Karnataka River in Kannada(ಕರ್ನಾಟಕದ ನದಿಗಳು) Part-06

ಕಾವೇರಿ ನದಿ
ದಕ್ಷಿಣ ಗಂಗೆ’ ಯೆಂದು ಪ್ರಸಿದ್ಧಿ ಪಡೆದಿರುವ ಕಾವೇರಿ ಕರ್ನಾಟಕದ ಮಹಾನದಿಯಾಗಿದೆ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನ ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.
ಅರ್ಕಾವತಿ ನದಿ
ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು 45 ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.
ಅರ್ಕಾವತಿ: ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಬಳ್ಳಾಪುರ ಸಮೀಪದ ನಂದಿದುರ್ಗದಲ್ಲಿ
ಹುಟ್ಟಿ ಬೆಂಗಳೂರು ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. 161 ಕಿಮೀ ಉದ್ದವಿದೆ.
ಕಬಿನಿ ನದಿ
ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವನಂತಹ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲಿ ಒಂದು . ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಕಾಳಿ ನದಿ
ಕಾಳಿ ನದಿಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೂಲಕ ನದಿ. ದಿಗ್ಗಿ ನದಿಯಿಂದ ಹುಟ್ಟುವ ಕಾಳಿ ನದಿಯು ಸುಮಾರು 4 ಲಕ್ಷ ಜನರ ಜೀವನಾಡಿಯಾಗಿದೆ. ಹಲವಾರು ಅಣೆಕಟ್ಟುಗಳನ್ನು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಗಣೇಶಗುಡಿ ಬಳಿ ಇರುವ ಸುಪಾ ಅಣೆಕಟ್ಟು ಕಾಳಿ ನದಿಗೆ ಕಟ್ಟಲಾಗಿರುವ ದೊಡ್ಡ ಅಣೆಕಟ್ಟು ಎನ್ನಲಾಗಿದೆ. ಸುಪಾ ಅಣೆಕಟ್ಟಿನಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕುಮದ್ವತಿ
ಕುಮದ್ವತಿ ನದಿಯು ತುಂಗಾಭದ್ರೆಯ ಉಪನದಿಯಾಗಿದೆ . ಇದು ಹೊಸನಗರ ತಾಲೂಕಿನ ಹುಂಚಾದ ಹತ್ತಿರ ಬಿಲೇಶ್ವರ ಬೆಟ್ಟದಲ್ಲಿ ಹುಟ್ಟಿ ಕುಂಸಿ ಮತ್ತು ಶಿಕಾರಿಪುರಗಳ ಮುಲಕ ಉತ್ತರಕ್ಕೆ ಹರಿದು ಹಿರೇಕೇರೂರು ತಾಲ್ಲೂಕನ್ನು ಪ್ರವೇಶಿಸಿ ಹರಿಹರದಿಂದ ಸ್ವಲ್ಪ ಮೇಲೆ ಮುದೇನೂರು ಗ್ರಾಮದ ಹತ್ತಿರ ತುಂಗಾಭದ್ರಾ ನದಿಯನ್ನು ಸೇರುತ್ತದೆ.
ಇದಕ್ಕೆ ಚೊರಾಡಿ ನದಿ ಎಂಬ ಹೆಸರೂ ಇದೆ. ಈ ನದಿಯ ಉದ್ದ ಸುಮಾರು 96 ಕಿಲೋಮೀಟರ್ಗಳು.ಈ ನದಿಯ ಮಾಸೂ ಮಡಗ ಕೆರೆಗೆ ನೀರನ್ನು ಒದಗಿಸುತ್ತದೆ.ಇದಕ್ಕೆ ಅನೇಕ ಕಡೆ ಚಿಕ್ಕ ಪುಟ್ಟ ಅನೆಕಟ್ಟುಗಳನ್ನು ನಿರ್ಮಿಸಿ ನೀರಾವರಿಗಾಗಿ ಬಳಸಲಾಗುತ್ತದೆ.ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ಮಿಕ್ಕ ಕಾಲದಲ್ಲಿ ಸಾಧಾರಣವಾಗಿರುತ್ತದೆ.
ಕುಮಾರಧಾರ ನದಿ
ಕರ್ನಾಟಕದ ಸುಳ್ಯ ತಾಲೂಕಿನ 2 ಪ್ರಮುಖ ನದಿಗಳಲ್ಲಿ ಒಂದಾದ ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಗಮಿಸುತ್ತದೆ. ಇದು ಮುಂದೆ ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಕರ್ನಾಟಕದ ಪ್ರಮುಖ ದೇವಳಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕುಮಾರಧಾರ ನದಿಯ ಸಮೀಪದಲ್ಲಿ ಸ್ಥಿತವಾಗಿದೆ.
ಕೇದಕ ನದಿ
karnataka nadigalu in kannada
ಕೇದಕ ನದಿಯು ಭಾರತದ ನದಿಗಳಲ್ಲೊಂದಾಗಿದೆ ಕರ್ನಾಟಕದ ಕುಂದಾಪುರ ಮತ್ತು ಗಂಗೊಳ್ಳಿ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಮೊದಲು ಇದು ಸೌಪರ್ಣಿಕ, ವರಾಹಿ, ಚಕ್ರ ಮತ್ತು ಕುಬ್ಜ ನದಿಗಳನ್ನು ಸಂಗಮಿಸುತ್ತದೆ.
ಗಂಗವಲ್ಲಿ ನದಿ
ಗಂಗಾವಳ್ಳಿ ನದಿಯನ್ನ ಬೇಡ್ತಿ ನದಿ ಎಂದು ಸಹ ಕರೆಯಲಾಗುತ್ತದೆ .ಇದು ಪಶ್ಚಿಮ ಘಟ್ಟಗಳಿಂದ ಧಾರವಾಡದ ದಕ್ಷಿಣ ಭಾಗದಿಂದ ( ಸೋಮೇಶ್ವರ ದೇವಸ್ಥಾನದ ಸಮೀಪ ) ಹುಟ್ಟಿಕೊಂಡಿದೆ.
ನಂತರ ಅರೇಬಿಯನ್ ಸಮುದ್ರವನ್ನು ಸೇರಲು ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ.ಗಂಗಾ ದೇವಿಯಿಂದ ಗಂಗಾವಲ್ಲಿ ಎಂಬ ಹೆಸರು ಬಂದಿದೆ. ಈ ಪ್ರದೇಶದಲ್ಲಿ ಇರುವ ಗ್ರಾಮವು ಗಂಗವಲ್ಲಿ ಎಂಬ ಹೆಸರನ್ನು ಹೊಂದಿದೆ.