ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳು

Aug 06, 2022 04:08 pm By Admin

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳು


ಜಲಸಂಪನ್ಮೂಲ

 • ಕೃಷಿ ಇಳುವರಿಯನ್ನು ಹೆಚ್ಚಿಸಲು ನೀರಾವರಿಯು ಒಂದು ಪ್ರಮುಖ ಸಂಪನ್ಮೂಲವಾಗಿರುತ್ತದೆ. ಅಂತರ್ಜಲ ಮತ್ತು ಮೇಲ್ಮಜಲ ಸಂಪನ್ಮೂಲಗಳ ವಿಸ್ತರಣೆಯು ರಾಜ್ಯದಲ್ಲಿ ನೀರಾವರಿ ವಿಸ್ತೀರ್ಣವನ್ನು ಕಾಲಾನುಕಾಲಕ್ಕೆ ಹೆಚ್ಚಿಸುವಲ್ಲಿ ಸಹಕಾರಿ ಯಾಗಿರುತ್ತದೆ.
 • ರಾಜ್ಯದ ಭಾರಿ, ಮದ್ಯಮ ಮತ್ತು ಸಣ್ಣ ನೀರಾವರಿಗಳ ಸಂಚಿತ ನೀರಾವರಿ ಸಾಮರ್ಥ್ಯವು 2014-15 ರಲ್ಲಿ 38.82 ಲಕ್ಷ ಹೆಕ್ಟೇರ್‌ಗಳಷ್ಟಿದ್ದು, 2018-19 ರಲ್ಲಿ 41.17 ಲಕ್ಷ ಹೆಕ್ಟೇರ್‌ಗಳಿಗೆ ಗಣನೀಯವಾಗಿ ಅಧಿಕವಾಗಿರುತ್ತದೆ.
 • 2019–20 ನೇ ಸಾಲಿಗೆ ನಿರೀಕ್ಷಿತ ನೀರಾವರಿ ಸಾಮರ್ಥ್ಯವು 41.71 ಲಕ್ಷ ಹೆಕ್ಟೇರ್‌ಗಳಾಗಿರುತ್ತದೆ. ನಿವ್ವಳ ನೀರಾವರಿ ಕ್ಷೇತ್ರವು 1980 81ರಲ್ಲಿ 13.62 ಲಕ್ಷ ಹೆಕ್ಟೇ‌ಗಳಷ್ಟಿದ್ದು, ಇದು 2017-18 ಕ್ಕೆ 31.55 ಲಕ್ಷ ಹೆಕ್ಟೇರ್‌ಗಳಷ್ಟು ಗಣನೀಯವಾಗಿ ಏರಿಕೆಯಾಗಿರುತ್ತದೆ.
 • ಇದೇ ರೀತಿ ಒಟ್ಟು ನೀರಾವರಿ ಪ್ರದೇಶವು 1980-81ರಲ್ಲಿ 16.76 ಲಕ್ಷ ಹೆಕ್ಟೇರ್‌ಗಳಷ್ಟಿದ್ದು, 2017-18 ಕ್ಕೆ ಈ ವಿಸ್ತೀರ್ಣವು 36.39 ಲಕ್ಷ ಹೆಕ್ಟೇರ್‌ಗಳಷ್ಟು ಅಧಿಕವಾಗಿರುತ್ತದೆ. 0 ಒಟ್ಟು ಬಿತ್ತನೆಯಾದ ಪ್ರದೇಶದಲ್ಲಿ ನೀರಾವರಿಯಾದ
 • ಒಟ್ಟು ಪ್ರದೇಶದ ಶೇಕಡಾವಾರು ಪ್ರಮಾಣವು 1980-81 ರಲ್ಲಿ ಶೇ.16 ರಷ್ಟಿದ್ದು, ಇದು 2017–18ಕ್ಕೆ ಶೇ.30.34 ರಷ್ಟು ಅಧಿಕವಾಗಿದೆ. ಅಂದರೆ ಈ ಅವಧಿಯಲ್ಲಿ ಬಹುತೇಕ ನೀರಾವರಿ ವಿಸ್ತೀರ್ಣವು ದ್ವಿಗುಣವಾಗಿದೆ.
 • 40 ಹೆಕ್ಟೇರ್‌ನಿಂದ 2000 ಹೆಕ್ಟೇರ್್ರ ವರೆಗಿನ ಅಚ್ಚುಕಟ್ಟು ಹೊಂದಿರುವ ಸಣ್ಣ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಇವುಗಳಲ್ಲಿ ಕೆರೆಗಳು, ಅಣೆಕಟ್ಟುಗಳು, ಪಿಕಪ್‌ಗಳು, ಏತ ನೀರಾವರಿ ಯೋಜನೆಗಳು ಒಳಗೊಂಡಿರುತ್ತವೆ.
 • ಇವುಗಳಿಂದ 826885 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವು ಈ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಎಲ್ಲಾ ಮೂಲಗಳಿಂದ ನಿವ್ವಳ ನೀರಾಮಯಾದ ಪ್ರದೇಶದ ಪೈಕಿ, ಕೊಳವೆ/ಕೊರೆದ ಬಾವಿಗಳಿಂದ ನೀರಾವರಿಯಾಗಿರುವ ಕ್ಷೇತ್ರದ ಪಾಲು ಶೇ.44.82 ರಷ್ಟು ಅತ್ಯಧಿಕವಾಗಿದ್ದು, ನಂತರ ಶೇ.29.95ರಷ್ಟು ಪ್ರಮುಖ ನೀರಾವರಿ ಮೂಲವು ಕಾಲುವೆಯಾಗಿರುತ್ತದೆ.
 • ತೋಡಿದ ಬಾವಿಗಳಿಂದ ನೀರಾವರಿ ಯಾಗಿರುವ ಕ್ಷೇತ್ರದ ಪಾಲು ಶೇ. 9.16 ರಷ್ಟು ಆಗಿರುತ್ತದೆ, ಐತಿಹಾಸಿಕವಾಗಿ ಕೆರೆಗಳು ಪ್ರಮುಖ ನೀರಾವರಿ ಮೂಲವಾಗಿದ್ದರೂ ಸಹ, ನಿವ್ವಳ ನೀರಾವರಿ ಕ್ಷೇತ್ರದಲ್ಲಿ ಕೆರೆಗಳ ಪಾಲು ಸುಮಾರು ಶೇ.3.99ರಷ್ಟು ಆಗಿದ್ದು, ಇತರೆ ಮೂಲಗಳ ಕ್ಷೇತ್ರದ ಪಾಲು ಶೇ.12.08 ರಷ್ಟು ಆಗಿರುತ್ತದೆ.

ಕರ್ನಾಟಕ ರಾಜ್ಯ ಮರಳು ನೀತಿ 2011

 • ರಾಜ್ಯ ಸರ್ಕಾರವು ಭೌಗೋಳಿಕ ಆಕಾರ ಹಾಗೂ ಆಡಳಿತಾತ್ಮಕ ದೃಷ್ಠಿಯಿಂದ 2011ರಲ್ಲಿ ಮರಳು ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರದ ಕೆ.ಎಂ.ಎಂ.ಸಿ.ಆರ್. 1994ಕ್ಕೆ ಆಗಸ್ಟ್ 12, 2016 ರಂದು ತಿದ್ದುಪಡಿ ಮಾಡಲಾಗಿದ್ದು, 2016 ರ ತಿದ್ದುಪಡಿ ನಿಯಮದಂತೆ ಮರಳು ಗಣಿಗಾರಿಕೆಯ ಅಧಿಕಾರವನ್ನು ಪುನಃ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವಹಿಸಲಾಗಿದೆ.
 • ಹರಾಜು ಮೂಲಕ 5 ವರ್ಷಗಳ ಅವಧಿಗೆ ನಿರ್ಧಿಷ್ಠ ಮರಳು ಬ್ಲಾಕ್‌ಗಳನ್ನು ಮರಳು ಗಣಿಗಾರಿಕೆಗೆ ನೀಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 512 ಅಧಿಸೂಚಿತ ಮರಳು ಬ್ಲಾಕ್‌ಗಳಿವೆ. ಇವುಗಳ ಪೈಕಿ 18 ಮರಳು ಬ್ಲಾಕ್‌ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರಿಸಿದೆ, ಪುತ 342 ಮರಳು ಬ್ಲಾಕ್‌ಗಳನ್ನು ಸಾರ್ವಜನಿಕ ಟೆಂಡರ್ ಕಂ ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗಿರುತ್ತದೆ.
 • ಇವುಗಳ ಪೈಕಿ 236 ಮರಳು ಬ್ಲಾಕ್‌ಗಳಿಗೆ ಮರಳು ಗಣಿಗುತ್ತಿಗೆಗಳನ್ನು ಮಂಜೂರು ಮಾಡಲಾಗಿರುತ್ತದೆ. ಪಟ್ಟಾ ಜಮೀನುಗಳಲ್ಲಿ 44 ಮರಳು ಗಣಿಗಾರಿಕೆಗೆ ಲೈಸೆನ್ಸ್‌ ನೀಡಲಾಗಿರುತ್ತದೆ.
 • ಕರಾವಳಿ ನಿಯಂತ್ರಣ ವಲಯ ಪ್ರದೇಶಗಳಲ್ಲಿ ನಿಯಂತ್ರಣ ವಲಯ ನದಿ ಪಾತ್ರಗಳ ವ್ಯಾಪ್ತಿಯಲ್ಲಿ ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಕಛೇರಿ ಆದೇಶ 2011 ರಂತೆ 38 ಮರಳು ದಿಬ್ಬಗಳಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಮರಳು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆಯನ್ನು (TP) ನೀಡಲಾಗಿರುತ್ತದೆ.
 • ಮೇಲ್ಕಂಡ ಎಲ್ಲಾ ಮೂಲಗಳಿಂದ ಒಟ್ಟು ಅಂದಾಜು ಮಿ.ಮೆ.ಟನ್ ಮರಳು ಗಣಿಗಾರಿಕೆ ಮಾಡಲು ಎನ್‌ವಿರಾನ್‌ಮೆಂಟ್ 12 ಕ್ಲಿಯರೆನ್ಸ್ ಪಡೆದು ನವೆಂಬರ್-2019 ರ ಅಂತ್ಯದವರೆಗೆ 2.73 ಮಿ.ಮೆ.ಟನ್ ಮರಳನ್ನು ಗಣಿಗಾರಿಕೆ ನಡೆಸಿ, ಸಾರ್ವಜನಿಕ ಹಾಗೂ ಕಾಮಗಾರಿಗಳಿಗೆ ಪೂರೈಸಲಾಗಿರುತ್ತದೆ. ಇದರಿಂದ ರೂ.99,00 ಕೋಟಿ ರಾಯಲ್ಟಿ / ಹೆಚ್ಚುವರಿ ನಿಯತಕಾಲಿಕ ಮೊತ್ತ / ಸರಾಸರಿ ಹೆಚ್ಚುವರಿ ನಿಯತಕಾಲಿಕ ಮೊತ್ತ ಸಂಗ್ರಹವಾಗಿರುತ್ತದೆ.

ಕೈಗಾರಿಕೆ

 • ಕೈಗಾರಿಕೆಗಳು ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದು ಮುಖ್ಯವಾಗಿ ಹೆಚ್ಚಿನ ತಂತ್ರಜ್ಞಾನದ ಕೈಗಾರಿಕೆಗಳಾದ ವಿದ್ಯುತ್‌ ಹಾಗೂ ವಿದ್ಯುನ್ಮಾನ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇತ್ತೀಚಿಗೆ ನ್ಯಾನೋ ತಂತ್ರಜ್ಞಾನದ ಕೈಗಾರಿಕೆಗಳಲ್ಲಿ ರಾಜ್ಯವು ತನ್ನದೇ ಆದ ಕೊಡುಗೆಯನ್ನು ದೇಶಕ್ಕೆ ನೀಡುತ್ತಿದೆ.
 • ಒಟ್ಟಿನಲ್ಲಿ ಕರ್ನಾಟಕದ ಕೈಗಾರಿಕಾ ವಿನ್ಯಾಸವು, ಒಂದು ಕಡೆ ಆಧುನಿಕ ಉನ್ನತಮಟ್ಟದ ತಂತ್ರಜ್ಞಾನದ ಬಂಡವಾಳ ವಸ್ತುಗಳು ಹಾಗೂ ತೀವ್ರ ಜ್ಞಾನದಾಹಿ ಕೈಗಾರಿಕೆಗಳು ಮತ್ತು ಇನ್ನೊಂದೆಡೆ ಸಾಂಪ್ರದಾಯಿಕ ಗ್ರಾಹಕ ವಸ್ತುಗಳ ಕೈಗಾರಿಕೆಗಳ ಸಮ್ಮಿಶ್ರಣವಾಗಿದೆ.
 • ಕೈಗಾರಿಕಾ ಉತ್ಪಾದನೆಗಳ ಪ್ರವೃತ್ತಿಗಳ ವಿವರ: ಕರ್ನಾಟಕದಲ್ಲಿ ಗಣಿ, ಉತ್ಪಾದನಾ ಹಾಗೂ ವಿದ್ಯುತ್ ವಲಯ ಒಳಗೊಂಡಂತೆ ಕೈಗಾರಿಕಾ ಉತ್ಪಾದನಾ ಸಾಮಾನ್ಯ ಸೂಚ್ಯಂಕವು 2018-19 ರಲ್ಲಿ 201.03 ಆಗಿರುತ್ತದೆ. ಕರ್ನಾಟಕದ ಸಂಘಟಿತ ಕೈಗಾರಿಕಾ ವಲಯದಲ್ಲಿ ಸಾಮಾನ್ಯ ಸೂಚ್ಯಂಕವು 2017-18ಕ್ಕೆ ಹೋಲಿಸಿದಾಗ 2018-19 ರಲ್ಲಿ ಶೇ. 4.03 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿದ.
 • ಈ ಸಂಘಟಿತ ಕೈಗಾರಿಕಾ ವಲಯದಲ್ಲಿ ವಿದ್ಯುತ್‌ ವಲಯವು ಹೆಚ್ಚಿನ ಅಂದರೆ ಶೇ. 11.32 ರಷ್ಟು ವಾರ್ಷಿಕ ಸೂಚ್ಯಂಕ ಬೆಳವಣಿಗೆಯ ದರವನ್ನು ದಾಖಲಿಸಿದ್ದು, ನಂತರದ ಸ್ಥಾನವನ್ನು ಗಣಿ ವಲಯವು ಶೇ. 5.89ರಷ್ಟು ಮತ್ತು ತಯಾರಿಕಾ ವಲಯವು ಶೇ. 3.01 ರಷ್ಟು ಬೆಳವಣಿಗೆ ಸಾಧಿಸಿದೆ. ಇದರ ಪರಿಣಾಮವಾಗಿ ಸಾಮಾನ್ಯ ಸೂಚ್ಯಂಕದಲ್ಲಿ ಶೇ.4.03ರಷ್ಟು ಬೆಳವಣಿಗೆಯನ್ನು ಗಮನಿಸಬಹುದಾಗಿದೆ.
 • ಈ ಸಾಲಿನಲ್ಲಿ ಸಂಘಟಿತ ಕೈಗಾರಿಕಾ ವಲಯದ ಒಟ್ಟಾರೆ ಸಂಯುಕ್ತ ವಾರ್ಷಿಕ ಸೂಚ್ಯಂಕದ ಬೆಳವಣಿಗೆಯ ದರವು ಶೇ. 5.11 ರಷ್ಟು ಇದ್ದು, ಈ ಬೆಳವಣೆಗೆ ದರವು ಉತ್ಪಾದನಾ ವಲಯದಲ್ಲಿ ಶೇ. 5.46 ರಷ್ಟು ಹಾಗೂ ವಿದ್ಯುತ್‌ ವಲಯದಲ್ಲಿ ಶೇ.5.26ರಷ್ಟು ಇರುತ್ತದೆ. ರಾಜ್ಯದ ಗಣಿ ವಲಯದ ಉತ್ಪಾದನೆಯಲ್ಲಿ ಋಣಾತ್ಮಕ ಬೆಳವಣಿಗೆ ಶೇ. 1.22ರಷ್ಟು ಕಂಡು ಬಂದಿದೆ.
 • 2018-19ನೇ ಸಾಲಿನಲ್ಲಿ ನಾಲ್ಕು ಪ್ರಮುಖ ಗುಂಪುಗಳ ಪೈಕಿ ಗ್ರಾಹಕ ವಸ್ತುಗಳು ಹೆಚ್ಚಿನ ಬೆಳವಣಿಗೆ ದರ ಶೇ. 3.13ರಷ್ಟು, ಮೂಲ ವಸ್ತುಗಳು ಶೇ. 3.08ರಷ್ಟು, ಮಧ್ಯವರ್ತಿ ವಸ್ತುಗಳು ಶೇ. 3,01ರಷ್ಟು ಹಾಗೂ ಬಂಡವಾಳ ವಸ್ತುಗಳು ಶೇ. 2.69 ರಷ್ಟು ಬೆಳವಣಿಗೆ ಹೊಂದಿರುತ್ತವೆ.

ಕೈಗಾರಿಕಾ ವಾರ್ಷಿಕ ಸಮೀಕ್ಷೆ

 • ದೇಶದಲ್ಲಿ 2016-17ನೇ ಸಾಲಿನ ಒಟ್ಟು ನೋಂದಣಿಯಾದ ಕೈಗಾರಿಕಾ ಘಟಕಗಳ ಶೇ.5.68ರಷ್ಟು ಭಾಗ ಕರ್ನಾಟಕದ್ದಾಗಿದೆ ಎಂಬುವುದನ್ನು ಕೈಗಾರಿಕಾ ವಾರ್ಷಿಕ ಸಮೀಕ್ಷೆಯ ಅಂಕಿ ಅಂಶಗಳು ಸೂಚಿಸುತ್ತವೆ.
 • ಸದರಿ ಸಾಲಿನಲ್ಲಿ ನೋಂದಣಿಯಾದ ಈ ಕೈಗಾರಿಕಾ ಘಟಕಗಳು ಸ್ಥಿರ ಬಂಡವಾಳದಲ್ಲಿ ಶೇ.5.68 ರಷ್ಟು, ಒಟ್ಟು ಹುಟ್ಟುವಳಿಯಲ್ಲಿ ಶೇ.6.90 ರಷ್ಟು ಹಾಗೂ ಶೇ.7.11 ರಷ್ಟು ಒಟ್ಟು ಮೌಲ್ಯವರ್ಧಿತ (GVA) ಕೊಡುಗೆಯನ್ನು ನೀಡಿರುತ್ತವೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು

 • 2018-19ನೇ ಸಾಲಿನಲ್ಲಿ 69278 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು ರೂ.14876.98 ಕೋಟಿ ಬಂಡವಾಳದಿಂದ ರಾಜ್ಯದಲ್ಲಿ ನೋಂದಣಿಯಾಗಿದ್ದು, 582943 ಜನರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗಿದೆ.
 • 2017-18ನೇ ಸಾಲಿಗೆ ಹೋಲಿಸಿದಾಗ, 2018-19ನೇ ಸಾಲಿನಲ್ಲಿ ನೋಂದಣಿಯಾದ ಘಟಕಗಳು ಶೇ 42.89 ರಷ್ಟು ಹೆಚ್ಚಾಗಿದ್ದು, ಬ೦ಡವಾಳ ಹೂಡಿಕೆ 3.28.41 ರಷ್ಟು ಹಾಗೂ ಉದ್ಯೋಗಾವಕಾಶವು ಶೇ.32.34 ರಷ್ಟು ಹೆಚ್ಚಾಗಿರುವುದು ಕಂಡು ಬಂದಿರುತ್ತದೆ.

ರೇಷ್ಮೆ

 • ಉದ್ಯೋಗ ಸೃಜನೆಯ ಪ್ರಮುಖ ಕ್ಷೇತ್ರಗಳ ಪೈಕಿ ಮುಖ್ಯವಾಗಿ ಕರ್ನಾಟಕ ಗ್ರಾಮಾಂತರ ಪ್ರದೇಶಗಳಲ್ಲಿ ರೇಷ್ಮೆ ತಯಾರಿಕೆ ಕ್ಷೇತ್ರವು ಒಂದಾಗಿರುತ್ತದೆ. 2019-20ನೇ ಸಾಲಿನಲ್ಲಿ ನವೆಂಬರ್-2019ರ ಅಂತ್ಯಕ್ಕೆ ಹಿಪ್ಪುನೇರಳೆ ಬೆಳೆ ಕ್ಷೇತ್ರವು ರಾಜ್ಯದಲ್ಲಿ ಸುಮಾರು 1.07 ಲಕ್ಷ ಹೆಕ್ಟರ್ ಇದ್ದು, 2018-19ರ ಇದೇ ಅವಧಿಗೆ ಹೋಲಿಸಿದಾಗ, ಹೆಚ್ಚಾಗಿರುವುದು ಕಂಡುಬಂದಿರುತ್ತದೆ.
 • 2019-20ನೇ ಸಾಲಿನ ನವೆಂಬರ್-2019ರ ಅಂತ್ಯಕ್ಕೆ ರೇಷ್ಮೆ ಗೂಡಿನ ಉತ್ಪಾದನೆ 83,017 ಮೆಟ್ರಿಕ್ ಟನ್ಸ್, ರೇಷ್ಮೆ ಗೂಡುಗಳ ಮಾರಾಟ 56.001 ಮೆಟ್ರಿಕ್ ಟನ್, ಕಚ್ಚಾ ರೇಷ್ಮೆ ಉತ್ಪಾದನೆ 11.592 ಮೆಟ್ರಿಕ್ ಟನ್ ಹಾಗೂ 13.595 ಲಕ್ಷ ಉದ್ಯೋಗವಕಾಶ ಸೃಜಿಸಲಾಗಿದೆ.
 • 2018-19ನೇ ಸಾಲಿನಲ್ಲಿ ಕರ್ನಾಟಕದಲ್ಲಿ 11592.308 ಮೆಟ್ರಿಕ್ ಟನ್‌ಗಳಷ್ಟು ಹಿಪ್ಪು ನೇರಳೆ ಉತ್ಪಾದನೆಯನ್ನು ಅಂದಾಜಿಸಲಾಗಿದೆ. 2018-19 ರಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಲಿಮಿಟೆಡ್ ರೂ. 383.61 ಲಕ್ಷ ವಹಿವಾಟು ನಡೆಸಿದ್ದು, ಹಿಂದಿನ ವರ್ಷದಲ್ಲಿ (2017-18) ಈ ವಹಿವಾಟು ರೂ. 401 ಲಕ್ಷ ಆಗಿರುತ್ತದೆ. 2019 20ನೇ ಸಾಲಿನ ನವೆಂಬರ್-2019ರ ಅಂತ್ಯಕ್ಕೆ ಈ ವಹಿವಾಟು ರೂ. 346 ಲಕ್ಷಗಳಾಗಿರುತ್ತದೆ.

ಇತರೆ ನೀತಿ ಕ್ರಮಗಳು

 • ಮೊಬೈಲ್‌ ಒನ್‌ ಯೋಜನೆಯು ರಾಷ್ಟ್ರದ ಪ್ರಥಮ ಮತ್ತು ವಿಶ್ವದ ಬೃಹತ್‌ ವಿವಿಧೋದ್ದೇಶ ವ್ಯಾಪ್ತಿಯ ವಿಶೇಷ ವೈಶಿಷ್ಟ್ಯವಾದ ಆಡಳಿತ ವೇದಿಕೆಯಾಗಿದೆ ಎಂದು ಗುರುತಿಸಲ್ಪಟ್ಟಿದೆ. ಇದು ಸರ್ಕಾರ ಮತ್ತು ಖಾಸಗಿ ವಲಯದ ನಾಗರೀಕ ಸೇವೆಗಳನ್ನು ತಲುಪಿಸುವ ಏಕೀಕೃತ ಮೊಬೈಲ್ ವೇದಿಕೆ ಆಗಿರುತ್ತದೆ. ರಾಷ್ಟ್ರದಲ್ಲಿ ಯಾವುದೇ ಮೊಬೈಲ್ ಉಪಕರಣದಿಂದ “ಎಲ್ಲಿ೦ದಲಾದ ರೂ, ಯಾವ ಸಮಯದಲ್ಲಾದರೂ, ಯಾವ ಸ್ಥಳದಿಂದಾದರೂ ಮತ್ತು ಹೇಗಾದರೂ* ಸರ್ಕಾರದ ಸೇವೆಗಳನ್ನು 24x7x365 ದಿನಗಳೂ ಪಡೆಯಬಹುದಾಗಿದೆ.
 • ಕಿಯೋನಿಕ್ಸ್ ಸಂಸ್ಥೆ ರಾಜ್ಯದ ಎರಡನೇ ಶ್ರೇಣಿಯ ನಗರಗಳಾದ ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಐಟಿ ಪಾರ್ಕ್‌ನನ್ನು ಸ್ಥಾಪಿಸುವಲ್ಲಿ ಸಕ್ರಿಯವಾಗಿದೆ.
 • “ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದ (ITIR) ಯೋಜನೆಯನ್ನು” ಬೆಂಗಳೂರು ಸಮೀಪವಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಕರ್ನಾಟಕ ಹಾಗೂ ಭಾರತ ಸರ್ಕಾರ ವತಿಯಿಂದ ಮೊದಲ ಹಂತದಲ್ಲಿ ರೂ.1600 ಕೋಟಿ ಹೂಡಿಕೆಯೊಂದಿಗೆ ಸುಮಾರು 2100 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯದಲ್ಲಿ ಕಿಯೋನಿಕ್ಸ್ ಸಂಸ್ಥೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ.
 • ಒಂದು ಸಂಯೋಜಿತ ಪ್ರದೇಶದಲ್ಲಿ ಕೈಗಾರಿಕೆಗಳೊಂದಿಗೆ ಐಟಿ ಎಸ್ಇಜೆಡ್, ಎಲೆಕ್ಟ್ರಾನಿಕ್ ಹಾರ್ಡ್‌ವೇ‌ ಪಾರ್ಕ್‌ಗಳಿಗೆ ವಸತಿ ನೀಡುವ ಉದ್ದೇಶ ಹೊಂದಿದೆ.
 • ಸಾರ್ವಜನಿಕ ಉದ್ದಿಮೆ ಇಲಾಖೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂರು ಸಾರ್ವಜನಿಕ ಉದ್ದಿಮೆಗಳನ್ನು ಗುರುತಿಸಿ ಅವುಗಳ ಕಾರ್ಯಕ್ಷಮತೆಯನ್ನು ಪ್ರೇರೇಪಿಸಲು ಹಾಗೂ ಪ್ರಶಂಸಿಸಲು “ಮುಖ್ಯ ಮಂತ್ರಿಗಳ ರತ್ನ ಪ್ರಶಸ್ತಿ” ಯನ್ನು ಪ್ರತಿ ವರ್ಷವು ಆಯ್ದ ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುತ್ತಿದೆ.
 • 2019-20ನೇ ಸಾಲಿನಲ್ಲಿ ಈ 50 ಸಾರ್ವಜನಿಕ ಉದ್ದಿಮೆಗಳಿಗೆ ಅಂದರೆ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್‌ ನಿಯಮಿತ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಈ ಉದ್ದಿಮೆಗಳಿಗೆ ಸನ್ಮಾನ್ಯ ಮುಖ್ಯ ಮಂತ್ರಿಯವರ ರತ್ನ ಪ್ರಶಸ್ತಿಯನ್ನು ನೀಡಲು ಆಯ್ಕೆಯಾಗಿದೆ.

ಪ್ರವಾಸೋದ್ಯಮ

 • ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಇಲಾಖೆಯ ಆಡಳಿತದೊಂದಿಗೆ ಪ್ರಚಾರ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಕಾರ್ಯವನ್ನು ನಿರ್ವಹಿಸುತ್ತದೆ. ಈ ಇಲಾಖೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಗಳು ಬೆಂಬಲಿಸುತ್ತವೆ.
 • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ಈ ಸಮಿತಿಯು ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.
 • ರಾಜ್ಯದಲ್ಲಿ ಒಟ್ಟಾರೆ ಪಾರಂಪರಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುಕೂಲವಾಗುವಂತೆ ಪುರಾತತ್ವ ಇಲಾಖೆ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆಯನ್ನು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ತರಲಾಯಿತು, ಇದರ ಜೊತೆಗೆ “ಅತಿಥಿ” ಹೋಂ ಸ್ಟೇ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.
 • ಅನೇಕ ಕುಟುಂಬಗಳು ಈ ಹೋಂ ಸ್ಟೇ ಯೋಜನೆಯನ್ನು ಅಳವಡಿಸಿಕೊಂಡು ತಮ್ಮ ಮನೆಯ ಒಂದು ಭಾಗವನ್ನು ಅತ್ಯುತ್ತಮ ಸೌಲಭ್ಯಗಳೊಂದಿಗೆ ಪ್ರವಾಸಿಗರಿಗಾಗಿ ನೀಡಲು ಮುಂದೆ ಬರುತ್ತಿವೆ.
 • ಈ ಯೋಜನೆಯಡಿ ಕಳೆದ ಸಾಲುಗಳಲ್ಲಿ ಮಂಜೂರಾಗಿದ್ದ 1017 ವಿವಿಧ ಪ್ರವಾಸಿ ಮೂಲ ಸೌಲಭ್ಯ ಕಾಮಗಾರಿಗಳನ್ನು ಮುಂದುವರೆಸಲಾಗಿದೆ. ಇದರ ಜೊತೆಗೆ 249 ನೂತನ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಮುಂದುವರೆದ ಹಾಗೂ ನೂತನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒಟ್ಟು ರೂ.63.60 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಕಾರ್ಮಿಕ ಬಲ ಭಾಗವಹಿಸುವಿಕೆ ದರ

 • ಪ್ರಮುಖ ಚಟುವಟಿಕೆ ಸ್ಥಿತಿ ಮತ್ತು ಅಂಗ ಚಟುವಟಿಕೆ ಸ್ಥಿತಿ ವಿಧಾನದ ಪ್ರಕಾರ 15 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವ್ಯಕ್ತಿಗಳ ಕಾರ್ಮಿಕ ಬಲ ಭಾಗವಹಿಸುವಿಕೆ ದರವು ಕರ್ನಾಟಕದಲ್ಲಿ ಶೇ. 51.6 ರಷ್ಟಿದ್ದು, ಇದು ಅಖಿಲ ಭಾರತ ಮಟ್ಟದಲ್ಲಿ ಶೇ.49.8 ಇರುತ್ತದೆ. ಕರ್ನಾಟಕದ ಪುರುಷರಲ್ಲಿ ಈ ದರವು ಶೇ. 77.8 ರಷ್ಟಿದ್ದು ಲಿಂಗ ಅಂತರವು ಶೇ. 51.8 ಆಗಿರುತ್ತದೆ.
 • ಹೋಲಿಕೆ ಮಾಡಬಹುದಾದ ರಾಜ್ಯಗಳಲ್ಲಿ ಕೇರಳದಲ್ಲಿ ಇದು ಅತೀ ಕಡಿಮೆ ಇದ್ದು ಆಂಧ್ರ ಪ್ರದೇಶದಲ್ಲಿ ಅತೀ ಹೆಚ್ಚು ಇರುತ್ತದೆ. ಕರ್ನಾಟಕದ ಗ್ರಾಮೀಣ ಪುರುಷರಲ್ಲಿ ಈ ದರವು ಶೇ. 80.5 ರಷ್ಟಿದ್ದು ಇದು ಹೋಲಿಕೆ ಮಾಡಬಹುದಾದ ರಾಜ್ಯಗಳಲ್ಲಿ ಅತೀ ಹೆಚ್ಚಿನದಾಗಿರುತ್ತದೆ.
 • ಕರ್ನಾಟಕ ನಗರ ಪ್ರದೇಶದ ಮಹಿಳೆಯರಲ್ಲಿ ಈ ದರವು ಶೇ. 22.8 ಇದ್ದು ಇದು ಹೋಲಿಕೆ ಮಾಡಬಹುದಾದ ರಾಜ್ಯಗಳಲ್ಲಿ ಮೂರನೇ ಅತೀ ಕಡಿಮೆಯದಾಗಿದ್ದು, ಇದು ಅಖಿಲ ಭಾರತ ಮಟ್ಟದ ನಗರ ಪ್ರದೇಶದ ಮಹಿಳೆಯರ ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಶೇ.20.4) ಕ್ಕಿಂತ ಹೆಚ್ಚಿರುತ್ತದೆ.

ಉದ್ಯೋಗ ಮತ್ತು ಕಾರ್ಮಿಕ ಕಲ್ಯಾಣ

 • ಬಡತನ ಮತ್ತು ನಿರುದ್ಯೋಗ ನಡುವೆ ನಿಕಟ ಸಂಬಂಧವಿದೆ. ಆದ್ದರಿಂದ ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡುವ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ನಿಟ್ಟಿನಲ್ಲಿ ಉದ್ಯೋಗಗಳ ಸೃಷ್ಟಿ ಅತೀ ಮಹತ್ವ ಪಡೆದಿದೆ.
 • ಕಾರ್ಮಿಕ ಪೂರೈಕೆ ನೀತಿ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಅಂಶವು ಕಾರ್ಮಿಕ ಬಲ ಭಾಗವಹಿಸುವಿಕೆಯ ದರವಾಗಿದೆ.

ಕಾರ್ಮಿಕ ಜನಸಂಖ್ಯಾ ಪ್ರಮಾಣ

 • ಸಾಮಾನ್ಯ ಪ್ರಮುಖ ಮತ್ತು ಅಂಗ ಚಟುವಟಿಕೆ ಸ್ಥಿತಿ ವಿಧಾನದಂತೆ ಕರ್ನಾಟಕದಲ್ಲಿ ಉದ್ಯೋಗ ನಿರತರ ಜನಸಂಖ್ಯಾ ಪ್ರಮಾಣವು 49.1% ಇದ್ದು ಇದು ಅಖಿಲ ಭಾರತ ಮಟ್ಟದ ಪ್ರಮಾಣ (46.8%) ಕ್ಕಿಂತ ಹೆಚ್ಚಿದೆ. ಈ ಪ್ರಮಾಣ ಆಂಧ್ರಪ್ರದೇಶ (57.2%) ನಂತರದಲ್ಲಿ ತಮಿಳುನಾಡು (51.0%), ತೆಲಂಗಾಣ (49.8%) ರಾಜ್ಯಗಳಲ್ಲಿ ಹೆಚ್ಚಿರುತ್ತದೆ.
 • ಆದರೆ ಈ ಪ್ರಮಾಣ ಕೇರಳ (41.2%) ಮತ್ತು ಗುಜರಾತ (47.4%) ರಷ್ಟಿದ್ದು ರಾಜ್ಯಕ್ಕಿಂತ ಕಡಿಮೆಯಿರುತ್ತದೆ. ಕರ್ನಾಟಕ ರಾಜ್ಯ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಉದ್ಯೋಗ ನಿರತರ ಜನಸಂಖ್ಯಾ ಪ್ರಮಾಣವು ಕಂಡು ಬಂದಿದ್ದು, ಈ ಪ್ರಮಾಣವು ಪುರುಷರಲ್ಲಿ ಶೇ.77.2 ರಷ್ಟು ಹಾಗು ಮಹಿಳೆಯರಲ್ಲಿ ಶೇ.27.2 ರಷ್ಟಿದ್ದು, ಇವು ಕ್ರಮವಾಗಿ ಅಖಿಲ ಭಾರತ ಸರಾಸರಿ ಶೇ. 72.0 ಮತ್ತು ಶೇ. 23.7 ಕ್ಕಿಂತ ಹೆಚ್ಚಿರುತ್ತವೆ.
 • ಈ ಪ್ರಮಾಣವು ಕರ್ನಾಟಕದ ನಗರ ಪುರುಷರಲ್ಲಿ ಶೇ.69.2 ಮತ್ತು ನಗರ ಮಹಿಳೆಯರಲ್ಲಿ ಶೇ. 21.2 ರಷ್ಟಿದ್ದು, ಅಖಿಲ ಭಾರತ ಮಟ್ಟದಲ್ಲಿ ಇವು ಕ್ರಮವಾಗಿ ಶೇ.69.3 ಮತ್ತು ಶೇ.18.2 ಇರುತ್ತವೆ. ಕರ್ನಾಟಕದಲ್ಲಿ ಪುರುಷ ಮತ್ತು ಮಹಿಳೆಯರ ಕಾರ್ಮಿಕ ಜನಸಂಖ್ಯಾ ಪ್ರಮಾಣ ಕ್ರಮವಾಗಿ ಶೇ. 74.0 ಮತ್ತು ಶೇ. 24.8 ಇದ್ದು ಇವು ಅಖಿಲ ಭಾರತ ಸರಾಸರಿಗಿಂತ ಹೆಚ್ಚಿರುತ್ತವೆ.

ನಿರುದ್ಯೋಗ ದರ

 • ಸಾಮಾನ್ಯ ಪ್ರಮುಖ ಮತ್ತು ಅಂಗ ಚಟುವಟಿಕೆ ಸ್ಥಿತಿ ವಿಧಾನದಂತೆ ಗ್ರಾಮೀಣ ಮತ್ತು ನಗರಗಳೆರಡನ್ನೂ ಒಟ್ಟಗೂಡಿಸಿದ ಕರ್ನಾಟಕ ರಾಜ್ಯದ ನಿರುದ್ಯೋಗ ದರವು ಶೇ. 4.8 ಇದ್ದು, ಇದು ಭಾರತದ ನಿರುದ್ಯೋಗ ದರ ಶೇ. 6.0 ಕ್ಕಿಂತ ಕಡಿಮೆ ಇದೆ. ಹೋಲಿಕೆ ಮಾಡಬಹುದಾದ ರಾಜ್ಯಗಳಲ್ಲಿ ಅತಿ ಕಡಿಮೆ ನಿರುದ್ಯೋಗ ದರ ಆಂಧ್ರ ಪ್ರದೇಶದಲ್ಲಿ (ಶೇ.4.5) ಕಂಡುಬಂದಿದ್ದು, ಅತಿ ಹೆಚ್ಚಿನ ದರವು ಕೇರಳದಲ್ಲಿ (ಶೇ. 11.4) ಕಂಡುಬಂದಿರುತ್ತದೆ.
 • ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ದರವು ಪುರುಷರಲ್ಲಿ ಶೇ. 4.0 ಹಾಗು ಮಹಿಳೆಯರಲ್ಲಿ ಶೇ. 3.4 ರಷ್ಟಿದ್ದು, ನಗರ ಪ್ರದೇಶದಲ್ಲಿ ನಿರುದ್ಯೋಗ ದರ ಪುರುಷರಲ್ಲಿ ಶೇ. 6.3 ಹಾಗು ಮಹಿಳೆಯರಲ್ಲಿ ಶೇ. 7.2 ಕಂಡುಬಂದಿರುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ದರ ಪುರುಷರಲ್ಲಿ ಶೇ. 5.7 ಹಾಗೂ ಮಹಿಳೆಯರಲ್ಲಿ ಶೇ. 3.8 ರಷ್ಟಿದ್ದು, ಇವು ನಗರ ಪ್ರದೇಶದ ಸರಾಸರಿಗಿಂತ ಕಡಿಮೆ ಇರುತ್ತವೆ.

ಉದ್ಯೋಗ ಸ್ಥಿತಿ ಪ್ರಕಾರ ಕಾರ್ಮಿಕರ ವಿಂಗಡಣೆ

 • ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವಂತ ಉದ್ಯೋಗಿಗಳಿದ್ದು (ಶೇ. 47.8), ನಂತರದ ಸ್ಥಾನದಲ್ಲಿ ಸಾಮಾನ್ಯ ಕಾರ್ಮಿಕರು ಶೇ. 26.8, ಕೂಲಿ/ವೇತನ ಉದ್ಯೋಗಿಗಳು ಶೇ. 25.4 ರಷ್ಟು ಇರುವುದು ಕಂಡು ಬಂದಿರುತ್ತದೆ.
 • ಕರ್ನಾಟಕದಲ್ಲಿ ಸಾಮಾನ್ಯ ಕಾರ್ಮಿಕರು ಅಖಿಲ ಭಾರತದ ಶೇ. 24.9 ಕ್ಕಿಂತ ಹಾಗು ಕೂಲಿ ಕಾರ್ಮಿಕರು ಶೇ. 22.8 ಕ್ಕಿಂತ ಹೆಚ್ಚು ಇರುವುದು ಕಂಡು ಬಂದಿರುತ್ತದೆ. ಇದು ಈ ವರ್ಗದ ಕಾರ್ಮಿಕರಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳ ಬಗೆಗಿನ ಕಾಳಜಿಯನ್ನು ಹೆಚ್ಚಿಸುತ್ತದೆ.

ಉದ್ಯೋಗ ವಿನಿಮಯ ಅಂಕಿ-ಅಂಶಗಳು

 • ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಉದ್ಯೋಗಕ್ಕಾಗಿ ನೋಂದಾಯಿಸಿದವರ ಸಂಖ್ಯೆಯು ನವೆಂಬರ್-2019 ರಲ್ಲಿ 3,46 ಲಕ್ಷ ಇದ್ದು ಮಾರ್ಚ್-2019ಕ್ಕೆ ಇದ್ದ 3.43 ಲಕ್ಷಕ್ಕೆ ಹೋಲಿಸಿದರೆ ಇದು ಶೇ.0.7 ರಷ್ಟು ಏರಿಕೆಯಾಗಿರುವುದು ಕಂಡು ಬರುತ್ತದೆ.
 • ಮಾರ್ಚ್-2019 ಕ್ಕೆ ಹೋಲಿಸಿದರೆ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದವರ ದಾಖಲಾತಿ ಪ್ರಮಾಣ ಶೇ.5.8 ರಷ್ಟು, ಹತ್ತನೇ ತರಗತಿ ಮತ್ತು ಶೀಘ್ರಲಿಪಿಗಾರರ ದಾಖಲಾತಿ ಪ್ರಮಾಣ ಶೇ.3.3ರಷ್ಟು, ಮತ್ತು ಪದವಿ ಶಿಕ್ಷಣ ಪಡೆದವರ ದಾಖಲಾತಿ ಪ್ರಮಾಣ ಶೇ.1.8ರಷ್ಟು ಏರಿಕೆಯಾಗಿದೆ.

ಸರ್ಕಾರದ ಉಪಕ್ರಮಗಳು

 • ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರದ ಸಾಮರ್ಥ್ಯ ವೃದ್ಧಿ, ಸ್ವಯಂ ಉದ್ಯೋಗ ಹಾಗೂ ವೇತನ ಉದ್ಯೋಗ ಕಾರ್ಯಕ್ರಮಗಳ ಮೂಲಕ ಮಹತ್ವದ ಮದ್ಯಸ್ಥಿಕೆಗಳಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಕಾರ್ಮಿಕ ಬಲ ಭಾಗವಹಿಸುವಿಕೆ ಪ್ರಮಾಣ ಹಾಗೂ ಕಡಿಮೆ ನಿರುದ್ಯೋಗ ಪ್ರಮಾಣ ಇರಲು ಸಾದ್ಯವಾಗಿರುತ್ತದೆ.
 • ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು, ಕಾರ್ಮಿಕರ ಕಾನೂನುಗಳ ಜಾರಿಗೆ ಹಾಗೂ ಕೈಗಾರಿಕಾ ಸಂಬಂಧಗಳ ನಿರ್ವಹಣೆಗೆ ಹಾಗೂ ಕೈಗಾರಿಕಾ ಸುರಕ್ಷತೆಯ ನಿರ್ವಹಣೆಗೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದು ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣವನ್ನು ಉತ್ತೇಜಿಸಲು ಸಹಕಾರಿಯಾಗಿದೆ.

ಆರ್ಥಿಕ ಮೂಲಭೂತ ಸೌಕರ್ಯಗಳು ವಿದ್ಯುಚ್ಛಕ್ತಿ ವಲಯ

 • ತೀವ್ರ ಗತಿಯ ಆರ್ಥಿಕ ಪ್ರಗತಿಯ ಪ್ರಭಾವದಿಂದಾಗಿ ನಿರಂತರ ಏರುತ್ತಿರುವ ವಿದ್ಯುತ್‌ ಬೇಡಿಕೆಯ ಕಾರಣದಿಂದ ಕರ್ನಾಟಕ ರಾಜ್ಯವು ವಿದ್ಯುತ್‌ ಕೊರತೆಯ ಪರಿಸ್ಥಿತಿಯನ್ನು ಅನುಭವಿಸುತ್ತಿದೆ.
 • ರಾಜ್ಯ ಸರ್ಕಾರವು ವಿದ್ಯುತ್‌ ಉತ್ಪಾದನೆಗಾಗಿ ಹೊಸ ಸ್ಥಾಪಿತ ಸಾಮರ್ಥ್ಯ ಸೇರ್ಪಡೆಗಾಗಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಹಾಗೂ ವಿದ್ಯುತ್‌ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಿದೆ.
 • ಕೇಂದ್ರ ಸರ್ಕಾರದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ರಾಜ್ಯದ ಪಾಲನ್ನು ಒಳಗೊಂಡಂತೆ, ರಾಜ್ಯದಲ್ಲಿ ಸಾರ್ವಜನಿಕ ಕ್ಷೇತ್ರ ಮತ್ತು ಖಾಸಗಿ ಕ್ಷೇತ್ರಗಳ ಒಟ್ಟು ವಿದ್ಯುತ್‌ ಸ್ಥಾಪಿತ ಸಾಮರ್ಥ್ಯವು ನವೆಂಬರ್ 2019 ರವರೆಗೆ 29884.50 ಮೆಗಾ ವ್ಯಾಟ್ ಆಗಿದ್ದು, ಕಳೆದ ಸಾಲಿನ ಇದೇ ಅವಧಿಯಲ್ಲಿ ಇರುವುದಕ್ಕಿಂತ ಶೇಕಡಾ 11.33 ರಷ್ಟು ಹೆಚ್ಚಾಗಿದೆ.
 • ಸಾರ್ವಜನಿಕ ಕ್ಷೇತ್ರದ ಸ್ಥಾಪಿತ ಸಾಮರ್ಥ್ಯವು 12979 ಮೆ.ವ್ಯಾ. ‘ (ಶೇ.43.43) (ಕೇಂದ್ರ ಸರ್ಕಾರದ ವಿದ್ಯುತ್ ಉತ್ಪಾದನಾ ಘಟಕಗಳ ಹಂಚಿಕೆಯೂ ಸೇರಿ) ಮತ್ತು ಖಾಸಗಿ ಕ್ಷೇತ್ರದ ಪಾಲು 16905.50 ಮೆ.ವ್ಯಾ. (ಶೇ.56.57) ಆಗಿರುತ್ತದೆ.
 • ಒಟ್ಟು ಸ್ಥಾಪಿತ ಸಾಮರ್ಥ್ಯವಾದ 29884.50 ಮೆ.ವ್ಯಾ. ನಲ್ಲಿ 14761.20 ಮೆ.ವ್ಯಾ. ನಷ್ಟು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರ (ಕಿರು ಜಲವಿದ್ಯುತ್‌ ಹಾಗೂ ಸಹ ಉತ್ಪಾದನೆಯನ್ನು ಒಳಗೊಂಡು), ಪಾಲು ಶೇ.49.39 ಆಗಿರುತ್ತದೆ. ಪವನ ವಿದ್ಯುತ್‌ ಸ್ಥಾಪಿತ ಸಾಮರ್ಥ್ಯವು 4817.84 ಮೆ.ವ್ಯಾ ಆಗಿದ್ದು, ಇದು ಕಲ್ಲಿದ್ದಲು ಶಾಖೋತ್ಪನ್ನ ಮತ್ತು ಸೌರ ವಿದ್ಯುತ್ ಸ್ಥಾಪಿತ ಹೆಚ್ಚಿನದಾಗಿರುತ್ತದೆ.
 • 2018-19 ರ ಆರ್ಥಿಕ ವರ್ಷದಲ್ಲಿ 2705.54 ಮೆ.ವ್ಯಾ. ನಷ್ಟು ಸಾಮರ್ಥ್ಯ ಸೇರ್ಪಡೆಯಾಗಿದ್ದು, ಇದರಲ್ಲಿ 1253.06 ಮೆ.ವ್ಯಾ. ಸಾಮರ್ಥ್ಯ ಸೇರ್ಪಡೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಆಗಿರುತ್ತದೆ.
 • 2019-20 ನೇ ಸಾಲಿನಲ್ಲಿ (ನವೆಂಬರ್ 2019 ರವರೆಗೆ) ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಾಮರ್ಥ್ಯ ಸೇರ್ಪಡೆ 1183.83 ಮೆ.ವ್ಯಾ ಆಗಿದ್ದರೂ ಸಹ ಕೇಂದ್ರ ಸರ್ಕಾರದ ವಿದ್ಯುತ್‌ ಉತ್ಪಾದನಾ ಘಟಕಗಳ ಹಂಚಿಕೆ ಕಡಿಮೆ ಮಾಡಿರುವುದರಿಂದ ಒಟ್ಟು ಸ್ಥಾಪಿತ ಸಾಮರ್ಥ್ಯಕ್ಕೆ ನಿವ್ವಳ ಸೇರ್ಪಡೆ 1143.83 ಮೆ.ವ್ಯಾ. ನಷ್ಟು ಮಾತ್ರ ಆಗಿರುತ್ತದೆ.
 • 2018-19 ರಲ್ಲಿ ಈಡೇರಿಸಿದ ಅತ್ಯಧಿಕ ಬೇಡಿಕೆಯು 12881 ಮೆ.ವ್ಯಾ. ಆಗಿದ್ದು, 2019-20 ರಲ್ಲಿ ನಿರೀಕ್ಷಿತ ಅತ್ಯಧಿಕ ಬೇಡಿಕೆಯು ಸುಮಾರು 13796 ಮೆ.ವ್ಯಾ. ಆಗಿರುತ್ತದೆ.
 • ಪ್ರಸ್ತುತ ವರ್ಷದಲ್ಲಿ ನವೆಂಬರ್-2019 ರವರೆಗೆ ವಿದ್ಯುತ್ ಉತ್ಪಾದನೆಯು 33496.45 ಮಿಲಿಯನ್ ಯೂನಿಟ್ ಆಗಿರುತ್ತದೆ. 2018-19 ರಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯು 51184.31 ಮಿ.ಯೂ. ಆಗಿದ್ದು, 2017-18 ರಲ್ಲಿನ ಒಟ್ಟು ವಿದ್ಯುತ್ ಉತ್ಪಾದನೆಯಾದ 43546.30 ಮಿ.ಯೂ. ಗಿಂತ ಶೇ. 17.5 ರಷ್ಟು ಹೆಚ್ಚಾಗಿರುತ್ತದೆ.
 • ರಾಜ್ಯದ ಸಾರ್ವಜನಿಕ ಕ್ಷೇತ್ರದಲ್ಲಿ ಜಲ ವಿದ್ಯುತ್‌ ಮತ್ತು ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯು ಸುಮಾರು 1:2 ರ ಅನುಪಾತದಲ್ಲಿದೆ. ಕರ್ನಾಟಕವು ಅಸಾಂಪ್ರದಾಯಿಕ ಅಥವಾ ನವೀಕರಿಸ ಬಹುದಾದ ಇಂಧನ ಉತ್ಪಾದನಾ ಮೂಲಗಳಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಯಶಸ್ವಿಯಾಗಿ ಪ್ರೋತ್ಸಾಹಿಸಿದೆ. ರಾಜ್ಯದಲ್ಲಿ ಕೆಲವು ಪ್ರಮುಖ ಖಾಸಗಿ ಸ್ವಾಯತ್ತ ವಿದ್ಯುತ್ ಉತ್ಪಾದಕರುಗಳು ಇದ್ದು, 2018-19 ರಲ್ಲಿ ಸ್ಥಾಪಿತ ಸಾಮರ್ಥ್ಯಕ್ಕೆ ಅವರ ಕೊಡುಗೆಯು 15721.67 ಮೆ.ವ್ಯಾ. ಆಗಿರುತ್ತದೆ.
 • ಕರ್ನಾಟಕದ ವಿದ್ಯುತ್‌ ಕ್ಷೇತ್ರವು 2009-10 ರಲ್ಲಿ ಶೇ.22 ರಷ್ಟಿದ್ದ ಅದರ ಪ್ರಸರಣ ಮತ್ತು ವಿತರಣೆ ನಷ್ಟವನ್ನು 2018-19 ರಲ್ಲಿ ಶೇ.16.16 ಕ್ಕೆ ತಗ್ಗಿಸಿದ್ದು, ಮಾರ್ಚ್ 2020 ರ ವೇಳೆಗೆ ಇದನ್ನು ಇನ್ನೂ ಸುಮಾರು ಶೇ.15 ಕ್ಕೆ ತಗ್ಗಿಸುತ್ತದೆ. 2009-10 ರಲ್ಲಿ ಶೇ.23 ರಷ್ಟು ಇದ್ದ ಒಟ್ಟಾರೆ ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು 2018-19 ರಲ್ಲಿ ಶೇ.15.27 ಕ್ಕೆ ಇಳಿಸಲಾಗಿರುತ್ತದೆ.
 • ವಿದ್ಯುತ್‌ ವಿತರಣೆಯನ್ನು ಸುಧಾರಿಸಲು, ‘ಏಕೀಕೃತ ವಿದ್ಯುತ್ ಅಭಿವೃದ್ಧಿ ಯೋಜನೆ’ ಮತ್ತು ‘ದೀನ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ’ ಎಂಬ ಎರಡು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
 • 2018-19 ನೇ ಸಾಲಿನಲ್ಲಿ ಕೃಷಿ ಕ್ಷೇತ್ರವು ವಿದ್ಯುತ್‌ ಬಳಕೆಯಲ್ಲಿ ಅತೀ ಹೆಚ್ಚಿನ ಪಾಲನ್ನು ಹೊಂದಿದ್ದು, ಇದು ಶೇ.38.98 ರಷ್ಟು ಆಗಿರುತ್ತದೆ ಮತ್ತು ಶೇ. 22.14 ರಷ್ಟು ಪಾಲನ್ನು ಹೊಂದಿರುವ ಗೃಹ ಬಳಕೆಯು ವಿದ್ಯುತ್‌ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಎಲ್ಲಾ ಹಳ್ಳಿಗಳ ವಿದ್ಯುದೀಕರಣವು ಪೂರ್ಣಗೊಂಡಿದೆ. ಕೃಷಿ ವಲಯ ಮತ್ತು ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್‌ ಪೂರೈಕೆಯ ಸಂಪೂರ್ಣ ವೆಚ್ಚವನ್ನು ಸಹಾಯಧನದ ಮೂಲಕ ರಾಜ್ಯ ಸರ್ಕಾರವು ಭರಿಸುತ್ತಿದೆ.
 • 2018-19 ರಲ್ಲಿ ರಾಜ್ಯ ಸರ್ಕಾರವು ರೂ. 9250 ಕೋಟಿಗಳಷ್ಟು ಸಹಾಯಧನ ನೀಡಿದ್ದು, 2019-20 ರಲ್ಲಿ (ನವೆಂಬರ್-2019 ರವರೆಗೆ) ರೂ.7285.96 ಕೋಟಿಗಳ ಸಹಾಯಧನದ ಒದಗಿಸಿದೆ. ಹೆಚ್ಚಾಗುತ್ತಿರುವ ಸಹಾಯಧನದ ಹೊರೆಯು ರಾಜ್ಯಕ್ಕೆ ಒಂದು ಸವಾಲಾಗಿ ಉಳಿದಿದೆ.

ಗ್ರಾಮೀಣ ಇಂಧನ

 • ರಾಜ್ಯದ ಜಾನುವಾರುಗಳ ಸಂಖ್ಯೆ ಆಧಾರದಲ್ಲಿ 6.80ಲಕ್ಷ ಜೈವಾನಿಲ ಘಟಕಗಳನ್ನು ನಿರ್ಮಿಸಬಹುದಾಗಿದ್ದು, ಇದರಲ್ಲಿ ನವೆಂಬರ್-2019 ರವರೆಗೆ 4.59ಲಕ್ಷ ಜೈವಾನಿಲ ಘಟಕಗಳನ್ನು ನಿರ್ಮಿಸಲಾಗಿರುತ್ತದೆ. ಫಲಾನುಭವಿಗಳನ್ನು ಗ್ರಾಮ ಪಂಚಾಯತ್ ಹಂತದಲ್ಲಿ ‘ನವ ರಾಷ್ಟ್ರೀಯ ಜೈವಿಕ ಇಂಧನ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮ’ದಡಿ ಆಯ್ಕೆ ಮಾಡಲಾಗುತ್ತದೆ.
 • ಜೈವಿಕ ಇಂಧನ ಚಟುವಟಿಕೆಗಳನ್ನು ‘ಕರ್ನಾಟಕ ಜೈವಿಕ ಇಂಧನ ನೀತಿ 2009’ ರಡಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ. ಸೌರ ಶಕ್ತಿಬಳಸಿಕೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಲು ಕರ್ನಾಟಕ ಸರ್ಕಾರವು 2014-2021 ರ ಅವಧಿಗೆ ತನ್ನ ಸೌರ ನೀತಿ ಯನ್ನು ಪ್ರಕಟಿಸಿದೆ.
 • ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 2050 ಮೆ.ವ್ಯಾ. ಸಾಮರ್ಥ್ಯದ ಪ್ರಪಂಚದ ಅತೀ ದೊಡ್ಡ ಸೌರ ಶಕ್ತಿ ಪಾರ್ಕ್‌ ಸ್ಥಾಪನೆಗಾಗಿ ಸುಮಾರು 12,900 ಎಕರೆ ಭೂಮಿಯನ್ನು ಗುತ್ತಿಗೆಯ ಆಧಾರದ ಮೇಲೆ ರೈತರಿಂದ ಸ್ವಾಧೀನ ಮಾಡಿಕೊಳ್ಳಲಾಗಿದೆ. ಸೌರ ಶಕ್ತಿ ಪಾರ್ಕ್‌ನಲ್ಲಿ 2019-20 ನೇ ಸಾಲಿನ ನವೆಂಬರ್ ಅಂತ್ಯದವರೆಗೆ 1950 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳನ್ನು ಕಾರಾರಂಭಗೊಳಿಸಲಾಗಿರುತ್ತದೆ.
 • ಉಳಿದ 100 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳನ್ನು ತ್ವರಿತವಾಗಿ ಕಾರಾರಂಭಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯವು ತನ್ನಲ್ಲಿನ ಇಂಧನ ಕೊರತೆಯನ್ನು ನೀಗಿಸಲು ಪರಿಣಾಮಕಾರಿ ಬೇಡಿಕೆ ಮತ್ತು ಪೂರೈಕೆ ತಂತ್ರಗಳನ್ನು ರೂಪಿಸುತ್ತಿದೆ.
 • ಈ ‘ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ ಮತ್ತು ಡ್ಯಾಶ್ ಬೋರ್ಡ್ 2019-20’ ಈ ಪ್ರಕಾರ ಸುಸ್ಥಿರ ಅಭಿವೃದ್ಧಿ ಗುರಿ-7 (ಎಲ್ಲರಿಗೂ ಕೈಗೆಟುಕಬಲ್ಲ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನದ ಲಭ್ಯತೆಯನ್ನು ಖಾತ್ರಿಗೊಳಿಸುವುದು) ನ್ನು ಸಾಧಿಸುವಲ್ಲಿ ಕರ್ನಾಟಕವು ದೇಶದಲ್ಲಿ 7 ನೇ ಸ್ಥಾನದಲ್ಲಿದೆ.

ನಬಾರ್ಡ್ ಆರ್.ಐ.ಡಿ.ಎಫ್-24 (2018-19)

 • 2018-19ನೇ ಸಾಲಿಗೆ ಈ ಯೋಜನೆಯಡಿ ರೂ.1428375 ಲಕ್ಷಗಳ ಅಂದಾಜು ಮೊತ್ತಕ್ಕೆ 146 ರಸ್ತೆ ಕಾಮಗಾರಿಗಳು ಹಾಗೂ 740.00 ಲಕ ರೂಗಳ ಅಂದಾಜು ಮೊತ್ತಕ್ಕೆ 7 ಸೇತುವೆ ಕಾಮಾಗಾರಿಗಳು ಅನುಮೋದನೆಯಾಗಿರುತ್ತದೆ. ಅನುಮೋದನೆಯಾಗಿರುವ 146 ಕಾಮಗಾರಿಗಳ ಪೃತಿ 22 ಕಾಮಗಾರಿಗಳು ಮುಕ್ತಾಯಗೊಂಡಿವೆ, 66 ಕಾಮಗಾರಿಗಳು ಪ್ರಗತಿಯಲ್ಲಿವೆ. 54 ಕಾಮಗಾರಿಗಳು ಪ್ರಾರಂಭವಾಗಬೇಕಾಗಿದೆ ಮತ್ತು 4 ಕಾಮಗಾರಿಗಳನ್ನು ಬೇರೆ ಇಲಾಖೆಗಳಿಂದ ವಿವಿಧ ಯೋಜನೆಗಳಡಿ ಅನುಷ್ಠಾನ ಗೊಂಡಿರುವುದರಿಂದ ಕೈ ಬಿಡಲಾಗಿದೆ.
 • 7 ಸೇತುವೆ ಕಾಮಗಾರಿಗಳ ಪೈಕಿ 4 ಕಾಮಗಾರಿಗಳು ಪ್ರಗತಿಯಲ್ಲಿವೆ ಮತ್ತು 3 ಕಾಮಗಾರಿಗಳು ಪ್ರಾರಂಭವಾಗಬೇಕಾಗಿದೆ. ಕರ್ನಾಟಕ ರಸ್ತೆ ಸುರಕ್ಷತಾ 20158 ನೀತಿಯಂತೆ 2020ರ ವೇಳೆಗೆ ಶೇ. 25ರಷ್ಟು ರಸ್ತೆ ಅಪಘಾತಗಳನ್ನು ಮತ್ತು ಶೇ 30ರಷ್ಟು ಜೀವಹಾನಿಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರವು (PRAMC) 2019-20ನೇ ಸಾಲಿನ ಕ್ರಿಯಾಯೋಜನೆಯಲ್ಲಿ 110 ಕಪ್ಪು ಸ್ಥಳಗಳ/ಕಾರಿಡಾರ್ / ಸಂಭವನೀಯ ಅಪಘಾತ ಸ್ಥಳಗಳ/ ಸುಧಾರಣೆಯನ್ನು ಕೈಗೊಳ್ಳಲು ಉದ್ದೇಶಿಸಿರುತ್ತದೆ.

ರಸ್ತೆಗಳು, ಸಾರಿಗೆ, ಮೂಲಭೂತ ಸೌಕರ್ಯಗಳು ಹಾಗೂ ಸಂಪರ್ಕಗಳು ರಸ್ತೆ ಅಭಿವೃದ್ಧಿ

 • ರಸ್ತೆ ಅಭಿವೃದ್ಧಿಯು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಿದೆ ಆದ್ದರಿಂದ ಇದು ರಾಜ್ಯದ ಆದ್ಯತೆಯ ಕ್ಷೇತ್ರವಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಗಳ (ಅಂದರೆ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳು) ಪ್ರತಿ 100 ಚ.ಕಿ.ಮೀ. ವಿಸ್ತೀರ್ಣಕ್ಕೆ ಪರಿಗಣಿಸಿದಾಗ ರಾಜ್ಯದ ಸರಾಸರಿ ರಸ್ತೆಯ ಉದ್ದವು 40.07 ಕಿ.ಮೀ. ಇರುತ್ತದೆ.
 • ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಬಹುಪಾಲು ರಾಜ್ಯ ಹೆದ್ದಾರಿಗಳು ಶೇಕಡಾ 99.50ರಷ್ಟು ಹಾಗೂ ಸುಮಾರು ಶೇ.98.41 ಜಿಲ್ಲಾ ಮುಖ್ಯ ರಸ್ತೆಗಳು ಡಾಂಬರು ಮೇಲೆ ಹೊಂದಿರುತ್ತವೆ.
 • ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆಗಳು ಮತ್ತು ಮಾಡಿದ ಪ್ರಗತಿ ಹೀಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ-III, ರ ಯೋಜನೆಯಡಿ 2795 ಕಿಮೀ ರಾಜ್ಯ ಹೆದ್ದಾರಿಗಳು ಹಾಗೂ 1520 ಕಿಮಿ ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿಯನ್ನು 3500 ಕೋಟಿ ರೂ. ಮೊತ್ತದಲ್ಲಿ 127 ಪ್ಯಾಕೇಜ್‌ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
 • ಎಸ್‌ ಹೆಚ್‌ಡಿಪಿ-IV, ರ ಯೋಜನೆಯಡಿ 7800 ಕಿಮೀ ಉದ್ದದ ರಸ್ತೆ ಅಭಿವೃದ್ಧಿಯನ್ನು 10,000 ಕೋಟಿ ರೂ. ಮೊತ್ತದಲ್ಲಿ 3 ಘಟ್ಟಗಳಲ್ಲಿ ಅನುಷ್ಠಾನಗೊಳಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.
 • ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ-II ರಡಿ ವಿಶ್ವ ಬ್ಯಾಂಕ್ ನೆರವಿನಿಂದ 834 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಗೊಳಿಸಬೇಕಾಗಿದ್ದು, ನವೆಂಬರ್-2019ರ ಅಂತ್ಯಕ್ಕೆ ಈಗಾಗಲೇ 823 ಕಿಮೀ ಉದ್ದಳತೆಯ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ.
 • ಏಷ್ಯಾನ್ ಡೆವಲೆಪ್ ಮೆಂಟ್ ಬ್ಯಾಂಕ್ ಅಡಿಯಲ್ಲಿ 616 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದ್ದು, ನವೆಂಬರ್-2019ರ ಅಂತ್ಯಕ್ಕೆ ರೂ, 1926 ಕೋಟಿಗಳನ್ನು ವೆಚ್ಚಮಾಡಲಾಗಿದೆ, 614 ಕಿ.ಮೀ. ಅಭಿವೃದ್ಧಿಗೊಳಿಸಲಾಗಿದೆ. ಕೇಶಿಪ್-III ಯೋಜನೆಯಡಿ ಏಷ್ಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ನೆರವಿನಡಿ ಒಟ್ಟು ಅಂದಾಜು ಮೊತ್ತ ರೂ.5334 · ಕೋಟಿಗಳಲ್ಲಿ 418 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದ್ದು, ಸದರಿ ಯೋಜನೆಯನ್ನು ಡಿಸೆಂಬರ್ 2019ರಿಂದ ಪ್ರಾರಂಭಿಸಲಾಗಿದೆ.
 • ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆ.ಆರ್.ಡಿ. ಸಿ.ಎಲ್) ಈ ಸಂಸ್ಥೆಯು 686 ಸೇತುವೆಗಳ ನಿರ್ಮಾಣ ಕಾಮಾಗಾರಿಗಳನ್ನು ಪೂರ್ಣಗೊಳಿಸಿ ಹಾಗೂ 1561 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಿದೆ. ಮುಂದುವರೆದು, ವಿಶ್ವಬ್ಯಾಂಕ್ ಸಹಯೋಗದಡಿ 361 ಕಿಮೀಗಳ .. ರಾಜ್ಯ ಹೆದ್ದಾರಿಯನ್ನು Co-financing (annuity) ರಡಿ ರೂ.1095 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಗ್ರಾಮೀಣ ರಸ್ತೆಗಳು

 • ಕರ್ನಾಟಕದಲ್ಲಿ 190862 ಕಿ.ಮೀ. ಗ್ರಾಮೀಣ ರಸ್ತೆಯಿರುತ್ತದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಮತ್ತು RIDF ಯೋಜನೆಗಳಡಿ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿದೆ.
 • ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 2019 20ನೇ ಸಾಲಿನ ಆಯವ್ಯಯದಲ್ಲಿ ಒಟ್ಟು ರೂ. 27513,56 ಲಕ್ಷಗಳನ್ನು ನಿಗದಿಪಡಿಸಲಾಗಿದೆ, ಸದರಿ ಅನುದಾನವನ್ನು ಡಾ|| ನಂಜುಂಡಪ್ಪ ವರದಿ ಪ್ರಕಾರ ರಸ್ತೆಗಳ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿಗಳಿಗೆ ಹಂಚಿಕೆ ಮಾಡಲಾಗಿದೆ. ರಸ್ತೆ ಸಾರಿಗೆ
 • ಕರ್ನಾಟಕವು ವಿವಿಧ ಆದಾಯ ವರ್ಗಗಳ ಜನರಿಗೆ ರಾಜ್ಯದೆಲ್ಲೆಡೆ ಹಾಗೂ ನೆರೆ ರಾಜ್ಯಗಳಲ್ಲಿಯೂ ಸಹ ದಕ್ಷ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಕಲ್ಪಿಸುತ್ತಿದೆ. ಕರ್ನಾಟಕ ಸರ್ಕಾರವು ರಸ್ತೆ ಸಾರಿಗೆ ಸಂಸ್ಥೆಯನ್ನು ನಾಲ್ಕು ಪ್ರತ್ಯೇಕ ಸಾರಿಗೆ ಸಂಸ್ಥೆಗಳನ್ನಾಗಿ ವಿಭಜಿಸಿರುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

 • 2019-20 ನೇ ಸಾಲಿನಲ್ಲಿ (ನವೆಂಬರ್-2019ರ ಅಂತ್ಯಕ್ಕೆ) ನಿಗಮವು 8535 ವಾಹನಗಳ ಮೂಲಕ 8145 ಅನೂಸೂಚಿಗಳನ್ನು ಕಾರ್ಯಾಚರಣೆಗೊಳಿಸಿ ದಿನಂಪ್ರತಿ 29.26 ಲಕ್ಷ ಕಿಮೀ ಚಲಾಯಿಸಿ ರೂ. 947.83 ಲಕ್ಷಗಳ ಒಟ್ಟು ಆದಾಯಗಳಿಸಿ, ದಿನಂಪ್ರತಿ 29,65 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ದಿರುತ್ತದೆ. ನಿಗಮವು 38880 ಸಿಬ್ಬಂದಿಗಳನ್ನು ಹೊಂದಿರುತ್ತದೆ. ಪ್ರಸಕ್ತ ಸಾಲಿನ ಅವಧಿಯಲ್ಲಿ ವಾಹನ ಬಳಕೆಯು 93.0ಕ್ಕೆ ಹೆಚ್ಚಳವಾಗಿರುತ್ತದೆ. ನಿಗಮವು 162 ಹೊಸ ವಾಹನಗಳನ್ನು ಸೇರ್ಪಡೆಗೊಳಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

 • 2019-20ನೇ ಸಾಲಿನಲ್ಲಿ (ನವೆಂಬರ್ 2019 ರವರೆಗೆ) 6447 ವಾಹನಗಳ ಬಳಕೆಯ ಮೂಲಕ 6191 ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಿ, ಪ್ರತಿದಿನ ಸುಮಾರು 11.38 ಲಕ್ಷ ಕಿಮೀಗಳಷ್ಟು ಕ್ರಮಿಸಿ ದಿನವಹಿ ರೂ. 5.13 ಕೋಟಿ ಸಾರಿಗೆ ಆದಾಯವನ್ನು ಗಳಿಸಿರುತ್ತದೆ.
 • ಮಹಿಳಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ 25 ಪಿಂಕ್ ಸಾರಥಿ ವಾಹನಗಳನ್ನು ನಿರ್ಭಯ ಯೋಜನೆಯಡಿ ಖರೀದಿಸಿ, ಕಾರ್ಯಚರಣೆಗೊಳಿಸಲಾಗಿದೆ. 2019-20ನೇ ಸಾಲಿನಲ್ಲಿ ಸಂಸ್ಥೆಯು ಹೊಸಕೋಟೆಯಲ್ಲಿ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಿ ಅಲ್ಲದೇ, ಬೈರತಿಯಲ್ಲಿ ನೂತನ ಘಟಕವನ್ನು ನಿರ್ಮಿಸಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

 • 2019-20 ನೇ ಸಾಲಿನಲ್ಲಿ (ನವೆಂಬರ್-2019 ರ ಅಂತ್ಯಕ್ಕೆ) ಸಂಸ್ಥೆಯಲ್ಲಿ 23171 ಉದ್ಯೋಗಿಗಳನ್ನು ಹೊಂದಿದ್ದು, 4899 ವಾಹನಗಳಿಂದ 4631ಅನುಸೂಚಿಗಳಿಂದ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿ ದಿನ 15.82 ಲಕ್ಷ ಕಿ.ಮೀ.ಗಳನ್ನು ಕ್ರಮಿಸಿ, ಸುಮಾರು 22.46 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವನ್ನು ಪ್ರತಿ ದಿನ ಒದಗಿಸಿ, ಸರಾಸರಿ ರೂ 493.80 ಲಕ್ಷ ಒಟ್ಟು ಆದಾಯವನ್ನು ಗಳಿಸಿದೆ.
 • ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಪ್ರಸಕ್ತ ಸಾಲಿನಲ್ಲಿ ಅಂದರೆ 2019-20ರಲ್ಲಿ (ನವೆಂಬರ್-19ರವರೆಗೆ) ಸಂಸ್ಥೆಯು 4256 ಅನುಸೂಚಿಗಳನ್ನು 4701 ವಾಹನಗಳಿಂದ ಕಾರ್ಯಾಚರಣೆ ಗೊಳಿಸಿದೆ.
 • ಸಂಸ್ಥೆಯು ಪ್ರತಿದಿನ ಸರಾಸರಿ 14.17 ಲಕ್ಷ ಕಿ.ಮೀ.ಗಳನ್ನು ಕಾರ್ಯಾಚರಣೆಗೊಳಿಸಿ ಅದರಿಂದ ರೂ. 491 ಕೋಟಿ ಒಟ್ಟು ಆದಾಯವನ್ನು ಗಳಿಸಿದೆ. ಕಲಬುರಗಿ, ಬೀದರ, ವಿಜಯಪುರ, ಯಾದಗಿರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಹೊಸಪೇಟೆ, ಗಂಗಾವತಿ, ಸಿಂಧನೂರು ಮತ್ತು ಸೇಡಂ ನಗರ/ಪಟ್ಟಣಗಳಲ್ಲಿ ಬ್ಯಾಂಡೆಡ್ ಸ್ಮಾರ್ಟ್‌ ನಗರ ಸಾರಿಗೆ ಸೇವೆಗಳನ್ನು ಪ್ರಾರಂಭಿಸಲಾಗಿದೆ.ವಾಹನ

ವಾಹನ ಸಂಖ್ಯಾ ಬಲಗಳು

 • ನವೆಂಬರ್ 2019 ರಂದು ಒಟ್ಟು 2.20 ಕೋಟಿ ವಾಹನಗಳ ಪೈಕಿ 20.82 ಲಕ್ಷ ವಾಹನಗಳು ಸಾರಿಗೆ ವಾಹನಗಳಾಗಿವೆ. 2.00 ಕೋಟಿ ಸಾರಿಗೆಯೇತರ ವಾಹನಗಳ ಪೈಕಿ 1.61 ಕೋಟಿ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ.
 • ಏಪ್ರಿಲ್ 2019 ರಿಂದ ನವೆಂಬರ್ 2019 ರವರೆಗೆ ಒಟ್ಟು 10.21 ಲಕ್ಷ ಹೊಸ ವಾಹನಗಳು ನೋಂದಣಿಯಾಗಿರುತ್ತದೆ. ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿ. ನಿಗಮವು ಬೆಂಗಳೂರಿನ ಯಶವಂತಪುರ, ಮೈಸೂರು ಮತ್ತು ಧಾರವಾಡಗಳಲ್ಲಿ ಒಂದೊಂದು ಟ್ರಕ್ ಟರ್ಮಿನಲ್ ನಿರ್ಮಿಸಿದ್ದು, ಇವುಗಳು ಕಾರ್ಯಾಚರಣೆಯಲ್ಲಿವೆ.

ಬಂದರು ಮತ್ತು ಒಳನಾಡು ಜಲಸಾರಿಗೆ

 • ರಾಜ್ಯದ ಕಿರು ಬಂದರುಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಿ, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು “ಕರ್ನಾಟಕ ಸಣ್ಣ ಬಂದರು. ನೀತಿ-2014” ಜಾರಿಗೆ ತರಲಾಗಿದ್ದು, ಹೊನ್ನಾವರ, ಬೆಲೇಕೇರಿ ಮತ್ತು ಪಾವಿನಕುರ್ವೆ ಬಂದರುಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ.
 • ರಾಜ್ಯ ಸರ್ಕಾರವು ದಿನಾಂಕ 19-03-2018ರಿಂದ ಜಾರಿಗೆ ಬರುವಂತೆ ಕರ್ನಾಟಕ ಜಲಸಾರಿಗೆ ಮಂಡಳಿಯನ್ನು ರಾಜ್ಯದ ಕರಾವಳಿ ಪ್ರದೇಶದ ಬಂದರುಗಳ ತ್ವರಿತ ಅಭಿವೃದ್ಧಿ ಮತ್ತು ನಿರ್ವಹಣೆಗೆ The Karnataka Maritime Board Act 2015 ರನ್ವಯ ಸ್ಥಾಪಿಸಿದೆ.
 • ರಾಜ್ಯದ ಕಾರವಾರ ಮತ್ತು ಹಳೇ ಮಂಗಳೂರು ಬಂದರುಗಳಲ್ಲಿ 4 ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ನೌಕಾಯಾನ ಮಂತ್ರಾಲಯದಿಂದ ಅನುಮೋದನೆ ಗೊಂಡಿರುತ್ತದೆ.

ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗಳು

 • 2018-19ನೇ ಸಾಲಿನಲ್ಲಿ ರೂ. 32.91 ಕೋಟಿ ವೆಚ್ಚದಲ್ಲಿ ಕರಾವಳಿಯ 3 ಜಿಲ್ಲೆಗಳ ತೀವ್ರಕೊರೆತ ಸ್ಥಳಗಳಲ್ಲಿ 2540 ಮೀಟರು ಉದ್ದದ ಸಮುದ್ರ ಕೊರೆತ ಗೋಡೆಯನ್ನು ನಿರ್ಮಿಸಲಾಗಿರುತ್ತದೆ.
 • 2019-20ನೇ ಸಾಲಿನಲ್ಲಿ ರೂ. 9.80 ಕೋಟಿ ಅನುದಾನ ಒದಗಿಸಿದ್ದು, 900 ಮೀಟರು ಉದ್ದದ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗಳು ಪ್ರಗತಿಯಲ್ಲಿದೆ.
 • ನಿರಂತರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣಾ ಯೋಜನೆ: ನಿರಂತರ ಕರಾವಳಿ ತೀರ ಸಂರಕ್ಷಣೆ ಯೋಜನೆಯನ್ನು ಏಷ್ಯಾನ್ ಅಭಿವೃದ್ಧಿ ಬ್ಯಾಂಕ್‌ನ ರೂ. ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. 911 ಕೋಟಿಗಳ
 • ಭಾಗ-1ರ ತೀರ ಸಂರಕ್ಷಣೆ ಕಾಮಗಾರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ 8 ಕಡಲ ತೀರದೀಚೆ ಒಳದಂಡೆಯಲ್ಲಿ ಎತ್ತರದ ದಿಬ್ಬಗಳ ನಿರ್ಮಾಣ, ತೀರದಾಚೆಯಲ್ಲಿ ಬಂಡೆಗಳ 2 ಸಾಲು ನಿರ್ಮಾಣ ಹಾಗೂ 1300 ಅಲೆತಡೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಹಾಗೂ 2019-20 ನೇ ಸಾಲಿನಲ್ಲಿ ನವೆಂಬರ್ 2019 ರವರೆಗೆ ರೂ.246.11 ಕೋಟಿ. ವೆಚ್ಚ ಮಾಡಲಾಗಿರುತ್ತದೆ.
 • ಟ್ರಾಂಚ್-2ರಡಿ ಕಿಮೀ ಉದ್ದದ ಸಮುದ್ರಕೊರೆತ, 54.00 ಪ್ರತಿಬಂಧಕ ಕಾಮಗಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ, ಹಾಗೂ ಉಡುಪಿ ಜಿಲ್ಲೆಯ ಎರ್‌ಮಲ್‌ತಂಕ, ಉದ್ಯಾವರ, ಕೋಡಿಕನ್ಯಾನ, ಮರವಂತೆ ಮತ್ತು ಕೋಡಿಬೇಂಗ್ರೆ ಪ್ರದೇಶಗಳಲ್ಲಿ 620.20 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ ಹಾಗೂ 2019-20ನೇ ಸಾಲಿನಲ್ಲಿ ನವೆಂಬರ್ 2019 ರವರೆಗೆ ರೂ.245.58 ಕೋಟಿ ವೆಚ್ಚ ಮಾಡಲಾಗಿರುತ್ತದೆ.
 • ಕರಾವಳಿ ಮೂಲ ಸೌಕರ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲಾಗಿ ಮೊದಲ ಬಾರಿಗೆ ರಾಜ್ಯದಲ್ಲಿ ಸಂಪೂರ್ಣ ಕ್ರಿಯಾತ್ಮಕ Coastal Management Information System ಅನ್ನು ಅಭಿವೃದ್ಧಿಪಡಿಸಲಾಗಿದೆ. ಮಾರ್ಗಗಳು

ರೈಲ್ವೆ ಮಾರ್ಗಗಳು

 • ರಾಜ್ಯ ಸರ್ಕಾರವು ರೈಲು ಸಾಂದ್ರತೆಯನ್ನು ಮತ್ತು ಅನುಷ್ಠಾನದ ವೇಗವನ್ನು ತ್ವರಿತಗೊಳಿಸಲು ರೈಲ್ವೇ ಮಂತ್ರಾಲಯದೊಂದಿಗೆ ಹೊಸ ರೈಲ್ವೇ ಯೋಜನೆಗಳನ್ನು 50:50 ವೆಚ್ಚ ಪಾಲು ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಒಪ್ಪಿರುತ್ತದೆ.
 • ರಾಜ್ಯ ಸರ್ಕಾರವು ಮುನಿರಾಬಾದ್-ಮೆಹಬೂಬ ನಗರ 170 ಕಿ.ಮೀ ಗಳ ರೈಲ್ವೆ ಮಾರ್ಗ ಯೋಜನೆಯನ್ನು ಪರಿಷ್ಕೃತ ಅಂದಾಜು ವೆಚ್ಚ ರೂ.1350.91 ಕೋಟಿಗಳಲ್ಲಿ ಕೈಗೆತ್ತಿ ಕೊಳ್ಳಲಾಗಿದೆ.
 • ರಾಜ್ಯ ಸರ್ಕಾರದ ಪಾಲಿನ ಮೊತ್ತ ರೂ.675.45 ಕೋಟಿಗಳಲ್ಲಿ ಈವರೆವಿಗೂ ರೂ.534.12 ಕೋಟಿಗಳನ್ನು ನೈರುತ್ಯ ರೈಲ್ವೆಗೆ ಬಿಡುಗಡೆ ಮಾಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ Kolar Coach ಕಾರ್ಖಾನೆಯನ್ನು ಸ್ಥಾಪಿಸಲು ರೈಲ್ವೆ ಮಂತ್ರಾಲಯದೊಂದಿಗೆ ರಾಜ್ಯ ಸರ್ಕಾರವು ಒಡಂಬಡಿಕೆಯನ್ನು ಮಾಡಿಕೊಂಡಿದೆ.
 • ರೈಲ್ವೆ ಮಂಡಳಿಯು ಭಾರತದಲ್ಲಿರುವ Rail Coach ಕಾರ್ಖಾನೆಗಳ ಸಾಮರ್ಥ್ಯವನ್ನು ಪರಿಶೀಲಿಸುತ್ತಿದ್ದು, ಯೋಜನಾ ವರದಿಯು ಪರಿಶೀಲನೆಯಲ್ಲಿರುತ್ತದೆ.

ವಿಮಾನ ನಿಲ್ದಾಣ

 • ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿ ಅಡಿ ಒದಗಿಸಲಾಗಿರುವ ರೂ 150.53 ಕೋಟಿಗಳ ಅನುದಾನದಲ್ಲಿ ಕಲಬುರಗಿ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಪ್ರತಿ ವಿಮಾನ ನಿಲ್ದಾಣಕ್ಕೆ ರೂ 6.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
 • ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ದಿನಾಂಕ: 22-11-2019 ರಂದು ಪ್ರಾರಂಭಿಸಲಾಗಿದೆ. ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆ ಅಡಿ ಒದಗಿಸಲಾಗಿರುವ ರೂ 20.00 ಕೋಟಿಗಳಲ್ಲಿ ಪ್ರಾದೇಶಿಕ ವಿಮಾನಯಾನ ಯೋಜನೆಯಲ್ಲಿ ಆಯ್ಕೆಯಾದ ವಿಮಾನ ನಿಲ್ದಾಣಗಳಿಗೆ ವಿ.ಜಿ.ಎಫ್ (Viability gap Fund) Fire Fighting Services and Security Equipment ಸೇವೆಗಳಿಗೆ ರೂ ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. 11.66

ಬೆಂಗಳೂರು ಮೆಟ್ರೋ ರೈಲು ಯೋಜನೆ

 • ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ ಎಲ್ಲಾ ಕಾಮಗಾರಿಗಳು ದಿನಾಂಕ: 17.06.2017 ಪೂರ್ಣಗೊಂಡು ವಾಣಿಜ್ಯ ಬಳಕೆಗೆ ಪ್ರಾರಂಭವಾಗಿದೆ. ವೇಳೆಗೆ
 • ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರ ಕೆಲಸವು ಪ್ರಾರಂಭವಾಗಿದ್ದು, ನವೆಂಬರ್ 2019ರ ಅಂತ್ಯದವರೆಗೆ ಭೌತಿಕ ಮತ್ತು ಆರ್ಥಿಕ ಪ್ರಗತಿಯು 39% ಮತ್ತು 37%ರಷ್ಟಿದೆ.
 • ಹಂತ-2ರ ಕಾಮಗಾರಿಗಳನ್ನು ಹಂತ-ಹಂತವಾಗಿ ಆಗಸ್ಟ್ 2020ರಿಂದ ಪೂರ್ಣಗೊಳಿಸಿ, ಎಲ್ಲಾ ಕಾಮಗಾರಿಗಳನ್ನು ಜೂನ್ 2024ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

ದೂರ ಸಂಪರ್ಕ

 • ರಾಜ್ಯದ ಒಟ್ಟು ದೂರವಾಣಿ ಸಾಂದ್ರತೆಯು (ಅಂದರೆ 100 ಜನರು ಹೊಂದಿರುವ ದೂರವಾಣಿ ಸಂಪರ್ಕಗಳ ಸಂಖ್ಯೆ) 109.10 ಆಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ 90.11 ಹೆಚ್ಚಾಗಿರುತ್ತದೆ. ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ದೂರವಾಣಿ ಸಾಂದ್ರತೆಯಲ್ಲಿ ವ್ಯಾಪಕ ಅಂತರವು ಇದೆ.
 • ಜೂನ್ 2019ರ ಅಂತ್ಯದವರೆಗೆ ಗ್ರಾಮೀಣ ದೂರವಾಣಿ ಸಾಂದ್ರತೆಯು 61.69 ಆಗಿದ್ದು, ನಗರ ದೂರವಾಣಿ ಸಾಂದ್ರತೆಯು 181.71 ಆಗಿರುತ್ತದೆ. . ಸ್ಥಿರ ದೂರವಾಣಿ ಸಂಪರ್ಕಗಳಲ್ಲಿ ಗಮನಾರ್ಹವಾಗಿ ಇಳಿಮುಖವಾಗಿವೆ.
 • ಈ ಇಳಿಕೆಗೆ ಏರುತ್ತಿರುವ ಖಾಸಗಿ ಸಂಸ್ಥೆಗಳ ಮೊಬೈಲ್ ದೂರವಾಣಿ ಸಂಪರ್ಕದ ಸಹಭಾಗಿತ್ವವು ಭಾಗಶಃ ಕಾರಣವಾಗಿದೆ ಹಾಗೂ ಗ್ರಾಹಕರು ಮೊಬೈಲ್‌ ಫೋನ್‌ಗಳಿಗೆ ಬದಲಾಯಿಸುತ್ತಿರುವುದು ಸಹ ಕಾರಣವಾಗಿದೆ.
 • ಅಂಚೆ ಕಛೇರಿ ಸೇವೆಯ ಪ್ರವೃತ್ತಿಯನ್ನು ಗಮನಿಸಿದಾಗ, 2018 19ನೇ ಸಾಲಿನಲ್ಲಿ ಅಂಚೆ ಕಛೇರಿಗಳು ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂದಿರುತ್ತದೆ. ಇದಕ್ಕೆ ನಗರ ಪ್ರದೇಶಗಳಲ್ಲಿ ಅಂಚೆ ಕಛೇರಿಗಳನ್ನು ವಿಲೀನಗೊಳಿಸಿರುವುದೂ ಕಾರಣವಾಗಿರಬಹುದು.

ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು (ಸಹಕಾರ ಬ್ಯಾಂಕುಗಳನ್ನು ಒಳಗೊಂಡಂತೆ

 • ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್’ ಎಂಬ 2 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ.
 • ರಾಜ್ಯದ ಎಲ್ಲಾ ಬ್ಯಾಂಕುಗಳ (ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಮತ್ತು ಸಹಕಾರ ಬ್ಯಾಂಕುಗಳು ಸೇರಿ) ಒಟ್ಟು ಠೇವಣಿಯು ರೂ.981260 ಕೋಟಿಗಳಾಗಿದ್ದು ಮತ್ತು ಒಟ್ಟು ಮುಂಗಡಗಳು ರೂ.661527 ಕೋಟಿಗಳಾಗಿರುತ್ತದೆ. ರಾಜ್ಯದಲ್ಲಿ ಮಾರ್ಚ್ 2019ಕ್ಕೆ ಒಟ್ಟು 11140 ಬ್ಯಾಂಕ್ ಶಾಖೆಗಳಿರುತ್ತವೆ.
 • ಮಾರ್ಚ್ 2019ಕ್ಕೆ ಕೃಷಿ ವಲಯಕ್ಕೆ ರೂ. 129913 ಕೋಟಿಗಳನ್ನು, ದುರ್ಬಲ ವರ್ಗದವರಿಗೆ ರೂ.95694 ಕೋಟಿಗಳನ್ನು, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯಗಳಿಗೆ ಕೋಟಿಗಳನ್ನು ಮುಂಗಡವಾಗಿ ವಿತರಿಸಲಾಗಿರುತ್ತದೆ. ರೂ.119027 2019-20 ವರ್ಷಕ್ಕೆ ಆರ್‌ಐಡಿಎಫ್‌ ಕಾಮಗಾರಿಗಳಿಗೆ ನಬಾರ್ಡ್ ಸಂಸ್ಥೆಯು ರೂ.600 ಕೋಟಿಗಳನ್ನು ಮಂಜೂರು ಮಾಡಿರುತ್ತದೆ. ನಬಾರ್ಡ್ ಸಾಲದ ಮೊತ್ತಕ್ಕೆ ಬಡ್ಡಿದರವನ್ನು ಶೇ.3.9ರಂತೆ 04ನೇ ಆಕ್ಟೋಬರ್ 2019ಕ್ಕೆ ಅನ್ವಯವಾಗುವಂತೆ ವಿಧಿಸಿರುತ್ತದೆ. ನಬಾರ್ಡ್ ಸಂಸ್ಥೆಯು 31-12-2019ರ ಅಂತ್ಯಕ್ಕೆ ಒಟ್ಟು ರೂ.13197.70 ಕೋಟಿಗಳನ್ನು ಮಂಜೂರು ಮಾಡಿರುತ್ತದೆ.
 • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ.ಎಸ್‌.ಎಫ್.ಸಿ): 2019 20ನೇ ಸಾಲಿನಲ್ಲಿ (ನವೆಂಬರ್ 2019ವರೆಗೆ) (ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 529 ಪ್ರಾಸ್ತಾವನೆಗಳಿಗೆ ರೂ.475.14 ಕೋಟಿಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ರೂ.496.22 ಕೋಟಿಗಳನ್ನು ವಿತರಣೆ ಮಾಡಿದೆ ಹಾಗೂ ಕೋಟಿಗಳನ್ನು ವಸೂಲಿ ಮಾಡಿದೆ. 8.443.61
 • ಪ್ರಸಕ್ತ ವರ್ಷದಲ್ಲಿ ನವೆಂಬರ್ 2019ಕ್ಕೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಕ್ರಮವಾಗಿ ರೂ.8102.96 ಕೋಟಿ ಅಲ್ಪಾವಧಿ, ರೂ. 325.12 ಕೋಟಿ ಮಧ್ಯಮಾವಧಿ ಮತ್ತು ರೂ.55.98 ಕೋಟಿ ಮೊತ್ತದ ದೀರ್ಘಾವಧಿ ಸಾಲಗಳನ್ನು ವಿತರಿಸಿದೆ. ಇದು ಕೃಷಿ ಸಾಲಗಳಿಗೆ ನಿಗದಿಪಡಿಸಿದ ಗುರಿಯ ಶೇ. 65.88, ಶೇ.46.43 ಮತ್ತು ಶೇ.11.50 ರಷ್ಟು ಆಗಿರುತ್ತದೆ.
 • ಮಾನವ ಅಭಿವೃದ್ಧಿ ಶಿಕ್ಷಣ: ಶಿಕ್ಷಣ ಕ್ಷೇತ್ರದಲ್ಲಿನ ಗಮನಾರ್ಹ ಸುಧಾರಣೆಗಳಿಂದಾಗಿ ನಿರ್ಮಾಣಗೊಂಡ ಸಮಾಜದ ವಿಶಾಲವಾದ/ವ್ಯಾಪಕವಾದ ಜ್ಞಾನದ ತಳಹದಿಯ ಕಾರಣದಿಂದ ಕರ್ನಾಟಕವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ರೂಪಗೊಂಡಿದೆ.

ಸಾಕ್ಷರತೆ

 • 2001 ರಿಂದ 2011ರ ದಶಕದಲ್ಲಿ, ಕರ್ನಾಟಕದ ಸಾಕ್ಷರತಾ ಪ್ರಮಾಣಗಳಲ್ಲಿ ಗಣನೀಯ ಮಟ್ಟಿಗೆ ಸಾಧನೆ ಆಗಿದೆ ಎನ್ನುವದು ಅಂಕಿಅಂಶಗಳಿಂದ ದೃಢಪಟ್ಟಿದೆ. 2001 ರಲ್ಲಿ 66.64% ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011 ರ ಹೊತ್ತಿಗೆ ಶೇ.75.36ರಷ್ಟಾಗಿದೆ.
 • ರಾಜ್ಯದ ನಗರ ಪ್ರದೇಶದ ಪುರುಷರ ಸಾಕ್ಷರತೆ ಶೇ.90ರ ಗಡಿ ದಾಟಿದೆ. ಇದರ ತದ್ವಿರುದ್ಧ ಗ್ರಾಮಾಂತರ ಪ್ರದೇಶದ ಮಹಿಳಾ ಸಾಕ್ಷರತೆ ಇನ್ನೂ ಶೇ.60ರ ಗಡಿಯನ್ನು ಸಹ ತಲುಪಿಲ್ಲ.
 • ಸಾಕ್ಷರತೆಯ ಪ್ರತಿಯೊಂದು ಮಾನದಂಡವನ್ನು ಅವಲೋಕಿಸಿದಾಗ ರಾಜ್ಯಮಟ್ಟದ ಸಾಕ್ಷರತೆಯ ಪ್ರಮಾಣ ರಾಷ್ಟ್ರದ ಸರಾಸರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿಗೆಯಿದೆ. 2001 ರಲ್ಲಿ ರಾಷ್ಟ್ರದ 16 ಪ್ರಮುಖ ರಾಜ್ಯಗಳಲ್ಲಿ ರಾಜ್ಯದ ಸಾಕ್ಷರತೆಯ ಸ್ಥಾನ 9 ಆಗಿದ್ದು ಈ ಸ್ಥಾನವು 2011ರಲ್ಲಿಯು ಸಹ ಮುಂದುವರೆದಿದೆ.

ಶಾಲಾ ಶಿಕ್ಷಣ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ)

 • ಕರ್ನಾಟಕದಲ್ಲಿನ ಶಾಲಾಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಾಲೆಗಳು (ಒಂದರಿಂದ ಐದನೆಯ ತರಗತಿ), ಹಿರಿಯ ಪ್ರಾಥಮಿಕ ಶಾಲೆಗಳು (ಒಂದರಿಂದ ಏಳು/ಎಂಟು), ಮತ್ತು ಪ್ರೌಢಶಿಕ್ಷಣ (ಎಂಟರಿಂದ ಹತ್ತು) ಮೂಲಕ ನೀಡಲಾಗುತ್ತದೆ. ರಾಜ್ಯದ ಶಿಕ್ಷಣ ಇಲಾಖೆಯಿಂದ ಶೇ.85.42 ಕಿರಿಯ ಪ್ರಾಥಮಿಕ ಹಾಗೂ ಶೇ.59.24 ಹಿರಿಯ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ.
 • ಆದರೆ ಪ್ರೌಢಶಾಲಾ ಮಟ್ಟದಲ್ಲಿ ಇದರ ಪಾಲ್ಗೊಳ್ಳುವಿಕೆ ಕಡಿಮೆ ಇದ್ದು, ಕೇವಲ ಶೇ. 28.12 ಪ್ರೌಢಶಾಲೆಗಳನ್ನು ಮಾತ್ರ ಸರ್ಕಾರ ನಡೆಸುತ್ತಿದೆ. ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದ್ದು, ನಗರ ಪ್ರದೇಶದಲ್ಲಿ ಖಾಸಗಿ ಶಾಲೆಗಳು ಹೆಚ್ಚಾಗಿವೆ.
 • 2019-20ರಲ್ಲಿ, ರಾಜ್ಯದಲ್ಲಿ ಒಟ್ಟು 62319 ಪ್ರಾಥಮಿಕ ಶಾಲೆಗಳಿವೆ. ಇದರಲ್ಲಿ 24316 ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು 38003 ಹಿರಿಯ ಪ್ರಾಥಮಿಕ ಶಾಲೆಗಳು ಇವೆ.
 • ರಾಜ್ಯವು ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಾಯಿದೆಯ ಹಕ್ಕನ್ನು 2011 ರಿಂದ ಕಾರ್ಯಗತಗೊಳಿಸಿದೆ. ಪ್ರಾಥಮಿಕ ಶಾಲೆಗಳ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ.
 • ದಾಖಲಾತಿ ಪ್ರಮಾಣ 2019-20ರಲ್ಲಿ ಪ್ರಾಥಮಿಕ (ತರಗತಿ 1 ರಿಂದ 5) ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ (ತರಗತಿ 6 ಮತ್ತು 8) ಹಂತದಲ್ಲಿ ಕ್ರಮವಾಗಿ ಅಂದಾಜು 54.33 ಲಕ್ಷ ಮತ್ತು 31.24 ಲಕ್ಷ ಇದೆ.
 • ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ (ತರಗತಿ 1 ಮತ್ತು 7) ಹಂತದಲ್ಲಿ 20.18ಲಕ್ಷ ಎಸ್‌ ಎಸ್‌ ಮಕ್ಕಳಿರುತ್ತಾರೆ. 2019-20ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಹಂತದ ಮತ್ತು ಹಿರಿಯ ಪ್ರಾಥಮಿಕ ಶಾಲಾಹಂತಕ್ಕೆ ಒಟ್ಟು ದಾಖಲಾದ ದಾಖಲಾತಿ ಹಾಗೂ ನಿವ್ವಳ ದಾಖಲಾತಿ ಪ್ರಮಾಣ ಕ್ರಮವಾಗಿ 103.80, 96.40 ಮತ್ತು 99,60, 79.16 ಇರುತ್ತದೆ.
 • 2019-20ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣವು ಕ್ರಮವಾಗಿ 1.93% ಹಾಗೂ 2.94% ರಷ್ಟಿರುತ್ತದೆ.
 • 2019-20ರಲ್ಲಿ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾಗಿರುವ 3.16 ಲಕ್ಷ ಶಿಕ್ಷಕರ ಪೈಕಿ 282 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ಮಕ್ಕಳ ಅನುಪಾತ ಪ್ರಮಾಣ ಪ್ರಾಥಮಿಕ ಶಾಲೆಗಳಲ್ಲಿ 1:26ರಷ್ಟಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಹತ್ವಪೂರ್ಣ ಸಾಧನೆ ಮಾಡಲು ಶೇ.85ರಷ್ಟು ರಾಜ್ಯವು ಪ್ರೌಢ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದೆ. ಇದನ್ನು 9 ರಿಂದ 12 ನೇ ತರಗತಿವರೆಗಿನ 14 ರಿಂದ 18 ವಯೋಮಿತಿಯ ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವ ಗುರಿ ಇಟ್ಟುಕೊಂಡು ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 16808 ಮಾಧ್ಯಮಿಕ ಶಾಲೆಗಳಿದ್ದು, ಅವುಗಳಲ್ಲಿ 4726 ಶಾಲೆಗಳು ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುತ್ತಿವೆ.
 • 300 ಶಾಲೆಗಳು ಸಮಾಜ ಕಲ್ಯಾಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಮತ್ತು 3788 ಖಾಸಗಿ ಅನುದಾನಿತ ಮಾಲೀಕತ್ವದ ಆಡಳಿತದಲ್ಲಿದ್ದು, 7265 ಶಾಲೆಗಳು ಖಾಸಗಿ ಅನುದಾನರಹಿತ ಆಡಳಿತಕ್ಕೊಳಪಟ್ಟಿವೆ ಹಾಗೂ 729 ಉಳಿದ ನಿರ್ವಹಣೆಯ ಅಧೀನದಲ್ಲಿವೆ.
 • ಈ ಅಂಶಗಳು ಉನ್ನತ ಶಿಕ್ಷಣದ ಕಡೆಗೆ ವಿಶೇಷ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕಡಿಮೆಯಾಗುವುದನ್ನು ಸೂಚಿಸುತ್ತದೆ. 2019-20ನೇ ಸಾಲಿನಲ್ಲಿ 8,78ಲಕ್ಷ ಬಾಲಕೀಯರು ಪ್ರೌಢ ಶಾಲೆಗಳಲ್ಲಿ ದಾಖಲಾತಿ ಹೊಂದಿದ್ದು, ಶೇಕಡಾ 34.62ರಷ್ಟು ಬಾಲಕಿಯರು ಸರ್ಕಾರಿ ಶಾಲೆಗಳಲ್ಲಿ ಮತ್ತು ಶೇಕಡಾ 65.38ರಷ್ಟು ಬಾಲಕಿಯರು ಅನುದಾನಿ/ಖಾಸಗಿ/ಇತರೆ ಶಾಲೆಗಳಲ್ಲಿ ದಾಖಲಾತಿ ಹೊಂದಿದ್ದಾರೆ. ಒಟ್ಟು 106175ಶಿಕ್ಷಕರಲ್ಲಿ 38401 ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಶೇಕಡಾ 36ರಷ್ಟಿದೆ.

ಪದವಿ ಪೂರ್ವ ಶಿಕ್ಷಣ

 • ಶಿಕ್ಷಣ ಆಯೋಗದ (1964-66)ರ ವರದಿಯಂತೆ ರಾಜ್ಯವು 10+2+3 ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದೆ. 1971-72 ರಲ್ಲಿ, ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ನೀಡುವ ಎಲ್ಲಾ ಕಾಲೇಜುಗಳು ನಿರ್ದೇಶನಾಲಯದ ಆಡಳಿತಕ್ಕೊಳಪಡುತ್ತವೆ.
 • ಇಲ್ಲಿ ಹಲವಾರು ವಿಷಯಗಳಿದ್ದು ಎರಡು ಭಾಷಾ ವಿಷಯಗಳನ್ನು ಮತ್ತು ನಾಲ್ಕು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ. ಎಲ್ಲಾ ಐಚ್ಛಿಕ ವಿಷಯಗಳನ್ನು ಪ್ರಮುಖವಾಗಿ ಮೂರು ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಶಿಕ್ಷಣದಲ್ಲಿ ಸರ್ಕಾರದ ಪಾತ್ರ ಮಹತ್ವವಾಗಿದೆ.
 • I ಮತ್ತು II ಪದವಿ ಪೂರ್ವ ಶಿಕ್ಷಣದ ಮಧ್ಯಂತರದಲ್ಲಿ ಸುಮಾರು ಶೇಕಡಾ 11.50% ರಷ್ಟು ವ್ಯತ್ಯಾಸವಾಗುವುದನ್ನು ಗಮನಿಸಲಾಗಿದೆ. 2019-20ನೇ ಸಾಲಿನಲ್ಲಿ, 6.52 ಲಕ್ಷ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಪಡೆಯಲು ದಾಖಲಾಗಿರುತ್ತಾರೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ

 • 6 ಪ್ರಾದೇಶಿಕ ಕಛೇರಿಗಳೊಂದಿಗೆ (ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಕಲಬುರಗಿ) 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 319 ಖಾಸಗಿ ಅನುದಾನಿತ ಕಾಲೇಜುಗಳನ್ನು, 19 ಮಾನ್ಯತೆ ಪಡೆದ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಹೊಂದಿರುತ್ತದೆ. ಪದವಿ ಶಿಕ್ಷಣಕ್ಕಾಗಿ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ಕಾಲೇಜುಗಳಲ್ಲಿ 5.16 ಲಕ್ಷ ವಿದ್ಯಾರ್ಥಿಗಳು ದಾಖಲಾತಿಯಾಗಿರುತ್ತಾರೆ.
 • ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಸರಾಸರಿ – ವಿದ್ಯಾರ್ಥಿಗಳ ಸಾಮರ್ಥ್ಯ ಅನುಕ್ರಮವಾಗಿ 765 ಮತ್ತು 585 ಆಗಿರುತ್ತದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರ ಅನುಪಾತವು 43:57 ಇದ್ದು, ವಿದ್ಯಾರ್ಥಿನಿಯರ ಪರವಾಗಿದೆ.
 • ಇದು ಒಂದು ಸ್ವಾಗತಾರ್ಹ ಪ್ರವೃತ್ತಿಯಾಗಿದೆ. ದಾಖಲಾತಿಯ ಪ್ರಮಾಣದಲ್ಲಿ ವಿಜ್ಞಾನ ವಿಭಾಗದ ಒಟ್ಟು ದಾಖಲಾತಿಯೂ ಅತಿ ಕಡಿಮೆ ಇರುತ್ತದೆ. 2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ 530 ಸಂಸ್ಥೆಗಳು ಪದವಿ, ಡಿಪ್ಲೊಮಾ, ಕಿರಿಯ ತಾಂತ್ರಿಕ ಶಾಲೆಗಳು/ ಕಾಲೇಜುಗಳಿರುತ್ತವೆ.
 • ಸೂಕ್ತ ಮಾನವ ಸಂಪನ್ಮೂಲ ಒದಗಿಸುವ ದಿಸೆಯಲ್ಲಿ ಎಲ್ಲಾ ಪಾಲಿಟೆಕ್ನಿಕ್ ಕೋರ್ಸುಗಳ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಕೋರ್ಸುಗಳಲ್ಲಿ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಈ ನಿಟ್ಟಿನಲ್ಲಿ ತಂತ್ರಜ್ಞಾನದ ಗುಣಮಟ್ಟವನ್ನು ಕಾಪಾಡಿ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಪಾಲಿಟೆಕ್ನಿಕ್‌ಗಳ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಬೋಧಕ ಸಿಬ್ಬಂದಿಯವರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸಲಾಗುತ್ತದೆ. ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ, ಭಾರತ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ತಾಂತ್ರಿಕ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಯೋಜನೆಯನ್ನು 3 ಹಂತದಲ್ಲಿ ಪ್ರಾರಂಭಿಸಿತು.

ವೈದ್ಯಕೀಯ ಶಿಕ್ಷಣ

 • ರಾಜ್ಯದಲ್ಲಿ 6753 ವಿದ್ಯಾರ್ಥಿ ಸಾಮರ್ಥ್ಯವುಳ್ಳ 52 ವೈದ್ಯಕೀಯ ಕಾಲೇಜುಗಳಿವೆ. 17 ಕಾಲೇಜುಗಳನ್ನು ಸರ್ಕಾರವು ನಡೆಸುತ್ತಿದ್ದು, ಬೇರೆ ಸಂಸ್ಥೆಗಳಲ್ಲಿ ಸರ್ಕಾರದ ಇರುವಿಕೆಯು ನಿಗದಿತ ಸಾಮರ್ಥ್ಯದಿಂದಾಗಿ ನಿಚ್ಚಳವಾಗಿರುತ್ತದೆ. ಇದರ ಸಂಬಂದ, ಆಯುರ್ವೇದ ವೈದ್ಯರ ಹೆಚ್ಚಳವು ಅತ್ಯಂತ ಮಹತ್ವದ್ದಾಗಿರುತ್ತದೆ.
 • 58 ಆಯುರ್ವೇದ ಕಾಲೇಜುಗಳಿಂದ 4085 ವಿದ್ಯಾರ್ಥಿಗಳು ಪ್ರವೇಶ ಹೊಂದುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆಯುರ್ವೇದ, ಹೋಮಿಯೋಪತಿ, ಮತ್ತು ಯುನಾನಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 • ಭಾರತ ನರ್ಸಿಂಗ್‌ ಪರಿಷತ್‌ನಲ್ಲಿ ನೋಂದಾಯಿಸಿದ 323 ನರ್ಸಿಂಗ್ ಕಾಲೇಜುಗಳಿಂದ ಪ್ರತಿ ವರ್ಷ 19415 ನರ್ಸ್‌ಗಳು (ವಿಜ್ಞಾನ ಪದವೀಧರರಾಗಿ) ಹೊರಬರುತ್ತಿದ್ದಾರೆ. ಕರ್ನಾಟಕ ರಾಜ್ಯವು ನರ್ಸಿಂಗ್‌ ಸೇವೆಯ ತವರಾಗಿದ್ದು, ನರ್ಸಿಂಗ್ ಸೇವೆಯನ್ನು ರಾಜ್ಯದಲ್ಲಿ ಅಲ್ಲದೇ ಭಾರತದ ಇತರೆ ಪ್ರದೇಶಗಳಲ್ಲೂ, ಗಲ್ಫ್ ದೇಶಗಳಲ್ಲಿ ಮತ್ತು ಯುರೋಪ್‌ ದೇಶಗಳಲ್ಲೂ ನಿರ್ವಹಿಸುತ್ತಾರೆ.

ಲೋಕ ಶಿಕ್ಷಣ

 • 2019-20ನೇ ಸಾಲಿನಲ್ಲಿ, 04 ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ನಗರ ಮತ್ತು ಗ್ರಾಮೀಣ ಕೊಳಚೆ ಪ್ರದೇಶದ 15+ 50 ವಯೋಮಿತಿಯ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು, ಅದರಲ್ಲೂ ಪ್ರಮುಖವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಮಹಿಳೆಯರನ್ನು ಸಾಕ್ಷರರನ್ನಾಗಿಸಿ ರಾಜ್ಯದ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಗುರಿಹೊಂದಲಾಗಿದೆ.
 • ಡಾ. ಡಿ. ಎಂ. ನಂಜುಂಡಪ್ಪ ಸಮಿತಿ ವರದಿಯನ್ವಯ ಹಿಂದುಳಿದ, అతి ಹಿಂದುಳಿದ, ಅತ್ಯಂತ ಹಿಂದುಳಿದ ಆಯ್ದ ಗ್ರಾಮ ಪಂಚಾಯತಿಗಳಿಂದ 19 ಜಿಲ್ಲೆಗಳ 1.89ಲಕ್ಷ ಅನಕ್ಷರಸ್ಥರನ್ನು ಸಾಕ್ಷರರಾಗಿಸುವ ಗುರಿಯೊಂದಿಗೆ ಅನುಷ್ಠಾನ ಗೊಳಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

 • ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ಕ.ರಾ.ಉ.ಶಿ.ಪ) ಉನ್ನತ ಶಿಕ್ಷಣದ ಕಾರ್ಯನೀತಿಯ ಪ್ರಧಾನ ಉದ್ದೇಶಕ್ಕಾಗಿ ಹಾಗೂ ಉನ್ನತ ಶಿಕ್ಷಣದ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುವ ಉದ್ದೇಶದಿಂದ 2010ರಲ್ಲಿ ಪ್ರಾರಂಭಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

 • ಮಾನವನ ಅಭಿವೃದ್ಧಿಗೆ ಆರೋಗ್ಯವು ಅತ್ಯವಶ್ಯಕವಾಗಿರುತ್ತದೆ. ಉತ್ತಮ ಆರೋಗ್ಯವನ್ನು ನೀಡುವುದರಿಂದ ಆರೋಗ್ಯಕರವಾದ ಜನರು ಹೆಚ್ಚಿನ ಕಾಲ ಬದುಕಿ ಉತ್ಪಾದನೆ ನೀಡುವುದರಿಂದ ಆರ್ಥಿಕ ಪ್ರಗತಿಗೆ ಇದರ ಕೊಡುಗೆಯು ಮುಖ್ಯವಾಗಿರುತ್ತದೆ.
 • ಸುಸ್ಥಿರ ಅಭಿವೃದ್ಧಿ ಗುರಿ 3ರ ಪ್ರಕಾರ ಎಲ್ಲಾ ವಯಸ್ಸಿನ ಜನರಿಗೆ ಆರೋಗ್ಯವನ್ನು ಖಾತರಿಪಡಿಸಬೇಕು. ಹಲವಾರು ಆರೋಗ್ಯ ಸೂಚಕಗಳು ಮುಂಚೂಣಿಯಲ್ಲಿದ್ದರೂ ಸಹ ರಾಜ್ಯ ಸರ್ಕಾರವು ನಿಗದಿಪಡಿಸಿದ ಆರೋಗ್ಯ ಗುರಿಗಳನ್ನು ಇನ್ನೂ ಸಾಧಿಸಬೇಕಾಗಿದೆ.

ಆರೋಗ್ಯದ ಮೂಲಸೌಕರ್ಯಗಳು

 • ಈ ಜನರ ಆರೋಗ್ಯ ಸ್ಥಿತಿ ಸುಧಾರಿಸಲು ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸುವಲ್ಲಿ ರಾಜ್ಯವು ಉತ್ತಮ ಪ್ರಗತಿ ಸಾಧಿಸಿದೆ. ರಾಜ್ಯವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ವ್ಯಾಪಕ ಸಂಸ್ಥೆಗಳ ಜಾಲ ಹೊಂದಿದೆ.
 • ರಾಜ್ಯದಲ್ಲಿ 15 ಜಿಲ್ಲಾ ಆಸ್ಪತ್ರೆಗಳು, 11 ಇತರೆ ಆಸ್ಪತ್ರೆಗಳು ಮತ್ತು 36 ಸ್ವಾಯತ್ತ ಮತ್ತು ಬೋಧಕ ಆಸ್ಪತ್ರೆಗಳು ಮತ್ತು 146 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿವೆ.
 • ಮಾರ್ಗಸೂಚಿಯ ಪ್ರಕಾರ 8871 ಉಪ ಕೇಂದ್ರಗಳು, 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 206 ಸಮುದಾಯ ಆರೋಗ್ಯ ಕೇಂದ್ರಗಳು-ಗ್ರಾಮೀಣ ಜನತೆಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ. ಇದರ ಜೊತೆಗೆ, ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಆಯುಷ್ ವೈದ್ಯಕೀಯ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಜನಸಂಖ್ಯೆ ಸೂಚಕಗಳು

 • ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಆರೋಗ್ಯ ಪ್ರಗತಿ ಸೂಚಕಗಳು ಪ್ರೋತ್ಸಾಹದಾಯಕವಾಗಿವೆ. 2019ರ ನವೆಂಬರ್ ವೇಳೆಗೆ ಜನನ ದರ ಮತ್ತು ಮರಣ ದರ ಕ್ರಮವಾಗಿ 17.6 ಮತ್ತು 6.7 ಆಗಿದ್ದು, ಇದು 2017 ರಿಂದ ಸ್ಥಿರವಾಗಿರುತ್ತದೆ. ತಾಯಂದಿರ ಮರಣ ಪ್ರಮಾಣ 2011ರಲ್ಲಿ 178 ರಿಂದ 2019 ರಲ್ಲಿ 108ಕ್ಕೆ ಇಳಿದಿದೆ.
 • ಜನಸಂಖ್ಯಾ ನಿಯಂತ್ರಣದಲ್ಲಿ ಕರ್ನಾಟಕ ಉತ್ತಮ ಪ್ರಗತಿ ಸಾಧಿಸಿದೆ. ಭಾರತ ಸರ್ಕಾರವು 1.8ರಷ್ಟು ಫಲವತ್ತತೆ ದರವನ್ನು 2019ಕ್ಕೆ ನಿಗಧಿಪಡಿಸಿದ್ದು ಈ ಗುರಿಯನ್ನು 2013ರಲ್ಲೇ ರಾಜ್ಯವು ಸಾಧಿಸಿದೆ.
 • 2011ರಲ್ಲಿ ಶಿಶು ಮರಣ ದರವು ಪ್ರತಿ 1000 ಕ್ಕೆ 35 ಇದ್ದದ್ದು 2019ರ ವೇಳಗೆ 25 ಕ್ಕೆ ಇಳಿದಿದೆ.

ಕುಟುಂಬ ಕಲ್ಯಾಣ

 • ಪ್ರಸ್ತುತ ಇರುವ ಆರೋಗ್ಯ ಸೌಕರ್ಯಗಳ ಮೂಲಕ ರಾಜ್ಯವು ಅತ್ಯುತ್ತಮ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
 • 2012-13ರಲ್ಲಿ ಸಂತಾನ ಹರಣ ಚಿಕಿತ್ಸೆ ಶೇ. 69% ರಷ್ಟು ಪ್ರಗತಿ ಸಾಧಿಸಿದ್ದು, 2019-20ರ (ನವೆಂಬರ್ 2019 ರ ಅಂತ್ಯಕ್ಕೆ) 42% ರಷ್ಟು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುತ್ತದೆ.
 • ಆದರೆ ಐಯುಡಿಗೆ ನಿಗದಿಪಡಿಸಿದ್ದ ಗುರಿ ಶೇ. 61 ರಿಂದ 26ಕ್ಕೆ | ಶೇ.99 ಕ್ಕಿಂತ (ನವೆಂಬರ್ 2019 ರ ಅಂತ್ಯಕ್ಕೆ) ಇಳಿದಿದೆ. ಅದರೊಂದಿಗೆ 2018 19ನೇ ಸಾಲಿನಲ್ಲಿ ಸಾಂಸ್ಥಿಕೆ ಹೆರಿಗೆಯು ಹೆಚ್ಚಾಗಿರುವುದು ಮಹತ್ವದ ಸಕಾರಾತ್ಮಕ ಸಾಧನೆಯಾಗಿದೆ.
 • ಮಲೇರಿಯಾ ಮತ್ತು ಕುಷ್ಟ ರೋಗ ಪ್ರಕರಣಗಳ ಇಳಿಕೆ: ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಇಳಿಕೆ ಕಂಡಿದೆ. ಮಲೇರಿಯಾ ಪ್ರಕರಣ ಶೇ.35.5 ರಷ್ಟು ಇಳಿಕೆಯನ್ನು 2019 ರಲ್ಲಿ ಕಂಡಿವೆ.
 • ರಾಜ್ಯವು ಮಲೇರಿಯಾ ತಲುಪುತ್ತಿದೆ. ಕರ್ನಾಟಕವು ಸಂಪೂರ್ಣ ನಿರ್ಮೂಲನ ಹಂತ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಸಾಧಿಸಿದೆ.
 • ಕುಷ್ಟ ರೋಗದ ಪ್ರಿವಿಲೇನ್ಸ್ ರೇಟ್ ನವೆಂಬರ್ 2019ರಲ್ಲಿ 0.31/10000 ಇದೆ. ಪ್ರಾರಂಭವಾದ ಪ್ರಮುಖ ಆರೋಗ್ಯ ಕಾರ್ಯಕ್ರಮಗಳು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಸಾರ್ವಜನಿಕ ಪ್ರಾಮುಖ್ಯತೆ ಇರುವ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
 • ಜನನಿ ಸುರಕ್ಷಾ ಯೋಜನೆ, ಆರೋಗ್ಯ ಕವಚ, ಆರೋಗ್ಯ ಸಹಾಯವಾಣಿ 104, ನಗು-ಮಗು, ಡಯಾಲಿಸಿಸ್ ಕೇಂದ್ರಗಳು, ಟೆಲಿಮೆಡಿಸಿನ್, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ, ಜನನಿ ಸುರಕ್ಷಾ ವಾಹಿನಿ, ಆಶಾ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಜ್ಯೋತಿ ಸಂಜೀವಿನಿ (ರಾಜ್ಯ ಸರ್ಕಾರಿ ನೌಕರರಿಗೆ) ಮುಂತಾದ ಸಮಗ್ರ ಆರೋಗ್ಯ ಸೇವೆಗಳನ್ನು ಜಾರಿಗೊಳಿಸುತ್ತಿದೆ. ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಅನುಸರಣಾ ಆರೈಕೆಗಾಗಿ ರಾಜ್ಯವು ಕೆಲವು ವಿನೂತನ ಕಾರ್ಯಕ್ರಮಗಳಾದ ಬೈಕ್‌ ಆಂಬುಲೆನ್ಸ್ (ಪ್ರಥಮ ಕ್ರಿಯಾ ಘಟಕ) ವಾತ್ಸಲ್ಯವಾಣಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮುಂಚೂಣಿಯಲ್ಲಿದೆ

ರಾಷ್ಟ್ರೀಯ ಆರೋಗ್ಯ ಅಭಿಯಾನ

 • ಮಾನ್ಯ ಪ್ರಧಾನ ಮಂತ್ರಿಯವರಿಂದ ಏಪ್ರಿಲ್ 2005ರಲ್ಲಿ ಚಾಲನೆಗೊಂಡ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನವನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನವೆಂದು ಮನ‌ ನಾಮಕರಣ ಮಾಡಲಾಯಿತು.
 • ಇದು ಜನತೆಯ ಅವಶ್ಯಕತೆ ಗನುಗುಣವಾಗಿ ಸಮಾನವಾದ, ಸುಲಭವಾಗಿ ಪಡೆಯಬಹುದಾದ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪ್ರಯತ್ನ ಮಾಡಿದೆ.
 • ತಾಯಿ ಮರಣ ಮತ್ತು ಶಿಶು ಮರಣ ದರವನ್ನು ಕಡಿಮೆಗೊಳಿಸುವುದು, ಜನಸಂಖ್ಯೆ ಸ್ಥಿರತೆ ಲಿಂಗ ಸಮಾನತೆ ಸೂಚ್ಯಂಕಗಳನ್ನು ಸರಿಪಡಿಸಲು ಪ್ರಯತ್ನ ನಡೆಸಿದೆ.
 • ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಜಾರಿಗೊಳಿಸುವ ಮುಖ್ಯ ಉದ್ದೇಶವೆಂದರೆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಪದ್ಧತಿಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವುದು ಹಾಗೂ ಸಮುದಾಯಕ್ಕೆ ತಲುಪಿಸುವ ಹೊಣೆಗಾರಿಕೆ ಹೊಂದಿದೆ.
 • ಇದು ಅಭಿಯಾನದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದು, ಯೋಜನೆಗಳ ವಿಕೇಂದ್ರಿಕರಣ, ಅಧಿಕಾರ ನಿಯೋಜನೆ, ಮಾನವ ಸಂಪನ್ಮೂಲ ನಿರ್ವಹಣೆ, ಸಮುದಾಯ ಪಾಲ್ಗೊಳ್ಳುವಿಕೆ ಗುಣಮಟ್ಟದ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆ ಹಾಗೂ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳ ಸಂಯೋಜನೆ ಮತ್ತು ಆರ್ಥಿಕ ಸಡಿಲತೆ ಹೊಂದಿದೆ.

ಆಯುಷ್‌ (ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪತಿ)

 • ಕರ್ನಾಟಕ ಸರ್ಕಾರವು ಆಯುಷ್‌ ಪದ್ಧತಿಯನ್ನು ರಾಷ್ಟ್ರೀಯ ಆರೋಗ್ಯ ಪಾಲನೆ ಮತ್ತು ರಾಷ್ಟ್ರೀಯ ಅಭಿಯಾನದ ಮುಖ್ಯವಾಹಿನಿಗೆ ತರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 • ಈ ಪದ್ಧತಿಯು ಕಾಯಿಲೆಗಳ ನಿಯಂತ್ರಣವಲ್ಲದೆ ಪರಿಹಾರ ನೀಡುವಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತವೆ. ಆಯುಷ್ ಇಲಾಖೆಯಲ್ಲಿ 662 ಚಿಕಿತ್ಸಾಲಯಗಳು ಮತ್ತು 159 ಆಸ್ಪತ್ರೆಗಳು, ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪದ್ಧತಿಗಳ ಮೂಲಕ ಆಯುಷ್‌ ವೈದ್ಯಕೀಯ ಸೇವೆಯನ್ನು 2534 ಹಾಸಿಗೆಗಳೊಂದಿಗೆ ಒದಗಿಸುತ್ತಿವೆ.
 • ಇಲ್ಲಿಯವರೆಗೆ ರಾಷ್ಟ್ರೀಯ ಆಯುಷ್‌ ಅಭಿಯಾನದಡಿ 65 ಆಯುಷ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದಲ್ಲದೇ ಮೈಸೂರಿನಲ್ಲಿರುವ 100 ಹಾಸಿಗೆಗಳ ಸಂಖ್ಯೆಯನ್ನು ಹೊಂದಿರುವ ಹೈಟೆಕ್ ಪಂಚಕರ್ಮ ಆಸ್ಪತ್ರೆಯು ಉತ್ತಮವಾದ ಸೇವೆಯನ್ನು ಒದಗಿಸುತ್ತಿದೆ.

ಶುಚಿ ಯೋಜನೆ

 • ಶುಚಿ ಯೋಜನೆಯನ್ನು 2013-14 ರಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಹಾಗೂ ನೈರ್ಮಲ್ಯ ಕರವಸ್ತ್ರದ ಬಳಕೆ ಮತ್ತು ವಿಲೇವಾರಿ ಬಗ್ಗೆ ಆರೋಗ್ಯ ಶಿಕ್ಷಣ ಒದಗಿಸುವ ಹಾಗೂ ಶಾಲಾ ಹಾಜರಾತಿಯನ್ನು ಸುಧಾರಿಸುವ ಉದ್ದೇಶದೊಂದಿಗೆ ಪ್ರಾರಂಭಿಸಲಾಯಿತು.
 • 2019-20 ರ ಅವಧಿಯಲ್ಲಿ (ನವೆಂಬರ್-2019 ರ ಅಂತ್ಯಕ್ಕೆ) 28.06 ಲಕ್ಷ ನೈರ್ಮಲ್ಯ ಕರವಸ್ತ್ರಗಳನ್ನು ವಿತರಿಸಲಾಗಿದೆ. 1.12.3 ಮಾನವ ಮತ್ತು ಲಿಂಗ ಅಭಿವೃದ್ಧಿ ಹದಿನೇಳು ಸುಸ್ಥಿರ ಅಭಿವೃದ್ಧಿ ಗುರಿಗಳು ಮಾನವ ಅಭಿವೃದ್ಧಿಯನ್ನು ಬಲಪಡಿಸುವುದರೊಂದಿಗೆ ಜನರ ಜೀವನವನ್ನು ಅವರ ಅವಕಾಶಗಳು ಮತ್ತು ಆಯ್ಕೆಗಳನ್ನು ಸುಧಾರಿಸುವಲ್ಲಿ ಕೇಂದ್ರೀಕರಿಸುತ್ತದೆ.
 • ಯು.ಎನ್.ಡಿ.ಪಿ ಯು ಮಾನವ ಅಭಿವೃದ್ಧಿ ವರದಿ 2019ನ್ನು ಬಿಡುಗಡೆಮಾಡಿದ್ದು ಇದರ ಪ್ರಕಾರ 189 ದೇಶಗಳ ಪೈಕಿ ಭಾರತವು 129ನೇ ಸ್ಥಾನವನ್ನು ಹೊಂದಿ ದೇಶದ ಮಧ್ಯಮ ಮಾನವ ಅಭಿವೃದ್ಧಿಯ ಗುಂಪಿಗೆ ಸೇರಿರುತ್ತದೆ. 1990 ರಿಂದ 2018ರ ಅವಧಿಯಲ್ಲಿ ಭಾರತದ ಹೆಚ್ ಡಿ ಐ ಮೌಲ್ಯವು 0.427 ರಿಂದ 0.647 ವರೆಗೆ ಏರಿಕೆಯಾಗಿದೆ.
 • ಕರ್ನಾಟಕವು ವಿವಿಧ ಹಂತಗಳಲ್ಲಿ ಮಾನವ ಅಭಿವೃದ್ಧಿ ವರದಿಗಳನ್ನು ಕಾಲಕಾಲಕ್ಕೆ ಹೊರತರುವಲ್ಲಿ ಮುಂಚೂಣಿಯಲ್ಲಿರುತ್ತದೆ. ಮೊದಲ ಮತ್ತು ಎರಡನೇ ರಾಜ್ಯ ಮಾನವ ಅಭಿವೃದ್ಧಿ ವರದಿಗಳನ್ನು ಕ್ರಮವಾಗಿ 1999 ಮತ್ತು 2005 ರಲ್ಲಿ ಹೊರತರಲಾಗಿರುತ್ತದೆ ಮತ್ತು ಮೂರನೇ ರಾಜ್ಯ ಮಾನವ ಅಭಿವೃದ್ಧಿ ವರದಿಯನ್ನು 2019 ರಲ್ಲಿ ಹೊರತರಲಾಗಿರುತ್ತದೆ. 2012ರ ಅಂಕಿಅಂಶಗಳ ಆಧಾರದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಯು.ಎನ್.ಡಿ.ಪಿ 2014ರ ಅಂತಾರಾಷ್ಟ್ರೀಯ ಮೈಲುಗಲ್ಲುಗಳನ್ನು ಬಳಸಿ ಮಾಪನ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕವು 0.729 ರಷ್ಟಿದ್ದು ಮೊದಲನೆಯ ಸ್ಥಾನದಲ್ಲಿದೆ ಹಾಗೂ ಯಾದಗಿರಿ, ಕಲಬುರಗಿ, ಹಾವೇರಿ ಜಿಲ್ಲೆಗಳು 0.495, 0.534 ಮತ್ತು 0.539 ಹೆಚ್.ಡಿ.ಐ ಮೌಲ್ಯಗಳೊಂದಿಗೆ ಕೆಳಗಿನ ಮೂರು ಸ್ಥಾನಗಳನ್ನು ಕ್ರಮವಾಗಿ ಪಡೆದುಕೊಂಡಿವೆ.
 • ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ, ಕರ್ನಾಟಕದ ಎಲ್ಲಾ 30 ಜಿಲ್ಲೆಗಳ ಜಿಲ್ಲಾ ಮಾನವ ಅಭಿವೃದ್ಧಿ ವರದಿ (ಡಿ. ಎಚ್. ಡಿ. ಆರ್) ಗಳನ್ನು ಏಕಕಾಲದಲ್ಲಿಯೇ 2014 ರಲ್ಲಿ ಹೊರತರಲಾಯಿತು.
 • ಈ ಎಲ್ಲಾ 30 ಜಿಲ್ಲೆಗಳ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳು 2014 ಗಳಲ್ಲಿನ ಎಲ್ಲಾ 30 ಜಿಲ್ಲೆಗಳು, 176 ತಾಲ್ಲೂಕುಗಳು ಹಾಗೂ 219 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೌಲ್ಯಗಳ ಆಧಾರದ ಮೇಲೆ, “ಮಾನವ ಅಭಿವೃದ್ಧಿ ಕರ್ನಾಟಕದ ಜಿಲ್ಲೆಗಳು, ತಾಲ್ಲೂಕುಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಧನೆ, 2014 – ಒಂದು ಕ್ಷಿಪ್ರ ನೋಟ ವರದಿಯನ್ನೂ ಸಹ ಹೊರತರಲಾಗಿರುತ್ತದೆ.
 • 2015ರಲ್ಲಿ ಕರ್ನಾಟಕದ ಎಲ್ಲಾ 5898 ಗ್ರಾಮ ಪಂಚಾಯಿತಿಗಳ ಮಾನವ ಅಭಿವೃದ್ಧಿ ಸೂಚ್ಯಂಕ (GPHDI) ಗಳನ್ನೂ ಸಹ ತಯಾರಿಸಲಾಗಿದ್ದು, ಅವುಗಳನ್ನು “ಮಾನವ ಅಭಿವೃದ್ಧಿ: ಕರ್ನಾಟಕದ ಗ್ರಾಮ ಪಂಚಾಯಿತಿಗಳ ಸಾಧನೆ-2015″ ವರದಿಯ ಮೂಲಕ ಪ್ರಸ್ತುತಪಡಿಸಲಾಗಿದೆ. ಲಿಂಗ ಅಸಮಾನತೆ ಸೂಚ್ಯಂಕ (ಜಿ.ಐ.ಐ.) ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
 • ರಾಜ್ಯವು ಲಿಂಗಸಮಾನತೆಯನ್ನು ಸುಸ್ಥಿರ ಅಭಿವೃದ್ಧಿ ಗುರಿ-5ರ ಕಾರ್ಯಸೂಚಿಯನ್ವಯ ಸಾಧಿಸುವಲ್ಲಿ ಮುನ್ನಡೆಯುತ್ತಿದೆ. ಆದಾಗ್ಯೂ ವಿವಿಧ ಕ್ಷೇತ್ರಗಳಾದ ಸಾಕ್ಷರತೆ, ಶಿಕ್ಷಣ, ಉದ್ಯೋಗ, ರಾಜಕೀಯ ಭಾಗವಹಿಸುವಿಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಇತ್ಯಾದಿ ಇನ್ನಿತರ ಕ್ಷೇತ್ರಗಳಲ್ಲಿ ಗಮನಾರ್ಹವಾದ ಹೆಚ್ಚಿನ ಪ್ರಮಾಣದ ಸ್ತ್ರೀ-ದುಃಸ್ಥಿತಿ | ಪ್ರತಿಕೂಲತಾ ಅಂಶಗಳೊಂದಿಗಿನ ಸಂಪೂರ್ಣ ಲಿಂಗ ತಾರತಮ್ಯತೆಗಳು ಇನ್ನೂ ಕಂಡುಬರುತ್ತವೆ.
 • ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಈ ವಿಷಯಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕಾಗಿರುತ್ತದೆ. ತೃತೀಯ-ಲಿಂಗಿಗಳ ಸಮುದಾಯ ಅಥವಾ ಲಿಂಗ-ಪರಿವರ್ತಿತರ ಸಮುದಾಯವು ಸಮಾಜದಲ್ಲಿನ ಅತ್ಯಂತ ನಿರ್ಲಕ್ಷ್ಯತೆಗೊಳಗಾದ ವರ್ಗವಾಗಿದೆ. ಈ ಸಮುದಾಯದ ಜನಸಂಖ್ಯೆ, ಉದ್ಯೋಗ ಮತ್ತು ಜೀವನೋಪಾಯ ಇತ್ಯಾದಿಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿರುವುದಿಲ್ಲ.
 • ಲಿಂಗ-ಪರಿವರ್ತಿತರ ವಿಶಿಷ್ಟ ಮತ್ತು ನೈಜ ಕಾಳಜಿಯನ್ನು ಬಯಸುವ ವಿಷಯಗಳಾಗಿರುವುದರಿಂದ ಅವುಗಳನ್ನು ಉಪೇಕ್ಷಿಸಿ ಹಿನ್ನೆಲೆಗೆ ತಳ್ಳಬಾರದು. ಮೈತ್ರಿ ಯೋಜನೆಯನ್ನು ಅವರ ಜೀವನೋಪಾಯಕ್ಕಾಗಿಯೇ ಅಭಿವೃದ್ಧಿ ಪಡಿಸಲಾಗಿರುತ್ತದೆ.
 • ಮೂಲಭೂತ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ವಸತಿ, ಜೀವನೋಪಾಯ ಸೌಲಭ್ಯಗಳನ್ನು ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು “ಕರ್ನಾಟಕ ರಾಜ್ಯ ಟ್ರಾನ್ಸ್‌ ಜೆಂಡರ್-ನೀತಿ 2017″ ಅನ್ನು ಡಿಸೆಂಬರ್ 2017ರಲ್ಲಿ ಜಾರಿಗೊಳಿಸಿದೆ. ಆದಾಗ್ಯೂ, ಅವರ ಅಭಿವೃದ್ಧಿಯ ಖಾತರಿಗಾಗಿ ಇನ್ನೂ ಹೆಚ್ಚಿನ ದೃಢವಾದ ಹಾಗೂ ಸತತವಾದ ಪ್ರಯತ್ನಗಳು ಅತ್ಯವಶ್ಯಕವಾಗಿರುತ್ತವೆ.

ಲಿಂಗ ಮತ್ತು ಸಾಮಾಜಿಕ ಸಮಾನತೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

 • 2011ರ ಜನ ಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 49.31 ರಷ್ಟು ಮಹಿಳೆಯರಿರುತ್ತಾರೆ. ದೇಶದ ದಕ್ಷಿಣ ರಾಜ್ಯಗಳಲ್ಲಿ ಈ ಮಾದರಿಯು ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ.
 • ರಾಜ್ಯದ ಒಟ್ಟು ಜನ ಸಂಖ್ಯೆಗೆ ಪರಿಶಿಷ್ಟ ಜಾತಿ ಮಹಿಳೆಯರ ಜನ ಸಂಖ್ಯೆಯು ಶೇ.8.53 (ಭಾರತ ಶೇ.8.08) ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರ ಜನಸಂಖ್ಯೆಯು ಶೇ.3.46 (ಭಾರತ ಶೇ.4.29)ರಷ್ಟಿದೆ. ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಯತ್ನಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಒತ್ತು ಹಾಗೂ ಗಮನ ನೀಡಲಾಗಿದೆ.
 • ಇಲಾಖೆಯು ನೀತಿಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಸಂಸ್ಥೆಗಳ ಪ್ರಯತ್ನಗಳಿಗೆ ಸೂಕ್ತ ಮಾರ್ಗದರ್ಶನ ಸಂಯೋಜನೆ ನೀಡಿ ಸಹಕರಿಸುತ್ತಿದೆ. ಸರ್ಕಾರೇತರ ಹಾಗೂ
 • ಇಲಾಖೆಯು ಉದ್ಯೋಗ, ಮಹಿಳೆಯರ ತರಬೇತಿ, ಅರಿವು ಮೂಡಿಸುವ ಹಾಗೂ ಲಿಂಗ ಸಂವೇದನಾಶೀಲತೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.
 • ಮಹಿಳೆಯರು ಸ್ವಾವಲಂಬಿಗಳಾಗಿ, ಮಹಿಳೆಯರು ಮತ್ತು ಮಕ್ಕಳನ್ನು ನಿರ್ಲಕ್ಷ್ಯತೆ, ನಿಂದನೆ ಮತ್ತು ಶೋಷಣೆಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಹಾಗೂ ಬದುಕುವ, ಅಭಿವೃದ್ಧಿ ಹೊಂದುವ ಮತ್ತು ಅವರ ವೈಯಕ್ತಿಕ ಪ್ರಗತಿ ಹಾಗೂ ಯೋಗಕ್ಷೇಮಕ್ಕೆ ಅಗತ್ಯವಿರುವ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಇತರೆ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಯನ್ನೊಳಗೊಂಡಂತೆ. ಅವರ ಮೂಲಭೂತ ಮಾನವ ಹಕ್ಕುಗಳನ್ನು ಖಾತರಿಪಡಿಸುವ ಉದ್ದೇಶದಿಂದ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಾರ್ಯಕ್ರಮಗಳ ವಿವರಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.

ಸಾಂತ್ವನ

 • ಅತ್ಯಾಚಾರ, ಕೌಟುಂಬಿಕ ಹಿಂಸೆ, ವರದಕ್ಷಿಣೆ, ಲೈಂಗಿಕ ಶೋಷಣೆ ಮುಂತಾದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಾಂತ್ವನ ಹಾಗೂ ಪುನರ್ವಸತಿ ಒದಗಿಸುವ ಉದ್ದೇಶವನ್ನು ಸಾಂತ್ವನ ಕೇಂದ್ರಗಳು ಹೊಂದಿವೆ. ರಾಜ್ಯದಲ್ಲಿ 196 ಸಾಂತ್ವನ ಕೇಂದ್ರಗಳು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ.
 • 2019-20ನೇ ಸಾಲಿನಲ್ಲಿ ರೂ.1380.00 ಲಕ್ಷಗಳನ್ನು ಸದರಿ ಯೋಜನೆಗೆ ನಿಗದಿ ಪಡಿಸಿದ್ದು ರೂ.546.75 ಲಕ್ಷಗಳನ್ನು ಜಿಲ್ಲೆಗಳಿಗೆ ಯೋಜನೆಯ ಅನುಷ್ಠಾನಕ್ಕಾಗಿ ಬಿಡುಗಡೆಗೊಳಿಸಿದ್ದು, ಡಿಸೆಂಬರ್ 2019ರ ಅಂತ್ಯಕ್ಕೆ ರೂ.521.13 ಲಕ್ಷಗಳ ವೆಚ್ಚವನ್ನು ಭರಿಸಲಾಗಿದೆ.

ಸ್ತ್ರೀಶಕ್ತಿ

 • ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಧೈಯದೊಂದಿಗೆ 2000-01ನೇ ಸಾಲಿನಲ್ಲಿ ಸ್ತ್ರೀಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.
 • ಪ್ರಾರಂಭದಿಂದ, ಡಿಸೆಂಬರ್ 2019ರ ಅಂತ್ಯದವರೆಗೆ ರೂ. 6037.28 ಕೋಟಿ ಉಳಿತಾಯ ಮಾಡಿರುತ್ತಾರೆ. 145531 ಗುಂಪುಗಳು ರೂ.8168.61 ಕೋಟಿಯನ್ನು ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿರುತ್ತಾರೆ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ರೂ. 7141.43 ಕೋಟಿಗಳ ಆಂತರಿಕ ಸಾಲದ ವ್ಯವಹಾರ ಮಾಡಿರುತ್ತಾರೆ.

ಭಾಗ್ಯಲಕ್ಷ್ಮಿ

 • ಈ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನಕ್ಕೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದಲ್ಲಿನ ಲಿಂಗಾನುಪಾತವನ್ನು ಉತ್ತಮಗೊಳಿಸುವ ಗುರಿಯನ್ನು ಈ ಯೋಜನೆಯು ಹೊಂದಿರುತ್ತದೆ.
 • ಇದಲ್ಲದೆ ಸಾಮಾಜಿಕ ಪಿಡುಗುಗಳಾದ ಬಾಲಕಾರ್ಮಿಕತೆ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಬಾಲ್ಯ ವಿವಾಹ, ಮಕ್ಕಳ ಸಾಗಾಣಿಕೆಯ ನಿರ್ಮೂಲನೆಗೆ ಪ್ರಯತ್ನಿಸುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸುವ 2 ಹೆಣ್ಣು ಮಕ್ಕಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
 • ಒಂದು ನಿಗದಿತ ಮೊತ್ತವನ್ನು ಭಾರತೀಯ ಜೀವ ವಿಮಾ ನಿಗಮದಲ್ಲಿ ಠೇವಣಿ ಇಟ್ಟು ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಹಾಗೂ ಕಾರ್ಯಕ್ರಮದಲ್ಲಿ ವಿಧಿಸಿರುವ ಷರತ್ತುಗಳನ್ನು ಪೂರೈಸಿದ ನಂತರ maturity ಮೊತ್ತವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ 2007-08 ರಿಂದ 2018-19ರವರೆಗೆ ಒಟ್ಟು 2583122 ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲಾಗಿದೆ.
 • 2019-20ನೇ ಸಾಲಿನಲ್ಲಿ ಫಲಾನುಭವಿಗಳಿಗೆ ಸೌಲಭ್ಯವನ್ನು ಕಲ್ಪಿಸಲು ಒಟ್ಟು ರೂ, 309.42 ಕೋಟಿ ಹಣ ಒದಗಿಸಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿನ ಫಲಾನುಭವಿಗಳನ್ನು 18 ವಯಸ್ಸಿನವರೆಗೆ ನಿಗವಹಿಸಲು NIC ಸಂಸ್ಥೆಯ ಸಹಾಯದೊಂದಿಗೆ 1 ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
 • ಈ ರೀತಿ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನಲ್ಲಿ ಮಗುವಿನ ಆರೋಗ್ಯ, ಶಿಕ್ಷಣ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಮತ್ತು ಬೇರೆ ಇಲಾಖೆಗಳಿಂದ ಪಡೆದುಕೊಂಡ ಇನ್ನಿತರ ಸೌಲಭ್ಯಗಳನ್ನು ನಿಗವಾಹಿಸಬಹುದಾಗಿದೆ. ಮಹಿಳಾ ಉದ್ದೇಶಿತ ಆಯವ್ಯಯ

ಮಹಿಳಾ ಉದ್ದೇಶಿತ ಆಯವ್ಯಯ

 • ದೇಶದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯವನ್ನು ಅನುಷ್ಠಾನಗೊಳಿಸುತ್ತಿರುವ 3 ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಮಹಿಳೆಯರಿಗೆ ಮೀಸಲಿಡಲಾದ ಮತ್ತು ವೆಚ್ಚ ಮಾಡಲಾದ ಸಂಪನ್ಮೂಲದ ಪರಿಣಾಮವನ್ನು ಹಾಗೂ ನಿಯಮಗಳ ಬದ್ಧತೆಯ ಸಮರ್ಪಕ ಅನುವಾದವನ್ನು ಗುರುತಿಸಲು ಆರ್ಥಿಕ ಇಲಾಖೆಯು ಲಿಂಗ ಆಧಾರಿತ ಉದ್ದೇಶಿತ ಆಯವ್ಯಯ ಕೋಶವನ್ನು ಸ್ಥಾಪಿಸಿರುತ್ತದೆ.
 • ಈ ಯೋಜನೆಗಳು ಪ್ರಸ್ತುತ ವರ್ಗ-ಎ ಮತ್ತು ವರ್ಗ-ಬಿ ಎಂದು ವರ್ಗೀಕರಿಸಲಾಗಿದೆ. ವರ್ಗ-ಎ ಶೇಕಡ 100ರಷ್ಟನ್ನು ಮಹಿಳೆಯರಿಗೆ ಮೀಸಲಿರಿಸಲಾದ ನಿರ್ದಿಷ್ಟ ಆಯವ್ಯಯವನ್ನು ವರ್ಗ-ಬಿ ಕನಿಷ್ಠ ಶೇಕಡ 30ರಷ್ಟು ಭಾಗವನ್ನು ಮಹಿಳೆಯರಿಗೆ ನಿರ್ದಿಷ್ಟ ಆಯವ್ಯಯವನ್ನು ಪ್ರತಿನಿಧಿಸುತ್ತದೆ (333 ಯೋಜನೆಗಳು),
 • 2019-20 ನೇ ಸಾಲಿನಲ್ಲಿ ವರ್ಗ ‘ಎ’ ಯಡಿ ರೂ.5222.46 ಕೋಟಿಗಳು ಮತ್ತು ವರ್ಗ ‘ಬಿ’ ಅಡಿ ರೂ. 46887.63 ಕೋಟಿಗಳನ್ನು ಒದಗಿಸಲಾಗಿದ್ದು, ಈ ಪೈಕಿ ಡಿಸೆಂಬರ್-2019ರ ಅಂತ್ಯಕ್ಕೆ ರೂ.3386.59 ಕೋಟಿಗಳು ಮತ್ತು ರೂ.9155.87 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)

 • ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಸದರಿ ಯೋಜನೆಯಡಿ 6 ಸೇವೆಗಳನ್ನು ನೀಡಲಾಗುತ್ತಿದೆ. ಅವುಗಳೆಂದರೆ ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ತಾಯಂದಿರಿಗೆ ಆರೋಗ್ಯ ಮತ್ತು ಪೌಷ್ಟಿಕ ಶಿಕ್ಷಣ ಹಾಗೂ 3-6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ.
 • ಫಲಾನುಭವಿಗಳು ಪತಿ ದಿನ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಪೂರಕವಾಗಿ ಪರಿಷ್ಕೃತ ಮಾರ್ಗಸೂಚಿಯಂತೆ 0-6 ವರ್ಷಕ ಮಕ್ಕಳಿಗೆ 500 ಕ್ಯಾಲೋರಿಗಳನ್ನು, 12-15 ಗ್ರಾಂ ಪ್ರೋಟಿನ್, ಗರ್ಭಿಣಿ/ ಬಾಣಂತಿ/ ಪಾಯಪೂರ್ವ ಬಾಲಕಿಯರಿಗೆ 600 ಕ್ಯಾಲೋರಿಗಳನ್ನು ಮತ್ತು 18-20 ಗ್ರಾಂ ಪ್ರೋಟಿನ್ ಅಲ್ಲದೆ ತೀವ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿಗಳನ್ನು ಮತ್ತು 20-25 ಗಾಂ, ಮೊಟಿನ್ ನೀಡುವ ಉದ್ದೇಶದಿಂದ ಈ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.
 • ಯೋಜನೆಯ ಮಾರ್ಗಸೂಚಿಯಂತೆ ವರ್ಷದಲ್ಲಿ 300 ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. 2019-20ನೇ ಸಾಲಿನಲ್ಲಿ ಡಿಸೆಂಬರ್- 2019ರ ಅಂತ್ಯಕ್ಕೆ 42.74 ಲಕ್ಷಗಳ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲಾಗಿದೆ.

ಮಾತೃವಂದನಾ ಯೋಜನೆ

 • ಮಾನ್ಯ ಪ್ರಧಾನ ಮಂತ್ರಿಗಳು ಪ್ಯಾನ್ ಇಂಡಿಯಾ ಅಡಿಯಲ್ಲಿ “ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ” (Maternity Benefit Programme) ಎಂಬ ಹೊಸ ಯೋಜನೆಯನ್ನು ಘೋಷಿಸಿಸಲಾಗಿದೆ. ‘ದಿನಾಂಕ: 01.01.2017ರ ನಂತರ ಗರ್ಭಿಣಿ ಹಾಗೂ ಬಾಣಂತಿಯರಿಗೆ ಎಲ್ಲಾ ಮಹಿಳೆಯರಿಗೆ ರೂ.5000/ ಗಳನ್ನು ಮೂರು ಕಂತುಗಳಲ್ಲಿ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ವರ್ಗಾಯಿಸಲಾಗುವುದು. ಫಲಾನುಭವಿಯ ಖಾತೆಗೆ
 • ಸದರಿ ಯೋಜನೆ ಸೌಲಭ್ಯವನ್ನು ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತಗೊಳಿಸಲಾಗಿದೆ. 2019-20ನೇ ಸಾಲಿನಲ್ಲಿ ಡಿಸೆಂಬರ್ 2019ರ ಅಂತ್ಯಕ್ಕೆ ರೂ.15389.00 ಲಕ್ಷಗಳ ವೆಚ್ಚದಲ್ಲಿ 238034 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲಾಗಿದೆ.

ಮಾತೃಶ್ರೀ ಯೋಜನೆ

 • ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಪೌಷ್ಠಿಕತೆಯನ್ನು ಹೆಚ್ಚಿಸಲು ಸರ್ಕಾರವು ಅನುಷ್ಠಾನಗೊಳಿಸುತ್ತಿದೆ. ಹಲವಾರು ಕಾರ್ಯಕ್ರಮಗಳನ್ನು
 • ರಕ್ತ ಹೀನತೆಯಿಂದ ಬಳಲುತ್ತಿರುವ ಮಹಿಳೆಯರು ಸಾಮಾನ್ಯವಾಗಿ ಆಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಾರೆ.
 • ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿಯರ ಮತ್ತು ಹಾಲು ಉಣಿಸುವ ಮಹಿಳೆಯರ ಪೌಷ್ಠಿಕತೆಯನ್ನು ಮತ್ತು ಆರೋಗ್ಯ ಸ್ಥಿತಿಯನ್ನು ಹೆಚ್ಚಿಸಲು “ಮಾತೃ” ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ನೂತನ
 • 2019-20 e ಸಾಲಿನ ಡಿಸೆಂಬರ್-2019ರ ಅಂತ್ಯಕ್ಕೆ ರೂ.6115.18 ಲಕ್ಷಗಳ . ವೆಚ್ಚದಲ್ಲಿ ರೂ.415 ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲಾಗಿದೆ.
 • ಪೋಷಣ್‌ ಅಭಿಯಾನ್ ಯೋಜನೆ: ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆ, ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ತಡೆಗಟ್ಟುವುದು, ಮಕ್ಕಳ/ಕಿಶೋರಿ/ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆಯನ್ನು ಕಡಿಮೆಗೊಳಿಸುವ ಮೂಡಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್ )

 • ರಾಜ್ಯದಲ್ಲಿ ಪಾಲನಾ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಅವರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ 2010-11ನೇ ಸಾಲಿನಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ಪ್ರಾರಂಭಿಸಲಾಗಿದೆ.
 • ಶೋಷಿತ ವರ್ಗದ ಮಕ್ಕಳು ದುರ್ಬಲ ಸ್ಥಿತಿಗೆ ತಲುಪುವುದನ್ನು ತಡೆಗಟ್ಟಿ ಅವರಿಗೆ ಶಾಸನಬದ್ಧ ಪೋಷಣೆ ಹಾಗೂ ಪುನರ್ವಸತಿ ಸೇವೆಯನ್ನು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಒದಗಿಸುತ್ತದೆ.
 • ಪ್ರಸ್ತಕ ಆರ್ಥಿಕ ವರ್ಷದಲ್ಲಿ ರೂ.7831.00 ಲಕ್ಷಗಳ ಅನುದಾನ ಹಂಚಿಕೆಯಾಗಿದ್ದು, ಡಿಸೆಂಬರ್-2019ರ ಅಂತ್ಯಕ್ಕೆ ರೂ.4789,64 ಲಕ್ಷಗಳ ವೆಚ್ಚವನ್ನು ಭರಿಸಲಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ

 • ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ರಾಜ್ಯದ ದುರ್ಬಲ ವರ್ಗದ – ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಉದ್ಯೋಗಿನಿ ಯೋಜನೆ, ಮಹಿಳಾ ತರಬೇತಿ ಯೋಜನೆ, ಮಾಜಿ ದೇವದಾಸಿ ಮಹಿಳೆಯರಿಗೆ ಮಾಸಾಶನ, ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ನಿರ್ಮಾಣ, ದೇವದಾಸಿ ಪುನರ್ವಸತಿ ಯೋಜನೆ, ಧನ, ಲಿಂಗತ್ವ ಅಲ್ಪಸಂಖ್ಯಾಂತರ ಪುನರ್ವಸತಿ, ಸಮೃದ್ಧಿ ಯೋಜನೆ, ಮಾರುಕಟ್ಟೆ ನೆರವು ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುತ್ತಿದೆ.

ಪ ಜಾತಿಗಳ, ಪ. ಪಂಗಡಗಳ, ಹಿಂದುಳಿದ ವರ್ಗಗಳ & ಅಲ್ಪಸಂಗದ ಕಲ್ಯಾಣ ಕಾರ್ಯಕ್ರಮನ |

 • ಸುಸ್ಥಿರ ಅಭಿವೃದ್ಧಿ, ಗುರಿ-10 ಜನರು ಮತ್ತು ಭೂಮಿಯಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡುವ ಕಾರ್ಯಸೂಚಿಯನ್ನು ಮುಂದಿಡುತ್ತದೆ: ರಾಜ್ಯ ಸರ್ಕಾರವು `ವೇಗವಾಗಿ, ಸಮರ್ಥನೀಯ ಮತ್ತು ಹೆಚ್ಚು ಪ್ರಭಾವಶಾಲಿಯಾಗಿ ಸಾಧಿಸಲು ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರ ಮತ್ತು ಸಾಮಾಜಿಕವಾಗಿ ಕೆಳವರ್ಗದಲ್ಲಿರುವವರ ಸಾಮರ್ಥ್ಯಗಳನ್ನು ಮತ್ತು ಉತ್ಪಾದಕತೆಗಳನ್ನು ಸುಧಾರಿಸಲು ಸ್ವತಃಬದ್ಧವಾಗಿದ
 • ಈ ದಿಸೆಯಲ್ಲಿ ರಾಜ್ಯದ ಕಲ್ಯಾಣ ಇಲಾಖೆಗಳು ಮತ್ತು ಅಭಿವೃದ್ಧಿ ನಿಗಮಗಳು ವಿವಿಧ ಬಹುಮುಖಿ ಹಾಗೂ ಬಹುದೀರ್ಘಕಾಲದ ಕಾರ್ಯಕ್ರಮಗಳನ್ನು ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಾಗೂ ಇವರನ್ನು ಮುಖ್ಯವಾಹಿನಿಯ ಅಭಿವೃದ್ಧಿಯ ಪಥದಲ್ಲಿ ತರಲು ಅನುಷ್ಠಾನಗೊಳಿಸುತ್ತಿವೆ.

ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳು

 • 2001 ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯು 0.86 ಕೋಟಿಗಳಷ್ಟಿದ್ದು, 2011 ರ ಜನಗಣತಿಯಲ್ಲಿ 1.05 ಕೋಟಿಗಳಿಗೆ ಏರಿಕೆಯಾಗಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.17.15 ರಷ್ಟು ಆಗಿರುತ್ತದೆ.
 • ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
 • ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸೇರಿದ ಮಕ್ಕಳ ಶಿಕ್ಷಣ ಮತ್ತು ಸಾಕ್ಷರತೆಯ ಪ್ರೋತ್ಸಾಹಕ್ಕಾಗಿ ಮೆಟ್ರಿಕ್ ಪೂರ್ವ ಮಕ್ಕಳಿಗೆ ರಿಂದ 8ನೇ ತರಗತಿಯವರೆಗೆ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
 • 9 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿವೇತನವು ಮಂಜೂರಾಗುತ್ತದೆ. ರಾಜ್ಯ ಸರ್ಕಾರದಿಂದ 2018-19 ರ ಸಾಲಿನಲ್ಲಿ 7.27 ಲಕ್ಷ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದ್ದರೆ, 2017-18 “ರ ಸಾಲಿನಲ್ಲಿ 9.39ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿತ್ತು.
 • 2019-20 ನೇ ಸಾಲಿನ ನವೆಂಬರ್ ಅಂತ್ಯದವರೆಗೆ 196ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿರುತ್ತಾರೆ. 5 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
 • 2019-20 ನೇ ಸಾಲಿನಲ್ಲಿ (ನವೆಂಬರ್ 2019 ರವರೆಗೆ) 115818 ವಿದ್ಯಾರ್ಥಿಗಳು ಈ ಯೋಜನೆಯಿಂದ ಪ್ರಯೋಜನ ಪಡೆದಿರುತ್ತಾರೆ. 2018-19ನೇ ಸಾಲಿನಲ್ಲಿ 76824 ವಿದ್ಯಾರ್ಥಿಗಳು ಈ ಯೋಜನೆಯಿಂದ ಪ್ರಯೋಜನ ಪಡೆದಿರುತ್ತಾರೆ.
 • ಪೋಷಕರ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷಗಳಿಗಿಂತ ಕಡಿಮೆ ಇರುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ನಿರ್ವಹಣಾ ವೆಚ್ಚವನ್ನು ಮನೆಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅವರುಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
 • ರಾಜ್ಯವು 2018-19 ರ ಸಾಲಿನಲ್ಲಿ 2.06ಲಕ್ಷ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದು, 2017-18ರ ಸಾಲಿನಲ್ಲಿ 3.06ಲಕ್ಷ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿತ್ತು.
 • 2019-20 ಸಾಲಿನ ನವೆಂಬರ್ ಅಂತ್ಯದವರೆಗೆ 21962 ವಿದ್ಯಾರ್ಥಿಗಳು ಈ ಯೋಜನೆಯಿಂದ ಪ್ರಯೋಜನ ಪಡೆದಿರುತ್ತಾರೆ. ಸರ್ಕಾರವು 636 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದ್ದು, 67017 ಅರ್ಹ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಿರುತ್ತದೆ.
 • ಪ್ರತಿಭೆ ಪುರಸ್ಕರಿಸಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸದರಿ ಯೋಜನೆಯಡಿ 2019-20 ನೇ ಸಾಲಿನ ನವೆಂಬರ್ ಅಂತ್ಯಕ್ಕೆ 20011 ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲಾಗಿದ್ದು, 2018-19 ನೇ ಸಾಲಿಗೆ 42338 ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲಾಗಿದೆ.
 • ಪರಿಶಿಷ್ಟ ಜಾತಿ ಉಪ ಯೋಜನೆಯಡಿ 2019-20 ನೇ ಸಾಲಿನಲ್ಲಿ ರೂ.21603 ಕೋಟಿಗಳನ್ನು ನಿಗದಿಪಡಿಸಿದ್ದು, ನವೆಂಬರ್ ಅಂತ್ಯಕ್ಕೆ ರೂ.8684 ಕೋಟಿಗಳು ವೆಚ್ಚವಾಗಿರುತ್ತದೆ.
 • ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಗಳ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ-ಉದ್ಯೋಗ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಮೈಕ್ರೋ ಕ್ರೆಡಿಟ್ ಫೈನಾನ್ಸ್ (ಪ್ರೇರಣಾ)ಯೋಜನೆ ಮುಂತಾದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, 2019-20 ರಲ್ಲಿ (ನವೆಂಬರ್ 2019 ರವರೆಗೆ) ಕ್ರಮವಾಗಿ 1196, 632, 2212 ಮತ್ತು 3287 ವ್ಯಕ್ತಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ.
 • ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಆರ್.ಟಿ.ಜಿ.ಎಸ್. ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಎಲ್ಲಾ ಯೋಜನೆಗಳಡಿ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲು ಮತ್ತು ವಿಳಂಬವನ್ನು ಹಾಗೂ ಯೋಜನಾ ನಿಧಿಗಳ ದುರುಪಯೋಗವನ್ನು ತಡೆಗಟ್ಟಲು ಇದನ್ನು ಅನುಷ್ಠಾನಗೊಳಿಸಲಾಗಿದೆ.
 • ಸಂಸ್ಥೆಯು ಕೇಂದ್ರ ಕಛೇರಿಯ ವ್ಯವಸ್ಥಾಪಕ ನಿರ್ದೇಶಕರ ಶಾಖೆಗೆ ‘ಸ್ಪಂದನೆ’ ಎಂಬ ತಂತ್ರಾಂಶವನ್ನು (Issue based tracking system software) ಅಳವಡಿಸಲಾಗಿದೆ.
 • ಸದರಿ ತಂತ್ರಾಂಶದಿಂದ ಭೇಟಿ ಮಾಡಿದ ಅರ್ಜಿದಾರರು ತಮ್ಮ ಅರ್ಜಿಯ/ಮನವಿಯ ಸ್ಥಿತಿಗತಿಯನ್ನು ಎಸ್.ಎಂ.ಎಸ್‌. ಮುಖಾಂತರ ಅರಿತುಕೊಳ್ಳಬಹುದಾಗಿರುತ್ತದೆ.
 • ಅಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳು, ಪಂಪ್ ಸೆಟ್ ಅಳವಡಿಕೆ, ಮತ್ತು ವಿದ್ಯುದ್ದೀಕರಣಗೊಂಡ ಕೊಳವೆ ಬಾವಿಗಳ ಸಂಖ್ಯೆಯ ಪ್ರಗತಿ ವಿವರಗಳನ್ನು ಆನ್‌ಲೈನ್ ಮುಖಾಂತರ ಪಡೆದುಕೊಳ್ಳುವ ಸಲುವಾಗಿ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ.

ಪ. ವರ್ಗಗಳ ಜನರ ಕಲ್ಯಾಣ ಕಾರ್ಯಕ್ರಮಗಳು

 • ಪರಿಶಿಷ್ಟ ಪಂಗಡಗಳ ಜನಸಂಖ್ಯೆಯು 2001 ರ ಜನಗಣತಿಯಲ್ಲಿ 0.35 ಕೋಟಿಗಳಿದ್ದು, 2011 ರ ಜನಗಣತಿಯಲ್ಲಿ 0,42 ಕೋಟಿಗಳಿಗೆ ಏರಿಕೆಯಾಗಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.6.95 ರಷ್ಟು ಆಗಿರುತ್ತದೆ. ರಾಜ್ಯ ಸರ್ಕಾರವು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
 • ಪ್ರತಿಷ್ಠಿತ ವಸತಿ/ವಸತಿಯೇತರ ಶಾಲೆಗಳಿಗೆ ಪ್ರತಿಭಾನ್ವಿತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು 5ನೇ ತರಗತಿಯಿಂದ ಆಯ್ಕೆ ಮಾಡಿ ಸೇರಿಸಲಾಗುತ್ತಿದೆ. ಈ ಯೋಜನೆಯಡಿ ಪ್ರತಿಯೊಬ್ಬ ವಿದ್ಯಾರ್ಥಿಗೆ ತಗಲುವ ಎಲ್ಲಾ ಶುಲ್ಕ ಹಾಗೂ ಇತರೆ ನಿರ್ವಹಣಾ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುತ್ತಿದೆ.
 • 2018-19 ರ ಸಾಲಿನಲ್ಲಿ 2073 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದರೆ 2017-18ರ ಸಾಲಿನಲ್ಲಿ 1781 ವಿದ್ಯಾರ್ಥಿಗಳು ಪ್ರಯೋಜನ ಪಡೆದಿರುತ್ತಾರೆ. 1 ರಿಂದ 8 ನೇ ತರಗತಿ ಹಾಗೂ 9 ರಿಂದ 10ನೇ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತಿದೆ.
 • 2019-20 ನೇ ಸಾಲಿನಲ್ಲಿ (ನವೆಂಬರ್-2019 ರವರೆಗೆ) 195964 ವಿದ್ಯಾರ್ಥಿಗಳು ಈ ಯೋಜನೆಯಡಿ ಸೌಲಭ್ಯ ಪಡೆದಿರುತ್ತಾರೆ. ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಒಳಗೊಂಡಂತೆ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಅವರ – ಕುಟುಂಬದ ವಾರ್ಷಿಕ ವರಮಾನ ರೂ.2.50 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುವುದು. ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿರುತ್ತದೆ.
 • ಕಾಲೇಜು ಶಿಕ್ಷಣ ವನ್ನು ಮುಂದುವರೆಸಲು, ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹವನ್ನು ನೀಡುತ್ತಿದ್ದು, ಇದನ್ನು 2009-10 ರಿಂದಲೇ ಅನುಷ್ಠಾನಗೊಳಿಸಲಾಗುತ್ತಿದೆ. 14325 ವಿದ್ಯಾರ್ಥಿಗಳು 2019-20 ರಲ್ಲಿ (ನವೆಂಬರ್ 2019 ರವರೆಗೆ) ಮತ್ತು 2018-19 ರಲ್ಲಿ 27945 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ.
 • ಪರಿಶಿಷ್ಟ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಗಿರಿಜನ ಉಪಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿ 2019–20ನೇ ಸಾಲಿನಲ್ಲಿ ರೂ.8842 ಕೋಟಿಗಳನ್ನು ನಿಗದಿಪಡಿಸಿದ್ದು, ನವೆಂಬರ್ ಅಂತ್ಯಕ್ಕೆ ರೂ.4151 ಕೋಟಿಗಳು ವೆಚ್ಚವಾಗಿರುತ್ತದೆ.
 • ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯು ಮೈಸೂರು, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತ ಸಂವಿಧಾನ ಅನುಚ್ಛೇದ 275(1)ರಡಿ ವಿಶೇಷ ಕಾರ್ಯಕ್ರಮಗಳ ಅಭಿವೃದ್ಧಿಯನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳು ರಾಜ್ಯದ ಯೋಜನಾ ಕಾರ್ಯಕ್ರಮಗಳಲ್ಲಿ ಒಳಗೊಂಡಿರುವುದಿಲ್ಲ.
 • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮವು ಪರಿಶಿಷ್ಟ ವರ್ಗಗಳ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಯೋಜನೆ, ಭೂಮಿ ಖರೀದಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸಣ್ಣ ಸಾಲ ಯೋಜನೆ, ಐರಾವತ ಯೋಜನೆ ಮತ್ತು ಸಮೃದ್ಧಿ ಯೋಜನೆ ಮುಂತಾದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, 2019-20ರಲ್ಲಿ (ನವೆಂಬರ್-2019 ರವರೆಗೆ) ಕ್ರಮವಾಗಿ 771, 349, 799, 2403, 418 ಮತ್ತು 135 ವ್ಯಕ್ತಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳು

 • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ), ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆ.
 • ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ.44,500ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತಿದೆ. 2018-19 ರಲ್ಲಿ 24.83 ಲಕ್ಷ ವಿದ್ಯಾರ್ಥಿಗಳು ಹಾಗೂ 2017-18 ರಲ್ಲಿ 26.67 ಲಕ್ಷ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿರುತ್ತಾರೆ.
 • ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವ ಸಲುವಾಗಿ ಕುಟುಂಬದ ವಾರ್ಷಿಕ ಆದಾಯ ಪ್ರವರ್ಗ-1ಕ್ಕೆ ರೂ.1.00 ಲಕ್ಷ, B.44,500,0 ವಿದ್ಯಾರ್ಥಿಗಳಿಗಾಗಿ 133 ಶಾಲೆಗಳನ್ನು ಸ್ಥಾಪಿಸಲಾಗಿದೆ. ಇತರೆ ಪ್ರವರ್ಗಗಳಿಗೆ ಕಡಿಮೆ ಇರುವ ಮೊರಾರ್ಜಿ ಪ್ರತಿಭಾವಂತ ದೇಸಾಯಿ ವಸತಿ
 • 2018-19 ರಲ್ಲಿ 32781 ವಿದ್ಯಾರ್ಥಿಗಳು ಹಾಗೂ 2019-20 ರ ನವೆಂಬರ್ ಅಂತ್ಯಕ್ಕೆ 38347 ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿರುತ್ತಾರೆ.
 • ವಾರ್ಷಿಕ ಕುಟುಂಬ ಆದಾಯವು ಪ್ರವರ್ಗ-1ಕ್ಕೆ ರೂ.1.00 ಲಕ್ಷ ಹಾಗೂ ಇತರೆ ಪ್ರವರ್ಗಗಳಿಗೆ ರೂ.44,500ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾವತಿಯಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್‌ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡಲು ಉಚಿತ ಊಟ, ವಸತಿ, ಮತ್ತು ಇತರೆ ವೆಚ್ಚಗಳನ್ನು ಒದಗಿಸಲಾಗುತ್ತಿದೆ.
 • 2018-19 ರಲ್ಲಿ 1.73 ಲಕ್ಷ ವಿದ್ಯಾರ್ಥಿಗಳು ಹಾಗೂ 2017-18 ರಲ್ಲಿ 1,70ಲಕ್ಷ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿದ್ದು, 2019-20 ರ ನವೆಂಬರ್ ಅಂತ್ಯಕ್ಕೆ 1.60 ಲಕ್ಷ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿರುತ್ತಾರೆ.
 • ಬಡ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಪ್ರೋತ್ಸಾಹಿಸಲು ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಪ್ರವರ್ಗ-1 ಕ್ಕೆ ರೂ.2.50 ಲಕ್ಷ, ಇತರೆ ವರ್ಗದವರಿಗೆ ರೂ.1.00 ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗುತ್ತಿದೆ.
 • 2018-19 ರಲ್ಲಿ 5.68 ಲಕ್ಷ ವಿದ್ಯಾರ್ಥಿಗಳು ಹಾಗೂ ಹಾಗೂ 2017-18 ರಲ್ಲಿ 6.30 ಲಕ್ಷ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿರುತ್ತಾರೆ.
 • ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ (ಕುಟುಂಬದ ವಾರ್ಷಿಕ ವರಮಾನ ರೂ.1,44,000 ಮಿತಿಯೊಳಗಿದ್ದರೆ) ಪ್ರೋತ್ಸಾಹಿಸಲು ಆರ್ಥಿಕ ಸಹಾಯವನ್ನು ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
 • ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲವನ್ನು ಪೋಸ್ಟ್ ಡಾಕ್ಟೋರಲ್, ಪಿ.ಹೆಚ್.ಡಿ, ಮತ್ತು ಸ್ನಾತಕೋತ್ತರ ಕೋರ್ಸುಗಳಿಗಾಗಿ ವಾರ್ಷಿಕವಾಗಿ ರೂ.3.50 ಲಕ್ಷದಿಂದ ಒಂದು ಕೋರ್ಸಿನ ಅವಧಿಗೆ ಗರಿಷ್ಠ ರೂ.10 ಲಕ್ಷದವರೆಗೆ ನೀಡಲಾಗುವುದು.
 • 2019-20 ರ ನವೆಂಬರ್ ಅಂತ್ಯಕ್ಕೆ 31 ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿರುತ್ತಾರೆ. ಹಿಂದುಳಿದ ವರ್ಗಗಳ ಮಹಿಳಾ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ನೆರವಾಗುವ ಸಲುವಾಗಿ ಹೊಲಿಗೆ ತರಬೇತಿ ಮತ್ತು ನರ್ಸಿಂಗ್ ತರಬೇತಿ ಕಾರ್ಯಕ್ರಮಗಳನ್ನು ಇಲಾಖೆಯು ಕೈಗೆತ್ತಿಕೊಂಡಿರುತ್ತದೆ.
 • ಅಲೆಮಾರಿ ಜನಾಂಗದ/ಅರೆ ಅಲೆಮಾರಿ ಜನಾಂಗದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
 • 2018-19 ರ ಸಾಲಿನಲ್ಲಿ 106795 ವ್ಯಕ್ತಿಗಳು, 2017-18 ರಲ್ಲಿ 51454 ವ್ಯಕ್ತಿಗಳು ಸದರಿ ಪ್ರಯೋಜನವನ್ನು ಪಡೆದಿರುತ್ತಾರೆ.2019 20 ನೇ ಸಾಲಿನಲ್ಲಿ (ನವೆಂಬರ್-2019 ರವರೆಗೆ) 38567 ವ್ಯಕ್ತಿಗಳು ಈ ಯೋಜನೆಯಡಿ ಪ್ರಯೋಜನ ಪಡೆದಿರುತ್ತಾರೆ.
 • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಚೈತನ್ಯ ಸಬ್ಸಿಡಿ ಹಾಗೂ ಸಾಫ್ಟ್ ಲೋನ್ ಯೋಜನೆ, ಡಿ.ದೇವರಾಜ ಅರಸು ವೈಯಕ್ತಿಕ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಕಿರುಸಾಲ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ ಮುಂತಾದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
 • 2019-20 ರಲ್ಲಿ (ನವೆಂಬರ್ -2019 ರವರೆಗೆ) ಕ್ರಮವಾಗಿ 1020, 4951, 479, 4908 ಮತ್ತು 790 ವ್ಯಕ್ತಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ. ಅಲೆಮಾರಿ ಜನಾಂಗದ/ಅರೆ ಅಲೆಮಾರಿ ಜನಾಂಗದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
 • ಅಲ್ಲದೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ,ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ, ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ sala ಯೋಜನೆ ಮುಂತಾದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. 2019-20 ರಲ್ಲಿ (ನವೆಂಬರ್-2019 ರವರೆಗೆ) ಕ್ರಮವಾಗಿ 1045, 284, 297, 89 ಮತ್ತು 272 ವ್ಯಕ್ತಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ.

ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು

 • ಅಲ್ಪಸಂಖ್ಯಾತರ ಉನ್ನತಿಯನ್ನು ಹೆಚ್ಚಿಸಲು ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಯೋಜನೆಗಳನ್ನು ಹಮ್ಮಿಕೊಂಡಿದೆ. ಮೂಲಕ ವಿವಿಧ
 • ಅಲ್ಪಸಂಖ್ಯಾತರ ವಸತಿ ನಿಲಯ/ವಸತಿ ಶಾಲೆಗಳಲ್ಲಿ ನೆಲೆಸಿರುವ ಎಸ್ಎಸ್ಎಲ್.ಸಿ/ಪಿಯುಸಿ/ಪದವಿ/ಸ್ನಾತ್ತಕೋತ್ತರ ಪದವಿ ತರಗತಿಗಳ ಅಂತಿಮ ವರ್ಷದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 1000, ರೂ. 1500, ರೂ. 2000 ಹಾಗೂ ರೂ. 3000 ಗಳ ಉತ್ತೇಜನ ಬಹುಮಾನವನ್ನು ಪ್ರತಿ ವರ್ಷವೂ ನೀಡುವ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.
 • 2018-19 ರಲ್ಲಿ 10125 ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿರುತ್ತಾರೆ. ಅಲ್ಪಸಂಖ್ಯಾತರ ಯುವಕ/ಯುವತಿಯರಿಗೆ ನಿರುದ್ಯೋಗ ನಿವಾರಣೆ ಮತ್ತು ಸ್ವಯಂ ಉದ್ಯೋಗಿಗಳಾಗಿ ಜೀವನ ನಡೆಸಲು ವಿವಿಧ ತರಬೇತಿಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ನೀಡಲಾಗುವುದು. 2018-19 ರಲ್ಲಿ 1340 ಹಾಗೂ 2019-20 ರ ನವೆಂಬರ್ ಅಂತ್ಯಕ್ಕೆ 230 ಫಲಾನುಭವಿಗಳು ಪ್ರಯೋಜನವನ್ನು ಪಡೆದಿರುತ್ತಾರೆ.
 • ಧಾರ್ಮಿಕ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಏಳಿಗೆಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ವಿವಿಧ ಅಭಿವೃದ್ಧಿ ಯೋಜನೆಗಳಾದ ಸ್ವಯಂ-ಉದ್ಯೋಗ ಸಹಾಯಧನ ಯೋಜನೆ, ಶ್ರಮಶಕ್ತಿ ಯೋಜನೆ, ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಅರಿವು ಸಾಲ ಯೋಜನೆ, ಭೂ ಖರೀದಿ ಯೋಜನೆ,ವೃತ್ತಿ ಪ್ರೋತ್ಸಾಹ ಯೋಜನೆ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
 • 2018-19 ರ ಸಾಲಿನಲ್ಲಿ 45286 “ಅಲ್ಪಸಂಖ್ಯಾತರು ಈ ಯೋಜನೆಗಳ ಅಡಿಯಲ್ಲಿ ಪ್ರಯೋಜನ ಪಡೆದಿರುತ್ತಾರೆ. ಹೀಗೆ ಈ ಸಾಮಾಜಿಕ ಗುಂಪುಗಳ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಹಾಗೂ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ನಿರ್ಣಾಯಕ ಅಂಶಗಳಾದ ಶಿಕ್ಷಣ,ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಏಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಾರ್ಯಕ್ರಮಗಳು

 • 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 13,24,205 ವಿವಿಧ ರೀತಿಯ ವಿಕಲಚೇತನರಿದ್ದಾರೆ. ಸರ್ಕಾರವು ಅಂಗವಿಕಲತೆ ಯಿರುವ ವ್ಯಕ್ತಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಮಾನ ಅವಕಾಶ ಒದಗಿಸಲು ಶ್ರಮಿಸುತ್ತಿದೆ
 • ಈ ಗ್ರಾಮೀಣ ಪ್ರದೇಶದಲ್ಲಿ ರೂ.12000/- ಹಾಗೂ ನಗರ ಪ್ರದೇಶದಲ್ಲಿ ರೂ.17000/- ಕ್ಕಿಂತಲೂ ಕಡಿಮೆ ಆದಾಯವುಳ್ಳ ಕುಟುಂಬದಲ್ಲಿರುವ ಶೇ.40 ರಿಂದ 74 ರಷ್ಟು ಅಂಗವಿಕಲತೆಯನ್ನು ಹೊಂದಿರುವ ವಿಕಲ ಚೇತನರಿಗೆ ಮಾಹೆಯಾನ ರೂ.600/-ಗಳ ಹಾಗೂ ಶೇ.75ಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿರುವ ವಿಕಲಚೇತನರಿಗೆ ಮಾಹೆಯಾನ ರೂ.1400/- ಗಳ ಪೋಷಣಾ ಭತ್ಯೆಯನ್ನು ನೀಡಲಾಗುತ್ತಿದೆ.
 • 2019-20ನೇ ಸಾಲಿನಿಂದ ಈ ಯೋಜನೆಯು ಕಂದಾಯ ಇಲಾಖೆಯಿಂದ ಅನುಷ್ಠಾನ ಗೊಳಿಸಲಾಗುತ್ತಿದೆ.
 • 2019–20ನೇ ಸಾಲಿನ ನವೆಂಬರ್ ಅಂತ್ಯಕ್ಕೆ ವೈದ್ಯಕೀಯ ಪರಿಹಾರ ನಿಧಿಯಡಿ ರೂ.17,49 ಲಕ್ಷ ಖರ್ಚು ಮಾಡಿ 25 ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ.
 • ಜಿಲ್ಲಾವಲಯ ಯೋಜನೆಯಡಿ ಜಿಲ್ಲಾ ಅಂಗವಿಕಲರ ಪುನರ್‌ ವಸತಿ ಯೋಜನೆಯಡಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವಿಶೇಷ ಶಾಲೆಗಳು ಮತ್ತು ವೃತ್ತಿ ತರಬೇತಿ ಕೇಂದ್ರಗಳಿಗೆ 2019ರ ನವೆಂಬರ್ ಅಂತ್ಯಕ್ಕೆ ರೂ.469.12 ಲಕ್ಷಗಳನ್ನು ಖರ್ಚು ಮಾಡಿದ್ದು, 901 ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ.
 • ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹಧನ ನೀಡುವ ಯೋಜನೆಯು ಚಾಲ್ತಿಯಲ್ಲಿದ್ದು, 2019–20ನೇ ಸಾಲಿನ ನವೆಂಬರ್ ಅಂತ್ಯಕ್ಕೆ ರೂ.177.73 ಲಕ್ಷಗಳು ಖರ್ಚು ಮಾಡಿದ್ದು, 8266 ವಿದ್ಯಾರ್ಥಿಗಳು ಸೌಲಭ್ಯ ಪಡೆದಿರುತ್ತಾರೆ.
 • ಅದೇ ರೀತಿ ಸಾಧನೆ ಮತ್ತು ಪ್ರತಿಭೆ, ಗ್ರಾಮೀಣ ಪುನರ್‌ ವಸತಿ ಯೋಜನೆ, ಆಧಾರ, ಇತ್ಯಾದಿ ಯೋಜನೆಗಳನ್ನು ಅಂಗವಿಕಲರ ರಕ್ಷಣೆಗೆ ರೂಪಿಸಿ ಅನುಷ್ಠಾನಗೊಳಿಸಲಾಗಿದೆ.
 • ವಿಕಲಚೇತನರಿಗೆ ಅವರ ಸುಗಮ ಚಲನವಲನಕ್ಕೆ ಸಹಕಾರಿಯಾಗುವಂತೆ ಉಚಿತವಾಗಿ ಸಾಧನೆ ಸಲಕರಣೆ ವಿತರಿಸುವ ಯೋಜನೆಯು ಚಾಲ್ತಿಯಲ್ಲಿದ್ದು, ಶೇ.40ಕ್ಕಿಂತ ಅಧಿಕ ಅಂಗವಿಕಲತೆಯುಳ್ಳವರಿಗೆ ರೂ.10,000/- ಬೆಲೆಯ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
 • ಈ ಯೋಜನೆಯಡಿ ವಿಕಲಚೇತನರಿಗೆ 2016-17ನೇ ಸಾಲಿನಿಂದ 2019-20ನೇ ಸಾಲಿನ ನವೆಂಬರ್ ಅಂತ್ಯದವರೆಗೆ 12,445 ಸಾಧನಾ ಸಲಕರಣೆಗಳನ್ನು ಒದಗಿಸಲಾಗಿದೆ.
 • ದೃಷ್ಟಿ ದೋಷವುಳ್ಳ ಮಕ್ಕಳಿಗೆ ಬೇಕಾಗುವ ಬೈಲ್ ಪುಸ್ತಕಗಳನ್ನು ಮುದ್ರಿಸಿ ಸಂಬಂಧಪಟ್ಟ ಅಂಧರ ಶಾಲೆಗಳಿಗೆ ಮೈಸೂರಿನಲ್ಲಿರುವ ಬೈಲ್ ಮುದ್ರಣಾಲಯದ ಮೂಲಕ ಸರಬರಾಜು ಮಾಡಲಾಗುತ್ತಿದೆ.
 • 2019–20ನೇ ಸಾಲಿನ ನವೆಂಬರ್ ಅಂತ್ಯದವರೆಗೆ ಬೈಲ್ ಮುದ್ರಣಾಲಯದಿಂದ ಒಟ್ಟು 5,500 ಪುಸ್ತಕಗಳನ್ನು ಮುದ್ರಿಸಿ ಅಂಧ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ವಿಶೇಷ ಅಭಿವೃದ್ಧಿ ಯೋಜನೆ.

 • ರಾಜ್ಯವು ಎಲ್ಲಾ ತಾಲ್ಲೂಕುಗಳಲ್ಲಿ ಸಮತೋಲಿತ ಸಾಮಾಜಿ-ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯನ್ನು ಅರಿತುಕೊಂಡಿದೆ.
 • ಪ್ರಾದೇಶಿಕ ನಿವಾರಣಾ ಉನ್ನತ ಅಧಿಕಾರಿ ಸಮಿತಿಯ ವರದಿಯು ಡಾ|| ಡಿ.ಎಂ. ನಂಜುಂಡಪ್ಪ ವರದಿ ಎಂದು ಹೆಸರುವಾಸಿಯಾಗಿದ್ದು, ಸದರಿ ವರದಿಯನ್ನು ಜೂನ್ 2002 ರಲ್ಲಿ
 • ಈ ಸಮಿತಿಯು 35 ಸೂಚಕಗಳಿಗೆ ಸೂಕ್ತ ತೂಕವನ್ನು ನೀಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವನ್ನು ಅಂದಾಜಿಸಿ, ರಾಜ್ಯದಲ್ಲಿನ 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ಗುರುತಿಸಿದೆ.
 • ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಾಂಕವನ್ನು ಆಧರಿಸಿ ಪುನಃ ಈ ತಾಲ್ಲೂಕುಗಳನ್ನು, ಅತ್ಯಂತ ಹಿಂದುಳಿದ, ಆತೀ ಹಿಂದುಳಿದ ಮತ್ತು ಹಿಂದುಳಿದ ತಾಲ್ಲೂಕುಗಳಲ್ಲಿಯೂ ಸಹ ವರ್ಗೀಕರಿಸಿದೆ.
 • ರಾಜ್ಯದಲ್ಲಿನ 30 ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ 26 ತಾಲ್ಲೂಕುಗಳು – ಉತ್ತರ ಕರ್ನಾಟಕದಲ್ಲಿದ್ದು ಅದರಲ್ಲಿ ಕಲಬುರಗಿ ವಿಭಾಗದಲ್ಲಿಯೇ 21 ತಾಲ್ಲೂಕುಗಳಿರುತ್ತವೆ. 61 ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಲ್ಲಿ 40 ತಾಲ್ಲೂಕುಗಳು ದಕ್ಷಿಣ ಕರ್ನಾಟಕದಲ್ಲಿ ಇರುತ್ತವೆ.
 • ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತ ಅಧಿಕಾರಿ ಸಮಿತಿಯ ಶಿಫಾರಸ್ಸಿನಂತೆ 8 ವರ್ಷಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯನ್ನು 2002-03 ರಿಂದ 2009-10ರವರೆಗೆ ವಾರ್ಷಿಕ ಯೋಜನೆಗಳಿಂದ ರೂ. 15,000.00 ಕೋಟಿಗಳನ್ನು ಹಾಗೂ ನಿವ್ವಳ ಹೆಚ್ಚುವರಿಯಾಗಿ ರೂ. 16,000.00 ಕೋಟಿಗಳ ಅನುದಾನದೊಂದಿಗೆ ಅನುಷ್ಠಾನಗೊಳಿಸಬೇಕಾಗಿತ್ತು, ದುಸ್ಥಿತಿ ಸೂಚ್ಯಾಂಕದ ಆಧಾರದ ಮೇಲೆ ವಿಭಾಗಗಳ ಪಾಲು ಕಲಬುರರ್ಗಿ ವಿಭಾಗಕ್ಕೆ 40%, ಬೆಳಗಾವಿ ವಿಭಾಗಕ್ಕೆ 20%, ಬೆಂಗಳೂರು ವಿಭಾಗಕ್ಕೆ 25% ಮತ್ತು ಮೈಸೂರು ವಿಭಾಗಕ್ಕೆ 15 ರಷ್ಟು ಪ್ರತಿಶತವಾಗಿರುತ್ತದೆ.
 • ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು 2007-08 ರಲ್ಲಿ ಪ್ರಾರಂಭಿಸಲಾಗಿದ್ದು, 2007-08 ರಿಂದ 2019-20ವರೆಗೆ ಒಟ್ಟು .35506.30 ಕೋಟಿ ಅನುದಾನವನ್ನು ನಿಗದಿಪಡಿಸಿ ಡಿಸೆಂಬರ್-2019ರವರೆಗೆ ರೂ.26696,33 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು (ಶೇ. 75.19), ವೆಚ್ಚವು ರೂ.24519.68 ಕೋಟಿ ಇದ್ದು ಬಿಡುಗಡೆಯಾದ ಅನುದಾನಕ್ಕೆ ಶೇಕಡಾ 01 85 ರಷ್ಟು ಬೆಚ್ಚವಾಗಿರುತ್ತದೆ.
 • ಅನುಷ್ಠಾನ ಪ್ರಕ್ರಿಯೆಗಳನ್ನು ಸಂಘಟಿಸಲು ಮತ್ತು ಮೇಲ್ವಿಚಾರಣೆ ಯನ್ನು ಮಾಡಲು ಯೋಜನಾ ಇಲಾಖೆಯಲ್ಲಿ ವಿಶೇಷ ಕೋಶವನ್ನು ಸ್ಥಾಪಿಸಲಾಗಿರುತ್ತದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯನ್ನು ಡಿಸೆಂಬರ್ 2014ರಲ್ಲಿ ರಚಿಸಲಾಗಿರುತ್ತದೆ. ರಾಜ್ಯದ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳ ವಿಶೇಷ ಉಸ್ತುವಾರಿಗಾಗಿ 3) ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
 • 21 ಇಲಾಖೆಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸ ಲಾಗುತ್ತಿದೆ. ಸಂಬಂಧಪಟ್ಟ ಯೋಜನಾ ಇಲಾಖೆಯಲ್ಲಿ ವಿಶೇಷ | ಅಭಿವೃದ್ಧಿ ಕೋಶವು ಕಾರ್ಯಕ್ರಮದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು 114 ಹಿಂದುಳಿದ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕ್ರೋಢೀಕಟಿಸಿ ವರದಿಯನ್ನು ಸರ್ಕಾರಕ್ಕೆ ಮತ್ತು ಉನ್ನತ ಅಧಿಕಾರಿ ಸಮಿತಿಗಳಿಗೆ ಸಲ್ಲಿಸಲಾಗುತ್ತಿದೆ. ಇಲಾಖೆಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
 • ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೋಡಲ ಅಧಿಕಾರಿಗಳನ್ನಾಗಿ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಹೆಚ್ಚುವರಿ ನೋಡಲ್ ಅಧಿಕಾರಿಗಳನ್ನಾಗಿ ಹರ್ಕಾರವು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೇಮಿಸಿದೆ.
 • ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಆರ್ಥಿಕ ಪ್ರಗತಿಯ ಮಾಹಿತಿಯನ್ನು ಆನ್‌ ಲೈನ್ (ಡಿ.ಎಸ್.ಎಸ್)ನಲ್ಲಿ ಪಡೆಯಲಾಗುತ್ತಿದೆ. 1142 ಪ್ರದೇಶಾಭಿವೃದ್ಧಿ ಯೋಜನೆಗಳು ರಾಜ್ಯದ ಕೆಲವೊಂದು ಪ್ರದೇಶಗಳ ಅಂದರೆ ಮಲೆನಾಡು ಪ್ರದೇಶ ಮತ್ತು ಬಯಲುಸೀಮೆ ಪ್ರದೇಶದ ಸಮಗ್ರ ಅಭಿವೃದ್ಧಿಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರವು ಎರಡು ಸ್ವಾಯತ್ತ ಸಂಸ್ಥೆಗಳನ್ನು ರಚಿಸಿರುತ್ತದೆ.
 • ರಸ್ತೆ ಮತ್ತು ಸೇತುವೆಗಳು, ಗ್ರಾಮೀಣ ಮತ್ತು ನಗರ ನೀರು ಪೂರೈಕೆಗಳು, ಸಣ್ಣ ನೀರಾವರಿ ಕಾಮಗಾರಿಗಳು, ಭೂಸಾರ ಸಂರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
 • ಈ ಪ್ರದೇಶಾಭಿವೃದ್ಧಿ ಮಂಡಳಿಗಳ ಜೊತೆಗೆ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ, ಅಗತ್ಯತೆಗೆ ಅನುಗುಣವಾಗಿ ಯೋಜನೆಗಳ ವಿವರವಾದ ವರದಿಗಳನ್ನು ಹಾಗೂ ಶಕ್ಯತಾ ವರದಿಗಳನ್ನು ತಯಾರಿಸುವುದಕ್ಕಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ.
 • 2015-168c ಸಾಲಿನ ಆರ್ಥಿಕ ವರ್ಷದಿಂದ ಮೀನು ಮಾರುಕಟ್ಟೆಗಳು, ಸೇತುವೆಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸೌಲಭ್ಯಗಳು ಇತ್ಯಾದಿ ನಿರ್ಮಾಣ ಕಾರ್ಯಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಕೈಗೊಳ್ಳುತ್ತಿದೆ
 • ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯು ಮೇ-1993 ರಲ್ಲಿ ಪ್ರಾರಂಭವಾದಾಗಿನಿಂದ, ನವೆಂಬರ್-2019ರ ಅಂತ್ಯದವರೆಗೆ ರೂ.671.98ಕೋಟಿಗಳ ವೆಚ್ಚವನ್ನು ಭರಿಸಿ, 20243 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.
 • 2019-20ನೇ ಸಾಲಿನಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಬರುವ ಪ್ರತಿ ಶಾಸಕರಿಗೆ ತಲಾ ರೂ.1.00 ಕೋಟಿಯಂತೆ, ಒಟ್ಟು ರೂ.88,00 ಕೋಟಿಗಳ ಅನುದಾನಕ್ಕೆ ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ | ನೀಡಲಾಗಿದೆ.
 • ಬಯಲುಸೀಮೆ – ಪ್ರದೇಶಾಭಿವೃದ್ಧಿ ಮಂಡಳಿಯು 1995ರಲ್ಲಿ ಪ್ರಾರಂಭವಾದಾಗಿನಿಂದ, ನವೆಂಬರ್-2019ರ ಅಂತ್ಯದವರೆಗೆ 8.314.73 ಕೋಟಿಗಳ ವೆಚ್ಚವನ್ನು ಭರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8511 ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 2008ರಲ್ಲಿ ಪ್ರಾರಂಭವಾದಾಗಿನಿಂದ, ನವೆಂಬರ್ 2019ರ ಅಂತ್ಯದವರೆಗೆ ರೂ.62.51 ಕೋಟಿಗಳ ವೆಚ್ಚವನ್ನು ಭರಿಸಲಾಗಿದ್ದು, 231 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
 • ಸರ್ಕಾರವು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು 2001-02 ರಿಂದ ಅನುಷ್ಠಾನಗೊಳಿಸುತ್ತಿದೆ. ಸ್ಥಳೀಯರ ಆಶೋತ್ತರಗಳನ್ನು ಮತ್ತು ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಈಡೇರಿಸುವ ದೃಷ್ಟಿಯಿಂದ ಹೆಚ್ಚು ಸ್ಪಂದನ ಶೀಲ ಯೋಜನೆಗಾಗಿ ಮತ್ತು ಸೇವೆಗಳನ್ನು ಒದಗಿಸುವುದಕ್ಕಾಗಿ ಸರ್ಕಾರವು ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಆಸ್ತಿಪಾಸ್ತಿಗಳನ್ನು ಸೃಜಿಸುವ, ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಮತ್ತು ಉದ್ಯೋಗವನ್ನು ಸೃಜಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ, ಅವುಗಳನ್ನು ಯೋಜಿಸುವುದು ಮತ್ತು ಅನಷ್ಠಾನಕ್ಕೆ ತರುವುದನ್ನು ಶಾಸಕರ ಕ್ಷೇತ್ರದ ಮಟ್ಟದಲ್ಲೇ ಮಾಡಬಹುದಾಗಿದೆ.
 • 2019-20ನೇ ಸಾಲಿನಲ್ಲಿ ರೂ.600.00 ಕೋಟಿಗಳನ್ನು ಒದಗಿಸಲಾಗಿದ್ದು, ನವೆಂಬರ್ 2019ರ ಅಂತ್ಯಕ್ಕೆ ರೂ.150.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ರೂ.275.50 ಕೋಟಿಗಳು ವೆಚ್ಚವಾಗಿರುತ್ತದೆ.
 • (ಪ್ರಾರಂಭಿಕ ಶಿಲ್ಕು ಸೇರಿದಂತೆ) ಸದರಿ ಯೋಜನೆಯಡಿ ಒಟ್ಟಾರೆ, 9615 ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ಮಂಜೂರು ಮಾಡಿದ್ದು, ನವೆಂಬರ್-2019ರ ಅಂತ್ಯದವರೆಗೆ 4466 ಕಾಮಗಾರಿಗಳು ಪೂರ್ಣಗೊಂಡಿದ್ದು, ಸದರಿ ಯೋಜನೆಯನ್ನು ಹೊಸದಾಗಿ ಅಭಿವೃದ್ಧಿಪಡಿಸಲಾದ “ಗಾಂಧಿ ಸಾಕ್ಷಿ ಕಾಯಕ” “Worksoft” ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
 • ಕೇಂದ್ರ ಸರ್ಕಾರದಿಂದ 1993ರಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯು (ಎಂಪಿ ಲ್ಯಾಡ್ಸ್) ಆರಂಭಗೊಂಡಿದೆ.
 • ಈ ಯೋಜನೆಯಡಿಯಲ್ಲಿ ಮಾನ್ಯ ಸಂಸತ್ ಸದಸ್ಯರ ಶಿಫಾರಸ್ಸಿನ ಮೇರೆಗೆ ಸಮುದಾಯಿಕ ಸ್ವತ್ತುಗಳನ್ನು ಸೃಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ನೆರವನ್ನು ಒದಗಿಸುತ್ತಿದೆ.
 • ಅಭಿವೃದ್ಧಿ ರೂಪದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕಾಗಿ ಈ ಯೋಜನೆಯಡಿಯಲ್ಲಿ ಪ್ರತಿ ಸಂಸತ್‌ ಸದಸ್ಯರಿಗೆ ಪ್ರತಿ ವರ್ಷಕ್ಕೆ ರೂ.5.00ಕೋಟಿಗಳನ್ನು ನೋಡಲ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ.
 • ಈ ಯೋಜನೆಯಡಿ ಪ್ರಾರಂಭದಿಂದ ಡಿಸೆಂಬರ್-2019ರ ಅಂತ್ಯದವರೆಗೆ ರೂ.2650.72 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ರೂ.2445.91 ಕೋಟಿಗಳ ವೆಚ್ಚವನ್ನು ಭರಿಸಲಾಗಿದೆ.

ಅನುಚ್ಛೇದ 371ಜೆ-ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ.

 • ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳಿದ ಆರು ಜಿಲ್ಲೆಗಳಾದ ಬೀದರ್,
 • ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಅನುಚ್ಛೇದ 371ಜೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.
 • ಈ ಪ್ರದೇಶದ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ಆರ್ಥಿಕ ಸೂಚ್ಯಾಂಕಗಳನ್ನು ರಾಜ್ಯದ ಮತ್ತು ಇತರೆ ಪ್ರದೇಶ ಸೂಚ್ಯಾಂಕಗಳಿಗೆ ಹೋಲಿಸಿದಾಗ ಅಂತರವಿರುತ್ತದೆ.
 • ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಇರುವ ಅಂತರವನ್ನು ಕಡಿಮೆಗೊಳಿಸಲು ತೀವ್ರ ಪ್ರಯತ್ನಗಳ ಅವಶ್ಯಕತೆ ಇರುತ್ತದೆ. ಈ ಪ್ರದೇಶದಲ್ಲಿನ ಬೇಡಿಕೆಗೆ ಮತ್ತು ಸವಾಲುಗಳನ್ನು ಎದುರಿಸಿ ಅವಶ್ಯ ಬೇಡಿಕೆಗಳನ್ನು ಪೂರೈಸಲು ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ.
 • ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಲಿ ಶೇ. 70 ರಷ್ಟು ಆಯವ್ಯಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಹಾಗೂ ಶೇ. 30 ರಷ್ಟು ಅನುದಾನವನ್ನು ಸಾಂಸ್ಥಿಕ ಅಂತರವನ್ನು ಕಡಿಮೆಗೊಳಿಸಲು ನಿಗದಿಪಡಿಸಿದೆ.
 • ಮಂಡಳಿಯ ಕಾರ್ಯದರ್ಶಿಯವರಿಗೆ ರೂ.5.00 ಕೋಟಿವರೆಗಿನ ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಅಧಿಕಾರವನ್ನು ಈ ಹಿಂದೆ ನೀಡಲಾಗಿತ್ತು.
 • ಪ್ರಸ್ತುತ ರೂ. 10.00 ಕೋಟಿ ವರೆಗಿನ ಕಾಮಗಾರಿಗಳ ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.
 • ದಿನಾಂಕ 7.9.209ರಿಂದ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ” ಎಂದು ಮರುನಾಮಕರಣ ಮಾಡಲಾಗಿದೆ.
 • 2019-203 ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ರೂ.1500.00 ಕೋಟಿಗಳಲ್ಲಿ ರೂ.1004.25 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ. ನವೆಂಬರ್ 2019ರ ಅಂತ್ಯದವರೆಗೆ ಮಂಡಳಿಯು ರೂ.818.41 ಕೋಟಿಗಳನ್ನು ಒಟ್ಟಾರೆಯಾಗಿ ವೆಚ್ಚ ಮಾಡಲಾಗಿರುತ್ತದೆ. 7108 ಮಂಜೂರಾದ ಕಾಮಗಾರಿಗಳ ಪೈಕಿ 3546 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ.
 • ಸರ್ಕಾರದ ಕಾರ್ಯಕ್ರಮಗಳ/ಯೋಜನೆಗಳ ಮೌಲ್ಯಮಾಪನ 2000ದಲ್ಲಿ ಮೌಲ್ಯಮಾಪನ ನೀತಿಯನ್ನು ರೂಪಿಸಿದ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
 • ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವನ್ನು ಜುಲೈ 2011ರಲ್ಲಿ ಸ್ಥಾಪಿಸಲಾಗಿದ್ದು, ಸೆಪ್ಟೆಂಬರ್ 2011ರಲ್ಲಿ ಇದನ್ನು ಸಂಘವಾಗಿ ನೋಂದಾಯಿಸಲಾಗಿರುತ್ತದೆ.
 • ಸರ್ಕಾರದ ಅಭಿವೃದ್ಧಿ ನೀತಿಗಳ, ಉದ್ದೇಶಿತ ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ಹೊಂದುವುದು ಹಾಗೂ ನಾಗರಿಕರ ತೃಪ್ತಿಯನ್ನು ಗರಿಷ್ಠಗೊಳಿಸಲು ಸಂಪನ್ಮೂಲಗಳ ಅತ್ಯುತ್ತಮ ಬಳಕೆಗಾಗಿ ಸರ್ಕಾರದ ಅಭಿವೃದ್ಧಿ ನೀತಿಗಳ ಮತ್ತು ಕಾರ್ಯಕ್ರಮಗಳ ಪಾರದರ್ಶಕ, ವಾಸ್ತವಿಕ ಹಾಗೂ ಪರಿಣಾಮಕಾರಿ ಮೌಲ್ಯಮಾಪನವನ್ನು ಅನುಷ್ಠಾನಗೊಳಿಸುವುದು 2011ರ ಕರ್ನಾಟಕ ಮೌಲ್ಯಮಾಪನ ನೀತಿಯ ದೃಷ್ಟಿಕೋನವಾಗಿರುತ್ತದೆ.
 • ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಇದುವರೆಗೆ 137 ಮೌಲ್ಯಮಾಪನ ಅಧ್ಯಯನಗಳನ್ನು ಪೂರ್ಣಗೊಳಿಸಿರುತ್ತದೆ ಮತ್ತು ಈ ಅಧ್ಯಯನಗಳ ಶೋಧನೆಗಳು ಇಲಾಖೆಗಳಿಗೆ, ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಅನುಷ್ಠಾನ ಕಾರ್ಯವಿಧಾನದಲ್ಲಿ ಅಗತ್ಯ ತಿದ್ದುಪಡಿಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿರುತ್ತದೆ. ಪ್ರಸ್ತುತ 70 ಅಧ್ಯಯನಗಳು ಪ್ರಗತಿಯಲ್ಲಿವೆ.
 • ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಲ್ಲಿ 40 ಮೌಲ್ಯಮಾಪನ ಸಮಲೋಚಕ ಸಂಸ್ಥೆಗಳನ್ನು ಪಟ್ಟಿ ಮಾಡಲಾಗಿದ್ದು, ಮೌಲ್ಯಮಾಪನ ವರದಿಗಳ ಅವಲೋಕನ ಮತ್ತು ಅವುಗಳ ಶ್ರೇಣೀಕರಣಕ್ಕಾಗಿ 13 ಸ್ವತಂತ್ರ ಮೌಲ್ಯಮಾಪಕರನ್ನು ಪಟ್ಟಿ ಮಾಡಲಾಗಿರುತ್ತದೆ. ತಾಂತ್ರಿಕ ಮತ್ತು ಮೌಲ್ಯಮಾಪನ ವಿಷಯಗಳಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಹಾಯ ಸೇವೆ ಒದಗಿಸಲು 42 ವಿಷಯ ತಜ್ಞರಿದ್ದಾರೆ.
 • ಹೊಸ ಉಪಕ್ರಮಗಳು ಕರ್ನಾಟಕ ಸರ್ಕಾರದ ಸಂಬಂಧಿಸಿದ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸಂಸ್ಥೆಗಳು, ಪ್ರಾಧಿಕಾರಗಳಲ್ಲಿ ಇಂಟರ್ನ್‌ಪ್ ಕಾರ್ಯಕ್ರಮವನ್ನು ಜಾರಿಗೆ ತರಲಾಗಿರುತ್ತದೆ.
 • ಇಂಟರ್ನ್‌ ಶಿಪ್ ಕಾರ್ಯಕ್ರಮವನ್ನು ಸಂಘಟಿಸಲು ಮತ್ತು ಅನುಷ್ಠಾನಗೊಳಿಸಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಸಂಪರ್ಕ ಸಂಸ್ಥೆಯಾಗಿರುತ್ತದೆ. ಮೌಲ್ಯಮಾಪನ ಅಧ್ಯಯನಕ್ಕಾಗಿ ತಜ್ಞರ ಸಲಹೆಗಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ವಿದೇಶಿ ವಿಶ್ವವಿದ್ಯಾಲಯ ಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಿರುತ್ತದೆ.
 • ಸಂಶೋಧನೆ ಮತ್ತು ಮೌಲ್ಯವನನದಲ್ಲಿ ರಾಜ್ಯ ವಿಶ್ವವಿದ್ಯಾಲಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಮೌಲ್ಯಮಾಪನ ಅಧ್ಯಯನಗಳಲ್ಲಿ ಅವರೊಂದಿಗೆ ತೊಡಗಿಸಿಕೊಂಡಿರುತ್ತದೆ.
 • ಬರುವ ವರ್ಷದಲ್ಲಿ ಕೈಗೊಳ್ಳಬೇಕಾದ 5 ಮೌಲ್ಯಮಾಪಕ ಅಧ್ಯಯನಗಳ ಪೈಕಿ, 25 ಅಧ್ಯಯನಗಳು ಈ ವಿಶ್ವವಿದ್ಯಾಲಯಗಳ ಮೂಲಕ ನಡೆಯಲಿವೆ.
 • ವಿಶ್ವವಿದ್ಯಾಲಯಗಳ ಮೂಲಕ ವಿವಿಧ ಅಧ್ಯಯನಗಳನ್ನು ಕೈಗೊಳ್ಳಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿರುತ್ತದೆ, ಇದ ಅಭಿವೃದ್ಧಿ ಗುರಿಗಳ ಸ್ಥಳೀಕರಣಕ್ಕಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಮನ್ವಯ ಕೇಂದ್ರವನ್ನು ಸ್ಥಾಪಿಸಲು ಮತ್ತು 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆಗಳನ್ನು ಯೋಜಿಸಲು ಹಾಗೂ ವಿನ್ಯಾಸಗೊಳಿಸಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಯೋಜನಾ ಇಲಾಖೆಗೆ ಬೆಂಬಲವನ್ನು ನೀಡಿರುತ್ತದೆ ಮತ್ತು ಮುಕ್ತ ದತ್ತಾಂಶ ಸಂಶೋಧನಾ ಕೇಂದ್ರದೊಂದಿಗೆ ಜ್ಞಾನ ಪಾಲುಗಾರಿಕೆಯನ್ನು ಅಭಿವೃದ್ಧಿಪಡಿಸಲು ವಿನಯವನು ರೂಪಿಸುತ್ತದೆ.
 • ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು, ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನವ ಅಭಿವೃದ್ಧಿ ವರದಿಯನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿರುತ್ತದೆ.
 • ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು, ಕರ್ನಾಟಕದ ರಾಯಚೂರು ಮತ್ತು ಯಾದಗಿರಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪರಿವರ್ತನೆಯಲ್ಲಿ ಸಹಕರಿಸುತ್ತಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು, ನೀತಿ ಆಯೋಗದ ಭಾರತದ ನಾವಿನ್ಯ ಆವಿಷ್ಕಾರ ಸೂಚ್ಯಂಕ (ಇಂಡಿಯಾ ಇನ್ನೊವೇಶನ್ ಇಂಡೆಕ್ಸ್), ವ್ಯವಹಾರವನ್ನು ಸುಲಭಗೊಳಿಸುವ ಸೂಚ್ಯಂಕ (ಈಸ್‌ ಆಫ್ ಯಿಂಗ್ ಬ್ಯುಸಿನೆಸ್ ಇಂಡೆಕ್ಸ್), ಸುಲಭವಾಗಿ ಜೀವಿಸುವ ಸೂಚ್ಯಂಕ (ಈಸ್ ಆಫ್ ಲಿವಿಂಗ್ ಇಂಡೆಕ್ಸ್) ಇತ್ಯಾದಿ ಇತರೆ ಉಪಕ್ರಮಗಳನ್ನು ಬೆಂಬಲಿಸಿರುತ್ತದೆ.
 • ಅನುಷ್ಠಾನ ಕಾರ್ಯವಿಧಾನಗಳಲ್ಲಿ ಮತ್ತು ಮಾರ್ಗಸೂಚಿಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಮೌಲ್ಯಮಾಪನ ಅಧ್ಯಯನಗಳು ಇಲಾಖೆಗಳಿಗೆ ಸಹಾಯ ಮಾಡಿರುತ್ತವೆ.
 • ಮೇವಿನ ಪರಿಸ್ಥಿತಿಯ ಕುರಿತಾದ ಅಧ್ಯಯನವು ಮೇವಿನ ಭದ್ರತಾ ನೀತಿಗೆ ಶಿಫಾರಸ್ಸು ಮಾಡಿದ್ದು, ಅಪೌಷ್ಟಿಕತೆಯ ಅಧ್ಯಯನವು ಪೌಷ್ಟಿಕಾಂಶ ನೀತಿಗೆ ಶಿಫಾರಸ್ಸು ಮಾಡಿರುತ್ತದೆ, ಭಾಗ್ಯಲಕ್ಷ್ಮಿ ಯೋಜನೆಯ ಮೌಲ್ಯಮಾಪನವು ಮಾರ್ಗಸೂಚಿಗಳಲ್ಲಿ ಬದಲಾವಣೆಗಾಗಿ ಸೂಚಿಸಿರುತ್ತದೆ.
 • ಯುವ ಸಂಶೋಧನಾ ಸಿಬ್ಬಂದಿಯ ಸಾಮರ್ಥ್ಯವನ್ನು ಹೆಚ್ಚಿಸಲು, ಆಂತರಿಕ ಅಧ್ಯಯನಗಳನ್ನು ಕೈಗೊಳ್ಳಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಉದ್ದೇಶಿಸಿರುತ್ತದೆ.
 • ಪ್ರಾಧಿಕಾರವು ಮೌಲ್ಯಮಾಪನ ವರದಿಗಳಲ್ಲಿ ಕ್ಷೇತ್ರ ನೈಜತೆಗಳನ್ನು ಸೆರೆಹಿಡಿಯಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೈಜ ಸಮಯದ ದತ್ತಾಂಶ ಸಂಗ್ರಹಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ.
 • ಈ ಪ್ರಾಧಿಕಾರವು, ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಉತ್ಪತ್ತಿ-ಪರಿಣಾಮ ವಿಶ್ಲೇಷಣೆ ದಾಖಲೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಸಮನ್ವಯ ಕೇಂದ್ರಕ್ಕೆ ಸುಸ್ಥಿರ ಅಭಿವೃದ್ಧಿ ಗುರಿಗಳ 2030ರ ನಿಗದಿತ ಗುರಿಗಳನ್ನು ಸಾಧಿಸಲು ಕಾರ್ಯತಂತ್ರಗಳು, ಕ್ರಿಯಾ ಯೋಜನೆಗಳು ಮತ್ತು ಸ್ಥಳೀಕರಣವನ್ನು ಬೆಂಬಲವನ್ನು ನೀಡುತ್ತದೆ.
 • ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನೀತಿಯ ಅನುಸಾರ, ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಒಂದು ಕೌಶಲ್ಯ ಅಭಿವೃದ್ಧಿ ನೀತಿಯನ್ನು ಸಹ ಅನುಮೋದಿಸಿದೆ ಮತ್ತು ಅವರಿಗೆ ಉದ್ಯೋಗ ಒದಗಿಸಲು, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯದ ಇಲಾಖೆಯ ಹೆಸರಿನಲ್ಲಿ ಪ್ರತ್ಯೇಕ ಇಲಾಖೆ 2016 ರಲ್ಲಿ ಸ್ಥಾಪನೆಯಾಯಿತು. ಈ ಇಲಾಖೆಯಡಿಯಲ್ಲಿ ಕೆಳಗಿನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ:
 • ಕೈಗಾರಿಕಾ ತರಬೇತಿ ಕೇಂದ್ರಗಳು ಮತ್ತು ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗಳು
 • ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ
 • ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ
 • ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್)
 • ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) 0 ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ನಿಗಮ
 • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ 0. ರಾಷ್ಟ್ರೀಯ ನಗರ ಜೀವನೋಪಾಯ
  (ಎನ್‌ಯುಎಲ್ ಎಮ್)
 • ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ
 • ಕೌಶಲ್ಯ ಇಲಾಖೆಯ ಮುಖ್ಯ ಉದ್ದೇಶವು ಸಮೀಕ್ಷೆಗಳನ್ನು ನಡೆಸುವುದು ಮತ್ತು ಕೌಶಲ್ಯದ ಅಂತರವನ್ನು ಗುರುತಿಸುವುದು ಮತ್ತು ಆಯಾ ಕೌಶಲ್ಯ ಕ್ಷೇತ್ರದಲ್ಲಿ ಯುವಕರಿಗೆ ತರಬೇತಿ ನೀಡುವುದು ಮತ್ತು ಉದ್ಯೋಗಗಳನ್ನು ಒದಗಿಸುವಲ್ಲಿ ನೋಡ್‌ ಇಲಾಖೆಯಾಗಿ ಕೆಲಸ ಮಾಡುವುದು.
 • ಈ ದಿಕ್ಕಿನಲ್ಲಿ ಈ ಮೇಲ್ಕಂಡ ಸಂಸ್ಥೆಗಳು ಸರ್ಕಾರದ ಸೂಚನೆಗಳನ್ನು ಮತ್ತು ಆದೇಶಗಳನ್ನು ಅನುಷ್ಠಾನಗೊಳಿಸುವುದು. ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನವನ್ನು ಒದಗಿಸುತ್ತವೆ.
 • ರಾಜ್ಯ ಕೌಶಲ್ಯ ನೀತಿಯ ಅಪೇಕ್ಷಿತ ಉದ್ದೇಶಗಳನ್ನು ಪೂರೈಸಲು, ರಾಜ್ಯವು ಕರ್ನಾಟಕ ವೊಕೇಶನಲ್ ಟ್ರೈನಿಂಗ್ ಮತ್ತು ಸ್ಕಿಲ್ ಡೆವಲಪ್ಟೆಂಟ್ ಕಾರ್ಪೊರೇಶನ್ (KVTSDC) ಯನ್ನು ಕಂಪನಿಸ್ ‘ಆಕ್ಟ್’ 1956 ರ ಅಡಿಯಲ್ಲಿ ಸ್ಥಾಪಿಸಿತು. ಆರಂಭದ ನಂತರದ ಐದು ವರ್ಷಗಳಲ್ಲಿ 12.5 ಲಕ್ಷ ಜನರಿಗೆ ಕೌಶಲ್ಯ ಮತ್ತು ಉದ್ಯೋಗವಕಾಶ ನೀಡುವ ಗುರಿಯನ್ನು ಹೊಂದಿದೆ.
 • ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೀನ ದಯಾಲ್ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮಿಷನ್, ಡೇನ, ಸಂಜೀವಿನಿ- KSRLPS, CEDOK ಸಂಸ್ಥೆಗಳ ಮುಖಾಂತರ ಅನುಷ್ಠಾನಗೊಳಿಸಲಾಗುತ್ತದೆ. 16 ಜಿಲ್ಲೆಗಳಲ್ಲಿ ಸ್ವಯಂ ಉದ್ಯೋಗದ ಪ್ರಸಾರ, ಪ್ರೇರಣೆ ಮತ್ತು ಪ್ರಚಾರಕ್ಕಾಗಿ ದಿನಾ ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
 • 2008-09 ರಿಂದ 2018-19ನೇ ಸಾಲಿನವರೆಗೆ ಸುಮಾರು 17,6524 ಫಲಾನುಭವಿಗಳಿಗೆ ಮೇಳಗಳ ಮೂಲಕ ಉದ್ಯೋಗವನ್ನು ದೊರಕಿಸಲಾಗಿದೆ.
 • 2019-20ನೇ ಸಾಲಿನಲ್ಲಿ ನವೆಂಬರ್-2019ರವರೆಗೆ 35,808 ಜನರಿಗೆ ವಿವಿಧ ಕೌಶಲ್ಯ ವಹಿವಾಟುಗಳಲ್ಲಿ ತರಬೇತಿ ನೀಡಲಾಗಿದೆ. ಸಮುದಾಯ ಹೂಡಿಕೆ ನಿಧಿಯಡಿ ರೂ.44.56 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.
 • 2019-20ನೇ ಸಾಲಿನಲ್ಲಿ ಸುಮಾರು 338162 ಸ್ವ ಸಹಾಯ ಗುಂಪುಗಳಿಗೆ ರೂ.2849,90ಕೋಟಿ ಸಾಲ ಸೌಲಭ್ಯ ದೊರಕಿಸಿ ಕೊಡಲಾಗಿದೆ.
 • ಅಧಿಕೃತ ಮಾಹಿತಿ ಮಾರ್ಗದರ್ಶನ ತರಬೇತಿ ಮತ್ತು ಸಾಗರೋತ್ತರ ದೇಶಗಳಲ್ಲಿ ಉದ್ಯೋಗಕ್ಕೆ ನೆರವು ನೀಡಲು ರಾಜ್ಯ ಸರ್ಕಾರವು ಅಂತರಾಷ್ಟ್ರೀಯ ವಿದೇಶಿ ಉದ್ಯೋಗ ಕೋಶವನ್ನು ಸ್ಥಾಪಿಸಿದೆ.
 • ಗೃಹ, ರಸ್ತೆ ನಿರ್ಮಾಣ, ಮರಗೆಲಸ, ಎಲೆಕ್ಟಿಷಿಯನ್ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆದು ನುರಿತ ಅಭ್ಯರ್ಥಿಗಳನ್ನು ಹೆಚ್ಚಿನ ಬೇಡಿಕೆಯಿರುವ, ಜನನ ಪ್ರಮಾಣ ತುಂಬಾ ಕಡಿಮೆ ಇರುವ ಮತ್ತು ವಯೋಗುಂಪಿನ ಯುವಕರ ಜನಸಂಖ್ಯೆ ಕಡಿಮೆ ಇರುವಂಥ ಫ್ರಾನ್ಸ್, ಇಂಡೋನೇಷ್ಯಾ, ಕಳುಹಿಸಬಹುದಾಗಿದೆ. ದೇಶಗಳಿಗೆ
 • ಇದಕ್ಕಾಗಿ ಕರ್ನಾಟಕ ಸರ್ಕಾರದ ಮೂಲಕ ಭಾರತ ಸರಕಾರಕ್ಕೆ ಸೂಕ್ತ ಪ್ರಸ್ತಾವನೆಗಳನ್ನು ಕಳುಹಿಸಲು ವಿದೇಶಿ ಉದ್ಯೋಗ ಕೋಶವು (ಐಎಂಸಿ-ಕೆ) ಕ್ರಮ ತೆಗೆದುಕೊಳ್ಳುತ್ತಿದೆ.
 • ಸ್ವಯಂ ಸಹಾಯ ಗುಂಪುಗಳು ಮತ್ತು NGO ಗಳ ಸಹಕಾರದಲ್ಲಿ ಪಿಪಿಪಿ ಕ್ರಮದಲ್ಲಿ ಜಾಗೃತಿ, ತರಬೇತಿ ಮುಂತಾದ ಹಲವು ಕಾರ್ಯಕ್ರಮಗಳನ್ನು ಇಲಾಖೆಯಿಂದ ನಡೆಸಲಾಗುತ್ತಿದೆ.
 • ಜಿಲ್ಲೆಯ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ಸರ್ಕಾರೇತರ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
 • ಉದ್ಯಮಶೀಲರಾಗಿ ಗುರುತಿಸಲಾದ, ತರಬೇತಿ ಉದ್ಯಮಿಗಳಿಗೆ ಅಗತ್ಯ ಸಾಲವನ್ನು ನೀಡುವಲ್ಲಿ ಬ್ಯಾಂಕುಗಳ ಸಹಕಾರ ಅಗತ್ಯವಿದ್ದು ಯೋಜನೆಗಳ ಉದ್ದೇಶ ಸಾಧಿಸಲು ಇದು ಅತ್ಯಂತ ಅವಶ್ಯಕವಾಗಿದ್ದು ಇದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.
 • ಇಲಾಖೆಯ ಎಲ್ಲ ಸಂಸ್ಥೆಗಳಲ್ಲಿಯೂ ಸಿಬ್ಬಂದಿಗಳ ಕೊರತೆಯೂ ಸಹ ಗಮನಿಸಿದ್ದು ಇದಕ್ಕೆ ತುರ್ತು ಗಮನವನ್ನು ಹರಿಸಬೇಕಿದೆ. ರಾಜ್ಯಮಟ್ಟದಲ್ಲಿ ಕಾರ್ಯಾ ಚರಣೆಯು ಯುವಕರ ಸಾಮರ್ಥ್ಯದ ನಿರ್ಮಾಣಕ್ಕಾಗಿ ಅರ್ಹ ನಿರುದ್ಯೋಗಿ ಯುವಕರಿಗೆ ಸೂಕ್ತ ಜಾಗತಿಕ ಉದ್ಯೋಗದ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಮತ್ತು ಯುವಕರ ಆಕಾಂಕ್ಷೆಗಳನ್ನು ಮತ್ತು ಅವರ ಪ್ರತಿಭೆ ಮತ್ತು ಸಾಮರ್ಥ್ಯಗಳಿಗೆ ಸೂಕ್ತ ಸ್ವಯಂ ಉದ್ಯೋಗವಕಾಶ ಒದಗಿಸುವ ದಿಕ್ಕಿನಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯು ಸಂಬಂಧಪಟ್ಟ ಎಲ್ಲಾ ಸಹಭಾಗಿದಾರರ ಬೆಂಬಲ ಮತ್ತು ಸಹಕಾರವನ್ನು ನಿರೀಕ್ಷಿಸುತ್ತದೆ.

ಸುಸ್ಥಿರ ಅಭಿವೃದ್ಧಿ ಗುರಿಗಳು

 • ಸುಸ್ಥಿರ ಅಭಿವೃದ್ಧಿ ಗುರಿಗಳ ಮೂಲ ಉದ್ದೇಶವು ಬಡತನ ನಿರ್ಮೂಲನೆಯಾಗಿರುತ್ತದೆ. 2030ರೊಳಗೆ ನಮ್ಮ ಜಗತ್ತಿನಲ್ಲಿರುವ ಜನರ ಬಡತನವನ್ನು ಹೋಗಲಾಡಿಸುವುದು ಈ ಗುರಿಗಳ ಮೂಲ ಉದ್ದೇಶವಾಗಿದ್ದು, ಇದರ ಧೈಯ ವಾಕ್ಯ “ಯಾರನ್ನೂ ಹಿಂದೆ ಬಿಡಬಾರದೆಂಬುದು “
 • ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸುಸ್ಥಿರ ಅಭಿವೃದ್ಧಿ ಗುರಿಗಳು ಸಾರ್ವತ್ರಿಕ, ಅಂತರ್ಗತ ಮತ್ತು ಅವಿಭಾಜ್ಯವಾದ ಕಾರ್ಯಕ್ರಮವಾಗಿರುತ್ತದೆ. ಇದರ ಮೂಲ ಉದ್ದೇಶ ಜಗತ್ತಿನಲ್ಲಿ ವಾಸಿಸುವ ಜನರ ಸುಸ್ಥಿರ ಅಭಿವೃದ್ಧಿ ಯಾಗಿರುತ್ತದೆ.
 • ಈ ಸುಸ್ಥಿರ ಅಭಿವೃದ್ಧಿ ಗುರಿಗಳು ಜಗತ್ತಿನ ವಸ್ತುಸ್ಥಿತಿಗನುಗುಣವಾಗಿ ತಯಾರಾಗಿದ್ದು ವಿವಿಧ ಆಯಾಮಗಳಲ್ಲಿ (ಸಾಮಾಜಿಕ, ಆರ್ಥಿಕ ಮತ್ತು ಪರಿಸರ) ಅಭಿ ವೃದ್ಧಿಯನ್ನು ಸಾಧಿಸಲು ಸಹಕಾರಿಯಾಗಿರುತ್ತದೆ.
 • ಕರ್ನಾಟಕ ರಾಜ್ಯವು ಚಟುವಟಿಕೆಯಿಂದ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಜಿಲ್ಲಾವಾರು ಪ್ರತ್ಯೇಕಿಸಲಾದ ಮಾಹಿತಿಯನ್ನು ವ್ಯವಸ್ಥಿತವಾಗಿ ಜಿಲ್ಲಾ ಯೋಜನಾ ಸಮಿತಿಗಳು (ಡಿ.ಪಿ.ಸಿ) ಪರಿಣಾಮಕಾರಿಯಾಗಿ ತಮ್ಮ ಹಂತದಲ್ಲಿ ಜಾರಿಗೊಳಿಸುತ್ತಿದ್ದಾರೆ.
 • ಗುರಿ-1 ಬಡತನ ನಿರ್ಮೂಲನೆ: ಎಲ್ಲೆಡೆಯಲ್ಲೂ ಎಲ್ಲಾ ವಿಧದ ಬಡತನವನ್ನು ಕೊನೆಗಾಣಿಸುವುದು.
 • ಈ ಗುರಿ-2 ಹಸಿವನ್ನು ಕೊನೆಗಾಣಿಸಿ, ಆಹಾರ ಭದ್ರತೆ ಮತ್ತು ಸುಧಾರಿತ ಪೌಷ್ಟಿಕತೆಯನ್ನು ಸಾಧಿಸಿ ಹಾಗೂ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು.
 • ಗುರಿ-3 ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ: ಎಲ್ಲರಿಗೂ ಎಲ್ಲಾ ವಯೋಮಾನದಲ್ಲೂ ಆರೋಗ್ಯಕರ ಜೀವನವನ್ನು ಖಾತರಿಪಡಿಸಿ ಯೋಗಕ್ಷೇಮವನ್ನು ಉತ್ತೇಜಿಸುವುದು.
 • ಈ ಗುರಿ-4 ಎಲ್ಲರಿಗೂ ಸಮನ್ವಯ ಹಾಗೂ ಸಮಾನ ಗುಣಮಟ್ಟದ ಶಿಕ್ಷಣ ಮತ್ತು ಜೀವನದುದ್ದಕ್ಕೂ ಕಲಿಕೆಯ ಅವಕಾಶಗಳಿಗೆ ಉತ್ತೇಜನವನ್ನು ಖಾತ್ರಿಪಡಿಸುವುದು.
 • ಗುರಿ-5 ಲಿಂಗ ಸಮಾನತೆಯನ್ನು ಸಾಧಿಸುವುದರ ಮೂಲಕ ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವುದು.
 • ಈ ಗುರಿ-6 ಎಲ್ಲರಿಗೂ ನೀರು ಮತ್ತು ನೈರ್ಮಲ್ಯದ ಲಭ್ಯತೆ ಹಾಗೂ ಅದರ ಸುಸ್ಥಿರ ನಿರ್ವಹಣೆಯನ್ನು ಖಾತ್ರಿಗೊಳಿಸುವುದು.
 • ಗುರಿ-7 ಕೈಗೆಟುಕಬಹುದಾದ ಮತ್ತು ಶುದ್ಧ ಇಂಧನ ಶಕ್ತಿ : ಎಲ್ಲರಿಗೂ ಕೈಗೆಟುಕಬಲ್ಲ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನದ ಲಭ್ಯತೆಯನ್ನು ಖಾತ್ರಿಗೊಳಿಸುವುದು.
 • ಗುರಿ-8 ಎಲ್ಲರಿಗೂ ಸುಸ್ಥಿರವಾದ, ಸಮನ್ವಯ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ, ಸಂಪೂರ್ಣ ಮತ್ತು ಉತ್ಪಾದಕ ಉದ್ಯೋಗ ಹಾಗೂ ಗೌರವಯುತವಾದ ಕೆಲಸವನ್ನು ಉತ್ತೇಜಿಸುವುದು.
 • ಗುರಿ-9ಸಧೃಡ ಮೂಲಸೌಕರ್ಯಗಳನ್ನು ಅಂತರ್ಗತವೂ, ಸುಸ್ಥಿರವೂ ಆದ ಕೈಗಾರಿಕೆಗಳನ್ನು ಮತ್ತು ಆವಿಷ್ಕಾರಗಳನ್ನು ಉತ್ತೇಜಿಸುವುದು.
 • ಗುರಿ-10 ದೇಶದೊಳಗೆ ಮತ್ತು ದೇಶಗಳ ನಡುವೆ ಅಸಮಾನತೆಯನ್ನು ಇಳಿಸುವುದು.
 • ಗುರಿ-11 ನಗರಗಳನ್ನು ಮತ್ತು ಜನವಸತಿ ಪ್ರದೇಶಗಳನ್ನು ಸಮನ್ವಯ, ಸುರಕ್ಷಿತ, ಸದೃಢ ಮತ್ತು ಸುಸ್ಥಿರಗೊಳಿಸುವುದು.
 • ಗುರಿ-12 ಸುಸ್ಥಿರ ಬಳಕೆ ಮತ್ತು ಉತ್ಪಾದನಾ ವಿನ್ಯಾಸಗಳನ್ನು ಖಾತ್ರಿಗೊಳಿಸುವುದು.
 • ಗುರಿ-13 ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳನ್ನು ತಡೆಯಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದು.
 • ಗುರಿ-14 ಸುಸ್ಥಿರ ಅಭಿವೃದ್ಧಿಗಾಗಿ ಮಹಾಸಾಗರಗಳು, ಸಮುದ್ರಗಳು ಮತ್ತು ಸಾಗರ ಸಂಪನ್ಮೂಲಗಳನ್ನು ಉಳಿಸುವುದು, ಮತ್ತು ಸುಸ್ಥಿರವಾಗಿ ಬಳಸುವುದು,
 • ಗುರಿ-15 ಭೌಗೋಳಿಕ ಪರಿಸರ ವ್ಯವಸ್ಥೆಯನ್ನು ರಕ್ಷಣೆ, ಮರುಸ್ಥಾಪನೆ ಮತ್ತು ಸುಸ್ಥಿರ ಬಳಕೆ, ಅರಣ್ಯಗಳ ಸುಸ್ಥಿರ ನಿರ್ವಹಣೆ, ಮರುಭೂಮೀಕರಣವನ್ನು ನಿಲ್ಲಿಸುವುದರ ಮೂಲಕ ಭೂಮಿ ಹಾಳುಗೆಡುವುದನ್ನು ತಡೆದು ಮರುಸ್ಥಾಪಿಸುವುದು ಹಾಗೂ ಜೈವಿಕ ವೈವಿಧ್ಯತೆಯ ನಷ್ಟವನ್ನು ತಡೆಯುವುದು.
 • ಗುರಿ-16 ಸುಸ್ಥಿರ ಅಭಿವೃದ್ಧಿಗಾಗಿ ಶಾಂತಿಯುತ ಮತ್ತು ಸಮನ್ವಯ ಸಮಾಜಗಳನ್ನು ಉತ್ತೇಜಿಸಿ, ಎಲ್ಲರಿಗೂ ನ್ಯಾಯದ ಲಭ್ಯತೆಯನ್ನು ಒದಗಿಸಿ, ಎಲ್ಲಾ ಹಂತಗಳಲ್ಲೂ ಪರಿಣಾಮಕಾರಿ, ಉತ್ತರದಾಯಿತ್ವ ಮತ್ತು ಸಮನ್ವಯತೆಯಿರುವ ಸಂಸ್ಥೆಗಳನ್ನು ನಿರ್ಮಿಸುವುದು, ಹಾಗೂ
 • ಗುರಿ-17 ಸುಸ್ಥಿರ ಅಭಿವೃದ್ಧಿಗಾಗಿ ಜಾರಿ ಸಾಧನಗಳನ್ನು ಬಲಪಡಿಸುವುದು ಮತ್ತು ಜಾಗತಿಕ ಸಹಭಾಗಿತ್ವವನ್ನು ಪುನಸ್ಟೇತನಗೊಳಿಸುವುದು,
 • ಸರ್ಕಾರವು ಯೋಜನೆಗಳ ಎಲ್ಲಾ ವಲಯಗಳ ಯೋಜನೆ ಮತ್ತು ಆಯವ್ಯಯದ ಮುಖಾಂತರ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ಖಾತ್ರಿಪಡಿಸಿ ಕೊಳ್ಳುತ್ತಿದೆ.
 • ಸಂಪನ್ಮೂಲಗಳನ್ನು ದಕ್ಷವಾಗಿ ಮುಖ್ಯವಾಹಿನಿಗೆ ತರುವುದು ಮತ್ತು ಒಮ್ಮುಖವಾದ ಕಾರ್ಯತಂತ್ರಗಳನ್ನು ರೂಪಿಸುವುದರಿಂದ 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಕಾರಿಯಾಗಿರುತ್ತದೆ.
 • 16 ಗುರಿ ಸಮಿತಿಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರೊಳಗೆ ಸಾಧಿಸಲು ಬೇಕಾಗುವ ತಂತ್ರಗಳು ಮತ್ತು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿರುತ್ತವೆ.
 • ಇದಲ್ಲದೆ ಗುರಿ ಸಮಿತಿಗಳು ಸರಿಸುಮಾರು 600 ಸೂಚಕಗಳನ್ನು ರಾಜ್ಯದ ಸೂಚಕಗಳ ಕಾರ್ಯಚೌಕಟ್ಟಿನಲ್ಲಿ ಗುರುತಿಸಿದ್ದು, ಈ ಪೈಕಿ 235 ಸೂಚಕಗಳು ರಾಷ್ಟ್ರೀಯ ಸೂಚಕಗಳಾಗಿರುತ್ತವೆ.
 • ಇದರ ಜೊತೆಗೆ ಗುರಿ ಸಮಿತಿಯು ಪ್ರತಿಯೊಂದು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಮ್ಯಾಪಿಂಗ್ ಸಿದ್ಧಪಡಿಸಿ 2030ರವರೆಗೆ ಅವಶ್ಯವಿರುವ ಆಯವ್ಯಯವನ್ನು ವರ್ಷವಾರು ಅಂದಾಜಿಸಿರುತ್ತದೆ.
 • ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅಗತ್ಯವಿರುವ ಸೂಕ್ತ ಯೋಜನೆಗಳನ್ನು ರೂಪಿಸಲು ರಾಜ್ಯಮಟ್ಟದ ಉಸ್ತುವಾರಿ ಮತ್ತು ಸಮನ್ವಯ ಸಮಿತಿ ಹಾಗೂ ರಾಜ್ಯಮಟ್ಟದ ಸ್ಟೀರಿಂಗ್ ಸಮಿತಿಯನ್ನು ರಚಿಸಿರುತ್ತದೆ.