Science General Knowledge Question And Answer

1. ಜಾವಾ ಅಥವಾ ಸುಂಡಾ ಸಾಗರ ತಗ್ಗು ಎಲ್ಲಿ ಕಂಡುಬರುತ್ತದೆ ?
- ಪೆಸಿಫಿಕ್
- ಅಟ್ಲಾಂಟಿಕ್
- ಇಂಡಿಯನ್ ಓಶಿಯನ್
- ಕ್ಯಾಸ್ಪಿಯನ್ ಸಾಗರ
2. ಎ. ಆರ್ಕಟಿಕ್ ಸಾಗರವು ಉತ್ತರ ಧ್ರುವದಲ್ಲಿ ಹರಡಿದ್ದು, ವೃತ್ತಾಕಾರವಾಗಿದೆ.
ಬಿ. ಇದು ವರ್ಷದ ಬಹುಕಾಲ ಹೆಪ್ಪುಗಟ್ಟಿದ ರೂಪದಲ್ಲಿ ಕಂಡುಬರುತ್ತದೆ. ?
- ಎ ಮಾತ್ರ ಸರಿ
- ಬಿ ಮಾತ್ರ ಸರಿ
- ಎ ಮತ್ತು ಬಿ ಎರಡೂ ಸರಿ
- ಎ ಮತ್ತು ಬಿ ಎರಡೂ ತಪ್ಪು
3. ಒಂದೆ ಪ್ರಮಾಣದ ಸಾಂದ್ರತೆಯನ್ನು ಹೊಂದಿರುವ ನೀರಿನ ಆಳವನ್ನು ಸೇರಿಸುವಂತೆ ಎಳೆಯುವ ರೇಖೆಯನ್ನು ಏನಂದು ಕರೆಯುತ್ತಾರೆ ?
- ಐಸೋ ಪಿಕ್ನಲ್
- ಐಸೋಬಾತ್
- ಐಸೊಹೆಲೆನ್
- ಐಸೊಹೈಟ್ಸ್
4. ಸಾಗರದ ಆಳಕ್ಕೆ ಹೋದಂತೆಲ್ಲ ಉಷ್ಣಾಂಶ ಕಡಿಮೆಯಾಗುತ್ತದೆ. ಹಾಗಾದರೆ ಈ ವಲಯವನ್ನು ಏನೆಂದು ಕರೆಯುತ್ತಾರೆ ?
- ಆ್ಯಂಟಿಕ್ಲೈನ್ Anticline
- ಥರ್ಮೋಕ್ಲೈನ್ Thermocline
- ಪೋಟಿಕ್ ವಲಯ Photic zone
- ಎಫೋಟಿಕ್ ವಲಯ Ephotic Zone
5. ಸಾಗರಗಳ ನೀರಿನ ಉಷ್ಣಾಂಶವನ್ನು ನಿರ್ಧರಿಸುವ ಮುಖ್ಯ ಅಂಶಗಳು ಯಾವವು ?
- ಅಕ್ಷಾಂಶ ಮತ್ತು ಮಾರುತಗಳು
- ಭೂ ಮತ್ತು ಜಲಭಾಗಗಳ ಹಂಚಿಕೆ
- ಸಾಗರ ಪ್ರವಾಹಗಳು
- ಮೇಲಿನ ಎಲ್ಲಾ
6. ಮಾರುತಗಳ ಬೀಸುವಿಕೆಯಿಂದ ಸಾಗರದ ಆಳದ ತಂಪು ನೀರು ಮೇಲೆ ಬರುವುದನ್ನು ಏನೆಂದು ಕರೆಯುತ್ತಾರೆ ?
CURRENT
UPWELLING
CONVECTION
ALL OF THE ABOVE
7. ಸಮುದ್ರದ ಆಳಕ್ಕೆ ಹೋದಂತೆಲ್ಲ ಉಷ್ಣಾಂಶವು ಕ್ರಮೇಣವಾಗಿ ಕಡಿಮೆಯಾಗುತ್ತದೆ,
ಆದರೆ ಆಳ ಸಾಗರದ ನೀರು ಹೆಪ್ಪುಗಟ್ಟಿರುವುದಿಲ್ಲ ಇದಕ್ಕೆ ಕಾರಣವೇನು ?
- ಉಷ್ಣಾಂಶ ಅಧಿಕವಾಗಿರುತ್ತದೆ
- ಲವಣತೆ ನೀರು ಹೆಪ್ಪುಗಟ್ಟಲು ಅಗತ್ಯವಾದ ಉಷ್ಣಾಂಶದ ಕೊರತೆ
- ಜಲಚರ ಜೀವಿಗಳು ವಾಸಿಸುವುದರಿಂದ
- ಮೇಲಿನ ಎಲ್ಲಾ
8. ಸಾಗರದ ನೀರಿನಲ್ಲಿ ಯಾವ ಲವಣದ ಪ್ರಮಾಣ ಅತೀ ಹೆಚ್ಚು ಕಂಡುಬರುವುದು ?
- ಕ್ಯಾಲ್ಸಿಯಂ ಸಲ್ಫೇಟ್
- ಮೆಗ್ನೆಷಿಯಂ ಸಲ್ಫೇಟ್
- ಸೋಡಿಯಂ ಕ್ಲೋರೈಡ್
- ಮೆಗ್ನೀಸಿಯಂ ಕ್ಲೋರೈಡ್
9. ಒಂದೇ ಪ್ರಮಾಣದ ಲವಣತೆ ಹೊಂದಿದ ಪ್ರದೇಶಗಳನ್ನು ಸೇರಿಸುವಂತೆ ಎಳೆಯಬಹುದಾದ ರೇಖೆಗಳು ಯಾವವು ?
- ಐಸೋಹೈಟ್
- ಐಸೋಬಾತ್
- ಐಸೋಹೆಲೈನ್
- ಐಸೋಬಾರ್
10. ವಾಯುಮಂಡಲದ ಆರ್ದ್ರತೆ ಕಡಿಮೆ ಇರುವ ಪ್ರದೇಶಗಳಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು _. ?
- ಕಡಿಮೆಯಾಗಿರುತ್ತದೆ
- ಹೆಚ್ಚಾಗಿರುತ್ತದೆ
- ಸಮನಾಗಿರುತ್ತದೆ
- ವಿಭಿನ್ನವಾಗಿರುತ್ತದೆ
11. ಎ. ನದಿಯ ನೀರು ಸಾಗರವನ್ನು ಸೇರುವ ತೀರ ಪ್ರದೇಶಗಳಲ್ಲಿ ಲವಣತೆಯು ಕಡಿಮೆಯಾಗಿರುತ್ತದೆ.
ಬಿ. ಸಾಗರಗಳ ಮಧ್ಯ ಭಾಗದಲ್ಲಿ ಲವಣತೆಯು ಹೆಚ್ಚಾಗಿರುತ್ತದೆ. ?
- ಎ ಮಾತ್ರ ಸರಿ
- ಬಿ ಮಾತ್ರ ಸರಿ
- ಎ ಮತ್ತು ಬಿ ಎರಡೂ ಸರಿ
- ಎ ಮತ್ತು ಬಿ ಎರಡೂ ತಪ್ಪು
12. ಸಾಗರಗಳ ನೀರಿನ ಸರಾಸರಿ ಲವಣತೆ ಎಷ್ಟಿರುತ್ತದೆ ?
- 25°|..
- 35 °|..
- 50 °/..
- 100°|..
13. ಸಾಮಾನ್ಯವಾಗಿ ಸಾಗರಗಳ ನೀರಿನ ಲವಣತೆ ಸಮಭಾಜಕ ವೃತ್ತದಿಂದ ಧ್ರುವಗಳ ಕಡೆಗೆ ಹೋದಂತೆ ಏನಾಗುತ್ತದೆ ?
- ಹೆಚ್ಚಾಗುತ್ತದೆ
- ಕಡಿಮೆಯಾಗುತ್ತದೆ
- ಅಷ್ಟೇ ಇರುತ್ತದೆ
- ನಿಖರವಾಗಿ ಹೇಳಲಾಗುವುದಿಲ್ಲ
14. ಸರಿಯಾದ ಏರಿಕೆ ಕ್ರಮದಲ್ಲಿ ಜೋಡಿಸಿ ?
- ಪರಿವರ್ತನಾ, ಸಮೋಷ್ಣ, ಉಷ್ಣ, ಮಧ್ಯಂತರ ಮಂಡಲ
- ಪರಿವರ್ತನಾ, ಮದ್ಯಂತರ, ಸಮೋಷ್ಣ, ಉಷ್ಣ ಮಂಡಲ
- ಪರಿವರ್ತನಾ, ಸಮೋಷ್ಣ, ಮಧ್ಯಂತರ, ಉಷ್ಣ ಮಂಡಲ
- ಪರಿವರ್ತನಾ, ಉಷ್ಣ, ಸಮೋಷ್ಣ, ಮಧ್ಯಂತರ ಮಂಡಲ
15. ಪರಿವರ್ತನಾ ಮಂಡಲದಲ್ಲಿ ಉಷ್ಣಾಂಶವು ಎತ್ತರಕ್ಕೆ ಹೋದಂತೆ ಏನಾಗುತ್ತದೆ ?
- ಹೆಚ್ಚಾಗುತ್ತದೆ
- ಕಡಿಮೆಯಾಗುತ್ತದೆ
- ಸಿಶ್ಚಲವಾಗಿರುತ್ತದೆ
- ಮೇಲಿನ ಎಲ್ಲಾ
16. ಮೋಡ, ವೃಷ್ಟಿ, ಗುಡುಗು, ಸಿಡಿಲು ಗಳು ಯಾವ ವಲಯದಲ್ಲಿ ಕಂಡುಬರುತ್ತವೆ ?
- ಪರಿವರ್ತನಾ
- ಸಮೋಷ್ಣ
- ಮಧ್ಯಂತರ
- ಬಾಹ್ಯಮಂಡಲ
17. ಓಜೋನ್ ಪದರವನ್ನು ಯಾವ ವಲಯದಲ್ಲಿ ಕಾಣಬಹುದು ?
- ಪರಿವರ್ತನಾ
- ಮಧ್ಯಂತರ
- ಸಮೋಷ್ಣ
- ಬಾಹ್ಯ ಮಂಡಲ
18. ಕೆಳಗಿನ ಯಾವ ವಲಯವನ್ನು ರಾಸಾಯನಿಕ ಮಂಡಲ ಅಥವಾ ಕೆಮೋಸ್ಪೀಯರ್ ಎಂದು ಕರೆಯಲಾಗುತ್ತದೆ ?
- ಪರಿವರ್ತನಾ
- ಸಮೋಷ್ಣ
- ಓಜೋನ್
- ಮಧ್ಯಂತರ
19. ವಾಯುಮಂಡಲದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿರುವ ವಲಯ ಯಾವುದು ?
- ಪರಿವರ್ತನಾ
- ಮಧ್ಯಂತರ
- ಸಮೋಷ್ಣ
- ಬಾಹ್ಯ
20. ಯಾವ ಮಂಡಲವನ್ನು ಅಯಾನೋಸ್ಪೀಯರ್ ಎಂದು ಕರೆಯಲಾಗುತ್ತದೆ ?
- ಮಧ್ಯಂತರ ಮಂಡಲ
- ಸಮೋಷ್ಣ ಮಂಡಲ
- ಉಷ್ಣ ಮಂಡಲ
- ಓಜೋನ್
21. ರೇಡಿಯೋ ತರಂಗಗಳನ್ನು ಭೂಮಿಯ ಕಡೆಗೆ ಪ್ರತಿಫಲಿಸುವ ವಲಯ ಯಾವುದು ?
- ಪರಿವರ್ತನಾ
- ಸಮೋಷ್ಣ
- ಉಷ್ಣ
- ಮಧ್ಯಂತರ
22. ವಾಯುಮಂಡಲದ ಅನಿಲಗಳಲ್ಲಿ ಅತೀ ಹೆಚ್ಚು ಸಾಂದ್ರತೆ ಹೊಂದಿದ ಅನಿಲ ಯಾವುದು ?
- ಸಾರಜನಕ
- ಆಮ್ಲಜನಕ
- ಆರ್ಗಾನ್
- ಕಾರ್ಬನ್ ಡೈಆಕ್ಸೈಡ್
23. ವಾಯುಮಂಡಲವು ಹೊಂದಿರುವ ಅನಿಲಗಳ ಪ್ರಮಾಣವನ್ನು ಆಧರಿಸಿ ಏರಿಕೆ ಕ್ರಮದಲ್ಲಿ ಜೋಡಿಸಿ. ?
- ಸಾರಜನಕ, ಆಮ್ಲಜನಕ,ಓಜೋನ್, ಕಾರ್ಬನ್ ಡೈಆಕ್ಸೈಡ್
- ಸಾರಜನಕ, ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್
- ಸಾರಜನಕ, ಆಮ್ಲಜನಕ,ಆರ್ಗಾನ್, ಕಾರ್ಬನ್ ಡೈಆಕ್ಸೈಡ್
- ಸಾರಜನಕ, ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್, ಓಜೋನ್
24. ಕೆಳಗಿನ ಯಾವ ಅನಿಲಗಳು ಆಮ್ಲಮಳೆಗೆ ಕಾರಣವಾಗುತ್ತವೆ ?
- ನೈಟ್ರಿಕ್ ಆಮ್ಲ ಮತ್ತು ಕಾರ್ಬನ್ ಡೈಆಕ್ಸೈಡ್
- ಗಂಧಕದ ಡೈಆಕ್ಸೈಡ್ ಮತ್ತು ಕಾರ್ಬನಿಕ್ ಆಮ್ಲ
- ಆಮ್ಲಜನಕ ಮತ್ತು ಸಾರಜನಕ
- ನೈಟ್ರಿಕ್ ಆಮ್ಲ ಮತ್ತು ಗಂಧಕದ ಡೈಆಕ್ಸೈಡ್
25. ಚಂಡಮಾರುತ ಅಥವಾ ಆವರ್ತಮಾರುತಗಳು __ ಚಲಿಸುತ್ತವೆ. ?
- ಅಧಿಕ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ
- ಕಡಿಮೆ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ
- ಉತ್ತರದಿಂದ ದಕ್ಷಿಣಕ್ಕೆ
- ಪೂರ್ವದಿಂದ ಪಶ್ಚಿಮಕ್ಕೆ