SSC Recruitment 2023

Sep 22, 2023 11:00 am By Admin

SSC Recruitment 2023: ಒಟ್ಟು 99 ಹುದ್ದೆ ಖಾಲಿ ಇವೆ, ಕೂಡಲೇ ಅರ್ಜಿ ಹಾಕಿ ಸರ್ಕಾರಿ ಉದ್ಯೋಗ ಪಡೆಯಿರಿ.

ಬೆಂಗಳೂರು, ಸೆಪ್ಟಂಬರ್ 20: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಹುದ್ದೆ ಸೇರಬಯಸುವವರು ಆನ್ಲೈನ್ ಮೂಲಕ ಈ ಕೂಡಲೇ ಅರ್ಜಿ ಹಾಕಿ ಕೈ ತುಂಬ ಸಂಬಳದ ಉದ್ಯೋಗ ಸೇರಬಹುದಾಗಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಒಟ್ಟು 99 ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್​ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್​ ಸೆಲೆಕ್ಷನ್ ಕಮಿಷನ್​(SSC)ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅಧಿಸೂಚನೆ ಪೂರ್ತಿ ಓದಿ ಅಕ್ಟೋಬರ್ 3ರೊಳಗೆ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿವರ

ಸಂಸ್ಥೆ ಹೆಸರು: ಸ್ಟಾಫ್​ ಸೆಲೆಕ್ಷನ್ ಕಮಿಷನ್

ವಿದ್ಯಾರ್ಹತೆ : Any Degree

ಖಾಲಿ ಹುದ್ದೆ ಹೆಸರು: ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್

ಒಟ್ಟು ಹುದ್ದೆ: 99

ಪೊಸ್ಟಿಂಗ್: ಭಾರತದಲ್ಲಿ ಎಲ್ಲಿಯಾದರೂ ಕೊಡಬಹುದು

ಮಾಸಿಕ ವೇತನ: 25,500 ರೂ.ನಿಂದ 81,100 ರೂ