Microsoft

Jul 26, 2021 02:38 pm By Admin

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆ ಮೈಕ್ರೋಸಾಫ್ಟ್ ತೆಲಂಗಾಣದಲ್ಲಿ ಡೇಟಾ ಸೆಂಟರ್‌ ಒಂದನ್ನು ಸ್ಥಾಪಿಸಲು ಮುಂದಾಗಿದೆ.

ಅದಕ್ಕಾಗಿ( ತೆಲಂಗಾಣ) ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತಿದೆ.ಒಟ್ಟು 15 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಸಂಸ್ಥೆ ಮುಂದಾಗಿದೆ. ಈ ಉದ್ದೇಶಕ್ಕಾಗಿ ಹೈದರಾಬಾದ್‌ ಸಮೀಪದಲ್ಲಿ ಜಮೀನು ಒದಗಿಸಲೂ (ತೆಲಂಗಾಣ) ರಾಜ್ಯ ಸರ್ಕಾರ ಮುಂದಾಗಿದೆ.

ಸಾಫ್ಟ್ ವೇರ್ ದಿಗ್ಗಜನ ಜೊತೆಗೆ ರಿಲಯನ್ಸ್‌ ಜಿಯೋ ಕೂಡ ಸಹಭಾಗಿತ್ವ ಹೊಂದಿದೆ. ಎರಡೂ ಕಂಪನಿಗಳೂ ಕ್ಲೌಡ್ ಡೇಟಾ ಕೇಂದ್ರಗಳನ್ನು ಸ್ಥಾಪಿಸಲಿವೆ. ಈ ಒಪ್ಪಂದದ ಅನುಸಾರವಾಗಿಯೇ ಜಿಯೋ ನೆಟ್‌ವರ್ಕ್‌ನಲ್ಲಿ ಅಜ್ಯೂರ್‌ ಕ್ಲೌಡ್ ಎಂಬ ಹೊಸ ವ್ಯವಸ್ಥೆಯೂ ಜಾರಿಗೆ ಬಂದಿದೆ. ಇದಲ್ಲದೆ, ಅಮೆಜಾನ್‌ ವೆಬ್‌ಸರ್ವಿಸ್‌ ಮತ್ತು ಗೂಗಲ್‌ ಕೂಡ ದೇಶದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಮುಂದಾಗಿವೆ

👉 Microsoft

  • Founded :- April 4, 1975
  • Founders :- Bill Gates,Paul Allen
  • Chairman & CEO : Satya Nadella
  • Headquarters :- Washington, U.S