Kannada Grammar Question & Answer – 1

1. ಎರಡನೇ ನಾಗವರ್ಮನ ಕೃತಿಗಳಲ್ಲಿ ಯಾವುದು ತಪ್ಪಾಗಿದೆ…. ?
- ಕರ್ನಾಟಕ ಭಾಷಾಭೂಷಣ
- ಕಾವ್ಯಾವಲೋಕನ
- ವರ್ಧಮಾನ ಚರಿತೆ
- ಅಭಿಧಾನ ವಸ್ತುಕೋಶ
- ಛಂದೋವಿಚಿತಿ
2. ಕೇಶಿರಾಜನ ಶಬ್ದಮಣಿದರ್ಪಣ ಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ…. ?
- 1868 ರಲ್ಲಿ J. ಗ್ಯಾರೇಟ್ ರವರು ಈ ಕೃತಿಯನ್ನು ಸಂಪಾದನೆ ಮಾಡಿದರು
- ಈ ಕೃತಿಯಲ್ಲಿ 12 ಅಧ್ಯಾಯಗಳಿವೆ
- ಈ ಕೃತಿಯಲ್ಲಿ 342 ಸೂತ್ರಗಳು ಒಳಗೊಂಡಿದೆ
- ಈ ಕೃತಿಯು ಕಂದಪದ್ಯದಲ್ಲಿ ರಚನೆಯಾಗಿದೆ
3. ಅಕ್ಷರಗಳ ಧ್ವನ್ಯಂಗ ಹಿನ್ನೆಲೆಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು… ?
- ದೀರ್ಘ ಸ್ವರಗಳು
- ಪ್ಲುತ ಸ್ವರಗಳು
- ವರ್ಗೀಯ ವ್ಯಂಜನಗಳು
- ಅವರ್ಗೀಯ ವ್ಯಂಜನಗಳು
4. ವರ್ಗಿಯ ವ್ಯಂಜನಗಳ ವಿಧಗಳಲ್ಲಿ ಯಾವುದು ತಪ್ಪು.. ?
- ಅಲ್ಪಪ್ರಾಣ
- ಮಹಾಪ್ರಾಣ
- ಯೋಗವಾಹಕ
- ಅನುನಾಸಿಕ
5. ವರ್ಗದ ದ್ವಿತೀಯ ಮತ್ತು ಚತುರ್ಥ ಸರಣ ಅಕ್ಷರಗಳು…. ?
- ಅಲ್ಪಪ್ರಾಣಗಳು
- ಮಹಾಪ್ರಾಣಗಳು
- ಯೋಗವಾಹಕಗಳು
- ದೀರ್ಘ ಸ್ವರಗಳು
6. ಸ್ವರದೊಂದಿಗೆ ಸಂಬಂಧವನ್ನು ಹೊಂದಿ ಪರಿಪೂರ್ಣಗೊಂಡ ಅಕ್ಷರಗಳು ?
- ಅನುನಾಸಿಕಗಳು
- ವರ್ಗಿಯ ವ್ಯಂಜನಗಳು
- ಯೋಗವಾಹಕಗಳು
- ಸ್ವರಗಳು
7. ಕ್ ಚ್ ಟ್ ತ್ ಪ್ & ಗ್ ಜ್ ಡ್ ದ್ ಬ್ ಈ ಅಕ್ಷರಗಳು….. ?
- ಗುಣ ಸಂಧಿಯ ಕಾರಕಗಳು
- ಜಸ್ತ್ವ ಸಂಧಿ ಕಾರಕಗಳು
- ಶ್ಚುತ್ವಸಂಧಿ ಕಾರಕಗಳ
- ಸವರ್ಣದೀರ್ಘ ಕಾರಕಗಳು
8. ಎರಡು ವರ್ಣಗಳು ಪರಸ್ಪರ ಕಾಲವಿಳಂಬವಿಲ್ಲದೆ ಕೂಡುವುದಕ್ಕೆ _ಎಂದು ಕರೆಯುವರು?
- ಸಮಾಸ
- ಸಂಧಿ
- ಸ್ವರಗಳು
- ಛಂದಸ್ಸು
9. ನಾವೆಲ್ಲರೂ, ಅವನೂರು, ಊರೂರು, ಕವಲೊಡೆದು… ಇವು ಯಾವ ಸಂಧಿಗೆ ಉದಾಹರಣೆ ?
- ಆದೇಶ ಸಂಧಿ
- ಆಗಮ ಸಂಧಿ
- ಲೋಪ ಸಂಧಿ
- ಸವರ್ಣದೀರ್ಘ ಸಂಧಿ
10. ಸ್ವರದ ಮುಂದೆ ಸ್ವರವು ಬಂದು ಸಂಧಿಕಾರ್ಯ ನಡೆದಾಗ ಅರ್ಥಗೇಡುವಂತಿದ್ದರೆ ಅದನ್ನು ಹೀಗೆಂದು ಕರೆಯುವರು… ?
- ಆದೇಶ ಸಂಧಿ
- ಆಗಮ ಸಂಧಿ
- ಸವರ್ಣದೀರ್ಘ
- ಪ್ರಕೃತಿಭಾವ ಸಂಧಿ
11. ಕಾಯಲು, ಗಿರಿಯನ್ನು, ಮನೆಯಲ್ಲಿ, ಬೇಯಿಸು, ಕೈಯನ್ನು, ಪಡುವಣ… ಇವ ಯಾವ ಸಂಧಿಗೆ ಉದಾಹರಣೆ.., ?
- ಲೋಪ ಮತ್ತು ಆಗಮ
- ಆಗಮ ಮತ್ತು ಆದೇಶ
- ಆಗಮ ಸಂಧಿ
- ಆದೇಶ ಸಂಧಿ
12. ಸಿರಿಗನ್ನಡ, ಬೆಟ್ಟದಾವರೆ, ಬೆಂಬತ್ತು, ಕಿರುವೆರಳು, ಮೆಲ್ವಾತು,,,, ಇದು ಯಾವ ಸಂಧಿಗೆ ಉದಾಹರಣೆ?
- ಆದೇಶ ಮತ್ತು ಸುವರ್ಣ
- ಆದೇಶ ಸಂಧಿ
- ಆಗಮ ಮತ್ತು ಆದೇಶ
- ಸವರ್ಣದೀರ್ಘ ಮಾತ್ರ
13. ಉತ್ತರ ಪದದ ಆದಿಯಲ್ಲಿರುವ ಪ್, ಬ್, ಮ್ ವ್ಯಂಜನಾಕ್ಷರಗಳಿಗೆ “ವ್” ಕಾರವು ಆದೇಶವಾಗಿ ಬರುವ ಸಂಧಿ….. ?
- ಸವರ್ಣದೀರ್ಘ ಸಂಧಿ
- ವೃದ್ಧಿ ಸಂಧಿ
- ಆದೇಶ ಸಂಧಿ
- ಆಗಮ ಸಂಧಿ
14. ಸಂಸ್ಕೃತ ಸ್ವರ ಸಂಧಿಗಳಲ್ಲಿ ಯಾವುದು ತಪ್ಪಾಗಿದೆ….
- ಸವರ್ಣದೀರ್ಘ
- ಗುಣ ಸಂಧಿ
- ಜಸ್ತ್ವ ಸಂಧಿ
- ವೃದ್ಧಿ ಸಂಧಿ
- ಯಣ್ ಸಂಧಿ
15. ವಿದ್ಯಾರ್ಥಿ, ದೇವಾಲಯ, ಶಿಕ್ಷಣಾಧಿಕಾರಿ, ರವೀಂದ್ರ, ಗುರೂಪದೇಶ….. ಇವು ಯಾವ ಸಂಧಿಗೆ ಉದಾಹರಣೆಗಳು?
- ಗುಣ ಸಂಧಿ
- ಆದೇಶ ಸಂಧಿ
- ಸವರ್ಣದೀರ್ಘ ಸಂಧಿ
- ಆಗಮ ಸಂಧಿ
16. ಪೂರ್ವಪದದ ಕೊನೆಯಲ್ಲಿರುವ ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಐ ಕಾರವು, ಓ, ಔ ಕಾರಗಳು ಪರವಾದರೆ ಔ ಕಾರವು ಆದೇಶವಾಗಿ ಬರುವ ಸಂಧಿ…… ?
- ಗುಣ ಸಂಧಿ
- ವೃದ್ಧಿ ಸಂಧಿ
- ಜಸ್ತ್ವ ಸಂಧಿ
- ಶ್ಚುತ್ವ ಸಂಧಿ
17. ದೇವೇಂದ್ರ, ಚಂದ್ರೋದಯ, ಬ್ರಹ್ಮರ್ಷಿ, ಮಹರ್ಷಿ ಇವು ಯಾವ ಸಂದಿಗೆ ಉದಾಹರಣೆಗಳು… ?
- ಜಸ್ತ್ವ ಸಂಧಿ
- ಲೋಪ ಸಂಧಿ
- ಗುಣ ಸಂಧಿ
- ವೃದ್ಧಿ ಸಂಧಿ
18. ಮನ್ವಂತರ, ಪಿತ್ರಾರ್ಜಿತ, ವಧ್ವನ್ವೇಷಣೆ ಇವು ಯಾವ ಸಂಧಿಗೆ ಉದಾಹರಣೆಗಳು… ?
- ಸವರ್ಣದೀರ್ಘ
- ಅನುನಾಸಿಕ
- ಯಣ್
- ಆದೇಶ
19. ಪೂರ್ವಪದದ ಕೊನೆಯ ಇ, ಈ ಕಾರಗಳಿಗೆ ಯ್ ಕಾರವು, ಉ, ಊ ಕಾರಗಳಿಗೆ ವ್ ಕಾರವು, ಋ ಕಾರಕ್ಕೆ ರ್ ಕಾರವು ಆದೇಶವಾಗಿ ಬರುವ ಸಂಧಿ… ?
- ಲೋಪ ಸಂಧಿ
- ಜಸ್ತ್ವ ಸಂಧಿ
- ಯಣ್ ಸಂದಿ
- ಗುಣಸಂಧಿ
20. ವಾಗ್ದೇವಿ, ಷಡಾನನ, ಅಜಂತ, ಚಿದಾನಂದ, ಅಬ್ದಿ ಇವು ಯಾವ ಸಂಧಿಗೆ ಉದಾಹರಣೆಗಳು ?
- ಅನುನಾಸಿಕ
- ಸವರ್ಣದೀರ್ಘ
- ಜಸ್ತ್ವ
- ಶ್ಚುತ್ವ