Karnataka River in Kannada(ಕರ್ನಾಟಕದ ನದಿಗಳು) Part-05

Feb 18, 2022 12:11 pm By Admin

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು

ಕಾಳೀನದಿ

ಕಾಳಿನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಉಗಮ ಹೊಂದುತ್ತದೆ.  ಈ ನದಿಯ ಜಲಾನಯನ ಪ್ರದೇಶದ ವಿಸ್ತೀರ್ಣ 4.188 ಚ.ಕಿ.ಮೀಗಳು. ನದಿಯ ಉದ್ದ 153 ಕಿ.ಮೀ. 

ಕಾನ್ಹೇರಿ, ವಾಕಿ, ಬಾರ್ಚಿ, ಪಂಡ್ರಿ, ಮಾದ್ರಿ, ತಾತಿಹಾಲ ಇದರ ಪ್ರಮುಖ ಉಪನದಿಗಳು

ಕಾಳಿ ನದಿಗೆ ಸೂಫಾ ಅಣೆಕಟ್ಟನ್ನು ಕಟ್ಟಲಾಗಿದ್ದು ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟಾಗಿದೆ. ಈ ನದಿಗೆ ಸೂಫಾ ಬಳಿ ಜಲವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗಿದೆ.

ಲಾಲಗುಳಿ ಜಲಪಾತವು ಇದರ ಪ್ರಮುಖ ಜಲಪಾತವಾಗಿದೆ.

ಶರಾವತಿ

ಶರಾವತಿ ನದಿಯು ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದಲ್ಲಿ ಉಗಮ ಹೊಂದುತ್ತದೆ. ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 3592 ಚ.ಕ.ಮೀ. ಮತ್ತು ನದಿಯ ಉದ್ದ 122 ಕಿ.ಮೀ

ಶರಾವತಿ ನದಿಯು ಶಿವಮೊಗ್ಗದ ಸಾಗರದ ಬಳಿ ಜೋಗ್ ಜಲಪಾತವನ್ನು ಸೃಷ್ಟಿಸಿದೆ. ಈ ಜೋಗ್ ಜಲಪಾತವು  ರಾಜ, ರಾಣಿ, ರೋರರ್, ರಾಕೆಟ್‍ಗಳಾಗಿ ಧುಮ್ಮಿಕ್ಕುತ್ತದೆ.

ಹರಿದ್ರಾವತಿ ಮತ್ತು ಎಣ್ಣೆಹೊಳೆಗಳು ಇದರ ಉಪನದಿಗಳಾಗಿವೆ.

ಗಂಗಾವಳಿ (ಬೇಡ್ತಿ)

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟುತ್ತದೆ. ಈ ನದಿಯ ಜಲಾನಯನ ಪ್ರದೇಶ 3,574 ಚ.ಕಿ.ಮೀ ಇದೆ. ನದಿಯ ಉದ್ದ 152 ಕಿ.ಮೀ

ನೇತ್ರಾವತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಗಮವಾಗುತ್ತದೆ. ಇದರ ಜಲಾನಯನ ಪ್ರದೇಶ 3222 ಚ.ಕಿ.ಮೀ ನದಿಯ ಉದ್ದ 103 ಕಿ.ಮೀ

ಚಾರ್ಮುಡಿ, ಶಿಶಿಲಾ, ಪಾಲ್ಗುಣಿ, ಗುರುಪುರ, ಕುಮಾರಧಾರಾ ಇವು ನೇತ್ರಾವತಿಯ ಪ್ರಮುಖ ಉಪನದಿಗಳಾಗಿವೆ.

ಮಹದಾಯಿ/ಮಾಂಡವಿ

ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುತ್ತದೆ. ಈ ನದಿಯ ಜಲಾನಯನ ಪ್ರದೇಶ 2,032 ಚ.ಕಿ.ಮೀ. ನದಿಯ ಉದ್ದ 87 ಕಿ.ಮೀ

ಕಳಸಾ ಬಂಡೂರಿ ಯೋಜನೆ ಈ ನದಿಗೆ ಸಂಬಂಧಿಸಿದ್ದಾಗಿದೆ.

ಈ ನದಿಯ ತೀರದಲ್ಲಿ ಗೋವಾದ ರಾಜಧಾನಿ ಪಣಜಿ ಹಾಗೂ ಸಲೀಂ ಅಲಿ ಪಕ್ಷಿಧಾಮವಿದೆ.

ಅಘನಾಶಿನಿ (ತದರಿ)

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಈ ನದಿ 1,330 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. ನದಿಯ ಉದ್ದ 84 ಕಿ.ಮೀ

ಈ ನದಿಯು ಉಂಚಳ್ಳಿ ಜಲಪಾತವನ್ನು ಸೃಷ್ಟಿಸಿದೆ.

ವರಾಹಿ

ವಾರಾಹಿ ನದಿಯ ಜಲಾನಯನ ಪ್ರದೇಶ 759 ಚ.ಕಿ.ಮೀಗಳಿದ್ದು ಈ ನದಿಯು 66 ಕಿ.ಮೀ ಉದ್ದವಿದೆ. ಶಿವಮೊಗ್ಗ ಜಿಲ್ಲೆಯ ಯದೂರಿನಲ್ಲಿ ಈ ನದಿಗೆ ವಿದ್ಯುತ್ ಉತ್ಪಾದನಾ ಅಣೆಕಟ್ಟನ್ನು ಕಟ್ಟಲಾಗಿದೆ.

ಕರ್ನಾಟಕದಲ್ಲಿ ಹರಿಯುವ ನದಿಗಳ ಜಲಾಯನ ಪ್ರದೇಶಗಳು

ಕೃಷ್ಣಾ 113.29 ಲಕ್ಷ ಚ.ಕಿ.ಮೀ 59.48%

ಕಾವೇರಿ 34.27 ಲಕ್ಷ ಚ.ಕಿ.ಮೀ 17.99 %

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು 24.25 ಲಕ್ಷ ಚ.ಕಿ.ಮೀ 12.73%

ಉತ್ತರ ಪಿನಾಕಿನಿ (ಪೆನ್ನಾರ್) 6.94 ಲಕ್ಷ ಚ.ಕಿ.ಮೀ 3.64%

ಗೋದಾವರಿ 4.41 ಲಕ್ಷ ಚ.ಕಿ.ಮೀ 2.31%

ದಕ್ಷಿಣ ಪಿನಾಕಿನಿ (ಪೆನ್ನಾರ್) 4.37 ಲಕ್ಷ ಚ.ಕಿ.ಮೀ 2.29%

ಪಾಲಾರ್ 2.97 ಲಕ್ಷ ಚ.ಕಿ.ಮೀ 1.56%