Kannada Grammar Question & Answer – 02.

1. ಜಗಜ್ಯೋತಿ, ಜಗಜ್ಜನನಿ, ಬ್ರಹಚ್ಚಕ್ರ, ಮನಶ್ಚಾಪಲ್ಯ ಇವು ಯಾವ ಸಂಧಿಗೆ ಉದಾಹರಣೆಗಳು?
- ಆದೇಶ ಸಂಧಿ
- ಸವರ್ಣದೀರ್ಘ
- ಶ್ಚುತ್ವ ಸಂಧಿ
- ಅನುನಾಸಿಕ ಸಂಧಿ
2. ಸೂರ್ಯಗ್ರಹಣ, ಋಣಮುಕ್ತ, ಧನರಕ್ಷಣೆ, ಜ್ಞಾನವೃದ್ಧ ಇವು ಯಾವ ಸಮಾಸಕ್ಕೆ ಉದಾಹರಣೆಗಳು… ?
- ಕರ್ಮಧಾರೆಯ
- ತತ್ಪುರುಷ
- ಗಮಕ
- ದ್ವಿಗು
3. ಗೃಹಪ್ರವೇಶ, ಹಗಲುಗನಸು & ಹಳೆಗನ್ನಡ, ತಂಬೆಲರು ಇವು ಯಾವ ಸಮಾಸಕ್ಕೆ ಉದಾಹರಣೆಗಳು?
- ತತ್ಪುರುಷ ಮತ್ತು ಗಮಕ
- ಕರ್ಮಧಾರೆಯ ಮತ್ತು ಅಂಶಿ
- ತತ್ಪುರುಷ ಮತ್ತು ಕರ್ಮದಾರಯ
- ಬಹುವ್ರೀಹಿ ಮತ್ತು ತತ್ಪುರುಷ
4. ಪೂರ್ವಪದ ಸರ್ವನಾಮ, ಕೃದಂತ ಇವುಗಳಲ್ಲಿ ಒಂದಾಗಿದ್ದು ಉತ್ತರ ಪದ ನಾಮಪದದೊಂದಿಗೆ ಸೇರಿ ಆಗುವ ಸಮಾಸ ಯಾವುದು?
- ಬಹುವ್ರೀಹಿ
- ತತ್ಪುರುಷ
- ಗಮಕ
- ದ್ವಿಗು
5. ಬೆಂದಡಿಗೆ, ಸಿಡಿಮದ್ದು & ಕೈ ಕೊಡು, ತಲೆದೂಗು & ಇಬ್ಬಾಗ, ಒಗ್ಗಟ್ಟು ಇವು ಯಾವ ಸಮಾಸಕ್ಕೆ ಉದಾಹರಣೆ…… ?
- ದ್ವಿಗು, ಗಮಕ ಮತ್ತು ಅಂಶಿ
- ಗಮಕ, ದ್ವಂದ್ವ ಮತ್ತು ತತ್ಪುರುಷ
- ಕ್ರಿಯಾ, ಗಮಕ ಮತ್ತು ಕರ್ಮಧಾರೆಯ
- ಗಮಕ, ಕ್ರಿಯಾ ಮತ್ತು ದ್ವಿಗು
6. ಯಾವ ಸಮಾಸವನ್ನು ಕರ್ಮಧಾರಯ ಸಮಾಸದ ಒಂದು ಭಾಗವೆಂದು ಹೇಳುತ್ತಾರೆ.. ?
- ತತ್ಪುರುಷ
- ಗಮಕ
- ದ್ವಿಗು
- ದ್ವಂದ್ವ
7. ಕೆಳಗಿನ ವಿಭಕ್ತಿ ಪ್ರತ್ಯಯಗಳಲ್ಲಿ ಮತ್ತು ಅವುಗಳ ಕಾರಕ ಗಳಲ್ಲಿ ಯಾವುದು ತಪ್ಪಾಗಿದೆ ?
- ಪ್ರಥಮ – ಕರ್ತೃ
- ದ್ವಿತೀಯ – ಕರ್ಮ
- ಪಂಚಮಿ – ಅಪಾದಾನ
- ಷಷ್ಠಿ – ಸಂಪ್ರದಾನ
- ತೃತೀಯ – ಕರಣ
- ಸಪ್ತಮಿ – ಅಧಿಕರಣ
8. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ….
- ಕರ್ಮ – ಅಮ್
- ಅಪಾದಾನ – ಅತ್ತಣಿಂ
- ಅಧಿಕರಣ – ಅಲ್ಲಿ, ಒಳ್
- ಸಂಪ್ರದಾನ – ಆ, ಏ, ಇರಾ
- ಕರ್ತೃ – ಮ್, ಉ
9. ಹೆಬ್ಬಂಡೆ, ಕಾರ್ಮೋಡ, ಮೃದುವಾದ ಹೂವು ಇವು ಯಾವ ನಾಮಪದಗಳಿಗೆ ಉದಾಹರಣೆಗಳು?
- ಭಾವವಾಚಕ
- ಗುಣವಾಚಕ
- ಪ್ರಕಾರವಾಚಕ
- ವಸ್ತುವಾಚಕ
10. ಅಷ್ಟು, ಇಷ್ಟು, ಎಷ್ಟು & ಕಪ್ಪು, ಬಿಳುಪು, ಇಂಪು…. ಇವು ಯಾವ ನಾಮವಾಚಕಕ್ಕೆ ಉದಾಹರಣೆಗಳು ?
- ಪ್ರಕಾರವಾಚಕ ಮತ್ತು ಪರಿಮಾಣ ವಾಚಕ
- ಪರಿಮಾಣವಾಚಕ ಮತ್ತು ಸಂಖ್ಯಾವಾಚಕ
- ಪರಿಮಾಣವಾಚಕ ಮತ್ತು ಭಾವವಾಚಕ
- ಭಾವವಾಚಕ ಮತ್ತು ಗುಣವಾಚಕ
11. ಕೆಳಗಿನ ವಾಕ್ಯಗಳನ್ನು ಗಮನಿಸಿ…
(1).ತಾಜ್ ಮಹಲ್ ಕಲ್ಲಿನಲ್ಲಿ ಅರಳಿದ ಪ್ರೇಮಕಾವ್ಯ, ಆ ಕಾವ್ಯ ಆಗ್ರಾದಲ್ಲಿದೆ. (2).ಜಗತ್ಪ್ರಸಿದ್ಧವಾದ ಗುಮ್ಮಟ, ಗೋಳಗುಮ್ಮಟ, ಆ ಗುಮ್ಮಟ ವಿಜಯಪುರದಲ್ಲಿದೆ ?
- ಆತ್ಮಾರ್ಥಕ ಸರ್ವನಾಮ
- ದರ್ಶಕ ಸರ್ವನಾಮ
- ಪ್ರಕಾರವಾಚಕ ಸರ್ವನಾಮ
- ಸಂಖ್ಯೇಯವಾಚಕ ಸರ್ವನಾಮ
12. ಸಂಸ್ಕೃತ ನಾಮಪ್ರಕೃತಿ, ಕನ್ನಡ ನಾಮ ಪ್ರಕೃತಿ ಮತ್ತು ಅನುಕರಣಾವ್ಯಯ ಶಬ್ದಗಳ ಮೇಲೆ “”ಇಸು”” ಪ್ರತ್ಯಯವನ್ನು ಪಡೆಯುದಕ್ಕೆ ಹೀಗೆನ್ನುವರು ?
- ಸಹಜ ಧಾತು
- ಸಾಧಿತ ಧಾತು
- ಪ್ರೇರಣಾರ್ಥಕ ಧಾತು
- ಕ್ರಿಯಾರೂಪಗಳು
13. ಅರ್ಥರೂಪ ಕ್ರಿಯಾಪದದಲ್ಲಿ ಎಷ್ಟು ಪ್ರಕಾರಗಳಿವೆ,,,,?
- 5
- 3
- 4
- 6
14. ಹೋದಾನು, ಹೋದೀತು, ಹೋದೆನು, ಹೋದಿಯೇ… ಇವು ಯಾವುದಕ್ಕೆ ಉದಾಹರಣೆಗಳು.. ?
- ನಿಷೇದಾರ್ಥಕ ಕ್ರಿಯಾಪದ
- ಸಂಭಾವನಾರ್ಥಕ ಕ್ರಿಯಾ ಪದ
- ವಿದ್ಯಾರ್ಥಕ ಕ್ರಿಯಾಪದ
- ಸಾಪೇಕ್ಷ ಕ್ರಿಯಾಪದ
15. ಕೇಶಿರಾಜನು ಯಾವ ವಿಭಕ್ತಿಯ ಕಾರಕವಿಲ್ಲ ಎಂದಿದ್ದಾನೆ… ?
- ಸಪ್ತಮಿ ವಿಭಕ್ತಿ
- ಷಷ್ಠಿ ವಿಭಕ್ತಿ
- ಚತುರ್ಥೀವಿಭಕ್ತಿ
- ಪಂಚಮಿ ವಿಭಕ್ತಿ
16. ಇಗ, ಅಡಿಗ, ವಂತ, ಗಿತ್ತಿ, ಗಾರ…ಇವು ಯಾವುದಕ್ಕೆ ಉದಾಹರಣೆಗಳು?
- ತದ್ದಿತಾಂತ ಭಾವನಾಮ
- ತದ್ಧಿತಾಂತ ನಾಮ
- ಕೃದಂತನಾಮ
- ತದ್ದಿತಾಂತ ಅವ್ಯಯ
17. ಅಂತೆ, ವೊಲ್, ವರೆಗೆ, ಮಟ್ಟಿಗೆ, ಗೋಸ್ಕರ, ತನಕ….. ಇವು ಯಾವುದಕ್ಕೆ ಉದಾಹರಣೆಗಳು?
- ತದ್ದಿತಾಂತನಾಮ
- ತದ್ದಿತಾಂತ ಭಾವನಾಮ
- ತದ್ದಿತಾಂತ ಅವ್ಯಯ
- ಕೃದಂತ ಭಾವನಾಮ
18. ನೋಡಿದ, ಓಡಿದ, ಹೇಳಿದ, ಬಾಳಿದ…. ಇವುಗಳು ?
- ಭೂತ ಕೃದಂತ
- ನಿಷೇಧ ಕೃದಂತ
- ಕೃತಾಂತ ನಾಮ
- ಕೃದಂತ ಭಾವನಾಮ
19. ಸ್ವತಂತ್ರವಾಗಿ ನಿಲ್ಲಬಲ್ಲ ಎರಡು ಅಥವಾ ಎರಡಕ್ಕಿಂತ ಹೆಚ್ಚು ಉಪವಾಕ್ಯಗಳು ಸೇರಿ ಒಂದು ಪೂರ್ಣ ಅಭಿಪ್ರಾಯದ ವಾಕ್ಯವನ್ನು ಹೀಗೆನ್ನುವರುಹೀಗೆ…… ?
- ಸಾಮಾನ್ಯ ವಾಕ್ಯ
- ಸಂಯೋಜಿತ ವಾಕ್ಯ
- ಮಿಶ್ರ ವಾಕ್ಯ
- ಸಾಮಾನ್ಯ ವ್ಯಾಯ
20. ನಮ್ಮ ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಕೆಲವು ಅರ್ಥವಿಲ್ಲದ ಪದಗಳನ್ನು ಬಳಸುತ್ತೇವೆ, ಅಂತಹ ಪದಗಳನ್ನು ಏನೆಂದು ಕರೆಯುವರು?
- ಸಾಮಾನ್ಯ ವ್ಯಯಗಳು
- ಭಾವಸೂಚಕ ಅವ್ಯಯ
- ಅನುಕರಣಾವ್ಯಯ
- ಸಂಬಂಧ ಸೂಚಕ ಅವ್ಯಯ