Koppal Toy Cluster Recruitment 2022

Feb 15, 2022 11:59 am By Admin

AEQUS SEZ PVT LTD , KOPPAL ಭಾನಾಪುರ ಗ್ರಾಮ , ತಾಲೂಕು : ಕುಕನೂರ , ಜಿಲ್ಲಾ : ಕೊಪ್ಪಳ

ಕೊಪ್ಪಳ ಭಾಗದ ಯುವಕ ಯುವತಿಯರಿಗೆ ತಾಂತ್ರಿಕ ತರಬೇತಿಯ ನಂತರ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಪಡೆಯಲು ಸದಾವಕಾಶ

10th / 12th / ITI / diploma ಪಾಸಾದ ಯುವಕ ಯುವತಿಯರು ಕೊಪ್ಪಳದ ಭಾನಾಪುರದಲ್ಲಿ ಆರಂಭವಾಗಲಿರುವ ಏಕಸ್‌ ಕಂಪನಿಗೆ ( AEQUS SEZ Private Limited , Koppal ) ತಾಂತ್ರಿಕ ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಬಹುದು

ಸಂದರ್ಶನದ ಮೂಲಕ ಆಯ್ಕೆಯಾದ ಯುವಕ ಯುವತಿಯರನ್ನು ಸೂಕ್ತ ತಾಂತ್ರಿಕ ತರಬೇತಿಯ ನಂತರ ಉತ್ತೀರ್ಣರಾದವರನ್ನು ಕಾರ್ಖಾನೆಯ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗುವುದು .

ದಿನಾಂಕ 18.02.2022 ರಿಂದ ಈ ಕೆಳಕಂಡ ಸ್ಥಳಗಳಲ್ಲಿ ತರಬೇತಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು .

1 ) ಕುಕನೂರ ಕೃಷಿ ಉತ್ಪನ್ನ ಮಾರುಕಟ್ಟೆ ( Kukanoor APMC ) 2 ) ಯಲಬುರ್ಗಾ ತಾಲೂಕ ಕ್ರೀಡಾಂಗಣ , ಯಲಬುರ್ಗಾ ( Yalaburga Taluka Stadium )

ಅರ್ಜಿ ದಾಖಲಾತಿಗೆ ಬರುವಾಗ ಅರ್ಜಿಯ ಜೊತೆ ಆಧಾರ್ ಕಾರ್ಡ್ , SSLC ಮಾರ್ಕ್ಸ್ ಕಾರ್ಡ್ ನಕಲು ಪ್ರತಿ ಹಾಗೂ ಭಾವಚಿತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು .