Karnataka Rivers in Kannada(ಕರ್ನಾಟಕದ ನದಿಗಳು) Part-08

Feb 18, 2022 12:22 pm By Admin

ನೇತ್ರಾವತಿ ನದಿ

ಈ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ.

ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗುತ್ತದೆ

ನೇತ್ರಾವತಿ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಕರ್ನಾಟಕದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ.

ಆದ್ದರಿಂದಲೇ ನೇತ್ರಾವತಿ ನದಿಯನ್ನು ಭಾರತದ ಪವಿತ್ರ ನದಿಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ.

ನೇತ್ರಾವತಿ – ಕರ್ನಾಟಕದ ಕರಾವಳಿಯ ಒಂದು ಮುಖ್ಯ ನದಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ದೊಡ್ಡದು.

ಸ್ಥೂಲವಾಗಿ ಪಶ್ಚಿಮಾಭಿಮುಖವಾಗಿ ಸಾಗಿ, ಒಟ್ಟು ಸುಮಾರು 160 ಕಿಮೀ. ದೂರ ಹರಿದು ಮಂಗಳೂರಿನ ಪಡುಬದಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಪಯಸ್ವಿನಿ ನದಿ

ಪಯಸ್ವಿನಿ ನದಿ ಮಡಿಕೇರಿ ತಾಲೂಕಿನ ಭಾಗಮಂಡಲದ ಪಶ್ಚಿಮ ದಿಕ್ಕಿನಲ್ಲಿ ಉಗಮಗೊಳ್ಳುತ್ತದೆ.

ಇದು ಜೋಡುಪಾಲದ ಮೂಲಕ ಅರಂತೋಡು, ಸುಳ್ಯ, ಪೈಚಾರ್, ಜಾಲ್ಸೂರು, ಪಂಜಿಕಲ್ಲು, ಮದೇವರಗುಂಡ, ಮುರೂರು ಹಾದು ಮುಡೂರಿನಲ್ಲಿ ಕೇರಳವನ್ನು ಸೇರುತ್ತದೆ.

ಪಾಲಾರ್ ನದಿ

ಪಾಲಾರ್ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು.

ಕೋಲಾರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಹುಟ್ಟುತ್ತದೆ.

ಪಾಲಾರ್ ನದಿಯು ಪಶ್ಚಿಮಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ 93 ಕಿ.ಮೀ., ಆಂಧ್ರ ಪ್ರದೇಶದಲ್ಲಿ 33 ಕಿ.ಮೀ. ಹಾಗೂ ತಮಿಳು ನಾಡಿನಲ್ಲಿ 222 ಕಿ.ಮೀ. ದೂರವನ್ನು ಪರಿಕ್ರಮಿಸಿ, ಚೆನ್ನೈಯಿಂದ 100 ಕಿ.ಮೀ ದಕ್ಷಿಣಕ್ಕಿರುವ ವಯಲೂರು ಸಮೀಪದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಪೆನ್ನಾರ್ ನದಿ

ಈ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು.

ಕರ್ನಾಟಕ ದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಗಳಲ್ಲಿ ಉಗಮಿಸುತ್ತದೆ.

ಇದು ಆಂಧ್ರ ಪ್ರದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಕರ್ನಾಟಕದಲ್ಲಿ ಇದನ್ನು ಉತ್ತರ ಪಿನಾಕಿನಿ ಎಂದು ಸಹ ಕರೆಯುತ್ತಾರೆ.

ಮಲಪ್ರಭಾ ನದಿ

ಈ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ 16 ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ 792 ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ.

304 ಕಿಲೊಮೀಟರುಗಳವರೆಗೆ ಕಟಗಿನಹಳ್ಳಿ ಗ್ರಾಮದ ಮುಖಾಂತರ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ 488 ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ.

ಕೂಡಲ ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 11,549 ಚದುರು ಕಿಲೊಮೀಟರುಗಳು.

ಈ ನದಿ ಕರ್ನಾಟಕ ರಾಜ್ಯದ ಪಶ್ಚಿಮದ ಮಲೆನಾಡು ಜಿಲ್ಲೆಗಳಲ್ಲಿ ಹರಿಯುವ ಹೇಮಾವತಿ ನದಿಯ ಪ್ರಮುಖ ಉಪನದಿ.

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ.

ಪಶ್ಚಿಮ ಭಾಗದಿಂದ ಹರಿದುಬರುವ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ಇದರ ಉಪನದಿಗಳು.

ಪ್ರಖ್ಯಾತ ಬೇಲೂರು ಪಟ್ಟಣದ ಬಳಿ ಹಾದು ಹಾಸನ ತಾಲ್ಲೂಕಿನ ಗೊರೂರು ಬಳಿ ಹೇಮಾವತಿ ನದಿಯನ್ನು ಸೇರುತ್ತದೆ.

ಲಕ್ಷ್ಮಣ ತೀರ್ಥ ನದಿ

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉಗಮಿಸುತ್ತದೆ

ಲಕ್ಷ್ಮಣತೀರ್ಥ ನದಿಯು ಭಾರತದ ನದಿಗಳಲ್ಲೊಂದು.

ಲಕ್ಷ್ಮಣ ತೀರ್ಥ ನದಿಯ ಇತಿಹಾಸ

ಈ ನದಿಯು ಪೂರ್ವಾಭಿಮುಖವಾಗಿ ಹರಿದು ಮುಂದೆ ಕೃಷ್ಣರಾಜ ಸಾಗರದ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ.

ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯದಲ್ಲಿ ಹುಟ್ಟುವ ‘ಲಕ್ಷ್ಮಣ ತೀರ್ಥ’ ನದಿಯು ಒಟ್ಟು ಉದ್ದ 180 ಕಿ.ಮೀಗಳು.ಈ ನದಿಯು ಕಾವೇರಿ ನದಿಯನ್ನು ಸೇರುತ್ತದೆ.

ವರದಾ ನದಿ

karnataka nadigalu in kannada

ವರದಾ ನದಿ ಯು ಮಧ್ಯ ಕರ್ನಾಟಕದ ಒಂದು ನದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ವರದಮೂಲದಲ್ಲಿ ಉಗಮಿಸುತ್ತದೆ

ಈ ನದಿಯು ಕರ್ನಾಟಕದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಮುಖಾಂತರ ಹರಿದು ಹೋಗುತ್ತಾ, ಗಲಗನಾಥ ಸಮೀಪದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ.

ವರದಮೂಲ ವನ್ನು ತೀರ್ಥ ಗ್ರಾಮ ಎಂದೂ ಸಹ ಕರೆಯಲಾಗುತ್ತದೆ.

ವಾರಾಹಿ ನದಿ

ವಾರಾಹಿ ನದಿ ಪೂರ್ವ ಕರ್ನಾಟಕದ ನದಿಗಳಲ್ಲೊಂದಾಗಿದೆ

ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕುಂದಾಪುರದ ಬಸ್ರೂರು ಹಾಗೂ ಗಂಗೊಳ್ಳಿ ಪ್ರದೇಶಗಳ ಮೂಲಕ ಹರಿದು ಹೋಗುತ್ತದೆ.

ಮುಂದೆ ಹರಿಯುತ್ತಾ ಸೌಪರ್ಣಿಕಾ , ಕೇದಕ, ಚಕ್ರ ಹಾಗೂ ಕುಬ್ಜ ನದಿಗಳನ್ನು ಸಂಗಮಿಸಿ, ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಯದೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಅಡ್ಡಲಾಗಿ ವಾರಾಹಿ ಅಣೆಕಟ್ಟನ್ನು ಕಟ್ಟಲಾಗಿದೆ.

ಇದಕ್ಕೆ ಮಾಣಿ ಅಣೆಕಟ್ಟು ಎಂತಲೂ ಕರೆಯುತ್ತಾರೆ.

ವೇದಾವತಿ ನದಿ

ವೇದಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಉಗಮಿಸುತ್ತದೆ

ನಂತರ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿದು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟುವ ‘ವೇದಾ’ ನದಿಗೆ ಕಡೂರು ಬಳಿಯ ಮದಗದಕೆರೆಯಿಂದ ಹರಿದು ಬರುವ ‘ಆವತಿ ಹಳ್ಳ’ವು ಸಂಗಮಿಸುವುದರೊಂದಿಗೆ ‘ವೇದಾವತಿ ನದಿ’ಯಾಗಿ ಹರಿದು ಮುಂದೆ ಸಾಗುತ್ತದೆ.

ಹಿರಿಯೂರು ಬಳಿಯ ಮಾರಿಕಣಿವೆ ಎಂಬಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಮೊದಲ ಅಣೆಕಟ್ಟೆಯಾದ ‘ವಾಣಿವಿಲಾಸಸಾಗರ’ವನ್ನು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಅಲ್ಲಿಂದ ಮುಂದೆ ಹರಿದು ಆಂದ್ರಪ್ರದೇಶದ ಬಳಿಯಲ್ಲಿ ‘ಹಗರಿ ನದಿ’ಯಾಗಿ ಹರಿದು ಮುಂದೆ ತುಂಗಭದ್ರಾ ನದಿಯಲ್ಲಿ ವಿಲೀನವಾಗುತ್ತದೆ.

ಅದಕ್ಕೂ ಮೊದಲು ‘ಸುವರ್ಣಮುಖಿ’ ಎಂಬ ನದಿಯೊಂದು ಈ ನದಿಯೊಂದಿಗೆ ಸಂಗಮಿಸುತ್ತದೆ.

ಶರಾವತಿ

ಶರಾವತಿ ನದಿಯು ಕರ್ನಾಟಕದ ಪ್ರಮುಖ ನದಿಗಳಲ್ಲೊಂದು.

ಈ ನದಿಯು ಭಾರತದ ಪಶ್ಮಿಮ ದಿಕ್ಕಿನಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿದೆ.

ಆಣೆಕಟ್ಟು 2.4ಕಿ. ಮೀ. ಉದ್ದವನ್ನು ಹೊಂದಿದೆ.

ಹೊನ್ನಾವರದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವ ಶರಾವತಿ ನದಿಯು ಹರಿಯುವ ಉದ್ದ ಸುಮಾರು 128 ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ.

ಜೋಗದಲ್ಲಿ ಶರಾವತಿ 900 ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ.

ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ.

ಆಣೆಕ‌ಟ್ಟೆಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ.

ದೀರ್ಘಕಾಲದವರೆಗೆ ಕರ್ನಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು.

ನದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅನೇಕ ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ ಮತ್ತು ಅನೇಕ ರೀತಿಯ ಅಪರೂಪದ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.

ಶಾಲ್ಮಲಾ ನದಿ

karnataka nadigalu in kannada

ಈ ನದಿ ಧಾರವಾಡದಲ್ಲಿ ಹುಟ್ಟುವ ಒಂದು ನದಿ.

ಶಾಲ್ಮಲಾ ನದಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಶಾಲ್ಮಲಾ ನದಿಯ ಉಗಮ ಸ್ಥಾನ ಧಾರವಾಡದ ಸೋಮೇಶ್ವರ ಗುಡಿ.

ಇದು ಊರಿನ ಮಧ್ಯಭಾಗದಿಂದ ಕಲಘಟಗಿ ರಸ್ತೆಯ ದಿಕ್ಕಿನಲಿ ಸುಮಾರು 5 ಕಿಮೀ ದೂರ ಸಾಗಿದರೆ ಬರುತ್ತದೆ.

ಇಂದು ಶಾಲ್ಮಲಾ ಉಗಮ ಸ್ಥಾನದಲ್ಲಿ ನೀರಿದ್ದರೂ, ಧಾರವಾಡದಲ್ಲಿ ಗುಪ್ತಗಾಮಿನಿ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹರಿವಿದೆ.

ಶಾಲ್ಮಲಾ ನದಿಯಾ ಉಪನದಿ

ಬೇಡ್ತಿ, ಹುಬ್ಬಳಿ ತಾಲೂಕಿನಲ್ಲಿ ಹುಟ್ಟಿ, ಕಲಘಟಗಿ ಬಳಿ ಶಾಲ್ಮಲಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಅಲ್ಲಿಂದ ಪೂರ್ವಕ್ಕೆ 25 ಕಿಮೀ ಹರಿದು ಉತ್ತರ ಕನ್ನಡ ಜಿಲ್ಲೆಯನ್ನು ಶಾಲ್ಮಲಾ ಎಂಬ ಹೆಸರಿನೊಂದಿಗೆ ಪ್ರವೇಶಿಸುತ್ತದೆ.

ಶಿಂಶಾ ನದಿ

ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ

ಕಾವೇರಿ ನದಿಯ ಉಪನದಿಯಾಗಿದೆ.

ತುಮಕೂರು ಜಿಲ್ಲೆಯ ದೇವ ರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಉಗಮಿಸುವ ಈ ನದಿಯು 221 ಕಿ.ಮೀ. ದೂರವನ್ನು ಕ್ರಮಿಸಿ ಕಾವೇರಿ ನದಿಯನ್ನು ಸೇರುತ್ತದೆ.

ಶಿಂಶಾ ನದಿಯು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 914 ಮೀ ಎತ್ತರದಿಂದ ಹರಿದುಬರುತ್ತದೆ.

ಶಿಂಶಾ ನದಿಯು ಹುಟ್ಟಿ ಬರುವ ಸ್ಥಳ ದೇವರಾಯನದುರ್ಗ ಬೆಟ್ಟ

ದೇವರಾಯನದುರ್ಗ ಬೆಟ್ಟದಲ್ಲಿ ನರಸಿಂಹಸ್ವಾಮಿಯ ಎರಡು ದೇವಾಲಯಗಳಿವೆ.

ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬರುವ ಶಿಂಶಾ ನದಿ ಮಂಡ್ಯ ಜಿಲ್ಲೆಯನ್ನು ಸೇರುತ್ತದೆ.

ಮಂಡ್ಯ ಜಿಲ್ಲೆಯಲ್ಲಿನ ಮಳವಳ್ಳಿ ತಾಲೂಕಿನಲ್ಲಿ ಶಿಂಶಾ ನದಿಯ ಒಂದು ಜಲಪಾತವಿದೆ.

ಮರ್ಕೊಣಹಳ್ಳಿ ಅಣೆಕಟ್ಟನ್ನು ಶಿಂಶಾ ನದಿಯ ಅಡ್ಡಲಾಗಿ ಕಟ್ಟಲಾಗಿದೆ.

ಸೀತಾ ನದಿ

ಸೀತಾ ನದಿಯು ನರಸಿಂಹ ಪರ್ವತದ ಬಳಿ ಹುಟ್ಟಿಕೊಂಡಿದೆ

ಅಗುಂಬೆ ಕಾಡುಗಳ ಮೂಲಕ ಹಾದು ಹೆಬ್ರಿ, ಬಾರ್ಕೂರ್ ಬಳಿ ಹರಿಯುತ್ತಾ ಸುವರ್ಣ ನದಿಯ ಸಂಗಮವಾಗಿ ಅರಬ್ಬಿ ಸಮುದ್ರ ಸೇರುತ್ತದೆ.

ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿನ ಮಟ್ಟಕ್ಕೆ ಏರುತ್ತದೆ.

ನದಿ ಮತ್ತು ಅದರ ಸಣ್ಣ ಉಪನದಿಗಳು ಕುಡ್ಲು ಜಲಪಾತ, ಬರ್ಕಾನಾ ಜಲಪಾತ, ಜೊಮ್ಲು ತೀರ್ಥ ಜಲಪಾತ ಮುಂತಾದ ಹಲವಾರು ಜಲಪಾತಗಳನ್ನು ಮಾಡಿದೆ.

ಸೌಪರ್ಣಿಕ ನದಿ

ಅರಬ್ಬಿ ಸಮುದ್ರವನ್ನು ಸೇರುವ ಮೊದಲು ವರಾಹಿ, ಕೇದಕ, ಚಕ್ರ ಮತ್ತು ಕುಬ್ಜ ನದಿಗಳನ್ನು ಸೇರುವ ಸೌಪರ್ಣಿಕ ನದಿಯು ಕರ್ನಾಟಕದ ಕುಂದಾಪುರ ಮತ್ತು ಗಂಗೊಳ್ಳಿ ಪ್ರದೇಶಗಳಲ್ಲಿ ಹರಿಯುವ ಒಂದು ನದಿಯಾಗಿದೆ.

ಹಾರಂಗಿ

ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು.

ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ.

ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರಕ್ಕೆ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ 67 ಮೀಟರು ಎತ್ತರದ ಅಣೆ ಕಟ್ಟಲಾಗಿದ್ದು

ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ.

ಹೇಮಾವತಿ

ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು.

ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಉಗಮಿಸುವ ಈ ನದಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತದೆ.

ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡವಾಗಿ ಅಣೆಕಟ್ಟೆಯನ್ನು ಕಟ್ಟಲಾಗಿದೆ.

ಈ ನದಿಯು ಸುಮಾರು 245 ಕಿ.ಮೀ ಉದ್ದ ಹಾಗು 5410 ಕಿ.ಮೀ ಕಾಲುವೆ ಪ್ರದೇಶವನ್ನು ಒಳಗೊಡಿದೆ.