United Nations Security Council / Current Affairs 22-01-2022

Jan 21, 2022 12:17 pm By Admin

ವಿಷಯಗಳು:ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ:

ಸಂದರ್ಭ:

ಉತ್ತರ ಕೊರಿಯಾದ ಸರಣಿ ಕ್ಷಿಪಣಿ ಉಡಾವಣೆಗಳ ನಂತರ ಉತ್ತರ ಕೊರಿಯಾದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸುತ್ತಿದೆ.

ಕ್ಷಿಪಣಿ ಉಡಾವಣೆಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ಈಗಾಗಲೇ ಏಕಪಕ್ಷೀಯ ನಿರ್ಬಂಧಗಳನ್ನು ವಿಧಿಸಿದೆ. ಇದು ಉತ್ತರ ಕೊರಿಯಾದ ಆರುಜನ, ಒಬ್ಬ ರಷ್ಯನ್ ಮತ್ತು ರಷ್ಯಾದ ಒಂದು ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ, ಕಾರಣ ಅವರ ಮೇಲೆ ರಷ್ಯಾ ಮತ್ತು ಚೀನಾದಿಂದ ಪರಮಾಣು ಕಾರ್ಯಕ್ರಮಗಳಿಗೆ ಸರಕುಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪವಿದೆ.

ಇತ್ತೀಚಿನ ಘಟನೆಗಳು:

ಆರು ತಿಂಗಳ ವಿರಾಮದ ನಂತರ, ಉತ್ತರ ಕೊರಿಯಾ ಸೆಪ್ಟೆಂಬರ್‌ನಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಪುನರಾರಂಭಿಸಿತು ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ ಹಲವಾರು ಕ್ಷಿಪಣಿಗಳನ್ನು ಒಳಗೊಂಡಂತೆ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಗಳ ಮೇಲೆ ನಿಖರ ದಾಳಿಮಾಡುವ ಸಾಮರ್ಥ್ಯವಿರುವ ಪರಮಾಣು ಸಾಮರ್ಥ್ಯದ ಆಯುಧಗಳನ್ನು ಅಭಿವೃದ್ಧಿಪಡಿಸಿದೆ.

  1. ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು’ ಉತ್ತರ ಕೊರಿಯಾದ ಸಾರ್ವಭೌಮತ್ವವನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ, ಅದು ಭವಿಷ್ಯದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾವು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ (UNSC) ಗೆ ಎಚ್ಚರಿಕೆ ನೀಡಿದೆ.
  2. ಅದೇ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು,“ಡಬಲ್ ಡೀಲಿಂಗ್ ಸ್ಟಾಂಡರ್ಡ್ ಅನ್ನು” ಅಳವಡಿಸಿಕೊಂಡಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ. ಕಾರಣ, ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ಸಮಸ್ಯೆಯನ್ನು ಸಮಾನವಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಿದೆ.

ಪ್ರಸ್ತುತ ಸನ್ನಿವೇಶ:

ಉತ್ತರ ಕೊರಿಯಾ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವುದರಿಂದ, ಹಲವಾರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ, ಉತ್ತರ ಕೊರಿಯಾವನ್ನು ಯಾವುದೇ ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯ ಕುರಿತು:

  1. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸೇರಿದಂತೆ ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳನ್ನು ವಿಶ್ವಸಂಸ್ಥೆಯ ಚಾರ್ಟರ್ ಸ್ಥಾಪಿಸಿದೆ.
  2. ಚಾರ್ಟರ್ ಅಡಿಯಲ್ಲಿ, ಭದ್ರತಾ ಮಂಡಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗುತ್ತದೆ ಮತ್ತು ಅದರ ನಿರ್ಧಾರಗಳು ಸದಸ್ಯ ರಾಷ್ಟ್ರಗಳ ಮೇಲೆ ಬಾಧ್ಯಸ್ಥ ವಾಗಿರುತ್ತವೆ.
  3. ಖಾಯಂ ಮತ್ತು ಶಾಶ್ವತವಲ್ಲದ ಸದಸ್ಯರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ, ಅದರಲ್ಲಿ 5 ಖಾಯಂ ಮತ್ತು 10 ಶಾಶ್ವತವಲ್ಲದ ರಾಷ್ಟ್ರಗಳು.
  4. ಪ್ರತಿ ವರ್ಷ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಐದು ಖಾಯಂ ಅಲ್ಲದ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯ ಬಗ್ಗೆ:

  1. ಸದಸ್ಯ ರಾಷ್ಟ್ರಗಳ ಇಂಗ್ಲಿಷ್‌ ಹೆಸರಿನ ಮೊದಲ ಅಕ್ಷರಗಳ ಅನುಕ್ರಮದಲ್ಲಿ ಆಯಾ ರಾಷ್ಟ್ರಗಳಿಗೆ ಅಧ್ಯಕ್ಷ ಸ್ಥಾನವನ್ನು ಒಂದು ತಿಂಗಳು ಅವಧಿಗೆ ನೀಡಲಾಗುತ್ತದೆ.
  2. ಈ ಅನುಕ್ರಮವು ‘ಭದ್ರತಾ ಮಂಡಳಿ’ಯ 15 ಸದಸ್ಯ-ರಾಷ್ಟ್ರಗಳ ನಡುವೆ ಮಾಸಿಕವಾಗಿ ಮುಂದುವರಿಯುತ್ತದೆ.
  3. ಸದಸ್ಯ ರಾಷ್ಟ್ರದ ನಿಯೋಗದ ಮುಖ್ಯಸ್ಥರನ್ನು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ ಅಧ್ಯಕ್ಷ ಎಂದು ಕರೆಯಲಾಗುತ್ತದೆ.
  4. ಭದ್ರತಾ ಮಂಡಳಿಯ ಅಧ್ಯಕ್ಷರು ಕೌನ್ಸಿಲ್‌ನ ಕಾರ್ಯಗಳನ್ನು ಸಮನ್ವಯಗೊಳಿಸುತ್ತಾರೆ, ನೀತಿ ವಿವಾದಗಳನ್ನು ನಿರ್ಧರಿಸುತ್ತಾರೆ ಮತ್ತು ಕೆಲವೊಮ್ಮೆ ಸಂಘರ್ಷದ ಗುಂಪುಗಳ ನಡುವೆ ರಾಜತಾಂತ್ರಿಕ ಅಥವಾ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ.
  5. ಭಾರತವು ಆಗಸ್ಟ್‌ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ. ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.
  6. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.

ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷತೆ ವಹಿಸಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾವಿತ ಸುಧಾರಣೆಗಳು:

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯನ್ನು ಐದು ಪ್ರಮುಖ ವಿಷಯಗಳಲ್ಲಿ ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ:

ಸದಸ್ಯತ್ವದ ವರ್ಗಗಳು,

  1. ಐದು ಖಾಯಂ ಸದಸ್ಯರು ಹೊಂದಿರುವ ವೀಟೋ ಅಧಿಕಾರದ ಪ್ರಶ್ನೆ,
  2. ಪ್ರಾದೇಶಿಕ ಪ್ರಾತಿನಿಧ್ಯ,
  3. ವಿಸ್ತರಿತ ಮಂಡಳಿಯ ಗಾತ್ರ ಮತ್ತು ಅದರ ಕಾರ್ಯವೈಖರಿ, ಮತ್ತು,
  4. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡುವಿನ ಸಂಬಂಧಗಳು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕಾಗಿ ಪ್ರಮುಖ ಅಂಶಗಳು:

  1. ಭಾರತವು,ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ದೇಶವಾಗಿದೆ.
  2. ಅತ್ಯಂತ ಮುಖ್ಯವಾದ ವಿಷಯವೆಂದರೆ,
  3. ಭಾರತವು ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜಿಸಿರುವ ಶಾಂತಿಪಾಲಕರ ಸಂಖ್ಯೆಯು, P5 ದೇಶಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
  4. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
  5. ಭಾರತವು ಮೇ 1998 ರಲ್ಲಿ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರದ (Nuclear Weapons State – NWS) ಸ್ಥಾನಮಾನವನ್ನು ಪಡೆಯಿತು.ಮತ್ತು ಅಸ್ತಿತ್ವದಲ್ಲಿರುವ ಖಾಯಂ ಸದಸ್ಯರಂತೆಯೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ.ಈ ಆಧಾರದ ಮೇಲೆ ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಸ್ವಾಭಾವಿಕ ಹಕ್ಕುದಾರನಾಗುತ್ತದೆ.
  6. ಭಾರತವು ತೃತೀಯ ಜಗತ್ತಿನ ರಾಷ್ಟ್ರಗಳ ನಿರ್ವಿವಾದ ನಾಯಕ ದೇಶವಾಗಿದೆ ಮತ್ತು ಇದು ‘ಅಲಿಪ್ತ ಚಳುವಳಿ’ ಮತ್ತು ಜಿ -77 ಗುಂಪಿನಲ್ಲಿ ಭಾರತ ನಿರ್ವಹಿಸಿದ ನಾಯಕತ್ವದ ಪಾತ್ರದಲ್ಲಿ ಇದು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ:

  1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 1950–51ರಿಂದ 2011–12ರವರೆಗೆ ಭಾರತವು ಏಳು ಬಾರಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
  2. 1950-51ರಲ್ಲಿ, ಕೊರಿಯನ್ ಯುದ್ಧದ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಕೊರಿಯಾ ಗಣರಾಜ್ಯದ ಸಹಾಯಕ್ಕಾಗಿ ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಲು ಭಾರತ ಅಧ್ಯಕ್ಷತೆ ವಹಿಸಿತ್ತು.
  3. 1972-73ರಲ್ಲಿ ಭಾರತವು ವಿಶ್ವಸಂಸ್ಥೆಯಲ್ಲಿ ಬಾಂಗ್ಲಾದೇಶದ ಸದಸ್ಯತ್ವಕ್ಕಾಗಿ ಬಲವಾಗಿ ಬೆಂಬಲಿಸಿತು. ಆದರೆ, ಖಾಯಂ ಸದಸ್ಯ ರಾಷ್ಟ್ರವೊಂದರ ವೀಟೋ ಕಾರಣ ದಿಂದಾಗಿ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ.
  4. 1977-78ರಲ್ಲಿ ಭಾರತವು UNSC ಯಲ್ಲಿ ಆಫ್ರಿಕಾಕ್ಕೆ ಬಲವಾದ ಧ್ವನಿಯಾಗಿ ವರ್ಣಭೇದ ನೀತಿಯ ವಿರುದ್ಧ ಮಾತನಾಡಿತು. 1978 ರಲ್ಲಿ ನಮೀಬಿಯಾದ ಸ್ವಾತಂತ್ರ್ಯಕ್ಕಾಗಿ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ UNSC ಯಲ್ಲಿ ಮಾತನಾಡಿದರು.
  5. 1984-85ರಲ್ಲಿ, ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ಪ್ಯಾಲೆಸ್ಟೈನ್ ಮತ್ತು ಲೆಬನಾನ್‌ಗಳ ವಿವಾದಗಳನ್ನು ಬಗೆಹರಿಸಲು UNSC ಯಲ್ಲಿ ಭಾರತ ಪ್ರಮುಖ ಧ್ವನಿಯಾಗಿತ್ತು.
  6. 2011-2012ರಲ್ಲಿ, ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ, ಶಾಂತಿಪಾಲನೆ, ಭಯೋತ್ಪಾದನೆ ನಿಗ್ರಹ ಮತ್ತು ಆಫ್ರಿಕಾದ ದೇಶಗಳಿಗೆ ಬಲವಾದ ಧ್ವನಿಯಾಗಿತ್ತು.
  7. ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ UNSC 1373 ಸಮಿತಿ, ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಬಗ್ಗೆ 1566 ಕಾರ್ಯನಿರತ ಗುಂಪು , ಮತ್ತು ಭಯೋತ್ಪಾದಕ ಕೃತ್ಯಗಳಿಂದ ಸುರಕ್ಷತೆ, ಮತ್ತು ಸೊಮಾಲಿಯಾ ಮತ್ತು ಎರಿಟ್ರಿಯಾಕ್ಕೆ ಸಂಬಂಧಿಸಿದ ಭದ್ರತಾ ಮಂಡಳಿ 751/1907 ಸಮಿತಿಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ.
  8. ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 1950-1951, 1967-1968, 1972-1973, 1977-1978, 1984-1985, 1991-1992 ಮತ್ತು ಇತ್ತೀಚೆಗೆ 2011-2012ರಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭದ್ರತಾ ಮಂಡಳಿಗೆ ಪ್ರವೇಶಿಸಿತ್ತು.
  9. ‘ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಪ್ರಜಾತಂತ್ರ, ಮಾನವ ಹಕ್ಕುಗಳು ಹಾಗೂ ಅಭಿವೃದ್ಧಿ ಸೇರಿದಂತೆ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಲು ಸದಾ ಶ್ರಮಿಸುತ್ತದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ.
  10. ‘ವಿಶ್ವಸಂಸ್ಥೆ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಅದರ ಆಶಯದ ಚೌಕಟ್ಟಿನಲ್ಲಿಯೇ ವೈವಿಧ್ಯವು ಪ್ರಜ್ವಲಿಸಬೇಕು ಎಂಬ ತತ್ವಕ್ಕೆ ಭಾರತ ಬದ್ಧವಾಗಿದೆ. ಇದೇ ಆಶಯದೊಂದಿಗೆ ಭಾರತ ಭದ್ರತಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಲಿದೆ’.