Tata Airlines / Indian Airlines Current Affairs 28-01-2022

ಜೆಆರ್ಡಿ ಟಾಟಾ ಹುಟ್ಟುಹಾಕಿದ್ದ ವಿಮಾನಯಾನ ಕಂಪನಿ ಗುರುವಾರ ಅಧಿಕೃತವಾಗಿ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿದೆ. ಏರ್ ಇಂಡಿಯಾದ ಶೇಕಡ 100 ಷೇರುಗಳನ್ನು ಟೆಲೆಸ್ ಪ್ರೖೆವೇಟ್ ಲಿಮಿಟೆಡ್ಗೆ ಹಸ್ತಾಂತರಿಸುವುದರ ಜತೆಗೆ ಆ ಕಂಪನಿಯಿಂದ ವ್ಯೂಹಾತ್ಮಕ ಹೂಡಿಕೆ ಹಿಂಪಡೆತ ಯಶಸ್ವಿಯಾಗಿ ಸಂಪೂರ್ಣವಾಗಿದೆ. ಟಾಟಾ ಸನ್ಸ್ ಪ್ರೖೆವೇಟ್ ಲಿಮಿಟೆಡ್ನ ಅಧೀನ ಸಂಸ್ಥೆ ಟಲೆಸ್ ಪ್ರೖೆವೇಟ್ ಲಿಮಿಟೆಡ್ 2,700 ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿಸಿದೆ. ಉಳಿದ 15,300 ಕೋಟಿ ರೂಪಾಯಿಯನ್ನು ಏರ್ ಇಂಡಿಯಾ ಮತ್ತು ಎಐಎಕ್ಸ್ಎಲ್ನ ಸಾಲಕ್ಕೆ ಪಾವತಿಸಿದೆ. ಹೀಗಾಗಿ ಏರ್ ಇಂಡಿಯಾ ಮತ್ತು ಅದರ ಅಧೀನ ಸಂಸ್ಥೆ ಎಐಎಕ್ಸ್ ಎಲ್ನ ಶೇಕಡ 100 ಷೇರುಗಳು ಮತ್ತು ಎಐಎಸ್ಎಟಿಎಸ್ನ ಶೇಕಡ 50 ಷೇರುಗಳನ್ನು ಟೆಲೆಸ್ಗೆ ಹಸ್ತಾಂತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ವಿಶ್ವದರ್ಜೆಗೆ ಏರಿಸುವ ಗುರಿ: ಏರ್ ಇಂಡಿಯಾವನ್ನು ವಿಶ್ವದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ರೂಪಿಸಲು ಟಾಟಾ ಗ್ರೂಪ್ ಬದ್ಧವಾಗಿದೆ. ಟಾಟಾ ಗ್ರೂಪ್ಗೆ ಏರ್ ಇಂಡಿಯಾವನ್ನು ಮತ್ತೆ ಸ್ವಾಗತಿಸುತ್ತಿದ್ದೇವೆ. ಏರ್ ಇಂಡಿಯಾದ ಎಲ್ಲ ಉದ್ಯೋಗಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದು, ಮುಂದೆ ಜತೆಯಾಗಿ ಕೆಲಸ ಮಾಡುತ್ತೇವೆ. ವಿಮಾನ ಯಾನ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಧಾನಮಂತ್ರಿಯವರ ತಾತ್ತಿ್ವಕ ದೃಷ್ಟಿಕೋನದ ಜತೆಗೆ ಟಾಟಾ ಗ್ರೂಪ್ನ ಸಹಮತವಿದೆ ಎಂದು ಟಾಟಾ ಸನ್ಸ್ ಚೇರ್ವುನ್ ಎನ್.ಚಂದ್ರಶೇಖರನ್ ಹೇಳಿದರು.
ಮೊದಲ ದಿನವೇ ಊಟೋಪಚಾರಕ್ಕೆ ಆದ್ಯತೆ: ಟಾಟಾ ಗ್ರೂಪ್ ತೆಕ್ಕೆಗೆ ಏರ್ ಇಂಡಿಯಾ ಬಂದ ಕೂಡಲೇ ಮುಂಬೈನಿಂದ ಪ್ರಯಾಣಿಸುವ ನಾಲ್ಕು ವಿಮಾನಗಳಲ್ಲಿ-ಮುಂಬೈ – ದೆಹಲಿ (ಎಐ864, ಎಐ687), ಮುಂಬೈ-ಅಬುಧಾಮಿ(ಎಐ945), ಮುಂಬೈ-ಬೆಂಗಳೂರು(ಎಐ639)- ‘ಎನ್ಹ್ಯಾನ್ಸ್ ್ಡ ಮೀಲ್ ಸರ್ವೀಸ್’ ಪರಿಚಯಿಸಲಾಗಿದೆ.
ಬಿಡ್ ಗೆದ್ದ ಟಾಟಾ ಗ್ರೂಪ್: ನಷ್ಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಏರ್ ಇಂಡಿಯಾವನ್ನು ಟಲೆಸ್ ಪ್ರೖೆವೆಟ್ ಲಿಮಿಟೆಡ್ 18,000 ಕೋಟಿ ರೂಪಾಯಿಗೆ ಖರೀದಿಸಿದ್ದಾಗಿ ಕೇಂದ್ರ ಸರ್ಕಾರ ಕಳೆದ ಅಕ್ಟೋಬರ್ 8ರಂದು ಘೋಷಿಸಿತ್ತು. ಟಾಟಾ ಸನ್ಸ್ ಕಂಪನಿಯ ಅಧೀನ ಸಂಸ್ಥೆ ಈ ಟಲೇಸ್ ಪ್ರೖೆವೆಟ್ ಲಿಮಿಟೆಡ್. ಏರ್ ಇಂಡಿಯಾ ಮಾರಾಟದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೆ.15ರಂದು ಎರಡು ಹಣಕಾಸು ಬಿಡ್ಗಳು ಅಂತಿಮಗೊಂಡಿದ್ದವು. ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಡಿಐಪಿಎಎಂ 2017ರ ಜುಲೈನಲ್ಲೇ ಶುರುಮಾಡಿತ್ತು. 2020ರ ಡಿಸೆಂಬರ್ ಹೊತ್ತಿಗೆ ಏಳು ಖರೀದಿ ಆಸಕ್ತಿ ಪತ್ರಗಳನ್ನು ಅದು ಸ್ವೀಕರಿಸಿತ್ತು.
ಬಿಡ್ಡಿಂಗ್ ಹೇಗಿತ್ತು?
- 12,906 ಕೋಟಿ ರೂಪಾಯಿ ಮೂಲದರ
- 18,000 ಕೋಟಿ ರೂ. ಟಲೇಸ್ ಲಿಮಿಟೆಡ್ ಬಿಡ್
- 15,100 ಕೋಟಿ ರೂ. ಸ್ಪೈಸ್ ಜೆಟ್ನ ಅಜಯ್ ಸಿಂಗ್ ನೇತೃತ್ವದ ಒಕ್ಕೂಟ ಬಿಡ್
ಪ್ರಧಾನಿ ಜತೆ ಮಾತುಕತೆ: ಏರ್ ಇಂಡಿಯಾವನ್ನು ಸರ್ಕಾರ ಔಪಚಾರಿಕವಾಗಿ ಟಾಟಾ ಗ್ರೂಪ್ಗೆ ಹಸ್ತಾಂತರಿಸುವ ಮೊದಲು ಕಂಪನಿಯ ಚೇರ್ಮನ್ ಎನ್. ಚಂದ್ರಶೇಖರನ್ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಮಾತುಕತೆಯ ಫೋಟೋವನ್ನು ಪ್ರಧಾನಮಂತ್ರಿ ಕಚೇರಿ ಟ್ವೀಟ್ ಮಾಡಿತ್ತು.
ಉದ್ಯೋಗಿಗಳು ಟಾಟಾ ಗ್ರೂಪ್ಗೆ: ಏರ್ ಇಂಡಿಯಾದಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 8,000ಕ್ಕೂ ಹೆಚ್ಚು ಕಾಯಂ ಉದ್ಯೋಗಿಗಳು, 4,000 ಗುತ್ತಿಗೆ ಉದ್ಯೋಗಿಗಳು. ಏರ್ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ 1,434 ಉದ್ಯೋಗಿಗಳಿದ್ದಾರೆ. ಸರಾಸರಿ 1,000 ಕಾಯಂ ಉದ್ಯೋಗಿಗಳು ಈ ವರ್ಷ ನಿವೃತ್ತರಾಗಲಿದ್ದಾರೆ. ಎಲ್ಲರೂ ಇನ್ನು ಟಾಟಾ ಉದ್ಯೋಗಿಗಳು.
65,562 ಕೋಟಿ ರೂಪಾಯಿ ಸಾಲ: ಕಳೆದ ವರ್ಷ ಜನವರಿಯಲ್ಲಿ ಡಿಐಪಿಎಎಂ ಪ್ರಕಟಿಸಿದಂತೆ, 2019ರ ಮಾರ್ಚ್ 31ಕ್ಕೆ ಏರ್ ಇಂಡಿಯಾದ ಒಟ್ಟು ಸಾಲದ ಮೊತ್ತ 60,074 ಕೋಟಿ ರೂಪಾಯಿ. ಇದರಲ್ಲಿ 23,286.5 ಕೋಟಿ ರೂಪಾಯಿ ಖರೀದಿದಾರರ ಹೆಗಲೇರಲಿದೆ. ಉಳಿದದ್ದು ಏರ್ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್ (ಎಐಎಎಚ್ಎಲ್) ಸುಪರ್ದಿಗೆ ಸೇರಲಿದೆ. ಈಗ 2021ರ ಆಗಸ್ಟ್ ವೇಳೆಗೆ ಇದು 65,562 ಕೋಟಿ ರೂ. ಆಗಿತ್ತು.
ಟೆಲೆಸ್ಗೆ ಸಿಕ್ಕಿರುವುದೇನು?: ಏರ್ ಇಂಡಿಯಾ ಬಿಡ್ ಗೆದ್ದ ಟೆಲೆಸ್ ಪ್ರೖೆವೇಟ್ ಲಿಮಿಟೆಡ್ಗೆ ಈಗ 4,400 ಪ್ರಾದೇಶಿಕ, 1,800 ಅಂತಾರಾಷ್ಟ್ರೀಯ ಲ್ಯಾಂಡಿಂಗ್, ರ್ಪಾಂಗ್ ಸ್ಲಾಟ್ಗಳು ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿವೆ. ಅದೇ ರೀತಿ 900 ಸ್ಲಾಟ್ಗಳು ವಿದೇಶಿ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿವೆ. ಏರ್ ಇಂಡಿಯಾ, ಇಂಡಿಯನ್ ಏರ್ಲೈನ್ಸ್, ಮಹಾರಾಜಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಬ್ರಾ್ಯಂಡ್ಗಳ ಮಾಲೀಕತ್ವ ಈಗ ಟಾಟಾ ಪಾಲಾಗಿದೆ. ಏರ್ ಇಂಡಿಯಾ, ಇಂಡಿಯನ್ ಏರ್ಲೈನ್ಸ್, ಮಹಾರಾಜಾಗೆ ಸೇರಿದ 117 ವಿಮಾನಗಳು, ಏರ್ಇಂಡಿಯಾ ಎಕ್ಸ್ಪ್ರೆಸ್ಗೆ ಸೇರಿದ 24 ವಿಮಾನಗಳು ಟಾಟಾ ಪಾಲಾಗಿವೆ.
ಏರ್ ಇಂಡಿಯಾದ ಇತಿಹಾಸ
- 1932: ಟಾಟಾ ಏರ್ಲೈನ್ಸ್ ಅಸ್ತಿತ್ವಕ್ಕೆ
- 1946: ಹುರಿಮೀಸೆಯ ವಿನೀತ ಮಹಾರಾಜ ಅಧಿಕೃತ ಲೋಗೋ
- 1948: ಮೊದಲ ಅಂತಾರಾಷ್ಟ್ರೀಯ ಹಾರಾಟ ನಡೆಸಿದ ಏರ್ ಇಂಡಿಯಾ ಮಲಬಾರ್ ಪ್ರಿನ್ಸಸ್. ಸರ್ಕಾರದಿಂದ 49% ಪಾಲು ಖರೀದಿ
- 1953: ಏರ್ ಇಂಡಿಯಾ ರಾಷ್ಟ್ರೀಕರಣ. ಜೆಆರ್ಡಿ ಟಾಟಾ ಚೇರ್ಮನ್
- 1960: ಬೋಯಿಂಗ್ 707-420 ಖರೀದಿ. ಗೌರಿಶಂಕರ ಎಂದು ನಾಮಕರಣ
- 1962: ಏರ್ ಇಂಡಿಯಾ ಹೆಸರಿಗೆ ಸರ್ಕಾರ ಅಧಿಕೃತ ಮುದ್ರೆ.
- 1971: ಬೋಯಿಂಗ್ 747-200ಬಿ ಖರೀದಿ. ಎಂಪರರ್ ಅಶೋಕ ಹೆಸರಿನಲ್ಲಿ ಐಷಾರಾಮಿ ಸೇವೆ
- 1986: ಏರ್ಬಸ್ ಎ310-300 ಆಗಮನ
- 1993: ಬೋಯಿಂಗ್ 747-400 ಕೊನಾರ್ಕ್ ಆಗಮನ. ನವದೆಹಲಿಯಿಂದ ನ್ಯೂಯಾರ್ಕ್ಗೆ ತಡೆರಹಿತ ಹಾರಾಟ
- 2001: ಖಾಸಗೀಕರಣ ಪ್ರಯತ್ನ ವಿಫಲ
- 2004: ಅಗ್ಗದ ಸೇವೆ ಒದಗಿಸಲು ಏರ್ ಇಂಡಿಯಾ ಎಕ್ಸ್ಪ್ರೆಸ್ ಅಸ್ತಿತ್ವ
- 2007: ಏರ್ ಇಂಡಿಯಾ, ಇಂಡಿಯನ್ ಏರ್ಲೈನ್ಸ್ ವಿಲೀನ
- 2015: ಸಂಸ್ಥೆಯ ಖಾಸಗೀಕರಣಕ್ಕೆ ಸರ್ಕಾರದ ಒಲವು, ನೀತಿ ಆಯೋಗದಿಂದಲೂ ವರದಿ ಸಲ್ಲಿಕೆ.
- 2017: ನಷ್ಟ ತಗ್ಗಿಸಲು ಆರ್ಥಿಕ ನೆರವು ಸೇರಿದಂತೆ ಸರ್ಕಾರದಿಂದ ಹಲವು ಕ್ರಮ
- 2018: ಶೇಕಡ 76 ಷೇರುಗಳನ್ನು ಮಾರಾಟ ಮಾಡಲು ಅಧಿಸೂಚನೆ.
〰️〰️〰️〰️〰️〰️〰️〰️
ಕರ್ನಾಟಕದ ಲೋಕಸೇವಾ ಆಯೋಗ 💐💐
❇️ ಜನವರಿ 25
👆🏻 ರಾಷ್ಟ್ರೀಯ ಮತದಾರರ ದಿನ
(National Voters’ Day)
✍️ ಥೀಮ್ 2022 : ‘ಬಲವಾದ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಸಾಕ್ಷರತೆ’
(Theme 2022 : ‘Electoral Literacy for Stronger Democracy’)
💠 25ನೇ ಜನವರಿ 2022 12ನೇ ರಾಷ್ಟ್ರೀಯ ಮತದಾರರ ದಿನವನ್ನು ಗುರುತಿಸುತ್ತದೆ.
💠 1950 ರಲ್ಲಿ ಈ ದಿನದಂದು, ಭಾರತದ ಚುನಾವಣಾ ಆಯೋಗವು ಅಸ್ತಿತ್ವಕ್ಕೆ ಬಂದಿತು.
➖‘cVIGIL’ ಮತ್ತು ‘ವೋಟರ್ ಹೆಲ್ಪ್‌ಲೈನ್ ಆ್ಯಪ್’ ನಿಂದ 💠 ಇ-ಆಡಳಿತ ಪ್ರಶಸ್ತಿ 2019 ಗೆದ್ದಿದೆ.
💠 ಚುನಾವಣಾ ಆಯೋಗವು ಡಿಜಿಟಲ್ ಮತದಾರರ ಗುರುತಿನ ಚೀಟಿಗಳನ್ನು “E-EPIC” ಅನ್ನು ಹೊರತಂದಿದೆ.
💠 ಭಾರತ ಚುನಾವಣಾ ಆಯೋಗ ‘ಗರುಡ ಆಪ್’ ಬಿಡುಗಡೆ.
💠ಭಾಗ XV, (15) ಚುನಾವಣೆಗಳು (324 ರಿಂದ 329)
- ಚುನಾವಣಾ ಆಯೋಗದಲ್ಲಿ ಅಧಿಕಾರ ವಹಿಸಬೇಕಾದ ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ. 🏛 ಭಾರತದ ಚುನಾವಣಾ ಆಯೋಗ👇 🔹ರಚನೆ: 25 ಜನವರಿ 1950
🔹ಉದ್ದೇಶಗಳು: ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯು ಭಾರತದ ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ, ಸಂಸತ್ತು, ರಾಜ್ಯ ವಿಧಾನ ಸಭೆಗಳು ಮತ್ತು ವಿಧಾನ ಪರಿಷತ್ತುಗಳಿಗೆ ಚುನಾವಣೆಗಳನ್ನು ನಡೆಸುತ್ತದೆ.
🔹ಮೊದಲ ಕಾರ್ಯನಿರ್ವಾಹಕ: ಸುಕುಮಾರ್ ಸೇನ್
🔹ಸುಶೀಲ್ ಚಂದ್ರ ಅವರು ಪ್ರಸ್ತುತ 24 ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ.