Karnataka River in Kannada(ಕರ್ನಾಟಕದ ನದಿಗಳು) Part-04

ತುಂಗಭದ್ರಾ ನದಿ
ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಆಂಧ್ರ ಪ್ರದೇಶದ ಕರ್ನೂಲು ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು 610 ಕಿ.ಮಿ.ಗಳು. ಇದರಲ್ಲಿ 380 ಕಿ. ಮೀ ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.
ವೇದಾವತಿ (ವರದಾ) ಮತ್ತು ಹಗರಿ ನದಿಗಳು ತುಂಗಭದ್ರಾ ನದಿಯ ಉಪನದಿಗಳಾಗಿವೆ. ವೇದಾವತಿ ನದಿಗೆ 1907 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ವಾಣಿವಿಲಾಸ ಸಾಗರ ಎಂಬ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಕರ್ನಾಟಕದ ಮೊದಲ ಅಣೆಕಟ್ಟಾಗಿದೆ.
ತುಂಗಾ ನದಿ
ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಸುಮಾರು 147 ಕಿ.ಮೀ ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.
ಭದ್ರಾ ನದಿ
ಭದ್ರಾ ನದಿಯು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯಾರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ ಕೂಡ್ಲಿಯಲ್ಲಿ ತುಂಗಾನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆ ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.
ಭೀಮಾ ನದಿ
ಮಹಾರಾಷ್ಟ್ರದ ಪ.ಘಟ್ಟಗಳ ಭೀಮಾಶಂಕರ್ ಎಂಬಲ್ಲಿ ಉದ್ಭವಿಸಿ ಕರ್ನಾಟಕದ ರಾಯಚೂರಿನಲ್ಲಿ ಕೃಷ್ಣಾನದಿಯನ್ನು ಸೇರುತ್ತದೆ.
ಮುಳಾ, ಮುಟಾ, ಘೋಡ, ನೀರಾ, ಮಾನ್ ಮತ್ತು ಸಿನಾಲ್ ಎಂಬುವು ಭೀಮಾನದಿಯ ಉಪನದಿಗಳಾಗಿವೆ.
ಕಾವೇರಿ ನದಿ
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯ ಬಳಿ ಉಗಮಿಸುವ ಈ ನದಿ ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಕುಮಾರ ಪಟ್ಟಣಮ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕಾವೇರಿ ನದಿಯ ಒಟ್ಟು ಉದ್ದ 800 ಕಿ.ಮೀ. ಕರ್ನಾಟಕದಲ್ಲಿ 380 ಕಿ.ಮೀ ಹರಿದು ತಮಿಳುನಾಡಿನಲ್ಲಿ 416 ಕಿ.ಮೀ ಹರಿಯುತ್ತದೆ. ಈ ನದಿಯ ಜಲಾನಯನ ಪ್ರದೇಶದ ವಿಸ್ತೀರ್ಣ 81,155 ಚ.ಕಿ.ಮೀಗಳು.
ಕಾವೇರಿ ನದಿಯ ಜಲಪಾತಗಳು
ಚುಂಚನಕಟ್ಟೆ ಜಲಪಾತ – ಮೈಸೂರು
ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ –ಚಾಮರಾಜನಗರ
ಹೊಗೆನಕಲ್ ಜಲಪಾತ – ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿದೆ.
ಕಾವೇರಿ ನದಿಯ ನದಿದ್ವೀಪಗಳು
ಶ್ರೀರಂಗಪಟ್ಟಣ (ಮಂಡ್ಯ), ಶಿವನ ಸಮುದ್ರ (ಮಂಡ್ಯ), ಶ್ರೀರಂಗಂ (ತಮಿಳುನಾಡು)
ವಿವಿಧ ರಾಜ್ಯಗಳಲ್ಲಿ ಕಾವೇರಿ ನದಿಯ ಜಲಾಯನ ಪ್ರದೇಶ
ತಮಿಳುನಾಡು 43,868 ಚ.ಕಿ.ಮೀ
ಕರ್ನಾಟಕ 34,273 ಚ.ಕಿ.ಮೀ
ಕೇರಳ 2,866 ಚ.ಕಿ.ಮೀ
ಪಾಂಡಿಚೆರಿ 148 ಚ.ಕಿ.ಮೀ
ಕಾವೇರಿಯ ಉಪನದಿಗಳು
ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ, ಲೋಕಪಾವನಿ, ಭವಾನಿ, ಹಾರಂಗಿ, ಅಮರಾವತಿ.
ಕೃಷ್ಣರಾಜಸಾಗರ ಅಣೆಕಟ್ಟನ್ನು ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮದ ಸ್ಥಳದಲ್ಲಿ ಕಟ್ಟಲಾಗಿದೆ.
ಗೋದಾವರಿ
ಗೋದಾವರಿಯನ್ನು ವೃದ್ಧಗಂಗಾ ಎಂದು ಕರೆಯುವರು. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ನ ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಸೇರುತ್ತದೆ. 1465 ಕಿಮೀ ಉದ್ದದ ಇದು ಗಂಗಾನದಿಯ ಭಾರತದ ಎರಡನೇ ದೊಡ್ದ ನದಿ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯಾಗಿದೆ. ಈ ನದಿಯು ಕರ್ಣಾಟಕದಲ್ಲಿ 4,406 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ.
ಗೋದಾವರಿಯ ಉಪನದಿಯಾದ ಮಂಜ್ರಾ ನದಿಯು ಗುಲ್ಬರ್ಗ ಜಿಲ್ಲೆಯಲ್ಲಿ ಹರಿಯುತ್ತದೆ.
ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್) ಮತ್ತು ದಕ್ಷಿಣ ಪಿನಾಕಿನಿ (ದಕ್ಷಿಣ ಪೆನ್ನಾರ್)
ಕೋಲಾರ ಜಿಲ್ಲೆಯ ನಂದಿಬೆಟ್ಟಗಳಲ್ಲಿ ಹುಟ್ಟುವ ಈ ನದಿಗಳ ಒಟ್ಟು ಉದ್ದ 597 ಕಿ.ಮೀ. ಕರ್ನಾಟಕದಲ್ಲಿ ಈ ನದಿಗಳು 61 ಕಿ.ಮೀ ಉದ್ದ ಹರಿಯುತ್ತವೆ. ಮುಂದೆ ಆಂಧ್ರ ಪ್ರದೇಶದಲ್ಲಿ ಸಾಗಿ ಬಂಗಾಳಕೊಲ್ಲಿಯನ್ನು ಸೇರುತ್ತವೆ .
ಜಯಮಂಗಲಿ, ಚಿತ್ರಾವತಿ, ಪಾಪಾಗ್ನಿ, ಕುಂದೇರು, ಸಗಿಲೇರು, ಚೆಯ್ಯೇರು ಇವುಗಳ ಪ್ರಮುಖ ಉಪನದಿಗಳು