾಹಿತಿ ಎಲ್ಲ ಅಭ್ಯರ್ಥಿಗಳಿಗೆ ಸಮಾನವಾಗಿ ಅರ್ಜಿ ಶುಲ್ಕವನ್ಉ ರೂ.40 ನಿಗದಿ ಮಾಡಲಾಗಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಮೆರಿಟ್ ಆಧಾರದಲ್ಲಿ ಮಾಡಲಾಗುವುದು ಎಂದು ಗ್ರಾಮಪಂಚಾಯತಿ ತಿಳಿಸಿದೆ.