Karnataka River in Kannada(ಕರ್ನಾಟಕದ ನದಿಗಳು) Part-07

Feb 18, 2022 12:17 pm By Admin

ಈ ನದಿಯು 3,574 ಕಿ.ಮಿ 2 (1,380 ಚದರ ಮೈಲಿ) ನಷ್ಟು ಸಂಗ್ರಹಣಾ ಪ್ರದೇಶವನ್ನು ಹೊಂದಿದೆ ಮತ್ತು ಇದು ಒಟ್ಟು 152 ಕಿ.ಮಿ ( 94 ಮೈಲಿ ) ಉದ್ದವನ್ನು ಗಂಗಾವಳ್ಳಿ ಹೊಂದಿದೆ.

ಗುರುಪುರ ನದಿ

ಗುರುಪುರ ನದಿ ಫಾಲ್ಗುಣಿ ನದಿ ಎಂದೂ ಸಹ ಕರೆಯಲಾಗುತ್ತದೆ. ಗುರುಪುರ ನದಿ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಇದು ಮಂಗಳೂರು ನಗರದ ಈಶಾನ್ಯ ಭಾಗದಲ್ಲಿರುವ ಗುರುಪುರ ಎಂಬ ಪಟ್ಟಣದ ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿದು ಹಾದುಹೋಗುವ ಕಾರಣ “ಗುರುಪುರ” ಹೆಸರನ್ನು ಪಡೆಯುತ್ತದೆ. ಈ ಊರು ಬೆಂಗಳೂರಿನಿಂದ ಪಶ್ಚಿಮದ ದಿಕ್ಕಿನಲ್ಲಿ 345 ಕಿಲೋಮೀಟರ್ ದೂರದಲ್ಲಿ ಇದೆ.

ನವ ಮಂಗಳೂರು ಬಂದರ ( ರೇವು ) ಮತ್ತು ಮಂಗಳೂರು ರಸಗೊಬ್ಬರ ಕಾರ್ಖಾನೆಗಳು ಗುರುಪುರ ನದಿಯ ಉತ್ತರ ತೀರದಲ್ಲಿ ಇವೆ. ಒಂದು ಕಾಲದಲ್ಲಿ ನೇತ್ರಾವತಿ ನದಿಯು ಮಂಗಳೂರು ನಗರದ ದಕ್ಷಿಣ ಗಡಿಯಾಗಿ ಮತ್ತು ಈ ಗುರುಪುರ ನದಿಯು ಮಂಗಳೂರು ನಗರದ ಉತ್ತರದ ಗಡಿಯಾಗಿ ಹರಿಯುತ್ತಿದ್ದವು. ಈಗ ಮಂಗಳೂರು ನಗರ ಈ ಎರಡು ನದಿಗಳ ಗಡಿ ದಾಟಿ ಬೆಳೆದಿದೆ.

ಘಟಪ್ರಭಾ

ಈ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ 884 ಮೀಟರ ಎತ್ತರದಲ್ಲಿ ಜನಿಸುತ್ತದೆ. 283 ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ 35 ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು 8829 ಚದುರು ಕಿ.ಮೀ ವಿಸ್ತಾರವಾಗಿದೆ.

ಉಪನದಿಗಳು

ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಆಣೆಕಟ್ಟುಗಳು

ಘಟ ಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ 1897 ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಈ ತಡೆಗೋಡೆಯಿಂದ 71 ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ 4,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ.

ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು 109 ಕಿ.ಮೀ ವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ 659 ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು 1,29,614 ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.

ಚಕ್ರ ನದಿ

karnataka nadigalu in kannada

ಚಕ್ರ ನದಿ ಕರ್ನಾಟಕದ ಕುಂದಾಪುರ ಮತ್ತು ಗಂಗುಲ್ಲಿ ಪ್ರದೇಶಗಳ ಮೂಲಕ ಹರಿದ ಹೋಗುವ ಚಕ್ರ ನದಿಯು ಭಾರತದ ನದಿಗಳಲ್ಲೊಂದು.

ಪಶ್ಚಿಮಾಭಿಮುಖವಾಗಿ ಹರಿಯುವ ಇದು ಮೊದಲು ಸೌಪರ್ಣಿಕ, ವರಾಹಿ ಮತ್ತು ಕುಬ್ಜ ನದಿಗಳನ್ನು ಕೂಡಿ ಅಂತಿಮವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಚಿತ್ರಾವತಿ ನದಿ

ದಕ್ಷಿಣ ಭಾರತದ ಅಂತರ್ರಾಜ್ಯ ನದಿಯಾಗಿದ್ದು ಇದು ಪೆನ್ನಾರ್ ನದಿಯ ಉಪನದಿಯಾಗಿದೆ. ಕರ್ನಾಟಕದಲ್ಲಿ ಹುಟ್ಟಿ , ಅದು ಆಂಧ್ರಪ್ರದೇಶದ ಕಡೆಗೆ ಹರಿಯುತ್ತದೆ ಮತ್ತು ಅದರ ಜಲಾನಯನ ಪ್ರದೇಶ 5,900 km2. ವಿಸ್ತೀರ್ಣವಿದೆ. ಪುಟ್ಟಪರ್ತಿ ಯಾತ್ರಾಸ್ಥಳವು ಈ ನದಿಯ ದಡದಲ್ಲಿದೆ.

ಚುಲ್ಕಿ ನಾಲಾ

ಚುಲ್ಕಿನಾಲಾ ನದಿ ಇದು ಬೀದರ್ ಜಿಲ್ಲೆಯ ಬಸವಕಲ್ಯಾನ್ ತಾಲ್ಲೂಕಿನಲ್ಲಿರುವ ಚೌಕಿವಾಡಿಯಲ್ಲಿ ಪ್ರಾರಂಭವಾಗುತ್ತದೆ.

ಇದು ಬೀದರ್ ಜಿಲ್ಲೆಯಲ್ಲಿ 42 ಕಿ.ಮೀ.ಗೆ ಹರಿಯುತ್ತದೆ ಮತ್ತು ಕರಣಜ ನದಿಗೆ ಸೇರುತ್ತದೆ.ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಮುಸ್ತಪುರ್ ಗ್ರಾಮದ ಹತ್ತಿರ ಒಂದು ಸಂಯೋಜಿತ ಅಣೆಕಟ್ಟು ನಿರ್ಮಾಣವಾಗಿದೆ.

ಅಣೆಕಟ್ಟು 0.93 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. 243.55 ಚದರ ಕಿ.ಮೀ.ಇದು ಬಸವಕಲ್ಯಾಣ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತದೆ.

ತುಂಗಭದ್ರ ನದಿ

ಈ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು.

ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ.

ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ.

ಈ ನದಿಯ ಒಟ್ಟು ಉದ್ದ ಸುಮಾರು 610 ಕಿ.ಮಿ.ಗಳು. ಇದರಲ್ಲಿ 380 ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ದಂಡಾವತಿ ನದಿ

ಈ ನದಿಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಪ್ರವಹಿಸುವ ಸಣ್ಣ ನದಿ.

ದಂಡಾವತಿ ನದಿಯ ಉಗಮವು ಸೊರಬ ತಾಲೂಕಿನ, ಸೊರಬ ಪಟ್ಟಣದಿಂದ ದಕ್ಷಿಣಕ್ಕೆ 15 ಕಿಮೀ ದೂರದಲ್ಲಿರುವ ಕುಪ್ಪೆ ಗ್ರಾಮದ ಹತ್ತಿರವಿರುವ ಕಟ್ಟಿನಕೆರೆಯಾಗಿದೆ,

ಕಟ್ಟಿನಕೆರೆ ಕೋಡಿ ಮತ್ತು ಸುತ್ತಲಿನ ನೀರಿನ ಹರಿವು ಸೇರಿ ದಂಡಾವತಿ ನದಿಯಾಗಿ ಮುಂದೆ ಸಾಗುತ್ತದೆ.

ದಂಡಾವತಿ ನದಿಯು ಉತ್ತರಾಭೀಮುಕವಾಗಿ 55 ಕಿಮೀ ದೂರ ಹರಿದು ಅನವಟ್ಟಿ ಬಳಿಯ ಬಂಕಸಾಣ ಎಂಬ ಸ್ಥಳದಲ್ಲಿ ವರಾದಾ ನದಿಗೆ ಸೇರುತ್ತದೆ.

ಮುಂದೆ ವರದಾ ನದಿಯು ತುಂಗಭದ್ರ ನದಿಗೆ ಸೇರುತ್ತದೆ ನಂತರ ತುಂಗಭದ್ರ ನದಿಯು ಕೃಷ್ಣಾ ನದಿಗೆ ಸೇರಿ ಅಂತಿಮವಾಗಿ ಭಾರತದ ಪೂರ್ವ ಕರಾವಳಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ದಂಡಾವತಿ ನದಿಯು ಒಟ್ಟು 1,18,88 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ

ಸೊರಬದ ಶ್ರೀ ರಂಗನಾಥ ದೇವಸ್ಥಾನವು ದಂಡಾವತಿ ನದಿಯ ಬಲ ದಂಡೆಯ ಮೇಲಿದೆ.

ದಕ್ಷಿಣ ಪಿನಾಕಿನಿ ನದಿ

karnataka nadigalu in kannada

ದಕ್ಷಿಣ ಪಿನಾಕಿನಿ ನದಿ ಕರ್ನಾಟಕ ರಾಜ್ಯದ ನದಿಗಳಲ್ಲಿ ಒಂದಾಗಿದೆ.

ದಕ್ಷಿಣ ಪೆನ್ನಾರ್, ಪೊನ್ನೈಯಾರ್ ಹಾಗೂ ತಮಿಳಿನಲ್ಲಿ ತೆನ್ ಪೆನ್ನೈ ಎಂದೂ ಈ ನದಿಗೆ ಕರೆಯುತ್ತಾರೆ

ಈ ನದಿಯು ಚಿಕ್ಕಬಳ್ಳಾಪುರದ ನಂದಿಬೆಟ್ಟಗಳಲ್ಲಿ ಹುಟ್ಟುತ್ತದೆ.

ಕರ್ನಾಟಕ ಹಾಗೂ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಬಂದು ಸೇರುತ್ತದೆ.

ದೂಧಗಂಗಾ ನದಿ

ಈ ನದಿ ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದಾಗಿದೆ.

ಇದು ಪಶ್ಚಿಮ ಘಟ್ಟದ ಸಿಂಧುದುರ್ಗ ಎಂಬಲ್ಲಿ ಹುಟ್ಟುತ್ತದೆ.

ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಮತ್ತು ಕರ್ನಾಟಕದ ಬೆಳಗಾವಿ ಜಿಲ್ಲೆಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ.

ದೂಧಗಂಗಾ ನದಿಗೆ ಕೊಲ್ಲಾಪುರ ಜಿಲ್ಲೆಯಲ್ಲಿ ಆಣೆಕಟ್ಟು ಕಟ್ಟಿ ಕಾಳಮ್ಮವಾಡಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.

ನಂದಿನಿ ನದಿ

ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ದುಗಾ೯ಪರಮೇಶ್ವರಿ ದೇವಸ್ಥಾನ ಇದೆ

ಈ ದೇವಾಲಯವು ನಂದಿನಿ ಎಂಬ ಪುಟ್ಟ ನದಿಯ ಮದ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ